ಭಾನುವಾರದ ದಿನ ಭವಿಷ್ಯ: ಮಕರ ರಾಶಿಯವರೇ, ನೆಮ್ಮದಿಗಾಗಿ ಕೋಪ ನಿಯಂತ್ರಿಸಿ

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 11 October 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ಮಧ್ಯಾಹ್ನ ಅಕ್ಟೋಬರ್ ೧೨, 01:19ರವರೆಗೆ ಪುಷ್ಯ ನಂತರ ಆಶ್ಲೇಷ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಸಂಜೆ 04:28ರಿಂದ 05:55ರವರೆಗೆ
ಗುಳಿಕಕಾಲ: ಮಧ್ಯಾಹ್ನ 03:01ರಿಂದ 04:28ರವರೆಗೆ
ಯಮಗಂಡಕಾಲ: ಮಧ್ಯಾಹ್ನ 12:08ರಿಂದ 01:34ರವರೆಗೆ
ದುರ್ಮುಹೂರ್ತ: ಸಂಜೆ 04:23ರಿಂದ 05:09ರವರೆಗೆ

ಸೂರ್ಯೋದಯ: ಬೆಳಗ್ಗೆ 06:20ಕ್ಕೆ
ಸೂರ್ಯಾಸ್ತ: ಸಂಜೆ 05:55ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಇಂದು ಕಚೇರಿಯಲ್ಲಿ ಕೆಲಸ ಮಾಡುವವರಿಂದ, ನಿಮ್ಮ ಮೇಲಧಿಕಾರಿಗಳು ನಿಮ್ಮಿಂದ ಹೆಚ್ಚಿನ ಕೆಲಸವನ್ನು ನಿರೀಕ್ಷಿಸುತ್ತಾರೆ, ಆದ್ದರಿಂದ ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹಿರಿಯ ಅಧಿಕಾರಿಗಳ ಮಾತುಗಳನ್ನು ನಿರ್ಲಕ್ಷಿಸುವುದು ಬೇಡ ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವವಿರಲಿ. ನೀವು ಜೊತೆಗೂಡಿ ವ್ಯಾಪಾರ ಮಾಡಿದರೆ, ನಿಮ್ಮ ವ್ಯವಹಾರದ ಪಾಲುದಾರನನ್ನು ಚೆನ್ನಾಗಿ ನೋಡಿಕೊಳ್ಳಿ. ಅಶ್ಲೀಲತೆ ಪದಗಳನ್ನು ಬಳಸಬೇಡಿ. ಇಲ್ಲದಿದ್ದಲ್ಲಿ ಅನಗತ್ಯ ಚರ್ಚೆಗಳು ನಿಮಗೆ ಹಾನಿಯುಂಟು ಮಾಡಬಹುದು. ಮನೆಯ ವಾತಾವರಣ ಸಾಮಾನ್ಯವಾಗಿ ಇರಲಿದೆ. ನೀವು ಪೋಷಕರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ತಂದೆಯೊಂದಿಗೆ ಹಣದ ಬಗ್ಗೆ ನೀವು ಪ್ರಮುಖ ಚರ್ಚೆ ನಡೆಸಬಹುದು. ಆರೋಗ್ಯದ ವಿಷಯದಲ್ಲಿ, ಮಾನಸಿಕ ಒತ್ತಡವು ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಉತ್ತಮ ಬಣ್ಣ: ಕೆಂಗಂದು (ಮರೂನ್)

ಶುಭ ಸಂಖ್ಯೆ: 7

ಶುಭ ಸಮಯ: ಮಧ್ಯಾಹ್ನ 2 ರಿಂದ 4:20

ವೃಷಭ ರಾಶಿ:

ವೃಷಭ ರಾಶಿ:

