For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಲಕ್ಷ್ಮಿ ಕೃಪೆ ಇದೆ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಶರದ್

ಮಾಸ: ಆಶ್ವಿಜ

ನಕ್ಷತ್ರ: ಅಕ್ಟೋಬರ್ 25, ಮಧ್ಯಾಹ್ನ 02:38 ರವರೆಗೆ ಶ್ರವಣ, ನಂತರ ಧನಿಷ್ಠ

ತಿಥಿ: ಶುಕ್ಲ ಪಕ್ಷ

ರಾಹುಕಾಲ: ಬೆಳಗ್ಗೆ 09:16ರಿಂದ 10:41ರವರೆಗೆ

ಗುಳಿಕಕಾಲ: ಬೆಳಗ್ಗೆ 06:28ರಿಂದ 07:52ರವರೆಗೆ

ಯಮಗಂಡಕಾಲ: ಮಧ್ಯಾಹ್ನ 01:29ರಿಂದ 02:54ರವರೆಗೆ

ದುರ್ಮುಹೂರ್ತ: ಬೆಳಗ್ಗೆ 06:28ರಿಂದ 07:13ರವರೆಗೆ

ಮಧ್ಯಾಹ್ನ 07:13ರಿಂದ 07:58ರವರೆಗೆ

ಸೂರ್ಯೋದಯ: ಬೆಳಗ್ಗೆ 06:28ಕ್ಕೆ

ಸೂರ್ಯಾಸ್ತ: ಸಂಜೆ 05:42ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ದಿನ ಅಷ್ಟು ಉತ್ತಮವಾಗಿಲ್ಲ. ಹಣವನ್ನು ಕಳೆದುಕೊಳ್ಳುವ ಸಾಧ್ಯತೆ. ಹಣದ ವಿಷಯದಲ್ಲಿ ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನೀವು ನೌಕರಿ ಮಾಡುವವರಾಗಿದ್ದರೆ, ನಿಮ್ಮ ಸಮಯವನ್ನು ನೀವು ಸದುಪಯೋಗ ಪಡಿಸಿಕೊಳ್ಳಿ. ಕಚೇರಿಯಲ್ಲಿ ಬಾಕಿ ಇರುವ ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ ಇಲ್ಲದಿದ್ದರೆ ನಿಮಗೆ ಒಳ್ಳೆಯ ಫಲವೂ ಸಿಗುವುದಿಲ್ಲ. ಮತ್ತೊಂದೆಡೆ, ವ್ಯಾಪಾರ ಮಾಡುವವರು ಸ್ವಲ್ಪ ಪರಿಹಾರವನ್ನು ಪಡೆಯಬಹುದು. ಯಾವುದೇ ಕಾಗದದ ಅಡಚಣೆಯಿಂದಾಗಿ ನಿಮ್ಮ ಕೆಲಸ ಸ್ಥಗಿತಗೊಂಡಿದ್ದರೆ, ನಿಮ್ಮ ಸಮಸ್ಯೆ ಇಂದು ಕೊನೆಗೊಳ್ಳಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಸಿಹಿಯಾಗಿರುತ್ತವೆ ಮತ್ತು ನಿಮಗೆ ಭಾವನಾತ್ಮಕ ಬೆಂಬಲವೂ ಸಿಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ದಿನ ಉತ್ತಮವಾಗಿದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 2

