ಸೋಮವಾರದ ದಿನ ಭವಿಷ್ಯ: ಮೇಷ ರಾಶಿಯವರೇ ಈ ದಿನ ಸ್ವಲ್ಪ ಜಾಗ್ರತೆ

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

 rashi bhavishya

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ಕೃತಿಕಾ
ಪಕ್ಷ: ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ 07:30 ರಿಂದ 08:58ರವರೆಗೆ
ಗುಳಿಕಕಾಲ: ಮಧ್ಯಾಹ್ನ01:20 ರಿಂದ 02:47ರವರೆಗೆ
ಯಮಗಂಡಕಾಲ: ಬೆಳಗ್ಗೆ10:25 ರಿಂದ11:52ರವರೆಗೆ
ದುರ್ಮುಹೂರ್ತ: ಮಧ್ಯಾಹ್ನ 12:16 ರಿಂದ01:02ರವರೆಗೆ
ಮಧ್ಯಾಹ್ನ2:35ರಿಂದ 3:22ರವರೆಗೆ
ಸೂರ್ಯೋದಯ: ಬೆಳಗ್ಗೆ 06:03ಕ್ಕೆ
ಸೂರ್ಯಾಸ್ತ: ಸಂಜೆ 05:42ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಈ ದಿನ ನೀವು ತುಂಬಾ ಜಾಗರೂಕರಾಗಿರಲು ಸೂಚಿಸಲಾಗಿದೆ. ಘರ್ಷಣೆಗಳು ಮತ್ತು ಜಗಳಗಳಿಂದ ದೂರವಿರಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ನೀವು ಕಾನೂನು ವಿಷಯದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ. ಹಣವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಮನೆಯ ಸೌಕರ್ಯಗಳಿಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ಕೆಲಸದ ಬಗ್ಗೆ ಹೇಳುವುದಾದರೆ ಮೇಲಾಧಿಕಾರಿಯವರಿಂದ ಕಚೇರಿಯಲ್ಲಿ ಸಂಪೂರ್ಣ ಬೆಂಬಲ ಸಿಗಲಿದೆ. ಅವರು ನೀಡುವ ಸಲಹೆಯನ್ನು ಪರಿಗಣಿಸುವುದು ಒಳ್ಳೆಯದು.

ವ್ಯವಹಾರ ವಿಷಯಗಳಲ್ಲಿ ನಿಮಗೆ ಸ್ವಲ್ಪ ತೊಂದರೆ ಇರಬಹುದು ಆದರೆ ನಿಮ್ಮ ಸಮಸ್ಯೆ ತ್ವರಿತವಾಗಿ ಪರಿಹರಿಸಲ್ಪಡುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಸ್ಥಳ ಬದಲಾವಣೆಯಶದರೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 8

ಶುಭ ಸಮಯ: ಮಧ್ಯಾಹ್ನ 12:55 ರಿಂದ 7 ಗಂಟೆ

ವೃಷಭ ರಾಶಿ

ವೃಷಭ ರಾಶಿ

ಹಣದ ವಿಷಯದಲ್ಲಿ ಇಂದು ನಿಮಗೆ ಅನುಕೂಲಕರವಾಗಿದೆ. ನೀವು ಆಸ್ತಿ ಮಾರಾಟದ ಪ್ರಯತ್ನ ಮಾಡುತ್ತಿದ್ದರೆ ಇಂದು ಯಶಸ್ಸನ್ನು ಪಡೆಯಬಹುದು. ಕೆಲಸದ ಬಗ್ಗೆ ಹೇಳುವುದಾದರೆ ಸವಾಲಿನ ಕೆಲಸವನ್ನು ಕೂಡ ಪೂರ್ಣಗೊಳಿಸುವಿರಿ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಮನೆಯ ವಾತಾವರಣ ಕೂಡ ಆಹ್ಲಾದಕರವಾಗಿರುತ್ತದೆ.

ನಿಮ್ಮ ಸಕಾರಾತ್ಮಕತೆ ಚಿಂತನೆಯು ಇಂದು ನಿಮ್ಮ ಸುತ್ತಮುತ್ತಲಿನ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಸಾಮಾನ್ಯವಾಗಿರಲಿದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 19

ಒಳ್ಳೆಯ ಸಮಯ: ಸಂಜೆ 6 ರಿಂದ 10 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಹೊರಗಿನವರು ಹೆಚ್ಚು ಹಸ್ತಕ್ಷೇಪ ಮಾಡಲು ಬಿಡಬೇಡಿ, ಇಲ್ಲದಿದ್ದರೆ ನಿಮ್ಮ ನಡುವೆ ತಪ್ಪು ತಿಳುವಳಿಕೆ ಬೆಳೆಯಬಹುದು. ನೀವು ಇಂದು ಸ್ವಲ್ಪ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಚಿಂತೆ ಮಾಡಿ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಪ್ರಮುಖ ಕಾರ್ಯಗಳತ್ತ ಗಮನ ಹರಿಸಬೇಕು. ಕಚೇರಿಯಲ್ಲಿ ಎಚ್ಚರದಿಂದ ಕೆಲಸ ಮಾಡದಿದ್ದರೆ ಬಾಸ್ ಕೋಪಗೊಳ್ಳಬಹುದು.

