ಶುಕ್ರವಾರದ ದಿನ ಭವಿಷ್ಯ: ವೃಶ್ಚಿಕ ರಾಶಿಯವರೇ ಈ ದಿನ ಧನ ಲಾಭವಿದೆ

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 09 October 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ಬೆಳಗ್ಗೆ 12:27ರವರೆಗೆ ಆರ್ದ್ರ, ನಂತರ ಪುನರ್ವಸು
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಬೆಳಿಗ್ಗೆ 10:41ರಿಂದ 12:08ರವರೆಗೆ
ಗುಳಿಕಕಾಲ: ಬೆಳಗ್ಗೆ 07:46ರಿಂದ 09:13ರವರೆಗೆ
ಯಮಗಂಡಕಾಲ: ಮಧ್ಯಾಹ್ನ 03:03ರಿಂದ 04:30ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:38ರಿಂದ 09:25ರವರೆಗೆ
ಮಧ್ಯಾಹ್ನ 12:31ರಿಂದ 01:18ರವರೆಗೆ
ಸೂರ್ಯೋದಯ: ಬೆಳಗ್ಗೆ 06:18ಕ್ಕೆ
ಸೂರ್ಯಾಸ್ತ: ಸಂಜೆ 05:58ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಈ ರಾಶಿಯವರಿಗೆ ಈ ದಿನವು ಉತ್ತಮ. ಹಾಗಾಗಿ ಹೆಚ್ಚಿನ ಲಾಭವನ್ನು ನೀವು ಗಳಿಸುತ್ತೀರಿ. ಯಾವುದೇ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ನೀವು ಅಸಮಾಧಾನಗೊಂಡಿದ್ದರೆ, ಇಂದು ನಿಮ್ಮ ಸಮಸ್ಯೆಗಳು ದೂರವಾಗುವುದು ಖಂಡಿತ. ಕೆಲಸ ಮಾಡುವಲ್ಲಿ ಹೆಚ್ಚಿನ ಅವಕಾಶಗಳು ನಿಮ್ಮಗಾದಲಿವೆ. ಅದೇ ನಿಮಗೆ ಮುಂದಿನ ದಾರಿ ತೆರೆಯುತ್ತದೆ. ಇಂದು, ನಿಮ್ಮ ಎಲ್ಲಾ ಕೆಲಸಗಳನ್ನು ನೀವು ನಿರ್ವಹಿಸುವ ಪರಿ ಮತ್ತು ಕಾರ್ಯ ವೈಖರಿ ಹಿರಿಯರನ್ನು ಹೆಚ್ಚು ಪ್ರಭಾವಿತರಾಗುತ್ತಾರೆ. ಬಟ್ಟೆ ವ್ಯಾಪಾರಿಗಳು ಇಂದು ಆರ್ಥಿಕವಾಗಿ ಲಾಭ ಪಡೆಯಬಹುದು. ನಿಮ್ಮ ಸಂಗಾತಿಯು ಯಾವುದರ ಬಗ್ಗೆಯಾದರೂ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಗೆ ನಿಮ್ಮ ಭಾವನಾತ್ಮಕ ಬೆಂಬಲ ಬೇಕು. ಹಣದ ಪರಿಸ್ಥಿತಿ ಎಂದಿನಂತೆ ಸಾಮಾನ್ಯ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ. ಆಹಾರ ಸೇವಿಸುವ ಹಾಗೂ ಪಾನೀಯ ಸೇವಿಸುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 26

