For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ: ಕರ್ಕ ರಾಶಿಯವರೇ ಹಣದ ವಿಷಯದಲ್ಲಿ ಜಾಗ್ರತೆ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 15 November 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ಸಂಜೆ 05:16 ರ ವರೆಗೆ ವಿಶಾಖ, ನಂತರ ಅನುರಾಧಾ
ಕೃಷ್ಣ ಪಕ್ಷ
ರಾಹುಕಾಲ: ಸಂಜೆ 04:07ರಿಂದ 05:27ರವರೆಗೆ
ಗುಳಿಕಕಾಲ: ಮಧ್ಯಾಹ್ನ 02:46ರಿಂದ 04:07ರವರೆಗೆ
ಯಮಗಂಡಕಾಲ: ಮಧ್ಯಾಹ್ನ 12:06ರಿಂದ 01:26ರವರೆಗೆ
ದುರ್ಮುಹೂರ್ತ: ಸಂಜೆ 04:02ರಿಂದ 04:44ರವರೆಗೆ
ಬೆಳಗ್ಗೆ 07:26ರಿಂದ 08:09ರವರೆಗೆ

ಸೂರ್ಯೋದಯ: ಬೆಳಗ್ಗೆ 06:44ಕ್ಕೆ
ಸೂರ್ಯಾಸ್ತ: ಸಂಜೆ 05:27ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಹಣದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ. ನಿಮ್ಮ ಆದಾಯ ಉತ್ತಮವಾಗಿರುವುದಿಲ್ಲ, ಬದಲಿಗೆ ಖರ್ಚು ಜಾಸ್ತಿ. ಹಣದ ವಿಷಯದಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಯೋಚನೆ ಮಾಡಿ ಮಾತನಾಡಿ. ಕೆಲಸದ ಬಗ್ಗೆ ಮಾತನಾಡುವುದಾದರೆ, ಈ ದಿನವು ನಿಮಗೆ ಸಾಮಾನ್ಯವಾಗಲಿದೆ. ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ. ವ್ಯಾಪಾರಸ್ಥರು, ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು ಅಷ್ಟು ಸೂಕ್ತವಲ್ಲ. ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತವೆ.

ಉತ್ತಮ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 14

ಒಳ್ಳೆಯ ಸಮಯ: ಸಂಜೆ 6:15 ರಿಂದ 11 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ಇಂದು ಶಿವನ ಆರಾಧನೆಯೊಂದಿಗೆ ದಿನವನ್ನು ಪ್ರಾರಂಭಿಸಿ. ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ. ನೀವು ಮಾನಸಿಕ ಶಾಂತಿಯನ್ನು ಸಹ ಅನುಭವಿಸುವಿರಿ. ದೀರ್ಘಕಾಲದವರೆಗೆ ಅರ್ಧದಲೇ ನಿಂತಿದ್ದ ಯಾವುದೇ ಕೆಲಸವನ್ನು ಇಂದು ಪೂರ್ಣಗೊಳಿಸಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನೀವು ಪೋಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ನಿಮ್ಮ ಸಂಗಾತಿಯೊಂದಿಗೆ ನೀವು ಸಣ್ಣ ಮನಸ್ತಾಪವನ್ನು ಹೊಂದಬಹುದು, ಆದರೆ ಶೀಘ್ರದಲ್ಲೇ ಎಲ್ಲವೂ ಸಾಮಾನ್ಯವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಟೀಕಿಸುವುದನ್ನು ತಪ್ಪಿಸಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಚಿಲ್ಲರೆ ವ್ಯಾಪಾರಿಗಳು ಇಂದು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಬದಲಾಗುತ್ತಿರುವ ಹವಾಮಾನದಿಂದಾಗಿ ಇಂದು ಕೆಲವು ಸಮಸ್ಯೆಗಳು ಉಂಟಾಗಬಹುದು.

