For Quick Alerts
ALLOW NOTIFICATIONS  
For Daily Alerts

ಶುಕ್ರವಾರದ ದಿನ ಭವಿಷ್ಯ: ಮೇಷದಿಂದ ಮೀನವರೆಗಿನ ರಾಶಿಫಲ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Rashi bhavishya

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಹೇಮಂತ
ಮಾಸ: ಮಾರ್ಗಶಿರ
ನಕ್ಷತ್ರ: ಬೆಳಗ್ಗೆ 7:37ರವರೆಗೆ ಅಶ್ಚಿನಿ, ನಂತರ ಭರಣಿ
ಪಕ್ಷ: ಶುಕ್ಲ ಪಕ್ಷ
ರಾಹುಕಾಲ: ಬೆಳಗ್ಗೆ 10:44ರಿಂದ 12:09ರವರೆಗೆ
ಗುಳಿಕಕಾಲ: ಬೆಳಗ್ಗೆ 07:54ರಿಂದ 09:19ರವರೆಗೆ
ಯಮಗಂಡಕಾಲ: ಬೆಳಗ್ಗೆ 03:00ರಿಂದ 04:25ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:45ರಿಂದ 01:17ರವರೆಗೆ

ಸೂರ್ಯೋದಯ: ಬೆಳಗ್ಗೆ 6:28ಕ್ಕೆ
ಸೂರ್ಯಾಸ್ತ: ಸಂಜೆ 05:50ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು, ಅದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಮನೆಯ ವಾತಾವರಣವು ತುಂಬಾ ಚೆನ್ನಾಗಿರುತ್ತದೆ. ಪೋಷಕರ, ಆಶೀರ್ವಾದ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ತುಂಬಾ ಚೆನ್ನಾಗಿರುತ್ತದೆ.

ನಿಮ್ಮ ಮೇಲಾಧಿಕಾರಿಗಳ ಸಲಹೆಯನ್ನು ನೀವು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಅದು ನಿಮಗೆ ಒಳ್ಳೆಯದು. ಮತ್ತೊಂದೆಡೆ, ಇಂದು ವ್ಯಾಪಾರ ಮಾಡುವ ಜನರು ದೊಡ್ಡ ಆರ್ಥಿಕ ವಹಿವಾಟು ನಡೆಸದಂತೆ ಸೂಚಿಸಲಾಗಿದೆ. ಇಂದು ಆರ್ಥಿಕ ರಂಗ ಉತ್ತಮವಾಗಿರುತ್ತದೆ. ವೆಚ್ಚಗಳು ಕಡಿಮೆ ಮತ್ತು ನಿಮ್ಮ ಬಜೆಟ್ ಸಮತೋಲನದಲ್ಲಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆರೋಗ್ಯವು ಇಂದು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ನೀಲಿ

ಉತ್ತಮ ಸಂಖ್ಯೆ: 5

ಶುಭ ಸಮಯ: ಮಧ್ಯಾಹ್ನ 1:30 ರಿಂದ 7 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ನೀವು ಪ್ರಗತಿ ಹೊಂದಲು ಬಯಸಿದರೆ ನೀವು ಶ್ರಮಿಸಬೇಕು. ಅಡ್ಡ ದಾರಿ ಹಿಡಿಯಬೇಡಿ. ಇಂದು, ಆಪ್ತರಿಂದ ನಿರೀಕ್ಷಿಸಿದಂತೆ ಬೆಂಬಲದ ಕೊರತೆಯಿಂದ ನೀವು ದುಃಖಿತರಾಗುತ್ತೀರಿ. ಇದು ಇತರರ ಬೆಂಬಲ ಬಯಸಿ ಕುಳಿತುಕೊಳ್ಳುವ ಸಮಯವಲ್ಲ, ಸ್ವಾವಲಂಬಿಯಾಗಿ ನಿಮ್ಮ ಕೆಲಸವನ್ನು ಸಾಧ್ಯವಾದಷ್ಟು ನಿಭಾಯಿಸಲು ಪ್ರಯತ್ನಿಸಿ. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ಕುಟುಂಬದ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ನಿಮ್ಮ ಯಾವುದೇ ಸರ್ಕಾರಿ ಕೆಲಸದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಯಾವುದೇ ದೊಡ್ಡ ಸಮಸ್ಯೆಗಳನ್ನು ಇಂದು ಪರಿಹರಿಸಬಹುದು. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ನಿಮಗೆ ಏನಾದರೂ ಸಮಸ್ಯೆ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 12

