Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Horoscope Today 22 Feb 2023: ಬುಧವಾರ : ವೃಷಭ ರಾಶಿಯವರಿಗೆ ಧನ ಲಾಭ, ಉಳಿದ ರಾಶಿಗಳ ರಾಶಿಫಲ ಹೇಗಿದೆ ನೋಡಿ
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 22ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಫಲ್ಗುಣ
ಪಕ್ಷ: ಕೃಷ್ಣಪಕ್ಷ
ತಿಥಿ: ತೃತೀಯಾ
ನಕ್ಷತ್ರ: ಉತ್ತರ ಭಾದ್ರಪದ
ರಾಹುಕಾಲ: ಮಧ್ಯಾಹ್ನ 12:33ರಿಂದ 02:02ರವರೆಗೆ
12 ರಾಶಿ ಚಕ್ರಗಳ ಮೇಲೆ ಗ್ರಹಗತಿಗಳು ಇಂದು ಎಂತಹ ಬದಲಾವಣೆ ತರಲಿದೆ ಗೊತ್ತೇ ಇಲ್ಲಿದೆ ನೋಡಿ ದೈನಂದಿನ ಭವಿಷ್ಯ!

ಮೇಷ ರಾಶಿ;
ಈ ದಿನ ನಿಮ್ಮ ಆತ್ಮವಿಶ್ವಾಸ ಎಂದಿಗಿಂತ ಹೆಚ್ಚಾಗಿರುತ್ತದೆ. ನೀವು ಎಲ್ಲ ವಿಷಯದಲ್ಲಿಯೂ ಧನಾತ್ಮಕವಾಗಿ ಯೋಚನೆ ಮಾಡುವ ಶಕ್ತಿ ಹೊಂದಿರುತ್ತೀರಿ ಉದ್ಯೋಗವಾಗಿರಲಿ ಅಥವಾ ಇತರ ವ್ಯವಹಾರವಾಗಿರಲಿ ನೀವು ನಿಮ್ಮ 100% ಶ್ರಮವನ್ನು ಹಾಕಿ ಕೆಲಸ ಮಾಡುತ್ತೀರಿ ಉದ್ಯೋಗಸ್ಥರಿಗೆ ಪ್ರಗತಿಯ ಹಾದಿ ಕಾಣಿಸುತ್ತದೆ ಆದರೂ ಈ ದಿನ ವ್ಯರ್ಥ ಪ್ರಯಾಣ ಮಾಡಬೇಕಾದೀತು. ಆರ್ಥಿಕವಾಗಿ ಮಿಶ್ರ ಫಲಿತಾಂಶ ಪಡೆಯುತ್ತೀರಿ ಆದಾಯಕ್ಕಿಂತ ಹೆಚ್ಚಿನ ಖರ್ಚು ಬೇಡ ಸಂಗಾತಿಯೊಂದಿಗೆ ಸಂಬಂಧದಲ್ಲಿ ಸಾಮರಸ್ಯ ಪ್ರೀತಿ ಇರುತ್ತದೆ ತಂದೆಯ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಹಾಗೆ ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು.
ಅದೃಷ್ಟದ ಬಣ್ಣ ಕಂದು
ಅದೃಷ್ಟದ ದಿನ 5
ಅದೃಷ್ಟದ ಸಮಯ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7ರವರೆಗೆ.

ವೃಷಭ ರಾಶಿ:
ಈ ರಾಶಿಯವರಿಗೆ ಇಂದು ಹೆಚ್ಚಿನ ಆರ್ಥಿಕ ಲಾಭವಾಗುತ್ತದೆ. ಅದರಲ್ಲೂ ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇನ್ನು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಶುಭ ಸುದ್ದಿ ಸಿಗಬಹುದು. ಸಾಯಂಕಾಲದ ಹೊತ್ತಿಗೆ ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ ಹಣದ ಪರಿಸ್ಥಿತಿ ಸಹಜವಾಗಿರುತ್ತದೆ ಮನೆಯ ವಾತಾವರಣದಲ್ಲಿಯೂ ಸಾಕಷ್ಟು ಸಂತೋಷ ತುಂಬಿರುತ್ತದೆ ನಿಮ್ಮ ಪಾಲಕರಿಂದ ಏನಾದರೂ ಲಾಭ ಆಗಬಹುದು. ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ ತಿಳಿ ಹಸಿರು
ಅದೃಷ್ಟದ ದಿನ 11
ಅದೃಷ್ಟದ ಸಮಯ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 8ರ ವರೆಗೆ