ಇನ್ನು ನೀವು ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ ಇಂದು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಈ ಪ್ರಯಾಣದಿಂದ ಹೆಚ್ಚೇನು ಲಾಭವಿಲ್ಲ, ಆದರೂ ಚಿಂತಿಸಬೇಕಾಗಿಲ್ಲ, ಏಕೆಂದರೆ ನಿಮ್ಮ ಸಮಸ್ಯೆ ತಾತ್ಕಾಲಿಕವಾದದ್ದು. ನಿಮ್ಮ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರವಾಗುವುದು, ಆರ್ಥಿಕ ಸ್ಥಿತಿ ಚೆನ್ನಾಗಿ ಇರುತ್ತದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 34

ಒಳ್ಳೆಯ ಸಮಯ: ಸಂಜೆ 4:40 ರಿಂದ 9 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಇಂದು ನೀವು ತುಂಬಾ ಉತ್ಸುಕರಾಗುತ್ತೀರಿ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ಸ್ನೇಹಿತರ ಸಹಾಯದಿಂದ ನೀವು ಮಾಡ ಬಯಸಿದ ಕಾರ್ಯದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಕೆಲಸ ಮಾಡುತ್ತಿದ್ದರೆ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಮತ್ತೊಂದೆಡೆ ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ಅತೃಪ್ತಿ ಇದ್ದು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಸುದ್ದಿ ನಿಮಗೆ ಕಾದಿದೆ.

ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ದಿನವು ಪ್ರಯೋಜನಕಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿರುತ್ತದೆ. ಆಸ್ತಿ ವಿವಾದ ಬರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ವಿಪರೀತ ಕೆಲಸದ ಒತ್ತಡದಿಂದಾಗಿ ನಿಮ್ಮ ಆಯಾಸ ಹೆಚ್ಚಾಗುತ್ತದೆ.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 15

ಒಳ್ಳೆಯ ಸಮಯ: ಮಧ್ಯಾಹ್ನ 3 ರಿಂದ 10 ರವರೆಗೆ

ಸಿಂಹರಾಶಿ

ಸಿಂಹರಾಶಿ

ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳು ಪ್ರಮುಖವಾಗಲಿದೆ. ಭವಿಷ್ಯದ ಹೂಡಿಕೆಗಳಿಗಾಗಿ ನೀವು ಯೋಜನೆಗಳನ್ನು ಮಾಡಿದರೆ ಒಳ್ಳೆಯದು. ಕಚೇರಿಯಲ್ಲಿ ನೀವು ತುಂಬಾ ಸಮತೋಲಿತವಾಗಿ ವರ್ತಿಸುವಂತೆ ಸೂಚಿಸಲಾಗಿದೆ. ಕೋಪಗೊಂಡು ತಪ್ಪು ಪದಗಳನ್ನು ಬಳಸುವುದನ್ನು ತಪ್ಪಿಸಿ. ಮತ್ತೊಂದೆಡೆ ಇಂದು ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ತಂದೆಗೆ ಸ್ವಲ್ಪ ದಿನದಿಂದ ಆರೋಗ್ಯ ಸಮಸ್ಯೆಯಿದ್ದರೆ ಇಂದು ಆ ಚಿಂತೆ ಸ್ವಲ್ಪ ಕಡಿಮೆಯಾಗಲಿದೆ. ಕೌಟಂಬಿಕ ಜೀವನದಲ್ಲಿ ಖುಷಿ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 12

