For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ: ಕುಂಭ ರಾಶಿಯವರೇ ಬೇರೆಯವರ ಮಾತಿನ ಪ್ರಭಾವಕ್ಕೆ ಸಿಲುಕಬೇಡಿ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋ ಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಶರದ್

ಮಾಸ: ಕಾರ್ತಿಕಾ

ನಕ್ಷತ್ರ: ನವೆಂಬರ್ 13, ಬೆಳಗಿನ ಜಾವ 01:55ರ ವರೆಗೆ ಹಸ್ತಾ, ನಂತರ ಚಿತ್ರ

ಕೃಷ್ಣ ಪಕ್ಷ

ರಾಹುಕಾಲ: ಮಧ್ಯಾಹ್ನ 01:26ರಿಂದ 02:47ರವರೆಗೆ

ಗುಳಿಕಕಾಲ: ಬೆಳಗ್ಗೆ 09:23ರಿಂದ 10:44ರವರೆಗೆ

ಯಮಗಂಡಕಾಲ: ಬೆಳಗ್ಗೆ 06:42ರಿಂದ 08:02ರವರೆಗೆ

ದುರ್ಮುಹೂರ್ತ: ಬೆಳಗ್ಗೆ 10:17ರಿಂದ 11:00ರವರೆಗೆ

ಮಧ್ಯಾಹ್ನ 02:36ರಿಂದ 03:19ರವರೆಗೆ

ಸೂರ್ಯೋದಯ: ಬೆಳಗ್ಗೆ 06:42ಕ್ಕೆ

ಸೂರ್ಯಾಸ್ತ: ಸಂಜೆ 05:29ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಇಂದು ಕೆಲಸದ ಒತ್ತಡ ಜಾಸ್ತಿ. ಹೆಚ್ಚಿನ ಕೆಲಸದ ಹೊರೆಯಿಂದಾಗಿ, ನಿಮಗೆ ಕೋಪ ಬರಬಹುದು. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಸುಲಭವಾಗಿ ಕೆಲಸಗಳನ್ನು ಮುಗಿಸಬಹುದು. ಇಲ್ಲದಿದ್ದರೆ ನೀವು ಅನಗತ್ಯ ಅವ್ಯವಸ್ಥೆಗೆ ಸಿಲುಕುವ ಮೂಲಕ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತೀರಿ. ನಿಮಗೆ ಹತ್ತಿರದವರೇ ನಿಮ್ಮ ಭಾವನೆಗಳನ್ನು ನೋಯಿಸಬಹುದು. ಈ ಸಂದರ್ಭದಲ್ಲಿ, ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಹಣದ ಹರಿವು ಚೆನ್ನಾಗಿರುತ್ತದೆ. ನೀವು ಇಂದು ಶಾಪಿಂಗ್ ಮಾಡುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ಪೋಷಕರ ವಾತ್ಸಲ್ಯ ಮತ್ತು ಬೆಂಬಲ ಸಿಗುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಗೆ ಸಂಬಂಧಿಸಿದಂತೆ ವಿಶೇಷ ಕಾಳಜಿ ತೋರಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ, ಅನಗತ್ಯವಾಗಿ ಮನೆಯಿಂದ ಹೊರಹೋಗುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 44

ಶುಭ ಸಮಯ: ಬೆಳಗ್ಗೆ 9:45 ರಿಂದ ಮಧ್ಯಾಹ್ನ 1 ಗಂಟೆ

ವೃಷಭ ರಾಶಿ:

ವೃಷಭ ರಾಶಿ:

