For Quick Alerts
ALLOW NOTIFICATIONS  
For Daily Alerts

"ಗುರುವಾರದ ದಿನ ಭವಿಷ್ಯ: ಮೇಷ-ಮೀನವರೆಗಿನ ರಾಶಿಫಲ "

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 24 December 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಹೇಮಂತ
ಮಾಸ: ಮಾರ್ಗಶಿರ
ನಕ್ಷತ್ರ: ರಾತ್ರಿಪೂರ್ತಿ, ಅಶ್ಚಿನಿ
ಪಕ್ಷ: ಶುಕ್ಲ ಪಕ್ಷ
ರಾಹುಕಾಲ: ಮಧ್ಯಾಹ್ನ 01:38ರಿಂದ 02:56ರವರೆಗೆ
ಗುಳಿಕಕಾಲ: ಬೆಳಗ್ಗೆ 09:46ರಿಂದ 11:04ರವರೆಗೆ
ಯಮಗಂಡಕಾಲ: ಬೆಳಗ್ಗೆ 07:11ರಿಂದ 08:29ರವರೆಗೆ
ದುರ್ಮುಹೂರ್ತ: ಬೆಳಗ್ಗೆ 10:38ರಿಂದ 11:19ರವರೆಗೆ
ಮಧ್ಯಾಹ್ನ: 02:45ರಿಂದ 03:27

ಸೂರ್ಯೋದಯ: ಬೆಳಗ್ಗೆ 07:11ಕ್ಕೆ
ಸೂರ್ಯಾಸ್ತ: ಸಂಜೆ 05:31ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ನಿಮ್ಮ ಕಾರ್ಯಗಳತ್ತ ಗಮನ ಹರಿಸಿ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರಿಗಳು ದೊಡ್ಡ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ನಿಮಗೆ ಉತ್ತಮ ಅವಕಾಶ ಸಿಗಬಹುದು. ನಿಮ್ಮ ಕೋಪಗೊಳ್ಳುವ ಸ್ವಭಾವದಿಂದಾಗಿ ಇಂದು ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಆಡುವುದು ಉತ್ತಮ. ಆರ್ಥಿಕವಾಗಿ ಇಂದು ಸಾಮಾನ್ಯ ದಿನ. ಹಣದ ವಹಿವಾಟು ಮಾಡುವಾಗ ಎಚ್ಚರಿಕೆಯಿಂದ ಮಾಡಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ತಲೆನೋವು ಮತ್ತು ನಿದ್ರಾಹೀನತೆಯ ಸಮಸ್ಯೆ ಕಾಡಬಹುದು.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 15

ಶುಭ ಸಮಯ: ಮಧ್ಯಾಹ್ನ 2:15 ರಿಂದ 10:10 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮ ತಂದೆಯ ವ್ಯವಹಾರದೊಂದಿಗೆ ನೀವು ಸಂಬಂಧ ಹೊಂದಿದ್ದರೆ, ವ್ಯವಹಾರ ವಿಷಯಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ತಂದೆಯ ಸಲಹೆಯನ್ನು ತೆಗೆದುಕೊಳ್ಳಿ. ಇದರಿಂದ ಒಳ್ಳೆಯದಾಗುತ್ತದೆ. ವಿಶೇಷವಾಗಿ ನಿಮ್ಮ ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ನೀವು ಉದ್ಯೋಗ ಮಾಡುತ್ತಿದ್ದರೆ, ನೀವು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಕಠಿಣ ಕಾರ್ಯಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬದೊಂದಿಗೆ ಮೋಜಿನ ದಿನವಾಗಿರುತ್ತದೆ. ಸಂಜೆ ಮನೆಗೆ ಅತಿಥಿಗಳು ಇದ್ದಕ್ಕಿದ್ದಂತೆ ಆಗಮಿಸಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 31

