Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಸೋಮವಾರದ ದಿನ ಭವಿಷ್ಯ: ಮಕರ ರಾಶಿಯವರೇ ಈ ದಿನ ವಿಶೇಷವಾಗಿರಲಿದೆ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:


ಮೇಷ ರಾಶಿ:
ವಿದ್ಯಾರ್ಥಿಗಳಿಗೆ ಈ ದಿನದ ಸಮಯವು ಅನುಕೂಲಕರವಾಗಿದೆ, ವಿಶೇಷವಾಗಿ ಉನ್ನತ ಶಿಕ್ಷಣಕ್ಕಾಗಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿರುವವರಿಗೆ ಈ ದಿನ ಶುಭದಿನ. ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಇಂದು ಕೆಲವು ಉತ್ತಮ ಮಾಹಿತಿಯನ್ನು ಪಡೆಯಬಹುದು. ಕೆಲಸದ ಬಗ್ಗೆ ಮಾತನಾಡುವುದಾದರೆ, ಇಂದು ಕಚೇರಿಯಲ್ಲಿ ಹೆಚ್ಚು ಕೆಲಸ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಒತ್ತಡ ಮತ್ತು ಉದ್ವೇಗವನ್ನು ಅನುಭವಿಸುವಿರಿ. ಆದಾಗ್ಯೂ, ಈ ಸಮಯದಲ್ಲಿ ನೀವು ಸ್ವಲ್ಪ ಧೈರ್ಯವನ್ನು ತೋರಿಸಬೇಕಾಗುತ್ತದೆ. ನೀವು ಸ್ವಲ್ಪ ಪ್ರಯತ್ನಿಸಿದರೆ, ನಿಮ್ಮ ಕೆಲಸ ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಹಣಕಾಸಿನ ಸ್ಥಿತಿಯ ಸುಧಾರಣೆಯೊಂದಿಗೆ, ನಿಮ್ಮ ಹಳೆಯ ಬಿಲ್‌ಗಳನ್ನು ಇಂದು ನೀವು ಪಾವತಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ದೊಡ್ಡ ಚಿಂತೆಯನ್ನು ದೂರಮಾಡುತ್ತದೆ. ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ.
ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)
ಶುಭ ಸಂಖ್ಯೆ: 20
ಶುಭ ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ

ವೃಷಭ ರಾಶಿ :
ಇಂದು ನೀವು ಆರಾಮದಾಯಕವಾಗಿ ಹಾಗೂ ಚಟುವಟಿಕೆಯಿಂದ ಇರುವ ದಿನಕಳೆದ ಕೆಲವು ದಿನಗಳಿಂದ ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಇಂದು ನಿಮ್ಮ ಆರೋಗ್ಯದಲ್ಲಿ ತುಸು ಚೇತರಿಕೆ ಕಾಣಲಿದೆ. ಕುಟುಂಬದದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಇಂದು ನಿಮ್ಮ ತಂದೆ ನಿಮ್ಮ ಮೇಲೆ ಯಾವುದೋ ಕಾರಣಕ್ಕೆ ಕೋಪಗೊಳ್ಳುತ್ತಾರೆ. ಈ ವಿಷಯದ ಬಗ್ಗೆ ಅವರೊಂದಿಗೆ ಮಾತನಾಡುವುದು ಮತ್ತು ತಪ್ಪುಗ್ರಹಿಕೆಯನ್ನು ಹೋಗಲಾಡಿಸುವುದಕ್ಕೆ ಪ್ರಯತ್ನಿಸುವುದು ಉತ್ತಮ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಪ್ರೀತಿಯೂ ಹೆಚ್ಚಾಗುತ್ತದೆ. ಆರ್ಥಿಕ ರಂಗದಲ್ಲಿ, ದಿನ ಚೆನ್ನಾಗಿರುತ್ತದೆ. ಆರೋಗ್ಯ ದೃಷ್ಟಿಕೋನದಿಂದ, ಮಾನಸಿಕವಾಗಿ ತುಂಬಾ ಉತ್ತಮವಾಗಿರುತ್ತದೆ, ನೀವು ಮಾನಸಿಕವಾಗಿ ಆರೊಗ್ಯವಾಗಿರುತ್ತೀರಿ ಮತ್ತು ದೈಹಿಕವಾಗಿ ನೀವು ತುಂಬಾ ಲವಲವಿಕೆಯಿಂದ ಇರುತ್ತೀರಿ.