ಕುಟುಂಬದಲ್ಲಿ ಯಾವುದಾದರೂ ವಿಷಯದ ಬಗ್ಗೆ ಇಂದು ವಿವಾದ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಮನೆಯ ವಾತಾವರಣವು ಹದಗೆಡುತ್ತದೆ. ನಿಮ್ಮ ಹಿರಿಯರ ಮಾತುಗಳನ್ನು ನಿರ್ಲಕ್ಷಿಸಬೇಡಿ ಮತ್ತು ಪುಟ್ಟ ಮಕ್ಕಳನ್ನು ಸಮಾಧಾನದಿಂದ ನೋಡಿಕೊಳ್ಳಿ. ದಿನದ ಎರಡನೇ ಭಾಗದಲ್ಲಿ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯುವ ಸಾಧ್ಯತೆ ಇದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಮನಸ್ಸಿನಲ್ಲಿರುವುದನ್ನು ಹಂಚಿಕೊಳ್ಳುವ ಮೂಲಕ ನೀವು ನಿರಾಳತೆಯನ್ನು ಅನುಭವಿಸುತ್ತೀರಿ. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಆದರೂ, ನೀವು ಆರ್ಥಿಕ ವಿಷಯಗಳಲ್ಲಿ ಆತುರಪಡದಿದ್ದರೆ ಒಳ್ಳೆಯದು. ಅಲ್ಲದೆ, ಇಂದು ಯಾವುದೇ ಹಣಕಾಸಿನ ವಹಿವಾಟು ಮಾಡದಿರುವುದೇ ಕ್ಷೇಮ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ನಿಮಗೆ ಉತ್ತಮ ದಿನ. ಕೆಲಸದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಉದ್ಯೋಗವಾಗಿರಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಕೆಲಸ ಸರಾಗವಾಗಿ ಪೂರ್ಣಗೊಳ್ಳುತ್ತದೆ. ಇದ್ದಕ್ಕಿದ್ದಂತೆ ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುವಂಥ ಕೆಲವು ಸುದ್ದಿಗಳನ್ನು ನೀವು ಪಡೆಯಬಹುದು.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 9

ಶುಭ ಸಮಯ: ಮಧ್ಯಾಹ್ನ 2:30 ರಿಂದ 7 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಕೆಲಸದ ಜೊತೆಗೆ, ನೀವು ನಿಮ್ಮ ವಿಶ್ರಾಂತಿಗೆ ಸಹ ಗಮನ ಕೊಡಬೇಕು. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ. ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಮತ್ತು ಸುಲಭವಾಗಿ ಪೂರ್ಣಗೊಳ್ಳುತ್ತದೆ. ನೀವು ಪಾಲುದಾರರಲ್ಲಿ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಿ. ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುವವರು ಇಂದು ಉತ್ತಮ ಲಾಭ ಗಳಿಸಬಹುದು. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ. ಹೊಸ ಆದಾಯದ ಮೂಲವನ್ನು ಪಡೆಯುವ ಸಾಧ್ಯತೆಯಿದೆ.

ಕುಟುಂಬ ಜೀವನದ ಬಗ್ಗೆ ಮಾತನಾಡುವುದಾದರೆ, ಕುಟುಂಬದಲ್ಲಿ ಪ್ರೀತಿ, ಸಂತೋಷ ಇರುತ್ತದೆ. ನೀವು ಪೋಷಕರಿಂದ ಪ್ರೀತಿ ಮತ್ತು ಆಶೀರ್ವಾದ ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚು ಸಮಯ ಕಳೆಯುವಿರಿ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 18