ಒಳ್ಳೆಯ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4:25 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ನೀವು ದಣಿದಿದ್ದರೆ ನೀವು ಇಂದು ನಿಮ್ಮ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ವಿಶ್ರಾಂತಿ ಬಗ್ಗೆ ಗಮನಹರಿಸುವುದು ಉತ್ತಮ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ತುಂಬಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಕಾರ್ಯಕ್ಷಮತೆ ಕುಸಿಯುವುದು. ಉದ್ಯಮಿಗಳಿಗೆ ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಕುಟುಂಬ ಜೀವನದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಕ್ಷುಲ್ಲಕ ವಿಷಯಗಳನ್ನು ದೊಡ್ಡದು ಬಿಡಿ. ನಿಮ್ಮ ನಡವಳಿಕೆಯನ್ನು ನೀವು ಮೃದುಗೊಳಿಸಬೇಕಾಗಿದೆ. ಇಂದು ಆರ್ಥಿಕ ರಂಗದಲ್ಲಿ ಮಿಶ್ರ ಫಲಿತಾಂಶವಾಗಲಿದೆ. ನಿಮ್ಮ ವೆಚ್ಚಗಳು ಹೆಚ್ಚಾಗಬಹುದು.

ಉತ್ತಮ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 29

ಒಳ್ಳೆಯ ಸಮಯ: ಸಂಜೆ 4 ರಿಂದ 9 ರವರೆಗೆ

 ಕರ್ಕ ರಾಶಿ

ಕರ್ಕ ರಾಶಿ

ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ. ಮನಸ್ಸು ಸಂತೋಷವಾಗಿರುತ್ತದೆ ಮತ್ತು ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ದುಡಿಯುವ ಜನರು ತಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಬಾಸ್ ನಿಮ್ಮ ಕೆಲಸವನ್ನು ಬಹಳವಾಗಿ ಪ್ರಶಂಸಿಸುತ್ತಾರೆ. ನೀವು ಅವರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಪಡೆಯಬಹುದು. ಮತ್ತೊಂದೆಡೆ, ವ್ಯಾಪಾರಸ್ಥರು ಹೊಸ ಯೋಜನೆಯಲ್ಲಿ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಅದಕ್ಕಾಗಿ ಈ ದಿನವು ಒಳ್ಳೆಯದು. ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಪೋಷಕರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ನೀವು ಅವಿವಾಹಿತರಾಗಿದ್ದರೆ ವಿವಾಹ ಪ್ರಸ್ತಾಪವೊಂದು ನಿಮಗಾಗಿ ಬರಬಹುದು. ನೀವು ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳದಿದ್ದರೆ ಅದು ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನ ಅತ್ಯುತ್ತಮವಾಗಿದೆ.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 28

ಒಳ್ಳೆಯ ಸಮಯ: ಬೆಳಿಗ್ಗೆ 7:05 ರಿಂದ ಸಂಜೆ 4:15 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಇಂದು ಜವಾಬ್ದಾರಿಗಳ ಹೊರೆ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವಲ್ಲಿ ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಮತ್ತೊಂದೆಡೆ ನಿಮ್ಮ ಮಗುವಿಗೆ ಸಂಬಂಧಿಸಿದ ಯಾವುದೇ ಒಳ್ಳೆಯ ಸುದ್ದಿಯನ್ನು ನೀವು ಪಡೆದರೆ ಅದು ನಿಮಗೆ ಸ್ವಲ್ಪ ರಿಲೀಫ್ ಸಿಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ನಿಮ್ಮ ಕೆಲಸವು ಮರ, ಸಾರಿಗೆ, ಆಹಾರ ಇತ್ಯಾದಿಗಳಿಂದ ಕೂಡಿದ್ದರೆ ನೀವು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯಬಹುದು. ನೀವು ದೊಡ್ಡ ವ್ಯಾಪಾರಿಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ನಿಮ್ಮ ಪ್ರಮುಖ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಆರೋಗ್ಯವನ್ನು ನೋಡಿದರೆ ಇಂದು ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 38

