For Quick Alerts
ALLOW NOTIFICATIONS  
For Daily Alerts

ಮಂಗಳವಾರದ ದಿನ ಭವಿಷ್ಯ: ವೃಷಭ ರಾಶಿಗಿಂದು ಅಮೂಲ್ಯವಾದ ವಸ್ತು ಸಿಗಲಿದೆ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 13 October 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ರಾತ್ರಿ 10:55ರವರೆಗೆ ಮಾಘ, ನಂತರ ಪೂರ್ವ ಪಾಲ್ಘುಣಿ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 03:00ರಿಂದ 04:27ರವರೆಗೆ
ಗುಳಿಕಕಾಲ: ಮಧ್ಯಾಹ್ನ 12:07ರಿಂದ 01:34ರವರೆಗೆ
ಯಮಗಂಡಕಾಲ: ಬೆಳಗ್ಗೆ 09:14ರಿಂದ 10:40ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:39ರಿಂದ 09:25ರವರೆಗೆ
ರಾತ್ರಿ 10:53ರಿಂದ 11:42ರವರೆಗೆ
ಸೂರ್ಯೋದಯ: ಬೆಳಗ್ಗೆ 06:21ಕ್ಕೆ
ಸೂರ್ಯಾಸ್ತ: ಸಂಜೆ 05:53ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಇಂದು ನಿಮಗೆ ಸಂತೋಷದ ದಿನ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನೀವು ಮಕ್ಕಳಿಗೂ ನಿಮ್ಮ ಪೂರ್ಣ ಸಮಯವನ್ನು ನೀಡುತ್ತೀರಿ. ಸಂಗಾತಿಯ ಬೆಂಬಲ ನಿಮಗಿದೆ. ಭವಿಷ್ಯದ ಬಗ್ಗೆ ಇಂದು ನಿಮ್ಮ ಪ್ರಿಯಕರರೊಂದಿಗೆ ಚರ್ಚೆ ಮಾಡಬಹುದು. ಹಣದ ಹರಿವು ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಸಮತೋಲನದಲ್ಲಿರುತ್ತದೆ. ದಿನದ ಎರಡನೇ ಭಾಗದಲ್ಲಿ ಹಣದ ಹಠಾತ್ ಖರ್ಚು ಬಂದೊದಗಬಹುದು. ಕೆಲಸದ ಬಗ್ಗೆ ಮಾತನಾಡುವುದಾದಲ್ಲಿ, ಕಚೇರಿಯಲ್ಲಿ ಸಾಕಷ್ಟು ಕೆಲಸಗಳು ಇರುತ್ತವೆ. ಆದರೆ ಅದನ್ನೂ ಕೂಡ ಸರಿಯಾದ ಸಮಯಕ್ಕೆ ಜವಾಬ್ದಾರಿಯಿಂದ ಪೂರೈಸುತ್ತೀರಿ. ನೀವು ವ್ಯಾಪಾರ ಮಾಡುವವರಾಗಿದ್ದರೆ, ನಿಮ್ಮ ಹೊಸ ಯೋಜನೆಗಳನ್ನುಕಾರ್ಯರೂಪಕ್ಕೆ ತರಲು ಇದು ಅನುಕೂಲಕರ ಸಮಯ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಸಕಾರಾತ್ಮಕ ಮನೋಭಾವ ನಿಮ್ಮಲ್ಲಿರುತ್ತದೆ.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 6

ಶುಭ ಸಮಯ: ಸಂಜೆ 5 ರಿಂದ 10 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮ ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ. ಇಂದು ನೀವು ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ಕುಟುಂಬದ ಸಂತೋಷವು ನಿಮಗೆ ಬಹಳ ಮುಖ್ಯ, ಆದ್ದರಿಂದ ಇಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಸಹ ಕೊಡಬಹುದು. ನೀವು ಕಚೇರಿಯಲ್ಲಿ ಇಂದು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಬಾಸ್ ನಿಮ್ಮನ್ನು ಗಮನಿಸುತ್ತಿರುತ್ತಾರೆ ಹಾಗಾಗಿ ನೀವು ಕೆಲಸದ ಬಗ್ಗೆ ಅಸಡ್ಡೆ ವಹಿಸದಿರುವುದು ಉತ್ತಮ. ವ್ಯಾಪಾರಸ್ಥರಿಗೆ, ದಿನವು ಮಿಶ್ರವಾಗಿದೆ. ಕೆಲಸದಲ್ಲಿ ಕಠಿಣ ಪರಿಶ್ರಮ ಪಡಬೇಕಾಗಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ, ವಿಶೇಷವಾಗಿ ನೀವು ಪೋಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಯಾವುದಾದರೂ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ, ನಿಮ್ಮ ಪೋಷಕರು ಅದನ್ನು ಬೆಂಬಲಿಸುತ್ತಾರೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯಾಗಿ, ನಿಮ್ಮ ದೊಡ್ಡ ಚಿಂತೆ ದೂರವಾಗುತ್ತದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 18