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ ಇಂದು. ನಿಮ್ಮ ಶಿಕ್ಷಣದಲ್ಲಿನ ಅಡಚಣೆಗಳು ನಿವಾರಣೆಯಾಗಿ, ನೀವು ಶ್ರದ್ಧೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ನೀವು ಆನ್‌ಲೈನ್ ಕೋರ್ಸ್ ಮಾಡಲು ಯೋಜಿಸುತ್ತಿದ್ದರೆ ಈ ದಿನ ಅದರ ಆರಂಭಕ್ಕೆ ಉತ್ತಮ ಸಮಯ. ಕೆಲಸದ ಕುರಿತು ಮಾತನಾಡುವುದಾದರೆ, ನಿಮಗೆ ನಿಮ್ಮ ಅದೃಷ್ಟ ಕೈಹಿಡಿಯಲಿದೆ. ಕಚೇರಿಯಲ್ಲಿ ನೀವು ನಿಮ್ಮ ಕೆಲಸಕ್ಕೆ ಹೆಚ್ಚು ಮೆಚ್ಚುಗೆ ಪಡೆಯುತ್ತೀರಿ. ವ್ಯಾಪಾರಿಗಳಿಗೆ ಹಣದ ವಿಷಯದಲ್ಲಿ ಇಂದು ಉತ್ತಮ ದಿನ. ದೀರ್ಘಕಾಲೀನ ಏರಿಳಿತಗಳನ್ನು ನೋಡಿದ ನಂತರ ನೀವು ಇಂದು ಹೆಚ್ಚಿನ ಲಾಭವನ್ನು ಗಳಿಸಬಹುದು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ನಿಮಗೆ ಯಾವುದಾದರೂ ಹಠಾತ್ ಸಮಸ್ಯೆ ಎದುರಾಗಬಹುದು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ, ಎಲ್ಲಾ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಮನೆಯ ಸದಸ್ಯರೊಂದಿಗೆ ಅಸಮಾಧಾನ ಉಂಟಾಗಬಹುದು. ಅರ್ಥಹೀನ ವಿಷಯಗಳನ್ನು ನಿರ್ಲಕ್ಷಿಸಿ ನಿಮ್ಮ ಪ್ರಮುಖ ಕಾರ್ಯಗಳತ್ತ ಗಮನ ಹರಿಸಿದರೆ ಒಳ್ಳೆಯದು.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 24

ಶುಭ ಸಮಯ: ಸಂಜೆ 5 ರಿಂದ 10 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಇಂದು ಆರ್ಥಿಕವಾಗಿ ಸಬಲರಾಗುತ್ತೀರಿ. ಹಣದ ವಿಷಯದಲ್ಲಿ ಸುಧಾರಣೆ ಕಾಣಬಹುದು. ನಿಮ್ಮ ಯಾವುದೇ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು. ಇಂದು ನೀವು ತುರ್ತು ಶಾಪಿಂಗ್ ಸಹ ಮಾಡಬಹುದು. ಕುಟುಂಬ ಜೀವನದಲ್ಲಿ ಎಂದಿನಂತೆ ಸಂತೋಷ ಇರುತ್ತದೆ. ನೀವು ಪೋಷಕರಿಂದ ಆಶೀರ್ವಾದ ಪಡೆಯುತ್ತೀರಿ. ಒಡಹುಟ್ಟಿದವರೊಂದಿಗೆ ಸಂಬಂಧವು ಬಲವಾಗಿರುತ್ತದೆ. ನೀವು ಇತ್ತೀಚೆಗೆ ಹೊಸ ಕೆಲಸವನ್ನು ಪ್ರಾರಂಭಿಸಿದ್ದು, ವಿಶೇಷ ಲಾಭ ಗಳಿಸಲು ಸಾಧ್ಯವಾಗದಿದ್ದರೆ, ಸಿಗುತ್ತಿಲ್ಲವಾದರೆ ನಿರಾಶೆಗೊಳ್ಳುವ ಅಗತ್ಯವಿಲ್ಲ. ಆತುರಪಡಬೇಡಿ, ಉತ್ತಮ ಲಾಭಕ್ಕಾಗಿ ಕಾಯಲೇಬೇಕಾಗುತ್ತದೆ. ನೌಕರರಿಗೆ ದಿನ ಸಾಮಾನ್ಯ ವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಹೆಚ್ಚು ಜಾಗರೂಕರಾಗಿರಬೇಕು, ವಿಶೇಷವಾಗಿ ನಿಮಗೆ ಉಸಿರಾಟದ ಕಾಯಿಲೆ ಇದ್ದರೆ ನಿರ್ಲಕ್ಷ್ಯ ವಹಿಸಬೇಡಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 2

