Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ಶನಿವಾರದ ದಿನ ಭವಿಷ್ಯ: ಮಿಥುನ ರಾಶಿಗಿಂದು ಶನಿಯ ಕೃಪೆ, ದಿನವು ಮಂಗಳಕರ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ಮಧ್ಯಾಹ್ನ 01:18ರವರೆಗೆ ಪುನರ್ವಸು, ನಂತರ ಪುಷ್ಯ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ 09:13ರಿಂದ 10:41ರವರೆಗೆ
ಗುಳಿಕಕಾಲ: ಬೆಳಗ್ಗೆ 06:19ರಿಂದ 07:46ರವರೆಗೆ
ಯಮಗಂಡಕಾಲ: ಮಧ್ಯಾಹ್ನ 01:35ರಿಂದ 03:02ರವರೆಗೆ
ದುರ್ಮುಹೂರ್ತ: ಬೆಳಗ್ಗೆ 06:19ರಿಂದ 07:06ರವರೆಗೆ
ಬೆಳಗ್ಗೆ 07:06ರಿಂದ 07:52ರವರೆಗೆ
ಸೂರ್ಯೋದಯ: ಬೆಳಗ್ಗೆ 06:19ಕ್ಕೆ
ಸೂರ್ಯಾಸ್ತ: ಸಂಜೆ 05:57ಕ್ಕೆ

ಮೇಷ ರಾಶಿ:
ಕಳೆದ ಕೆಲವು ದಿನಗಳಿಂದ, ನಿಮ್ಮ ಜೀವನದಲ್ಲಿ ನಿರಂತರವಾಗಿ ಏರಿಳಿತದ ಪರಿಸ್ಥಿತಿಯನ್ನು ಕಂಡುಕೊಂಡು ಬಂದಿದ್ದೀರಿ ಆದರೆ ಇಂದು ನಿಮಗೆ ಒಳಿತಾಗುತ್ತದೆ. ಮೊದಲನೆಯದಾಗಿ, ನಿಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡಿದರೆ, ಹಣದ ಹಠಾತ್ ಆಗಮನದಿಂದ ನಿಮಗೆ ನಿರಾಳವಾಗಲಿದೆ. ನಿಮ್ಮ ಕೆಲವು ಅಪೂರ್ಣ ಕಾರ್ಯಗಳನ್ನು ಸಹ ನೀವು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವ ಜನರು ಕಚೇರಿಯಲ್ಲಿ ಸೋಮಾರಿತನವನ್ನು ತೋರಿಸದೇ ಸರಿಯಾಗಿ ಕೆಲಸ ಮಾಡಿಕೊಂಡು ಹೋಗುವುದು ಅತ್ಯಂತ ಮುಖ್ಯ. ನಿಮ್ಮ ಬಾಸ್ ನಿಮಗೆ ಕೆಲವು ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಎಲ್ಲವನ್ನೂ ಸರಿಯಾಗಿ ನಿಭಾಯಿಸಬೇಕಾಗುತ್ತದೆ. ಮತ್ತೊಂದೆಡೆ, ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರೀತಿಪಾತ್ರರೊಂದಿಗಿನ ಸಂಬಂಧ ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ, ನೀವು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ ನೀವು ಇಂದು ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 38
ಶುಭ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ

ವೃಷಭ ರಾಶಿ:
ಈ ದಿನ ನೀವು ಮಿಶ್ರ ಫಲವನ್ನು ಪಡೆಯಲಿದ್ದೀರಿ. ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ನೀವು ಕೆಲಸ ಮಾಡುವಲ್ಲಿ, ಇಂದು ನಿಮಗೆ ತುಂಬಾ ಕೆಲಸದ ಹೊರೆ ಇರುತ್ತದೆ., ವಿಶೇಷವಾಗಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಜನರು ತುಂಬಾ ಶ್ರಮಿಸಬೇಕಾಗಬಹುದು. ನಿಮ್ಮ ಕೆಲಸವು ಮಾರಾಟ ಅಥವಾ ಮಾರ್ಕೆಟಿಂಗ್‌ಗೆ ಸಂಬಂಧಿಸಿದ್ದಲ್ಲಿ, ಇಂದು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಯಾವುದೇ ಉದ್ವಿಗ್ನತೆ ಇದ್ದರೆ, ಅದನ್ನು ಬುದ್ಧಿವಂತಿಕೆಯಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸಿ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹಣದ ಹರಿವು ಚೆನ್ನಾಗಿರುತ್ತದೆ. ವೆಚ್ಚಗಳು ತುಸು ಕಡಿಮೆ. ಹಾಗಾಗಿ ಒಂದಿಷ್ಟು ಹಣದ ಉಳಿತಾಯ ನಿಮ್ಮಿಂದ ಸಾಧ್ಯ. ಇರುತ್ತದೆ ಮತ್ತು ಇಂದು ನೀವು ಉಳಿತಾಯದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಮೊದಲು ಹೆಚ್ಚು ಚಿಂತೆ ಮಾಡುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ನೀವು ಖಿನ್ನತೆಗೆ ಒಳಗಾಗಬಹುದು.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 2
ಶುಭ ಸಮಯ: ಸಂಜೆ 4 ರಿಂದ 9 ರವರೆಗೆ

