For Quick Alerts
ALLOW NOTIFICATIONS  
For Daily Alerts

"ಶನಿವಾರದ ದಿನ ಭವಿಷ್ಯ: ಇಂದು ನಿಮ್ಮ ರಾಶಿಫಲ ಹೇಗಿದೆ?"

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ

ಆಯನ: ಉತ್ತರಾಯಣ

ಋತು: ವಸಂತ

ಮಾಸ: ಫಲ್ಗುಣ

ತಿಥಿ: ಸಂಜೆ 4:12ರವರೆಗೆ ಸಪ್ತಮಿ, ನಂತರ ಅಷ್ಟಮಿ

ನಕ್ಷತ್ರ: ಪೂರ್ವ ಆಷಾಢ

ಪಕ್ಷ: ಕೃಷ್ಣ ಪಕ್ಷ

ರಾಹುಕಾಲ: ಬೆಳಗ್ಗೆ 09:19ರಿಂದ 10:51ರವರೆಗೆ

ಗುಳಿಗಕಾಲ: ಬೆಳಗ್ಗೆ 06:15 ರಿಂದ 07:47 ರವರೆಗೆ

ಯಮಗಂಡಕಾಲ: ಮಧ್ಯಾಹ್ನ 01:55ರಿಂದ 03:27ರವರೆಗೆ

ದುರ್ಮುಹೂರ್ತ: ಬೆಳಗ್ಗೆ 06:15ರಿಂದ 07:04ರವರೆಗೆ

ಬೆಳಗ್ಗೆ 07:04ರಿಂದ 07:53ರವರೆಗೆ

ಸೂರ್ಯೋದಯ: ಬೆಳಗ್ಗೆ 06:15ಕ್ಕೆ

ಸೂರ್ಯಾಸ್ತ: ಸಂಜೆ 06:31ಕ್ಕೆ

ಮೇಷ ರಾಶಿ

ಮೇಷ ರಾಶಿ

ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ ನೀವು ವಿಶ್ವಾಸಾರ್ಹ ವ್ಯಕತಿಯೊಂದಿಗೆ ನಿಮ್ಮ ಮನಸ್ಸಿನಲ್ಲಿರುವುದನ್ನು ಹಂಚಿಕೊಳ್ಳಬೇಕು. ಇದು ನಿಮ್ಮ ಮನಸ್ಸು ಹಗುರವಾಗುವಂತೆ ಮಾಡುತ್ತದೆ. ಅಲ್ಲದೆ ನಿಮ್ಮ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಸಹ ಪಡೆಯಬಹುದು. ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ಕೆಲಸದ ಕಡೆ ಹೆಚ್ಚ ಗಮನ ಕೊಡಲು ಸಾಧ್ಯವಾಗದ ಕಾರಣ ಇಂದು ನಿಮ್ಮ ಅನೇಕ ಕಾರ್ಯಗಳು ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ. ಈ ಸಮಯವು ನಿಮಗೆ ಬಹಳ ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳಬೇಕು, ಆದ್ದರಿಂದ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ವ್ಯಾಪಾರಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ, ವಿಶೇಷವಾಗಿ ನೀವು ದೊಡ್ಡ ವ್ಯವಹಾರವನ್ನು ಮಾಡಲು ಹೊರಟಿದ್ದರೆ ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ, ಇಲ್ಲದಿದ್ದರೆ ಕೈಯಲ್ಲಿರುವ ಅವಕಾಶ ತಪ್ಪಿ ಹೋಗಬಹುದು. ಹಣದ ಬಗ್ಗೆ ಹೇಳುವುದಾದರೆ ನಿಮ್ಮ ಬಜೆಟ್ ಇಂದು ಸಮತೋಲನಗೊಳ್ಳುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆರೋಗ್ಯಕರ ಜೀವನಶೈಲಿ ಬೆಳೆಸಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 38

