Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾನುವಾರದ ದಿನ ಭವಿಷ್ಯ (29-09-2019)
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ಕೆಲವು ಸಂಗತಿಗಳು ಇಂದು ನಿಮಗೆ ಅನಿರೀಕ್ಷಿತವಾಗಿ ಎದುರಾಗುವುದು. ಅದನ್ನು ನೀವು ಸ್ವೀಕರಿಸಬೇಕು. ಎಲ್ಲವೂ ನಿಮ್ಮ ಹಾದಿಗೆ ಬರುತ್ತವೆ. ಇಂದಿನ ಎಲ್ಲಾ ವಿಶೇಷತೆಗಳು ನಿಮ್ಮ ಪ್ರೇಮಿ ಅಥವಾ ಆಪ್ತ ಸ್ನೇಹಿತರಿಂದ ಬರುವುದು. ಇಂದು ನೀವು ಆಹ್ಲಾದಕರವಾದ ಹಾಗೂ ರೋಮಾಂಚಕಾರಿ ಪ್ರಯಾಣದ ಯೋಜನೆಯನ್ನು ಕೈಗೊಳ್ಳುವಿರಿ. ಇತರರೊಂದಿಗೂ ಉತ್ತಮ ಸಂಬಂಧವನ್ನು ಪಡೆದುಕೊಳ್ಳುವಿರಿ. ಆತ್ಮೀಯರೊಂದಿಗೆ ರಾತ್ರಿ ಸಣ್ಣ ಭೂಜನ ಕೂಟವನ್ನು ಯೋಜಿಸಬಹುದು.

ವೃಷಭ ರಾಶಿ: 20 ಏಪ್ರಿಲ್ -20 ಮೇ
ನಿಮ್ಮಲ್ಲಿ ಇರುವ ಸೃಜನ ಶೀಲತೆ ಮತ್ತು ತಂತ್ರಜ್ಞಾನ ಸಂಯೋಜಿತ ಪ್ರಯೋಗಗಳು ನಿಮ್ಮ ಆದಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ನೀವು ಹೊಸ ಆಲೋಚನೆಗಳಿಗೆ ಸ್ಪಂದಿಸುವಿರಿ. ನಿಮಗಾಗಿ ಕೆಲಸ ಮಾಡಲು ಪ್ರಯತ್ನಿಸುವಿರಿ. ನೀವು ಹೊಸ ಪ್ರತಿಭೆಯನ್ನು ಬಹಿರಂಗಪಡಿಸುವ ಸಾಧ್ಯತೆಗಳಿವೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದುವಿರಿ. ಉತ್ತಮ ಕೆಲಸವನ್ನು ಕೈಗೊಳ್ಳಲು ಇಂದು ನಿಮಗೆ ಉತ್ತಮವಾದ ದಿನ.

ಮಿಥುನ ರಾಶಿ: 21 ಮೇ -20 ಜೂನ್
ಇಂದು ನೀವು ಅಸಮಾನ್ಯ ಕಲಾ ಪ್ರಕಾರಗಳಿಗೆ ಹೆಚ್ಚು ಆಕರ್ಷಿತರಾಗಬಹುದು. ಬಹುಶಃ ಸ್ಥಳೀಯ ಕಲಾವಿದರ ಪ್ರದರ್ಶನಗಳು ನಿಮ್ಮ ಗಮನವನ್ನು ಸೆಳೆಯಬಹುದು. ನಿಮಗೆ ಸಂಗೀತದ ಅಭಿರುಚಿ ಹೆಚ್ಚುವುದು. ಆಪ್ತರೊಂದಿಗೆ ಸಿನಿಮಾ ಅಥವಾ ಇನ್ನಿತರ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವಿರಿ. ಕಲೆಯಲ್ಲಿ ಆಸಕ್ತಿ ಹೊಂದಿದ್ದರೆ ಅದನ್ನು ಕಲಿಯಲು ಇಂದು ಉತ್ತಮವಾದ ದಿನ.