ಶುಭ ಸಮಯ: ಬೆಳಿಗ್ಗೆ 10 ರಿಂದ ಸಂಜೆ 4:20 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ಇಂದು ಕುಟುಂಬ ಜೀವನದಲ್ಲಿ ಮಿಶ್ರ ಫಲವನ್ನು ಕಾಣುತ್ತೀರಿ. ಯಾಕೆಂದರೆ ಇಂದಿನ ದಿನ ನೀವು ಹೆಚ್ಚು ಕೆಲಸದಲ್ಲಿ ನಿರತರಾಗಿರುವುದರಿಂದ, ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಮಕ್ಕಳು ನಿಮ್ಮ ಮೇಲೆ ತುಂಬಾ ಕೋಪಗೊಳ್ಳಬಹುದು. ನೀವು ಹಣದ ಬಗ್ಗೆ ಚಿಂತೆ ಮಾಡುತ್ತೀರಿ. ಆದರೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ, ಶೀಘ್ರದಲ್ಲೇ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಹಿರಿಯರ ಸಲಹೆಯಂತೆ ನೀವು ನಡೆದರೆ, ನಿಮಗೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ನಿರುದ್ಯೋಗಿಗಳಿಗೆ ಇಂದು ಉತ್ತಮ ದಿನವಾಗಲಿದೆ. ಸುದೀರ್ಘ ಹೋರಾಟದ ನಂತರ ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮಗೆ ಒಂದು ಉತ್ತಮ ಉದ್ಯೋಗ ಸಿಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸಂಗಾತಿಯಲ್ಲಿನ ಲೋಪದೋಷಗಳು ಇಂದು ನಿಮಗೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತವೆ. ನೀವು ಪರಸ್ಪರ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿ. ಅಲ್ಲದೆ, ನಿಮ್ಮ ಪ್ರೀತಿಪಾತ್ರರಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿ. ಇಂದು ನೀವು ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಿಗ್ಗೆ 6:35 ರಿಂದ ಮಧ್ಯಾಹ್ನ 1:05

ಮಿಥುನ ರಾಶಿ:

ಮಿಥುನ ರಾಶಿ:

ಹಣದ ಪರಿಸ್ಥಿತಿಯ ಸುಧಾರಣೆಯಾಗುವುದರ ಜೊತೆಗೆ ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ತೊಂದರೆಗಳು ಕೊನೆಗೊಳ್ಳುತ್ತಾ ಬರುತ್ತವೆ. ನೀವು ಯಾವುದೋ ಹಳೆಯ ಸಾಲವನ್ನು ಇಂದು ಚುಕ್ತಾ ಮಾಡಬಹುದು. ನೀವು ಈ ರೀತಿ ಶ್ರಮಿಸುತ್ತಿದ್ದರೆ ನಿಮ್ಮ ಶ್ರಮಕ್ಕೆ ತಕ್ಕಂತೆ ಶೀಘ್ರದಲ್ಲೇ ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಯಾವುದೇ ಪ್ರಯತ್ನಗಳು ವಿಫಲವಾದರೆ ನಿರಾಶೆಗೊಳ್ಳಬೇಡಿ, ಏಕೆಂದರೆ ಇದೆಲ್ಲವೂ ತಾತ್ಕಾಲಿಕ ಅಷ್ಟೇ. ಶೀಘ್ರದಲ್ಲೇ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಇಂದು ಹೆಚ್ಚು ಕೆಲಸವಿಲ್ಲದಿದ್ದರೆ, ನಿಮ್ಮ ಅಮೂಲ್ಯ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ನಿಮಗೆ ಅನುಕೂಲವಾಗುವಂತಹ ಕಾರ್ಯವನ್ನು ಮಾಡಲು ಪ್ರಯತ್ನಿಸಿ. ದಿನದ ಎರಡನೇ ಭಾಗದಲ್ಲಿ, ಸ್ನೇಹಿತರೊಂದಿಗೆ ವಾಕ್ ಮಾಡಲು ಹೋಗಬಹುದು, ಅದು ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಸಂಗಾತಿಯ ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ, ಇದರಿಂದ ನಿಮಗಿದ್ದ ದೊಡ್ಡ ಚಿಂತೆ ದೂರವಾಗುತ್ತದೆ.

