For Quick Alerts
ALLOW NOTIFICATIONS  
For Daily Alerts

Horoscope Today 13 Jan 2023: ಶುಕ್ರವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

|

ಶುಭೋದಯ.....ವೈದಿಕ ಶಾಸ್ತ್ರದ ಪ್ರಕಾರ ಜನವರಿ 13ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಮಾಘ
ಪಕ್ಷ: ಕೃಷ್ಣ ಪಕ್ಷ
ತಿಥಿ:ಷಷ್ಠಿ
ನಕ್ಷತ್ರ: ಉತ್ತರ ಫಲ್ಗುಣಿ, ಸಂಜೆ 4:36ರ ನಂತರ ಹಸ್ತಾ
ರಾಹುಕಾಲ: ಬೆಳಗ್ಗೆ11:03ರಿಂದ ಮಧ್ಯಾಹ್ನ 12:28

ಮೇಷ ರಾಶಿ

ಮೇಷ ರಾಶಿ

ಈ ದಿನ ಮನಸ್ಸು ಅಷ್ಟು ಸರಿಯಿರಲ್ಲ, ಯಾವುದೋ ಚಿಂತೆ ಕಾಡುವುದು. ನಿಮ್ಮ ಮಕ್ಕಳ ಆರೋಗ್ಯ ಅಥವಾ ಶಿಕ್ಷಣದ ಬಗ್ಗೆ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ಇರಿ. ಸಮಯ ಬಂದಾಗ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ, ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿ. ಉದ್ಯಮಿಗಳಿಗೆ ಇಂದು ಉತ್ತಮ ಅವಕಾಶ ಸಿಗಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 7

ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 13 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಯಾವುದಾದರೂ ನ್ಯಾಯಾಲಯ ಪ್ರಕರಣವಿದ್ದರೆ ಅದರಿಂದ ಮುಕ್ತಿ ಪಡೆಯುತ್ತೀರಿ ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡುತ್ತೀರಿ, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯಮಿಗಳ ವ್ಯವಹಾರ ಮತ್ತಷ್ಟು ಪ್ರಗತಿಯಾಗಲಿದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ, ಆರ್ಥಿಕ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಚೆನ್ನಾಗಿದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 113

ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಕೆಲಸದ ಒತ್ತಡ ಅಧಿಕವಿರುತ್ತದೆ, ಮನೆಯವರಿಗೆ ಸಮಯ ಕೊಡಲು ಸಾಧ್ಯವಾಗಲ್ಲ, ಇದು ಕುಟುಂಬದಲ್ಲಿ ಸಮಸ್ಯೆ ತರಬಹುದು. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಲಿದೆ. ಖರ್ಚುವೆಚ್ಚಗಳ ಪಟ್ಟಿ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಗಂಟಲಿನ ಸಮಸ್ಯೆ ಇರಬಹುದು, ಆರೋಗ್ಯದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಕೆನೆ

ಅದೃಷ್ಟದ ಸಂಖ್ಯೆ: 22

ಅದೃಷ್ಟದ ಸಮಯ: ಸಂಜೆ 4 ರಿಂದ ಸಂಜೆ 7 ರವರೆಗೆ

 ಕರ್ಕ ರಾಶಿ

ಕರ್ಕ ರಾಶಿ

ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಕೋಪ ನಿಯಂತ್ರಿಸುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ, ಯಾವುದೇ ಪ್ರಮುಖ ಹಣಕಾಸಿನ ವಹಿವಾಟು ಮಾಡಲು ದಿನವು ಸೂಕ್ತವಲ್ಲ. ಉದ್ಯೋಗಸ್ಥರು ಆತುರದಿಂದ ದೂರವಿರಬೇಕು. ಮತ್ತೊಂದೆಡೆ, ಉದ್ಯಮಿಗಳು ಕಾನೂನು ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಇಂದು ದೀರ್ಘ ಪ್ರಯಾಣ ಮಾಡದಿದ್ದರೆ ಒಳ್ಳೆಯದು. ಆರೋಗ್ಯವಾಗಿರಲು, ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 8 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಕೆಲವು ಸಮಯದಿಂದ ನಿಮ್ಮ ಆರೋಗ್ಯವು ಸರಿಯಾಗಿಲ್ಲದಿದ್ದರೆ, ಇಂದು ದೊಡ್ಡ ಸುಧಾರಣೆಯನ್ನು ಕಾಣಬಹುದು. ಹಣಕ್ಕೆ ಸಂಬಂಧಿಸಿದ ಚಿಂತೆ ಹೆಚ್ಚಾಗಲಿದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಲಿದೆ. ಅಂತಹ ಪರಿಸ್ಥಿತಿಯಲ್ಲಿ, ಯೋಜನೆಯ ಪ್ರಕಾರ ನಿಮ್ಮ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಉದ್ಯಮಿಗಳಿಗೆ ಇಂದು ದೊಡ್ಡ ವ್ಯವಹಾರ ಮಾಡಲು ಅವಕಾಶ ಸಿಗಬಹುದು. ಶೀಘ್ರದಲ್ಲೇ ನಿಮ್ಮ ವ್ಯವಹಾರದಲ್ಲಿ ನೀವು ಬೆಳವಣಿಗೆಯನ್ನು ಕಾಣುತ್ತೀರಿ. ಮಗುವಿನ ಕಡೆಯಿಂದ ಸಂತೋಷ ಸಿಗಲಿದೆ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ರಾತ್ರಿ 13 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನವಾಗಿರುತ್ತದೆ ಒಳ್ಳೆಯ ಲಾಭ ಗಳಿಸುತ್ತೀರಿ. ಮತ್ತೊಂದೆಡೆ, ಇಂದು ಉದ್ಯೋಗಿಗಳಿಗೆ ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಅಲ್ಲದೆ, ನಿಮ್ಮ ಸಣ್ಣ ನಿರ್ಲಕ್ಷ್ಯದಿಂದ, ದೊಡ್ಡ ನಷ್ಟ ಸಂಭವಿಸಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ.