ಉತ್ತಮ ಬಣ್ಣ: ಪೀಚ್ (ತುಸು ಕೇಸರಿ)
ಶುಭ ಸಂಖ್ಯೆ: 4
ಒಳ್ಳೆಯ ಸಮಯ: ಸಂಜೆ 6 ರಿಂದ 10 ರವರೆಗೆ

ಮಿಥುನ ರಾಶಿ:
ಭಾವನಾತ್ಮಕ ಅಥವಾ ಕೋಪಗೊಳ್ಳುವ ಮೂಲಕ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಇಂದು ಒಳ್ಳೆಯದಲ್ಲ, ಹೀಗೆ ಮಾಡಿದರೆ ಭವಿಷ್ಯದಲ್ಲಿ ಮಾತ್ರ ನೀವು ತುಂಬಾ ವಿಷಾದಿಸುತ್ತೀರಿ. ಇಂದು ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ದೊಡ್ಡ ಆರ್ಥಿಕ ಲಾಭ ಪಡೆಯುವ ಸಾಧ್ಯತೆಗಳಿವೆ. ಇಂದು ನೀವು ನಿಮ್ಮ ಸಣ್ಣ ಸಾಲಗಳನ್ನು ಸಹ ಮರುಪಾವತಿಸಲು ಸಾಧ್ಯವಾಗುತ್ತದೆ. ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಮತ್ತೆ ಆತುರಪಡದಂತೆ ಎಚ್ಚರವಹಿಸಬೇಕು. ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಬಹಳ ಶಾಂತಿಯುತ ದಿನವಾಗಿರುತ್ತದೆ, ಆದರೆ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುವಾಗ ನೀವು ತುಂಬಾ ಕೋಪಗೊಳ್ಳಬಾರದು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ನಿಮ್ಮ ಮಾತುಗಳನ್ನು ಬಹಳ ಯೋಚನೆ ಮಾಡಿ ಆಡಿ. ನಿಮ್ಮ ಸಣ್ಣ ತಪ್ಪು ಕೂಡ ನಿಮ್ಮ ಮನೆಯ ಶಾಂತಿಗೆ ಭಂಗ ತರುತ್ತದೆ. ಇಂದು, ನಿರಂತರ ಕೆಲಸದಿಂದಾಗಿ ನಿಮ್ಮ ಆರೋಗ್ಯವು ಹದಗೆಡಬಹುದು.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 8
ಶುಭ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ

ಕರ್ಕಾಟಕ ರಾಶಿ:
ವಿವಾಹಿತರ ಜೀವನದಲ್ಲಿ ವಿಚಿತ್ರ ಸಂದರ್ಭಗಳು ಎದುರಾಗಬಹುದು. ಸಂಗಾತಿಯೊಂದಿಗಿನ ಮನಸ್ತಾಪ ಇನ್ನೂ ಹೆಚ್ಚಾಗಬಹುದು. ತಡವಾಗುವುದಕ್ಕೂ ಮೊದಲೇ ನೀವು ವಿಷಯವನ್ನು ನಿರ್ವಹಿಸಲು ಪ್ರಯತ್ನಿಸಿ. ನಿಮ್ಮ ಸಂಬಂಧಗಳು ಕ್ಷೀಣಿಸುತ್ತಿರುವುದು ಮಾತ್ರವಲ್ಲದೆ ನಿಮ್ಮ ವೈವಾಹಿಕ ಜೀವನವು ಅವನತಿಯತ್ತ ಸಾಗುತ್ತಿದೆ ಎಂಬುದನ್ನು ನೀವು ಇಬ್ಬರೂ ಅರ್ಥಮಾಡಿಕೊಳ್ಳಬೇಕು. ನಿಮ್ಮ ನಡವಳಿಕೆಯಿಂದ ಮನೆಯ ಇತರ ಸದಸ್ಯರು ಸಹ ತೊಂದರೆಗೊಳಗಾಗುತ್ತಾರೆ. ಆರ್ಥಿಕ ದೃಷ್ಟಿಯಿಂದ, ದಿನವು ಹೆಚ್ಚು ಲಾಭದಾಯಕವಲ್ಲ. ಇಂದು ನೀವು ಆದಾಯಕ್ಕಿಂತ ಹೆಚ್ಚಿನ ಖರ್ಚುಗಳನ್ನು ಹೊಂದಿರಬಹುದು. ಕಚೇರಿ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರೊಂದಿಗೆ ನೀವು ಮಾತನಾಡಿದರೆ, ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಇಂದು, ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು, ಆದರೆ ಹಣದ ವಿಷಯದಲ್ಲಿ ಜಾಗರೂಕರಾಗಿರಿ, ನೀವು ಮೋಸ ಹೋಗಬಹುದು.ಒಟ್ಟಿನಲ್ಲಿ ಈ ದಿನ ನಿಮಗೆ ಅಷ್ಟು ಉತ್ತಮವಾಗಿಲ್ಲ.
ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)
ಶುಭ ಸಂಖ್ಯೆ: 12
ಶುಭ ಸಮಯ: ಮಧ್ಯಾಹ್ನ 2 ರಿಂದ 7 ರವರೆಗೆ

ಸಿಂಹ ರಾಶಿ:
ನಿಮ್ಮ ಪ್ರಮುಖ ಕೆಲಸವನ್ನು ನೀವು ಕೆಲವು ದಿನಗಳಿಂದ ಮುಂದೂಡುತ್ತಿದ್ದರೆ, ಅದನ್ನು ಪೂರ್ಣಗೊಳಿಸಲು ಇಂದು ಉತ್ತಮ ದಿನವಾಗಿದೆ. ನಿಮ್ಮ ಕೆಲಸವನ್ನು ನಿಮ್ಮದೇ ಆದ ರೀತಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಿ, ಇತರರನ್ನು ನಂಬಿ ನಿಮ್ಮ ಕೆಲಸವನ್ನುಸರಿಯಾಗಿ ನಿರ್ವಹಿಸದೇ ಇರಬೇಡಿ. ಇಲ್ಲದಿದ್ದರೆ ನೀವು ನಿರಾಶೆ ಅನುಭವಿಸುವಿರಿ. ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಿನವಾಗಿರುತ್ತದೆ. ನೀವು ತುಂಬಾ ರೋಮ್ಯಾಂಟಿಕ್ ಮನಸ್ಥಿತಿಯಲ್ಲಿರುತ್ತದೆ. ನಿಮ್ಮ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು, ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಸಹ ಹೋಗಬಹುದು. ಮತ್ತೊಂದೆಡೆ, ನೀವು ಒಬ್ಬಂಟಿಯಾಗಿದ್ದರೆ, ನಿಮ್ಮ ಮುಂದೆ ಇಂದು ಪ್ರೀತಿಯ ಪ್ರಸ್ತಾಪ ಬರಬಹುದು, ಆದರೆ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಮರೆಯಬೇಡಿ. ಹಣದ ದೃಷ್ಟಿಯಿಂದ ನೀವು ಇಂದು ಉತ್ತಮ ಫಲವನ್ನು ಪಡೆಯಬಹುದು. ನಿಮ್ಮ ಸಹೋದರನಿಂದ ಆರ್ಥಿಕ ಸಹಾಯ ಪಡೆಯುವ ಸಾಧ್ಯತೆಯಿದೆ, ಅದು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಡು ನೀಲಿ
ಶುಭ ಸಂಖ್ಯೆ: 2
ಶುಭ ಸಮಯ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾರಾಶಿ:
ಇಂದು ನೀವು ಯಾರೊಂದಿಗಾದರೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಬಹುಶಃ ನೀವು ನಿಮ್ಮ ವಾದಕ್ಕೆ ಅಂಟಿಕೊಳ್ಳುತ್ತೀರಿ ಮತ್ತು ರಾಜಿ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. ನೀವು ಯಾರ ಭಾವನೆಗಳನ್ನು ನೋಯಿಸದಿರುವುದು ಉತ್ತಮ. ನೀವು ಇಂದು ಕಾರ್ಯ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗಬಹುದು. ಈ ಅವಕಾಶದ ಲಾಭವನ್ನು ನೀವು ಪಡೆದುಕೊಂಡರೆ, ಶೀಘ್ರದಲ್ಲೇ ನೀವು ಯಶಸ್ಸಿನ ಉತ್ತುಂಗದಲ್ಲಿರುತ್ತೀರಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಂವಾದ ನಡೆಸಬಹುದು. ನೀವು ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರಬಹುದು. ನೀವು ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ವಿಫಲರಾಗುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪ್ರೀತಿಪಾತ್ರರ ಕೋಪ ಹೆಚ್ಚಾಗಬಹುದು. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ, ಇಂದು ಅಪಾಯಕಾರಿ ಕೆಲಸ ಮಾಡುವುದನ್ನು ತಪ್ಪಿಸಿ. ನಿಮಗೆ ಅಪಘಾತ ಸಂಭವಿಸಬಹುದು.