ಶುಭ ಸಮಯ: ಮಧ್ಯಾಹ್ನ 1 ರಿಂದ 6 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಭಾವನಾತ್ಮಕವಾಗಿ, ಇಂದು ನೀವು ದುರ್ಬಲರಾಗುತ್ತೀರಿ. ಸಣ್ಣ ವಿಷಯಗಳು ನಿಮ್ಮ ಮನಸ್ಸನ್ನು ನೋಯಿಸಬಹುದು. ನೀವು ನಿಮ್ಮನ್ನು ದೃಢವಾಗಿರಿಸಿಕೊಳ್ಳಬೇಕು. ಈ ಸಮಯವು ನಿಮಗೆ ಬಹಳ ಮುಖ್ಯ, ಆದ್ದರಿಂದ ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿರಿ. ನೀವು ಕೆಲಸ ಮಾಡುತ್ತಿದ್ದರೆ ಮತ್ತು ನಿಮ್ಮ ಪ್ರಸ್ತುತ ಕೆಲಸದಲ್ಲಿ ತೃಪ್ತರಾಗದಿದ್ದರೆ, ಮತ್ತೊಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇದು ಸರಿಯಾದ ಸಮಯ. ಅದೇ ಸಮಯದಲ್ಲಿ, ವ್ಯಾಪಾರಿಗಳು ಇಂದು ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ನಿಮ್ಮ ಹಣವು ಎಲ್ಲೋ ದೀರ್ಘಕಾಲದಿಂದ ಸಿಲುಕಿಕೊಂಡಿದ್ದರೆ, ಇಂದು ಅದನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನತೆಗಳನ್ನು ಹೊಂದಿರಬಹುದು. ಅವರು ನಿಮ್ಮ ಮಾತನ್ನು ಒಪ್ಪುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಇಂದು ಮಿಶ್ರ ದಿನ. ನಿರ್ಲಕ್ಷ್ಯವು ನಿಮ್ಮ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 11

ಶುಭ ಸಮಯ: ಬೆಳಗ್ಗೆ 6:45 ರಿಂದ ಮಧ್ಯಾಹ್ನ 2:25

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಆರ್ಥಿಕವಾಗಿ, ನೆಮ್ಮದಿಯ ದಿನ. ನೀವು ಇತ್ತೀಚಿಗೆ ಹಣದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ನೀವು ಸ್ವಲ್ಪ ಪರಿಹಾರವನ್ನು ಪಡೆಯಬಹುದು. ಉದ್ಯೋಗಿಗಳ ವೇತನ ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ. ವ್ಯಾಪಾರಿಗಳು ಸಹ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ವಿರೋಧಿಗಳಿಗೆ ನೀವು ಕಠಿಣ ಸ್ಪರ್ಧೆಯನ್ನು ನೀಡಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಹಿರಿಯರ ಆಶೀರ್ವಾದ ನಿಮಗೆ ಸಿಗುತ್ತದೆ. ನೀವು ಮದುವೆಯಾಗಿದ್ದರೆ, ಇಂದು ನಿಮ್ಮ ಸಂಗಾತಿಯೊಂದಿಗೆ ಬಹಳ ವಿಶೇಷ ದಿನವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರು ಇಂದು ಬಹಳ ರೋಮ್ಯಾಂಟಿಕ್ ಮನಸ್ಥಿತಿಯಲ್ಲಿರುತ್ತಾರೆ. ಆರೋಗ್ಯ ಸಮಸ್ಯೆ ಹೆಚ್ಚಾಗುತ್ತವೆ. ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

ಉತ್ತಮ ಬಣ್ಣ: ಕಡು ಹಳದಿ

ಶುಭ ಸಂಖ್ಯೆ: 14

ಶುಭ ಸಮಯ: ಸಂಜೆ 4:05 ರಿಂದ 9 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ಮ ಶಿಕ್ಷಣದಲ್ಲಿ ಅಡಚಣೆ ಇದ್ದರೆ, ಇಂದು ಸ್ನೇಹಿತರು ಮತ್ತು ಗುರುಗಳ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ನೀವು ಶ್ರದ್ಧೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಇಂದು ನೌಕರಸ್ಥರಿಗೆ ಶುಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸವು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ನಿಮ್ಮ ಬಾಸ್ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ನೀವು ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದರೆ, ಇಂದು ನಿಮ್ಮ ಯೋಜನೆಯನ್ನು ಮುಂದುವರಿಯಬಹುದು. ನಿಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಬಹುದು. ಮನೆಯ ವಾತಾವರಣ ಹರ್ಷಚಿತ್ತದಿಂದ ಕೂಡಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರ ಮೂಲಕ ನೀವು ಆರಾಮದಾಯಕವಾಗಿರುತ್ತೀರಿ. ಪೋಷಕರ ಆಶೀರ್ವಾದ ನಿಮ್ಮಮೇಲಿರುತ್ತದೆ. ಮತ್ತು ಅವರು ನಿಮ್ಮ ಪ್ರತಿಯೊಂದು ನಿರ್ಧಾರವನ್ನು ಬೆಂಬಲಿಸುತ್ತಾರೆ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿದೆ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ

ಕನ್ಯಾ ರಾಶಿ:

ಕನ್ಯಾ ರಾಶಿ:

ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಇಂದು ಕೆಲವು ಹೆಚ್ಚುವರಿ ಕೆಲಸಗಳನ್ನು ವಹಿಸಬಹುದು. ಈ ಸಂದರ್ಭದಲ್ಲಿ, ಕೆಲಸದ ಹೊರೆ ಹೆಚ್ಚಾಗುವುದರಿಂದ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಈ ಸಮಯದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಅದೇ ಸಮಯದಲ್ಲಿ, ವ್ಯಾಪಾರಿಗಳು ತರಾತುರಿಯಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ನೀವು ಚಿಲ್ಲರೆ ವ್ಯಾಪಾರಿ ಆಗಿದ್ದರೆ, ಇಂದು ನೀವು ಉತ್ತಮ ಲಾಭ ಪಡೆಯಬಹುದು. ಇಂದು ಆರ್ಥಿಕವಾಗಿ ಬಹಳ ದುಬಾರಿ ದಿನ. ಇದ್ದಕ್ಕಿದ್ದಂತೆ ಕೆಲವು ದೊಡ್ಡ ಖರ್ಚು ಎದುರಾಗಬಹುದು. ನಿಮ್ಮ ಬಜೆಟ್ ಅನ್ನು ಮೊದಲೇ ನಿರ್ಧರಿಸಿಕೊಳ್ಳಿ. ಮನೆಯ ವಾತಾವರಣ ಶಾಂತವಾಗಿ ಇರುತ್ತದೆ. ಕುಟುಂಬದಲ್ಲಿ ಪ್ರೀತಿ ಮತ್ತು ಐಕ್ಯತೆ ಇರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನಿಮ್ಮ ದೈಹಿಕ ಆಯಾಸ ಇಂದು ಹೆಚ್ಚಾಗುತ್ತದೆ.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 5

ಶುಭ ಸಮಯ: ಮಧ್ಯಾಹ್ನ 1:30 ರಿಂದ 7 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ನೀವು ಹಣದ ದೃಷ್ಟಿಯಿಂದ ಉತ್ತಮ ಫಲವನ್ನು ಪಡೆಯಬಹುದು. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು. ನೀವು ಹಳೆಯ ಸಾಲದಿಂದ ತೊಂದರೆಗೀಡಾಗಿದ್ದರೆ, ಶೀಘ್ರದಲ್ಲೇ ನೀವು ಈ ಸಮಸ್ಯೆಯನ್ನು ಕೂಡ ತೊಡೆದುಹಾಕಬಹುದು. ಮನೆಯ ವಾತಾವರಣದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಹಿರಿಯ ಸಹೋದರ ಅಥವಾ ತಂದೆಯೊಂದಿಗಿನ ನಿಮ್ಮ ಸಂಬಂಧವು ಸರಿಯಾಗಿ ಇಲ್ಲದಿದ್ದರೆ, ಇಂದು ಎಲ್ಲಾ ತಪ್ಪು ಕಲ್ಪನೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿ, ನೀವು ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಸ್ಥರು ಇಂದು ಕೆಲವು ಉತ್ತಮ ಮಾಹಿತಿಯನ್ನು ಪಡೆಯಬಹುದು. ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದರೆ, ಇಂದು ನೀವು ಹೊಸ ವ್ಯವಹಾರ ವಾಣಿಜ್ಯ ಕೊಡುಗೆಯನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಇಂದು ನಿಮಗೆ ಅವಕಾಶ ಸಿಗುವುದಿಲ್ಲ.