ಶುಭ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ದಿನದ ಆರಂಭ ಖುಷಿಯ ಸುದ್ದಿ ಕೇಳುವುದರೊಂದಿಗೆ ಪ್ರಾರಂಭವಾಗಲಿದೆ. ಕುಟುಂಬ ಸದಸ್ಯರ ನಡುವೆ ಇದ್ದ ವೈಮನಸ್ಸು ಇಂದು ಸರಿ ಹೋಗಬಹುದು. ಇಂದು ಖರ್ಚು ಸ್ವಲ್ಪ ಅಧಿಕವಾಗುವುದು. ಇದ್ದಕ್ಕಿದ್ದಂತೆ ಒಂದು ದೊಡ್ಡ ಖರ್ಚು ಬರಬಹುದು ಇದರಿಂದ ಬಜೆಟ್ ಪ್ಲ್ಯಾನ್‌ನಲ್ಲಿ ಅಸಮತೋಲನ ಉಂಟಾಗುವುದು. ಹಣಕಾಸಿನ ವಿಷಯಗಳಲ್ಲಿ, ನೀವು ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಮತ್ತು ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಬಗ್ಗೆ ಹೇಳುವುದಾದರೆ ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ. ಮತ್ತೊಂದೆಡೆ, ನೀವು ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸಮಯವು ಅದಕ್ಕೆ ಅನುಕೂಲಕರವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 26

ಶುಭ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

 ತುಲಾ ರಾಶಿ

ತುಲಾ ರಾಶಿ

ಕೆಲಸದಲ್ಲಿ ಇಂದು ಸ್ವಲ್ಪ ಒತ್ತಡವನ್ನು ಎದುರಿಸುತ್ತೀರಿ. ಚಿಕ್ಕ ತಪ್ಪು ಕೂಡ ದೊಡ್ಡ ವಿಷಯವಾಗಿ ಬೆಳೆಯಬಹುದು, ಆದ್ದರಿಂದ ಎಚ್ಚರದಿಂದ ಇರಿ. ಇನ್ನು ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರವಾಗಿರಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ.ಆರೋಗ್ಯದ ಬಗ್ಗೆ ಹೇಳುವುದಾದರೆ ಸಣ್ಣ ಪುಟ್ಟ ಸಮಸ್ಯೆ ಕಾಡಬಹುದು.

ಅದೃಷ್ಟದ ಬಣ್ಣ: ಗಾಢ ಕೆಂಪು

ಅದೃಷ್ಟದ ಸಂಖ್ಯೆ: 19

ಶುಭ ಸಮಯ: ಬೆಳಿಗ್ಗೆ 7 ರಿಂದ ಸಂಜೆ 6: 30 ರವರೆಗೆ

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಸಕಾರಾತ್ಮಕ ಚಿಂತನೆಯಿಂದಲೇ ನಿಮಗೆ ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸದ ಬಗ್ಗೆ ನೋಡುವುದಾದರೆ, ಇದ್ದಕ್ಕಿದ್ದಂತೆ ಕಚೇರಿಯಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಬಹುದು. ಹೆಚ್ಚು ಚಿಂತಿಸಬೇಡಿ ಮತ್ತು ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ವ್ಯಾಪಾರಿಗಳು ಇಂದು ಹೆಚ್ಚಿನ ಲಾಭವನ್ನು ಕಾಣಬಹುದು.

ಕೋಪ, ಅಹಂಗಿಂತ ಪ್ರೀತಿ ಗೆಲ್ಲುತ್ತೆ ಎಂಬುವುದು ಮರೆಯದಿರಿ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.ಅನಗ್ಯತ ಖರ್ಚು ಮಾಡುವುದನ್ನು ತಪ್ಪಿಸಿ. ಮಾನಸಿಕ ಒತ್ತಡಕ್ಕೆ ಒಳಗಾಗುವುದನ್ನು ನಿಯಂತ್ರಿಸಿ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಡುವುದು.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 8

ಒಳ್ಳೆಯ ಸಮಯ: ಸಂಜೆ 5 ರಿಂದ 10:20

ಧನು ರಾಶಿ

ಧನು ರಾಶಿ

ಇಂದು ನೀವು ಸ್ವಲ್ಪ ಆಲಸ್ಯ ಮತ್ತು ಸೋಮಾರಿತನ ತೋರುವಿರಿ. ಇದರಿಂದಾಗಿ ಕೆಲಸದಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಮೇಲಾಧಿಕಾರಿ ನಿಮ್ಮನ್ನು ಗಮನಿಸುತ್ತಿರುತ್ತಾರೆ ಎಂಬುವುದನ್ನು ಮರೆಯದಿರಿ. ಆರ್ಥಿಕ ಸ್ಥಿತಿ ಏರಳಿತದಿಂದ ಕೂಡಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯವು, ಕೌಟಂಬಿಕ ವಾತಾವರಣ ಸಂತೋಷವನ್ನು ಹೆಚ್ಚಿಸುತ್ತದೆ. ನಿಮ್ಮ ಮಗುವಿಗೆ ಸಂಬಂಧಿಸಿದ ಯಾವುದೇ ಆತಂಕವಿದ್ದರೆ ಅದನ್ನುತೊಡೆದುಹಾಕಬಹುದು.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 28