ಶುಭ ಸಮಯ: ಬೆಳಗ್ಗೆ 8:25 ರಿಂದ ಮಧ್ಯಾಹ್ನ 2 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಕೆಲಸದ ವಿಷುದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನೀವು ಕೆಲಸ ಮಾಡಿದರೆ, ಕಚೇರಿಯಲ್ಲಿ ತುಂಬಾ ಗಂಭೀರವಾಗಿರಲು ನಿಮಗೆ ಸೂಚಿಸಲಾಗುತ್ತದೆ, ವಿಶೇಷವಾಗಿ ನಿಮ್ಮ ಬಾಸ್ ನಿಮಗೆ ಕೆಲವು ಪ್ರಮುಖ ಜವಾಬ್ದಾರಿಯನ್ನು ನೀಡಿದ್ದರೆ, ಅದನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಿಗಳು ನಿರೀಕ್ಷಿತ ಫಲಿತಾಂಶವನ್ನು ಪಡೆಯದಿದ್ದರೆ ನೀವು ತಾಳ್ಮೆಯಿಂದ ಕೆಲಸ ಮಾಡಬೇಕು. ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ತಿರುಗುವುದು. ಇಂದು ಹಣದ ವಿಷಯದಲ್ಲಿ ನಿಮಗೆ ಮಿಶ್ರ ಫಲಿತಾಂಶವಾಗಲಿದೆ. ಆದಾಯ ಬರುತ್ತದೆ ಆದರೆ ಹೆಚ್ಚುತ್ತಿರುವ ವೆಚ್ಚಗಳು ನಿಮ್ಮ ಚಿಂತೆಗಳನ್ನು ಹೆಚ್ಚಿಸಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು.

ಉತ್ತಮ ಬಣ್ಣ: ಕಡು ಹಸಿರು

ಶುಭ ಸಂಖ್ಯೆ: 10

ಒಳ್ಳೆಯ ಸಮಯ: ಸಂಜೆ 6:05 ರಿಂದ 9:30 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ತುಂಬಿರುತ್ತವೆ. ನಿಮ್ಮ ಸಂಗಾತಿಗೆ ಅನಾರೋಗ್ಯ ಇದ್ದರೆ ಉತ್ತಮ ಚಿಕಿತ್ಸೆ ನೀಡಲು ನಿಮಗೆ ಸೂಚಿಸಲಾಗಿದೆ. ಪ್ರೇಮಿಯಾಗುದ್ದರೆ ನಿಮ್ಮ ಪ್ರೇಮಿಯ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ನೀವು ವ್ಯಾಪಾರ ಮಾಡಿದರೆ ಇಂದು ನಿಮಗೆ ಲಾಭವಾಗುವುದು, ವಿಶೇಷವಾಗಿ ನಿಮ್ಮ ಕೆಲಸವು ಕಬ್ಬಿಣ, ಮರ, ಸೌಂದರ್ಯವರ್ಧಕ, ಬಟ್ಟೆ ಇತ್ಯಾದಿಗಳಿಗೆ ಸಂಬಂಧಿಸಿದ್ದಲ್ಲಿ ಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ. ನೀವು ಕಚೇರಿಯಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರೆ ಈ ದಿನ ನೀವು ತುಂಬಾ ಸಮತೋಲಿತವಾಗಿ ವರ್ತಿಸುವಂತೆ ಸೂಚಿಸಲಾಗಿದೆ. ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಕೆಟ್ಟದಾಗಿ ವರ್ತಿಸುವುದನ್ನು ತಪ್ಪಿಸಿ. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ಆರೋಗ್ಯದ ಬಗ್ಗೆ ಹೇಳುವುದಾದರೆ ಇಂದು ನರಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 31

ಒಳ್ಳೆಯ ಸಮಯ: ಮಧ್ಯಾಹ್ನ 3 ರಿಂದ 8 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಕೆಲಸದ ವಿಷಯದಲ್ಲಿ ಇಂದು ನಿಮಗೆ ಬಹಳ ಆನಂದದಾಯಕ ದಿನವಾಗಲಿದೆ. ನಿಮ್ಮ ಕೆಲಸದಲ್ಲಿ ಮುಂದುವರಿಯಲು ನಿಮಗೆ ಉತ್ತಮ ಅವಕಾಶ ಸಿಗಬಹುದು. ಉದ್ಯೋಗಿಗಳೇ ಹಿರಿಯ ಅಧಿಕಾರಿಗಳೊಂದಿಗೆ ನಿಮ್ಮ ಸಮನ್ವಯವೂ ಉತ್ತಮವಾಗಿರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಜನರು ಹೂಡಿಕೆ ಮಾಡಲು ಬಯಸಿದರೆ ಇಂದು ಇದಕ್ಕೆ ಅನುಕೂಲಕರ ದಿನವಾಗಿದೆ. ನೀವು ಉತ್ತಮ ಲಾಭ ಪಡೆಯಬಹುದು. ಇಂದು ಆರ್ಥಿಕ ರಂಗದಲ್ಲಿ ಸ್ವಲ್ಪ ದುಬಾರಿಯಾಗಲಿದೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಬಹಳ ಪ್ರಣಯ ಸಮಯವನ್ನು ಕಳೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇಂದು ಸಾಮಾನ್ಯವಾಗಿರಲಿದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 9

