Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಆರೋಗ್ಯಕರ ಸಂಬಂಧಕ್ಕೆ ಹೇಳಿ ಮಾಡಿಸಿದ ರಾಶಿಚಕ್ರಗಳಿವು
ಜೀವನ ಪೂರ್ತಿ ಜೊತೆಯಾಗುವ ಗಟ್ಟಿ ಹಾಗೂ ಆರೋಗ್ಯಕರ ಸಂಬಂಧ ಕಂಡುಕೊಳ್ಳುವುದು ಅದೃಷ್ಟವೇ ಹೌದು. ಆರೋಗ್ಯಕರ ಸಂಬಂಧವೆಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಸಮಾನವಾಗಿ ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಅಂತಹ ಸಂಬಂಧಗಳನ್ನು ಕಂಡುಹಿಡಿಯುವುದು ಬಹಳ ಅಪರೂಪ, ಏಕೆಂದರೆ ಆಧುನಿಕ ಕಾಲದಲ್ಲಿ ಪ್ರೀತಿ ಸ್ವಾರ್ಥ, ಒತ್ತಡ ಮತ್ತು ನಿರಾಶಾದಾಯಕವಾಗಿದೆ.

ಆದರೆ ನೀವು ಇನ್ನೂ ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ಅನುಭವಿಸಲು ಬಯಸುವವರಾಗಿದ್ದರೆ, ಅದೃಷ್ಟವಶಾತ್ ಜ್ಯೋತಿಷ್ಯವು ಹಾಗೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಜ್ಯೋತಿಷ್ಯವು ಹನ್ನೆರಡು ರಾಶಿಚಕ್ರಗಳ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮೂಲಕ ಅಂತಹ ಜನರನ್ನು ಗುರುತಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಆರೋಗ್ಯಕರ ಸಂಬಂಧವನ್ನು ಹೊಂದಲು ನೀವು ಯಾವಾಗಲೂ ನಂಬಬಹುದಾದ 4 ರಾಶಿಚಕ್ರ ಚಿಹ್ನೆಗಳು ಇದೆಯಂತೆ. ಯಾವುದು ಅದು ಮುಂದೆ ನೋಡೋಣ:

ಮಿಥುನ ರಾಶಿ
ಮಿಥುನ ರಾಶಿಯವರು ತುಂಬಾ ಸಾಮಾಜಿಕ ಜನರು, ಅವರು ಸಂಬಂಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗೌರವಿಸುತ್ತಾರೆ. ಅವರು ತಮ್ಮ ಸಂಗಾತಿಯನ್ನು ಆರಾಮದಾಯಕ, ಪ್ರೀತಿ ಮತ್ತು ಕಾಳಜಿಯನ್ನು ಅನುಭವಿಸುವಂತೆ ಮಾಡುವುದು ಇವರ ಮೊದಲ ಆದ್ಯತೆಯಾಗಿದೆ. ಮಿಥುನ ರಾಶಿಯವರು ತಮ್ಮ ಸಂಗಾತಿಯನ್ನು ನೋಯಿಸಲು, ದ್ರೋಹ ಅಥವಾ ನಿರಾಶೆಗೆ ಎಂದಿಗೂ ಅವಕಾಶ ಕೊಡುವುದಿಲ್ಲ. ಇವರಿಗೆ ತಮ್ಮನ್ನು ನಂಬಿರುವವರಿಗಿಂತ ಮುಖ್ಯವಾದ್ದದು ಏನು ಇಲ್ಲ.

ಕರ್ಕ ರಾಶಿ
ಪ್ರೀತಿ ಮತ್ತು ಭಾವನೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುವ ಅತಿ ಸೂಕ್ಷ್ಮ ಜನರು ಕರ್ಕ ರಾಶಿಯವರು. ಸಂಬಂಧದಲ್ಲಿರುವಾಗ ಅವರ ಭಾವನೆಗಳು ಹೆಚ್ಚಾಗುತ್ತವೆ. ಅವರು ತಮ್ಮಗಂತ ಮೊದಲು ತಮ್ಮ ಪಾಲುದಾರರ ಭಾವನೆಗಳಿಗೆ ಆದ್ಯತೆ ನೀಡುತ್ತಾರೆ ಮತ್ತು ಇದು ಅವರಿಗೆ ಆರಾಮದಾಯಕವಾಗಿರಲು ಮತ್ತು ಸಂಬಂಧದಲ್ಲಿ ಪ್ರೀತಿಪಾತ್ರರಾಗಲು ಸಹಾಯ ಮಾಡುತ್ತದೆ. ಅವರು ತಮ್ಮ ಜೀವನದ ಎಲ್ಲಾ ಪ್ರೀತಿಯನ್ನು ತಮ್ಮ ಸಂಗಾತಿಗೆ ನೀಡುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರು ಅತ್ಯಂತ ಸಮತೋಲಿತ ವ್ಯಕ್ತಿತ್ವವನ್ನು ಹೊಂದಿದ್ದಾರೆ, ಇದು ಕಠಿಣ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸರಿಯಾದ ವಿಷಯಗಳನ್ನು ಹೇಳಲು ಸಹಾಯ ಮಾಡುತ್ತದೆ. ಅವರು ತುಂಬಾ ಶಾಂತ ಮತ್ತು ಸಂಗ್ರಹಿಸಲ್ಪಟ್ಟ ಗುಣದವರು. ಇದು ಸಂಬಂಧಗಳಲ್ಲಿ ಜನರಿಗೆ ಬಹಳ ಅಪೇಕ್ಷಣೀಯ ಲಕ್ಷಣವಾಗಿದೆ. ಇದು ತುಲಾ ರಾಶಿಯವರನ್ನು ಇಲ್ಲಿಯವರೆಗಿನ ಉನ್ನತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಆದ್ದರಿಂದ ಇವರು ಸಂಬಂಧಗಳನ್ನು ಸಹ ಚೆನ್ನಾಗಿ ನಿಭಾಯಿಸುತ್ತಾರೆ.

ಧನು ರಾಶಿ
ಧನು ರಾಶಿಯವರು ಯಾವಾಗಲೂ ತಮ್ಮ ಸಮಯವನ್ನು ಕಳೆಯಬಹುದಾದ 'ಒಬ್ಬ ಉತ್ತರನ್ನು' ಹುಡುಕುವ ಅನ್ವೇಷಣೆಯಲ್ಲಿರುತ್ತಾರೆ. ಧನು ರಾಶಿಗಳು ಸಾಹಸ, ಪ್ರಯಾಣ ಮತ್ತು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಅವರ ಜೀವನವು ಸ್ಥಿರವಾಗಿಲ್ಲದಿದ್ದರೂ ಸಹ, ಅವರು ತಮ್ಮ ಜೀವನದಲ್ಲಿ ಸ್ಥಿರವಾಗಿರುವ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಅವರು ತಮ್ಮ ಸಂಗಾತಿಗೆ ತಮ್ಮ ಎಲ್ಲವನ್ನೂ ನೀಡುತ್ತಾರೆ ಮತ್ತು ಅರ್ಥಪೂರ್ಣ ಮತ್ತು ಸಂತೋಷದ ಸಂಬಂಧವನ್ನು ಹೊಂದಲು ಪ್ರತಿಜ್ಞೆ ಮಾಡುತ್ತಾರೆ.



Click it and Unblock the Notifications
