For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ಶುಭ ಸುದ್ದಿ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 25 November 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ಸಂಜೆ 06:21ರ ವರೆಗೆ ಉತ್ತರ ಭಾದ್ರಪದ ನಂತರ ರೇವತಿ
ಶುಕ್ಲ ಪಕ್ಷ
ರಾಹುಕಾಲ: ಮಧ್ಯಾಹ್ನ 12:08ರಿಂದ 1:27ರವರೆಗೆ
ಗುಳಿಕಕಾಲ: ಬೆಳಗ್ಗೆ 10:49ರಿಂದ 12:08ರವರೆಗೆ
ಯಮಗಂಡಕಾಲ: ಬೆಳಗ್ಗೆ 08:11ರಿಂದ 09:30ರವರೆಗೆ
ದುರ್ಮುಹೂರ್ತ: ಬೆಳಗ್ಗೆ 11:47ರಿಂದ 12:29ರವರೆಗೆ

ಸೂರ್ಯೋದಯ: ಬೆಳಗ್ಗೆ 06:52ಕ್ಕೆ
ಸೂರ್ಯಾಸ್ತ: ಸಂಜೆ 05:24ಕ್ಕೆ

ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

ಮೇಷ ರಾಶಿ:

ಮೇಷ ರಾಶಿ:

ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಅದೃಷ್ಟ ದಿನ. ಹಿಂದೆ ನೀವು ತೆಗೆದುಕೊಂಡ ಕೆಲವು ಬುದ್ಧಿವಂತ ಆರ್ಥಿಕ ನಿರ್ಧಾರಗಳ ಉತ್ತಮ ಫಲಿತಾಂಶವನ್ನು ಇಂದು ನೀವು ಪಡೆಯಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಸಾಧ್ಯತೆಯಿದೆ. ಕೆಲಸದ ವಿಷಯದಲ್ಲಿ, ಕಚೇರಿಯಲ್ಲಿ, ನೀವು ನಿರ್ಲಕ್ಷ್ಯ ವಹಿಸಬೇಡಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿದರೆ, ಮುಂದಿನ ದಿನಗಳಲ್ಲಿ ನೀವು ಪ್ರಗತಿಯನ್ನು ಪಡೆಯಬಹುದು. ವ್ಯಾಪಾರಸ್ಥರು ಇಂದು ಉತ್ತಮ ಲಾಭವನ್ನು ಪಡೆಯಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ನೀವು ಹೆಚ್ಚಿನ ಅಧ್ಯಯನ ಮಾಡಬೇಕು. ಶಿಕ್ಷಣದಲ್ಲಿ ಯಾವುದೇ ಅಡಚಣೆಗಳಿದ್ದರೆ, ನಿಮ್ಮ ಹಿರಿಯ ಮತ್ತು ಗುರುಗಳ ಸಹಾಯವನ್ನು ನೀವು ತೆಗೆದುಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 36

ಶುಭ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ಆರೋಗ್ಯದ ವಿಷಯದಲ್ಲಿ ನೀವು ಬಹಳ ಜಾಗರೂಕರಾಗಿರಬೇಕು. ಈ ವ್ಯಾಪಕ ಜಾಗತಿಕ ಸಾಂಕ್ರಾಮಿಕ ಖಾಯಿಲೆ ಬಗ್ಗೆ ನೀವು ಹೆಚ್ಚು ಹುಷಾರಾಗಿರಿ. ಈ ಸಮಯದಲ್ಲಿ ನೀವು ನಿಮ್ಮನ್ನು ಮತ್ತು ನಿಮ್ಮ ಇಡೀ ಕುಟುಂಬವನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಇಂದು ಹಣದ ದೃಷ್ಟಿಯಿಂದ ದುಬಾರಿ ದಿನವಾಗಲಿದೆ. ಇಂದು ನೀವು ಯಾವುದೇ ದೀರ್ಘ ಮತ್ತು ಹಳೆಯ ಬಿಲ್ ಪಾವತಿಸಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ಅನಗತ್ಯವಾಗಿ ಚರ್ಚೆಗೆ ಸಿಲುಕುವ ಮೂಲಕ ನಿಮ್ಮ ಪ್ರತಿಷ್ಠೆಗೆ ಕಳಂಕ ತಂದುಕೊಳ್ಳಬೇಡಿ. ಬಾಸ್‌ನೊಂದಿಗೆ ಏನಾದರೂ ಸಮಸ್ಯೆ ಉಂಟಾಗಬಹುದು. ನೀವು ಕಬ್ಬಿಣವನ್ನು ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ನೀವು ಪೋಷಕರ ಆಶೀರ್ವಾದ ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನೀವು ಸ್ವಲ್ಪ ಮನಸ್ತಾಪವನ್ನು ಹೊಂದಿರಬಹುದು, ಆದರೆ ಶೀಘ್ರದಲ್ಲೇ ಈ ಸಮಸ್ಯೆ ಪರಿಹಾರವಾಗುತ್ತದೆ.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 44