ಶುಭ ಸಮಯ: ಮಧ್ಯಾಹ್ನ 2:45 ರಿಂದ 7 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಇಂದು ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ನಿಮ್ಮ ಮನಸ್ಸಿನಲ್ಲಿ ಅನೇಕ ಚಿಂತೆಗಳಿದ್ದು ಯಾವ ಕೆಲಸವನ್ನು ಮಾಡಲೂ ಮನಸ್ಸಿರುವುದಿಲ್ಲ. ಮಾನಸಿಕ ಒತ್ತಡದಿಂದಾಗಿ ವಸ್ತುಗಳು ಎಲ್ಲೆಲ್ಲೋ ಇಟ್ಟು ಹುಡುಕಬಹುದು. ಹಾಗಾಗಿ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ನಿಮ್ಮ ಆರೋಗ್ಯ ಕೂಡ ಕುಸಿಯಬಹುದು. ಪ್ರತಿಕೂಲ ಸಂದರ್ಭಗಳಲ್ಲಿ ಸಕಾರಾತ್ಮಕ ಆಲೋಚನೆಗಳು, ಧೈರ್ಯ ಮತ್ತು ದೃಢ ನಿಶ್ಚಯದಿಂದ ಮುಂದೆ ಸಾಗಿದರೆ ನೀವು ಖಂಡಿತವಾಗಿಯೂ ಗೆಲ್ಲುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉತ್ತಮ ಯೋಜನೆಗಳನ್ನು ಹಾಕಿಕೊಳ್ಳಿ. ಕುಟುಂಬ ಜೀವನ ಸಾಮಾನ್ಯವಾಗಿರಲಿದೆ. ನೀವಿಂದು ಕೆಲಸದಲ್ಲಿಯೇ ಹೆಚ್ಚು ಸಮಯವನ್ನು ಕಳೆಯಬೇಕಾಗಿ ಬರಬಹುದು. ಹಾಗಾಗಿ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದೇ ಇರಬಹುದು.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 30

ಶುಭ ಸಮಯ: ಸಂಜೆ 6 ರಿಂದ 9:55

ಸಿಂಹ ರಾಶಿ:

ಸಿಂಹ ರಾಶಿ:

ನಿಮ್ಮ ಸ್ವಭಾವವನ್ನು ನೀವು ಮೊದಲು ಬದಲಾಯಿಸಿಕೊಳ್ಳಿ. ನಿಮ್ಮ ಕಠಿಣ ವರ್ತನೆ ನಿಮ್ಮ ಪ್ರೀತಿಪಾತ್ರರಿಂದ ನಿಮ್ಮನ್ನು ದೂರ ಮಾಡುತ್ತದೆ. ಅಲ್ಲದೆ, ಇದು ನಿಮ್ಮ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮನೆಯಲ್ಲಿ ಅಥವಾ ಹೊರಗೆ ಇರಲಿ, ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಇನ್ನು ಕೆಲಸದ ವಿಷಯಕ್ಕೆ ಬಂದರೆ, ನೌಕರಸ್ಥರು ಉನ್ನತ ಅಧಿಕಾರಿಗಳಲ್ಲದೆ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ನಿಮ್ಮ ಹಿರಿಯರು ಇಂದು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ಅದನ್ನು ನಿರ್ಲಕ್ಷಿಸಬೇಡಿ. ವ್ಯಾಪಾರಿಗಳಿಗೆ ಇಂದು ಒಳ್ಳೆಯ ಅಷ್ಟು ಲಾಭದಾಯಕವಲ್ಲ. ದೊಡ್ಡ ಹಣಕಾಸಿನ ವಹಿವಾಟು ಮಾಡುವುದು ಇಂದು ಸೂಕ್ತವಲ್ಲ. ವಿಶೇಷವಾಗಿ ಸಾಲ ಪಡೆಯುವುದು ಅಥವಾ ನೀಡುವುದನ್ನು ತಪ್ಪಿಸಿ. ಆರೋಗ್ಯ ಇಂದು ನಿಮ್ಮ ಕೈಲಿಲ್ಲ. ಏರುಪೇರಾಗಬಹುದು. ನೀವು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಮ್ಮ ಆರೋಗ್ಯವು ಕ್ಷೀಣಿಸಬಹುದು.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 35

