ಸೋಮವಾರದ ದಿನ ಭವಿಷ್ಯ: ಕನ್ಯಾರಾಶಿಯವರೇ ಆರ್ಥಿಕ ದೃಷ್ಟಿಯಿಂದ ಈ ದಿನ ಸುರಕ್ಷಿತ

ಸೋಮವಾರ ವಾರದ ಪ್ರಾರಂಭದ ದಿನ. ವೀಕೆಂಡ್‌ನ ಮೂಡ್‌ನಿಂದ ನಿಧಾನವಾಗಿ ನಮ್ಮ ಕೆಲಸ, ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತೇವೆ. ನಿಮ್ಮ ದಿನದ ಮೇಲೆ ರಾಶಿಯ ಪ್ರಭಾವು ಬಲವಾಗಿರುತ್ತದೆ. ರಾಶಿಫಲ ಪ್ರಕಾರ ಈ ದಿನ ಹೇಗಿದೆ ಎಂದು ನೋಡೋಣ:

Dina Bhavishya

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 9.05 ರಿಂದ 10.39 ರವರೆಗೆ
ಗುಳಿಕಕಾಲ: ಬೆಳಿಗ್ಗೆ 5.57 ರಿಂದ 7.31 ರವರೆಗೆ
ಯಮಗಂಡಕಾಲ: ಮಧ್ಯಾಹ್ನ 1.47 ರಿಂದ 3.21 ರವರೆಗೆ
ದುರ್ಮುಹೂರ್ತ: ಬೆಳಿಗ್ಗೆ 5.57 ರಿಂದ 7.37 ರವರೆಗೆ
ಸೂರ್ಯೋದಯ: ಬೆಳಿಗ್ಗೆ 5.57
ಸೂರ್ಯಾಸ್ತ: ಸಂಜೆ 6.29

 ಮೇಷ:

ಮೇಷ:

ಈ ದಿನ ನಿಮಗೆ ಶುಭಕರವಾಗಿದೆ. ನೌಕರಿ ಜಾಗದಲ್ಲಿ ಬಡ್ತಿ ಕುರಿತ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಅಲ್ಲದೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಇನ್ನು ನೀವು ವ್ಯಾಪಾರಿಯಾಗಿದ್ದರೆ ಈ ದಿನ ವ್ಯವಹಾರಕ್ಕೆ ಉತ್ತಮವಾಗಿದೆ. ಕುಟುಂಬದಲ್ಲಿ ಚಿಕ್ಕ ಪುಟ್ಟ ಸಮಸ್ಯೆ ಕಂಡು ಬಂದರೂ ಅದನ್ನು ನಿವಾರಿಸಲು ಪ್ರಯತ್ನಿಸಿದರೆ ಈ ದಿನ ಖುಷಿಯಿಂದ ಕಳೆಯಬಹುದು. ಹಳೆಯ ಮಧುರ ನೆನಪನ್ನು ಸಂಗಾತಿ ಜೊತೆ ನೆನಪಿಸಿಕೊಳ್ಳುವಿರಿ. ಈ ದಿನ ನೀವು ಯಾವುದೇ ವಿಷಯಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗ್ಯತವಿಲ್ಲ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 12

ಶುಭ ಸಮಯ: ಸಂಜೆ 5:20ರಿಂದ ರಾತ್ರಿ 9:30ರವರೆಗೆ

ವೃಷಭ

ವೃಷಭ

ಈ ದಿನ ಕೆಲಸದ ಜಾಗದಲ್ಲಿ ಸ್ವಲ್ಪ ಸವಾಲುಗಳು ಎದುರಾಗಬಹುದು ಆದರೆ ನೀವು ಶಾಂಗತರಾಗಿರಿ, ಆರಾಮವಾಗಿ ನಿಮ್ಮ ಕೆಲಸ ಕಾರ್ಯದಲ್ಲಿ ಮಗ್ನರಾಗಲು ಪ್ರಯತ್ನಿಸಿ. ಬೇರೆಯವರು ಅನಗ್ಯತವಾಗಿ ನಿಮ್ಮ ಜೊತೆ ವಾದಕ್ಕೆ ಬರಬಹುದು, ನಿಮ್ಮ ಸಹೋದರಿ ಅಥವಾ ಸಹೋದರನಿಗೆ ಕಷ್ಟ ಬರಬಹುದು, ಪರಿಸ್ಥಿತಿಯನ್ನು ಶಾಂತ ರೀತಿಯಲ್ಲಿ ನಿಭಾಯಿಸಿ. ಯಾರ ಜೊತೆ ಚರ್ಚೆ, ವಿವಾದ ಬೆಳೆಸಲು ಹೋಗದಿರಿ, ಇನ್ನು ಹೊತ್ತಿಗೆ ಸರಿಯಾಗಿ ಆಹಾರ ಸೇವಿಸದ ಕಾರಣ ಆರೋಗ್ಯದಲ್ಲೂ ಸ್ವಲ್ಪ ಏರುಪೇರು ಉಂಟಾಗುವುದು. ಒಟ್ಟಿನಲ್ಲಿ ನೀವು ಜಾಗರೂಕತೆಯಿಂದ ಇರಿ.

