Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಮಂಗಳವಾರದ ದಿನ ಭವಿಷ್ಯ (24-09-2019)
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.
ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ಮೇಷ ರಾಶಿಯವರಿಗೆ ಇಂದು ಬಿಡುವಿಲ್ಲದ ದಿನವಾಗುವುದು. ಈ ದಿನ ನೀವು ಕನಿಷ್ಠ ಎಂದರೂ ಒಂದು ಸಮಾರಂಭಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಇಲ್ಲವಾದರೆ ಲಘು ಉಪಹಾರ ಅಥವಾ ಊಟಕ್ಕಾಗಿ ಸ್ನೇಹಿತರೊಂದಿಗೆ ಪಾರ್ಟಿಯನ್ನು ಪಡೆಯಬಹುದು. ಈ ದಿನ ನಿಮಗೆ ವಿಶ್ರಾಂತಿ ಹಾಗೂ ಕಾಳಜಿಯ ಅಗತ್ಯವೂ ಇರುತ್ತದೆ. ನಿಮ್ಮ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳೊಂದಿಗೆ ವಿನೋದ ಹಾಗೂ ಸೌಹಾರ್ದವನ್ನು ಹಂಚಿಕೊಳ್ಳುವರಿ. ಅಲ್ಲದೆ ಸಾಕಷ್ಟು ಮಾಹಿತಿಗಳನ್ನು ನೀವು ಇಂದು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ.

ವೃಷಭ ರಾಶಿ: 20 ಏಪ್ರಿಲ್ -20 ಮೇ
ಕಂಪ್ಯೂಟರ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಥವಾ ವ್ಯವಹಾರವನ್ನು ಹೊಂದಿದವರಿಗೆ ಹೆಚ್ಚುವರಿ ಆದಾಯ ದೊರೆಯುವುದು. ಇಂದು ನಿಮಗೆ ಬಿಡುವಿಲ್ಲದ ದಿನವಾಗಬಹುದು. ಆದರೆ ನೀವು ಏನು ಮಾಡುತ್ತೀರಿ? ಏನನ್ನು ಇಷ್ಟಪಡುತ್ತೀರಿ? ಎನ್ನುವುದರ ಕುರಿತು ಒಂದಿಷ್ಟು ಚಿಂತನೆ ಇರಬೇಕಾಗುವುದು. ನಿಮ್ಮ ಯೋಚನೆಗೆ ಕೆಲವು ಸಂಗತಿಗಳು ಬರದೆ ಇರಬಹುದು. ಆದರೆ ಕೈಗೊಂಡ ವ್ಯವಹಾರದಲ್ಲಿ ಲಾಭ ದೊರೆಯುವುದು. ನಿಮ್ಮ ವ್ಯವಹಾರವು ಲಾಭದಾಯಕ ವ್ಯವಹಾರವಾಗಿ ಬೆಳೆಯಬಹುದು. ನಿಮ್ಮ ಜೀವನದಲ್ಲಿ ನೀವು ಏನಾಗಲು ಬಯಸುತ್ತೀರಿ ಎನ್ನುವುದರ ಬಗ್ಗೆ ಹೆಚ್ಚಿನ ಚಿಂತನೆ ಇಂದು ಕಾಡಬಹುದು.

ಮಿಥುನ ರಾಶಿ: 21 ಮೇ -20 ಜೂನ್
ಮಿಥುನ ರಾಶಿಯ ವ್ಯಕ್ತಿಗಳು ಅತ್ಯಂತ ಮನರಂಜನೆಯನ್ನು ನೀಡುವ ವ್ಯಕ್ತಿಗಳಾಗಿರುತ್ತಾರೆ. ವೀಡಿಯೋ ಗೇಮ್ ಮತ್ತು ಕಂಪ್ಯೂಟರ್ ಆಸಕ್ತಿ ಹೊಂದಿದವರು ಮಿಥುನ ರಾಶಿಯವರೊಂದಿಗೆ ಉತ್ತಮ ಸಮಯ ಕಳೆಯಬಹುದು. ಇವರು ಇಂದು ಉತ್ತಮ ಜ್ಞಾನದೊಂದಿಗೆ ಇತರರನ್ನು ರಂಜಿಸಬಹುದು. ಇವರು ಇಂದು ಜನರೊಂದಿಗೆ ಬೆರೆಯುವುದು ಹಾಗೂ ಸಂಭಾಷಣೆಯನ್ನು ಕೈಗೊಳ್ಳುವುದರ ಮೂಲಕ ಸಮಯವನ್ನು ಕಳೆಯುವರು.

ಕರ್ಕ ರಾಶಿ: 21 ಜೂನ್ 22 ಜುಲೈ
ಇಂದು ನೀವು ಅಧಿಕ ಮನರಂಜನೆಯನ್ನು ಪಡೆದುಕೊಳ್ಳುವಿರಿ. ಅತೀಂದ್ರಿಯ ಮತ್ತು ವೈದ್ಯ ವೃತ್ತಿಯವರು ಉತ್ತಮ ಕೆಲಸವನ್ನು ನಿರ್ವಹಿಸುವರು. ನೀವು ಚರ್ಚಿಸಿದ ಕೆಲವು ಸಂಗತಿಗಳು ನಿಮ್ಮನ್ನು ಗೊಂದಲಕ್ಕೆ ಎಡೆಮಾಡಬಹುದು. ಯಾವುದೇ ಮಾಹಿತಿ ಅಥವಾ ವಿಷಯಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ಪಡೆದು ಹತಾಶೆಗೆ ಒಳಗಾಗದಿರಿ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದ್ದನ್ನು ಪಡೆದುಕೊಳ್ಳುವಿರಿ. ದಿನದ ಅಂತ್ಯದ ವೇಳೆಗೆ ಒಂದು ನಿರಾಳತೆಯಿಂದ ಕೂಡಿದ ವಾಕ್ ಮಾಡಿ. ಅದು ನೆಮ್ಮದಿಯ ನಿದ್ರೆಯನ್ನು ನೀಡುವುದು.