ಉತ್ತಮ ಬಣ್ಣ: ಕಡು ಹಸಿರು
ಶುಭ ಸಂಖ್ಯೆ: 14
ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ತುಲಾ ರಾಶಿ:
ಇಂದು ಇದ್ದಕ್ಕಿದ್ದಂತೆ ನೀವು ಬೇರೆ ಕಡೆಗೆ ಎಲ್ಲಿಯಾದರೂ ಪ್ರಯಾಣಿಸಬೇಕಾಗಬಹುದು ಅದು ನಿಮಗೆ ತುಂಬಾ ದಣಿವನ್ನು ಉಂಟು ಮಾಡುತ್ತದೆ. ನಿಮ್ಮ ಒತ್ತಡವೂ ಹೆಚ್ಚಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ವಿಶ್ರಾಂತಿಗೆ ಗಮನ ಕೊಡಬೇಕು ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು. ನೀವು ಕೆಲಸ ಮಾಡುತ್ತಿದ್ದರೆ, ಇಂದು ಹಿರಿಯರು ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ನಿಮ್ಮ ಮೇಲೆ ಒತ್ತಡ ಹೇರಬಹುದು. ಇದು ನಿಮಗೆ ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಕೆಲಸವನ್ನು ಶಾಂತ ಮತ್ತು ಆರಾಮದಾಯಕ ಮನಸ್ಸಿನಿಂದ ಮಾಡಲು ಪ್ರಯತ್ನಿಸಿದರೆ ನೀವು ಖಂಡಿತವಾಗಿಯೂ ಸಫಲರಾಗುತ್ತೀರಿ. ಕುಟುಂಬ ಜೀವನದಲ್ಲಿ ಏರಿಳಿತಗಳು ಇರುತ್ತವೆ. ಮನೆಯ ಸದಸ್ಯರೊಬ್ಬರು ನಿಮ್ಮನ್ನು ಭಾವನಾತ್ಮಕವಾಗಿ ನೋಯಿಸಬಹುದು. ಅವರು ನಿಮ್ಮ ಕೆಲಸದ ಮಧ್ಯ ಪ್ರವೇಶಿಸುತ್ತಾರೆ ಎಂದು ನಿಮಗೆ ಅನ್ನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಅಗತ್ಯವಿರುವ ಕಡೆ ಮಾತ್ರ ಮಾತನಾಡುವುದು ಮತ್ತು ನಿಮ್ಮ ಮಾತುಗಳಿಗೆ ಪ್ರಾಮುಖ್ಯತೆ ನೀಡುವುದು ಬಹಳ ಮುಖ್ಯ. ಇಂದು ಹಣದ ದೃಷ್ಟಿಯಿಂದ ಉತ್ತಮ ಚಿಹ್ನೆಗಳೇನೂ ಇಲ್ಲ. ಆರ್ಥಿಕ ಅಸ್ಥಿರತೆಯಿಂದಾಗಿ ನಿಮ್ಮ ಕೆಲವು ಅನಗತ್ಯ ಕೆಲಸಗಳಲ್ಲಿ ಸಿಲುಕಿಕೊಳ್ಳಬಹುದು.
ಉತ್ತಮ ಬಣ್ಣ: ಕೆಂಗಂದು
ಶುಭ ಸಂಖ್ಯೆ: 19
ಶುಭ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 2:45 ರವರೆಗೆ

ವೃಶ್ಚಿಕ ರಾಶಿ :