ಶುಭ ಸಮಯ: ಬೆಳಗ್ಗೆ 8:40 ರಿಂದ ಮಧ್ಯಾಹ್ನ 3 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ನಿಮ್ಮ ಯಾವುದೇ ಪರಿಸ್ಥಿರಿಯಲ್ಲೂ ನೀವು ಅತ್ಯ್ಯಂತ ಸಂಯಮ ಹಾಗೂ ಧೈರ್ಯದಿಂದ ಕೆಲಸ ಮಾಡಬೇಕಾಗುತ್ತದೆ. ನೀವು ಅನಗತ್ಯವಾಗಿ ಏನನ್ನಾದರೂ ಮಾಡಲು ಹೊರಟರೆ ತಪ್ಪು ಫಲಿತಾಂಶವನ್ನು ಅನುಭವಿಸಬಹುದು. ಹಾಗಾಗಿ ತಿಳುವಳಿಕೆಯಿಂದ ವ್ಯವಹರಿಸಿ. ಕೆಲಸದ ಆರಂಭವು ಇಂದು ಬಹಳ ಮುಖ್ಯವಾಗಲಿದೆ. ಇಂದು ನೀವು ದೊಡ್ಡ ಸೆಮಿನಾರ್ ಅಥವಾ ಸಮ್ಮೇಳನದಲ್ಲಿ ಭಾಗವಹಿಸಬಹುದು. ಕೆಲವು ಹೊಸ ಮತ್ತು ಖ್ಯಾತ ವ್ಯಕ್ತಿಗಳೊಂದಿದೆ ಸಂಪರ್ಕ ಸಾಧಿಸಲು ನಿಮಗೆ ಅವಕಾಶ ಸಿಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕಡೆಯಿಂದ ಆತ್ಮವಿಶ್ವಾಸದಿಂದ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ನೀವು ಆಸ್ತಿಗೆ ಸಂಬಂಧಿಸಿದ ಕೆಲಸವನ್ನು ಮಾಡುವವರಾಗಿದ್ದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಹೊಂಬೆಳಕು. ಮನೆಯ ಕೆಲವು ಸದಸ್ಯರು ನಿಮ್ಮ ಬಗ್ಗೆ ಅಸಮಾಧಾನ ಹೊಂದುವ ಸಾಧ್ಯತೆ. ನಿಮ್ಮ ಮಾತು ಮತ್ತು ನಡವಳಿಕೆಯನ್ನು ಸಮತೋಲನದಲ್ಲಿಡಲು ನೀವು ಪ್ರಯತ್ನಿಸಿ. ಹಣದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪಗಳಾಗಲೂ ಬಹುದು. ಅವರ ಸ್ವಭಾವವು ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 16