ಶುಭ ಸಮಯ: ಸಂಜೆ 6 ರಿಂದ 9 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಇಂದು ಸಂಗಾತಿಯೊಂದಿಗೆ ಬಹಳ ಪ್ರಣಯ ದಿನವನ್ನು ಕಳೆಯುತ್ತೀರಿ. ನಿಮ್ಮ ಆತ್ಮೀಯರು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮ ನಡುವೆ ಬಾಂಧ್ಯವ್ಯ ಹೆಚ್ಚಾಗುತ್ತದೆ. ಬಹುಶಃ ನೀವು ಅವರಿಂದ ದೊಡ್ಡ ಉಡುಗೊರೆಯನ್ನು ಸಹ ಪಡೆಯುತ್ತೀರಿ. ಇನ್ನು ಪ್ರೀತಿಯ ವಿಶ್ಃಅಯ ಮಾತನಾಡುವುದಾದರೆ, ನೀವು ಒಬ್ಬಂಟಿಯಾಗಿದ್ದರೆ ಇಂದು ನಿಮ್ಮ ಜೀವನವು ಸುಂದರವಾದ ತಿರುವನ್ನು ಪಡೆಯಬಹುದು. ಕೆಲಸದ ಬಗ್ಗೆ ಮಾತನಾಡುತ್ತಾ, ಕಚೇರಿ ವಾತಾವರಣವು ಇಂದು ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಕೆಲಸವನ್ನು ನೀವು ವೇಗವಾಗಿ ಪೂರ್ಣಗೊಳಿಸುತ್ತೀರಿ ಮತ್ತು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರೆ, ಕೆಲಸದಲ್ಲಿ ನೀವು ಹೆಚ್ಚು ಶ್ರಮಿಸಬೇಕು. ವ್ಯಾಪಾರಸ್ಥರು ಮಿಶ್ರ ಲಾಭ ಪಡೆಯಬಹುದು. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಯೋಚನೆ ಮಾಡಿ ಖರ್ಚು ಮಾಡಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ಕಡು ಹಳದಿ

ಶುಭ ಸಂಖ್ಯೆ: 18

ಶುಭ ಸಮಯ: ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ

ಕರ್ಕಾಟಕ:

ಕರ್ಕಾಟಕ:

ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಇದಲ್ಲದೆ, ನಿಮ್ಮ ಕೈಯಲ್ಲಿರುವ ವ್ಯವಹಾರವೂ ಅಭಿವೃದ್ಧಿಯನ್ನು ಕಾಣುತ್ತದೆ. ಉದ್ಯೋಗಿಗಳು ಕೆಲಸದ ಬಗ್ಗೆ ಗಮನಕೊಡಿ. ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿದರೆ, ನಿಮ್ಮ ಬಾಸ್ ಬಹಳ ಪ್ರಭಾವಿತರಾಗುತ್ತಾರೆ ಮತ್ತು ನೀವು ಶೀಘ್ರದಲ್ಲೇ ಸೂಕ್ತ ಫಲಿತಾಂಶಗಳನ್ನು ಪಡೆಯಬಹುದು. ಹಣದ ಬಗ್ಗೆ ಮಾತನಾಡುತ್ತಾ, ನಿಮ್ಮ ಹೆಚ್ಚುತ್ತಿರುವ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ಯೋಚಿಸದೆ ಖರ್ಚು ಮಾಡುವ ನಿಮ್ಮ ಅಭ್ಯಾಸವು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಕುಟುಂಬ ಜೀವನದಲ್ಲಿ ಶಾಂತಿ. ಮನೆಯ ಕೆಲವು ಸದಸ್ಯರೊಂದಿಗೆ ಮನಸ್ತಾಪವಾಗಬಹುದು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಸ್ನಾಯು ಸಂಬಂಧಿತ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 5

