For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ (25-09-2019)

|

ಬುಧವಾರದ ದಿನ ಸೃಷ್ಟಿ ರಕ್ಷಕ ವಿಷ್ಣುವಿನ ದಿನ. ಮಹಾವಿಷ್ಣು ಯಾವಾಗ ಧರ್ಮ ನಾಶವಾಗುತ್ತದೆಯೋ, ಅಧರ್ಮ ಮಿತಿ ವೀರುತ್ತದೆಯೋ ಆಗ ವಿಷ್ಣು ನಾನಾ ಅವತಾರ ಎತ್ತುತ್ತಾನೆ.ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತಾನೆ. ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು. ಈ ಮಾತಿನಂತೆ ಶ್ರೀ ಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ಭೂಮಿಯ ಮೇಲೆ ಹತ್ತು ಅವತಾರಗಳನ್ನು ತಳೆದಿದ್ದಾನೆ.ಇದೇ ವಿಷ್ಣುವಿನ ದಶಾವತಾರ.

ವಿಷ್ಣುವಿನ ದಶವತಾರಗಳು, ಮತ್ಸ್ಯಾವತಾರ,ಕೂರ್ಮಾವತಾರ,ವರಹಾವತಾರ, ನರಸಿಂಹವತಾರ, ಪರಶುರಾಮನವತಾರ, ರಾಮಾವತಾರ ,ಕೃಷ್ಣಾವತಾರ, ಬುದ್ದಾವತಾರ ಮತ್ತು ಕಲ್ಕಿವತಾರ. ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಪಾಲಕ ಎಂದು ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ'.ನಾರಾಯಣ ಎಂದೂ ಕರೆಯುತ್ತಾರೆ. ಧರ್ಮಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ. ಕೀರ್ತಿನಾರಾಯಣನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಈ ದಿನದ ಆರಂಭವು ನಿಮಗೆ ಆಪ್ತ ಸಂಬಂಧಿಕರು ಅಥವಾ ನೆರೆಹೊರೆಯವರ ಭೇಟಿಯಿಂದ ಆಗುವುದು. ಅದು ನಿಮ್ಮನ್ನು ಅದ್ಭುತ ಮನಃಸ್ಥಿತಿಗೆ ತರುತ್ತದೆ. ನೀವು ಕೆಲವು ಆಸಕ್ತಿದಾಯಕ ಸುದ್ದಿಯನ್ನು ಪಡೆದುಕೊಳ್ಳಬಹುದು. ಕೆಲವು ವ್ಯಕ್ತಿಗಳಿಂದ ದೊರೆಯುವ ಉತ್ತೇಜಕ ಮಾತುಗಳು ನಿಮಗೊಂದು ಅತ್ಯುತ್ತಮ ಉಡುಗೊರೆ ಆಗಬಹುದು. ನೀವು ನಿಮ್ಮ ಗುರಿಯ ಕಡೆಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಅನುಚಿತ ಗಾಸಿಪ್‍ಗಳಿಗೆ ಕಿವಿಕೊಡದಿರಿ. ನೀವು ಕೇಳಿರುವ ಕೆಲವು ವಿಷಯಗಳು ನಿಜ ಎನ್ನುವುದು ನಿಮ್ಮ ಅರಿವಿಗೆ ಬರಬಹುದು. ಸಂಜೆಯ ವೇಳೆ ಮನೆಯಿಂದ ಹೊರಗೆ ಹೋಗುವಿರಿ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ಇಂದು ಈ ರಾಶಿಯವರ ಸ್ಫೂರ್ತಿ ಮತ್ತು ಕಲ್ಪನೆಯು ಗಗನಕ್ಕೆ ಏರುತ್ತದೆ. ನೀವು ಕೆಲವು ರೀತಿಯ ಕಲಾತ್ಮಕ ಯೋಜನೆಯನ್ನು ಪ್ರಯತ್ನಿಸಲು ಬಳಸಬಹುದು. ಫಲಿತಾಂಶಗಳಲ್ಲಿ ನೀವು ಆಹ್ಲಾದಕರವಾದ ಅನುಭವ ಪಡೆಯುವುದರ ಮೂಲಕ ಆಶ್ಚರ್ಯ ಹೊಂದಬಹುದು. ನಿಮ್ಮ ಅಂತಃಪ್ರಜ್ಞೆಯು ಹೆಚ್ಚಾಗಿರುತ್ತದೆ. ಪ್ರವೃತ್ತಿಯಿಂದ ವರ್ತಿಸಲು ನೀವು ಹಿಂಜರಿಯದಿರಿ. ನೀವು ವೈಚಾರಿಕತೆ ಮತ್ತು ತರ್ಕವನ್ನು ಗೆಲ್ಲಬೇಕಾದ ದಿನವಾಗಬಹುದು.

