For Quick Alerts
ALLOW NOTIFICATIONS  
For Daily Alerts

Today Rashi Bhavishya: ಶನಿವಾರದ ದಿನ ಭವಿಷ್ಯ: ನಿಮ್ಮ ರಾಶಿಫಲ ಹೇಗಿದೆ ನೋಡಿ

|

ಬದುಕಿನಲ್ಲಿ ಎಲ್ಲಾ ಘಟನೆಗಳು ನಾವು ಅಂದು ಕೊಂಡಂತೆ ಇರಲ್ಲ. ಕೆಲವೊಂದು ಅನಿರೀಕ್ಷಿತ ತಿರುವುಗಳು ಉಂಟಾಗುವುದು. ಕೆಲವೊಮ್ಮೆ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಆ ದಿನ ಅದ್ಭುತವಾಗಿರುತ್ತದೆ, ಇನ್ನು ಕೆಲವು ದಿನ ನಮಗೆ ಇಷ್ಟವಾಗದ ಕೆಲವೊಂದು ವಿಷಯಗಳಿರುತ್ತದೆ. ನಮ್ಮ ದಿನ ಹೇಗಿರುತ್ತದೆ ಎಂಬುವುದು ನಮ್ಮ ರಾಶಿಫಲವನ್ನು ಅವಲಂಬಿಸಿದೆ ಎಂದು ಜ್ಯೋತಿಷ್ಯ ಹೇಳಿದೆ.

ಶನಿವಾರ ಶನಿ ದೇವ, ಆಂಜನೇಯ ಸ್ವಾಮಿಯನ್ನು ಮನದಲ್ಲಿ ನೆನೆದು ಜ್ಯೋತಿಷ್ಯಪ್ರಕಾರ ಈ ದಿನ ಹೇಗಿದೆ ಎಂದು ನೋಡೋಣ:

ಸಂವತ್ಸರ: ಪ್ಲವನಾಮ
ಆಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಪಂಚಮಿ
ನಕ್ಷತ್ರ: ಬೆಳಗ್ಗೆ 11:23ರವರೆಗೆ ಸ್ವಾತಿ ನಂತರ ವೈಶಾಖ
ರಾಹುಕಾಲ: ಬೆಳಿಗ್ಗೆ 09.20ರಿಂದ 10:52ರವರೆಗೆ
ಯಮಗಂಡಕಾಲ: ಮಧ್ಯಾಹ್ನ 01:55 ರಿಂದ 03:27 ರವರೆಗೆ
ಗುಳಿಕಕಾಲ: ಬೆಳಗ್ಗೆ 06:16ರಿಂದ 07:48ವರೆಗೆ
ದುರ್ಮುಹೂರ್ತ: ಬೆಳಗ್ಗೆ 06:16ರಿಂದ 07:54ರವರೆಗೆ

ಸೂರ್ಯೋದಯ: ಬೆಳಗ್ಗೆ 6.16ಕ್ಕೆ
ಸೂರ್ಯಾಸ್ತ: ಸಂಜೆ 6.31ಕ್ಕೆ

ಮೇಷ ರಾಶಿ

ಮೇಷ ರಾಶಿ

ಈ ದಿನ ನಿಮಗೆ ಮಿಶ್ರ ಫಲ. ಮನೆಯಲ್ಲಾಗಲಿ ಅಥವಾ ಕೆಲಸದಲ್ಲಾಗಲಿ ನೀವು ಬಹಳ ಜಾಗರೂಕರಾಗಿರಲು ಸೂಚಿಸಲಾಗಿದೆ. ನೀವು ನಿರೀಕ್ಷಿಸಿದಷ್ಟು ಫಲಿತಾಂಶವನ್ನು ಪಡೆಯದಿದ್ದರೆ ನೀವು ತಾಳ್ಮೆಯಿಂದಿರಬೇಕು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಇಲ್ಲದಿದ್ದರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ನೀವು ಉದ್ಯೋಗಿಯಾಗಿದ್ದರೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಹುಷಾರಾಗಿ ವ್ಯವಹರಿಸಿ. ನಿಮ್ಮ ಸಮಯವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಮತ್ತು ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸುವುದು ಉತ್ತಮ. ವ್ಯಾಪಾರ ಮಾಡುವವರಿಗೆ ಇಂದು ಸ್ವಲ್ಪ ಸಮಾಧಾನ ತರಬಹುದು. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಪ್ರಮುಖ ಅಡಚಣೆಯನ್ನು ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಸಾಕಷ್ಟು ನೀರು ಕುಡಿಯಿರಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 15