ಶುಭ ಸಮಯ: ಸಂಜೆ 6:45 ರಿಂದ 10 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಇಂದು ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ನಿಮ್ಮ ಅನಿಯಂತ್ರಿತ ಕೋಪವು ಇತರರ ಭಾವನೆಗಳನ್ನು ಘಾಸಿಗೊಳಿಸುತ್ತದೆ. ನೀವು ಸಂಯಮದಿಂದ ಇರುವುದು ಉತ್ತಮ. ಕೆಲಸದ ಬಗ್ಗೆ ಮಾತನಾಡುತ್ತಾ, ಇಂದು ಉದ್ಯೋಗಿಗಳಿಗೆ ಸಾಮಾನ್ಯ ದಿನವಾಗಲಿದೆ. ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಮತ್ತು ಇಂದು ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವನ್ನು ನೀವು ಸುಧಾರಿಸಿಕೊಳ್ಳಬೇಕಾಗಿದೆ. ಕೆಲಸದ ಸ್ಥಳದಲ್ಲಿ ಅವರನ್ನು ಟೀಕಿಸುವುದನ್ನು ತಪ್ಪಿಸಿ. ವ್ಯಾಪಾರಿಗಳು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು, ವಿಶೇಷವಾಗಿ ನಿಮ್ಮ ಕೆಲಸವು ಷೇರು ಮಾರುಕಟ್ಟೆಗೆ ಸಂಬಂಧಿಸಿದ್ದಲ್ಲಿ, ಇಂದು ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.

ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ಸಣ್ಣ ವಿಷಯಗಳ ಮೇಲಿನ ಮನಸ್ತಾಪಗಳು ನಿಮ್ಮ ನಡುವಿನ ಅಂತರವನ್ನು ಹೆಚ್ಚಿಸಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ಗಂಟಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಾಗಬಹುದು.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 35

ಶುಭ ಸಮಯ: ಬೆಳಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಇಂದು ನಿಮ್ಮ ಪದಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲದಿದ್ದರೆ ನಿಮ್ಮ ಮಾತುಗಳಿಗೆ ನೀವೇ ಮುಜುಗರಕ್ಕೊಳಗಾಗಬಹುದು. ಕೆಲಸದ ಬಗ್ಗೆ ಮಾತನಾಡುತ್ತಾ, ನೀವು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಇಂದು ನಿಮಗೆ ಬಹಳ ಮುಖ್ಯ ದಿನವಾಗಲಿದೆ. ನೀವು ಪ್ರಗತಿ ಹೊಂದುವ ಸಾಧ್ಯತೆ ಹೆಚ್ಚು. ಮತ್ತೊಂದೆಡೆ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶವನ್ನು ಸಹ ಪಡೆಯಬಹುದು. ನೀವು ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಕೆಲಸ ಡೈರಿ ಉತ್ಪನ್ನಗಳಿಗೆ ಸಂಬಂಧಿಸಿದ್ದರೆ, ಇಂದು ನೀವು ಉತ್ತಮ ಲಾಭ ಪಡೆಯಬಹುದು. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ದೊಡ್ಡ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ, ಅದನ್ನು ತಪ್ಪಿಸಿ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 30

ಶುಭ ಸಮಯ: ಮಧ್ಯಾಹ್ನ 1 ರಿಂದ 7 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ನಿಮಗಿಂದು ಮಿಶ್ರ ಫಲ. ದಿನದ ಆರಂಭವು ಉತ್ತಮವಾಗಿರುತ್ತದೆ, ಆದರೆ ದಿನದ ಎರಡನೇ ಭಾಗದಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಅಪಶ್ರುತಿ ಉದ್ಭವಿಸಬಹುದು. ಮನೆಯ ಕೆಲವು ಸದಸ್ಯರು ನಿಮ್ಮ ವಿರುದ್ಧ ಮಾತನಾಡಬಹುದು. ನೀವು ನಿಮ್ಮನ್ನು ಈ ಸಮಯದಲ್ಲಿ ನಿಯಂತ್ರಿಸಿಕೊಳ್ಳಬೇಕು. ಕೆಲಸದ ಬಗ್ಗೆ ಮಾತನಾಡುತ್ತಾ, ನೀವು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ ಮತ್ತು ಅದರ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ನೀವು ಗುರಿ ಆಧಾರಿತ ಕೆಲಸವನ್ನು ಮಾಡುತ್ತಿದ್ದಲ್ಲಿ, ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಹಾಗೆಯೇ, ವ್ಯಾಪಾರಿಗಳಿಗೆ ಇಂದು ಯಾವುದೇ ವಿಶೇಷ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ವ್ಯವಹಾರವನ್ನು ಮುಂದುವರೆಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಬಜೆಟ್ ಸಮತೋಲನದಲ್ಲಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಬದಲಾಗುತ್ತಿರುವ ಹವಾಮಾನದಿಂದಾಗಿ ಕೆಲವು ಸಮಸ್ಯೆಗಳಿರಬಹುದು. ಅಸಡ್ಡೆ ಮಾಡಬೇಡಿ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 8