ಉತ್ತಮ ಬಣ್ಣ: ಕಡು ಗುಲಾಬಿ

ಶುಭ ಸಂಖ್ಯೆ: 4

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 5:30 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇಂದು ನೀವು ನಿಮ್ಮ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಿ. ಆ ಕೆಲಸವನ್ನು ನಾಳೆಗೆ ಮುಂದೂಡಬೇಡಿ. ಇಂದು ಆರ್ಥಿಕವಾಗಿ ನಿಮಗೆ ವಿಶೇಷ ದಿನವಲ್ಲ. ವೆಚ್ಚಗಳ ಹೆಚ್ಚಳದೊಂದಿಗೆ, ಹಠಾತ್ ಹಣ ನಷ್ಟವಾಗುವ ಸಾಧ್ಯತೆಯಿದೆ, ಆದ್ದರಿಂದ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ, ನಿಮ್ಮ ಸಂಗಾತಿಗೆ ಸ್ವಲ್ಪ ಹೆಚ್ಚು ಸಮಯ ನೀಡಿ, ನೀವಿಬ್ಬರೂ, ಪರಸ್ಪರ ಸಮಯ ಕಳೆಯುವುದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ದೀರ್ಘಕಾಲದ ನಿಮ್ಮ ಯಾವುದೇ ಸಮಸ್ಯೆಗಳಿಗೆ ನೀವು ಇಂದು ಪರಿಹಾರವನ್ನು ಪಡೆಯಬಹುದು, ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಮತ್ತು ಮನೆಯ ಸದಸ್ಯರಲ್ಲಿ ಒಗ್ಗಟ್ಟಿನ ಮತ್ತು ಸಾಮರಸ್ಯದ ಭಾವನೆ ಜಾಗೃತಗೊಳ್ಳುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 38

ಶುಭ ಸಮಯ: ಬೆಳಗ್ಗೆ 8:55 ರಿಂದ ಮಧ್ಯಾಹ್ನ 2:30 ರವರೆಗೆ

 ಧನು ರಾಶಿ:

ಧನು ರಾಶಿ:

ಸೋಮಾರಿತನವನ್ನು ತಪ್ಪಿಸಿ ಮತ್ತು ನಿಮ್ಮನ್ನು ಫ್ರೇಶ್ ಆಗಿಟ್ಟುಕೊಳ್ಳಲು ಪ್ರಯತ್ನಿಸಿ. ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮಾಡುವುದು ಉತ್ತಮ. ಇದಲ್ಲದೆ ಯೋಗ ಮತ್ತು ಧ್ಯಾನವೂ ನಿಮಗೆ ಪ್ರಯೋಜನಕಾರಿಯಾಗಲಿದೆ. ನೀವು ಇಂದು ಪ್ರಯಾಣಿಸಲಿದ್ದರೆ, ಅದನ್ನು ತಪ್ಪಿಸುವುದು ಒಳ್ಳೆಯದು. ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಇಂದು ಉದ್ಯೋಗಿಗಳ ಕೆಲಸದಲ್ಲಿ ಅನೇಕ ಅಡೆತಡೆಗಳು ಉಂಟಾಗಬಹುದು, ಆದರೆ ನೀವು ಚಿಂತಿಸಬೇಕಾಗಿಲ್ಲ. ನೀವು ತಾಳ್ಮೆಯಿಂದಿರಬೇಕು. ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನೀವು ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಗ್ರಾಹಕರೊಂದಿಗೆ ಮಾತುಕತೆ ನಡೆಸಲು ನಿಮ್ಮ ಪದಗಳನ್ನು ಬಳಸಿ, ಇಲ್ಲದಿದ್ದರೆ ನಿಮ್ಮ ಕೆಟ್ಟ ಪದಗಳು ನಿಮ್ಮ ನಷ್ಟಕ್ಕೆ ಕಾರಣವಾಗಬಹುದು.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 29

ಶುಭ ಸಮಯ: ಮಧ್ಯಾಹ್ನ 3 ರಿಂದ 6:30 ರವರೆಗೆ

ಮಕರ ರಾಶಿ:

ಮಕರ ರಾಶಿ:

ನೀವು ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಒಳ್ಳೆಯದು. ಎಲ್ಲರೊಂದಿಗೂ ನ್ಯಾಯಯುತವಾಗಿರಿ ಮತ್ತು ಮುಖಾಮುಖಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಡಿ. ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ, ಇಂದು, ನಿಮ್ಮ ಸಂಗಾತಿಯ ಸಲಹೆಯೊಂದಿಗೆ ಕೆಲಸವನ್ನು ನಿರ್ವಹಿಸಿ. ಹಣದ ಹರಿವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಮನೆಯ ವೆಚ್ಚಗಳು ಸ್ವಲ್ಪ ಹೆಚ್ಚಾಗಬಹುದು. ಸಂಗಾತಿಯ ಮಾತುಗಳನ್ನು ನಿರ್ಲಕ್ಷಿಸಬೇಡಿ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ನೀವು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಮ್ಮ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ.

ಉತ್ತಮ ಬಣ್ಣ: ಕಡು ಹಸಿರು

ಶುಭ ಸಂಖ್ಯೆ: 3

ಶುಭ ಸಮಯ: ಮಧ್ಯಾಹ್ನ 2 ರಿಂದ 4:30 ರವರೆಗೆ

 ಕುಂಭ ರಾಶಿ:

ಕುಂಭ ರಾಶಿ:

ನಿಮ್ಮ ವ್ಯಕ್ತಿತ್ವವನ್ನು ನೀವು ಬದಲಾಯಿಸಿಕೊಳ್ಳಬೇಕು. ನಿಮ್ಮ ಮೊಂಡುತನದ ಸ್ವಭಾವವು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಮಾತನಾಡುವಾಗ ನಿಮ್ಮ ಮಾತುಗಳ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಕಚೇರಿ ಕೆಲಸದಲ್ಲಿ ಅವಸರ ಮಾಡಬೇಡಿ. ಇಲ್ಲದಿದ್ದರೆ ಇಂದು ನಿಮ್ಮ ಕಾರ್ಯಗಳು ಹಾಳಾಗಬಹುದು. ಅಲ್ಲದೆ, ಹಿರಿಯ ಅಧಿಕಾರಿಗಳ ಮಾತನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ಇಂದು ಲಾಭವನ್ನು ಪಡೆಯಬಹುದು ವಿಶೇಷವಾಗಿ ನಿಮ್ಮ ಕೆಲಸವು ಕಬ್ಬಿಣಕ್ಕೆ ಸಂಬಂಧಪಟ್ಟಿದ್ದಾದರೆ, ನೀವು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಮನೆಗೆ ಕೆಲಸದ ಒತ್ತಡವನ್ನು ತರಬೇಡಿ, ಅದು ನಿಮ್ಮ ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಈ ಸಮಯದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವತ್ತ ಗಮನ ಹರಿಸಬೇಕು.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 12

ಒಳ್ಳೆಯ ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 8:45 ರವರೆಗೆ

ಮೀನ ರಾಶಿ:

ಮೀನ ರಾಶಿ:

ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಮೇಲೆ ಹೆಚ್ಚಾಗುತ್ತದೆ. ನಿಮ್ಮ ಬಾಕಿ ಇರುವ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳಬಹುದು. ವ್ಯಾಪಾರಿಗಳಿಗೆ ದಿನವು ತುಂಬಾ ಒಳ್ಳೆಯದು. ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ನಿಮಗೆ ಸಿಗದಿರಬಹುದು. ಇಂದು ನಿಮ್ಮ ಪೋಷಕರು ನಿಮಗೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ಆತಂಕವನ್ನು ನಿವಾರಿಸಬಹುದು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ಯಾವುದೇ ನೋವಿನಿಂದ ನೀವು ತೊಂದರೆಗೊಳಗಾಗುತ್ತೀರಿ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 22

ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1:30 ರವರೆಗೆ

English summary

Dina Bhavishya 24 December 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, December 23, 2020, 16:57 [IST]
X
Desktop Bottom Promotion