ಒಳ್ಳೆಯ ಸಮಯ: ಮಧ್ಯಾಹ್ನ 2:15ನಿಂದ ರಾತ್ರಿ 8:10ರವರೆಗೆ

 ವೃಷಭ ರಾಶಿ

ವೃಷಭ ರಾಶಿ

ನೀವು ಯಾವುದೇ ಹೊಸ ಕೆಲಸವನ್ನು ಪಾಲುದಾರಿಕೆಯಲ್ಲಿ ಆರಂಭಿಸಲು ಬಯಸಿದರೆ, ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ನೀವು ನಂತರ ವಿಷಾದಿಸುವಂತಹ ಅವಸರದಲ್ಲಿ ಏನನ್ನೂ ಮಾಡಬೇಡಿ. ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರು ಮೇಲಧಿಕಾರಿಯ ಕೋಪವನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ಅಜಾಗರೂಕತೆಯಿಂದ ದೊಡ್ಡ ನಷ್ಟವಾಗುವ ಸಾಧ್ಯತೆ ಇದೆ. ನೀವು ಜಾಗರೂಕರಾಗಿರಲು ಸೂಚಿಸಲಾಗಿದೆ. ಹಣಕಾಸಿನ ದೃಷ್ಟಿಯಿಂದ, ಇಂದು ನಿಮಗೆ ಉತ್ತಮ ದಿನವೆಂದು ಸಾಬೀತಾಗುತ್ತದೆ. ನಿಮ್ಮ ಆದಾಯದಲ್ಲಿ ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನೀವು ಪೋಷಕರ ಆಶೀರ್ವಾದವನ್ನು ಪಡೆಯುತ್ತೀರಿ. ನಿಮ್ಮ ಬಗ್ಗೆ ಸಂಗಾತಿಯ ವರ್ತನೆಯು ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂದು ನಿಮಗೆ ಅನಿಸುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ, ತಡರಾತ್ರಿಯವರೆಗೂ ಕೆಲಸ ಮಾಡುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 31

ಅದೃಷ್ಟ ಸಮಯ: ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ನೀವು ಇಂದು ಕಚೇರಿಯಲ್ಲಿ ತುಂಬಾ ಕಷ್ಟಪಡಬೇಕಾಗಬಹುದು. ಜವಾಬ್ದಾರಿಗಳ ಹೊರೆ ನಿಮ್ಮ ಮೇಲೆ ಹೆಚ್ಚಾಗಿರುತ್ತದೆ, ವಿಶೇಷವಾಗಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಯನ್ನು ಒಪ್ಪಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ನಿರಾಶೆಗೊಳಿಸದಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಸಣ್ಣ ಉದ್ಯಮಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆ ಸಾಧ್ಯ. ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ ಮನೆಯ ಹಿರಿಯರೊಂದಿಗೆ ಸಾಮರಸ್ಯ ಕ್ಷೀಣಿಸುವ ಸಾಧ್ಯತೆಯಿದೆ. ನೀವು ಬುದ್ಧಿವಂತಿಕೆಯಿಂದ ಮತ್ತು ಶಾಂತವಾಗಿ ವರ್ತಿಸುವಂತೆ ಸೂಚಿಸಲಾಗಿದೆ.

ನೀವು ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರು ನಿಮಗೆ ಎಷ್ಟು ಸ್ಪೆಷಲ್ ಎಂದು ಅವರಿಗೆ ಅನಿಸುವಂತೆ ಮಾಡಿ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಇಂದು ನಿಮಗೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು. ತಣ್ಣನೆಯ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 11