ಮಿಥುನ ರಾಶಿ:
ಈ ದಿನದ ಮೊದಲಾರ್ಧ ಮಂಗಳಕರ. ಕೆಲಸದಲ್ಲಿ ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯಬಹುದು. ನೀವು ನೌಕರಿ ಮಾಡುವವರಾಗಿದ್ದಲ್ಲಿ, ನೀವು ಬಯಸಿದ ವರ್ಗಾವಣೆ ಮತ್ತು ಭಡ್ತಿ ಪಡೆಯುವ ಸಾಧ್ಯತೆಯಿದೆ. ಇದಲ್ಲದೆ, ನಿಮ್ಮ ಆದಾಯವೂ ಹೆಚ್ಚಬಹುದು. ಮತ್ತೊಂದೆಡೆ, ಇಂದು ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಆರ್ಥಿಕ ವಹಿವಾಟುಗಳನ್ನು ಬಹಳ ಬುದ್ಧಿವಂತಿಕೆಯಿಂದ ಮಾಡುವ ಅನಿವಾರ್ಯತೆ ಇದೆ. ವಾಹನಗಳಲ್ಲಿ ಕೆಲಸ ಮಾಡುವ ಜನರು ಉತ್ತಮ ಲಾಭ ಪಡೆಯಬಹುದು. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿ ಇಂದು ಯಾವುದೇ ಕಾರ್ಯದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮ್ಮ ಕಟು ವರ್ತನೆ ಸಂಗಾತಿಯ ಭಾವನೆಗಳನ್ನು ಘಾಸಿಗೊಳಿಸುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನೀವು ಸಕಾರಾತ್ಮಕತೆಯಿಂದ ಇರುವಿರಿ. ಅನುಭವಿಸುವಿರಿ.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 21
ಶುಭ ಸಮಯ: ಮಧ್ಯಾಹ್ನ 12:40 ರಿಂದ 6 ರವರೆಗೆ