ಮಿಥುನ ರಾಶಿ: 21 ಮೇ -20 ಜೂನ್

ಮಿಥುನ ರಾಶಿ: 21 ಮೇ -20 ಜೂನ್

ಇಂದು ನೀವು ಅತ್ಯಂತ ಆಕರ್ಷಣೆಯಿಂದ ಕಂಗೊಳಿಸುವಿರಿ. ಇತರರೊಂದಿಗೆ ಉತ್ತಮವಾಗಿ ಬೆರೆಯುವಿರಿ. ನೀವು ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದರೆ ಅಥವಾ ನಿಮ್ಮನ್ನು ಆಹ್ವಾನಿಸಿದರೆ ನೀವು ಮುಕ್ತವಾಗಿ ಭಾಗವಹಿಸಬೇಕು. ನೀವು ಇತರರಿಗೆ ಅತ್ಯುತ್ತಮ ಸಂಗಾತಿಯಾಗಿರುತ್ತೀರಿ. ನಿಮ್ಮ ಕೆಲವು ಭಾವನೆಗಳು ಹೆಚ್ಚು ಉತ್ಸಾಹದಿಂದ ಇರುವಂತೆ ಮಾಡುವುದು. ಜನರು ನಿಮ್ಮ ಸಂಘದಲ್ಲಿ ಹಾಗೂ ನಿಮ್ಮೊಡನೆ ಹೆಚ್ಚಿನ ಸಮಯ ಕಳೆಯಲು ಬಯಸುವರು. ಎಲ್ಲರೂ ಅಗತ್ಯವಾದ ಆಸಕ್ತಿದಾಯಕ ಮಾಹಿತಿಯನ್ನು ನೀವು ಹೊಂದಿದ್ದೀರಿ ಎಂದು ಭಾವಿಸುತ್ತಾರೆ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ಇಂದು ನೀವು ಹೊಂದುವ ಕೆಲವು ತಪ್ಪು ಗ್ರಹಿಕೆಯು ಮನೆಯಲ್ಲಿ ಗೊಂದಲವನ್ನು ಸೃಷ್ಟಿಸುವುದು. ನಿಮ್ಮ ಅಂತಃಪ್ರಜ್ಞೆ ಮತ್ತು ಒಳನೋಟವು ಪರಿಸ್ಥಿತಿಯನ್ನು ತಗ್ಗಿಸುತ್ತದೆ. ವಿಶೇಷವಾಗಿ ನೀವು ಸಾಮನ್ಯರಿಗಿಂತ ವಿಭಿನ್ನವಾದ ರಾಜತಾಂತ್ರಿಕ ಬುದ್ಧಿಯನ್ನು ಉಪಯೋಗಿಸುವಿರಿ. ಇಂದು ನೀವು ಕಲಾತ್ಮಕ ಸ್ಫೂರ್ತಿಯನ್ನು ಸಹ ಹೊಂದುವ ಸಾಧ್ಯತೆಗಳಿವೆ. ಒಂದು ಹೊಸ ಯೋಜನೆಯು ನಿಮಗೆ ಸಿಗಬಹುದು. ಅದು ನಿಮ್ಮ ವೃತ್ತಿ ಜೀವನಕ್ಕೆ ಅತ್ಯಗತ್ಯವಾಗಿರುತ್ತದೆ. ಹೊಸ ಯೋಜನೆಯಿಂದ ನೀವು ಹೊಸ ಅವಕಾಶಗಳನ್ನು ಸಹ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಇಂದು ನೀವು ಭಾಗವಹಿಸುವ ಸಾಮಾಜಿಕ ಕಾರ್ಯಕ್ರಮಗಳಯ ಕೆಲವು ಆಕರ್ಷಕ ಜನರೊಂದಿಗೆ ಸಂಪರ್ಕವನ್ನು ಕಲ್ಪಿಸುವುದು. ಹೊಸ ವ್ಯಕ್ತಿಗಳು ನಿಮ್ಮ ಆಪ್ತರಾಗಬಹುದು. ಆ ವ್ಯಕ್ತಿಗಳು ಉತ್ತಮ ಜ್ಞಾನ ಹಾಗೂ ಬುದ್ಧಿವಂತರೂ ಆಗಿರುತ್ತಾರೆ. ನಿಮ್ಮ ಸಂಭಾಷಣೆಗಳು ಉತ್ತೇಜಕವಾಗಿರುವಂತೆ ನೋಡಿಕೊಳ್ಳಿ. ನೀವು ಪಡೆದುಕೊಳ್ಳುವ ಮಾಹಿತಿಗಳು ದೀರ್ಘ ಸಮಯಗಳ ಕಾಲ ಸೇವೆಯನ್ನು ಒದಗಿಸುತ್ತದೆ. ನೀವು ಬರವಣಿಗೆ, ಬೋಧನೆ ಮತ್ತು