ಅದೃಷ್ಟ ಸಮಯ: ಬೆಳಿಗ್ಗೆ 6:45 ರಿಂದ 10:25 ರವರೆಗೆ

 ಕರ್ಕ ರಾಶಿ

ಕರ್ಕ ರಾಶಿ

ಕಚೇರಿಯಲ್ಲಿ ಒಂದು ಮಹತ್ವದ ಸಭೆ ನಡೆಯಬಹುದು. ನೀವು ಉನ್ನತ ಅಧಿಕಾರಿಗಳೊಂದಿಗೆ ದೊಡ್ಡ ಚರ್ಚೆಯನ್ನು ನಡೆಸುವಿರಿ. ನಿಮ್ಮ ಭಾಗವನ್ನು ನೀವು ಮುಕ್ತವಾಗಿ ಮತ್ತು ಪೂರ್ಣ ವಿಶ್ವಾಸದಿಂದ ಪ್ರಸ್ತುತಪಡಿಸಿದರೆ ಉತ್ತಮ. ವ್ಯಾಪಾರಿಗಳು ಇಂದು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಇಂದು ನೀವು ದೊಡ್ಡ ಮತ್ತು ಪ್ರಮುಖ ಕ್ಲೈಂಟ್‌ನೊಂದಿಗೆ ಸಂಪರ್ಕ ಸಾಧಿಸಬಹುದು. ನಿಮ್ಮ ವ್ಯವಹಾರವು ಹೊಸ ದಿಕ್ಕಿನಲ್ಲಿ ಚಲಿಸುತ್ತದೆ. ಇದೆಲ್ಲವೂ ನಿಮ್ಮ ಶ್ರಮದ ಫಲಿತಾಂಶ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ವಾತಾವರಣವು ಹರ್ಷದಾಯಕವಾಗಿರುತ್ತದೆ. ಇಂದು ನೀವು ಕುಟುಂಬ ಸದಸ್ಯರೊಂದಿಗೆ ಮೋಜು ಮಾಡಲು ಅವಕಾಶವನ್ನು ಪಡೆಯಬಹುದು, ವಿಶೇಷವಾಗಿ ಬಹಳ ಸಮಯದ ನಂತರ, ಇಂದು ನೀವು ಮಕ್ಕಳೊಂದಿಗೆ ಉತ್ತಮ ದಿನವನ್ನು ಕಳೆಯುತ್ತೀರಿ. ಹಣದ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವೂ ಈ ದಿನ ಚೆನ್ನಾಗಿರುತ್ತದೆ.

ಅದೃಷ್ಟ ಬಣ್ಣ: ಗಾಢ ಹಳದಿ

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಸಂಜೆ 4:05 ರಿಂದ ರಾತ್ರಿ 9

ಸಿಂಹ ರಾಶಿ

ಸಿಂಹ ರಾಶಿ

ಉದ್ಯೋಗಿಗಳು ಈ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕಚೇರಿಯಲ್ಲಿ ಹೆಚ್ಚಿನ ಸ್ಪರ್ಧೆ ಇರುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಪ್ರಗತಿಗೆ ತಡೆಗಟ್ಟಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ಇಂದು ಸವಾಲಿನ ದಿನವಾಗಿದೆ. ಪಾಲುದಾರರೊಂದಿಗಿನ ಬಾಂಧವ್ಯವು ಹದಗೆಡಬಹುದು, ಜೊತೆಗೆ ವ್ಯವಹಾರದಲ್ಲಿ ನಷ್ಟದ ಬಲವಾದ ಸಾಧ್ಯತೆಯಿದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ನಿಮ್ಮ ಪ್ರಿಯಕರನೊಂದಿಗೆ ನೀವು ಇಂದು ಹೆಚ್ಚುವರಿ ಸಮಯವನ್ನು ಕಳೆಯಬಹುದು. ನಿಮ್ಮ ವೈವಾಹಿಕ ಜೀವನ ಸರಿಯಾಗಿಡಲು ನಿಮ್ಮ ನಡವಳಿಕೆಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಹಣದ ಬಗ್ಗೆ ಹೇಳುವುದಾದರೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಬಯಸಿದರೆ, ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನವಾಗುವ ಸಾಧ್ಯತೆಯಿದೆ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 12:30