ಒಳ್ಳೆಯ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 3:05

ಮಕರ ರಾಶಿ

ಮಕರ ರಾಶಿ

ಇಂದು ಕಚೇರಿ ಕೆಲಸದಲ್ಲಿ ಕೆಲವು ಅಡೆತಡೆಗಳು ಇರಬಹುದು. ಕೆಲವು ತಾಂತ್ರಿಕ ದೋಷದಿಂದಾಗಿ ನೀವು ತುಂಬಾ ಅಸಮಾಧಾನಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ನಿಮ್ಮ ಸಮಸ್ಯೆ ತಾತ್ಕಾಲಿಕ, ಆದ್ದರಿಂದ ತಾಳ್ಮೆಯಿಂದ ಕೆಲಸ ಮಾಡಿ. ಮತ್ತೊಂದೆಡೆ, ನಿಮ್ಮ ಬಾಸ್ ಮುಂದೆ ಸರಿಯಾಗಿ ವರ್ತಿಸುವಂತೆ ನಿಮಗೆ ಸೂಚಿಸಲಾಗುತ್ತದೆ. ತಕ್ಷಣ ಕೋಪಗೊಳ್ಳಬೇಡಿ. ಹಣಕಾಸಿನ ವಿಷಯಗಳಲ್ಲಿ ಉದ್ಯಮಿಗಳು ತಮ್ಮ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ಮಾಡಬೇಕಾಗುತ್ತದೆ. ಆರ್ಥಿಕ ರಂಗದಲ್ಲಿ ಇಂದು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡುತ್ತೀರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ದುರ್ಬಲರಾಗಿರುತ್ತೀರಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 21

ಒಳ್ಳೆಯ ಸಮಯ: ಬೆಳಿಗ್ಗೆ 8:45 ರಿಂದ ಮಧ್ಯಾಹ್ನ 2:30 ರವರೆಗೆ

 ಕುಂಭ ರಾಶಿ

ಕುಂಭ ರಾಶಿ

ಇಂದು ನಿಮ್ಮ ಅದೃಷ್ಟ ನಿಮ್ಮ ಕಡೆಗಿದೆ. ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ. ನಿಮ್ಮ ಪ್ರೇಮಿಯ ಜೊತೆ ಸಂತೋಷವಾಗಿರುತ್ತೀರಿ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನಿಮ್ಮ ಬಾಕಿ ಇರುವ ಯಾವುದೇ ಬಿಲ್‌ಗಳನ್ನು ನೀವು ಪಾವತಿಸಬಹುದು. ಆರೋಗ್ಯ ಚೆನ್ನಾಗಿರುತ್ತದೆ. ಇಂದು ಹೆಚ್ಚೇನು ಒತ್ತಡವಿಲ್ಲದೆ ಆರಾಮವಾಗಿ ಸಮಯವನ್ನು ಕಳೆಯುವಿರಿ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 15

ಒಳ್ಳೆಯ ಸಮಯ: ಸಂಜೆ 6 ರಿಂದ 10:05

ಮೀನ ರಾಶಿ

ಮೀನ ರಾಶಿ

ಕೌಟಂಬಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಇಂದು ಅವೆಲ್ಲಾ ದೂರವಾಗುವುದು, ಸಂಗಾತಿಗೆ ನಿಮ್ಮ ಮೇಲಿರುವ ಮುನಿಸು ದೂರವಾಗುವುದು. ಕಚೇರಿಯಲ್ಲಿ ಕೆಲಸದಲ್ಲಿ ಸಂಪೂರ್ಣದಲ್ಲಿ ತೊಡಗಿಕೊಳ್ಳುವುದಿಂದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ವ್ಯಾಪಾರಿಗಳಿಗೆ ಈ ದಿನ ಸಾಮಾನ್ಯವಾಗಿರಲಿದೆ. ಯಾವುದೇ ಹಣಕಾಸಿನ ವಿಷಯಗಳಲ್ಲಿ ಆತುರಪಡಬೇಡಿ. ಇಂದು ಸಾಲ ಕೇಳುವುದು ಅಥವಾ ಕೊಡುವುದನ್ನು ತಪ್ಪಿಸಿ. ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 9

ಶುಭ ಸಮಯ: ಬೆಳಿಗ್ಗೆ 4:15 ರಿಂದ ಮಧ್ಯಾಹ್ನ 12 ರವರೆಗೆ

English summary

Dina Bhavishya 2 November 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Monday, November 2, 2020, 5:34 [IST]
X
Desktop Bottom Promotion