Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Horoscope Today 14 Feb 2023: ಗುರುವಾರ : ಸಿಂಹ ರಾಶಿಗೆ ಮಿಶ್ರಫಲ, ಉಳಿದ ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 23ರ ರಾಶಿಫಲ ನೋಡೋಣ:


ಮೇಷ ರಾಶಿ
ಈ ದಿನ ಅದೃಷ್ಟದ ದಿನ. ನಿಮ್ಮ ಯಾವುದೇ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಮೇಲಧಿಕಾರಿಯ ಕಟ್ಟುನಿಟ್ಟಿನ ವರ್ತನೆ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ, ವಿಶೇಷವಾಗಿ ನೀವು ಆಹಾರ ಮತ್ತು ಪಾನೀಯದ ವ್ಯಾಪಾರವನ್ನು ಮಾಡುತ್ತಿದ್ದರೆ ನಿಮ್ಮ ಕೆಲಸದಲ್ಲಿ ಬೆಳವಣಿಗೆ ಸಾಧ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ಅನುಕೂಲಕರವಾಗಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 17
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ

ವೃಷಭ ರಾಶಿ
ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸಬೇಕು. ಈ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ವ್ಯಾಪಾರಸ್ಥರು ಇಂದು ಯಾವುದೇ ಹೊಸ ಕೆಲಸವನ್ನು ಮಾಡದಂತೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ನಷ್ಟವಾಗಬಹುದು. ದುಡಿಯುವ ಜನರಿಗೆ ಇಂದು ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಇದ್ದಕ್ಕಿದ್ದಂತೆ ಕೆಲಸದ ಹೊರೆ ಹೆಚ್ಚಾಗಬಹುದು. ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ಆತುರ ಬೇಡ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ 11 ರವರೆಗೆ

ಮಿಥುನ ರಾಶಿ
ಇಂದು ಉದ್ಯಮಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ಇಂದು ನಿಮ್ಮ ಕೆಲವು ದೊಡ್ಡ ಸಮಸ್ಯೆಗಳನ್ನು ಪರಿಹರಿಸಬಹುದು. ಬಹಳ ಸಮಯದ ನಂತರ, ನೀವು ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ. ಉದ್ಯೋಗಿಗಳು ಬಯಸಿದ ವರ್ಗಾವಣೆಯನ್ನು ಪಡೆಯಬಹುದು. ನೀವು ನಿರುದ್ಯೋಗಿಯಾಗಿದ್ದರೆ ಇಂದು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗಬಹುದು. ನಿಮಗೆ ಉದ್ಯೋಗ ಸಿಗುವ ಸಾಧ್ಯತೆ ತುಂಬಾ ಇದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಿಗ್ಗೆ 6:20 ರಿಂದ 11:20 ರವರೆಗೆ

ಕರ್ಕ ರಾಶಿ
ನೀವು ಕಚೇರಿಯಲ್ಲಿ ದೊಡ್ಡ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ತುಂಬಾ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಒಂದು ಸಣ್ಣ ತಪ್ಪು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಉದ್ಯಮಿಗಳಿಗೆ ಇಂದು ಸವಾಲಿನ ದಿನ. ನಿಮ್ಮ ಕೆಲವು ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಇದಲ್ಲದೆ, ನಿಮಗೆ ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಹೋದರ ಅಥವಾ ಸಹೋದರಿ ಮದುವೆ ಆಗದಿದ್ದರೆ ಅವರಿಗೆ ಒಳ್ಳೆಯ ಮದುವೆಯ ಪ್ರಸ್ತಾಪ ಬರಬಹುದು. ಆರ್ಥಿಕ ರಂಗದಲ್ಲಿ, ದಿನವು ದುಬಾರಿಯಾಗಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಮಧ್ಯಾಹ್ನ 3:35 ರಿಂದ ಸಂಜೆ 7 ರವರೆಗೆ

ಸಿಂಹ ರಾಶಿ
ಈ ದಿನ ನಿಮಗೆ ಮಿಶ್ರಫಲ. ನೀವು ಉದ್ಯಮಿಯಾಗಿದ್ದರೆ ಮತ್ತು ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರವನ್ನು ಮಾಡಲು ಹೊರಟಿದ್ದರೆ, ನಿಮ್ಮ ಹೆಜ್ಜೆಯನ್ನು ಎಚ್ಚರಿಕೆಯಿಂದ ಮುಂದಿಡಲು ಸಲಹೆ ನೀಡಲಾಗಿದೆ. ಆತುರವು ನಿಮಗೆ ಒಳ್ಳೆಯದಲ್ಲ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಆದಾಯವನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯಿದೆ. ಸಂಗಾತಿಯ ಅಸಡ್ಡೆ ವರ್ತನೆ ನಿಮಗೆ ದುಃಖ ತರಬಹುದು. ನಿಮ್ಮ ನಡುವೆ ವೈಮನಸ್ಸು ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ, ದಿನವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8:25 ರವರೆಗೆ

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಅತ್ಯಂತ ಸಂತಸದ ದಿನ. ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ತಪ್ಪನ್ನು ಮಾಡಬೇಡಿ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ

ತುಲಾ ರಾಶಿ
ಇಂದು ನೀವು ಕೆಲಸದ ವಿಷಯದಲ್ಲಿ ಹೆಚ್ಚಿನ ಒತ್ತಡದಲ್ಲಿರುತ್ತೀರಿ. ನೀವು ಹೆಚ್ಚು ಚಿಂತೆ ಮಾಡದಿರುವುದು ಉತ್ತಮ, ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರಿಯಾದ ಸಮಯ ಬಂದಾಗ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಹಣದ ವಿಷಯದಲ್ಲಿ ದಿನವು ಸರಾಸರಿಯಾಗಲಿದೆ. ದಿನದ ಎರಡನೇ ಭಾಗದಲ್ಲಿ ನೀವು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನಿಮ್ಮ ಈ ಪಯಣ ಬಹುಮುಖ್ಯವಾಗಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ 11 ರವರೆಗೆ

ವೃಶ್ಚಿಕ ರಾಶಿ
ಆರ್ಥಿಕ ದೃಷ್ಟಿಯಿಮದ ಇಂದು ಉತ್ತಮ ದಿನ. ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ಹಳೆಯ ಘಟನೆ ಮರೆತು ಹೊಸದನ್ನು ಪ್ರಾರಂಭಿಸುವುದು ಉತ್ತಮ. ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವುದು. ಕೆಲಸದ ವಿಷಯದಲ್ಲಿ ಈ ದಿನವು ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ನಿಮಗೆ ಮಧುಮೇಹ ಸಮಸ್ಯೆ ಇದ್ದರೆ, ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 4:55 ರಿಂದ 8:25 ರವರೆಗೆ

ಧನು ರಾಶಿ
ಕೆಲಸದ ದೃಷ್ಟಿಯಿಂದ ಈ ದಿನ ಚೆನ್ನಾಗಿದೆ. ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಲಿದ್ದರೆ, ಇಂದು ನಿಮ್ಮ ಯೋಜನೆಯಂತೆ ಮುಂದುವರಿಯಬಹುದು. ಶೀಘ್ರದಲ್ಲೇ ನೀವು ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಸ್ಥರ ಸ್ಥಾನವು ಬಲವಾಗಿರುತ್ತದೆ. ಆರ್ಥಿಕ ಭಾಗವು ಬಲವಾಗಿ ಉಳಿಯುತ್ತದೆ. ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಆರೋಗ್ಯ ಉತ್ತಮವಾಗಿರುತ್ತವೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಬೆಳಿಗ್ಗೆ 10:10 ರಿಂದ ಮಧ್ಯಾಹ್ನ 12:55 ರವರೆಗೆ

ಮಕರ ರಾಶಿ
ನಿಮ್ಮ ಸ್ನೇಹಿತರ ಸಲಹೆ ಇಂದು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಉದ್ಯೋಗಿಗಳಿಗೆ ಈ ದಿನವು ಸರಾಸರಿ ಆಗಿರುತ್ತದೆ. ಇಂದು ನಿಮ್ಮ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡದಿರುವುದು ಉತ್ತಮ. ಇಂದು ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ಆದರೂ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಮನೆಯ ಹಿರಿಯರ ಆಶೀರ್ವಾದ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಸಂಜೆ 6 ರಿಂದ 9:15 ರವರೆಗೆ

ಕುಂಭ ರಾಶಿ
ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸುಲಭವಾಗಿ ಕೆಲಸ ಮಾಡುವ ನಿಮ್ಮ ಕಲೆ ಇಂದು ಬಾಸ್ ಅನ್ನು ಬಹಳವಾಗಿ ಮೆಚ್ಚಿಸುತ್ತದೆ. ಶೀಘ್ರದಲ್ಲೇ ನೀವುಉತ್ತಮ ಲಾಭವನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಇಂದು ಪ್ರಗತಿಯ ದಿನ. ನೀವು ಅಪಾರವಾದ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಯಾವುದೇ ಹಳೆಯ ಸಾಲವನ್ನು ತೀರಿಸುವಲ್ಲಿ ಯಶಸ್ವಿಯಾಗುತ್ತೀರಿ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ದುರ್ಬಲವಾಗದಂತೆ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ 10 ರವರೆಗೆ

ಮೀನ ರಾಶಿ
ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ ಮತ್ತು ಇಂದು ನೀವು ನಿಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನವಾಗಲಿದೆ. ಯಾವುದೇ ಪ್ರಮುಖ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಯು ಕೊನೆಗೊಳ್ಳುತ್ತದೆ. ಉದ್ಯೋಗಿಗಳು ಕಚೇರಿಯಲ್ಲಿ ಅನೇಕ ಕಾರ್ಯಗಳನ್ನು ಒಟ್ಟಿಗೆ ನಿರ್ವಹಿಸುವುದನ್ನು ತಪ್ಪಿಸಬೇಕು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಗ್ಗೆ 4 ರಿಂದ ರಾತ್ರಿ 9 ರವರೆಗೆ



Click it and Unblock the Notifications