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನೌಕರಸ್ಥರಿಗೆ ಇಂದು ಶುಭ ದಿನ. ನೀವು ಉದ್ಯೋಗದಲ್ಲಿದ್ದರೆ, ಕಚೇರಿಯಲ್ಲಿ ಸ್ಪರ್ಧೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ. ನೀವು ಪ್ರಗತಿ ಹೊಂದಲು ಬಯಸಿದರೆ ಇನ್ನೂ ಹೆಚ್ಚು ಶ್ರಮಿಸಬೇಕು. ನಿಮ್ಮ ಮೇಲಧಿಕಾರಿಗಳು ನಿಮ್ಮ ಬಗ್ಗೆ ಯಾವುದೇ ರೀತಿಯ ದೂರು ನೀಡದಂತೆ ಎಚ್ಚರವಹಿಸಿ. ವ್ಯಾಪಾರಸ್ಥರು ಇಂದು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಕೆಲವು ವ್ಯವಹಾರದಲ್ಲಿ ಇತ್ತೀಚಿಗೆ ಸಮಸ್ಯೆ ಉಂಟಾಗಿದ್ದರೆ, ಇಂದು ನಿಮ್ಮ ಸಮಸ್ಯೆ ಕೊನೆಗೊಳ್ಳಬಹುದು.

ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬದೊಂದಿಗೆ ಮೋಜಿನ ದಿನವಾಗಿರುತ್ತದೆ. ಆರ್ಥಿಕವಾಗಿ ಈ ದಿನ ಮಿಶ್ರ ಫಲ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ನಿಮಗಿಂದು ನಿರಾಶೆ ಉಂಟಾಗಬಹುದು. ಆದಾಗ್ಯೂ, ನೀವು ಭರವಸೆ ಇಟ್ಟುಕೊಳ್ಳಬೇಕು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 19

ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

ಧನು ರಾಶಿ:

ಧನು ರಾಶಿ:

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮ್ಮ ಒತ್ತಡದ ದಿನಚರಿಯಿಂದ ಇಂದು ನೀವು ಸ್ವಲ್ಪ ಪರಿಹಾರವನ್ನು ಪಡೆಯಬಹುದು. ಮೊದಲಿಗೆ, ನಿಮ್ಮ ಕೆಲಸದ ಬಗ್ಗೆ ಮಾತನಾಡುತ್ತಾ, ನೌಕರಸ್ಥರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯಾಗಬಹುದು. ಕೆಲಸದಲ್ಲಿ ಮುಂದುವರಿಯಲು ನಿಮಗೆ ಉತ್ತಮ ಅವಕಾಶ ಸಿಗಬಹುದು. ಈ ಅವಕಾಶದ ಸಂಪೂರ್ಣ ಲಾಭವನ್ನು ನೀವು ಪಡೆದುಕೊಳ್ಳಬೇಕು. ನೀವು ಸಣ್ಣ ಉದ್ಯಮಿಗಳಾಗಿದ್ದರೆ ಇಂದು ನೀವು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು.

ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನೀವು ಪೋಷಕರ ವಾತ್ಸಲ್ಯ ಮತ್ತು ಆಶೀರ್ವಾದಗಳನ್ನು ಪಡೆಯುತ್ತೀರಿ. ಇಂದು ಹಿರಿಯ ಸಹೋದರನ ಸಹಾಯದಿಂದ ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದು. ಹಣವು ಹೆಚ್ಚಾಗುವ ಸಾಧ್ಯತೆಯಿದೆ. ಯಾವುದೋ ಸಂಪತ್ತು ಕೈಸೇರಲಿದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಈ ಸಮಯದಲ್ಲಿ ನೀವು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ವಿಶ್ರಾಂತಿ ತೆಗೆದುಕೊಳ್ಳಿ.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 22

ಶುಭ ಸಮಯ: ಸಂಜೆ 4 ರಿಂದ 8:55 ರವರೆಗೆ

ಮಕರ ರಾಶಿ:

ಮಕರ ರಾಶಿ:

ಮಾನಸಿಕವಾಗಿ ಇಂದು ನೀವು ತುಂಬಾ ಸದೃಢವಾಗಿರುತ್ತೀರಿ. ಇಂದು ನಿಮ್ಮ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಮೊದಲನೆಯದಾಗಿ, ಹಣದ ಬಗ್ಗೆ ಮಾತನಾಡುತ್ತಾ, ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಬಲವಾದ ಸಾಧ್ಯತೆಯಿದೆ. ಆದರೂ, ಹಣದ ವಿಷಯದಲ್ಲಿ ನೀವು ಪ್ರತಿ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ, ವಿಶೇಷವಾಗಿ ನೀವು ಮನೆಯ ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ, ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ನಿಮಗಿರುತ್ತದೆ. ಅವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 8:55 ರಿಂದ ಮಧ್ಯಾಹ್ನ 12 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ನೀವು ಕೆಲವು ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಈ ದಿನದಂದು ನೀವು ಬಹಳ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಒಂದು ಸಣ್ಣ ತಪ್ಪು ಕೂಡ ನಿಮ್ಮ ಕಠಿಣ ಪರಿಶ್ರಮವನ್ನು ಹಾಳುಮಾಡಿಬಿಡಬಹುದು. ಉದ್ಯೋಗಸ್ಥರು ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ನೀವು ಯಾವುದೇ ರೀತಿಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ ನೀವು ಅವರ ಸಹಾಯವನ್ನು ಪಡೆದುಕೊಳ್ಳಿ. ವ್ಯವಹಾರ ವಿಷಯಗಳಲ್ಲಿ ಯಾವುದೇ ಆತುರಪಡಬೇಡಿ. ಇಂದು ನೀವು ಸಣ್ಣ ಲಾಭವನ್ನು ಗಳಿಸುವ ಒಂದೇ ಒಂದು ಅವಕಾಶವಿದ್ದರೂ ಅದನ್ನು ಕೈತಪ್ಪಿ ಹೋಗಲು ಬಿಡಬೇಡಿ. ನೀವು ವಿದ್ಯಾರ್ಥಿಯಾಗಿದ್ದರೆ, ಸೋಮಾರಿತನವನ್ನು ತಪ್ಪಿಸಿ ಮತ್ತು ನಿಮ್ಮ ಅಧ್ಯಯನದತ್ತ ಗಮನ ಹರಿಸಿ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಇಂದು ಸಂಗಾತಿಯಿಂದ ಲಾಭ ಪಡೆಯುವ ಸಾಧ್ಯತೆ ಇದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 14

ಶುಭ ಸಮಯ: ಸಂಜೆ 5:10 ರಿಂದ 9:50

ಮೀನ ರಾಶಿ:

ಮೀನ ರಾಶಿ:

ಗ್ರಹಗಳ ಪ್ರಭಾವದಿಂದಾಗಿ, ನೀವು ಇಂದು ಮಾನಸಿಕವಾಗಿ ತುಂಬಾ ಪ್ರಕ್ಷುಬ್ಧತೆಯನ್ನು ಅನುಭವಿಸುವಿರಿ. ನಿಮ್ಮನ್ನು ನೀವು ನಿಯಂತ್ರಿಸುವುದು ನಿಮಗೇ ಒಳ್ಳೆಯದು. ಇಂದು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ತಂದೆಯೊಂದಿಗಿನ ಸಂಬಂಧ ಹದಗೆಡಬಹುದು. ಅವರ ಯಾವುದೇ ಸಲಹೆಯನ್ನು ನೀವು ನಿರ್ಲಕ್ಷಿಸಬೇಡಿ. ಕೆಲಸದ ಬಗ್ಗೆ ಮಾತನಾಡುತ್ತಾ, ನಿಮ್ಮ ಕೆಲಸವು ಮಾರಾಟಕ್ಕೆ ಸಂಬಂಧಪಟ್ಟಿದ್ದರೆ, ಇಂದು ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಇಂದು ಕೆಲಸದ ಹೊರೆ ಅಧಿಕವಾಗಿರುತ್ತದೆ. ಇದು ನಿಮಗೆ ತುಂಬಾ ಒತ್ತಡ ಮತ್ತು ದಣಿದ ಅನುಭವವನ್ನು ನೀಡುತ್ತದೆ. ಆರೋಗ್ಯವಾಗಿರಲು, ನಿಮ್ಮ ಅಸ್ತವ್ಯಸ್ತಗೊಂಡ ದಿನಚರಿಯನ್ನು ನೀವು ಸರಿಮಾಡಿಕೊಳ್ಳಿ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 7

ಶುಭ ಸಮಯ: ಸಂಜೆ 4:15 ರಿಂದ 10 ರವರೆಗೆ

ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

English summary

Dina Bhavishya 25 November 2020

English summary: Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Tuesday, November 24, 2020, 19:51 [IST]
X
Desktop Bottom Promotion