ಉತ್ತಮ ಬಣ್ಣ: ಕಡು ಹಳದಿ

ಶುಭ ಸಂಖ್ಯೆ: 28

ಶುಭ ಸಮಯ: ಸಂಜೆ 5:40 ರಿಂದ 9:30 ರವರೆಗೆ

 ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಇಂದು ನೀವು ನಿಮ್ಮ ಪ್ರಮುಖ ಕಾರ್ಯಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು, ಇಲ್ಲದಿದ್ದರೆ ನಿರ್ಲಕ್ಷ್ಯವು ಹಾನಿಕಾರಕವೆಂಬುದು ಸಾಬೀತಾಗುತ್ತದೆ. ನಿಮ್ಮ ವೈವಾಹಿಕ ಜೀವನಕ್ಕೆ ಉತ್ತಮ ದಿನವಾಗಲಿದೆ. ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಅಗತ್ಯವಿದ್ದಲ್ಲಿ ನೀವು ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇನ್ನು ವಿದ್ಯಾರ್ಥಿಗಳಿಗೆ ಈ ದಿನ ಅಷ್ಟು ಉತ್ತಮ ದಿನವಲ್ಲ. ನಿಮಗೆ ಅಧ್ಯಯನ ಮಾಡಲು ಮನಸ್ಸಿಲ್ಲದಿರಬಹುದು. ಹಾಗೆಂದು ಮ್ಮನಸ್ಸಿನ ಮೇಲೆ ಹೆಚ್ಚು ಒತ್ತಡ ಹೇರಬೇಡಿ ಮತ್ತು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಸಕಾರಾತ್ಮಕವಾಗಿರಿ, ನಿಮ್ಮ ಗುರಿಯತ್ತ ಸಾಗಲು ಪ್ರಯತ್ನಿಸಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬ ಸದಸ್ಯರಲ್ಲಿ ಐಕ್ಯತೆ, ಸಾಮರಸ್ಯ ಇರುತ್ತದೆ. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ. ಯಾವುದೋ ಮೂಲದಿಂದ ಹಣವನ್ನು ಪಡೆಯುವ ಸಾಧ್ಯತೆ. ಆರೋಗ್ಯದ ದೃಷ್ಟಿಯಿಂದ ನಿಮಗೆ ಈ ದಿನ ಅನುಕೂಲಕರವಾಗಿಯೇ ಇದೆ. ನೀವು ಕೆಲವು ದೀರ್ಘಕಾಲದ ಕಾಯಿಲೆಯ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ನೀವು ಪರಿಹಾರವನ್ನು ಪಡೆಯಬಹುದು.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 10

ಶುಭ ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 6 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ನಿಮ್ಮ ದಾಂಪತ್ಯ ಜೀವನದಲ್ಲಿ ಇಂದು ಸಂತೋಷ ಕಟ್ಟಿಟ್ಟ ಬುತ್ತಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯ ಇನ್ನಷ್ಟು ಬಲವಾಗುತ್ತದೆ ಜೊತೆಗೆ ಅವರೊಂದಿಗೆ ಉತ್ತಮ ಮಾತುಕತೆಯನ್ನು ನಡೆಸುತ್ತೀರಿ. ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಕರೆದುಕೊಂಡು ಒಂದು ವಾಕ್ ಗೆ ಸಹ ಹೋಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಉಳಿತಾಯದ ಬಗ್ಗೆ ಹೆಚ್ಚು ಗಮನಹರಿಸುತ್ತೀರಿ. ಇಂದು ನೀವು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಹೆತ್ತವರ ಮಾತುಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಅವರ ಭಾವನೆಗಳನ್ನು ನೀವು ಗೌರವಿಸಬೇಕು. ದಿನದ ಎರಡನೇ ಭಾಗದಲ್ಲಿ, ಮನೆಯ ವಾತಾವರಣ ಸ್ವಲ್ಪ ಹದಗೆಡಬಹುದು. ಇದ್ದಕ್ಕಿದ್ದಂತೆ ವಿವಾದಿತ ಸಮಸ್ಯೆ ಉದ್ಭವಿಸಬಹುದು, ಇದು ಕುಟುಂಬ ಸದಸ್ಯರ ನಡುವೆ ವಿವಾದಕ್ಕೆ ಕಾರಣವಾಗಬಹುದು. ನೌಕರಿ ಮಾಡುವವರು ದಿನವಿಡೀ ಕಾರ್ಯನಿರತರಾಗಿರುತ್ತಾರೆ. ಇಂದು ಕೆಲಸದ ಹೊರೆ ಹೆಚ್ಚಾಗಬಹುದು.