ಕೆಲಸದ ಆರಂಭವು ಇಂದು ನಿಮಗೆ ಬಹಳ ಮುಖ್ಯವಾಗಲಿದೆ. ನೀವು ಕಚೇರಿಯಲ್ಲಿ ಕೆಲವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಸರಿಯಾದ ಸಮಯ ಇದು, ಆದ್ದರಿಂದ ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಕಷ್ಟಪಟ್ಟು ಕೆಲಸ ಮಾಡಿ ಮತ್ತು ನಿಮ್ಮ ಮೇಲಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ. ದೊಡ್ಡ ವ್ಯಾಪಾರಿಗಳಿಗೆ ಹಣ ಸಂಬಂಧಿತ ವಹಿವಾಟಿನಲ್ಲಿ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ನಿಮ್ಮ ಕೆಲಸವು ಪೆಟ್ರೋಲ್, ಡೀಸೆಲ್, ಮರಳು ಇತ್ಯಾದಿಗಳಿಗೆ ಸಂಬಂಧಿಸಿದ್ದಲ್ಲಿ ಇಂದು ನಿಮಗೆ ತುಂಬಾ ಲಾಭದಾಯಕ ದಿನ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಒತ್ತಡದಿಂದ ಕೂಡಿರುತ್ತದೆ. ಸಣ್ಣ ವಿಷಯಗಳ ಬಗ್ಗೆ ನಿಮ್ಮ ಮನಸ್ಥಿತಿಯು ಮನೆಯ ವಾತಾವರಣವನ್ನು ಇನ್ನಷ್ಟು ಹದಗೆಡಿಸುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನೀವು ತುಂಬಾ ಉಲ್ಲಾಸದಿಂದ ಇರುತ್ತೀರಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 7

ಶುಭ ಸಮಯ: ಮಧ್ಯಾಹ್ನ 12:15 ರಿಂದ 3:30 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬತಾಗುವುದು ಇಂದು ನೀವು ನಾಲಿಗೆಯನ್ನು ಹರಿಬಿಟ್ಟರೆ! ಇದು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. ನಿಮ್ಮ ಪದಗಳನ್ನು ತುಂಬಾ ಮಿತವಾಗಿ ಬಳಸಿ. ಇತರರ ವಿಷಯದಲ್ಲಿ, ಮೂಗು ತೂರಿಸುವುದನ್ನು ತಪ್ಪಿಸಿ ಮತ್ತು ನಿಮ್ಮ ಪಾಡಿಗೆ ನೀವು ವ್ಯವಹಾರವನ್ನು ಮುಂದುವರಿಸಿದರೆ ಉತ್ತಮ. ನೀವು ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಸಂಭಾಷಣೆ ನಡೆಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೋಪದಿಂದಲ್ಲ, ಬುದ್ಧಿವಂತಿಕೆಯಿಂದ ವರ್ತಿಸಬೇಕು. ಕೋಪವು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ನಿಮ್ಮ ಕೆಲಸವೂ ತೊಂದರೆಗೆ ಒಳಗಾಗಬಹುದು. ವ್ಯಾಪಾರ ಮಾಡುವ ಜನರು ತಮ್ಮ ಎಲ್ಲಾ ವ್ಯವಹಾರ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಹಣದ ಹರಿವು ಚೆನ್ನಾಗಿರುತ್ತದೆ. ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 28

ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ದಿನವು ಉತ್ತಮವಾಗಿದೆ. ನೀವು ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರಿದರೆ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ. ಅನಗತ್ಯವಾಗಿ ಚಿಂತೆ ಮಾಡುವುದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ, ಬದಲಿಗೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ನಿಮ್ಮ ನೌಕರಿಯಲ್ಲಿ ವರ್ಗಾವಣೆಯನ್ನು ಬಯಸಿದರೆ ಇನ್ನಷ್ಟು ಶ್ರಮಿಸಬೇಕು. ಇಂದು ಮಾಧ್ಯಮ ಜನರಿಗೆ ಶುಭ ದಿನವಾಗಲಿದೆ. ಸಣ್ಣ ವ್ಯಾಪಾರಿಗಳು ಆರ್ಥಿಕ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಉತ್ತಮ ಲಾಭಕ್ಕಾಗಿ ನೀವು ಕೆಲವು ಹೊಸ ಯೋಜನೆಗಳನ್ನು ಮಾಡಬೇಕಾಗಿದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ.

ಉತ್ತಮ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 20

ಶುಭ ಸಮಯ: ಬೆಳಗ್ಗೆ 9:40 ರಿಂದ ಮಧ್ಯಾಹ್ನ 12:25

ಸಿಂಹ ರಾಶಿ:

ಸಿಂಹ ರಾಶಿ:

