Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಮೀನ ರಾಶಿಯವರಿಗೆ ಇಂದು ಅದೃಷ್ಟದ ದಿನ

ಬುಧವಾರ ಗಣಪತಿಯನ್ನು ಆರಾಧಿಸಿ, ಇದರಿಂದ ಎಲ್ಲಾ ಕಷ್ಟಗಳು ದೂರಾಗುವುದು. ಬುಧವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

daily horoscope

ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಶುಕ್ಲ
ತಿಥಿ: ಪಂಚಮಿ
ನಕ್ಷತ್ರ: ಸಂಜೆ 07:40ರವರೆಗೆ ರೋಹಿಣಿ ನಂತರ ಮೃಗಶೀರ್ಷ
ರಾಹುಕಾಲ: ಮಧ್ಯಾಹ್ನ 12:24ರಿಂದ 01:58ರವರೆಗೆ
ಯಮಗಂಡಕಾಲ: ಬೆಳಗ್ಗೆ 07:40ರಿಂದ 09:15ರವರೆಗೆ
ಗುಳಿಕಕಾಲ: ಬೆಳಗ್ಗೆ 10:49ರಿಂದ ಮಧ್ಯಾಹ್ನ 12:24ರವರೆಗೆ
ದುರ್ಮುಹೂರ್ತ: ಬೆಳಗ್ಗೆ 11:59ರಿಂದ ಮಧ್ಯಾಹ್ನ 12:49ರವರೆಗೆ
ಸೂರ್ಯೋದಯ: ಬೆಳಗ್ಗೆ 6.06
ಸೂರ್ಯಾಸ್ತ: ಸಂಜೆ 6.42

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಇಂದು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಒಂದು ಚಿಕ್ಕ ತಪ್ಪು ಮಾಡಿದರೂ ಬಾಸ್‌ನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ . ಈ ದಿನ ದೊಡ್ಡ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಸಾಲ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಪೋಷಕರೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಇಂದು, ತಂದೆಯಿಂದ ಆರ್ಥಿಕ ಲಾಭವೂ ಸಾಧ್ಯ. ನಿಮ್ಮ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡಲು ಪ್ರಯತ್ನಿಸಿ. ನಿಮ್ಮ ಅಸಡ್ಡೆ ವರ್ತನೆ ನಿಮ್ಮ ಹಾಗೂ ಸಂಗಾತಿಯ ನಡುವಿನ ಅಂತರ ಹೆಚ್ಚಿಸಬಹುದು. ಆರೋಗ್ಯದ ವಿಷಯದಲ್ಲಿ ದಿನವು ಸರಾಸರಿಯಾಗಲಿದೆ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 19

ಅದೃಷ್ಟದ ಸಮಯ: ಬೆಳಗ್ಗೆ 9:45 ರಿಂದ ಮಧ್ಯಾಹ್ನ 3 ರವರೆಗೆ

 ವೃಷಭ ರಾಶಿ

ವೃಷಭ ರಾಶಿ

ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ಇಂದು ಅತ್ಯಂತ ಅದೃಷ್ಟದ ದಿನವಾಗಿದೆ. ನೀವು ಹೊಸ ಒಪ್ಪಂದವನ್ನು ಪಡೆಯಬಹುದು. ನಿಮ್ಮ ಕೆಲಸದ ವೇಗ ಹೆಚ್ಚುವುದು. ಉದ್ಯೋಗಸ್ಥರು ಇಂದು ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ನಿಮ್ಮ ಸಣ್ಣ ತಪ್ಪಿನಿಂದಾಗಿ ಉನ್ನತ ಅಧಿಕಾರಿಗಳ ಮುಂದೆ ನಿಮ್ಮ ಇಮೇಜ್ ಹಾಳಾಗಬಹುದು. ಇಂದು ನಿಮಗೆ ನೀಡಲಾದ ಕೆಲವು ಪ್ರಮುಖ ಜವಾಬ್ದಾರಿಗಳನ್ನು ನಿಮ್ಮಿಂದ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ, ಆದ್ದರಿಂದ ಎಚ್ಚರಿಕೆಯಿಂದ ಕೆಲಸ ಮಾಡಿ. ಕುಟುಂಬ ಜೀವನದಲ್ಲಿ ಎಲ್ಲವೂ ಸಾಮಾನ್ಯವಾಗಿರುತ್ತದೆ. ನಿಮ್ಮ ಮನೆಯಲ್ಲಿ ವಯಸ್ಸಾದವರು ಇದ್ದರೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಣದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗುವುದು. ಬಜೆಟ್‌ಗಿಂತ ಹೆಚ್ಚಿನ ಖರ್ಚು ನಿಮ್ಮ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಇಂದು ನೀವು ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕಣ್ಣುಗಳಲ್ಲಿ ಉರಿ, ನೋವು ಮುಂತಾದ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 24

ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 9 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಕುರುಡಾಗಿ ನಂಬಬೇಡಿ, ಇಲ್ಲದಿದ್ದರೆ ನೀವು ಕೆಲವು ಒಳ ರಾಜಕೀಯಕ್ಕೆ ಬಲಿಯಾಗಬಹುದು. ಕೆಲಸದ ಜೊತೆಗೆ ನಿಮ್ಮ ಸುತ್ತಮುತ್ತ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಲಹೆ ನೀಡಲಾಗಿದೆ. ಕಬ್ಬಿಣ, ಮರ, ಪ್ಲಾಸ್ಟಿಕ್ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸ ಮಾಡುವವರು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ತುಂಬಿರುತ್ತವೆ. ನೀವು ಮನೆಯ ಕಿರಿಯ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ,ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸಿ. ಹಣದ ಮುಗ್ಗಟ್ಟು ದೂರವಾಗಲಿದೆ. ಇಂದು ನೀವು ತುಂಬಾ ಉತ್ಸುಕರಾಗಿ ಯಾವುದೇ ಪ್ರಮುಖ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಅದು ಉತ್ತಮವಾಗಿರುತ್ತದೆ. ಈ ರಾಶಿಯ ಗರ್ಭಿಣಿಯರು ಇಂದು ಹೆಚ್ಚು ಜಾಗರೂಕರಾಗಿರಬೇಕು.

ಅದೃಷ್ಟದ ಬಣ್ಣ: ಕೆನೆ

ಅದೃಷ್ಟದ ಸಂಖ್ಯೆ: 17

ಅದೃಷ್ಟದ ಸಮಯ: ಬೆಳಗ್ಗೆ 4:10 ರಿಂದ ಮಧ್ಯಾಹ್ನ 2 ರವರೆಗೆ

 ಕರ್ಕ ರಾಶಿ

ಕರ್ಕ ರಾಶಿ

ಮನೆಯಲ್ಲಿ ಸದಸ್ಯರ ಅನಾರೋಗ್ಯದ ಕಾರಣದಿಂದಾಗಿ ನಿಮಗೆ ಒತ್ತಡ ಹೆಚ್ಚಾಗಲಿದೆ. ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗದೇ ಇರಬಹುದು. ನೀವು ಹೆಚ್ಚು ಚಿಂತಿಸುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ನಿಮ್ಮ ಆರೋಗ್ಯವೂ ಹದಗೆಡಬಹುದು. ಕೆಲಸದ ಬಗ್ಗೆ ಹೇಳುವುದಾರೆ ಇಂದು ಕಚೇರಿಯಲ್ಲಿ ಹೆಚ್ಚು ತಮಾಷೆ ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ, ನಿಮ್ಮ ನಾಲಗೆಯಿಂದ ಬೀಳುವ ಮಾತುಗಳಿಂದಲೇ ತೊಂದರೆಯಾಗಬಹುದು, ಜಾಗ್ರತೆವಹಿಸಿ. ಮತ್ತೊಂದೆಡೆ, ವ್ಯಾಪಾರಸ್ಥರಿಗೆ ಇಂದು ದೀರ್ಘ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ನಿಮ್ಮ ಈ ಪ್ರಯಾಣವು ನಿಮ್ಮ ಹಣ ಮತ್ತು ಸಮಯವನ್ನು ಮಾತ್ರ ವ್ಯರ್ಥ ಮಾಡುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿದೆ. ಇಂದು ನೀವು ಹೆಚ್ಚುವರಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.

ಅದೃಷ್ಟದ ಬಣ್ಣ: ಗಾಢ ಕೆಂಪು

ಅದೃಷ್ಟದ ಸಂಖ್ಯೆ: 30

ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

 ಸಿಂಹ ರಾಶಿ

ಸಿಂಹ ರಾಶಿ

ನೀವು ನಿರುದ್ಯೋಗಿಗಳಾಗಿದ್ದರೆ, ಉದ್ಯೋಗಕ್ಕಾಗಿ ಸಂದರ್ಶನವನ್ನು ನೀಡಲು ಹೊರಟಿದ್ದರೆ ಪೂರ್ಣ ಸಿದ್ಧತೆಯೊಂದಿಗೆ ಮುಂದುವರೆಯಿರಿ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ವ್ಯಕ್ತಿಯು ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳಲು ಪ್ರಯತ್ನಿಸಬೇಕು. ಇಂದು ನೀವು ಹೊಸ ಅವಕಾಶವನ್ನು ಪಡೆಯಬಹುದು. ಅನಗತ್ಯ ಭಿನ್ನಾಭಿಪ್ರಾಯಗಳಿಂದಲೂ ನೀವು ಬಳಲಬಹುದು. ಮನೆಯ ವಾತಾವರಣ ಇಂದು ಚೆನ್ನಾಗಿರುವುದಿಲ್ಲ. ನಿಮ್ಮ ಕೋಪದ ಸ್ವಭಾವದಿಂದಾಗಿ ಮನೆಯ ಕೆಲವು ಸದಸ್ಯರು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ಇಂದು ನಿಮ್ಮ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುವುದಿಲ್ಲ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಇಂದು ಯಾವುದೇ ಕೆಲಸವನ್ನು ಆತುರದಿಂದ ಮತ್ತು ಗಾಬರಿಯಿಂದ ಮಾಡಬೇಡಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ:10

ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ

 ಕನ್ಯಾ ರಾಶಿ

ಕನ್ಯಾ ರಾಶಿ

ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಲು ಹೊರಟಿದ್ದರೆ, ಯಾವುದೇ ಆತುರಪಡಬೇಡಿ, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಸರ್ಕಾರಿ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನೀವು ಕಛೇರಿಯಲ್ಲಿ ಕೆಲವು ದೊಡ್ಡ ಗೌರವವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಮನೆಯ ವಾತಾವರಣವು ಹರ್ಷಚಿತ್ತದಿಂದ ಕೂಡಿರುತ್ತದೆ. ಇಂದು ಪ್ರೀತಿಪಾತ್ರರ ಜೊತೆ ಬಹಳ ವಿಶೇಷವಾದ ದಿನವಾಗಲಿದೆ. ಹಣದ ಸ್ಥಿತಿ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ

ತುಲಾ ರಾಶಿ

ತುಲಾ ರಾಶಿ

ಇಂದು ನಿಮ್ಮ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳು ಬರಬಹುದು. ನಿಮ್ಮ ಪ್ರೀತಿಪಾತ್ರರ ತಪ್ಪು ನಡವಳಿಕೆಯು ನಿಮ್ಮನ್ನು ಅತೃಪ್ತಿಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ. ತಾಳ್ಮೆಯಿಂದಿರಿ, ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರಸ್ಥರು ನಷ್ಟವನ್ನು ಅನುಭವಿಸಬಹುದು. ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ, ಹಾಗೆಯೇ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸದಿರುವುದು ಕೂಡ ಒಳ್ಳೆಯದು. ಎಲ್ಲಾ ಚಿಂತೆಗಳನ್ನು ಮರೆತು, ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನಹರಿಸಿ. ಶೀಘ್ರದಲ್ಲೇ ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆಲಸ್ಯವನ್ನು ಅನುಭವಿಸಬಹುದು.

ಅದೃಷ್ಟದ ಬಣ್ಣ: ಆಕಾಶ

ಅದೃಷ್ಟದ ಸಂಖ್ಯೆ: 16

ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಸ್ವಲ್ಪ ಸಮಯದವರೆಗೆ ನಿಮ್ಮ ಆರೋಗ್ಯವು ಸರಿಯಾಗಿಲ್ಲದಿದ್ದರೆ, ನೀವು ಅಸಡ್ಡೆಯಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ನೀವು ನಿಯಮಿತವಾಗಿ ನಿಮ್ಮ ಔಷಧಿಗಳನ್ನು ತೆಗೆದುಕೊಳ್ಳಬೇಕು, ಇದರಿಂದ ನೀವು ವಿಶ್ರಾಂತಿಗೆ ಗಮನ ಕೊಡುತ್ತೀರಿ. ಪಾರಸ್ಥರು ನ್ಯಾಯಾಲಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಉದ್ಯೋಗಿಗಳು ಕೆಲಸದ ಕಡೆ ಗಮನ ನೀಡಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದ ಸಂತೋಷವು ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಸಮಯ: ಬೆಳಗ್ಗೆ 6 ರಿಂದ ಮಧ್ಯಾಹ್ನ 2:30

 ಧನು ರಾಶಿ

ಧನು ರಾಶಿ

ಇಂದು ನೀವು ಯಾವುದೇ ದೊಡ್ಡ ಚಿಂತೆಯನ್ನು ತೊಡೆದುಹಾಕಬಹುದು. ಬಹಳ ದಿನಗಳ ನಂತರ ನೀವು ಇಂದು ಉತ್ತಮ ಭಾವನೆ ಹೊಂದುವಿರಿ. ಇಂದು ನೀವು ನಿಮ್ಮ ಬಿಡುವಿಲ್ಲದ ದಿನಚರಿಯಿಂದ ನಿಮಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತೀರಿ. ಬಹುಶಃ ಸ್ನೇಹಿತರೊಂದಿಗೆ ಚಲನಚಿತ್ರ ನೋಡಲು ಹೋಗಬಹುದು ಅಥವಾ ಶಾಪಿಂಗ್ ಮಾಡಲು ಹೋಗಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರು ಈ ಸಮಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ.