ಶುಭ ಸಮಯ: ಸಂಜೆ 4 ರಿಂದ 10 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಇಂದು ಉದ್ಯೋಗಿಗಳಿಗೆ ಶುಭ ದಿನ. ಇಂದು ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ವ್ಯಾಪಾರಿಗಳು ಇಂದು ಉತ್ತಮ ವ್ಯವಹಾರವನ್ನು ಮಾಡಲು ಅವಕಾಶವನ್ನು ಪಡೆಯಬಹುದು. ನೀವು ದೊಡ್ಡ ಉದ್ಯಮಿಯಾಗಿದ್ದರೆ ನೀವು ಒಂದು ಪ್ರಮುಖ ವ್ಯವಹಾರ ಪ್ರಕರಣದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ಇಂದು ಕುಟುಂಬ ಜೀವನದಲ್ಲಿ ದೊಡ್ಡ ಬದಲಾವಣೆಯಾಗಬಹುದು. ನೀವು ಭಾವನಾತ್ಮಕವಾಗಿ ಸದೃಢರಾಗಿರಬೇಕು. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಎಷ್ಟು ಪ್ರಾಮಾಣಿಕವಾಗಿದ್ದಾರೆ ಎಂಬುದನ್ನು ನೀವು ಅರಿತುಕೊಳ್ಳುವಿರಿ. ದಿನದ ಎರಡನೇ ಭಾಗದಲ್ಲಿ ಆರ್ಥಿಕ ಲಾಭದ ಸಾಧ್ಯತೆಯಿದೆ. ಇಂದು ನೀವು ಮಕ್ಕಳಿಗಾಗಿ ಸ್ವಲ್ಪ ಶಾಪಿಂಗ್ ಮಾಡಬಹುದು. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಆರೋಗ್ಯವು ಈಗಾಗಲೇ ಹದಗೆಟ್ಟಿದ್ದರೆ, ನಿರ್ಲಕ್ಷ್ಯವು ಇನ್ನಷ್ಟು ಸಮಸ್ಯೆಯನ್ನುಂಟುಮಾಡಬಹುದು.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 29

ಶುಭ ಸಮಯ: ಮಧ್ಯಾಹ್ನ 1 ರಿಂದ 10 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಇಂದು ನೀವು ಅಸೂಯೆ ಪಡುವ ವ್ಯಕ್ತಿಯೊಂದಿಗೆ ಮುಖಾಮುಖಿಯಾಗುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕು, ಹಾಗೆಯೇ ನಿಮ್ಮ ನಡವಳಿಕೆಯನ್ನು ಸಮತೋಲನದಲ್ಲಿರಿಸಿಕೊಳ್ಳಬೇಕು. ನಿಮ್ಮ ಮನಸ್ಸಿನಲ್ಲಿ ಸ್ವಲ್ಪ ಗೊಂದಲಗಳಿದ್ದರೆ ಧಾರ್ಮಿಕ ಪುಸ್ತಕವನ್ನು ಓದಿ, ಅದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ನೀವು ಸಕಾರಾತ್ಮಕತೆಯಿಂದ ಇರಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ಸಾಕಷ್ಟು ಕೆಲಸ ಇರುತ್ತದೆ. ಇಂದು, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲೇ ಬೇಕಾದ ಒತ್ತಡವಿರುತ್ತದೆ. ವ್ಯಾಪಾರಿಗಳಿಗೆ ಇಂದು ಮಿಶ್ರ ಫಲಿತಾಂಶ ಸಿಗುತ್ತದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಿ.

ನೀವು ನಿಮ್ಮ ಕುಟುಂಬ ಜೀವನದ ಬಗ್ಗೆಯೂ ಕೆಲಸದಷ್ಟೇ ಗಮನ ಹರಿಸಬೇಕು, ವಿಶೇಷವಾಗಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ದೇಹದ ಯಾವುದೇ ಭಾಗದಲ್ಲಿ ನೋವಿನ ಅನುಭವ ಆಗಬಹುದು. ಆರೋಗ್ಯಕ್ಕಾಗಿ ನೀವು ಪ್ರತಿದಿನ ಬೆಳಗ್ಗೆ ಎದ್ದು ಲಘು ವ್ಯಾಯಾಮ ಮಾಡಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 34

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಕಳೆದ ಕೆಲವು ದಿನಗಳಿಂದ, ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ನಿರಂತರ ಏರಿಳಿತ ಉಂಟಾಗಿರಬಹುದು, ಹಾಗಾಗಿ ಇಂದು ನೀವು ಹಣದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ನೀವು ಹೆಚ್ಚು ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ದಿನವು ಕಠಿಣವಾಗಿರುತ್ತದೆ. ಕಚೇರಿಯಲ್ಲಿ ಹಿರಿಯರು ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಹೊಂದಬಹುದು. ಇದಲ್ಲದೆ, ನೀವು ಸಹೋದ್ಯೋಗಿಯೊಂದಿಗೆ ಮನಸ್ತಾಪವನ್ನೂ ಮಾಡಿಕೊಳ್ಳಬಹುದು. ವ್ಯಾಪಾರಿಗಳು ಉತ್ತಮ ಲಾಭ ಪಡೆಯಬಹುದು. ನಿಮ್ಮ ವ್ಯವಹಾರದ ಬಗ್ಗೆ ನೀವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದರೆ, ಎಚ್ಚರಿಕೆಯಿಂದ ಯೋಚಿಸಿದ ನಂತರವಷ್ಟೇ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಿ.

ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ಆದಾಗ್ಯೂ, ಇಂದು ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಿಲ್ಲ. ಸಂಗಾತಿಯೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಇಂದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಿಶ್ರ ಫಲ.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 5

ಶುಭ ಸಮಯ: ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ನೀವು ಎಷ್ಟು ಬೇಗ ಕೋಪಗೊಳ್ಳುತ್ತೀರೋ ಅಷ್ಟು ಬೇಗ ಅದು ಶಾಂತವಾಗುತ್ತದೆ. ನೀವು ಕೋಪದಲ್ಲಿ ಆಡಿದ ಮಾತುಗಳಿಂದ ಕೊನೆಗೆ ನೀವೇ ವಿಷಾದಿಸುವಂತೆ ಆಗಬಹುದು. ಹಾಗಾಗಿ ಎಚ್ಚರವಹಿಸಿ. ಕೆಲಸದ ಬಗ್ಗೆ ಮಾತನಾಡುತ್ತಾ, ಉದ್ಯೋಗದಲ್ಲಿರುವವರು ತಮ್ಮ ವೃತ್ತಿಜೀವನದಲ್ಲಿ ಹೊಸ ತಿರುವನ್ನು ಕಂಡುಕೊಳ್ಳುವಂಥ ವಿಶೇಷ ಅವಕಾಶವನ್ನು ಪಡೆಯಬಹುದು. ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ ಮತ್ತು ಶ್ರಮಪಟ್ಟು ಕೆಲಸ ಮಾಡಿ. ಕಚೇರಿಯಲ್ಲಿ, ಮೇಲಾಧಿಕಾರಿಗಳು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ನೀವು ಅದನ್ನು ನಿರ್ಲಕ್ಷಿಸಬಾರದು. ವ್ಯಾಪಾರಿಗಳು ಇಂದು ಉತ್ತಮ ಲಾಭ ಪಡೆಯಬಹುದು. ಆಸ್ತಿ ವ್ಯವಹಾರಕ್ಕೆ ಸಂಬಂಧಿತ ಕೆಲಸ ಮಾಡುವವರು ದೊಡ್ಡ ಯಶಸ್ಸನ್ನು ಪಡೆಯಬಹುದು. ಆರ್ಥಿಕ ದೃಷ್ಟಿಯಿಂದ, ಇಂದು ಕೆಲವು ಸುಧಾರಣೆಗಳು ಸಾಧ್ಯ. ಬರಬೇಕಿದ್ದ ಹಣ ಸಿಗಬಹುದು. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 7

ಶುಭ ಸಮಯ: ಮಧ್ಯಾಹ್ನ 1 ರಿಂದ 3 ಗಂಟೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇಂದು ನಿಮಗೆ ಮಿಶ್ರ ಫಲ. ಬಹಳ ಯೋಚನೆ ಮಾಡಿ ಮಾತುಗಳನ್ನಾಡಿ. ಇಲ್ಲದಿದ್ದರೆ ನಿಮ್ಮ ಮಾತುಗಳೇ ನಿಮಗೆ ತೊಂದರೆ ಉಂಟು ಮಾಡಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ದಿನವು ಸಾಮಾನ್ಯವಾಗಿರುತ್ತದೆ. ನಿಮ್ಮ ಕೆಲಸವನ್ನು ನೀವು ಕಠಿಣ ಪರಿಶ್ರಮದಿಂದ ಪೂರ್ಣಗೊಳಿಸಿ. ನೀವು ವ್ಯಾಪಾರ ಮಾಡುವವರಾಗಿದ್ದರೆ ಇಂದು ಹೂಡಿಕೆಗೆ ಅವಕಾಶವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿರುತ್ತದೆ. ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ನೀವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳದಿರುವುದು ಉತ್ತಮ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯಿಂದ ಇರುವಿರಿ.