ಕರ್ಕ ರಾಶಿ: 21 ಜೂನ್ 22 ಜುಲೈ
ದೀರ್ಘಕಾಲದ ನಂತರ ಹಳೆಯ ಸ್ನೇಹಿತರ ಭೇಟಿಯಾಗಬಹುದು. ಇದು ಆಶ್ಚರ್ಯಕರವಾದ ಸಂಗತಿಗಳನ್ನು ತಂದುಕೊಡುವುದು. ನಿಮ್ಮ ಆಪ್ತ ಸ್ನೇಹಿತರನ್ನು ನೋಡಿ ಅಧಿಕ ಸಂತೋಷ ಉಂಟಾಗುವುದು. ಮನೆಗೆ ಅಗತ್ಯವಾದ ಹಾಗೂ ಅಲಂಕಾರಿ ವಸ್ತುಗಳನ್ನು ಖರೀದಿಸುವ ಸಧ್ಯತೆಗಳಿವೆ. ಮನೆಯಲ್ಲಿ ಕೆಲವು ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ನೀವು ಆನಂದವನ್ನು ಅನುಭವಿಸುವಿರಿ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್
ಸ್ನೇಹಿತರಿಂದ ಅನಿರೀಕ್ಷಿತ ಆಹ್ವಾನ ಬರುವುದು. ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಸಣ್ಣ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಸ್ನೇಹಿತರ ನಡುವೆ ಅಥವಾ ಸಾಮಾಜಿಕ ಕ್ಷೇತ್ರಗಳಲ್ಲಿ ನೀವು ಉತ್ತಮ ಸಂಭಾಷಣೆಯನ್ನು ಕೈಗೊಳ್ಳುವುದರ ಮೂಲಕ ಪ್ರಬುದ್ಧರು ಎಂದು ಕರೆಸಿಕೊಳ್ಳುವಿರಿ. ನಿಮ್ಮ ಸ್ಥಾನವು ಇತರರ ನಡುವೆ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವುದು. ಮಾನವೀಯತೆಯ ಗುಣವು ನಿಮ್ಮ ಹಾದಿಗೆ ಬರಬಹುದು. ಇಂದು ನಿಮಗೆ ಕಾರ್ಯನಿರತ ಹಾಗೂ ತೃಪ್ತಿಕರವಾದ ದಿನವಾಗುತ್ತದೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ನಿಮ್ಮ ಮಹತ್ವಾಕಾಂಕ್ಷೆಯನ್ನು ಪುನರುಜ್ಜೀವನಗೊಳಿಸಲು ಹೊಸ ವೃತ್ತಿಜೀವನದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಹಿಂದೆಂದೂ ಪರಿಗಣಿಸದ ಪ್ರಗತಿಯನ್ನು ಹಾಗೂ ಅವಕಾಶಗಳನ್ನು ಇಂದು ಪಡೆದುಕೊಳ್ಳುವಿರಿ. ಇದು ನಿಮಗೆ ಸ್ವಲ್ಪ ಬೆದರಿಕೆಯನ್ನು ತರಬಹುದು. ಆದರೆ ರೋಮಾಂಚಕಾರಿಯಾಗಿರುತ್ತದೆ. ನೀವು ಕೆಲವು ವಿಷಯಗಳನ್ನು ಪರಿಗಣಿಸದೆ ಇದ್ದರೆ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ಇಂದು ನಿಮಗೆ ಕೆಲವು ಅದೃಷ್ಟಗಳು ಹಾಗೂ ಯಶಸ್ಸು ದೊರೆಯುವುದು.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ಪ್ರೀಮಿ ಅಥವಾ ಸ್ನೇಹಿತರೊಂದಿಗೆ ದೂರದ ಊರಿಗೆ ದೀರ್ಘ ಪ್ರಯಾಣವನ್ನು ಕೈಗೊಳ್ಳುವಿರಿ. ಕೆಲವು ವ್ಯವಸ್ಥೆಯು ನಿಮಗೆ ಅಸಮಧಾನವನ್ನು ಉಂಟುಮಾಡುವುದು. ಉತ್ತಮ ಸಮಯದ ಆಗಮನಕ್ಕೆ ನೀವು ಭರವಸೆಯನ್ನು ಹೊಂದಿರಬೇಕು. ನಿಮ್ಮ ವಿಶೇಷ ವ್ಯಕ್ತಿಯೊಂದಿಗೆ ರೋಮಾಂಚಕಾರಿ ಸಮಯವನ್ನು ಕಳೆಯುವಿರಿ. ನೀವು ಇಂದು ರೋಚಕವಾದ ಸಂಜೆಯನ್ನು ಹೊಂದುವಿರಿ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ಅನಿರೀಕ್ಷಿತವಾಗಿ ಭೇಟಿಯಾದ ಆಪ್ತ ಸ್ನೇಹಿರ ನೆನಪು ಇಂದು ಸ್ವಲ್ಪ ಸಮಯ ಕಾಡುವುದು. ನೀವು ಗುಪ್ತವಾದ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಮನಸ್ಸನ್ನು ಕಾಡುವ ವಿಷಯಗಳನ್ನು ಅಲ್ಲಿಯೇ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಮುಕ್ತ ಭಾವನೆ ಹೊಂದುವುದು ಮುಖ್ಯ. ಸ್ನೇಹಿರನ್ನು ಭೇಟಿಮಾಡುವುದರ ಮೂಲಕ ಆನಂದವನ್ನು ಪಡೆಯಬಹುದು.