ಉತ್ತಮ ಬಣ್ಣ: ತಿಳಿ ಹಸಿರು

ಶುಭ ಸಂಖ್ಯೆ: 7

ಶುಭ ಸಮಯ: ಬೆಳಿಗ್ಗೆ 4 ರಿಂದ 2: 40 ವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ. ನೀವು ಬಲವಾದ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಮಾಡಿದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಹಣದ ದೃಷ್ಟಿಯಿಂದ ದಿನ ಉತ್ತಮವಾಗಿದೆ. ಇನ್ನು ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಇಂದು ನೀವು ಹೆಚ್ಚುವರಿ ಗಳಿಸುವ ಅವಕಾಶವನ್ನು ಪಡೆಯಬಹುದು. ನಿಮಲ್ಲಿ ಇಂದು ನಿಮ್ಮ ಕಾರ್ಯಕ್ಷಮತೆಯಲಿ ಸುಧಾರಣೆಯನ್ನು ಕಾಣಬಹುದು ನಿಮ್ಮ ಕೆಲಸವು ಹಿರಿಯರಿಗೆ ತೃಪ್ತಿ ನೀಡುತ್ತದೆ. ವ್ಯಾಪಾರಿಗಳು ಸ್ವಲ್ಪ ಹೆಚ್ಚು ಓಡಾಡಬೇಕಾಗಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ನಿಮಗೆ ನೆಮ್ಮದಿ ಸಿಗುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ದಿನವು ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ನೀವು ಅಧ್ಯಯನಗಳಿಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ ಮತ್ತು ನೀವು ಸಾಕಷ್ಟು ಕಿರಿಕಿರಿ ಅನುಭವಿಸಬಹುದು. ಇನ್ನು ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 1

ಶುಭ ಸಮಯ: ಮಧ್ಯಾಹ್ನ 1:30 ರಿಂದ 8 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಇಂದು ನಿಮಗೆ ಶುಭವಾಗಲಿದೆ. ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತೀರಿ, ಹಾಗಾಗಿ ತುಂಬಾ ಸಂತೋಷದಿಂದ ಇರುತ್ತೀರಿ. ನಿಮ್ಮ ಸಕಾರಾತ್ಮಕ ನಡವಳಿಕೆಯು ನಿಮ್ಮ ಸುತ್ತಮುತ್ತಲಿನ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಲ್ಲದೇ ಇಂದು ಇತರರಿಗೆ ಸಹಾಯ ಮಾಡುವ ಅವಕಾಶವೂ ನಿಮಗೆ ಸಿಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಪಡೆಯುವ ಸಂಭವ ಹೆಚ್ಚು. ಇದಲ್ಲದೆ, ನಿಮ್ಮ ಆದಾಯವೂ ಹೆಚ್ಚಾಗಬಹುದು. ನಿಮ್ಮ ಕೆಲಸವು ಸಾಮಾನ್ಯ ಮಳಿಗೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಸೌಂದರ್ಯವರ್ಧಕಗಳಲ್ಲಿದ್ದರೆ, ನೀವು ಆರ್ಥಿಕವಾಗಿ ಲಾಭ ಪಡೆಯಬಹುದು. ಇಂದು ಕುಟುಂಬದೊಂದಿಗೆ ಆನಂದದಾಯಕ ದಿನವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಇಂದು ನಿಮ್ಮ ಸಂಗಾತಿಯು ತುಂಬಾ ರೋಮ್ಯಾಂಟಿಕ್ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮ ಆರೋಗ್ಯ ಸುಧಾರಿಸಿದಂತೆ ನೀವು ಉತ್ತಮವಾಗುತ್ತೀರಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 22