ಶುಭ ಸಮಯ: ಮಧ್ಯಾಹ್ನ 1 ರಿಂದ ರಾತ್ರಿ 8:40 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಇಂದು ನಿಮಗೆ ತುಂಬಾ ಕೆಲಸ. ಹಾಗಾಗಿ ನಿಮ್ಮ ಇಡೀ ದಿನವನ್ನು ಮೊದಲೇ ಯೋಜಿಸುವುದು ಉತ್ತಮ. ನೀವು ಹಣಕಾಸಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರೆ, ನೀವು ಹೆಚ್ಚು ಜಾಗರೂಕರಾಗಿರಬೇಕು ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸುತ್ತೀರಿ. ನೀವು ಹೊಸದಾಗಿ ಕೆಲಸಕ್ಕೆ ಸೇರಿದ್ದರೆ ಕಷ್ಟಪಟ್ಟು ಕೆಲಸ ಮಾಡಿ. ನಿಮಗೆ ವಹಿಸಿಕೊಟ್ಟ ಯಾವುದೇ ಜವಾಬ್ದಾರಿಯನ್ನು ಪೂರೈಸಲು ಪ್ರಯತ್ನಿಸಿ. ಇದರಿಂದ ನಿಮಗೆ ಲಾಭವಾಗಲಿದೆ. ಹಣದ ಹರಿವು ಸಮಾನ್ಯ. ಬುದ್ಧಿವಂತಿಕೆಯಿಂದ ಹಣ ವ್ಯಯಿಸಿ. ಸಂಗಾತಿಯ ಹಠಾತ್ ಆಶ್ಚರ್ಯಕರ ನಡವಳಿಕೆ ನಿಮ್ಮನ್ನು ತಲ್ಲಣಗೊಳಿಸುತ್ತದೆ. ನಿಮ್ಮ ಪ್ರಿಯಪಾತ್ರರು ನಿಮ್ಮ ಮೇಲೆ ತುಂಬಾ ಕೋಪಗೊಳ್ಳಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಒತ್ತಡದಿಂದ ದೂರವಿರಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 7

ಶುಭ ಸಮಯ: ಮಧ್ಯಾಹ್ನ 3 ರಿಂದ 7 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಇಂದು ನಿಮಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡದ ದಿನ ನಿಮ್ಮ ಹೆಚ್ಚುತ್ತಿರುವ ವೆಚ್ಚಗಳು ನಿಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿವೆ. ನಿಮ್ಮ ಭವಿಷ್ಯದ ಯೋಜನೆಗಳಿಗೆ ತೊಂದರೆಯಾಗದಂತೆ ಉಳಿತಾಯದ ಬಗ್ಗೆ ಹೆಚ್ಚು ಗಮನಹರಿಸುವುದು ಉತ್ತಮ. ಮನೆಯ ಹಿರಿಯರು ನಿಮ್ಮ ಅಸಡ್ಡೆ ಮನೋಭಾವವನ್ನು ಟೀಕಿಸಬಹುದು. ನಿಮ್ಮ ಹಿರಿಯರ ಮಾತುಗಳನ್ನು ನಿರ್ಲಕ್ಷಿಸಬೇಡಿ, ಅವರು ನಿಮ್ಮ ಒಳ್ಳೆಯದಕ್ಕೇ ಹೇಳುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನದಲ್ಲಿ ಬಾಂಧವ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಿರಿ. ಕೆಲಸದ ವಿಚಾರದಲ್ಲಿ ಇಂದು ದಿನ ಸಾಮಾನ್ಯವಾಗಲಿದೆ. ನಿಮ್ಮ ಯಾವುದೇ ಉದ್ಯೋಗಗಳು, ವ್ಯವಹಾರಗಳಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ ಮತ್ತು ನೀವು ತುಂಬಾ ಭಾರವಾದ ಮನಸ್ತಿತಿಯನ್ನು ಹೊಂದುತ್ತೀರಿ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 31

ಶುಭ ಸಮಯ: ಬೆಳಗ್ಗೆ 9:15 ರಿಂದ ಮಧ್ಯಾಹ್ನ 2:20

ಕನ್ಯಾರಾಶಿ:

ಕನ್ಯಾರಾಶಿ:

ಇಂದು ನಿಮ್ಮ ಮನಸ್ಸಿಗೆ ದುಃಖ. ನೀವು ನಕಾರಾತ್ಮಕವಾಗಿ ಯೋಚಿಸುವಿರಿ. ಅಂತಹ ಆಲೋಚನೆಗಳಿಂದ ದೂರವಿರುವುದು ಮತ್ತು ಪೂರ್ಣ ಸಕಾರಾತ್ಮಕತೆಯೊಂದಿಗೆ ನಿಮ್ಮ ಗುರಿಯತ್ತ ಮುಂದುವರಿಯುವುದು ಉತ್ತಮ. ಈ ಸಮಯವು ನಿಮಗೆ ಬಹಳ ಮುಖ್ಯ, ಆದ್ದರಿಂದ ಅದನ್ನು ಅನಗತ್ಯವಾಗಿ ನಾಶಪಡಿಸಿಕೊಳ್ಳಬೇಡಿ. ನೌಕರಸ್ಥರಿಗೆ ಇಂದಿನ ದಿನ ಒಳ್ಳೆಯದು. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ವೇಗವಾಗಿ ಪೂರ್ಣಗೊಳ್ಳುತ್ತವೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತಸಗೊಳ್ಳುತ್ತಾರೆ. ಹಾಗೆಯೇ ವ್ಯಾಪಾರಸ್ಥರು ಯಾರಿಂದಲಾದರೂ ದೊಡ್ಡ ಮೊತ್ತವನ್ನು ಸಾಲವಾಗಿ ಪಡೆದಿದ್ದರೆ, ಅದನ್ನು ಮರುಪಾವತಿಸಲು ಪ್ರಾರಂಭಿಸಬೇಕು. ನಿಮ್ಮ ಹಣಕಾಸು ಯೋಜನೆಗಳನ್ನು ಸರಿಯಾಗಿ ರೂಪಿಸುವುದು ಉತ್ತಮ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ನೀವು ಇಂದು ಒಂಟಿತನವನ್ನು ಅನುಭವಿಸುವಿರಿ. ನೀವು ಪ್ರತಿದಿನ ಲಘು ವ್ಯಾಯಾಮ ಮಾಡಿದರೆ, ಅದು ನಿಮ್ಮನ್ನು ಉತ್ಸಾಹಿ ಮತ್ತು ಚುರುಕಾಗಿರಿಸುತ್ತದೆ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 30

ಶುಭ ಸಮಯ: ಬೆಳಗ್ಗೆ 7:45 ರಿಂದ ಮಧ್ಯಾಹ್ನ 12:05

ತುಲಾ ರಾಶಿ:

ತುಲಾ ರಾಶಿ:

ಇಂದಿನ ದಿನ ಆರಾಮದಾಯಕವಾಗಿ ಆರಂಭವಾಗಲಿದೆ. ಮನಸ್ಸು ಸಂತೋಷವಾಗಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಲು ನಿಮಗಿಂದು ಸಾಧ್ಯ. ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೊರಗಡೆ ಹೋಗಬಹುದು. ಆದರೆ, ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಏಕೆಂದರೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವು ಅಷ್ಟೇ ಮುಖ್ಯವಾಗಿದೆ. ಹಣದ ವಿಷಯದಲ್ಲಿ, ನೀವು ಜಾಗರೂಕರಾಗಿರಲೇ ಬೇಕು. ಮುಂದೆ ಸಮಸ್ಯೆಯನ್ನು ತಪ್ಪಿಸಲು ಇಂದು ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಇನ್ನು ಕೆಲಸಕ್ಕೆ ಸಬಂಧಿಸಿದಂತೆ, ನೀವು ಕಚೇರಿಯಲ್ಲಿ ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೀರಿ ಮತ್ತು ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯವಾಗಿರುತ್ತದೆ. ನೀವು ಚಿಲ್ಲರೆ ವ್ಯಾಪಾರಿ ಆಗಿದ್ದರೆ, ಇಂದು ನಿಮಗೆ ಲಾಭದಾಯಕ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕಡು ಕೆಂಪು

ಶುಭ ಸಂಖ್ಯೆ: 25

ಶುಭ ಸಮಯ: ಸಂಜೆ 6 ರಿಂದ 11 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನಿಮ್ಮ ಕೆಲಸವನ್ನು ನೀವೇ ಮಾಡಿ. ಬಾಸ್ ಅಥವಾ ಮೇಲಧಿಕಾರಿಗಳೊಂದಿಗೆ ಮುಖಾಮುಖಿಯಾಗದೇ ಇರುವುದೇ ಒಳ್ಳೆಯದು. ನಿಮ್ಮ ಕೆಲಸವನ್ನು ಬದಲಾಯಿಸಲು ಯೋಚಿಸಿದ್ದರೆ ಈ ವಿಷಯದಲ್ಲಿ ಆತುರಪಡಬಾರದು. ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಸಣ್ಣ ವ್ಯಾಪಾರಿಗಳು ಇಂದು ಯೋಗ್ಯವಾದ ಲಾಭವನ್ನು ಪಡೆಯಬಹುದು. ಹೊಸ ವ್ಯವಹಾರಗಳನ್ನು ಆರಂಭಿಸಲು ಇದು ಸೂಕ್ತ ಸಮಯವಲ್ಲ. ನೀವು ಸ್ವಲ್ಪ ಕಾಯಿರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ. ಆರ್ಥಿಕ ಪರಿಸ್ಥಿತಿ ತೃಪ್ತಿದಾಯಕ. ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿದರೆ, ಶೀಘ್ರದಲ್ಲೇ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿರುತ್ತದೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 12