ಒಳ್ಳೆಯ ಸಮಯ: ಬೆಳಿಗ್ಗೆ 7:55 ರಿಂದ ಮಧ್ಯಾಹ್ನ 1:30 ರವರೆಗೆ

 ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ಆರೋಗ್ಯ ಸ್ವಲ್ಪ ದುರ್ಬಲವಾಗುವುದು. ನಿಮ್ಮ ಆಯಾಸ ಮತ್ತು ದೌರ್ಬಲ್ಯ ಹೆಚ್ಚಾದಂತೆ ನಿಮಗೆ ಅಸ್ವಸ್ಥ ಹೆಚ್ಚುವುದು. ಅಂತಹ ಪರಿಸ್ಥಿತಿಯಲ್ಲಿ ನೀವು ವೈದ್ಯರನ್ನು ಸಂಪರ್ಕಿಸಲು ನಿರ್ಲಕ್ಷ್ಯ ತೋರಬಾರದು. ಇಂದು ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಭಾವನೆಗಳಲ್ಲಿ ಮುಳುಗುವ ಮೂಲಕ ನೀವು ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಹೆತ್ತವರ ಅಭಿಪ್ರಾಯಗಳಿಗೆ ನೀವು ಪ್ರಾಮುಖ್ಯತೆ ನೀಡಬೇಕು. ಅವರು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ ಅದನ್ನು ಖಂಡಿತವಾಗಿ ಪರಿಗಣಿಸಿ. ನಿಮ್ಮ ಸಂಗಾತಿಗೆ ಸಾಕಷ್ಟು ಸಮಯ ನೀಡಿ. ನಿಮ್ಮ ಕೋಪ ನಿಯಂತ್ರಿಸುವುದು ಒಳ್ಳೆಯದು. ಇಂದು ನೀವು ಕೆಲಸಕ್ಕೆ ಸಂಬಂಧಿಸಿದಂತೆ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು.

ಉತ್ತಮ ಬಣ್ಣ: ಗಾಢ ಗುಲಾಬಿ

ಶುಭ ಸಂಖ್ಯೆ: 4

ಒಳ್ಳೆಯ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ

ತುಲಾ ರಾಶಿ

ತುಲಾ ರಾಶಿ

ಉದ್ಯೋಗದ ಜನರು ಇಂದು ಯಾವುದೇ ದೊಡ್ಡ ಯಶಸ್ಸನ್ನು ಪಡೆಯಬಹುದು. ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಮತ್ತೊಂದೆಡೆ ದುರಹಂಕಾರ ತೋರಿಸುವುದು ಮತ್ತು ಜಗಳಕ್ಕೆ ಹೋಗುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ವ್ಯಾಪಾರಿಗಳಿಗೆ ಇಂದು ಬಹಳ ಮುಖ್ಯವಾಗುತ್ತದೆ. ಅಂಟಿಕೊಂಡಿರುವ ಯೋಜನೆ ಮತ್ತೆ ಪ್ರಾರಂಭಿಸಬಹುದು. ಇಂದು ಸಣ್ಣ ವ್ಯಾಪಾರಿಗಳು ಉತ್ತಮ ಲಾಭ ಪಡೆಯಬಹುದು.

ಹಣದ ಬಗ್ಗೆ ಹೇಳುವುದಾದರೆ ಹಠಾತ್ ಹಣ ಗಳಿಸುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಹಳೆಯ ಕುಟುಂಬದ ಸಮಸ್ಯೆಯನ್ನು ಇಂದು ಪರಿಹರಿಸಬಹುದು, ಇದು ಮನೆಯ ವಾತಾವರಣದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಪರಸ್ಪರ ನಿಮ್ಮ ಪ್ರೀತಿ ಬೆಳೆಯುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ತಿನ್ನುವುದು ಮತ್ತು ಕುಡಿಯುವುದರಲ್ಲಿ ನಿರ್ಲಕ್ಷ್ಯ ತೋರಿಸಬೇಡಿ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 20