ಶುಭ ಸಮಯ: ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇವತ್ತು ನಿಮ್ಮಲ್ಲಿ ಹಣದ ಪ್ರಾಬಲ್ಯ ಹೆಚ್ಚಾಗಿರುತ್ತದೆ. ವೆಚ್ಚಗಳು ಸ್ವಲ್ಪ ಹೆಚ್ಚು ಹೆಚ್ಚಾಗಿದ್ದರೂ, ನಿಮ್ಮ ಉತ್ತಮ ನಕ್ಷತ್ರಗಳು ಯಾವುದೇ ರೀತಿಯ ಸಮಸ್ಯೆಯೂ ಆಗಲು ಬಿಡುವುದಿಲ್ಲ. ಇಂದು ನೀವು ಮನೆ ದುರಸ್ತಿ ಅಥವಾ ಇತರ ಅಗತ್ಯ ಕೆಲಸಗಳಿಗಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆಯಿದೆ. ಸಹೋದರ ಸಹೋದರರು ಮತ್ತು ಪೋಷಕರಿಂದ ಸಂಪೂರ್ಣ ಬೆಂಬಲ ದೊರೆಯುವುದು. ನಿಮ್ಮ ಎಲ್ಲಾ ನಿರ್ಧಾರಗಳನ್ನು ನೀವು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ. ನಿಮ್ಮ ಅಪೂರ್ಣ ಕಾರ್ಯಗಳನ್ನು ಮುಗಿಸಲು ದಿನವು ಉತ್ತಮವಾಗಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಸಂಭವಿಸಬಹುದು ಎಚ್ಚರವಹಿಸಿ. ನಿಮ್ಮ ಸಂಗಾತಿಯ ಕಾರ್ಯಗಳಲ್ಲಿ ನಿಮ್ಮ ಹಸ್ತಕ್ಷೇಪದಿಂದಾಗಿ ಅವರು ಕೋಪಗೊಳ್ಳಬಹುದು. ಕೆಲಸದ ಬಗ್ಗೆ ಮಾತನಾಡುವ್ದಾದಲ್ಲಿ, ಅದು ಕೆಲಸವಾಗಲಿ ಅಥವಾ ವ್ಯವಹಾರವಾಗಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನೀವು ತುಂಬಾ ಉತ್ಸಾಹಿ ಮತ್ತು ಸಕ್ರಿಯರಾಗಿರುತ್ತೀರಿ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 5

ಶುಭ ಸಮಯ: ಬೆಳಿಗ್ಗೆ 8:20 ರಿಂದ ಮಧ್ಯಾಹ್ನ 3 ರವರೆಗೆ

ಧನು ರಾಶಿ:

ಧನು ರಾಶಿ:

ಇಂದು ನಿಮಗೆ ಸವಾಲುಗಳು ತುಂಬಿದ ದಿನವಾಗಲಿದೆ, ಆದರೆ ನಿಮ್ಮ ಬಲವಾದ ಆತ್ಮ ವಿಶ್ವಾಸ ಮತ್ತು ಸ್ಥೈರ್ಯವು ದೊಡ್ಡ ಕಷ್ಟವನ್ನು ಸಹ ನೀರಾಗಿ ಕರಗಿಸಿಬಿಡುತ್ತದೆ. ಕಚೇರಿಯಲ್ಲಿ ನೀವು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಬಹುಶಃ ಕೆಲವರು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ಹಾಗಾಗಿ ಅನಗತ್ಯ ತೊಂದರೆಗಳಲ್ಲಿ ಸಿಲುಕಿಕೊಂಡು ನಿಮ್ಮ ಗುರಿಯಿಂದ ನೀವು ದೂರಸರಿಯಬಹುದು. ಅನೇಕ ರೀತಿಯ ಆಲೋಚನೆಗಳು ಇಂದು ನಿಮ್ಮ ಮನಸ್ಸಿಗೆ ಬರುತ್ತವೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು. ಇಂದು ನೀವು ತಾಯಿ ಅಥವಾ ತಂದೆಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಹಾಗಾಗಿ ನೀವು ಸಮತೋಲಿತವಾಗಿ ವರ್ತಿಸಬೇಕು.