ಧನು ರಾಶಿ: 22 ನವೆಂಬರ್-21 ಡಿಸೆಂಬರ್
ಮೊದಲ ನೋಟದಲ್ಲಿಯೇ ನೀವು ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ. ಈ ಹಿಂದೆ ಪರಿಚಿತರಾದ ವ್ಯಕ್ತಿ ಅಥವಾ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವುದರಿಂದ ಹೆಚ್ಚಿನ ಸಂತೋಷ ಪಡೆದುಕೊಳ್ಳುವಿರಿ. ಈ ಹಿಂದೆ ತಿಳಿದಿಲ್ಲದ ವಿಷಯಗಳನ್ನು ಇಂದು ನೀವು ತಿಳಿದುಕೊಳ್ಳುವಿರಿ. ಇಂದು ಪ್ರಣಯಕ್ಕೆ ಉತ್ತಮವಾದ ದಿನ. ಇಂದು ಸಂಪೂರ್ಣವಾಗಿ ಉತ್ತಮ ಸಮಯವನ್ನು ಕಳೆಯುವಿರಿ. ಸಂಗಾತಿಯೊಂದಿಗೆ ಒಂದಿಷ್ಟು ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.

ಮಕರ ರಾಶಿ: 22 ಡಿಸೆಂಬರ್ -19 ಜನವರಿ
ವೃತ್ತಿ ಜೀವನದಲ್ಲಿ ಉಂಟಾದ ಹೊಸ ಬದಲಾವಣೆಗಳು ನಿಮ್ಮಲ್ಲಿ ಲವಲವಿಕೆಯನ್ನು ನೀಡುತ್ತವೆ. ಉತ್ಸಾಹ ಭರಿತ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವಿರಿ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮ್ಮ ಆಸಕ್ತಿಗೆ ಪೂರಕವಾದ ಯೋಜನೆಗಳು ಸಂಭವನೀಯ ಪ್ರಗತಿಯನ್ನು ತಂದುಕೊಡುವುದು. ಹೊಸ ಸ್ನೇಹಿತರನ್ನು ಸಹ ಪಡೆದುಕೊಳ್ಳುವಿರಿ. ಅವರು ನಿಮಗೆ ದೀರ್ಘ ಸಮಯದ ಸ್ನೇಹಿತರಾಗಿ ಉಳಿದುಕೊಳ್ಳುತ್ತಾರೆ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ಸ್ನೇಹಿತರ ಸಹಾಯದಿಂದ ನಿಮ್ಮ ಕಲೆಗೆ ದೂರದ ಊರಿನಿಂದ ಕರೆ ಬರುವುದು. ನಿಮ್ಮ ಪ್ರಯಾಣದ ಬಗ್ಗೆ ಜಾಗೃತರಾಗಿರಬೇಕು. ದೂರದ ಸ್ಥಳಗಳಿಗೆ ಭೇಟಿ ನೀಡುವುದರ ಬಗ್ಗೆ ತಮಾಷೆ ಅಥವಾ ಹುಡುಗಾಟಿಕೆಯನ್ನು ತೋರಬಹದು. ಇಂದು ನಿಮಗೆ ಸ್ನೇಹಿತರ ಪ್ರಭಾವ ಹೆಚ್ಚಾಗಿರುತ್ತದೆ. ನೀವು ಗಂಭೀರ ಮನಃಸ್ಥಿತಿಯೊಂದಿಗೆ ಸಂಶೋಧನೆಗೆ ಮುಂದಾಗಬಹುದು. ರಜೆ ಪಡೆಯಲು ಹಾಗೂ ವಿಶ್ರಾಂತಿ ಪಡೆಯಲು ಇಂದು ಉತ್ತಮವಾದ ದಿನ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಮನೆಗೆ ಅಗತ್ಯವಾದ ವಸ್ತು ಅಥವಾ ಉಪಕರಣಗಳನ್ನು ಖರೀದಿಸುವ ಸಾಧ್ಯತೆಗಳಿವೆ. ನಿಮ್ಮ ಸೌಂದರ್ಯ ಪ್ರಜ್ಞೆ ಹೆಚ್ಚಾಗುವುದು. ನಿಮ್ಮ ಉತ್ತಮ ಅಭಿರುಚಿಗಳು ಉತ್ತುಂಗದಲ್ಲಿ ಇರುತ್ತವೆ. ನೀವು ಸಾಮಾನ್ಯ ಸಂಗತಿಗಳಿಗಿಂತ ಅಸಮಾನ್ಯ ಹಾಗೂ ಅಸಂಪ್ರದಾಯದ ಸಂಗತಿಗೆ ಹೆಚ್ಚು ಆಕರ್ಷಿತರಾಗುತ್ತೀರಿ. ಕೆಲವು ಅನಿರೀಕ್ಷಿತ ಅವಕಾಶಗಳಿಂದ ನೀವು ಆಕರ್ಷಕ ಸಂಭಾಷಣೆಯನ್ನು ಕೈಗೊಳ್ಳಬಹುದು. ನೀವು ಪೂರ್ವ ಸಿದ್ಧತೆ ಹೊಂದಿರದ ಕಾರ್ಯಕ್ರಗಳನ್ನು ಸಹ ಆಯೋಜಿಸಬಹುದು.



Click it and Unblock the Notifications