ಮಿಥುನ ರಾಶಿ;
ನೀವು ಈ ದಿನ ಸಂಗಾತಿಯ ಜೊತೆಗೆ ರೋಮ್ಯಾಂಟಿಕ್ ಸಮಯವನ್ನು ಕಳೆಯುತ್ತೀರಿ ಇಂದು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಹಿಂದೆ ನೀವು ಮದುವೆಯ ಪ್ರಸ್ತಾಪವನ್ನು ಕೂಡ ಮಾಡಬಹುದು. ಆರ್ಥಿಕವಾಗಿ ಈ ದಿನ ಸ್ವಲ್ಪ ದುಬಾರಿ ಆಗಲಿದೆ ಹಾಗಾಗಿ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ಕೆಲಸದ ವಿಚಾರಕ್ಕೆ ಬಂದರೆ ದಿನದ ಆರಂಭ ಉತ್ತಮವಾಗಿರುತ್ತದೆ ನಿಮ್ಮ ಶ್ರಮಕ್ಕೆ ತಕ್ಕ ಫಲವು ಸಿಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಮಾಡಿ.
ಅದೃಷ್ಟದ ಬಣ್ಣ- ಕಿತ್ತಳೆ
ಅದೃಷ್ಟದ ದಿನ 8
ಅದೃಷ್ಟದ ಸಮಯ ಬೆಳಗ್ಗೆ 11:45 ರಿಂದ ಸಂಜೆ 6.30 ರವರೆಗೆ

ಕರ್ಕ ರಾಶಿ;
ಈ ದಿನ ನಿಮಗೆ ಹೆಚ್ಚಿನ ಗೌರವ ಮರ್ಯಾದೆ ದೊರೆಯುತ್ತದೆ. ನಿಮ್ಮ ಉತ್ತಮ ಗುಣವನ್ನು ಜನರು ಪ್ರಶಂಸಿಸುತ್ತಾರೆ. ಹಾಗಾಗಿ ಇವತ್ತು ಸಕಾರಾತ್ಮಕವಾಗಿ ಹಾಗೂ ಆತ್ಮವಿಶ್ವಾಸದಿಂದ ಇರುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಆದರೂ ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಉದ್ಯೋಗ ತೊರೆದು ಸ್ವಂತ ವ್ಯಾಪಾರ ಶುರು ಮಾಡಲು ಯೋಚಿಸುತ್ತಿದ್ದರೆ ಶೀಘ್ರದಲ್ಲಿಯೇ ಸರಿಯಾದ ಅವಕಾಶ ಕೂಡಿಬರಲಿದೆ. ಇಂದು ಸಂಗಾತಿಯೊಂದಿಗೆ ಹೊಂದಾಣಿಕೆಯ ದಿನ. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಬೇಡ.
ಅದೃಷ್ಟದ ಬಣ್ಣ -ಆಕಾಶ ನೀಲಿ
ಅದೃಷ್ಟದ ದಿನ -7
ಅದೃಷ್ಟದ ಸಮಯ: ಮಧ್ಯಾಹ್ನ 12:45 ರಿಂದ ಸಂಜೆ 6 ಗಂಟೆಯವರೆಗೆ.

ಸಿಂಹ ರಾಶಿ;
ಇಂದು ನಿಮಗೆ ಮಿಶ್ರಫಲ ಹತ್ತಿರದವರಿಂದಲೇ ಮನಸ್ಸಿನಲ್ಲಿ ಉದ್ವಿಗ್ನತೆ ಉಂಟಾಗಬಹುದು. ಹಾಗಾಗಿ ಮಾನಸಿಕವಾಗಿ ಸ್ವಲ್ಪ ಕಿರಿಕಿರಿ ಎನಿಸುತ್ತದೆ. ಕೆಲಸದ ಸ್ಥಳದಲ್ಲಿಯೂ ಕಿರಿಕಿರಿ ಉಂಟಾಗಬಹುದು ಆದರೆ ಎಲ್ಲಾ ಚಿಂತೆಗಳನ್ನು ಮರೆತು ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನ ಕೊಡಿ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಆದರೆ ಅದೇ ರೀತಿ ವೆಚ್ಚಗಳು ಕೂಡ ಹೆಚ್ಚಾಗಬಹುದು ಆರೋಗ್ಯಕ್ಕೆ ಸಂಬಂಧಿಸಿದಂತೆ ತಲೆನೋವು ಆಯಾಸ ನಿದ್ರಾಹೀನತೆ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಮಾಡಿ.
ಅದೃಷ್ಟ ಬಣ್ಣ- ಗಾಢ ಕೆಂಪು
ಅದೃಷ್ಟ ದಿನ- 23
ಅದೃಷ್ಟ ಸಮಯ ಮಧ್ಯಾಹ್ನ 1:30 ರಿಂದ ರಾತ್ರಿ 8:15 ರವರೆಗೆ