ಒಳ್ಳೆಯ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ಮ ಬರವಣಿಗೆಯಲ್ಲಿ ಅಡಚಣೆ ಇದ್ದರೆ ನೀವು ಉತ್ತಮ ಸಲಹೆಗಾರರನ್ನು ಸಂಪರ್ಕಿಸಬೇಕು. ಇದರಿಂದ ಬಹುಶಃ ನಿಮ್ಮ ಸಮಸ್ಯೆ ಬಗೆಹರಿಯಬಹುದು ಮತ್ತು ನೀವು ಸರಿಯಾದ ದಿಕ್ಕಿನಲ್ಲಿ ಚಲಿಸಬಹುದು. ಈ ಸಮಯದಲ್ಲಿಅಧ್ಯಯನದ ಬಗ್ಗೆ ಸ್ವಲ್ಪ ಕೂಡ ಅಜಾಗರೂಕತೆ ಒಳ್ಳೆಯದಲ್ಲ. ಕೆಲಸದ ಬಗ್ಗೆ ಹೇಳುವುದಾದರೆ ಇಂದು ಉದ್ಯೋಗಿಗಳಿಗೆ ಉತ್ತಮ ದಿನವಾಗಿರುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡುವುದು ಉತ್ತಮ ಮತ್ತೊಂದೆಡೆ, ಇಂದು ವ್ಯಾಪಾರಿಗಳಿಗೆ ಉತ್ತಮ ದಿನವಾಗಿರುತ್ತದೆ. ನೀವು ಹೊಸ ಸ್ಟಾಕ್ ತರಲು ಯೋಚಿಸುತ್ತಿದ್ದರೆ ದಿನ ಒಳ್ಳೆಯದು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಸಂಬಂಧಿಕರ ಹಸ್ತಕ್ಷೇಪ ನಿಮಗೆ ಇಷ್ಟವಾಗದಿರಬಹುದು. ಆದಾಗ್ಯೂ ಈ ಕುರಿತು ವಾದ ಮಾಡುವುದು ಅಥವಾ ನಿಂದನೀಯ ಪದಗಳನ್ನು ಬಳಸುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ.

ಉತ್ತಮ ಬಣ್ಣ: ಗಾಢ ಹಳದಿ

ಅದೃಷ್ಟ ಸಂಖ್ಯೆ: 14

ಒಳ್ಳೆಯ ಸಮಯ: ಸಂಜೆ 4:05 ರಿಂದ 9 ರವರೆಗೆ

ಧನು ರಾಶಿ

ಧನು ರಾಶಿ

ಈ ದಿನ ನೀವು ತುಂಬಾ ಜಾಗರೂಕರಾಗಿರಲು ಸೂಚಿಸಲಾಗಿದೆ. ಇತರರ ಮಾತಿನಿಂದ ಪ್ರೇರಿತರಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ನಂತರ ವಿಷಾದಿಸಬೇಕಾಗಬಹುದು. ಅವರು ನಿಮ್ಮ ಗುರಿಯಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಲು ಕೆಲವರು ಪ್ರಯತ್ನಿಸಬಹುದು. ನೀವು ಬುದ್ಧಿವಂತಿಕೆಯೊಂದಿಗೆ ಕೆಲಸ ಮಾಡಿದರೆ ಉತ್ತಮ. ಇಂದು ವ್ಯಾಪಾರಿಗಳಿಗೆ ಒತ್ತಡದ ದಿನವಾಗಿರುತ್ತದೆ.

ನಿಮ್ಮ ಕೆಲಸವು ಇದ್ದಕ್ಕಿದ್ದಂತೆ ಹಾಳಾಗುವುದು, ಇದರಿಂದಾಗಿ ಭಾರಿ ನಷ್ಟವಾಗುತ್ತದೆ. ಉದ್ಯೋಗಿಗಳ ಕೆಲಸದ ಹೊರೆ ಹೆಚ್ಚಾಗುವುದರಿಂದ ಇಂದು ಬಹಳ ಕಷ್ಟವಾಗುತ್ತದೆ. ಈ ರೀತಿಯಾಗಿ ಒತ್ತಡದಲ್ಲಿ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮತ್ತು ಆರೋಗ್ಯ ಎರಡಕ್ಕೂ ಸಮಾನ ಗಮನ ಕೊಡುವುದು ನಿಮಗೆ ಒಳ್ಳೆಯದು. ಹೊರಗಿನ ಸಮಸ್ಯೆಗಳನ್ನು ಪರಿಹರಿಸಿ; ಮನೆಯಲ್ಲಿ ಅಂತಹ ವಿಷಯಗಳನ್ನು ತಪ್ಪಿಸಿ, ಇಲ್ಲದಿದ್ದರೆ ಮನೆಯ ವಾತಾವರಣವು ಹದಗೆಡಬಹುದು.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 15