ಕರ್ಕಾಟಕ ರಾಶಿ:
ನೀವು ಇಂದು ಎಲ್ಲಿಗಾದರೂ ಪ್ರಯಾಣಿಸುವವರಾಗಿದ್ದರೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಈ ಜಾಗತಿಕ ಸಾಂಕ್ರಾಮಿಕ ಖಾಯಿಲೆಯ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಿಮ್ಮ ನಿರ್ಲಕ್ಷ್ಯದ ಕೆಟ್ಟ ಫಲವನ್ನು ನೀವೇ ಅನುಭವಿಸಬೇಕು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಸಿಗಲಿದೆ. ಇಂದು ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ನೀವು ವ್ಯಾಪಾರ ಮಾಡುವವರಾಗಿದ್ದರೆ, ನಿಮ್ಮ ಹಣಕಾಸಿನ ಸಮಸ್ಯೆಗಳು ತಕ್ಕಮಟ್ಟಿಗೆ ಸುಧಾರಿಸಬಹುದು.ಅರ್ಧದಲ್ಲಿ ನಿಂತ ಕೆಲಸವೊಂದು ಇಂದು ಪುನರ್ರಾರಂಭವಾಗುವುದನ್ನು ಕಾಣಬಹುದು. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ದಿನವು ಚೆನ್ನಾಗಿದೆ. ಪೋಷಕರೊಂದಿಗಿನ ಸಂಬಂಧವು ಬಲವಾಗುತ್ತದೆ. ಇಂದು ತಂದೆಯಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು. ಅವರ ಸಲಹೆಯಂತೆ ನೀವು ನಡೆದರೆ, ಭವಿಷ್ಯದಲ್ಲಿ ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಮತ್ತು ಭಾಂದವ್ಯ ಹೆಚ್ಚಾಗುತ್ತದೆ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 30
ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ಸಿಂಹ ರಾಶಿ:
ಆರೋಗ್ಯದಿಂದಿರಿ. ನಿಮ್ಮ ಆರೋಗ್ಯವೇ ಇಂದು ನಿಮ್ಮ ಮೊದಲ ಆದ್ಯತೆ. ನಿಮಗೆ ಅನಾರೋಗ್ಯ ಕಾಣಿಸಿಕೊಂಡರೆ, ಕೆಲಸವನ್ನು ಪಕ್ಕಕ್ಕೆ ಇರಿಸಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಇವೆರಡೂ ಮುಖ್ಯ ವಿಶ್ರಾಂತಿಯಿಂದ ಇವೆರಡೂ ನಿಮಗೆ ಸಿಗುತ್ತವೆ. ನೀವು ನೌಕರಿ ಮಾಡುವವರಾಗಿದ್ದಲ್ಲಿ, ನಿಮ್ಮ ಬಾಸ್‌ನೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಬೇಕು. ಅವರು ನೀಡಿದ ಪ್ರತಿಯೊಂದು ಜವಾಬ್ದಾರಿಯನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಪೂರೈಸಲು ಪ್ರಯತ್ನಿಸಿ. ಸಾರಿಗೆಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಲಾಭ. ಆದರೆ, ಇಂದು ಚಿಲ್ಲರೆ ವ್ಯಾಪಾರಿಗಳಿಗೆ ದಿನವು ಅಷ್ಟೊಂದು ಉತ್ತಮವಾಗಿಲ್ಲ. ವೈಯಕ್ತಿಕ ಜೀವನದಲ್ಲಿ ಉದ್ವಿಗ್ನತೆ ಇರುತ್ತದೆ. ಸಂಗಾತಿಯೊಂದಿಗೆ ಮನಸ್ತಾಪಗಳಾಗಬಹುದು.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 31
ಒಳ್ಳೆಯ ಸಮಯ: ಸಂಜೆ 5:55 ರಿಂದ 10 ರವರೆಗೆ

ಕನ್ಯಾರಾಶಿ:
ವಯಕ್ತಿಕ ಜೀವನ ಇಂದು ಅಷ್ಟು ಉತ್ತಮವಾಗಿಲ್ಲ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುತ್ತದೆ. ಮನೆಯ ಸದಸ್ಯರ ನಡುವೆ ಕಾದಾಟಗಳು ಸಂಭವಿಸಬಹುದು. ಇದರಿಂದಾಗಿದು ನಿಮಗೆ ದುಃಖ ಮತ್ತು ಖಿನ್ನತೆಉಂಟಾಗುವ ಸಾಧ್ಯತೆ ಇದೆ. ಆದರೂ ನೀವು ದೃತಿಗೆಡದೇ ದೈರ್ಯವಾಗಿ ವ್ಯವಹರಿಸಬೇಕು. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ. ನಿಧಾನವಾಗಿ ಪರಿಸ್ಥಿತಿ ತಿಳಿಯಾಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ತುಂಬಾ ಸಂತೋಷವಾಗುತ್ತಾರೆ. ಅವರು ನಿಮ್ಮ ಆಲೋಚನೆಗಳಿಗೂ ಕೂಡ ಪ್ರಾಮುಖ್ಯತೆ ನೀಡುತ್ತಾರೆ. ಮತ್ತೊಂದೆಡೆ, ವ್ಯಾಪಾರಸ್ಥರು ತಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಸೂಕ್ತ. ಉತ್ತಮ ಲಾಭದ ದುರಾಸೆಯಲ್ಲಿ, ನೀವು ತಪ್ಪು ತಪ್ಪು ಮಾರ್ಗಗಳನ್ನು ಆಯ್ದುಕೊಳ್ಳಬಾರದು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ಇಂದು, ನೀವು ವೈದ್ಯರು ಮತ್ತು ಔಷಧಿಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಬಹುದು.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 10
ಶುಭ ಸಮಯ: ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ

ತುಲಾ ರಾಶಿ:
ತುಲಾ ರಾಶಿಚಕ್ರದ ಜನರು ಇಂದು ಯಾವುದೇ ದೊಡ್ಡ ಚಿಂತೆಯಲ್ಲಿ ಮುಳುಗಬಹುದು. ಆದಾಗ್ಯೂ ಮನಸ್ಸು ಶಾಂತವಾಗಿ ಮತ್ತು ತೃಪ್ತಿಯಾಗಿ ಇರುತ್ತದೆ. ಇಂದು ನೀವು ಸಾಕಷ್ಟು ಒಳ್ಳೆಯ ಫಲವನ್ನು ಪಡೆಯುವಿರಿ. ಮೊದಲನೆಯದಾಗಿ, ಹಣದ ಬಗ್ಗೆ ಮಾತನಾಡುವುದಾದರೆ ನಿಮ್ಮ ಆರ್ಥಿಕ ಪ್ರಾಬಲ್ಯ ಹೆಚ್ಚುತ್ತದೆ, ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಆದಾಗ್ಯೂ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಜಾಗರೂಕರಾಗಿರಿ. ಯೋಚಿಸದೆ ಅತಿಯಾಗಿ ಖರ್ಚು ಮಾಡಬೇಡಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧವು ಸಾಮರಸ್ಯದಿಂದ ಉಳಿಯುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ಉದ್ಯೋಗಸ್ಥರು ಸಮಯದ ಬಗ್ಗೆ ಜಾಗ್ರತೆ ವಹಿಸಿ. ಮತ್ತೊಂದೆಡೆ, ವ್ಯಾಪಾರಿಗಳು ಸಾಕಷ್ಟು ಶ್ರಮಪಡಬೇಕು. ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ ಮತ್ತು ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮವಾಗಿರುತ್ತದೆ. ಹೆಚ್ಚು ಒತ್ತು ನೀಡಬೇಡಿ ಮತ್ತು ವಿಶ್ರಾಂತಿಯ ಕಡೆಗೆ ಗಮನ ಕೊಡಿ.
ಉತ್ತಮ ಬಣ್ಣ: ಕಡು ಕೆಂಪು
ಶುಭ ಸಂಖ್ಯೆ: 5
ಶುಭ ಸಮಯ: ಮಧ್ಯಾಹ್ನ 2 ರಿಂದ 7 ರವರೆಗೆ

ವೃಶ್ಚಿಕ ರಾಶಿ:
ಅವಿವಾಹಿತರಿಗಿದು ಸುಭಿಕ್ಷ ಕಾಲ. ನೀವು ಒಬ್ಬಂಟಿಯಾಗಿದ್ದರೆ ಮತ್ತು ನಿಮಗಾಗಿ ಸಂಗಾತಿಯನ್ನು ಹುಡುಕುತ್ತಿದ್ದರೆ, ನಿಮ್ಮ ಹುಡುಕಾಟವು ಇಂದು ಮುಗಿದಂತೆ ಎಂದು ಭಾವಿಸಿ. ನೀವು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ, ನೀವು ಯಾರನ್ನಾದರೂ ಇಷ್ಟಪಟ್ಟರೆ ಮತ್ತು ಪ್ರೀತಿಯ ಪ್ರಸ್ತಾಪವನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯದಲ್ಲಿ ನೀವು ಆತುರಪಡದೇ ಮುಂದುವರಿಯಲು ಸಲಹೆ ನೀಡಲಾಗುತ್ತದೆ. ಸ್ವಲ್ಪ ಸಮಯ ಕಾಯಿರಿ. ಇಂದು ವಿವಾಹಿತರಿಗೆ ಬಹಳ ರೋಮ್ಯಾಂಟಿಕ್ ದಿನವಾಗಲಿದೆ. ನಿಮ್ಮ ಪ್ರೀತಿಪಾತ್ರರು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ ಮತ್ತು ನಿಮ್ಮೊಂದಿಗೆ ಅಧಿಕ ಸಮಯ ಕಳೆಯಲು ಇಷ್ಟಪಡುತ್ತಾರೆ. ನೀವು ನಿರುದ್ಯೋಗಿಗಳಾಗಿದ್ದರೆ, ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ಮತ್ತೊಂದೆಡೆ, ವ್ಯಾಪಾರಸ್ಥರು ಉತ್ತಮ ಲಾಭ ಗಳಿಸಲಿದ್ದಾರೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಯಾವುದೇ ಪ್ರಮುಖ ಆರ್ಥಿಕ ವ್ಯವಹಾರವನ್ನು ಇಂದು ಮಾಡಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿರುತ್ತದೆ. ನೀವು ತುಂಬಾ ಉತ್ಸಾಹಿಯಾಗಿರಿತ್ತೀರಿ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 16
ಶುಭ ಸಮಯ: ಬೆಳಿಗ್ಗೆ 4:05 ರಿಂದ ಮಧ್ಯಾಹ್ನ 3 ರವರೆಗೆ