ಪ್ರಕಾಶನ ವಿಷಯದಲ್ಲಿ ಮಿಂಚುವಿರಿ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ನೀವು ಹೆಚ್ಚಿನ ಸಂಗತಿಯಲ್ಲಿ ಪ್ರಾಯೋಗಿಕವಾಗಿ ಚಿಂತಿಸಲು ಬಯಸುವಿರಿ. ಇಂದು ನೀವು ಸಾಮಾನ್ಯ ದಿನಗಳಿಗಿಂತ ಹೆಚ್ಚು ಅಂತಃಪ್ರಜ್ಞೆಯನ್ನು ಅವಲಂಬಿಸುವಿರಿ. ನಿಮ್ಮ ಸುತ್ತಮುತ್ತಲಿನ ಜನರು ಹೆಚ್ಚು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ತೋರುವುದು. ನಿಮ್ಮ ಅಂತಃ ಪ್ರಜ್ಞೆಯನ್ನು ಬಳಸಿಕೊಂಡು ಅಂತಹವರ ನಡುವೆ ಸೂಕ್ತ ವರ್ತನೆ ಹಾಗೂ ಸಂಭಾಷಣೆಯನ್ನು ನಡೆಸುವಿರಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ನೀವು ನಿಮ್ಮ ಹೃದಯದ ಮಾತನ್ನು ಕೇಳಬೇಕಾಗುವುದು.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ಆಪ್ತರ ಬಗ್ಗೆ ನಿಮ್ಮ ಭಾವನೆಗಳು ಹೆಚ್ಚಾಗುವುದು. ಇಂದು ಬಹುತೇಕವಾಗಿ ಎಲ್ಲರೂ ಬೇಸರದಲ್ಲಿ ಅಥವಾ ಕೆಟ್ಟ ಮನಃಸ್ಥಿತಿಯನ್ನು ಹೊಂದಿದ್ದಾರೆ ಎಂದು ಭಾವಿಸುವಿರಿ. ನಿಮ್ಮ ಸ್ನೇಹಪರ ಸ್ವಭಾವವು ನಿಮ್ಮವರಿಗೆ ಹಾಗೂ ಸ್ನೇಹಿತರಿಗೆ ಅತ್ಯುತ್ತಮ ಅನುಭವ ನೀಡುವುದು. ಕೆಲವು ಸಾಮಾಜಿಕ ಕಾರ್ಯಕ್ರಮಗಳು ನಿಮ್ಮನ್ನು ಕಾರ್ಯನಿರತರನ್ನಾಗಿ ಮಾಡುತ್ತದೆ. ನೀವು ಕೆಲವು ಅಮೂಲ್ಯ ವ್ಯಕ್ತಿಗಳ ಸಂಪರ್ಕವನ್ನು ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ನಿಮ್ಮ ಸಂಬಂಧದಲ್ಲಿ ನೀವು ಹೆಚ್ಚು ಸೂಕ್ಷ್ಮತೆ ಹಾಗೂ ಕಾಳಜಿಯ ಭಾವನೆಯನ್ನು ಪಡೆದುಕೊಳ್ಳುವಿರಿ. ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ನೀವು ಅನೇಕ ಸಂಗತಿಗಳನ್ನು ಸುಲಭವಾಗಿ ಸಾಧಿಸುವಿರಿ. ನೀವು ಒಂದಿಷ್ಟು ಸಮಯವನ್ನು ನಿಮ್ಮ ಸ್ನೇಹಿತರೊಂದಿಗೆ ಕಳೆಯಲು ಹಾಗೂ ಸಾಮಾಜಿಕವಾಗಿ ತೆರೆದುಕೊಳ್ಳಲು ಬಯಸುವಿರಿ. ಯಾವುದೇ ಉತ್ತಮ ಕೆಲಸ ಮಾಡಲು ಹಿಂಜರಿಯುವ ಅಗತ್ಯವಿಲ್ಲ. ನಿಮ್ಮ ಸಮಯವು ಇಂದು ಉತ್ತಮವಾಗಿರುತ್ತದೆ. ನಿಮ್ಮವರು ನಿಮ್ಮೊಂದಿಗೂ ಹೆಚ್ಚಿನ ಸಮಯ ಕಳೆಯಲು ಬಯಸುವರು.