ಉತ್ತಮ ಬಣ್ಣ: ತಿಳಿ ಹಳದಿ

ಶುಭ ಸಂಖ್ಯೆ: 11

ಶುಭ ಸಮಯ: ಸಂಜೆ 4:30 ರಿಂದ 10 ರವರೆಗೆ

ಧನು ರಾಶಿ:

ಧನು ರಾಶಿ:

ಉದ್ಯೋಗದಲ್ಲಿರುವವರು, ಇಂದಿನ ಕಾರ್ಯಗಳನ್ನು ಪೂರ್ವಯೋಜಿತವಾಗಿಸಿ. ಇಂದು ಕಚೇರಿಯಲ್ಲಿ ಕೆಲಸ ಮಾಡುವ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಸೋಮಾರಿತನವನ್ನು ತೋರಿಸಬೇಡಿ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಮತ್ತು ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ, ಹೆಚ್ಚು ಚಿಂತಿಸದೆ ತಾಳ್ಮೆಯಿಂದ ಇರಿ. ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ.

ಸಂಗಾತಿಯೊಂದಿಗೆ ಕೆಲವು ತಾತ್ವಿಕ ವ್ಯತ್ಯಾಸಗಳು ಉಂಟಾಗಬಹುದು. ಅನಗತ್ಯ ಒತ್ತಡವನ್ನು ತೆಗೆದುಕೊಳ್ಳುವ ಮೂಲಕ, ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಆದ್ದರಿಂದ ನೀವು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದಿರುವುದು ಉತ್ತಮ, ಆದರೆ ಪ್ರೀತಿ ಮತ್ತು ಶಾಂತಿಯಿಂದ ಸಂಗಾತಿಯೊಂದಿಗಿನ ಮನಸ್ತಾಪವನ್ನು ನಿಭಾಯಿಸಲು ಪ್ರಯತ್ನಿಸಿ. ಹಣದ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 11

ಶುಭ ಸಮಯ: ಬೆಳಗ್ಗೆ 4:45 ರಿಂದ 10:25 ರವರೆಗೆ

ಮಕರ ರಾಶಿ:

ಮಕರ ರಾಶಿ:

ಆರ್ಥಿಕ ದೃಷ್ಟಿಯಿಂದ ನೀವು ಜಾಗರೂಕರಾಗಿರಬೇಕು. ನಿಮ್ಮ ಹೆಚ್ಚುತ್ತಿರುವ ವೆಚ್ಚಗಳನ್ನು ನೀವು ನಿಯಂತ್ರಿಸದಿದ್ದರೆ, ನೀವು ಶೀಘ್ರದಲ್ಲೇ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿರುವವರು, ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಬಾಸ್ ಮುಂದೆ ಹಾಗೆಯೇ ಕಾಯ್ದುಕೊಳ್ಳಲು ಪ್ರಯತ್ನಿಸಿ, ಹಾಗೆಯೇ ನೀವು ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಸಣ್ಣ ವ್ಯಾಪಾರಿಗಳು ಲಾಭ ಪಡೆಯಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಮತ್ತೆ ಅದೇ ಉತ್ಸಾಹ ಮತ್ತು ಸಂತೋಷವನ್ನು ನೀವು ಬಯಸಿದರೆ, ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಕೊಡಿ. ನಿಮ್ಮ ಪ್ರೀತಿಪಾತ್ರರ ಇಷ್ಟಗಳು ಮತ್ತು ಇಷ್ಟವಲ್ಲದ ವಿಷಯಗಳ ಬಗ್ಗೆಯೂ ಗಮನವಹಿಸಬೇಕು. ಇಂದು ನೀವು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ. ಕೆಲವು ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಹೊಂದುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ದಿನ ಸಾಮಾನ್ಯವಾಗಿದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 28