ಶುಭ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಕೆಲಸದ ಆರಂಭದಲ್ಲಿ ನೀವು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಯೋಜನೆಯ ಪ್ರಕಾರ ನಿಮ್ಮ ಎಲ್ಲಾ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಯಾವುದೇ ಕೆಲಸವಾಗಲಿ, ವ್ಯವಹಾರವಾಗಲಿ, ನೀವು ಖಂಡಿತವಾಗಿಯೂ ಇಂದು ಯಶಸ್ಸನ್ನು ಪಡೆಯುತ್ತೀರಿ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮ್ಮ ಕಠಿಣ ಪರಿಶ್ರಮವು ಇಂದು ನಿಮಗೆ ಶ್ರೇಯಸ್ಸನ್ನು ತರಬಹುದು. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಹಣದ ಕೊರತೆಯಿಂದಾಗಿ, ಸ್ಥಗಿತಗೊಂಡಿದ್ದ ನಿಮ್ಮ ಕೆಲಸ ಇಂದು ಪೂರ್ಣಗೊಳ್ಳಬಹುದು. ಕುಟುಂಬ ಜೀವನದಲ್ಲಿ ಹಠಾತ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ. ಮನೆಯ ಸದಸ್ಯರ ಆರೋಗ್ಯ ಕುಸಿಯಬಹುದು. ಇದು ನಿಮ್ಮನ್ನು ಸಾಕಷ್ಟು ಒತ್ತಡಕ್ಕೆ ಒಳಪಡಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಇಂದು ಸಾಧ್ಯ. ಇಂದು ನಿಮಗೆ ಹಳೆಯ ವಿಷಯಗಳು ನೆನಪಾಗಬಹುದು. ಇನ್ನು ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನಿಮಗೆ ಕೈ ಕಾಲುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಪ್ರತಿದಿನ ಹೃದಯಕ್ಕೆ ಸಂಬಂಧಿಸಿದ ಲಘು ವ್ಯಾಯಾಮ ಮಾಡಬೇಕು.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 19

ಶುಭ ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ದಿನದ ಆರಂಭವು ತುಂಬಾ ಚೆನ್ನಾಗಿರುತ್ತದೆ. ನೀವು ಬೆಳಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಸಂತೋಷವನ್ನು ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳುತ್ತೀರಿ. ನೀವು ಮನೆಯ ಸದಸ್ಯರೊಂದಿಗೆ ಜಗಳವಾಡುತ್ತಿದ್ದರೆ, ಅವರನ್ನು ಸಮಾಧಾನ ಮಾಡಲು ಇಂದು ಒಳ್ಳೆಯ ದಿನ. ನಿಮ್ಮ ನಡುವಿನ ಎಲ್ಲಾ ಕಹಿ ಇಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಹಣದ ಹರಿವು ಉತ್ತಮ ಸ್ಥಿತಿಯಲ್ಲಿರುತ್ತದೆ. ನೀವು ಹೆಚ್ಚು ಖರ್ಚು ಮಾಡಿದರೂ ಇಂದು ಯಾವುದೇ ತೊಂದರೆ ಇರುವುದಿಲ್ಲ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯ ಪ್ರೀತಿ ಮತ್ತು ಬೆಂಬಲವನ್ನು ಪಡೆಯುವ ಮೂಲಕ ನೀವು ತುಂಬಾ ಸಮಾಧಾನವನ್ನು ಅನುಭವಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚು ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪೂರ್ವ ಯೋಜಿತವಾಗಿ ಕಾರ್ಯ ಮಾಡಿದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ. ನಿಮ್ಮ ಕೆಲಸವು ರೆಸ್ಟೋರೆಂಟ್ ಅಥವಾ ಹೋಟೆಲ್‌ ಗೆ ಸಂಬಂಧಿಸಿದ್ದರೆ, ನೀವು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ನಿಮ್ಮ ಆಯಾಸ ಹೆಚ್ಚಾಗುತ್ತದೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 14

ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಆಫೀಸಿನಲ್ಲಿ ವಾತಾವರಣವು ಅಷ್ಟು ಉತ್ತಮವಾಗಿರುವುದಿಲ್ಲ. ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಹೋದ್ಯೋಗಿಗಳ ಸಹಕಾರ ಸಿಗದೇ ಇರಬಹುದು ಜೊತೆಗೆ ಅವರು ನಿಮ್ಮನ್ನು ವಿರೋಧಿಸಬಹುದು. ನೀವು ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ನಿರ್ವಹಿಸಲು ಪ್ರಯತ್ನಿಸಿ. ವ್ಯಾಪಾರಸ್ಥರಿಗೆ ಆರ್ಥಿಕ ಲಾಭವಾಗುವ ಸಾಧ್ಯತೆ. ನೀವು ದೊಡ್ಡ ಉದ್ಯಮಿಯಾಗಿದ್ದರೆ ನಿಮ್ಮ ಕೈಗೆ ಕೆಲವು ದೊಡ್ಡ ಕೆಲಸಗಳು ಸಿಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷಿಸಿದರೆ ನಿಮ್ಮ ಮನೆಯ ಶಾಂತಿಯನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ನಡವಳಿಕೆಯನ್ನು ನೀವು ಸರಿಯಾಗಿ ಇಟ್ಟುಕೊಳ್ಳಬೇಕು. ನಿಮ್ಮ ಕೋಪಗೊಂಡ ಸ್ವಭಾವವು ನಿಮ್ಮ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಆರೋಗ್ಯದ ವಿಷಯಕ್ಕೆ ಬಂದಾಗ, ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳುವುದನ್ನು ಅಥವಾ ಕೋಪಗೊಳ್ಳುವುದು ಒಳ್ಳೆಯದಲ್ಲ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 5