ಕನ್ಯಾ ರಾಶಿ

ಕನ್ಯಾ ರಾಶಿ

ಈ ದಿನ ನಿಮಗೆ ತುಂಬಾ ಆಯಾಸಕರವಾಗಿರುತ್ತದೆ. ನೀವು ದೈಹಿಕವಾಗಿ ಸ್ವಲ್ಪ ದೌರ್ಬಲ್ಯವನ್ನು ಅನುಭವಿಸಬಹುದು, ಹಾಗೆಯೇ, ನೀವು ಇಂದು ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರುವುದಿಲ್ಲ. ನೀವು ಕೆಲಸ ಮಾಡಿದರೆ ಇಂದು ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿರುತ್ತದೆ. ನೀವು ಅನೇಕ ಕಾರ್ಯಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾಗಬಹುದು. ಮತ್ತೊಂದೆಡೆ, ವ್ಯಾಪಾರಕ್ಕೆ ಸಂಬಂಧಿಸಿದ ಜನರು ಇಂದು ಸಾಕಷ್ಟು ಹೋರಾಟಗಳ ನಂತರವೂ ಉತ್ತಮ ಪ್ರಯೋಜನವನ್ನು ಪಡೆಯುವುದಿಲ್ಲ. ಆದರೆ ನಿರಾಸೆ ಪಡುವ ಅಗ್ಯತವಿಲ್ಲ. ವ್ಯಾಪಾರದಲ್ಲಿ ಏರಿಳಿತಗಳಿವೆ. ನಿಮ್ಮ ಕಡೆಯಿಂದ ಪ್ರಯತ್ನಿಸುತ್ತಿರಿ, ಶೀಘ್ರದಲ್ಲೇ ನೀವು ಯಶಸ್ಸನ್ನು ಪಡೆಯುತ್ತೀರಿ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ತುಂಬಾ ರೊಮ್ಯಾಂಟಿಕ್ ಸಮಯವನ್ನು ಕಳೆಯುತ್ತೀರಿ. ನಿಮ್ಮ ಪ್ರೀತಿಪಾತ್ರರಿಂದ ನೀವು ಸುಂದರವಾದ ಉಡುಗೊರೆಯನ್ನು ಸಹ ಪಡೆಯಬಹುದು. ಆರ್ಥಿಕ ದೃಷ್ಟಿಕೋನದಿಂದ ಇಂದು ನಿಮಗೆ ಸರಾಸರಿ ದಿನವಾಗಲಿದೆ.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 5

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 7 ಗಂಟೆ

 ತುಲಾ ರಾಶಿ

ತುಲಾ ರಾಶಿ

ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಲಾಭದಾಯಕ ದಿನವಾಗಿದೆ. ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ ಮತ್ತು ನೀವು ದೊಡ್ಡ ಆರ್ಥಿಕ ಲಾಭಗಳನ್ನು ಗಳಿಸಬಹುದು, ವಿಶೇಷವಾಗಿ ಕಬ್ಬಿಣದ ವ್ಯಾಪಾರಿಗಳು, ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರು ಇಂದು ಕಚೇರಿಯಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ಸುದ್ದಿಯು ನಿಮ್ಮ ಪ್ರಗತಿಗೆ ಸಂಬಂಧಿಸಿರಬಹುದು. ನೀವು ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಕೌಟುಂಬಿಕ ಜೀವನದಲ್ಲಿ ಸನ್ನಿವೇಶಗಳು ಏರಿಳಿತಗಳಿಂದ ತುಂಬಿರುತ್ತವೆ. ಮನೆಯ ಸದಸ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಯೋಚಿಸದೆ ಮಾತನಾಡುವ ನಿಮ್ಮ ಅಭ್ಯಾಸವು ನಿಮಗೆ ಹತ್ತಿರವಿರುವವರ ಭಾವನೆಗಳನ್ನು ನೋಯಿಸಬಹುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಹಣದ ಬಗ್ಗೆ ಹೆಚ್ಚು ಚಿಂತಿಸುವುದನ್ನು ತಪ್ಪಿಸಿ. ನಿಮ್ಮ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಪರಿಹರಿಸಲಾಗುವುದು. ಆರೋಗ್ಯದ ವಿಷಯಗಳು ಚೆನ್ನಾಗಿರುತ್ತವೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 29

ಅದೃಷ್ಟ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಉದ್ಯೋಗದಲ್ಲಿರುವ ಜನರಿಗೆ ಇಂದು ಸವಾಲಿನ ದಿನವಾಗುವ ಸಾಧ್ಯತೆಯಿದೆ. ಬಾಸ್ ನಿಮ್ಮ ಕೆಲಸದ ಬಗ್ಗೆ ಹೆಚ್ಚು ತೃಪ್ತಿ ಹೊಂದಿರುವುದಿಲ್ಲ. ಉದ್ಯೋಗಗಳನ್ನು ಬದಲಾಯಿಸುವ ಆಲೋಚನೆಯನ್ನು ನೀವು ಹೊಂದಿರಬಹುದು. ಆದರೆ ನೀವು ಆತುರದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ನೀವು ನಿಮ್ಮ ಹೆಜ್ಜೆಯನ್ನು ಚಿಂತನಶೀಲವಾಗಿ ಮುಂದಿಟ್ಟರೆ ಉತ್ತಮ. ಆಸ್ತಿ ಸಂಬಂಧಿತ ಕೆಲಸ ಮಾಡುವವರು ಇಂದು ಜಾಗರೂಕರಾಗಿರಲು ಸೂಚಿಸಲಾಗಿದೆ. ನೀವು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ.

