For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ: ಕುಂಭ ರಾಶಿಯವರಿಗೆ ಇಂದು ಶುಭ ದಿನ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 14 November 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ರಾತ್ರಿ 08:09 ರ ವರೆಗೆ ಸ್ವಾತಿ, ನಂತರ ವಿಶಾಖ
ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ 09:24ರಿಂದ 10:45ರವರೆಗೆ
ಗುಳಿಕಕಾಲ: ಬೆಳಗ್ಗೆ 06:43ರಿಂದ 08:04ರವರೆಗೆ
ಯಮಗಂಡಕಾಲ: ಮಧ್ಯಾಹ್ನ 01:26ರಿಂದ 02:47ರವರೆಗೆ
ದುರ್ಮುಹೂರ್ತ: ಬೆಳಗ್ಗೆ 06:43ರಿಂದ 07:26ರವರೆಗೆ
ಬೆಳಗ್ಗೆ 07:26ರಿಂದ 08:09ರವರೆಗೆ

ಸೂರ್ಯೋದಯ: ಬೆಳಗ್ಗೆ 06:43ಕ್ಕೆ
ಸೂರ್ಯಾಸ್ತ: ಸಂಜೆ 05:28ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಉದ್ಯೋಗಸ್ಥರಿಗಿಂದು ಶುಭ ದಿನ. ವಿಶೇಷವಾಗಿ ವ್ಯಾಪಾರಸ್ಥರು ಉತ್ತಮ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ನೀವು ಇಂದು ಹೊಸ ಮತ್ತು ದೊಡ್ಡ ಯಶಸ್ವಿಯಾಗಿ ವ್ಯವಹಾರವನ್ನುಮಾಡಬಹುದು. ನಿಮ್ಮ ಕೆಲಸವು ಸಾರಿಗೆಗೆ ಸಂಬಂಧಿಸಿದ್ದರೆ ಕಾನೂನು ವಿಷಯಗಳಿಂದ ದೂರವಿರಿ. ಉದ್ಯೋಗಿಗಳ ಆದಾಯ ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ. ನೀವು ಇಂದು ಕಚೇರಿಯಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುತ್ತೀರಿ. ದಿನದ ಎರಡನೇ ಭಾಗದಲ್ಲಿ, ಇಂದು ಯಾರಾದರೂ ಹಣದ ಬಗ್ಗೆ ನಿಮ್ಮೊಂದಿಗೆ ವಿವಾದ ಮಾಡಬಹುದು. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ, ನೀವು ದೊಡ್ಡ ತೊಂದರೆಗಳಿಂದ ಪಾರಾಗಬಹುದು. ಇಂದು ನೀವು ವಿವಾದಗಳಿಂದ ದೂರವಿರಬೇಕು, ಇಲ್ಲದಿದ್ದರೆ ನೀವು ದೀರ್ಘಕಾಲದವರೆಗೆ ಕಾನೂನು ಸಂಬಂಧಿತ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ನಿಮ್ಮ ಪ್ರೀತಿಪಾತ್ರರನ್ನು ಸಮಾಧಾನದಿಂದ ನೋಡಿಕೊಳ್ಳುವುದು ಉತ್ತಮ. ಆರೋಗ್ಯ ಇಂದು ಉತ್ತಮವಾಗಿರುತ್ತವೆ.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 10

ಒಳ್ಳೆಯ ಸಮಯ: ಸಂಜೆ 4 ರಿಂದ 9:20

ವೃಷಭ ರಾಶಿ:

ವೃಷಭ ರಾಶಿ:

ಇಂದು ನಿಮ್ಮ ಮಾನಸಿಕ ತೊಂದರೆಗಳು ಕಡಿಮೆಯಾಗಬಹುದು. ಹಣದ ಸಮಸ್ಯೆಯನ್ನು ಪರಿಹರಿಸುವ ಮೂಲಕ ನಿಮ್ಮ ದೊಡ್ಡ ಚಿಂತೆ ಇಂದು ದೂರವಾಗುತ್ತದೆ. ಇತ್ತೀಚಿಗೆ ನಿಮ್ಮ ಬಗ್ಗೆ ನಿಮಗೆ ಗಮನಹರಿಸಲು ಸಾಧ್ಯವಾಗದಿದ್ದರೆ, ಇಂದು ನೀವು ವಾಕ್ ಮಾಡಲು ಅಥವಾ ಸ್ನೇಹಿತರೊಂದಿಗೆ ಸುತ್ತಾಡಲು ಅವಕಾಶ ಪಡೆಯಬಹುದು. ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಕೆಲಸದ ಹೊರೆ ಕಡಿಮೆ ಇರುತ್ತದೆ ಮತ್ತು ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇನ್ನು ನೀವು ಒಬ್ಬಂಟಿಯಾಗಿದ್ದರೆ ಇಂದು ನೀವು ಪ್ರೀತಿಯ ಪ್ರಸ್ತಾಪವನ್ನು ಪಡೆಯಬಹುದು ಹಾಗೂ ಅವರು ನಿಮ್ಮ ಆಪ್ತರೂ ಆಗಿರಬಹುದು. ದಾಂಪತ್ಯ ಜೀವನದಲ್ಲಿ ಸ್ವಲ್ಪ ಗಲಾಟೆ ಉಂಟಾಗುತ್ತದೆ. ಸಂಗಾತಿಯು ಕೆಲವು ಕಾರಣಗಳಿಂದ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಬೇಕು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 36

ಶುಭ ಸಮಯ: ಸಂಜೆ 4 ರಿಂದ ರಾತ್ರಿ 8:55

 ಮಿಥುನ ರಾಶಿ:

ಮಿಥುನ ರಾಶಿ:

ವ್ಯಾಪಾರಿಗಳು ಇಂದು ನಷ್ಟವನ್ನು ಭರಿಸಬೇಕಾಗಬಹುದು, ವಿಶೇಷವಾಗಿ ಆಸ್ತಿಗೆ ಸಂಬಂಧಿಸಿದ ಕೆಲಸ ಮಾಡುವವರು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ನೀವು ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಮನೆಯ ಸದಸ್ಯರೊಬ್ಬರು ನಿಮ್ಮ ಮೇಲೆ ಕೋಪಗೊಂಡಿದ್ದರೆ, ಅವರಿಗೆ ಸರಿಯಾಗಿ ಮನವರಿಕೆ ಮಾಡಲು ಇಂದು ಒಳ್ಳೆಯ ದಿನ. ನೀವು ಬುದ್ಧಿವಂತಿಕೆಯಿಂದ ಮಾತನಾಡಬೇಕು. ಆಗ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.

ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಸ್ವಲ್ಪ ಪ್ರೀತಿಯ ಮಾತುಕತೆ ನಡೆಸುತ್ತೀರಿ ಮತ್ತು ನಿಮ್ಮ ಯಾವುದಾದರೂ ಹಳೆಯ ನೆನಪುಗಳು ನಿಮ್ಮನ್ನು ಉಲ್ಲಾಸಗೊಳಿಸುತ್ತವೆ. ಸರ್ಕಾರಿ ಉದ್ಯೋಗಸ್ಥರು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಭಡ್ತಿ ಪಡೆಯಬಹುದು ಅಥವಾ ಅಪೇಕ್ಷಿತ ವರ್ಗಾವಣೆಯನ್ನು ಪಡೆಯಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 16

ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಇತ್ತೀಚಿಗೆ, ಕುಟುಂಬಗಳ ನಡುವಿನ ಸಂಬಂಧ ಹದಗೆಟ್ಟು ಮನೆಯಲ್ಲಿ ಅಸಮಾಧಾನದ ವಾತಾವರಣವಿತ್ತು, ಆದರೆ ನಿಮ್ಮ ನಿರಂತರ ಪ್ರಯತ್ನಗಳು ಅಂತಿಮವಾಗಿ ಫಲಕೊಡುತ್ತವೆ. ನಿಮ್ಮ ಪ್ರೀತಿಪಾತ್ರರ ನಡುವಿನ ಅಂತರ ಕಡಿಮೆ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಪೋಷಕರಿಂದ ಆಶೀರ್ವಾದ ಮತ್ತು ಬೆಂಬಲವನ್ನು ಪಡೆಯುತ್ತೀರಿ. ನೀವು ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಮತ್ತು ಪ್ರೀತಿ ಬಲವಾಗುತ್ತದೆ. ಹಣದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಆದಾಯವನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ, ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮಗೇ ತೊಂದರೆ ಉಂಟಾಗುವ ರೀತಿಯಲ್ಲಿ ನೀವು ಏನನ್ನಾದರೂ ಹೇಳುವ ಸಾಧ್ಯತೆಯಿದೆ. ಹಾಗಾಗಿ ಮಾತಿನ ಬಗ್ಗೆ ನಿಗಾಇರಲಿ. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ. ನೀವು ಹೊಟ್ಟೆಯ ಅಸ್ವಸ್ಥತೆಯಿಂದ ಪರಿಹಾರ ಪಡೆಯುತ್ತೀರಿ ಮತ್ತು ಬಹಳ ಸಮಯದ ನಂತರ ನೀವು ಇಂದು ನಿಮ್ಮ ನೆಚ್ಚಿನ ಆಹಾರವನ್ನು ಆನಂದಿಸಲು ಸಾಧ್ಯವಾಗುತ್ತದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 20