ಶುಭ ಸಮಯ: ಸಂಜೆ 6:45 ರಿಂದ 10 ರವರೆಗೆ

ಧನು ರಾಶಿ:

ಧನು ರಾಶಿ:

ಇಂದು ನೀವು ನಿಮ್ಮ ಕುಟುಂಬ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳಲ್ಲಿನ ಕಹಿ ಭಾವನೆಯನ್ನು ತೆಗೆದುಹಾಕಲು ನೀವು ಪ್ರಯತ್ನಿಸಬಹುದು. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಹಣದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ನೀವು ಮುಕ್ತವಾಗಿ ಖರ್ಚು ಮಾಡುತ್ತಿದ್ದರೆ ಮುಂದೆ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಬೇಡ. ನಿಮ್ಮ ಕೆಲಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಮತ್ತು ಅನಗತ್ಯ ವಿಷಯಗಳಿಂದ ದೂರವಿರಿ. ಹಾಗೆಯೇ, ವ್ಯಾಪಾರ ಮಾಡುವವರ ಯಾವುದೇ ಪ್ರಮುಖ ಕೆಲಸಕ್ಕೆ ಅಡ್ಡಿಯಾಗಬಹುದು. ನೀವು ಯಾವುದೇ ಕೆಲಸ ಮಾಡಿದರೂ, ನೀವು ಅದನ್ನು ನಿಯಮಗಳು ಮತ್ತು ಕಾನೂನಿನ ವ್ಯಾಪ್ತಿಯಲ್ಲಿಯೇ ಮಾಡಿದರೆ ಉತ್ತಮ. ನಿಮ್ಮ ಆರೋಗ್ಯದ ವಿಷಯಕ್ಕೆ ಬಂದರೆ, ತುಂಬಾ ಕೋಪಗೊಳ್ಳುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಮಕರ ರಾಶಿ:

ಮಕರ ರಾಶಿ:

ವ್ಯಾಪಾರಸ್ಥರಿಗಿಂದು ಶುಭ ದಿನ, ಶುಭ ಫಲ. ಹಣದ ವಿಷಯದಲ್ಲಿ ಸಮಾಧಾನ. ಇದರಿಂದ ನಿಮ್ಮ ಸಮಸ್ಯೆಗಳೂ ಬಗೆಹರಿಯಬಹುದು. ನೀವು ಹೊಸ ಕೆಲಸ ಮಾಡಲು ಬಯಸಿದರೆ ಈ ಸಮಯ ಅದಕ್ಕೆ ಒಳ್ಳೆಯದು. ಉದ್ಯೋಗಾಕಾಂಕ್ಷಿಗಳಿಗೆ ಉನ್ನತ ಅಧಿಕಾರಿಗಳ ಬೆಂಬಲ ಸಿಗುತ್ತದೆ ಮತ್ತು ನಿಮ್ಮ ಕೆಲವು ಪ್ರಮುಖ ಕಾರ್ಯಗಳು ಇಂದು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ದಿನದ ಎರಡನೇ ಭಾಗದಲ್ಲಿ ನಿಮಗೆ ವಿನೋದಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ದಿನವನ್ನು ಆನಂದಿಸುವಿರಿ. ನಿಮ್ಮ ಸಂಗಾತಿಯನ್ನು ಗೌರವಿಸಿ. ಸಣ್ಣ ವಿಷಯಗಳ ಬಗ್ಗೆ ಮನಸ್ತಾಪದಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರ ಸ್ವಭಾವದಲ್ಲಿ ಕೆಲವು ಬದಲಾವಣೆಗಳಿರಬಹುದು. ಅವರೊಂದಿಗೆ ಮಾತನಾಡುವ ಮೂಲಕ, ನೀವು ಅವರ ಮನಸ್ಸನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ಉತ್ತಮ ದಿನ. ನೀವು ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ಮಾಡಿದರೆ, ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 8