ಉತ್ತಮ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 30

ಶುಭ ಸಮಯ: ಬೆಳಗ್ಗೆ 4:10 ರಿಂದ ಮಧ್ಯಾಹ್ನ 3:50

ಮಿಥುನ ರಾಶಿ:

ಮಿಥುನ ರಾಶಿ:

ಇಂದು ಬೆಳಬೆಳಗ್ಗೆ ಒಳ್ಳೆಯ ಸುದ್ದಿಗಳನ್ನು ಕೇಳಿ ಸಂತೋಷಗೊಳ್ಳುತ್ತೀರಿ. ಮನೆಯ ವಾತಾವರಣವು ತುಂಬಾ ಚೆನ್ನಾಗಿರುತ್ತದೆ ಮತ್ತು ನಿಮ್ಮ ಸಂತೋಷವನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಸಂಗಾತಿಯು ಇಂದು ಅವರ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ಸಂಗಾತಿಯ ಬಗ್ಗೆ ನೀವು ಸಾಕಷ್ಟು ಹೆಮ್ಮೆ ಪಡುತ್ತೀರಿ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಇಂದು ನೀವು ಕೆಲವು ಪ್ರಮುಖ ಖರ್ಚುಗಳನ್ನು ಸಹ ಮಾಡಬಹುದು.

ಇಂದು ಉದ್ಯೋಗಸ್ಥರಿಗೆ ಕೆಲಸದ ಹೊರೆ ಜಾಸ್ತಿ. ಉದ್ಯೋಗಸ್ಥರು ಕೆಲಸದ ಬಗ್ಗೆ ಅಜಾಗರೂಕತೆಯನ್ನು ತಪ್ಪಿಸಬೇಕು. ನಿಮ್ಮ ಬಾಸ್ ನಿಮ್ಮ ಕೆಲಸವನ್ನು ಗಮನಿಸುತ್ತಿರುತ್ತಾರೆ. ಮತ್ತೊಂದೆಡೆ, ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸಿದರೆ, ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ಇಂದು ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 8

ಶುಭ ಸಮಯ: ಮಧ್ಯಾಹ್ನ 12:55 ರಿಂದ 7 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಹಣದ ವಿಷಯದಲ್ಲಿ, ನೀವು ಇಂದು ಹೆಚ್ಚು ಜಾಗರೂಕರಾಗಿರಬೇಕು. ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಅದರಿಂದ ತೊಂದರೆ ಉಂಟಾಗಬಹುದು. ಕೆಲಸದ ಬಗ್ಗೆ ಮಾತನಾಡುವುದಾದರೆ, ವ್ಯಾಪಾರಸ್ಥರು ಅಧಿಕ ಶ್ರಮದ ನಂತರ ಇಂದು ಪ್ರಯೋಜನ ಪಡೆಯಬಹುದು. ನೀವು ಆಸ್ತಿಗೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದರೆ, ನಿಮ್ಮ ವ್ಯವಹಾರ ನಿರ್ಧಾರಗಳನ್ನು ತರಾತುರಿಯಲ್ಲಿ ಮಾಡಬೇಡಿ. ಇಂದು ಉದ್ಯೋಗ ಮಾಡುವವರು ಸಮಯದ ಬಗ್ಗೆ ಕಾಳಜಿ ವಹಿಸಬೇಕು. ಕಚೇರಿಯಲ್ಲಿ ಅತಿಯಾಗಿ ಮಾತನಾಡುವುದು ಅಥವಾ ಗಾಸಿಪ್ ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ನೀವು ಶೀತ, ನೆಗಡಿ ಜ್ವರ ಇತ್ಯಾದಿಗಳಿಂದ ತೊಂದರೆಗೊಳಗಾಗಬಹುದು.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 19

ಶುಭ ಸಮಯ: ಸಂಜೆ 6 ರಿಂದ 10 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಉದ್ಯೋಗಸ್ಥರಿಗಿಂದು ಉತ್ತಮ ಫಲಿತಾಂಶ ಸಿಗಲಿದೆ. ನೀವು ನೌಕರಿ ಮಾಡುವವರಾಗಿದ್ದರೆ, ನಿಮಗೆ ಕಚೇರಿಯಲ್ಲಿ ಹೆಚ್ಚಿನ ಗೌರವ ಸಿಗಬಹುದು. ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗುತ್ತಾರೆ. ಮತ್ತೊಂದೆಡೆ, ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇಂದು ಹಣಕಾಸು ವ್ಯವಹಾರ ಮಾಡುವವರಿಗೆ ಬಹಳ ಪ್ರಯೋಜನಕಾರಿ ದಿನವಾಗಲಿದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬದೊಂದಿಗೆ ಮೋಜಿನ ಸಮಯ ಕಳೆಯುತ್ತೀರಿ. ನೀವು ಅವಿವಾಹಿತರಾಗಿದ್ದರೆ, ಮದುವೆಯ ಪ್ರಸ್ತಾಪವು ಬರಬಹುದು. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ಯಾವುದೇ ದೊಡ್ಡ ಸಮಸ್ಯೆ ಇಲ್ಲ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 12

