Horoscope Today 11 Feb 2023: ಶನಿವಾರ : ಕರ್ಕ, ಮಕರ ರಾಶಿಯವರಿಗೆ ಅದೃಷ್ಟದ ದಿನ, ಉಳಿದ ರಾಶಿಗಳ ಭವಿಷ್ಯ ಹೇಗಿದೆ

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 11ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಫಲ್ಗುಣ
ಪಕ್ಷ: ಕೃಷ್ಣಪಕ್ಷ
ತಿಥಿ: ಪಂಚಮಿ
ನಕ್ಷತ್ರ: ಚೈತ್ರ
ರಾಹುಕಾಲ: ಬೆಳಗ್ಗೆ09:36ರಿಂದ 11:06ರವರೆಗೆ

ಮೇಷ ರಾಶಿ

ಮೇಷ ರಾಶಿ

ನೀವೇ ಯಾವುದೇ ಕಾರ್ಯವಾಗಲಿ ಯೋಚಿಸಿ ಮುಂದುವರೆಯಿರಿ, ಇಲ್ಲದಿದ್ದರೆ ನಷ್ಟವಾಗಬಹುದು. ಕಚೇರಿಯಲ್ಲಿ ಮೇಲಾಧಿಕಾಗೆ ಕೋಪ ಬರುವಂಥ ತಪ್ಪುಗಳನ್ನು ಮಾಡಿದರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆತ್ಮವಿಶ್ವಾಸ ಕುಸಿಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 14

ಅದೃಷ್ಟದ ಸಮಯ: ಮಧ್ಯಾಹ್ನ 1:25 ರಿಂದ 5:30 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಯಾರನ್ನೂ ಕುರುಡಾಗಿ ನಂಬಬೇಡಿ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಆರ್ಥಿಕ ರಂಗದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ. ನೀವು ದೊಡ್ಡ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ, ನೀವದನ್ನು ತಪ್ಪಿಸಬೇಕು. ಉದ್ಯಮಿಗಳು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ದಾರಿಯಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿಕೆಲಸದ ಒತ್ತಡ ಅಧಿಕವಾಗಲಿದೆ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದಸಂಖ್ಯೆ: 11

ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಆರ್ಥಿಕ ದೃಷ್ಟಿಯಿಂದ ಈ ದಿನ ತುಂಬಾ ಮಂಗಳಕರವಾಗಿರುತ್ತದೆ. ನಿಮ್ಮ ಬಜೆಟ್ ಸಮತೋಲನದಲ್ಲಿರುತ್ತದೆ. ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಹೊರಟಿದ್ದರೆ ಇಂದು ಉತ್ತಮ ದಿನವಾಗಿದೆ. ಕಚೇರಿಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ಸಮಯ: ಮಧ್ಯಾಹ್ನ 1:05 ರಿಂದ ರಾತ್ರಿ 9:05 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಈ ದಿನ ಸಂತೋಷದಿಂದ ಕೂಡಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯಮಿಗಳಿಗೂ ಹೊಸ ಅವಕಾಶಗಳು. ವ್ಯಾಪಾರಸ್ಥರಿಗೂ ಲಾಭದ ದಿನ, ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ದಿನ ಮಿತಿಮೀರಿ ಖರ್ಚು ಮಾಡದಿರುವುದು ಒಳ್ಳೆಯದು. ಆರೋಗ್ಯ ಸಂಬಂಧಿ ಆತಂಕಗಳು ದೂರವಾಗುತ್ತವೆ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಬೆಳಿಗ್ಗೆ 9:50 ರಿಂದ ಮಧ್ಯಾಹ್ನ 12:20 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಪ್ರೀತಿಯ ವಿಷಯದಲ್ಲಿ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಂಡರೆ, ನೀವು ಶೀಘ್ರದಲ್ಲೇ ಎಲ್ಲಾ ಹಣಕಾಸಿನ ತೊಂದರೆಗಳಿಂದ ಮುಕ್ತರಾಗುತ್ತೀರಿ. ಕೌಟುಂಬಿಕ ಜೀವನದಲ್ಲಿ ಖುಷಿ ಇರುತ್ತದೆ. ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇರುವುದರಿಂದ ಜಾಗ್ರತೆವಹಿಸಿ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಬೆಳಿಗ್ಗೆ 5:55 ರಿಂದ ಮಧ್ಯಾಹ್ನ 3 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಲಿದೆ. ನಿಮ್ಮ ಕೆಲಸದ ವಿಷಯದಲ್ಲಿ ಚಿಂತೆಯಿಲ್ಲ ಏಕೆಂದರೆ ಕಚೇರಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ಇಂದು ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳಿಸಬಹುದು. ವ್ಯಾಪಾರಸ್ಥರು ಸಹ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ:1

ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 8:45 ರವರೆಗೆ

ತುಲಾ ರಾಶಿ

ತುಲಾ ರಾಶಿ

ಇಂದು ಹಣದ ವಿಷಯದಲ್ಲಿ ಉತ್ತಮ ಸೂಚನೆಯಿದೆ. ನಿಮಗೆ ಬರಬೇಕಾಗಿದ್ದ ಹಣ ಕೈ ಸೇರಲಿದೆ. ಆದರೆ ಕೆಲಸದ ವಿಷಯದಲ್ಲಿ ತುಂಬಾನೇ ಗಮನ ನೀಡಿ. ನಿಮ್ಮೊಂದಿಗೆ ಉನ್ನತ ಅಧಿಕಾರಿಗಳ ವರ್ತನೆ ಸರಿಯಿಲ್ಲದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರಸ್ಥರು ತಕ್ಕ ಲಾಭವನ್ನು ಪಡೆಯಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ಆರೋಗ್ಯ ಮಾತ್ರ ನಿರ್ಲಕ್ಷ್ಯ ಮಾಡಬೇಡಿ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 21

ಅದೃಷ್ಟದ ಸಮಯ: ಬೆಳಿಗ್ಗೆ 8:15 ರಿಂದ ಮಧ್ಯಾಹ್ನ 12 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವ್ಯಾಪಾರಸ್ಥರು ಇಂದು ನಿರೀಕ್ಷಿತ ಲಾಭ ಪಡೆಯಬಹುದು. ಉದ್ಯೋಗಸ್ಥರು ಇಂದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ನಿಮ್ಮ ಅಜಾಗರೂಕತೆಯಿಂದ ಭಾರೀ ನಷ್ಟವಾಗುವ ಸಂಭವವಿದೆ. ನೀವು ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಗಾತಿಯ ಆರೋಗ್ಯ ದುರ್ಬಲವಾಗಿರಬಹುದು , ಅವರ ಆರೈಕೆಯತ್ತ ಗಮನ ಹರಿಸಿ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 9 ರವರೆಗೆ

ಧನು ರಾಶಿ

ಧನು ರಾಶಿ

ಆರೋಗ್ಯದ ವಿಷಯದಲ್ಲಿ, ದಿನವು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿದರೆ ಉತ್ತಮ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಇಂದು ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ, ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಿಗಳು ಅದರಲ್ಲೂ ಬಟ್ಟೆ ವ್ಯಾಪಾರಿಯಾಗಿದ್ದರೆ ಈ ದಿನ ಒಳ್ಳೆಯ ಲಾಭ ಗಳಿಸುವಿರಿ.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 30

ಅದೃಷ್ಟದ ಸಮಯ: ಮಧ್ಯಾಹ್ನ 1:45 ರಿಂದ ರಾತ್ರಿ 8:15 ರವರೆಗೆ

ಮಕರ ರಾಶಿ

ಮಕರ ರಾಶಿ

ಇಂದು ನಿಮ್ಮೆಲ್ಲಾ ಕೆಲಸ ಪೂರ್ಣಗೊಳಿಸುವಿರಿ. ನೀವು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಇಂದು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗಬಹುದು. ಇಂದು ಹಣ ಹೆಚ್ಚು ಖರ್ಚಾಗಬಹುದು. ಆದರೂ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಉಳಿತಾಯದ ಕಡೆಗೂ ಗಮನ ಹರಿಸಬೇಕು. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 33

ಅದೃಷ್ಟದ ಸಮಯ: ಬೆಳಿಗ್ಗೆ 11:15 ರಿಂದ ರಾತ್ರಿ 8:45 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ನೀವು ಕಚೇರಿಯಲ್ಲಿ ಇತರರ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡದಿರುವುದು ಉತ್ತಮ. ಉದ್ಯಮಿಗಳಿಗೆ ತುಂಬಾ ಸವಾಲಿನ ದಿನವಾಗಿರಲಿದೆ, ಆರ್ಥಿಕ ನಷ್ಟದ ಸಾಧ್ಯತೆಯಿದೆ. ಕುಟುಂಬದಲ್ಲೂ ವಾದ ವಿವಾದಗಳು ಉಂಟಾಗಬಹುದು. ಹಣದ ವಿಷಯದಲ್ಲಿ, ದಿನ ಮಿಶ್ರಫಲ. ಇಂದು ಇದ್ದಕ್ಕಿದ್ದಂತೆ ನಿಮ್ಮ ಆರೋಗ್ಯ ಹದಗೆಡಬಹುದು.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ

ಮೀನ ರಾಶಿ

ಈ ದಿನ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಸಾಕಷ್ಟು ಶಾಪಿಂಗ್ ಮಾಡುತ್ತೀರಿ. ಕೆಲಸದ ವಿಷಯದಲ್ಲೂ ಈ ದಿನ ಒಳ್ಳೆಯದಿದೆ. ವ್ಯಾಪಾರಸ್ಥರು ಬಹಳಷ್ಟು ಓಡಬೇಕಾಗುತ್ತದೆ. ದಿನದ ಎರಡನೇ ಭಾಗದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

English summary

Dina Bhavishya -11 February 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 11 February 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Saturday, February 11, 2023, 5:00 [IST]
X
Desktop Bottom Promotion