ಧನು ರಾಶಿ:
ಇಂದು ನೀವು ಎಲ್ಲದರಲ್ಲೂ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ನೀವು ಅನಗತ್ಯ ಸಮಯವನ್ನು ಅವ್ಯವಸ್ಥೆಯಲ್ಲಿ ಕಳೆಯುತ್ತೀರಿ ಈ ಮೂಲಕ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತೀರಿ. ಅನಗತ್ಯ ಚರ್ಚೆಗಳಿಂದ ದೂರವಿರಿ. ನಿಮ್ಮ ಕೆಲಸದತ್ತ ಗಮನ ಹರಿಸಿ. ಉದ್ಯೋಗಿಗಳು ಕಚೇರಿಯಲ್ಲಿ ಜಾಗರೂಕರಾಗಿರಬೇಕು. ಕೆಲಸದ ಬಗೆಗಿನ ನಿಮ್ಮ ನಿರ್ಲಕ್ಷ್ಯವು ನಿಮ್ಮ ಬಾಸ್‌ನ ಕೋಪಕ್ಕೆ ಕಾರಣವಾಗಬಹುದು. ವ್ಯಾಪಾರಿಗಳು ಗ್ರಾಹಕರೊಂದಿಗೆ ತಮ್ಮ ವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಇದಲ್ಲದೆ, ನಿಮ್ಮ ಪ್ರಮುಖ ದಾಖಲೆಗಳ ಸುರಕ್ಷತೆಯ ಬಗ್ಗೆಯೂ ನೀವು ಗಮನ ಹರಿಸಬೇಕು, ಇಲ್ಲದಿದ್ದರೆ ಹಣಕಾಸಿನ ನಷ್ಟಗಳು ಸಂಭವಿಸಬಹುದು. ಇದ್ದಕ್ಕಿದ್ದಂತೆ ಕೆಟ್ಟ ಸುದ್ದಿಗಳನ್ನು ಪಡೆಯುವುದರಿಂದ ಮನೆಯ ವಾತಾವರಣವು ಕೆಡಬಹುದು. ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ, ಕೀಲು ನೋವು ಅಥವಾ ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 11
ಶುಭ ಸಮಯ: ಬೆಳಿಗ್ಗೆ 6:55 ರಿಂದ ಸಂಜೆ 4 ರವರೆಗೆ

ಮಕರ ರಾಶಿ:
ಹಣದ ವಿಷಯದಲ್ಲಿ ಇಂದು ನಿಮಗೆ ಶುಭವಾಗಲಿದೆ. ಅನಿರೀಕ್ಷಿತ ಹಣವು ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ. ನೀವು ಆಸ್ತಿಗೆ ಸಂಬಂಧಿಸಿದ ಕೆಲಸವನ್ನು ಮಾಡಿದರೆ ನೀವು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಜನರು ಅವರ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಜೊತೆಗೆ ಭಡ್ತಿ ದೊರೆಯುವ ಸಾಧ್ಯತೆಗಳೂ ಇವೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸರಿಯಾಗದೇ ಇದ್ದಲ್ಲಿ, ಇಂದು ಎಲ್ಲಾ ಸಮಸ್ಯೆಗಳನ್ನೂ ದೂರ ಮಾಡಿಕೊಂಡು ಪ್ರೀತಿಯಿಂದ ಇರಲು ಉತ್ತಮ ದಿನವಾಗಿದೆ. ಒಬ್ಬರನ್ನೊಬ್ಬರು ಗೌರವಿಸಿ ಮತ್ತು ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ.
ಉತ್ತಮ ಬಣ್ಣ: ಕೆಂಪು
ಶುಭ ಸಂಖ್ಯೆ: 9
ಶುಭ ಸಮಯ: ಸಂಜೆ 6:15 ರಿಂದ 9 ರವರೆಗೆ