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಕುಟುಂಬ ಜೀವನದಲ್ಲಿ ಅಪಶ್ರುತಿ ಹೆಚ್ಚಾಗಬಹುದು. ನೀವು ಇಂದು ಮನೆಯ ಸದಸ್ಯರೊಂದಿಗೆ ಚರ್ಚಿಸಬೇಕು. ಈ ರೀತಿಯ ಪರಿಸ್ಥಿತಿಯಲ್ಲಿ ನೀವು ತಾಳೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೋಪಗೊಳ್ಳಬೇಡಿ ಇದರಿಂದ ನೀವು ಭವಿಷ್ಯದಲ್ಲಿ ವಿಷಾದಿಸಬೇಕಾಗಿ ಬರಬಹುದು. ಸಂಗಾತಿಯು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನೀವು ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಂದು ಆರ್ಥಿಕವಾಗಿ ಮಿಶ್ರ ಫಲಿತಾಂಶ ಸಿಗಲಿದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಹಣವನ್ನು ಸಿಲುಕಿಕೊಂಡಿರುವ ಹಣ ಮರಳಿ ಸಿಗದೇ ನೀವು ಚಿಂತೆ ಮಾಡುತ್ತೀರಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ. ಯಾವುದೇ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ಅವರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದರೆ, ಇಂದು ನೀವು ಯೋಗ್ಯವಾದ ಲಾಭವನ್ನು ಪಡೆಯಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ನರಗಳಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಇಂದು, ನಿಮ್ಮ ಅನಿಯಂತ್ರಿತ ಕೋಪವು ನಿಮಗೆ ತೊಂದರೆ ಉಂಟುಮಾಡಬಹುದು. ನೀವು ನೌಕರಿ ಮಾಡುತ್ತಿದ್ದರೆ, ಇಂದು ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ನಿಮ್ಮ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳಿಂದ ತೊಂದರೆಗೆ ಸಿಲುಕಿಕೊಳ್ಳದಂತೆ ಎಚ್ಚರವಹಿಸಿ. ನೀವು ಹಿಂದೆ ಮುಂದೆ ಯೋಚನೆ ಮಾಡದೇ ಮಾತನಾಡಿದರೆ, ನಿಮ್ಮ ತೊಂದರೆಗಳು ಹೆಚ್ಚಾಗಬಹುದು. ಇಂದು ವ್ಯಾಪಾರಿಗಳಿಗೆ ಮಿಶ್ರ ಫಲ ನಿಮ್ಮ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಆದರೆ ಇಂದು ನಿಮಗೆ ಯಾವುದೇ ದೊಡ್ಡ ಲಾಭ ದೊರೆಯುವುದಿಲ್ಲ. ನಿಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮಾತನಾಡುವುದಾದರೆ ದಿನವು ತುಂಬಾ ಲಾಭದಾಯಕವಾಗಿರುತ್ತದೆ. ಇಂದು ನಿಮ್ಮ ಹಣಕಾಸಿನ ಬಗೆಗಿನ ಪ್ರಯತ್ನಗಳು ಯಶಸ್ವಿಯಾಗಲಿವೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನ ಸಾಮಾನ್ಯವಾಗಿರಲಿದೆ.