ಕನ್ಯಾ ರಾಶಿ;
ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಇದೀಗ ಉತ್ತಮ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದವರಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು. ಈ ದಿನ ಬಿಡುವಿಲ್ಲದ ಕೆಲಸದ ದಿನ. ಕಚೇರಿಯಲ್ಲಿ ದಿನಕ್ಕಿಂತ ಹೆಚ್ಚಿನ ಕೆಲಸವನ್ನೇ ಮಾಡಬೇಕಾದೀತು. ಉದ್ಯಮಿಗಳು ಉದ್ಯೋಗದ ನಿಮಿತ್ತ ಬೇರೆ ಪ್ರದೇಶಕ್ಕೆ ಪ್ರಯಾಣ ಬೆಳೆಸಬೇಕಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹೆಚ್ಚು ಸಮಯದಿಂದ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಡಿವೈಸ್ ಬಳಸುತ್ತಿದ್ದರೆ ಕಣ್ಣುಗಳ ಬಗ್ಗೆ ಎಚ್ಚರಿಕೆ ಇರಲಿ.
ಅದೃಷ್ಟದ ಬಣ್ಣ -ನೀಲಿ
ಅದೃಷ್ಟದ ದಿನ -2
ಅದೃಷ್ಟದ ಸಮಯ 12:45 ರಿಂದ 6 ಗಂಟೆಯವರೆಗೆ

ತುಲಾ ರಾಶಿ:
ಇಂದು ಅಪೂರ್ಣವಾದ ಯಾವುದೇ ಕಾರ್ಯವು ಕೂಡ ಸಂಪನ್ನವಾಗುತ್ತದೆ. ಜೊತೆಗೆ ಹೊಸ ಕಾರ್ಯಗಳನ್ನು ಕೂಡ ಮಾಡಲು ನೀವು ಹೊಸದಾಗಿ ಯೋಜನೆ ರೂಪಿಸಿಕೊಳ್ಳಬಹುದು. ಕುಟುಂಬದಲ್ಲಿ ಸಂತೋಷ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮಕ್ಕಳ ಓದಿಗೆ ಸಂಬಂಧಿಸಿದ ಹಾಗೆ ಚಿಂತೆ ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಇನ್ನು ಮುಂದೆ ಎಲ್ಲವೂ ಒಳ್ಳೆಯದೇ ಆಗಲಿದೆ. ಹಣದ ವಿಷಯಕ್ಕೆ ಬಂದರೆ ಸ್ವಲ್ಪ ಜಾಗರೂಕರಾಗಿ ಇರುವುದು ಬಹಳ ಒಳ್ಳೆಯದು. ಉಳಿತಾಯದತ್ತ ಹೆಚ್ಚು ಗಮನಹರಿಸಬೇಕು. ಆಗ ಆರ್ಥಿಕ ಸಮಸ್ಯೆಗಳು ಕೂಡ ದೂರ ಆಗುತ್ತವೆ. ಆರೋಗ್ಯ ಸುಧಾರಿಸುತ್ತದೆ ಆದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಡಿ.
ಅದೃಷ್ಟದ ಬಣ್ಣ- ಬಿಳಿ
ಅದೃಷ್ಟದ ದಿನ- 21
ಅದೃಷ್ಟದ ಸಮಯ ಮಧ್ಯಾಹ್ನ 2:15 ರಿಂದ 720 ರವರೆಗೆ