ಪ್ರೀತಿಯ ವಿಷಯದಲ್ಲಿ, ಈ ದಿನವು ವಿಶೇಷವಾಗಿದೆ. ನಿಮ್ಮ ಸಂಗಾತಿಗೆ ನೀವು ನಿಮ್ಮ ಹೃದಯದ ಮಾತುಗಳನ್ನು ಬಹಿರಂಗವಾಗಿ ಹೇಳುವಿರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನೀವು ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಪೋಷಕರ ಆಶೀರ್ವಾದ ಪಡೆಯಲು ಈ ದಿನವು ಒಳ್ಳೆಯದು. ಕೆಲಸ ಮಾಡುವ ಜಾಗದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ಕಚೇರಿ ವಾತಾವರಣವು ತುಂಬಾ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಕೆಲಸವನ್ನು ನೀವು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಯಾವುದೇ ಕೆಲಸವು ಅರ್ಧದಲ್ಲಿ ಸಿಲುಕಿಕೊಂಡರೆ ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಜೀವನ ಸಂಗಾತಿಯ ಪ್ರಣಯ ಶೈಲಿಯನ್ನು ನೋಡಿ ಇಂದು ನಿಮಗೆ ಸಾಕಷ್ಟು ಆಶ್ಚರ್ಯವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 16
ಶುಭ ಸಮಯ: ಸಂಜೆ 7:30 ರಿಂದ 9 ರವರೆಗೆ

ಧನು ರಾಶಿ:
ನಿಮ್ಮ ಇಂದಿನ ವೆಚ್ಚಗಳ ಹೆಚ್ಚಳದಿಂದಾಗಿ ಆರ್ಥಿಕ ಪರಿಸ್ಥಿತಿಗಳು ದುರ್ಬಲಗೊಳ್ಳಬಹುದು. ಅಲ್ಲದೆ, ಇಂದು ನೀವು ಪಡೆಯುವ ಆರ್ಥಿಕ ಲಾಭದ ವಿಳಂಬದಿಂದಾಗಿ, ನಿಮ್ಮ ತೊಂದರೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಇಷ್ಟು ಮಾತ್ರವಲ್ಲ, ನೀವು ಇಂದು ಸಾಲ ತೆಗೆದುಕೊಳ್ಳಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಕೆಲವು ಏರಿಳಿತಗಳು ಇರಬಹುದು. ಇಂದು, ನಿಮ್ಮ ಸಂಗಾತಿಯ ಕೋಪಗೊಂಡ ಸ್ವಭಾವವು ನಿಮ್ಮ ನಡುವೆ ಮನಸ್ತಾಪವನ್ನು ಉಂಟುಮಾಡಬಹುದು. ಆದರೆ ಇದಕ್ಕೆ ವಿರುದ್ಧವಾಗಿ ನಿಮ್ಮ ಪೋಷಕರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಅದು ನಿಮಗೆ ಸರಿಯಾದ ಪರಿಹಾರವನ್ನು ನೀಡುತ್ತದೆ. ನಿಮ್ಮ ದಿನವನ್ನು ನೀವು ಮೊದಲೇ ಯೋಜಿಸಿದರೆ, ಅದರಿಂದ ನಿಮಗೆ ಉತ್ತಮ ಲಾಭ ಸಿಗುತ್ತದೆ. ಕಚೇರಿಯಲ್ಲಿ ನಿಮಗೆ ಕೆಲಸ ಮಾಡಲು ಅಷ್ಟಾಗಿ ಮನಸ್ಸಿರುವುದಿಲ್ಲ. ಅಂತಹ ಅಜಾಗರೂಕತೆಯನ್ನು ಮಾಡದಿರುವುದು ಉತ್ತಮ, ಇಲ್ಲದಿದ್ದರೆ ಅದು ಮುಂದೆ ಕಷ್ಟವನ್ನು ಎದುರಿಸುವಂತೆ ಮಾಡುತ್ತದೆ. ಇಂದು ನೀವು ಆಹಾರದಲ್ಲಿನ ಅವ್ಯವಸ್ಥೆಯಿಂದಾಗಿ ಹೊಟ್ಟೆನೋವನ್ನು ಅನುಭವಿಸುವ ಸಾಧ್ಯತೆ ಇದೆ.