ಉತ್ತಮ ಬಣ್ಣ: ಕಡು ಕೆಂಪು

ಶುಭ ಸಂಖ್ಯೆ: 19

ಶುಭ ಸಮಯ: ಸಂಜೆ 6:20 ರಿಂದ 9 ರವರೆಗೆ

ಮಕರ ರಾಶಿ:

ಮಕರ ರಾಶಿ:

ನಿಮ್ಮ ಸ್ವಭಾವವೇ ಜಾರೂಕತೆಯಿಂದ ಇರುವುದು, ಆದಾಗ್ಯೂ ಈವು ಇಂದು ಹಣದ ವಿಷಯದಲ್ಲಿ ಇಂದು ಜಾಗರೂಕರಾಗಿರಬೇಕಾಗುತ್ತದೆ. ಖರ್ಚಿನಲ್ಲಿ ನಿರಂತರ ಹೆಚ್ಚಳವು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಏರುಪೇರುಗೊಳಿಸುತ್ತದೆ. ಮತ್ತೊಂದೆಡೆ, ಇಂದು ನಿಮ್ಮ ಕೆಲವು ಅಮೂಲ್ಯ ವಸ್ತುಗಳು ಕಳೆದು ಹೋಗಬಹುದು ಅಥವಾ ಕಳ್ಳತನವಾಗಬಹುದು. ನಿಮ್ಮ ಕೋಪದ ಮನಸ್ಥಿತಿಯ ಕಾರಣದಿಂದಾಗಿ ನೀವು ಇಂದು ನಿಮ್ಮ ಸಂಗಾತಿಯೊಂದಿಗೆ ದೊಡ್ಡ ಜಗಳವಾಡಬಹುದು. ನಿಮ್ಮ ಪ್ರಿತಿಪಾತ್ರರನ್ನು ಪ್ರೀತಿಯಿಂದ ನಡೆಸಿಕೊಳ್ಳುವುದು ಉತ್ತಮ, ಇಲ್ಲದಿದ್ದರೆ ನಿಮ್ಮ ಸಂಬಂಧವು ಮುರಿದು ಹೋಗಬಹುದು. ಉದ್ಯೋಗಿಗಳು ತಮ್ಮನ್ನು ತಮ್ಮ ಬಾಸ್‌ಗೆ ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸಿಕೊಳ್ಳುವ ಅಗತ್ಯವಿದೆ. ನಿಮ್ಮ ತಪ್ಪಾದ ಮಾತುಗಳು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ. ನಿಮ್ಮ ಪರೀಕ್ಷೆಯ ತಯಾರಿಯಲ್ಲಿ ನೀವು ನಿರತರಾಗಿದ್ದರೆ ನಿಮ್ಮ ಗುರುಗಳ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 6

ಶುಭ ಸಮಯ: ಸಂಜೆ 4 ರಿಂದ 8:15 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಈ ರಾಶಿಯವರಿಗೆ ಸ್ವಲ್ಪ ಆತುರದ ಸ್ವಭಾವ ಹಾಗಾಗಿ ಇಂದು ಯಾವುದೇ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಇದು ವೈಯಕ್ತಿಕ ಜೀವನ ಅಥವಾ ವೃತ್ತಿಪರ ಜೀವನವಾಗಲಿ, ಪ್ರತಿ ಹೆಜ್ಜೆಯನ್ನೂ ಯೋಚನೆ ಮಾಡಿ ಇಡುವುದು ಉತ್ತಮ. ಹಣದ ಪರಿಸ್ಥಿತಿ ಕುಸಿಯಬಹುದು. ಇಂದು ನೀವು ವಿನೋದ ಮತ್ತು ಸ್ನೇಹಿತರ ಜೊತೆಗೂಡಿ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ನಿಮಗೆ ಹತ್ತಿರವಿರುವ ಯಾರಾದರೂ ನಿಮ್ಮನ್ನು ಭಾವನಾತ್ಮಕವಾಗಿ ನೋಯಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ದುಃಖಿತರಾಗುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧವೂ ಉತ್ತಮವಾಗಿರುತ್ತದೆ. ಕಚೇರಿ ವಾತಾವರಣವು ಸಕಾರಾತ್ಮಕವಾಗಿರುತ್ತದೆ ಮತ್ತು ನಿಮ್ಮ ಕೆಲಸವು ಉತ್ತಮವಾಗಿ ಸಾಗುತ್ತದೆ. ವ್ಯವಹಾರದಲ್ಲಿ ದೊಡ್ಡ ಲಾಭ ಪಡೆಯುವ ಸಾಧ್ಯತೆಯಿದೆ. ಇಂದು, ಕೆಲವು ವೈಯಕ್ತಿಕ ಕೆಲಸಗಳಿಗಾಗಿ ನೀವು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ನೀವು ತಲೆನೋವಿನ ಸಮಸ್ಯೆಯನ್ನು ಅನುಭವಿಸಬೇಕಾಗಬಹುದು.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 2