ಶುಭ ಸಮಯ: ಮಧ್ಯಾಹ್ನ 2:20 ರಿಂದ 6 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಮನಸ್ಸಿನಲ್ಲಿ ಅಸಮಾಧಾನದ ಭಾವನೆ ಇರುತ್ತದೆ. ಕೆಲವು ಹಳೆಯ ವಿಷಯಗಳ ಬಗ್ಗೆ ಮನಸ್ಸು ಮತ್ತೆ ಮತ್ತೆ ಚಿಂತೆ ಮಾಡುತ್ತದೆ. ಹಣಕ್ಕೆ ಸಂಬಂಧಿಸಿದಂತೆ ದಿನ ಸಾಮಾನ್ಯವಾಗಿರಲಿದೆ. ದೊಡ್ಡ ಖರ್ಚು ಮಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಬಜೆಟ್ ನಲ್ಲಿ ಏರುಪೇರಾಗಬಹುದು. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ಬಹುಶಃ ಇಂದು ನೀವು ನಿಮ್ಮ ಮನಸ್ಸಿನ ಮಾತುಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಬಹುದು. ದಿನದ ಎರಡನೇ ಭಾಗದಲ್ಲಿ ಜಾಗರೂಕರಾಗಿರಿ. ನಿಮ್ಮ ಬಬ್ಲಿಂಗ್ ಸ್ವಭಾವ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಲಸದ ಬಗ್ಗೆ ಮಾತನಾಡುವುದಾದಲ್ಲಿ, ಕಚೇರಿಯಲ್ಲಿ ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯಿಂದ ಸಂತೋಷಗೊಳ್ಳುತ್ತಾರೆ. ನೀವು ಅವರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ಇಂದು ಆರೋಗ್ಯದ ವಿಷಯದಲ್ಲಿ ಏನಾದರೂ ತೊಂದರೆ ಉಂಟಾಗುತ್ತದೆ. ಇಂದು ವ್ಯರ್ಥವಾಗಿ ಓಡಾಡುವುದನ್ನು ತಪ್ಪಿಸಿ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 4

ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3: 45 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ನಿಮಗೆ ಹಣದ ದೃಷ್ಟಿಯಿಂದ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಇಂದು, ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆದು ತುಂಬಾ ಸಂತೋಷಪಡುತ್ತೀರಿ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಂಡರೆ ಅದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದು. ಕಚೇರಿಯಲ್ಲಿರುವ ಕೆಲವು ಸಹೋದ್ಯೋಗಿಗಳು ನಿಮ್ಮ ಮೇಲೆ ಅಸೂಯೆಪಟ್ಟು ಉನ್ನತ ಅಧಿಕಾರಿಗಳ ಮುಂದೆ ನಿಮ ಕಡೆ ಬೆರಳು ಮಾಡಿ ತೋರಿಸಲು ಪ್ರಯತ್ನಿಸಬಹುದು. ಅಂತಹವರೊಂದಿಗೆ ಜಾಗರೂಕರಾಗಿರುವುದು ಉತ್ತಮ. ವ್ಯಾಪಾರ ಉದ್ದೇಶಗಳಿಗಾಗಿ ಮಾಡುವ ಪ್ರಯಾಣ ಇಂದು ಯಶಸ್ವಿಯಾಗಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ. ಸಂಗಾತಿಯೊಂದಿಗೆ ಸಂಬಂಧವು ಬಲವಾಗಿರುತ್ತದೆ ಮತ್ತು ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ. ಇಂದು ನಿಮ್ಮ ಎನರ್ಜಿ, ಉತ್ಸಾಹ ತುಂಬಾ ಉತ್ತಮವಾಗಿರುತ್ತದೆ. ಸಂಜೆ, ನೀವು ಇದ್ದಕ್ಕಿದ್ದಂತೆ ಹಳೆಯ ಸ್ನೇಹಿತನನ್ನು ಭೇಟಿಯಾಗುವ ಸಾಧ್ಯತೆ ಇದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 12:00 ರಿಂದ ರಾತ್ರಿ 9 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ ಮತ್ತು ನೀವು ಉತ್ಸಾಹದಿಂದ ಇರುವಿರಿ. ಸ್ಥಗಿತಗೊಂಡ ಕಾರ್ಯಗಳು ಮತ್ತೆ ಶುರುವಾಗುವುದರಿಂದ ನಿಮ್ಮ ಸಂತೋಷ ಹೆಚ್ಚಾಗುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕುಟುಂಬ ಸದಸ್ಯರ ನಡುವೆ ಹೊಂದಾಣಿಕೆ ಇರುತ್ತದೆ. ಇಂದು ನೀವು ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಅವಕಾಶವನ್ನು ಪಡೆಯುತ್ತೀರಿ ಮತ್ತು ದಿನವು ವಿನೋದಮಯವಾಗಿರುತ್ತದೆ. ಇಂದು ನೀವು ನಿಮ್ಮ ತಾಯಿ ಅಥವಾ ತಂದೆಯಿಂದ ವಿಶೇಷ ಉಡುಗೊರೆಯನ್ನು ಪಡೆಯಬಹುದು.

ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಬಹುಶಃ ಇಂದು, ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರವಾಸಕ್ಕೆ ಹೋಗುತ್ತೀರಿ. ನೌಕರರಿಗೆ ಇಂದು ಅದೃಷ್ಟದ ದಿನ. ಆದಾಗ್ಯೂ ನೀವು ತುಂಬಾ ಶ್ರಮಿಸಬೇಕು. ಮತ್ತೊಂದೆಡೆ, ವ್ಯಾಪಾರಸ್ಥರು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಹಣದ ಬಗ್ಗೆ ಹೆಚ್ಚು ಚಿಂತಿಸಬೇಡಿ, ನಿಮ್ಮ ಮೇಲೆ ನೀವು ಭರವಸೆ ಇಡಿ. ಉತ್ತಮ ಫಲಿತಾಂಶವನ್ನೇ ಪಡೆಯುತ್ತೀರಿ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 3 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಈ ದಿನ ನಿಮಗೆ ಅಷ್ಟು ಉತ್ತಮವಾಗಿಲ್ಲ. ಅನೇಕ ರೀತಿಯ ಗೊಂದಲಗಳು ನಿಮ್ಮನ್ನಾವರಿಸುತ್ತವೆ. ಮನೆಯಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ವಿವಾದವನ್ನು ಮಾಡಿಕೊಳ್ಳಬಹುದು. ಈ ಸಮಯದಲ್ಲಿ, ನೀವು ತಾಳ್ಮೆಯಿಂದಿರಬೇಕು. ಜೀವನದಲ್ಲಿ ಏರಿಳಿತಗಳಿರುತ್ತವೆ, ಅದಕ್ಕೆ ಅಂಜುವ ಬದಲು, ನೀವು ಪ್ರತಿಯೊಂದು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಹಣದ ಬಗ್ಗೆ ಹೇಳುವುದಾದರೆ ಇಂದು ವೆಚ್ಚಗಳು ಸ್ವಲ್ಪ ಹೆಚ್ಚಾಗುತ್ತಿವೆ. ಇದು ಆದಾಯಕ್ಕಿಂತ ಹೆಚ್ಚಿನ ವೆಚ್ಚವಾಗಿರಬಹುದು. ನಿಮ್ಮ ಖರ್ಚುಗಳನ್ನು ನೀವು ಆದಷ್ಟು ಬೇಗ ನಿಯಂತ್ರಿಸಿ, ಭವಿಷ್ಯಕ್ಕಾಗಿ ಹಣವನ್ನು ಕೂಡಿಡಲು ಪ್ರಯತ್ನಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ದಿನ ಚೆನ್ನಾಗಿರುತ್ತದೆ. ಉದ್ಯೋಗಸ್ಥರ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಯೋಜನೆಗಳ ಪ್ರಕಾರವೇ ಮಾಡಬೇಕು.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 19

ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3:30 ರವರೆಗೆ

ಧನು ರಾಶಿ:

ಧನು ರಾಶಿ:

ಇಂದು ನಿಮಗೆ ತುಂಬಾ ಒತ್ತಡದ ದಿನ. ನಿಮ್ಮ ದಿನದ ಕಾರ್ಯಗಳನ್ನು ಮೊದಲೇ ಯೋಜಿಸಿಕೊಂಡಿದ್ದರೆ ನಿಮಗೇ ಅನುಕೂಲ. ಇಂದು ನೀವು ಅನೇಕ ಪ್ರಮುಖ ಕಾರ್ಯಗಳನ್ನು ಮಡಬೇಕಾಗಬಹುದು. ಹಾಗಾಗಿ ಹೆಚ್ಚಿನ ಸಮಯವನ್ನು ಗಡಿಬಿಡಿಯಲ್ಲಿಯೇ ಕಳೆಯುತ್ತೀರಿ. ವ್ಯವಹಾರದಲ್ಲಿ ನೀವು ಸ್ವಲ್ಪ ಲಾಭ ಪಡೆಯಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಯಾವುದಾದರೂ ಕ್ಲಿಷ್ಟಕರ ವ್ಯವಹಾರದ ವಿಷಯಗಳನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ದ್ಯೋಗ ಮಾಡುತ್ತಿದ್ದರೆ, ಕಚೇರಿಯಲಿ ಅಧಿಕಾರಿಯೊಬ್ಬರಿಂದ ಮಾತು ಕೇಳಿಸಿಕೊಳ್ಳಬೇಕಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಕೆಲಸವು ಅಪಾಯಕ್ಕೆ ಸಿಲುಕಿಕೊಳ್ಳಬಹುದು.

ವ್ಯಾಪಾರಿಗಳು ಉತ್ತಮ ಲಾಭ ಪಡೆಯಬಹುದು. ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷ ಮಾಡಬೇಡಿ. ಮನೆಯಲ್ಲಿ ಶಾಂತಿ. ಸಂಗಾತಿಯು ತುಸು ಕೋಪಗೊಂಡಿರಬಹುದು. ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡಬೇಡಿ. ಇನ್ನು ಆರೋಗ್ಯದ ಬಗ್ಗೆ ಮಾತನಾಡುತ್ತಾ, ನಿಮ್ಮ ಆಯಾಸ ಹೆಚ್ಚಾಗಬಹುದು.

ಉತ್ತಮ ಬಣ್ಣ: ಕೇಸರಿ

ಶುಭ ಸಂಖ್ಯೆ: 21

ಶುಭ ಸಮಯ: ಮಧ್ಯಾಹ್ನ 3 ರಿಂದ 9 ರವರೆಗೆ

ಮಕರ ರಾಶಿ:

ಮಕರ ರಾಶಿ:

ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯ ನಡುವಿನ ಪ್ರೀತಿ ಬಲವಾಗುತ್ತದೆ. ಬಹಳ ಸಮಯದ ನಂತರ ಒಬ್ಬರಿಗೊಬ್ಬರು ಸ್ವಲ್ಪ ಪ್ರಣಯ ಸಮಯವನ್ನು ಕಳೆಯುವ ಅವಕಾಶವೂ ಸಿಗುತ್ತದೆ. ನಿಮ್ಮ ನೆಚ್ಚಿನ ಸ್ಥಳಕ್ಕೆ ನೀವು ಪ್ರವಾಸಕ್ಕೆ ಹೋಗಬಹುದು. ಮತ್ತೊಂದೆಡೆ ಮಗುವಿನ ಕಡೆಯಿಂದ ಕೆಲವು ತೊಂದರೆ ಉಂಟಾಗಬಹುದು. ಅಧ್ಯಯನಗಳ ಬಗ್ಗೆ ಅವರ ನಿರ್ಲಕ್ಷ್ಯವು ನಿಮ್ಮ ಚಿಂತೆಯನ್ನು ಹೆಚ್ಚಿಸುತ್ತದೆ. ಹಣದ ದೃಷ್ಟಿಯಿಂದ ಒಳ್ಳೆಯ ದಿನ. ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ ಮತ್ತು ಇಂದು ನೀವು ಉಲ್ಲಾಸದಿಂದ ಇರುತ್ತೀರಿ. ಕ್ಷುಲ್ಲಕ ವಿಷಯಗಳಿಗೆ ನೀವು ಕೋಪ ಮಾಡಿಕೊಂಡರೆ ನಿಮಗೆ ಹತ್ತಿರವಿರುವ ಜನರೊಂದಿಗಿನ ಒಡನಾಟಕ್ಕೆ ಧಕ್ಕೆ ಉಂಟಾಗಬಹುದು. ನಿಮ್ಮ ನಡವಳಿಕೆಯನ್ನು ಸರಿಯಾಗಿರಿಸಿಕೊಳ್ಳಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಾಯದಿಂದ, ನಿಮ್ಮ ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಇಂದು ನಿಮಗೆ ಶುಭವಾಗಲಿದೆ. ನೀವು ಸಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತೀರಿ ಮತ್ತು ನೀವು ಮಾನಸಿಕವಾಗಿ ಸದೃಢರಾಗಿರುತ್ತೀರಿ. ಇಂದು ನಿಮ್ಮ ಮನಸ್ಥಿತಿ ಸಾಕಷ್ಟು ಚೆನ್ನಾಗಿರುತ್ತದೆ. ನಿಮ್ಮ ಪ್ರತಿಯೊಂದು ಪ್ರಯತ್ನದಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಬಹಳ ಸುಲಭವಾಗಿ ಪೂರ್ಣಗೊಳ್ಳುತ್ತವೆ. ಅಲ್ಲದೆ ಉನ್ನತ ಅಧಿಕಾರಿಗಳು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಅವರು ನಿಮ್ಮನ್ನು ಅತಿಯಾಗಿ ಹೊಗಳುತ್ತಾರೆ. ಇದು ನಿಮ್ಮ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮತ್ತೊಂದೆಡೆ, ವ್ಯಾಪಾರಿಗಳು ದೊಡ್ಡ ಆರ್ಥಿಕ ವಹಿವಾಟುಗಳನ್ನು ಇಂದು ತಪ್ಪಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಸ್ವಲ್ಪ ಮನಸ್ತಾಪ. ಪೋಷಕರು ನಿಮ್ಮನ್ನು ಟೀಕಿಸಬಹುದು. ಅವರ ಭಾವನೆಗಳನ್ನು ನೀವು ಗೌರವಿಸಬೇಕು. ಹಿರಿಯರ ಮಾತುಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ಹಣದ ಬಗ್ಗೆ ಮಾತನಾಡುವುದಾದರೆ, ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 21

ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1: 20 ರವರೆಗೆ

ಮೀನ ರಾಶಿ:

ಮೀನ ರಾಶಿ:

ವೈವಾಹಿಕ ಜೀವನದಲ್ಲಿ ಸಂತೋಷವಿರುತ್ತದೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಆರಾಮವಾಗಿ ದಿನವನ್ನು ಕಳೆಯುತ್ತೀರಿ. ಮಗುವಿನ ಕಡೆಯಿಂದ ಉಂಟಾಗುವ ಆತಂಕ ದೂರವಾಗಬಹುದು. ನೀವು ಮಕ್ಕಳೊಂದಿಗೆ ಸಾಕಷ್ಟು ಮೋಜು ಮಾಡುತ್ತೀರಿ. ಮತ್ತೊಂದೆಡೆ, ನೀವು ಇಂದು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ಇದಕ್ಕಾಗಿ ನೀವು ಮೊದಲೇ ಸಿದ್ಧರಾಗಿ. ನಿಮ್ಮ ಪ್ರಮುಖ ನಿರ್ಧಾರಗಳನ್ನು ನೀವು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಕಚೇರಿಯಲ್ಲಿ ನಿಮ್ಮ ದಕ್ಷತೆಯಿಂದ ಮೇಲಾಧಿಕಾರಿಗಳು ಪ್ರಭಾವಿತರಾಗುತ್ತಾರೆ.

ಇಂದು ನೀವು ನಿಮ್ಮ ಪ್ರಗತಿಯ ಲಕ್ಷಣಗಳನ್ನು ಕಾಣಬಹುದು. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಇಂದು ವ್ಯಾಪಾರಿಗಳಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ನಿಮ್ಮ ಕೆಲಸವು ಮರ, ಆಹಾರ, ಔಷಧಿ ಅಥವಾ ಎಣ್ಣೆಗೆ ಸಂಬಂಧಿಸಿದ್ದಲ್ಲಿ ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 18

ಶುಭ ಸಮಯ: ಮಧ್ಯಾಹ್ನ 3 ರಿಂದ 6:30 ರವರೆಗೆ

English summary

Dina Bhavishya 14 November 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Friday, November 13, 2020, 17:12 [IST]
X
Desktop Bottom Promotion