ಅದೃಷ್ಟದ ಬಣ್ಣ: ಮೆರೂನ್

ಅದೃಷ್ಟದ ಸಂಖ್ಯೆ: 11

ಶುಭ ಸಮಯ: ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ

ಮಿಥುನ:

ಮಿಥುನ:

ಇವತ್ತು ವ್ಯಾಪಾರಿಗಳಿಗೆ ಶುಭದಿನವಾಗಿದೆ, ಆದರೆ ಯಾವುದಾದರೂ ವ್ಯವಹಾರದಲ್ಲಿ ಹಣ ವಿನಿಯೋಗಿಸುವುದಾದರೆ ಸರಿಯಾಗಿ ಯೋಚಿಸಿ ಹೂಡಿಕೆ ಮಾಡಿ. ಆರ್ಥಿಕ ಸಂಕಟದಿಂದ ಹೊರಬರಲು ನೀವು ಮಹತ್ವಪೂರ್ಣವಾದ ನಿರ್ಣಯ ಕೈಗೊಳ್ಳಬೇಕಾಗಿದೆ ತುಂಬಾ ಸಮಯದ ಬಳಿಕ ಜೀವನ ಸಂಗಾತಿಯೊಂದಿಗೆ ಖುಷಿಯಾಗಿ ಸಮಯ ಕಳೆಯುವಿರಿ. ಸರಕಾರಿ ವೃತ್ತಿಯಲ್ಲಿರುವವರಿಗೆ ಇಂದು ಶುಭದಿನವಾಗಿದೆ, ಇನ್ನು ಇತರರಿಗೆ ಸಾಧರಣ ದಿನವಾಗಿರಲಿದೆ.

ಅದೃಷ್ಟದ ಬಣ್ಣ: ಕ್ರೀಮ್

ಅದೃಷ್ಟದ ಸಂಖ್ಯೆ: 15

ಶುಭ ಸಮಯ: ಬೆಳಗ್ಗೆ 10:10ರಿಂದ ಮಧ್ಯಾಹ್ನ 3.15ರವರೆಗೆ

 ಕರ್ಕ

ಕರ್ಕ

ಈ ದಿನ ನೀವು ಬಯಸಿದಂಥ ಫಲ ಸಿಗಲಿಲ್ಲವೆಂದು ನಿರಾಸೆ ಪಡುವ ಅಗ್ಯತವಿಲ್ಲ, ಏಕೆಂದರೆ ನಿಮ್ಮ ಶ್ರಮಕ್ಕೆ ಫಲ ಶೀಘ್ರದಲ್ಲಿಯೇ ದೊರೆಯಲಿದೆ. ಇನ್ನು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ಸ್ವಲ್ಪ ಹಣ ಖರ್ಚಾಗುವ ಸಾಧ್ಯತೆ ಇದೆ. ನೀವು ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಖುಷಿ ವೃದ್ಧಿಸಲಿದೆ. ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 3