ಕುಂಭ ರಾಶಿ:
ನಿಮ್ಮ ನಡವಳಿಕೆಯನ್ನು ನೀವೇ ಅರ್ಥ ಮಾಡಿಕೊಳ್ಳಿ. ಸಣ್ಣ ವಿಷಯಗಳ ಮೇಲಿನ ನಿಮ್ಮ ಕೋಪವು ನಿಮ್ಮ ಸಂಬಂಧಕ್ಕೆ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ, ವಿಶೇಷವಾಗಿ ನೀವು ನಿಮ್ಮ ಹಿರಿಯರನ್ನು ಗೌರವಿಸಬೇಕು. ನೀವು ಸರ್ಕಾರಿ ಕೆಲಸ ಮಾಡುವವರಾಗಿದ್ದಲ್ಲಿ, ಇಂದು ಸಣ್ಣ ಗಮನವಿರಲಿ. ಕೆಲಸದಲ್ಲಿನ ನಿರ್ಲಕ್ಷ್ಯವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ವ್ಯಾಪಾರಿಗಳು ಉತ್ತಮ ಲಾಭಕ್ಕಾಗಿ ಮಾರ್ಕೆಟಿಂಗ್ ಬಗ್ಗೆ ಗಮನಹರಿಸಬೇಕಾಗುತ್ತದೆ. ನಿಮ್ಮ ಯಾವುದೇ ಹೊಸ ಕೆಲಸಕ್ಕೆ ಸಾಲ ತೆಗೆದುಕೊಳ್ಳುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನಿಮ್ಮ ನಿರ್ಧಾರವನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಹೆಚ್ಚಿನ ಮಸಾಲೆ ಹೊಂದಿರುವ ಆಹಾರವನ್ನು ಸೇವಿಸಬೇಡಿ.
ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)
ಶುಭ ಸಂಖ್ಯೆ: 15
ಶುಭ ಸಮಯ: ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ

ಮೀನ ರಾಶಿ:
ಇವತ್ತಿನ ದಿನ ನಿಮಗೆ ಅದೃಷ್ಟ ಕೈಹಿಡಿಯಲಿದೆ. ನಿಮ್ಮ ಪ್ರತಿಯೊಂದು ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ನೀವು ವ್ಯಾಪಾರ ಮಾಡುವವರಾಗಿದ್ದರೆ ಹೆಚ್ಚಿನ ಅವಕಾಶಗಳು ನಿಮಗೆ ದೊರೆಯುತ್ತವೆ. ನಿಮ್ಮ ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸಬಹುದು ಮತ್ತು ಅವರಿಗೆ ಕಠಿಣ ಸ್ಪರ್ಧೆಯನ್ನು ನೀಡಬಹುದು. ಉದ್ಯೋಗಸ್ಥರು ಸಹ ಉತ್ತಮ ಯಶಸ್ಸನ್ನು ಪಡೆಯಬಹುದು. ಇಂದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಿ. ಅದು ನಿಮಗೆ ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬದೊಂದಿಗೆ ಖುಷಿಯ ದಿನವಾಗಿರುತ್ತದೆ. ತಾಯಿಯಿಂದ ಆರ್ಥಿಕ ಲಾಭವಾಗುವ ಸಾಧ್ಯತೆ. ನಿಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುವ ಮೂಲಕ ನಿಮ್ಮ ದೊಡ್ಡ ತಲೆನೋವು ನಿವಾರಣೆಯಾಗುತ್ತದೆ. ಆರೋಗ್ಯದ ದೃಷ್ಟಿಕೋನದಿಂದ ನೋಡುವುದಾದರೆ ದಿನವು ಅನುಕೂಲಕರವಾಗಿರುತ್ತದೆ. ಇಂದು ನೀವು ಸಾಕಷ್ಟು ಒಳ್ಳೆಯದನ್ನೇ ಅನುಭವಿಸುವಿರಿ.
ಉತ್ತಮ ಬಣ್ಣ: ಆಕಾಶ ನೀಲಿ
ಶುಭ ಸಂಖ್ಯೆ: 29
ಶುಭ ಸಮಯ: ಬೆಳಿಗ್ಗೆ 4:35 ರಿಂದ ಮಧ್ಯಾಹ್ನ 1 ಗಂಟೆ



Click it and Unblock the Notifications