ಉತ್ತಮ ಬಣ್ಣ: ಕಡು ನೀಲಿ

ಶುಭ ಸಂಖ್ಯೆ: 28

ಶುಭ ಸಮಯ: ಸಂಜೆ 6 ರಿಂದ 11 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಕೇವಲ ಅನಗತ್ಯ ಮಾತನಾಡುವ ಮೂಲಕ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ, ನಿಮ್ಮ ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಮಯ ಇದು. ನೀವು ಏನಾದರೂ ದೊಡ್ಡದನ್ನು ಸಾಧಿಸಲು ಯೋಚಿಸುತ್ತಿದ್ದರೆ ಈಗ ಹೆಜ್ಜೆ ಇಡುವುದು ಉತ್ತಮ. ಇಂದು ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶ ಸಿಗಲಿದೆ. ಇಂದು ಆದಾಯಕ್ಕಿಂತ ಹೆಚ್ಚಿನ ವೆಚ್ಚವಾಗಬಹುದು ಆದರೆ ಕೆಲವು ಆರ್ಥಿಕ ಲಾಭವೂ ಸಿಗುತ್ತದೆ. ಇಂದು, ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಅವರ ನಡವಳಿಕೆಯಿಂದ ನಿಮಗೆ ತೊಂದರೆಯಾಗಬಹುದು. ಈ ಸಂದರ್ಭದಲ್ಲಿ, ನೀವು ಅವರಿಗೆ ಸ್ವಲ್ಪ ಸಮಯ ನೀಡಬೇಕು. ಮತ್ತೊಂದೆಡೆ, ಪೋಷಕರ ಪ್ರೀತಿ ಮತ್ತು ಆಶೀರ್ವಾದದಿಂದ, ನಿಮ್ಮಲ್ಲಿ ಸಕಾರಾತ್ಮಕತೆ ಮೂಡುತ್ತದೆ. ಉದ್ಯೋಗಿಗಳು ತಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯಬಹುದು. ಆಮದು ರಫ್ತಿಗೆ ಸಂಬಂಧಿಸಿದಂತೆ ನೀವು ಕೆಲಸ ಮಾಡುತ್ತಿದ್ದರೆ, ಇಂದು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು.

ಉತ್ತಮ ಬಣ್ಣ: ತಿಳಿ ಹಸಿರು

ಶುಭ ಸಂಖ್ಯೆ: 36

ಶುಭ ಸಮಯ: ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ

ಧನು ರಾಶಿ:

ಧನು ರಾಶಿ:

ಕಳೆದ ಕೆಲವು ದಿನಗಳಿಂದ, ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿತದ ಪರಿಸ್ಥಿತಿ ಇತ್ತು, ಆದರೆ ಇಂದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಬಹುದು. ಇಂದು ಸಂಗಾತಿಯೊಂದಿಗೆ ವಿಶೇಷವಾಗಿ ದಿನ ಕಳೆಯಲಿದ್ದೀರಿ. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿಮ್ಮ ನಿರಂತರ ಪರಿಶ್ರಮ ಮತ್ತು ಪ್ರಯತ್ನದ ಫಲಿತಾಂಶವನ್ನು ನೀವು ಪಡೆಯಬಹುದು. ಇಂದು ನೀವು ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ಸಹಾಯ ಮಾಡುವ ಅವಕಾಶವನ್ನು ಪಡೆಯಬಹುದು. ಆರ್ಥಿಕ ದೃಷ್ಟಿಯಿಂದ, ದಿನವು ಲಾಭದಾಯಕವಾಗಿದೆ. ನಿಮ್ಮ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ. ಹಣಕ್ಕೆ ಸಂಬಂಧಿಸಿದಂತೆ ತಂದೆಯೊಂದಿಗೆ ಯಾವುದೇ ಬಿರುಕು ಮೂಡಿದ್ದರೆ, ಇಂದು ಸರಿಯಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 15

ಶುಭ ಸಮಯ: ಮಧ್ಯಾಹ್ನ 2:30 ರಿಂದ 5 ರವರೆಗೆ

ಮಕರ ರಾಶಿ:

ಮಕರ ರಾಶಿ:

ಇಂದು ನಿಮ್ಮ ದಿನ. ಏಕೆಂದರೆ ಇಂದು ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಇಂದು ನೀವು ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕಡಿಮೆ ಕೆಲಸದಿಂದ ನೀವು ಉತ್ತಮ ಲಾಭ ಗಳಿಸಬಹುದು. ನೀವು ಉದ್ಯೋಗಿಯಾಗಿರಲಿ ಅಥವಾ ಉದ್ಯಮಿಯಾಗಿರಲಿ, ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಆದರೆ ನಿಮ್ಮ ಪ್ರಯತ್ನಗಳನ್ನು ಮತ್ತು ಕಠಿಣ ಪರಿಶ್ರಮವನ್ನು ನೀವು ಮುಂದುವರಿಸಬೇಕಾಗುತ್ತದೆ.