ಶುಭ ಸಮಯ: ಸಂಜೆ 6 ಗಂಟೆಯಿಂದ ರಾತ್ರಿ 11.5ರವರೆಗೆ

 ಸಿಂಹ

ಸಿಂಹ

ಕೆಲವು ದಿನಗಳಿಂದ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ನಿರಾಸೆಗೊಳ್ಳಬೇಡಿ, ಹೊಸ ವ್ಯವಹಾರದಲ್ಲಿ ತೊಡಗುವ ಮನಸ್ಸು ಮಾಡಿ. ಮನಸ್ಸಿನಲ್ಲಿರುವ ನಕಾರಾತ್ಮಕ ಚಿಂತನೆಯನ್ನು ಹೊರಹಾಕಿ, ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ, ದೇವರನ್ನು ನಂಬಿ. ಇನ್ನು ಪ್ರೇಮಿಗಳಿಗೆ ಈ ದಿನ ಮಹತ್ವಪೂರ್ಣ ದಿನವಾಗಿದ್ದು, ಪ್ರೇಮ ಪಸ್ತಾಪ ಮಾಡಲು ಸೂಕ್ತ ದಿನವಾಗಿದೆ. ಇನ್ನು ವಿವಾಹಿತರಿಗೆ ವೈವಾಹಿಕ ಜೀವನದಲ್ಲಿ ಚಿಕ್ಕ-ಪುಟ್ಟ ಮಾತುಕತೆ ಬರುವ ಸಾಧ್ಯತೆ ಇದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ಖರ್ಚಾಗುವ ಸಾಧ್ಯತೆ ಇದೆ. ಇನ್ನು ಆರೋಗ್ಯದಲ್ಲೂ ಸ್ವಲ್ಪ ವ್ಯತ್ಯಾಸ ಉಂಟಾಗಲಿದೆ.

ಅದೃಷ್ಟದ ಬಣ್ಣ: ಆಕಾಶನೀಲಿ

ಅದೃಷ್ಟದ ಸಂಖ್ಯೆ: 27

ಶುಭ ಸಮಯ: ಬೆಳಗ್ಗೆ 7 :45ರಿಂದ 4:30ರವರೆಗೆ

 ಕನ್ಯಾ

ಕನ್ಯಾ

ನೀವು ಇವತ್ತು ಮಾತನಾಡುವಾಗ ತುಂಬಾ ಎಚ್ಚರಿಕೆವಹಿಸಬೇಕು, ನಿಮ್ಮ ಮಾತುಗಳು ವಿವಾದಕ್ಕೆ ಕಾರಣವಾಗಬಹುದು, ಆದ್ದರಿಂದ ಯೋಚಿಸಿ ಮಾತನಾಡಿ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ಸುರಕ್ಷಿತವಾಗಿದೆ ಅಲ್ಲದೆ ತಂದೆಯ ಸಹಾಯವು ದೊರೆಯಲಿದೆ. ಕೆಲಸದಲ್ಲಿ ಅನಗ್ಯತ ಚಿಂತೆ ಬೇಡ, ನಿಮ್ಮ ಕೆಲಸದಲ್ಲಿ ಮಗ್ನರಾಗಿ. ದೂರದ ಪ್ರಯಾಣ ಮಾಡದಿರುವುದು ಒಳ್ಳೆಯದು. ವಿದ್ಯಾರ್ಥಿಗಳಿವೆ ಈ ದಿನ ಅನುಕೂಲಕರವಾಗಿದೆ.

ಅದೃಷ್ಟದ ಬಣ್ಣ: ಪೀಚ್

ಅದೃಷ್ಟದ ಸಂಖ್ಯೆ: 26

ಶುಭ ಸಮಯ: ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ

ತುಲಾ

ತುಲಾ

ನೀವು ಯಾವುದೇ ಮಹತ್ವಪೂರ್ಣವಾದ ನಿರ್ಧಾರ ತೆಗೆದುಕೊಳ್ಳುವಾಗ ಆತುರಪಡಬೇಡಿ, ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಆರ್ಥಿಕ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ, ನಿಮ್ಮ ಲಾಭ ದೊರೆಯಲಿದೆ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ನೀವು ಸಂಬಂಧ ಸುಧಾರಿಸಲು ಮತ್ತಷ್ಟು ಪ್ರಯತ್ನಿಸುವುದು ಒಳ್ಳೆಯದು. ಇನ್ನು ವ್ಯಾಪಾರಿಗಳಾಗಿದ್ದರೆ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಇನ್ನು ಆರೋಗ್ಯವೂ ಸುಧಾರಿಸಲಿದೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 18

ಶುಭ ಸಮಯ: ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ

 ವೃಶ್ಷಿಕ

ವೃಶ್ಷಿಕ

ನೀವು ಆರೋಗ್ಯದ ಕಡೆ ಸ್ವಲ್ಪ ಗಮನ ನೀಡುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಸ್ವಲ್ಪ ಏರುಪೇರು ಉಂಟಾಗಲಿದೆ, ಆದರೆ ಶಾಂತಮನಸ್ಥಿತಿಯಿಂದ ಪರಿಸ್ಥಿತಿ ನಿಭಾಯಿಸಿ. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ಕೆಲಸದ ಜಾಗದಲ್ಲಿ ಅಸಡ್ಡೆ ತೋರಿದರೆ ತೊಂದರೆ ತಪ್ಪಿದ್ದಲ್ಲ. ವ್ಯಾಪಾರಿಗಳಿಗೆ ಈ ದಿನ ಮಿಶ್ರಫಲವಾಗಿದೆ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 19