ಮನೆಯ ಸದಸ್ಯರ ಸಂಪೂರ್ಣ ಬೆಂಬಲ ಇರುತ್ತದೆ. ನಿಮ್ಮ ಹಿರಿಯ ಸಹೋದರನಿಂದ ನೀವು ವಿಶೇಷ ಉಡುಗೊರೆಯನ್ನು ಪಡೆಯಬಹುದು. ನೀವು ಅವಾಹಿತರಾಗಿದ್ದರೆ ಇಂದು ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಆರೋಗ್ಯದ ಬಗ್ಗೆ ಹೇಳುವುದಾದರೆ ನಿಮಗೆ ಶೀತ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಎದುರಾಗಬಹುದು.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

ಧನು ರಾಶಿ

ಧನು ರಾಶಿ

ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವಂತೆ ನಿಮಗೆ ಸೂಚಿಸಲಾಗಿದೆ. ಕೆಲಸದ ಜೊತೆಗೆ, ನಿಮ್ಮ ಕುಟುಂಬವೂ ನಿಮಗೆ ಅಷ್ಟೇ ಮುಖ್ಯ. ಇದಲ್ಲದೇ, ಮನೆಯ ಜವಾಬ್ದಾರಿಗಳ ಜೊತೆಗೆ, ನಿಮ್ಮ ಕೆಲಸದ ಬಗ್ಗೆಯೂ ನೀವು ಸಮಾನ ಗಮನವನ್ನು ನೀಡಬೇಕಾಗುತ್ತದೆ. ನೀವು ಇಂದು ಪೂರ್ಣಗೊಳಿಸಲು ಪ್ರಯತ್ನಿಸಬೇಕಾದ ಕೆಲವು ಪ್ರಮುಖ ಕಾರ್ಯಗಳಿವೆ. ತಂದೆಯ ಆರೋಗ್ಯ ಸರಿಯಿಲ್ಲದಿದ್ದರೆ ತಕ್ಷಣ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ನಿರ್ಲಕ್ಷ್ಯವೂ ದುಬಾರಿಯಾಗಬಹುದು. ಇಂದು ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ನಿಮ್ಮ ಬಜೆಟ್ ಅಸಮತೋಲಿತವಾಗಿರಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಸಿಹಿತಿಂಡಿಗಳನ್ನು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 4 ಗಂಟೆ

ಮಕರ ರಾಶಿ

ಮಕರ ರಾಶಿ

ನಿಮ್ಮ ಆತ್ಮವಿಶ್ವಾಸದ ಮಟ್ಟವು ತುಂಬಾ ಚೆನ್ನಾಗಿರುತ್ತದೆ, ಇದರಿಂದ ನೀವು ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ನೀವು ಕೆಲಸವನ್ನು ಮಾಡಿದರೆ, ನೀವು ಕಚೇರಿಯಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯಿಂದ ಬಹಳ ಪ್ರಭಾವಿತರಾಗಬಹುದು. ಚಿಲ್ಲರೆ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಗಳಿಸಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಯೋಚಿಸುತ್ತಿದ್ದರೆ, ಈ ಸಮಯವು ಅದಕ್ಕೆ ಅನುಕೂಲಕರವಾಗಿದೆ. ಹಣದ ಸ್ಥಾನವು ಬಲವಾಗಿ ಉಳಿಯುತ್ತದೆ. ಇಂದು ನೀವು ಕೆಲವು ಅಮೂಲ್ಯವಾದ ವಸ್ತುಗಳನ್ನು ಸಹ ಪಡೆಯಬಹುದು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಸಾಧ್ಯ. ನಿಮ್ಮ ಪ್ರೀತಿಪಾತ್ರರ ಅಸಭ್ಯ ವರ್ತನೆಯು ನಿಮ್ಮನ್ನು ಅತೃಪ್ತಿಗೊಳಿಸಬಹುದು. ನಿಮಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಇದ್ದರೆ, ನೀವು ಯಾವುದೇ ರೀತಿಯಲ್ಲೂ ಅಜಾಗರೂಕರಾಗಿರಬಾರದು.