ಯಾವುದೇ ಕಾರ್ಯ ಮಾಡುವಾಗಲೂ ಯೋಚನೆ ಮಾಡಿ ಮುಂದುವರೆಯಿದಿ. ನೀವು ಕಚೇರಿಯಲ್ಲಿ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ನೀವು ಆಫೀಸ್ ಗೆ ದಿನವೂ ತಡವಾಗಿ ಹೋಗುತ್ತಿದ್ದರೆ ನಿಮ್ಮ ಈ ಅಭ್ಯಾಸವನ್ನು ಆದಷ್ಟು ಬೇಗ ಸುಧಾರಿಸಲು ಪ್ರಯತ್ನಿಸಿ. ಅಲ್ಲದೆ, ಕೆಲಸದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ತೋರಬೇಡಿ. ಇಂದು ನೀವು ಸ್ವಲ್ಪ ಸೋಮಾರಿತನದಿಂದ ವರ್ತಿಸಬಹುದು. ನಿಮ್ಮ ಕಠಿಣ ಪರಿಶ್ರಮದಲ್ಲಿ ಏನಾದರೂ ಲೋಪವಾದರೆ ನಿಮಗೆ ಲಾಭವಾಗುವುದಿಲ್ಲ. ನೀವು ಲೇಖನ ಸಾಮಗ್ರಿಗಳೊಂದಿಗೆ ಕೆಲಸ ಮಾಡುವವರಾಗಿದ್ದರೆ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಮನೆಯಲ್ಲಿ ಶಾಂತಿಯುತ ವಾತಾವರಣ. ಪ್ರೀತಿ ಮತ್ತು ಐಕ್ಯತೆ ನಿಮ್ಮ ಕುಟುಂಬದ ಬಲ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಪ್ರೀತಿ ಹಾಗೂ ಬಾಂಧವ್ಯ ಬೆಳೆಯುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಇಂದು ನಿಮ್ಮಲ್ಲಿ ಆರೋಗ್ಯದಲ್ಲಿ ಸುಧಾರಣೆಯನ್ನು ನೋಡಬಹುದು.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 22

ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಇಂದು ನೀವು ಆತ್ಮವಿಶ್ವಾಸವೇ ನಿಮ್ಮ ಬಲವಾಗಲಿದೆ. ಉತ್ಸಾಹದಿಂದ ಇರುತ್ತೀರಿ. ಪ್ರತಿಕೂಲ ಸಂದರ್ಭಗಳಲ್ಲಿಯೂ ಸಹ, ನೀವು ಬುದ್ಧಿವಂತಿಕೆಯಿಂದ ವರ್ತಿಸುತ್ತೀರಿ ಮತ್ತು ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ಪಡೆಯುತ್ತೀರಿ ಇದರಿಂದ ನಿಮ್ಮ ಬಾಸ್ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಸಹೋದ್ಯೋಗಿಗಳ ಸಹಕಾರ ಉತ್ತಮವಾಗಿರುತ್ತದೆ. ವ್ಯಾಪಾರಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಆರ್ಥಿಕ ಲಾಭದ ಸಾಧ್ಯತೆ. ನೀವು ದೊಡ್ಡ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಸೂಕ್ತ ಸಲಹೆಯನ್ನು ತೆಗೆದುಕೊಳ್ಳುವ ಮೂಲಕ ನೀವು ಈ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಪೋಷಕರ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ. ಇಂದು, ನಿಮ್ಮ ತಂದೆಯಿಂದ ನೀವು ಉಡುಗೊರೆಯನ್ನು ಪಡೆಯಬಹುದು, ಅದನ್ನು ಸ್ವೀಕರಿಸಿದ ನಂತರ ನೀವು ತುಂಬಾ ಭಾವುಕರಾಗುತ್ತೀರಿ. ಆರೋಗ್ಯವಾಗಿರಲು, ಪ್ರತಿದಿನ ಬೆಳಗ್ಗೆ ವಾಕ್ ಹೋಗಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 11

ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ

ತುಲಾ ರಾಶಿ:

ತುಲಾ ರಾಶಿ:

ಇಂದು ಉದ್ಯೋಗಿಗಳಿಗೆ ಸಾಮಾನ್ಯ ದಿನವಾಗಲಿದೆ. ನೀವು ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಉತ್ತಮ ಲಾಭಕ್ಕಾಗಿ ವ್ಯಾಪಾರಸ್ಥರು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನೀವು ಹೊಸ ಸ್ಟಾಕ್ ಬಗ್ಗೆ ಯೋಚಿಸುತ್ತಿದ್ದರೆ ಸಮಯ ಇದನ್ನು ಇದಕ್ಕೆ ಅನುಕೂಲಕರವಾಗಿರುತ್ತದೆ. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ. ಹಠಾತ್ ಸಂಪತ್ತನ್ನು ಗಳಿಸಬಹುದು. ಹಣಕಾಸಿನ ಬಗ್ಗೆ ಕಾಳಜಿವಹಿಸಿದರೆ ಭಷ್ಯದಲ್ಲಿ ನೀವು ಖಂಡಿತವಾಗಿಯೂ ಉತ್ತಮ ಲಾಭ ಪಡೆಯುತ್ತೀರಿ. ಮನೆಯಲ್ಲಿ ಎಲ್ಲರೂ ಖುಷಿಯಾಗಿರುತ್ತಾರೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿ ನಿಮ್ಮೊಂದಿಗೆ ತುಂಬಾ ಸಂತೋಷವಾಗುತ್ತಾರೆ ಮತ್ತು ನೀವು ಅವರ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ವಿಷಯದಲ್ಲಿ ಇಂದು ಹೆಚ್ಚು ವಿಶೇಷವಾಗಿಲ್ಲ. ಹಾಗಾಗಿ ನೀವು ಅಸಡ್ಡೆ ಮಾಡದಿದ್ದರೆ ಉತ್ತಮ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 12

ಶುಭ ಸಮಯ: ಮಧ್ಯಾಹ್ನ 1:55 ರಿಂದ 7 ಗಂಟೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಸಣ್ಣ ವಿಷಯಗಳಲ್ಲಿ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಚ್ಚರ. ಮನೆಯ ವಾತಾವರಣವನ್ನು ಖುಷಿಯಾಗಿ ಇರಿಸಲು, ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ತಂದೆಯ ಆರೋಗ್ಯ ಇಂದು ಕ್ಷೀಣಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಚಿಂತೆ ಮಾಡುತ್ತೀರಿ. ನೀವು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ. ಹಣದ ದೃಷ್ಟಿಯಿಂದ ದಿನ ದುಬಾರಿಯಾಗಲಿದೆ. ಆದಾಯವನ್ನು ಮೀರಿದ ಖರ್ಚಿನ ಬಜೆಟ್ ನಿಮ್ಮದಾಗಬಹುದು. ಕೆಲಸದ ಬಗ್ಗೆ ಮಾತನಾಡುವುದಾದರೆ, ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳದಂತೆ ಸೂಚಿಸಲಾಗುತ್ತದೆ. ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡುವುದನ್ನು ಇಂದು ತಪ್ಪಿಸಬೇಕು. ಆರೋಗ್ಯದಲ್ಲಿ ಏರುಪೇರು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 3 ರವರೆಗೆ

ಧನು ರಾಶಿ:

ಧನು ರಾಶಿ:

ಕೆಲಸದ ವಿಷಯದಲ್ಲಿ ಇಂದು ಜಾಗರೂಕರಾಗಿರಿ, ಯಾರದ್ದೂ ಸಲಹೆ ಪಡೆಯದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಅಲ್ಲೊಂದು ಇಲ್ಲೊಂದು ಮಾತನಾಡುವಂಥ ಜನರು ನಿಮ್ಮ ಕಚೇರಿಯಲ್ಲಿದ್ದರೆ ಅವರಿಂದ ದೂರವಿರಿ. ಇಲ್ಲವಾದಲ್ಲಿ ಇದು ನಿಮ್ಮ ಕೆಲಸ ಮತ್ತು ವ್ಯಕ್ತಿತ್ವ ಎರಡರ ಮೇಲೂ ಪರಿಣಾಮ ಬೀರಬಹುದು. ವ್ಯಾಪಾರಸ್ಥರು ಇಂದು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನಿಮ್ಮ ಪ್ರಯಾಣವು ಸಾಕಷ್ಟು ದುಬಾರಿ ಮತ್ತು ಬಳಲಿಕೆಯಿಂದ ಕೂಡಿರುತ್ತದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಯೋಚಿಸಿ ಖರ್ಚು ಮಾಡಿದರೆ ಯಾವುದೇ ತೊಂದರೆ ಇರುವುದಿಲ್ಲ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲಕರ ದಿನವಾಗಿದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 19

ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3:30 ರವರೆಗೆ

ಮಕರ ರಾಶಿ:

ಮಕರ ರಾಶಿ:

ನೀವು ಇಂದು ಶಾಂತವಾಗಿ ದಿನವನ್ನು ಕಳೆಯಲು ಬಯಸಿದರೆ, ಮೊದಲು ನೀವು ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಕೋಪಗೊಳ್ಳುವ ಸ್ವಭಾವವು ಮನೆಯ ವಾತಾವರಣವನ್ನು ಹಾಳುಮಾಡುವುದಲ್ಲದೆ ನಿಮ್ಮ ಕೆಲಸವನ್ನು ಕೂಡ ಕೆಡಿಸುತ್ತದೆ. ನೀವು ಮಾನಸಿಕ ತೊಂದರೆ ಅನುಭವಿಸುತ್ತಿದ್ದರೆ ನೀವು ಧಾರ್ಮಿಕ ಕಾರ್ಯಗಳತ್ತ ಗಮನ ಕೊಡಿ. ಪೂಜಾ ವಿಧಿಗಳಿಂದ ನೀವು ಸಕಾರಾತ್ಮಕ ಶಕ್ತಿಯನ್ನು ಪಡೆಯುತ್ತೀರಿ. ಉದ್ಯೋಗಸ್ಥರು ಕಚೇರಿಯಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ದೀರ್ಘಕಾಲದ ಕಠಿಣ ಪರಿಶ್ರಮಕ್ಕೆ ಇಂದು ಫಲ ದೊರೆಯಲಿದೆ. ಆರ್ಥಿಕ ರಂಗದಲ್ಲಿ, ದಿನವು ಉತ್ತಮವಾಗಿರುತ್ತದೆ. ಹಣದ ಪರಿಸ್ಥಿತಿ ಬಲವಾಗಿರುತ್ತದೆ ಮತ್ತು ನಿಮಗೆ ಯಾವುದೇ ಆರೋಗ್ಯದ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 7

ಶುಭ ಸಮಯ: ಮಧ್ಯಾಹ್ನ 1:45 ರಿಂದ 7 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಆರ್ಥಿಕವಾಗಿ ನಿಮಗಿಂದು ದಿನ ಅಷ್ಟು ಅನುಕೂಲಕರವಾಗಿಲ್ಲ. ಆರ್ಥಿಕ ವೈಫಲ್ಯದಿಂದ ನೀವು ನಿರಾಶೆಗೊಳ್ಳುವಿರಿ. ಇಂದು, ಭವಿಷ್ಯದ ಚಿಂತೆಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ನಾಳೆಯ ಬಗ್ಗೆ ಯೋಚಿಸಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ, ಆದರೆ ಸಕಾರಾತ್ಮಕ ಚಿಂತನೆಯನ್ನು ಮಾಡಿ ಮುಂದುವರಿಯಿರಿ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ. ಆದಾಗ್ಯೂ, ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಆದ್ದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ವ್ಯಾಪಾರಿಗಳು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ. ನೀವು ಹೊಸದನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಸಮಯವು ಅದಕ್ಕೆ ಅನುಕೂಲಕರವಾಗಿಲ್ಲ. ಆರೋಗ್ಯವಾಗಿರಲು, ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ನೀವು ಚೆನ್ನಾಗಿ ಯೋಚಿಸಿದರೆ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 10

ಶುಭ ಸಮಯ: ಸಂಜೆ 4 ರಿಂದ 9:15 ರವರೆಗೆ

ಮೀನ ರಾಶಿ:

ಮೀನ ರಾಶಿ:

ಇಂದು ನಿಮಗೆ ತುಸು ನೆಮ್ಮದಿಯ ದಿನ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮವರ ನಡುವಿನ ಬಾಂಧವ್ಯ ನೋಡಿ ನೀವು ತೃಪ್ತಿಯನ್ನು ಪಡೆಯುತ್ತೀರಿ. ನೀವು ತಾಯಿ ಅಥವಾ ತಂದೆಯ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ನೀವು ಈ ಚಿಂತೆಯನ್ನು ಬಿಡಬಹುದು. ನಿಮ್ಮ ಉತ್ತಮ ಆರೈಕೆಯಿಂದಾಗಿ ಅವರ ಆರೋಗ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಂಡುಬರುತ್ತದೆ. ಇಂದು ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ನೀವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುತ್ತಿದ್ದಲ್ಲಿ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ, ಉದ್ಯೋಗಿಗಳಿಗೆ ಬಾಸ್ ನಿಂದ ಗೌರವ ಸಿಗುತ್ತದೆ. ಹಣದ ಬಗ್ಗೆ ಮಾತನಾಡುವುದಾದರೆ, ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ನಿಮ್ಮ ಹಿರಿಯರು ಇಂದು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ಅದನ್ನು ಖಂಡಿತವಾಗಿ ಪರಿಗಣಿಸಿ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 41

ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 12:55

English summary

Dina Bhavishya 11 October 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Sunday, October 11, 2020, 4:00 [IST]
X
Desktop Bottom Promotion