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಇಂದು ನೀವು ಪ್ರಣಯ, ಪ್ರೀತಿ, ವಿಹಾರ, ವಿವಾಹಗಳ ವಿಷಯದಲ್ಲಿಯೇ ತೇಲುತ್ತಿರುತ್ತೀರಿ. ನಿಮಗೆ ನಿಮ್ಮ ಕುಟುಂಬದವರಿಂದಲೂ ಉತ್ತಮ ಬೆಂಬಲ ದೊರೆಯುವುದು. ನಿಕಟ ಸಂಭಾಷಣೆಗಳು ನಿಮಗೆ ಸುಲಭವಾಗಿ ಇರುತ್ತವೆ. ನಿಮ್ಮ ಆಲೋಚನೆಗಳನ್ನು ನೀವು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿ. ನಿಮ್ಮ ಸಂಗಾತಿ ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಬಹುದು. ಕೆಲವು ವಿಷಯದಲ್ಲಿ ಇರುವ ಅಸಮಧಾನವು ನಿಮಗೆ ದಿನದ ಉತ್ತಮ ಸಮಯವನ್ನು ಹಾಳುಮಾಡುವ ಸಾಧ್ಯತೆಗಳಿವೆ. ಹಾಗಾಗಿ ಉತ್ತಮ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ನಿಮ್ಮ ಮತ್ತು ಕುಟುಂಬ ಸದಸ್ಯರ ನಡುವಿನ ಸಂವಹನ ಇಂದು ಕಷ್ಟವಾಗಿರುತ್ತದೆ. ನೀವು ನಿಮ್ಮವರ ಅಥವಾ ಸಂಗಾತಿಯ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಾಕಷ್ಟು ಕಷ್ಟಪಡುವಿರಿ. ಇಂದು ಕೆಲವು ಸಾಹಸ ಕೆಲಸ ಮಾಡುವುದರ ಮೂಲಕ ಉತ್ತಮ ಸಮಯವನ್ನು ಪಡೆಯಬಹುದು. ನಿಮ್ಮ ಪ್ರಣಯದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮವಾದ ದಿನ ಎನ್ನಬಹುದು. ಪ್ರೇಮಿ ಅಥವಾ ಸಂಗಾತಿಯ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವುದರ ಮೂಲಕ ದಿನದ ಸಂತೋಷವನ್ನು ಅನುಭವಿಸುವಿರಿ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ನಿಮಗೆ ಇಂದು ನಿಮ್ಮ ಸ್ನೇಹಿತರು ಅಥವಾ ಪ್ರೇಮಿಯಿಂದ ಆಸಕ್ತಿದಾಯಕ ಸುದ್ದಿ ದೊರೆಯುವುದು. ಸೃಜನ ಶೀಲ ವಿಷಯವು ನಿಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಹಾಗಾಗಿ ಸಂಗೀತ, ಕಲೆ ಅಥವಾ ಚಿತ್ರಕಲೆಗಳಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಪ್ರಯತ್ನವನ್ನು ತೋರುವಿರಿ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಇಂದು ಅಧಿಕ ಸಮಯವನ್ನು ಮೊಬೈಲ್ ಕರೆಗಳಲ್ಲಿಯೇ ಕಳೆಯುವಿರಿ. ನೆರೆಹೊರೆಯವರ ಜೊತೆಗೆ ಸಣ್ಣ ಪ್ರವಾಸವನ್ನು ಸಹ ಕೈಗೊಳ್ಳುವ ಸಾಧ್ಯತೆಗಳಿವೆ. ಗ್ರಂಥಾಲಯ ಅಥವಾ ಪುಸ್ತಕ ಮಳಿಗೆಗೆ ಭೇಟಿ ನೀಡುವುದರ ಮೂಲಕ ನಿಮ್ಮ ಆಸಕ್ತಿದಾಯಕ ಪುಪ್ತಕವನ್ನು ಪಡೆದುಕೊಳ್ಳುವಿರಿ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ನೀವು ಮನೆಯನ್ನು ನವೀಕರಿಸುವ ಸಂಗತಿಗಳ ಬಗ್ಗೆ ಹೆಚ್ಚಿನ ಯೋಚನೆಯನ್ನು ಮಾಡುವಿರಿ. ಕೆಲವು ಸಮಯಗಳನ್ನು ಚಿತ್ರ ಬಿಡಿಸಲು ಕಳೆಯುವಿರಿ. ಆಕರ್ಷಕ ಅಲಂಕಾರಿ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಮುಂದಾಗುವಿರಿ. ಇದರಿಂದ ನೀವು ಮೋಜಿಗೆ ಹೆಚ್ಚು ಪ್ರಾಮುಖ್ಯತೆ ನೀಡುವವರು ಎಂದು ಕೆಲವರು ನಿಮ್ಮನ್ನು ಗುರುತಿಸಬಹುದು. ಕುಟುಂಬದ ಸದಸ್ಯರು ನಿಮ್ಮೊಂದಿಗೆ ಸಮ್ಮತಿಯನ್ನು ತೋರುವರು. ಅದು ನಿಮಗೆ ಅತ್ಯಂತ ಖುಷಿಯನ್ನು ನೀಡುವ ಸಂಗತಿಯಾಗುವುದು.

English summary

Daily Horoscope 25 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
X