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

ಕನ್ಯಾ ರಾಶಿ:

ಕನ್ಯಾ ರಾಶಿ:

ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಚಿಂತೆ ಮಾಡುತ್ತೀರಿ. ತಣ್ಣೀರು, ತಂಪು ಪಾನೀಯ ಇತ್ಯಾದಿಗಳನ್ನು ಕುಡಿಯಬೇಡಿ. ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು, ಯೋಚಿಸದೆ ಖರ್ಚು ಮಾಡುವ ಅಭ್ಯಾಸವನ್ನು ಬದಲಾಯಿಸಿ. ಇದಲ್ಲದೆ, ಪ್ರತಿಯೊಂದು ಆರ್ಥಿಕ ವಹಿವಾಟನ್ನು ಯೋಚಿಸಿ ಮಾಡಿ. ನೌಕರಸ್ಥರ ದಿನ ಸಾಮಾನ್ಯವಾಗಿರುತ್ತದೆ. ಒಂದು ಪ್ರಮುಖ ಕಾರ್ಯದ ಬಗ್ಗೆ ನೀವು ಕಚೇರಿಯಲ್ಲಿ ಬಾಸ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ಚರ್ಚೆ ನಡೆಸಬಹುದು. ನಿಮ್ಮ ಮಾತುಗಳಿಂದ ಪ್ರತಿಯೊಬ್ಬರೂ ತುಂಬಾ ಪ್ರಭಾವಿತರಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಲಾಭಗಳನ್ನು ಪಡೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಪೋಷಕರ ಸಹಾಯದಿಂದ, ನಿಮ್ಮ ಯಾವುದೇ ಪ್ರಮುಖ ಸಮಸ್ಯೆಗಳು ಕೊನೆಗೊಳ್ಳಬಹುದು. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಹುರಿದುಂಬಿಸುತ್ತಾರೆ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಗಿರುತ್ತಾರೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 4

ಶುಭ ಸಮಯ: ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ

ಮೀನ ರಾಶಿ:

ಮೀನ ರಾಶಿ:

ಹಣದ ವಿಷಯದಲ್ಲಿ ಜಾಗರೂಕತೆ ಅಗತ್ಯ. ಹಣಕಾಸಿನ ಬಿಕ್ಕಟ್ಟನ್ನು ತಪ್ಪಿಸಲು, ಮೊದಲು ನೀವು ನಿಮ್ಮ ದುಂದುಗಾರಿಕೆಯನ್ನು ನಿಯಂತ್ರಿಸಬೇಕು. ಇದಲ್ಲದೆ, ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ನಿಮಗೆ ನಿರಾಶೆ ಆಗಬಹುದು. ಆದರೆ ನಿಮ್ಮ ಪ್ರಯತ್ನವನ್ನು ಬಿಡಬೇಡಿ. ನಿಮ್ಮ ಪ್ರಯತ್ನಗಳು ಶೀಘ್ರದಲ್ಲೇ ಫಲ ನೀಡುತ್ತವೆ. ಇಂದು ನೌಕರಸ್ಥರು ಕೆಲಸದ ಮಧ್ಯದಲ್ಲಿ ಹೆಚ್ಚು ಮಾತನಾಡದಂತೆ ಎಚ್ಚರ ವಹಿಸಬೇಕು ಮತ್ತು ಸಮಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಇಂದು ವ್ಯಾಪಾರಿಗಳಿಗೆ ಬಹಳ ಕಾರ್ಯನಿರತ ದಿನ. ನೀವು ಸಾಕಷ್ಟು ಶ್ರಮಿಸಬೇಕಾಗಬಹುದು. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ಆದರೆ, ಪ್ರೀತಿಪಾತ್ರರಿಗೆ ನಿಮ್ಮಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಸ್ವಲ್ಪ ಸಮಯ ನೀಡಬೇಕು. ಇನ್ನು ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ಬೆನ್ನು ನೋವು ಕಾಣಿಸಿಕೊಳ್ಳಬಹುದು.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 6

ಶುಭ ಸಮಯ: ಸಂಜೆ 4:20 ರಿಂದ 8 ರವರೆಗೆ

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

English summary

Dina Bhavishya 24 October 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, October 24, 2020, 4:00 [IST]
X