ನಿಮ್ಮ ಕುಟುಂಬ ಜೀವನದ ಬಗ್ಗೆ ನೀವು ಮಾತನಾಡುವುದಾದರೆ, ಕುಟುಂಬ ಸದಸ್ಯರೊಂದಿಗೆ ಬಿರುಕು ಕಾಣಿಸಿಕೊಳ್ಳಬಹುದು. ಇಂದು, ಅನಗತ್ಯ ವಿಷಯಗಳಿಗೆ ಕೋಪಗೊಳ್ಳುವ ನಿಮ್ಮ ಅಭ್ಯಾಸವು ಮನೆಯ ಶಾಂತಿಯನ್ನು ಭಂಗಗೊಳಿಸುತ್ತದೆ. ನೀವು ನಿಮ್ಮನ್ನು ಸರಿಯಾಗಿ ನಿಯಂತ್ರಿಸಿ. ಮತ್ತೊಂದೆಡೆ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಪ್ರೀತಿಪಾತ್ರರ ಮನಸ್ಥಿತಿ ಸಹ ಬದಲಾಗುತ್ತದೆ. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಇಂದು ನಿವಾರಣೆಯಾಗುತ್ತದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 36

ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಕುಟುಂಬ ಜೀವನದ ಬಗ್ಗೆ ಸ್ವಲ್ಪ ಹೆಚ್ಚು ಗಮನಕೊಡಬೇಕು. ಇಂದು, ನೀವು ಮನೆಗೆ ಸಂಬಂಧಿಸಿದ ಗಂಭೀರ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಮನೆಯಲ್ಲಿ ವಯಸ್ಸಾದ ಸದಸ್ಯರಿದ್ದರೆ, ಅವರ ಆರೋಗ್ಯ ಇಂದು ಕ್ಷೀಣಿಸಬಹುದು. ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಇಂದು ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿರುತ್ತದೆ. ನೀವು ಹೊಸ ವ್ಯವಹಾರದಲ್ಲಿ ಲಾಭವನ್ನು ಪಡೆಯಲು ಬಯಸಿದರೆ, ಇಂದು ನಿಮ್ಮ ಯೋಜನೆ ಮುಂದುವರಿಯಬಹುದು. ಹಾಗೆಯೇ ಉದ್ಯೋಗಿಗಳಿಗೆ ಇಂದು ಸಾಮಾನ್ಯ ದಿನ. ಹಣದ ಬಗ್ಗೆ ಹೇಳುವುದಾದರೆ, ಇಂದು ಆದಾಯವು ಉತ್ತಮವಾಗಿರುತ್ತದೆ ಮತ್ತು ನೀವು ಉಳಿತಾಯ ಮಾಡುವ ಸಾಧ್ಯತೆ ಇದೆ. ಅದೃಷ್ಟದಿಂದಾಗಿ ನಿಮ್ಮ ಯಾವುದೇ ಅಪೂರ್ಣ ಕೆಲಸ ಪೂರ್ಣಗೊಳ್ಳಬಹುದು. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 19

ಶುಭ ಸಮಯ: ಸಂಜೆ 5:20 ರಿಂದ 10 ರವರೆಗೆ

ಮೀನ ರಾಶಿ:

ಮೀನ ರಾಶಿ:

ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಎಲ್ಲಾ ಒಡಹುಟ್ಟಿದವರ ನಿಮಗೆ ಬೆಂಬಲ ಸಿಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದರ ಮೂಲಕ ನೀವು ಇಂದು ಹೆಚ್ಚು ಸಂತೋಷದಿಮ್ದ ಇರುತ್ತೀರಿ. ಸಂಗಾತಿಯೊಂದಿಗೆ ದಿನವು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಅವರಿಗೆ ತುಂಬಾ ವಿಶೇಷ ಎಂದೆನಿಸುವ ಉಡುಗೊರೆಯೊಂದನ್ನು ನೀವು ಅವರಿಗೆ ನೀಡಬಹುದು. ಉದ್ಯೋಗಸ್ಥರಿಗೆ ಯಶಸ್ಸು. ಇಂದು, ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ. ಇನ್ನು ಹಣದ ಬಗ್ಗೆ ಮಾತನಾಡುವುದಾದರೆ, ಇಂದು ಉತ್ತಮ ದಿನವಾಗಿರುತ್ತದೆ. ಆದರೂ ಯಾವುದೇ ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ದೂರವಿರಲು, ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ. ಇದಲ್ಲದೆ, ನೀವು ಪ್ರತಿ ಹಣಕಾಸಿನ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಆರೋಗ್ಯ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 22

ಶುಭ ಸಮಯ: ಮಧ್ಯಾಹ್ನ 3 ರಿಂದ 10 ರವರೆಗೆ

English summary

Dina Bhavishya 15 November 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, November 14, 2020, 17:13 [IST]
X
Desktop Bottom Promotion