ಒಳ್ಳೆಯ ಸಮಯ: ಬೆಳಗ್ಗೆ 11 ರಿಂದ ರಾತ್ರಿ 8:05

ಸಿಂಹ ರಾಶಿ

ಸಿಂಹ ರಾಶಿ

ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು, ಆದರೆ ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಇದರಿಂದ ನಿಮ್ಮ ಎಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನೀವು ವ್ಯಾಪಾರ ಮಾಡಿದರೆ ಮತ್ತು ಸಹಭಾಗಿತ್ವದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಇಂದು ನಿಮ್ಮ ಯೋಜನೆಯಂತೆ ಮುಂದುವರಿಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಮನೆಯ ಹಿರಿಯರ ಆಶೀರ್ವಾದ ಪಡೆಯುತ್ತೀರಿ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸ್ವಲ್ಪ ಸಮಯದಿಂದ ಸರಿಯಾಗಿ ಇಲ್ಲದಿದ್ದರೆ ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ನಿಮ್ಮ ನಡುವಿನ ಎಲ್ಲಾ ತಪ್ಪು ಕಲ್ಪನೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿ. ನಿಮ್ಮ ಮೊಂಡುತನದ ಸ್ವಭಾವವು ನಿಮ್ಮ ನಡುವೆ ಬಿರುಕು ಹೆಚ್ಚಿಸುತ್ತದೆ. ಹಣದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿದೆ. ಹಣಕಾಸಿನ ತೊಂದರೆಯಿಂದಾಗಿ ಅಪೂರ್ಣವಾಗಿದ್ದ ನಿಮ್ಮ ಕೆಲವು ಪ್ರಮುಖ ಕೆಲಸಗಳನ್ನು ಇಂದು ಪೂರ್ಣಗೊಳಿಸಬಹುದು. ನೀವು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಸಡ್ಡೆ ನಿಮ್ಮ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 4:20 ರಿಂದ ಸಂಜೆ 5 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ಅಗತ್ಯವಿರುವವರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ, ನೀವು ಹಿಂದೆ ಸರಿಯಬೇಡಿ. ಇಂದು ಕಚೇರಿಯಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡದಿಂದಾಗಿ ನೀವು ಸ್ವಲ್ಪ ಒತ್ತಡವನ್ನು ಅನುಭವಿಸುವಿರಿ. ಆದಾಗ್ಯೂ ಅದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ನಿಮ್ಮ ಮೇಲೆ ಹೆಚ್ಚು ಒತ್ತಡ ತೆಗೆದುಕೊಳ್ಳದಿದ್ದರೆ ಒಳ್ಳೆಯದು ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ, ನಿಮ್ಮ ಪಾಲುದಾರರೊಂದಿಗೆ ನೀವು ಪಾರದರ್ಶಕವಾಗಿರಬೇಕು. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಎಚ್ಚರಿಕೆಯಿಂದ ಅರ್ಥಮಾಡಿಕೊಂಡರೆ ಅದು ನಿಮಗೆ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ, ವಿಶೇಷವಾಗಿ ಪೋಷಕರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಅವಿವಾಹಿತರಾಗಿದ್ದರೆ, ನಿಮ್ಮ ಮದುವೆಯನ್ನು ಮನೆಯಲ್ಲಿ ಚರ್ಚಿಸಬಹುದು. ಆರೋಗ್ಯ ಉತ್ತಮವಾಗಿರುತ್ತವೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 19