ದೊಡ್ಡ ಉದ್ಯಮಿಗಳು ತಮ್ಮ ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಅನಗತ್ಯ ಅಹಂಕಾರ ನಿಮಗೆ ಒಳ್ಳೆಯದಲ್ಲ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 23

ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 8:25 ರವರೆಗೆ

ಮಕರ ರಾಶಿ

ಮಕರ ರಾಶಿ

ಉದ್ಯೋಗಸ್ಥರಿಗೆ ಇಂದು ಅತ್ಯಂತ ಮಹತ್ವದ ದಿನವಾಗಲಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳ ಜೊತೆಗೆ, ನಿಮಗೆ ಕೆಲವು ಹೊಸ ಹಕ್ಕುಗಳನ್ನು ಸಹ ನೀಡಬಹುದು. ಇದೆಲ್ಲವೂ ನಿಮ್ಮ ಶ್ರಮದ ಫಲ. ನೀವು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಆತುರದಲ್ಲಿ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ. ಔಷಧಿ ವ್ಯಾಪಾರ ಮಾಡುವವರು ತಮ್ಮ ದಾಸ್ತಾನು ಹೆಚ್ಚಿಸಲು ಯೋಜಿಸುತ್ತಿದ್ದರೆ, ಇಂದು ಅವರಿಗೆ ಅನುಕೂಲಕರ ದಿನವಾಗಿದೆ. ನೀವು ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಮನೆಯ ಸದಸ್ಯರಲ್ಲಿ ಒಗ್ಗಟ್ಟು ಉಳಿಯುತ್ತದೆ. ಇಂದು ನಿಮ್ಮ ಹಿರಿಯರು ನಿಮಗೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನೀವು ಇಂದು ತುಂಬಾ ಶಕ್ತಿಯುತವಾಗಿರುತ್ತೀರಿ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 16

ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಇತರರ ವ್ಯವಹಾರಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ, ಇಲ್ಲದಿದ್ದರೆ ನೀವೇ ತೊಂದರೆಗಳನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮನ್ನು ಕೇಳದ ಹೊರತು ನಿಮ್ಮ ಅಭಿಪ್ರಾಯವನ್ನು ನೀಡುವುದನ್ನು ತಪ್ಪಿಸಿ. ದೊಡ್ಡ ಉದ್ಯಮಿಗಳು ಇಂದು ದೀರ್ಘ ಪ್ರಯಾಣವನ್ನು ಮಾಡಬೇಕಾಗಬಹುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮ್ಮ ವ್ಯವಹಾರದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಿಗಳು ಕೆಲಸದ ಬಗ್ಗೆ ಹೆಚ್ಚು ಅಸಡ್ಡೆಯಿಂದ ದೂರವಿರಿ. ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಅದೃಷ್ಟದ ದಿನವಾಗಲಿದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 24

ಅದೃಷ್ಟದ ಸಮಯ: ಬೆಳಗ್ಗೆ 4:20 ರಿಂದ ಮಧ್ಯಾಹ್ನ 3 ರವರೆಗೆ

ಮೀನ ರಾಶಿ

ಮೀನ ರಾಶಿ

ಬಾಸ್ ನಿಮಗೆ ಕಚೇರಿಯಲ್ಲಿ ಕೆಲವು ಪ್ರಮುಖ ಕೆಲಸವನ್ನು ಒಪ್ಪಿಸಿದರೆ, ಇಂದು ನೀವು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮೇಲಧಿಕಾರಿಗಳು ನಿಮ್ಮ ಕಾರ್ಯವೈಖರಿಯಿಂದ ತುಂಬಾ ಸಂತೋಷಪಡುತ್ತಾರೆ, ಜೊತೆಗೆ ನೀವು ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರು ಇಂದು ಯಾವುದೇ ಪ್ರಮುಖ ಸಮಸ್ಯೆಗಳಿಂದ ಮುಕ್ತರಾಗಬಹುದು. ನಿಮ್ಮ ಪ್ರಮುಖ ಕೆಲಸಗಳಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಅವರ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ, ನಿಮಗೆ ಹೊಟ್ಟೆಯಲ್ಲಿ ಉರಿ, ಅಸಿಡಿಟಿ, ಗ್ಯಾಸ್ ಇತ್ಯಾದಿ ಸಮಸ್ಯೆಗಳಿರಬಹುದು.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 6:05 ರವರೆಗೆ

English summary

Dina Bhavishya -06 April 2022 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishya 06 April 2022 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
X
Desktop Bottom Promotion