ಒಳ್ಳೆಯ ಸಮಯ: ಬೆಳಿಗ್ಗೆ 6:45 ರಿಂದ ಮಧ್ಯಾಹ್ನ 2:25

ಮಕರ ರಾಶಿ

ಮಕರ ರಾಶಿ

ಇಂದು ನಿಮಗೆ ಮಿಶ್ರ ಅವಕಾಶ. ಈ ದಿನ ಉದ್ಯೋಗಾಕಾಂಕ್ಷಿಗಳು ತಮ್ಮ ಬಾಕಿ ಇರುವ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ನಿಮ್ಮ ಸಣ್ಣ ತಪ್ಪಿನ ಬಗ್ಗೆ ನಿಮ್ಮ ಬಾಸ್ ಕಠಿಣ ನಿಲುವನ್ನು ತೆಗೆದುಕೊಳ್ಳಬಹುದು. ಮತ್ತೊಂದೆಡೆ, ವ್ಯಾಪಾರಿಗಳು ತಮ್ಮ ವ್ಯವಹಾರವನ್ನುಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕೆಲವು ಪ್ರಮುಖ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆರೋಗ್ಯದ ಕಡೆ ಸ್ವಲ್ಪ ಜಾಗ್ರತೆ.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 11

ಒಳ್ಳೆಯ ಸಮಯ: ಮಧ್ಯಾಹ್ನ 3 ರಿಂದ 8 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾ ಅಸಮಾಧಾನವನ್ನು ಮರೆತು ಪ್ರೀತಿಯಿಂದ ನಡೆದುಕೊಳ್ಳಿ. ಮಕ್ಕಳಿಗೆ ಸಂಬಂಧಿಸಿದ ಕಾಳಜಿಯನ್ನು ಇಂದು ಸಹ ತೆಗೆದುಹಾಕಬಹುದು. ಕೆಲಸ ಮಾಡುವವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಕೆಲಸವನ್ನು ನೀವು ಕಠಿಣ ಪರಿಶ್ರಮದಿಂದ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ಇಂದು ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಲಿದೆ. ನಿಮ್ಮ ಕೈಗೆ ಒಳ್ಳೆಯ ಆರ್ಡರ್ ಸಿಗುವುದು. ನಿಮ್ಮ ವ್ಯಾಪಾರವು ವೇಗವಾಗಿ ಬೆಳೆಯುತ್ತದೆ. ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿರುತ್ತದೆ.

ಉತ್ತಮ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 25

ಒಳ್ಳೆಯ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 3:30 ರವರೆಗೆ

ಮೀನ ರಾಶಿ

ಮೀನ ರಾಶಿ

ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಇಂದು ನೀವು ನಿಮ್ಮ ಖುಷಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಇದಲ್ಲದೆ, ಅಗತ್ಯವಿರುವವರಿಗೆ ಆರ್ಥಿಕವಾಗಿ ಸಹ ಸಹಾಯ ಮಾಡಬಹುದು. ಉದ್ಯೋಗಿಗಳು ಇಂದು ನಿಮಗೆ ಕೆಲವು ಪ್ರಮುಖ ಜವಾಬ್ದಾರಿಯನ್ನು ವಹಿಸಬಹುದು. ನಿಮ್ಮ ಕೆಲಸವನ್ನು ನೀವು ಸಂಪೂರ್ಣ ಹುರುಪಿನಿಂದ ಮತ್ತು ಆತ್ಮವಿಶ್ವಾಸದಿಂದ ಮಾಡುತ್ತೀರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಸ್ಥಳೀಯರು ಆರ್ಥಿಕವಾಗಿ ಲಾಭ ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ. ನೀವು ಪೋಷಕರಿಂದ ಭಾವನಾತ್ಮಕ ಬೆಂಬಲವನ್ನೂ ಪಡೆಯುತ್ತೀರಿ. ಸಂಜೆ ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಅವಕಾಶ ಸಿಗುತ್ತದೆ. ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತವೆ.

ಉತ್ತಮ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 19

ಒಳ್ಳೆಯ ಸಮಯ: ಸಂಜೆ 6:20 ರಿಂದ 9:00 ರವರೆಗೆ

English summary

Dina Bhavishya 25 December 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Thursday, December 24, 2020, 21:33 [IST]
X
Desktop Bottom Promotion