ಶುಭ ಸಮಯ: ಮಧ್ಯಾಹ್ನ 3 ರಿಂದ 7:55 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಇತರರ ಮಾತುಗಳನ್ನು ಹೆಚ್ಚಾಗಿ ಕೇಳಬೇಡಿ. ಅದರ ಬದಲು ನಿಮ್ಮ ಪ್ರಮುಖ ಕೆಲಸದ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮಗೆ ಒಳ್ಳೆಯದು ಮತ್ತು ಕೆಟ್ಟದ್ದು ಯಾವುದು ಎಂಬುದು ತಿಳಿದಿದೆ. ಹಾಗಾಗಿ ಎಚ್ಚರವಹಿಸಿ. ಉದ್ಯೋಗಸ್ಥರು ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಬೇಕಾಗುತ್ತದೆ. ನೀವು ಇಂದು ತುಂಬಾ ಕಾರ್ಯನಿರತರಾಗಿರುತ್ತೀರಿ. ಅದೇ ಸಮಯದಲ್ಲಿ, ವ್ಯಾಪಾರಿಗಳು ಇಂದು ಬಹಳ ಕಷ್ಟಪಟ್ಟು ಕೆಲಸ ಮಾಡಬೇಕಾದೀತು. ಸ್ಥಗಿತಗೊಂಡ ಯಾವುದೇ ಕೆಲಸವನ್ನು ಪುನರ್ರಾರಂಭಿಸಲು ನೀವು ಶ್ರಮಿಸುತ್ತೀರಿ. ಆರ್ಥಿಕವಾಗಿ ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ. ಒಂದು ಕಡೆ, ನೀವು ಇಂದು ಹೆಚ್ಚುವರಿ ಸಂಪಾದಿಸಬಹುದು, ಮತ್ತೊಂದೆಡೆ ವೆಚ್ಚವೂ ಕೂಡ ಹೆಚ್ಚಾಗುವ ಸಾಧ್ಯವಿದೆ.

ಮನೆಯ ವಾತಾವರಣ ಶಾಂತವಾಗಿರುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಕುಳಿತು ಕೆಲಸ ಮಾಡುವುದನ್ನು ಮುಂದುವರಿಸಿದರೆ, ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಕೆಲಸದ ನಡುವೆ ನೀವು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಉತ್ತಮ.

ಉತ್ತಮ ಬಣ್ಣ: ಕಡುಗೆಂಪು

ಶುಭ ಸಂಖ್ಯೆ: 34

ಶುಭ ಸಮಯ: ಸಂಜೆ 4:05 ರಿಂದ 9 ರವರೆಗೆ

 ಮೀನ ರಾಶಿ:

ಮೀನ ರಾಶಿ:

ಇಂದು ವ್ಯಾಪಾರಿಗಳಿಗೆ ಸಾಮಾನ್ಯ ದಿನ. ನೀವು ದೊಡ್ಡ ಲಾಭ ಗಳಿಸಲು ಬಯಸಿದರೆ ನಿಮ್ಮ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಉದ್ಯೋಗದಲ್ಲಿರುವವರು ಇಂದು ಆಲಸ್ಯವನ್ನು ತಪ್ಪಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನೀವು ಇಂದು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದ್ದರೆ, ನೀವು ಮಾನಸಿಕವಾಗಿ ಸದೃಢರಾಗಿರಬೇಕು ಇದರಿಂದ ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಸಂಗಾತಿಯ ನಡವಳಿಕೆಯು ನಿಮ್ಮನ್ನು ಖಿನ್ನತೆಗೆ ಒಳಪಡಿಸುತ್ತದೆ. ಹೀಗಿರುವಾಗ ಅವರೊಂದಿಗೆ ಮಾತನಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಇದಲ್ಲದೆ, ನೀವು ಅವರಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ಮಿಶ್ರ ದಿನವಾಗಿರುತ್ತದೆ.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 24

ಶುಭ ಸಮಯ: ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30 ರವರೆಗೆ

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋ ಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

English summary

Dina Bhavishya 12 November 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Thursday, November 12, 2020, 4:00 [IST]
X