ಅದೃಷ್ಟ ಬಣ್ಣ: ಆಕಾಶ

ಅದೃಷ್ಟ ಸಂಖ್ಯೆ: 38

ಅದೃಷ್ಟ ಸಮಯ: ಬೆಳಿಗ್ಗೆ 7:55 ರಿಂದ 10:30 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ನೀವು ದೊಡ್ಡ ಉದ್ಯಮಿಯಾಗಿದ್ದರೆ ಇಂದು ನಿಮಗೆ ತುಂಬಾ ಅದೃಷ್ಟದ ದಿನವಾಗಿದೆ. ನಿಮ್ಮ ಸ್ಥಗಿತಗೊಂಡಿರುವ ಕೆಲವು ಕೆಲಸಗಳನ್ನು ಪೂರ್ಣಗೊಳಿಸಬಹುದು, ಇದು ನಿಮ್ಮ ವ್ಯಾಪಾರವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರು ಕಚೇರಿಯಲ್ಲಿ ಬಾಕಿ ಇರುವ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಇಲ್ಲದಿದ್ದರೆ ಬಾಸ್‌ನ ಕೋಪ ಹೆಚ್ಚಾಗಬಹುದು ಮತ್ತು ನಿಮಗೆ ಸಮಸ್ಯೆಗಳು ಉದ್ಭವಿಸಬಹುದು. ಹಣದ ವಿಷಯದಲ್ಲಿ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಯೋಚಿಸದೆ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ನೀವು ಸಾಲ ತೆಗೆದುಕೊಂಡಿದ್ದರೆ ಅಥವಾ ಸಾಲ ಪಡೆದಿದ್ದರೆ, ಇಂದು ಅದನ್ನು ಮರುಪಾವತಿಸುವ ಒತ್ತಡವು ನಿಮ್ಮ ಮೇಲೆ ಹೆಚ್ಚಾಗಬಹುದು. ಕೌಟುಂಬಿಕ ಜೀವನದಲ್ಲಿ ವಿಷಯಗಳು ಸಾಮಾನ್ಯವಾಗಿ ಇರುತ್ತವೆ. ನಿಮ್ಮ ಹೆತ್ತವರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಕಿರಿಯ ಸಹೋದರರಿಗೆ ಮಾರ್ಗದರ್ಶನ ಮಾಡಲು ನಿಮಗೆ ಅವಕಾಶ ಸಿಗಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಚಹಾ, ಕಾಫಿಯ ಅತಿಯಾದ ಸೇವನೆಯನ್ನು ತಪ್ಪಿಸಬೇಕು.

ಅದೃಷ್ಟ ಬಣ್ಣ: ಗಾಢ ಗುಲಾಬಿ

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30

 ಮೀನ ರಾಶಿ

ಮೀನ ರಾಶಿ

ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಿಮ್ಮ ಪ್ರತಿಷ್ಠೆಗೆ ಕಳಂಕ ಉಂಟಾಗಬಹುದು. ನಿಮ್ಮ ಕೆಲಸದ ಮೇಲೆ ಗಮನಹರಿಸಿ ಮತ್ತು ಅನಗತ್ಯ ವಿಷಯಗಳಿಂದ ದೂರವಿರಿ. ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಯು ಇಂದು ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಸ್ಟಾಕ್ ಅನ್ನು ಹೆಚ್ಚಿಸಲು ಯೋಚಿಸುತ್ತಿದ್ದರೆ ಈ ಸಮಯವು ಅದಕ್ಕೆ ಸೂಕ್ತವಲ್ಲ. ಕೌಟುಂಬಿಕ ಜೀವನದಲ್ಲಿ ಕೆಲವು ಏರಿಳಿತಗಳು ಸಾಧ್ಯ. ಮನೆಯ ಸದಸ್ಯರಲ್ಲಿ ಸಮನ್ವಯದ ಕೊರತೆ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ವಿಷಯವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಲು ಪ್ರಯತ್ನಿಸಬೇಕು. ವೈವಾಹಿಕ ಜೀವನದ ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲದಿಂದಾಗಿ ನೀವು ಸಕಾರಾತ್ಮಕತೆಯನ್ನು ಅನುಭವಿಸುವಿರಿ. ಇಂದು ನೀವು ಬಿದ್ದು ಗಾಯಗೊಳ್ಳುವ ಸಾಧ್ಯತೆಯಿದೆ. ನೀವು ಶಾಂತವಾಗಿರುವುದು ಉತ್ತಮ.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಸಂಜೆ 6 ರಿಂದ 9:15 ಕ್ಕೆ

English summary

Dina Bhavishya -11 September 2021 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishya 11 September 2021 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Saturday, September 11, 2021, 5:00 [IST]
X