ದೊಡ್ಡ ಖರ್ಚು ಮಾಡುವುದನ್ನು ತಪ್ಪಿಸಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಅದೃಷ್ಟದ ಬಣ್ಣ: ತಿಳಿ ಹಳದಿ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 13 ರವರೆಗೆ

ತುಲಾ ರಾಶಿ

ತುಲಾ ರಾಶಿ

ಇಂದು ಉದ್ಯಮಿಗಳಿಗೆ ಬಹಳ ಅದೃಷ್ಟದ ದಿನ, ಆರ್ಥಿಕ ಲಾಭ ಉಂಟಾಗಲಿದೆ. ಇದರೊಂದಿಗೆ ನಿಮ್ಮ ಯಾವುದೇ ಕೆಲಸದಲ್ಲಿ ಬರುವ ಅಡೆತಡೆಯೂ ನಿವಾರಣೆಯಾಗುತ್ತದೆ. ಕಚೇರಿಯ ವಾತಾವರಣವು ತುಂಬಾ ಧನಾತ್ಮಕವಾಗಿರುತ್ತದೆ. ಇಂದು ನೀವು ಹೊಸದನ್ನು ಕಲಿಯುವ ಅವಕಾಶವನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಹಣವನ್ನು ನೋಡಿಕೊಂಡು ಖರ್ಚು ಮಾಡಿ, ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಬಗ್ಗೆ ಜಾಗ್ರತೆ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 13

ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ರಾತ್ರಿ 13 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕಛೇರಿ ರಾಜಕೀಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ವ್ಯಾಪಾರಸ್ಥರು ಇಂದಿನಿಂದ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ಕರ್ಷದ ಬಲವಾದ ಸಾಧ್ಯತೆಯಿದೆ. ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ, ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 24

ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ

ಧನು ರಾಶಿ

ಧನು ರಾಶಿ

ಧನು ರಾಶಿಯವರು ತಂದೆಯ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮನಸ್ಥಿತಿ ಹಾಳಾಗಬಹುದು, ಚಿಕ್ಕ ವಿಷಯಕ್ಕೆ ಕೋಪ ಮಾಡುವುದು ಬಿಡಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುವುದರಿಂದ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದ್ಯಮಿಗಳು ಮಾಡುವ ಯಾವುದೋ ಕೆಲಸಕ್ಕೆ ಅಡೆತಡೆ ಬರಬಹುದು. ಇಂದು ಆಯಾಸ ಹೆಚ್ಚಾಗಲಿದೆ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಸಂಜೆ 4:15 ರಿಂದ ರಾತ್ರಿ 8 ರವರೆಗೆ

ಮಕರ ರಾಶಿ

ಮಕರ ರಾಶಿ

ಇಂದು ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ ಆದರೆ ಕ್ರೆಡಿಟ್ ವಹಿವಾಟುಗಳನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ಉದ್ಯೋಗಸ್ಥರಿಗೆ ದೊಡ್ಡ ಪ್ರಗತಿಯ ಸಾಧ್ಯತೆ ಇದೆ. ಇದೆಲ್ಲವೂ ನಿಮ್ಮ ಶ್ರಮದ ಫಲ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಇತ್ತೀಚೆಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನೀಡಿದ್ದರೆ, ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಫಲಿತಾಂಶಗಳನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ವೈವಾಹಿಕ ಹಾಗೂ ಪ್ರೇಮ ಜೀವನ ಚೆನ್ನಾಗಿರಲಿದೆ. ಇಂದು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಉದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಶ್ರಮ ಹಾಕಬೇಕು. ಆರೋಗ್ಯಕ್ಕಾಗಿ ಆರೋಗ್ಯಕರ ಜೀವನಶೈಲಿ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 32

ಅದೃಷ್ಟದ ಸಮಯ: ಬೆಳಿಗ್ಗೆ 6 ರಿಂದ 13:50 ರವರೆಗೆ

ಮೀನ ರಾಶಿ

ಮೀನ ರಾಶಿ

ನಿಮ್ಮ ಯಾವುದೋ ಕೆಲಸ ಅಪೂರ್ಣವಾಗಿದ್ದರೆ ಇಂದು ಪೂರ್ಣಗೊಳ್ಳುವ ಬಲವಾದ ಸಾಧ್ಯತೆಯಿದೆ. ಇಂದು ನಿಮ್ಮ ದೊಡ್ಡ ಚಿಂತೆ ದೂರಾಗಲಿದೆ. ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಹೊಸ ವ್ಯವಹಾರ ಪ್ರಸ್ತಾಪವನ್ನು ತರಾತುರಿಯಲ್ಲಿ ಸ್ವೀಕರಿಸದಂತೆ ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 6

ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

English summary

Dina Bhavishya -13 January 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 13 January 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
X
Desktop Bottom Promotion