ಶುಭ ಸಮಯ: ಮಧ್ಯಾಹ್ನ 3:30 ರಿಂದ 10 ರವರೆಗೆ

ಮೀನ ರಾಶಿ:

ಮೀನ ರಾಶಿ:

ನಿಮ್ಮ ಹದಗೆಟ್ಟ ಆರೋಗ್ಯವು ನಿಮಗೆ ಇಂದು ಇನ್ನಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆರೋಗ್ಯದ ತೊಂದರೆಯಿಂದಾಗಿ ನೀವು ಮಾನಸಿಕವಾಗಿ ಕುಗ್ಗುತ್ತೀರಿ ಜೊತೆಗೆ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳು ಬರಬಹುದು. ನಿಮ್ಮ ಇಂದು ಕೋಪ ಮತ್ತು ಕಿರಿಕಿರಿಯನ್ನು ಅನುಭವಿಸುತ್ತೀರಿ. ಇದರಿಂದಾಗಿ ನಿಮ್ಮ ಸುತ್ತಲಿನ ಜನರಿಂದ ನೀವು ದೂರವಿರಬಹುದು. ಯಾವುದೇ ರೀತಿಯ ಪರಿಸ್ಥಿತಿಯಲ್ಲಿಯೇ ಆಗಲಿ ಆಕ್ರಮಣಕಾರಿ ಪದಗಳನ್ನು ಬಳಸಬೇಡಿ. ನೀವು ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ ದಿನ ಮಿಶ್ರಫಲದಾಯಕವಾಗಿದೆ. ಇದ್ದಕ್ಕಿದ್ದಂತೆ ಕೆಲವು ದೊಡ್ಡ ವೆಚ್ಚಗಳು ಎದುರಾಗಬಹುದು, ಆದರೆ ಇಂದು ಹೊಸ ಆದಾಯದ ಮೂಲವನ್ನು ಪಡೆಯುವ ದಾರಿಯೂ ಗೋಚರಿಸುತ್ತದೆ. ಕಚೇರಿಯಲ್ಲಿರುವ ಕೆಲವು ಸ್ವಾರ್ಥಿ ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಬಹುದು. ಅಂತಹ ಜನರೊಂದಿಗೆ ನೀವು ಜಾಗರೂಕರಾಗಿರಬೇಕು. ವ್ಯಾಪಾರಿಗಳು ಆರ್ಥಿಕ ವಿಷಯಗಳಲ್ಲಿ ಆತುರವನ್ನು ಮಾಡದೇ ವ್ಯವಹರಿಸಬೇಕು.

ಉತ್ತಮ ಬಣ್ಣ: ಕೆಂಗಂದು (ಮರೂನ್)

ಶುಭ ಸಂಖ್ಯೆ: 31

ಶುಭ ಸಮಯ: ಬೆಳಿಗ್ಗೆ 4: 20 ರಿಂದ ಮಧ್ಯಾಹ್ನ 12 ರವರೆಗೆ

English summary

Dina Bhavishya 09 October 2020

Here are dina bhavishya of 9 october 2020, read on,
X
Desktop Bottom Promotion