ಶುಭ ಸಮಯ: ಸಂಜೆ 6:20 ರಿಂದ 8:20 ರವರೆಗೆ

ಧನು ರಾಶಿ:

ಧನು ರಾಶಿ:

ಈ ರಾಶಿಯ ಜನರು ಇಂದು ಉತ್ತಮ ಫಲವನ್ನು ಪಡೆಯುತ್ತಾರೆ. ನೀವು ಈ ಹಿಂದೆ ಹಣದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಮತ್ತು ನಿಮ್ಮ ಅನೇಕ ಕಾರ್ಯಗಳು ಹಣಕಾಸಿನ ಸಮಸ್ಯೆಗಳಿಂದಾಗಿ ನಿಂತುಹೋಗಿದ್ದರೆ, ಇಂದು ಅವೆಲ್ಲವೂ ನೆರವೇರುವ ಸಾಧ್ಯತೆ ಇದೆ. ಇಂದು ಸಂಪತ್ತು ಒದಗಿ ಬರಲಿದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ವಾತಾವರಣವು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯು ನೌಕರಿ ಮಾಡುವವರಾಗಿದ್ದರೆ, ಅವರು ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ಪ್ರೀತಿಪಾತ್ರರ ಈ ಸಾಧನೆಯ ಬಗ್ಗೆ ನಿಮಗೆ ತುಂಬಾ ಹೆಮ್ಮೆ ಅನಿಸುತ್ತದೆ. ನೀವು ಸಾರಿಗೆ ಸಂಪರ್ಕದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಇಂದು ನೀವು ತುಂಬಾ ರಿಫ್ರೆಶ್ ಆಗಿರುತ್ತೀರಿ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 5

ಶುಭ ಸಮಯ: ಬೆಳಗ್ಗೆ 4:35 ರಿಂದ ಮಧ್ಯಾಹ್ನ 2:30 ರವರೆಗೆ

ಮಕರ ರಾಶಿ:

ಮಕರ ರಾಶಿ:

ಆರೋಗ್ಯದ ದೃಷ್ಟಿಯಿಂದ ಇಂದು ದಿನ ಉತ್ತಮವಾಗಿಲ್ಲ. ಕೆಲವು ದೀರ್ಘಕಾಲದ ಕಾಯಿಲೆಯಿಂದ ನೀವು ತುಂಬಾ ಅಸಮಾಧಾನಗೊಳ್ಳುತ್ತೀರಿ. ಆದರೆ ಆರೋಗ್ಯದ ಬಗ್ಗೆ ಅಸಡ್ಡೆ ಬೇಡ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ರಂಗದಲ್ಲಿ, ದಿನವು ಸಾಮಾನ್ಯವಾಗಿರುತ್ತದೆ. ಇಂದು ಯಾರಾದರೂ ದೊಡ್ಡ ಖರ್ಚು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಸರಿಯಾದ ಸಮಯವಲ್ಲ. ಕೆಲಸದ ಆರಂಭದಲ್ಲಿ ದಿನವು ಉತ್ತಮವಾಗಿದೆ. ಪ್ರಮುಖ ಯೋಜನೆಗೆ ಸಂಬಂಧಿಸಿದಂತೆ ನೀವು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಬಹುದು. ನೀವು ನೀಡಿದ ಕೆಲವು ಸಲಹೆಗಳನ್ನು ಅವರು ಪರಿಗಣಿಸಬಹುದು. ನಿಮ್ಮ ದಕ್ಷತೆಯಿಂದ ಅವರು ಹೆಚ್ಚು ಪ್ರಭಾವಿತರಾಗುತ್ತಾರೆ. ಮತ್ತೊಂದೆಡೆ, ವ್ಯಾಪಾರಸ್ಥರು ಇಂದು ದೊಡ್ಡ ಲಾಭ. ನೀವು ಸಾಮಾಜಿಕವಾಗಿ ತೆರೆದುಕೊಳ್ಳುತ್ತೀರಿ. ಕೆಲವು ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಸಣ್ಣ ತಪ್ಪಿನಿಂದಾಗಿ, ಮನೆಯ ಶಾಂತಿಗೆ ಇಂದು ಧಕ್ಕೆಯಾಗಬಹುದು. ನೀವು ಜಾಗರೂಕರಾಗಿರಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 21