ವೃಶ್ಚಿಕ ರಾಶಿ;
ಉದ್ಯಮಿಗಳಿಗೆ ಇಂದು ಅದೃಷ್ಟದ ಬಾಗಿಲು ತೆರೆಯುತ್ತದೆ. ಅತಿ ಹೆಚ್ಚು ಆರ್ಥಿಕ ಲಾಭವನ್ನು ನೀವು ಇಂದು ನಿರೀಕ್ಷೆ ಮಾಡಬಹುದು. ಅದೇ ರೀತಿಯಾಗಿ ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಇಂದು ಹಣಕಾಸಿನ ವಿಷಯದಲ್ಲಿ ಮಿಶ್ರ ದಿನವಾಗಿದೆ. ಇಂದು ದೊಡ್ಡ ಬಂಡವಾಳ ಹೂಡಿಕೆ ಮಾಡದೆ ಇರುವುದೇ ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ ಆರೋಗ್ಯದ ವಿಷಯದಲ್ಲಿ ಇಂದು ಮಿಶ್ರಫಲ.
ಅದೃಷ್ಟದ ಬಣ್ಣ -ಹಳದಿ
ಅದೃಷ್ಟದ ದಿನ -30
ಆದಷ್ಟು ಸಮಯ ಬೆಳಿಗ್ಗೆ ಸಂಜೆ 5:30ರ ವರೆಗೆ

ಧನು ರಾಶಿ:
ಇಂದು ಸಂಗಾತಿಯ ವಿರಹ ಕಾಡಬಹುದು. ಇನ್ನು ಪ್ರೀತಿ ಪಾತ್ರರ ಅನುಚಿತ ವರ್ತನೆ ನಿಮಗೆ ನೋವನ್ನುಂಟುಮಾಡಬಹುದು ಆದರೂ ತಾಳ್ಮೆಯಿಂದ ಇರುವುದು ಒಳ್ಳೆಯದು. ಕಚೇರಿಯಲ್ಲಿ ಸಹೋದ್ಯೋಗಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಹಾಗೇನಾದರೂ ರೂಡಿಸಿಕೊಂಡಿದ್ದರೆ ನಿಮಗೆ ಕೆಲಸ ಮಾಡುವ ಸ್ಥಳದಲ್ಲಿ ತೊಂದರೆ ಆಗಬಹುದು. ವ್ಯಾಪಾರಿಗಳಿಗೆ ಇಂದು ಮಿಶ್ರಫಲ. ಹಣದ ವಿಷಯದಲ್ಲಿ ದಿನ ಹೊಸ ಉತ್ತಮವಾಗಿರುತ್ತದೆ. ಯಾವುದೇ ಕೆಲಸಕ್ಕೂ ಪೂರ್ಣ ಪ್ರಮಾಣದ ಶ್ರಮವನ್ನ ಹಾಕಿ. ಇಂದು ಆಲಸ್ಯ ಹಾಗೂ ಸೋಮಾರಿತನ ನಿಮ್ಮನ್ನು ಕಾಡಬಹುದು.
ಅದೃಷ್ಟದ ಬಣ್ಣ -ಹಸಿರು
ಅದೃಷ್ಟದ ದಿನ 19
ಅದೃಷ್ಟದ ಸಮಯ ಸಂಜೆ 7ರಿಂದ 8: 20ರವರೆಗೆ.

ಮಕರ ರಾಶಿ:
ದಿನದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ತುಸು ಒತ್ತಡ ಇರಬಹುದು. ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯ ವೈಖರಿಯಿಂದ ಸ್ವಲ್ಪ ಅತೃಪ್ತರಾದಂತೆ ಕಾಣಿಸಬಹುದು. ನೀವು ಮಾಡಿದ ಕೆಲಸಗಳಲ್ಲಿ ತಪ್ಪನ್ನು ಹುಡುಕಬಹುದು. ಇದರಿಂದ ಆತ್ಮವಿಶ್ವಾಸ ಕುಸಿಯುವ ಸಾಧ್ಯತೆ ಇದೆ. ಉದ್ಯಮಿಗಳು ಆರ್ಥಿಕವಾಗಿ ನಷ್ಟ ಅನುಭವಿಸಬೇಕಾದೀತು. ಮಕ್ಕಳ ಹಠಮಾರಿತನ ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಮಕ್ಕಳಿಗೆ ಪ್ರೀತಿಯಿಂದ ವಿವರಿಸಿದರೆ ನಿಮ್ಮ ಮಾತನ್ನ ಅವರು ಕೇಳುತ್ತಾರೆ ಆರ್ಥಿಕವಾಗಿ ಇಂದು ಮಿಶ್ರ ಫಲ ಆರೋಗ್ಯ ಸ್ವಲ್ಪ ದುರ್ಬಲವಾಗಿರುವಂತೆ ಕಾಣಿಸುತ್ತದೆ.
ಅದೃಷ್ಟದ ಬಣ್ಣ -ಹಳದಿ
ಅದೃಷ್ಟದ ದಿನ -6
ಅದೃಷ್ಟದ ಸಮಯ ಮಧ್ಯಾಹ್ನ 12:30 ರಿಂದ ರಾತ್ರಿ 8:15 ರವರೆಗೆ.