ಒಳ್ಳೆಯ ಸಮಯ: ಸಂಜೆ 6 ರಿಂದ 10 ರವರೆಗೆ

ತುಲಾ ರಾಶಿ

ತುಲಾ ರಾಶಿ

ವೈಯಕ್ತಿಕ ಜೀವನದಲ್ಲಿ ಇಂದು ದೊಡ್ಡ ಸಮಸ್ಯೆ ಇರಬಹುದು. ನಿಮ್ಮ ಮನೆಯ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ನಿಮಗೆ ಸೂಚಿಸಲಾಗಿದೆ. ಮಾರಾಟ ಮತ್ತು ವ್ಯಾಪಾರೋದ್ಯಮದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಆಮದು ರಫ್ತಿಗೆ ಸಂಬಂಧಿಸಿದ ವ್ಯಾಪಾರ ಮಾಡುವ ಜನರು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಇದು ಮಾತ್ರವಲ್ಲ, ನಿಮ್ಮ ನಿಂತು ಹೋದ ಯಾವುದೇ ವ್ಯಾಪಾರ ಯೋಜನೆಗಳು ಸಹ ಇಂದು ಮುಂದುವರಿಯಬಹುದು. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಹಣದ ಬಗ್ಗೆ ಹೇಳುವುದಾದರೆ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ನೀವು ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ದೀರ್ಘಕಾಲದ ಹೊಟ್ಟೆಯ ಕಾಯಿಲೆ ಹೊರಹೊಮ್ಮಬಹುದು. ಆಹಾರ ಮತ್ತು ಪಾನೀಯದ ಬಗ್ಗೆ ಗಮನ ಹರಿಸಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 14

ಶುಭ ಸಮಯ: ಸಂಜೆ 6:15 ರಿಂದ 11 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ, ಇಂದು ನಿಮಗೆ ತುಂಬಾ ಶುಭ ದಿನವಾಗಿರುತ್ತದೆ. ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿ ಮತ್ತು ಕಠಿಣ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿ. ನೀವು ವ್ಯಾಪಾರ ಮಾಡಿದರೆ ಮತ್ತು ನೀವು ಹೊಸ ವ್ಯವಹಾರ ಪ್ರಸ್ತಾಪವನ್ನು ಪಡೆದರೆ ಆತುರಪಡಬೇಡಿ. ಕೆಲವು ಅನುಭವಿ ಜನರನ್ನು ಸಂಪರ್ಕಿಸಿದ ನಂತರ ನಿಮ್ಮ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ಲಾಭದ ಸ್ಥಳದಲ್ಲಿ ನಷ್ಟವಾಗಬಹುದು. ಇಂದು ಕಚೇರಿಯಲ್ಲಿ ನೀವು ಸಣ್ಣ ಕೆಲಸವನ್ನು ಮಾಡುವಾಗಲೂ ಎಚ್ಚರಿಕೆಯಿಂದ ಇರಬೇಕು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನವನ್ನು ಮುಂದುವರಿಸಬೇಕು. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಹೆಚ್ಚಿನ ಸೋಮಾರಿತನವನ್ನು ತಪ್ಪಿಸಬೇಕು, ವ್ಯಾಯಾಮ ಮಾಡದಿದ್ದರೆ ಆರೋಗ್ಯ ಕಷ್ಟ.

ಶುಭ ಬಣ್ಣ: ನೇರಳೆ

ಶುಭ ಸಂಖ್ಯೆ: 30

ಶುಭ ಸಮಯ: ಬೆಳಗ್ಗೆ 4:10 ರಿಂದ ಮಧ್ಯಾಹ್ನ 3:50

ಧನು ರಾಶಿ

ಧನು ರಾಶಿ

ಇದ್ದಕ್ಕಿದ್ದಂತೆ ಮನೆಯಲ್ಲಿ ಅತಿಥಿಗಳ ಆಗಮನ ಇರಬಹುದು, ಆದ್ದರಿಂದ ವಾತಾವರಣವು ಸಾಕಷ್ಟು ಹರ್ಷಚಿತ್ತದಿಂದ ಕೂಡಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ವಿನೋದವನ್ನು ಹೊಂದಿರುತ್ತೀರಿ. ದಿನದ ಎರಡನೇ ಭಾಗದಲ್ಲಿ ಸಂಗಾತಿಯೊಂದಿಗೆ ಕೆಲವು ವಿವಾದ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಅದು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇಂದು ಹಣದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಅದನ್ನು ಇಂದು ಮರುಪಾವತಿಸಲು ನಿಮ್ಮ ಮೇಲೆ ಒತ್ತಡವಿರುತ್ತದೆ. ಕಚೇರಿಯಲ್ಲಿ ಬಾಸ್ ಮುಂದೆ ಸರಿಯಾಗಿ ವರ್ತಿಸುವಂತೆ ನಿಮಗೆ ಸೂಚಿಸಲಾಗಿದೆ. ನೀವು ಮಾಡುವ ಕೆಲಸದಲ್ಲಿ ಅವರು ಲೋಪದೋಷಗಳನ್ನು ಕಂಡುಕೊಂಡರೆ, ನೀವು ಅವರ ಮಾತುಗಳನ್ನು ತುಂಬಾ ಮನಸ್ಸಿಗೆ ತೆಗೆದುಕೊಳ್ಳಬೇಡಿ. ನಿಮ್ಮ ತಪ್ಪುಗಳಿಂದ ಕಲಿಯುವುದು ಉತ್ತಮ. ವ್ಯಾಪಾರದ ಜನರು ಹಣದ ವಿಷಯದಲ್ಲಿ ಅವಸರದಿಂದ ದೂರವಿರಲು ಸೂಚಿಸಲಾಗಿದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 8