ಶುಭ ಸಮಯ: ಸಂಜೆ 4:30 ರಿಂದ 10 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಈ ದಿನ ನಿಮಗೆ ಒತ್ತಡ ಮುಕ್ತ ದಿನ. ಹಾಗಾಗಿ ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ಸಂತೋಷ ತುಂಬಿರುತ್ತದೆ. ನೀವು ನೌಕರಿ ಮಾಡುವ ಸ್ಥಳದಲ್ಲಿ, ನೀವು ಹಿರಿಯರು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಇಂದು ನಿಮಗೆ ಲಾಭದ ದಿನ. ಇಂದು ಆರ್ಥಿಕ ರಂಗದಲ್ಲಿ ಉತ್ತಮ ದಿನವಾಗಲಿದೆ. ಆದಾಗ್ಯೂ ಹಣಕಾಸಿಗೆ ಸಂಬಂಧಿಸಿದಂತೆ ಯೋಚನೆ ಮಾಡಿ ಖರ್ಚು ಮಾಡಿ. ಅನುಪಯುಕ್ತ ಯೋಜನೆಗಳಲ್ಲಿ ಸಿಲುಕಿಕೊಳ್ಳಬೇಡಿ. ವೈವಾಹಿಕ ಜೀವನದಲ್ಲಿ ಸ್ಥಿರತೆ. ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುವ ಮೂಲಕ, ನೀವು ಮಾನಸಿಕವಾಗಿ ಸದೃಢರಾಗುತ್ತೀರಿ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನೀವು ತುಂಬಾ ಆರಾಮದಾಯಕವಾಗಿರುತ್ತೀರಿ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 35

ಶುಭ ಸಮಯ: ಬೆಳಗ್ಗೆ 9 ರಿಂದ ರಾತ್ರಿ 8:45 ರವರೆಗೆ

ಮೀನ ರಾಶಿ:

ಮೀನ ರಾಶಿ:

ಆರ್ಥಿಕವಾಗಿ ಈ ದಿನ ನಿಮ್ಮ ಕೈಹಿಡಿದಿಲ್ಲ. ದೈನಂದಿನ ಅಗತ್ಯಗಳನ್ನು ಪೂರೈಸುವಯೇ ನಿಮಗೆ ಸಾಕೆನಿಸುತ್ತದೆ. ವೈವಾಹಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು. ಎಲ್ಲಾ ತಪ್ಪುಗ್ರಹಿಕೆಯನ್ನು ಸಮಾಲೋಚನೆಯಿಂದ ಸರಿಪಡಿಸಿಕೊಳ್ಳಿ. ಯಾವುದೇ ಸಮಸ್ಯೆಗೆ ಶಾಂತಿಯಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಅಗತ್ಯ. ನಿಮ್ಮ ವೃತ್ತಿಪರ ಜೀವನದ ಬಗ್ಗೆ ಮಾತನಾಡುವುದಾದರೆ, ಇಂದು ನಿಮಗೆ ಸ್ವಲ್ಪ ಕಷ್ಟದಾಯಕ. ನಿಮ್ಮ ಆಲಸ್ಯದಿಂದಾಗಿ ಕೆಲಸ ಸರಾಗವಾಗಿ ಸಾಗುವುದಿಲ್ಲ. ವ್ಯಾಪಾರಸ್ಥರು ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ನೀವು ಇಂದು ಯಾವುದೇ ವ್ಯವಹಾರ ವಹಿವಾಟು ನಡೆಸದಿದ್ದರೆ ಉತ್ತಮ. ಆರೋಗ್ಯದ ಬಗ್ಗೆ ಗಮನ ಕೊಡಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 10

ಶುಭ ಸಮಯ: ಸಂಜೆ 4 ರಿಂದ 9:15 ರವರೆಗೆ

English summary

Dina Bhavishya 13 October 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Monday, October 12, 2020, 17:54 [IST]
X
Desktop Bottom Promotion