ಉತ್ತಮ ಬಣ್ಣ: ಕಡು ಕೆಂಪು
ಶುಭ ಸಂಖ್ಯೆ: 32
ಶುಭ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:55

ಮಕರ ರಾಶಿ:
ಇಂದು ನಿಮಗೆ ವಿನೋದ ಮತ್ತು ಮನರಂಜನೆಯಿಂದ ತುಂಬಿರುವ ದಿನ. ನಿಮ್ಮ ಪ್ರೀತಿಪಾತ್ರರೊಡನೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ಕೆಲಸದ ಬಗ್ಗೆ ಮಾತನಾಡುವುದಾದರೆ, ಕೆಲವು ಅನುಭವಿ ಜನರ ಸಲಹೆಯು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಇಂದು ಸಾಬೀತಾಗುತ್ತದೆ, ವಿಶೇಷವಾಗಿ ಇಂದು ವ್ಯಾಪಾರ ಮಾಡುವ ಜನರು ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಈ ಸಮಯದಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಮಕ್ಕಳನ್ನು ಪಡೆಯಬೇಕೆಂದು ಬಯಸುವವರ ಆಶಯ ಇಂದು ಈಡೇರಬಹುದು. ನೀವು ಇಂದು ಕೆಲವು ಪ್ರಭಾವಿ ಜನರನ್ನು ಭೇಟಿ ಮಾಡಬಹುದು. ನಿಮ್ಮ ಉತ್ತಮ ನಡವಳಿಕೆ ಮತ್ತು ಸಂಭಾಷಣೆಯಲ್ಲಿನ ಕೌಶಲ್ಯದಿಂದ ಅವರು ಹೆಚ್ಚು ಪ್ರಭಾವಿತರಾಗುತ್ತಾರೆ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 12:25 ರಿಂದ 4 ರವರೆಗೆ

ಕುಂಭ ರಾಶಿ:
ಇಂದು ನಿಮ್ಮ ಜೀವನ ಸಂಗಾತಿಯ ವರ್ತನೆ ನಿಮಗೆ ಒಳ್ಳೆಯದನ್ನು ಉಂಟು ಮಾಡುವುದಿಲ್ಲ. ನಿಮ್ಮ ನಡುವೆ ಮುಖಾಮುಖಿ ಉಂಟಾಗುವ ಸಾಧ್ಯತೆ. ಅಂತಹ ಪರಿಸ್ಥಿತಿಯಲ್ಲಿ, ಶಾಂತಿಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಕಚೇರಿಯಲ್ಲಿ ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿ. ನಿಮ್ಮ ಒತ್ತಡ ಹೆಚ್ಚಾಗುತ್ತದೆ ಮತ್ತು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಆರ್ಥಿಕ ಲಾಭದ ಸಾಧ್ಯತೆಯಿದೆ. ಆಮದು ರಫ್ತಿಗೆ ಸಂಬಂಧಿಸಿದಂತೆ ನೀವು ಕೆಲಸ ಮಾಡುತ್ತಿದ್ದರೆ ಇಂದಿನ ದಿನ ನಿಮಗೆ ಬಹಳ ಮುಖ್ಯವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತಲೆದೂರಬಹುದು. ಇಂದು ಏನನ್ನಾದರೂ ಕಳೆದುಕೊಳ್ಳುವ ಭಯ ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ, ಇದರಿಂದಾಗಿ ಮನಸ್ಸು ಚಂಚಲವಾಗಿರುತ್ತದೆ. ಈ ಭಯದಿಂದ ಹೊರಬರಲು ಮತ್ತು ಅಪಾಯವನ್ನು ತಡೆಗಟ್ಟಲು ಜಾಗರೂಕತ್ ವಹಿಸುವುದು ಉತ್ತಮ. ಇಂದು ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನವಾಗಲಿದೆ.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 11
ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ಮೀನ ರಾಶಿ:
ಉದ್ಯಮಿಗಳು ಇಂದು ಸಣ್ಣ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ದೊಡ್ಡ ಲಾಭ ಪಡೆಯಲು ವಿಳಂಬವಾಗಿದ್ದರೂ ನೀವು ನಿರಾಶೆಗೊಳ್ಳಬೇಕಾಗಿಲ್ಲ. ನಿಮ್ಮ ಯೋಜನೆಗಳ ಪ್ರಕಾರ ನೀವು ಮುಂದುವರಿಯಿರಿ. ಮತ್ತೊಂದೆಡೆ, ಇಂದು ಕೆಲಸ ಮಾಡುವ ಜನರು ತಮ್ಮ ಕೋಪವನ್ನು ನಿಯಂತ್ರಿಸಬೇಕಾಗಿದೆ. ಬಹುಶಃ ನೀವು ಇಂದು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವಾದ ಮಾಡಬಹುದು. ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದು ಉತ್ತಮ. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸಾಕಷ್ಟು ವಿನೋದದ ಸಮಯವನ್ನು ಕಳೆಯುತ್ತೀರಿ. ಹಣದ ಬಗ್ಗೆ ಮಾತನಾಡುವುದಾದರೆ, ಹಣವು ಇಂದು ಪ್ರಯೋಜನಕಾರಿಯಾಗಲಿದೆ, ಮತ್ತೊಂದೆಡೆ ಕೆಲವು ದೊಡ್ಡ ವೆಚ್ಚಗಳು ನಿಮಗೆ ಎದುರಾಗಬಹುದು. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ. ದೈಹಿಕವಾಗಿ ಸುಸ್ತು ಉಂಟಾದರೆ ನಿಮಗೆ ಮಾನಸಿಕ ಒತ್ತಡವನ್ನೂ ನೀಡುತ್ತದೆ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 5
ಶುಭ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ



Click it and Unblock the Notifications