ಶುಭ ಸಮಯ: ಮಧ್ಯಾಹ್ನ 12:55 ರಿಂದ 7 ರವರೆಗೆ

ಮಕರ ರಾಶಿ

ಮಕರ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದರೆ ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ದಾರಿಯಲ್ಲಿ ಬರುವ ದೊಡ್ಡ ಅಡಚಣೆಯನ್ನು ದೂರವಾಗುವುದು. ಕಚೇರಿಯಲ್ಲಿ, ನೀವು ಸಂಪೂರ್ಣವಾಗಿ ನಿಮ್ಮ ಕೆಲಸಕ್ಕೆ ಮೀಸಲಾಗಿರುತ್ತೀರಿ ಮತ್ತು ನಿಮ್ಮ ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸುತ್ತೀರಿ. ನೀವು ಬಾಸ್‌ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ನೀವು ವ್ಯಾಪಾರ ಮಾಡಿದರೆ ಮತ್ತು ನಿಮ್ಮ ವ್ಯವಹಾರವನ್ನು ಮುಂದುವರೆಸುವ ಬಗ್ಗೆ ಯೋಚಿಸುತ್ತಿದ್ದರೆ, ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಇದಲ್ಲದೆ, ನಿಮ್ಮ ಹಣಕಾಸಿನ ಸಮಸ್ಯೆಯೂ ಬಗೆಹರಿಯುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದಲ್ಲಿ ಕೆಲವು ಒತ್ತಡ ಸಾಧ್ಯ. ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಇರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗುತ್ತದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 19

ಒಳ್ಳೆಯ ಸಮಯ: ಸಂಜೆ 6 ರಿಂದ 10 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಉನ್ನತ ಸ್ಥಾನವನ್ನು ಪಡೆಯಲು ನೀವು ಬಹಳ ಸಮಯದಿಂದ ಶ್ರಮಿಸುತ್ತಿದ್ದರೆ, ಇಂದು ನೀವು ಕಚೇರಿಯಲ್ಲಿ ಕೆಲವು ಉತ್ತಮ ಸೂಚನೆಗಳನ್ನುಕಾಣಬಹುದು. ವ್ಯಾಪಾರದ ಜನರು ತೆರಿಗೆ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ನಿರ್ಲಕ್ಷ್ಯವು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಹಣವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಹೆಚ್ಚುವುದು. ಪರಸ್ಪರರ ಮೇಲಿನ ನಿಮ್ಮ ನಂಬಿಕೆ ಬಲವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಹಲ್ಲುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 12

ಶುಭ ಸಮಯ: ಬೆಳಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ

ಮೀನ ರಾಶಿ

ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿ ಮದುವೆಗೆ ಅರ್ಹರಾಗಿದ್ದರೆ, ಇಂದು ಅವರಿಗೆ ಉತ್ತಮ ವಿವಾಹ ಪ್ರಸ್ತಾಪ ಬರಬಹುದು. ಆರ್ಥಿಕ ಮುಂಭಾಗದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹೊಸ ಆದಾಯದ ಮೂಲವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಇಂದು, ವ್ಯವಹಾರದ ಜನರು ಚರ್ಚೆಯನ್ನು ತಪ್ಪಿಸುವುದು ಒಳ್ಳೆಯದು, ವಿಶೇಷವಾಗಿ ಹಣದ ವಿಷಯದಲ್ಲಿ. ಉದ್ಯೋಗಿಗಳೇ, ಬಾಕಿ ಇರುವ ಕಾರ್ಯಗಳನ್ನು ಕಚೇರಿಯಲ್ಲಿ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಇಂದು ನಿಮ್ಮ ಬಾಸ್ ನಿಮ್ಮ ಕಾರ್ಯಗಳನ್ನು ಪರಿಶೀಲಿಸಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಇಂದು ಗ್ಯಾಸ್ಟ್ರಿಕ್, ಅಜೀರ್ಣ, ಅಸಿಡಿಟಿ ಮುಂತಾದ ಸಮಸ್ಯೆಗಳಿರಬಹುದು. ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

English summary

Dina Bhavishya 03 April 2021

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, April 3, 2021, 4:00 [IST]
X