ಕುಂಭ ರಾಶಿ;
ಉದ್ಯಮಿಗಳು ದೀರ್ಘಕಾಲದವರೆಗೆ ಒಂದು ಕೆಲಸವನ್ನು ಮುಗಿಸಲು ಕಷ್ಟಪಡುತ್ತಿದ್ದರೆ ಇಂದು ಆ ಚಿಂತೆ ದೂರವಾಗುತ್ತದೆ ಜೊತೆಗೆ ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ. ಉದ್ಯೋಗಸ್ಥರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಇಂದು ಸದಾ ಅವಕಾಶ ಸಿಗಲಿದೆ. ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ದೊಡ್ಡ ಲಾಭಗಳಿಸುತ್ತೀರಿ. ಸಂಗಾತಿಯ ರೋಮ್ಯಾಂಟಿಕ್ ಮೂಡ್ ನಿಮ್ಮಲ್ಲಿ ಆಹ್ಲಾದಕರ ಅನುಭವ ಉಂಟು ಮಾಡಬಹುದು. ಇಂದು ನಿಮ್ಮ ಇಷ್ಟದವರ ಜೊತೆಗೆ ಶಾಪಿಂಗ್ ಕೂಡ ಮಾಡಲಿದ್ದೀರಿ ಆರೋಗ್ಯದ ದೃಷ್ಟಿಯಿಂದಲೂ ಇಂದು ದಿನ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ- ಗುಲಾಬಿ
ಅದೃಷ್ಟದ ದಿನ -18
ಅದೃಷ್ಟದ ಸಮಯ ಬೆಳಿಗ್ಗೆ ನಾಲ್ಕು 15ರಿಂದ ಮಧ್ಯಾಹ್ನ 12:45 ರವರೆಗೆ.

ಮೀನ ರಾಶಿ:
ಇಂದು ನಿಮಗೆ ಮಿಶ್ರಫಲ ಆರ್ಥಿಕವಾಗಿ ದಿನ ಅಷ್ಟು ಚೆನ್ನಾಗಿಲ್ಲ ಹಣ ನಷ್ಟವಾಗುವ ಸಾಧ್ಯತೆ ಇದೆ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ. ಕಚೇರಿಯಲ್ಲಿ ಬಾಸ್ ಎದುರು ನಿಮ್ಮ ವರ್ತನೆ ಸರಿಯಾಗಿರಲಿ. ನೀವು ಮಾಡುವ ಒಂದು ಸಣ್ಣ ತಪ್ಪು ಕೂಡ ನಿಮಗೆ ತೊಂದರೆ ಉಂಟುಮಾಡಬಹುದು. ಉದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ದೊಡ್ಡ ಕೆಲಸದ ಆರ್ಡರ್ ಸಿಗಬಹುದು. ಸಂಗಾತಿಯೊಂದಿಗೆ ಸ್ವಲ್ಪ ಕಿರಿಕಿರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಶಾಂತವಾಗಿದ್ದರೆ ಎಲ್ಲವೂ ಸರಿ ಹೋಗುತ್ತದೆ. ಆರ್ಥಿಕವಾಗಿ ಇಂದು ಉತ್ತಮವಾದ ದಿನ. ದೇಹದ ಯಾವುದಾದರೂ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ.
ಅದೃಷ್ಟದ ಬಣ್ಣ -ಬಳಿ
ಅದೃಷ್ಟದ ದಿನ -4
ಅದೃಷ್ಟದ ಸಮಯ ಮಧ್ಯಾಹ್ನ 1:20 ರಿಂದ 4 ಗಂಟೆವರೆಗೆ.



Click it and Unblock the Notifications