ಶುಭ ಸಮಯ: ಬೆಳಗ್ಗೆ 9.20ರಿಂದ ಸಂಜೆ 6 ಗಂಟೆಯವರೆಗೆ

ಧನು

ಧನು

ಈ ದಿನ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ, ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಪರಿಸ್ಥಿತಿ ಚೆನ್ನಾಗಿರಲಿದೆ. ಕೆಲಸದ ಜಾಗದಲ್ಲಿ ನಿಮ್ಮ ಕೆಲಸದ ಬಗ್ಗೆ ಕೊಂಕು ಬರಬಹುದು, ಆದರೆ ಕೆಲಸದಲ್ಲಿ ಗಮನ ಹರಿಸಿ ನಿಮ್ಮ ಕೆಲಸದಲ್ಲಿಯೇ ಅವರಿಗೆ ಉತ್ತರ ನೀಡಿ. ವೈವಾಹಿಕ ಜೀವನ ರೊಮ್ಯಾಂಟಿಕ್ ಆಗಿರಲಿದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 16

ಶುಭ ಸಮಯ: ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ

 ಮಕರ

ಮಕರ

ಉದ್ಯೋಗಕ್ಕಾಗಿ ಶ್ರಮಿಸುತ್ತಿದ್ದರೆ ನಿಮ್ಮ ಶ್ರಮ ಮತ್ತಷ್ಟು ಹೆಚ್ಚಿಸಿ, ಫಲ ಸಿಗುವುದು. ಇನ್ನು ಸಣ್ಣ ವ್ಯಾಪಾರಿಗಳಿಗೆ ಈ ದಿನ ಲಾಭ ದೊರೆಯಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸುವುದು. ಇನ್ನು ನಿಮ್ಮ ಪ್ರೀತಿ ಪಾತ್ರರ ಆರೋಗ್ಯದಲ್ಲೂ ಸುಧಾರಣೆ ಕಂಡು ಬರುವುದು. ಹಣವನ್ನು ಮಿತವಾಗಿ ಖರ್ಚು ಮಾಡಿ, ಇನ್ನು ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 6

ಶುಭ ಸಮಯ: ಬೆಳಗ್ಗೆ 11.3ರಿಂದ ರಾತ್ರಿ 9 ಗಂಟೆಯವರೆಗೆ

 ಕುಂಭ:

ಕುಂಭ:

ನೀವು ಉದ್ಯೋಗ ಬದಲಾವಣೆ ಬಯಸಿದ್ದರೆ ಈ ದಿನ ನೀವು ಬಯಸಿದ್ದು ನೆರವೇರಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿದ್ದು ನೀವು ಹಳೆಯ ಸಾಲದಿಂದ ಮುಕ್ತರಾಗುವಿರಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಏರಳಿತ ಕಾಣಬಹುದು, ಆದರೆ ನಂತರ ಪರಿಸ್ಥಿತಿ ಶಾಂತವಾಗುವುದು. ನಿಮ್ಮದು ಹಾಗೂ ಮನೆಯವರ ಆರೋಗ್ಯ ಉತ್ತಮವಾಗಿರಲಿದೆ, ಆದರೆ ಹೊರಗಿನ ಆಹಾರ, ಜಂಕ್‌ಫುಡ್ಸ್ ದೂರವಿಡುವುದು ಒಳ್ಳೆಯದು.

ಅದೃಷ್ಟದ ಬಣ್ಣ: ಮೆರೂನ್

ಅದೃಷ್ಟದ ಸಂಖ್ಯೆ: 35

ಶುಭ ಸಮಯ: ಬೆಳಗ್ಗೆ 4.5ರಿಂದ ಮಧ್ಯಾಹ್ನ 3.40ರವರೆಗೆ

ಮೀನ

ಮೀನ

ನಿಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನದ ಕಡೆ ಗಮನಹರಿಸುವುದು ಒಳ್ಳೆಯದು. ನಿಮ್ಮ ಕೆಲಸ ನೋಡಿ ಬಾಸ್‌ನಿಂದ ಪ್ರಶಂಸೆ ದೊರೆಯುವುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 29

ಶುಭ ಸಮಯ: ಬೆಳಗ್ಗೆ 4.50ರಿಂದ ಮಧ್ಯಾಹ್ನ 12.05ರವರೆಗೆ

English summary

Dina Bhavishya 17 August 2020

Dina Bhavishya (17-08-2020): Get your today horoscope in Kannada based on your zodiac signs.
X
Desktop Bottom Promotion