ಸಿಂಹ ರಾಶಿ: 23 ಜುಲೈ-22 ಆಗಸ್ಟ್
ನಿಮ್ಮ ನೆರೆಹೊರೆಯವರು ಇಂದು ನಿಮ್ಮ ಮುಂದೆ ಹೆಚ್ಚಾಗಿ ಚಟುವಟಿಕೆಯಿಂದ ಇರುವಂತೆ ವರ್ತಿಸುವರು. ನೀವು ನಿಮ್ಮ ಸುತ್ತಲೂ ಅನೇಕ ಬದಲಾವಣೆಗಳು ಹಾಗೂ ಬೆಳವಣಿಗೆಗಳು ನಡೆಯುತ್ತಿವೆ ಎನ್ನುವುದನ್ನು ಸರಿಯಾಗಿ ಪರಿಶೀಲಿಸಿ. ಹೊರಗೆ ಹೋದರೆ ಮುಜುಗರ ಎನ್ನುವ ತಪ್ಪು ಕಲ್ಪನೆಯಿಂದ ಹೊರಬನ್ನಿ. ನೀವು ಚಟುವಟಿಕೆಯಿಂದ ಕೂಡಿರುವುದು ಹಾಗೂ ಉತ್ಸಾಹದ ಮನಃಸ್ಥಿತಿಯನ್ನು ಹೊಂದುವುದರ ಮೂಲಕ ಜೀವನದಲ್ಲಿ ಗೆಲುವನ್ನು ಸಾಧಿಸಬಹುದು. ಇಲ್ಲವಾದರೆ ಕಷ್ಟವಾಗುವುದು.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ಇಂದು ನೀವು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗುವಿರಿ. ಅದು ನಿಮ್ಮ ಅಧಿಕ ಸಮಯ ಹಾಗೂ ಶಕ್ತಿಯನ್ನು ಪಡೆದುಕೊಳ್ಳುವುದು. ನೀವು ಹೊಸ ವ್ಯವಹಾರವನ್ನು ಕೈಗೊಳ್ಳಬಹುದು ಇಲ್ಲವೇ ಈಗಾಗಲೇ ನಿರ್ವಹಿಸುತ್ತಿರುವ ಕೆಲಸದಲ್ಲಿಯೇ ಧಕ್ಷತೆಯನ್ನು ಹೆಚ್ಚಿಸಿಕೊಳ್ಳುವಿರಿ. ಅದಕ್ಕಾಗಿ ನೀವು ನಿಮ್ಮ ಜ್ಞಾನ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚು ಬಳಸಬೇಕಾಗುವುದು. ತಾಂತ್ರಿಕ ವಿಷಯದಲ್ಲಿ ಭಯಪಡಬೇಡಿ. ಅವುಗಳನ್ನು ಹಂತಹಂತವಾಗಿ ತೆಗೆದುಕೊಳ್ಳಿ. ನಂತರ ಎಲ್ಲವೂ ನಿಮ್ಮ ನಿರೀಕ್ಷೆಯಂತೆ ಸಾಗುವುದು.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ಸಾಹಸ ಎನ್ನುವುದು ನುಮ್ಮ ಮುಖ್ಯ ಆದ್ಯತೆಯಲ್ಲಿ ಒಂದಾಗಿರುತ್ತದೆ. ಇಂದು ನೀವು ಹಿಂದೆಂದೂ ಹೊಂದಿರದಂತಹ ಹೊಸ ಸಾಹಸ ಪ್ರಯತ್ನವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ನೀವು ಯಾವ ಕೆಲಸವನ್ನು ಕೈಗೊಳ್ಳಲು ಇಷ್ಟಪಡುವಿರೋ ಅದರ ಬಗ್ಗೆಯೇ ಹೆಚ್ಚು ಗಮನ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸವನ್ನು ಕೈಗೊಳ್ಳುವಿರಿ. ಕೆಲವು ವಿಷಯಗಳಿಗೆ ಅಂಟಿಕೊಮಡಿರುವಂತಹ ಪ್ರವೃತ್ತಿಯನ್ನು ತೋರುವಿರಿ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ಜ್ಯೋತಿಷ್ಯ ಹಾಗೂ ಮಾನಸಿಕ ಚಿಂತನೆಗಳ ಬಗ್ಗೆ ಇಂದು ನೀವು ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವಿರಿ. ಆಸಕ್ತಿ ಕರುವ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವಿರಿ. ನಿಕಟ ಸಂಬಂಧಿಗಳು ಅಥವಾ ಆಸಕ್ತಿ ದಾಯಕ ವ್ಯಕ್ತಿಗಳ ಭೇಟಿ ಮಾಡಲು ನೀವು ಪ್ರಯತ್ನಿಸುವ ಸಾಧ್ಯತೆಗಳಿವೆ. ನಿಮ್ಮ ಆಸಕ್ತಿಗಳು ಕೆಲವು ವಿಷಯಗಳ ಕಡೆಗೆ ಕೊಂಡೊಯ್ಯುವ ಸಾಧ್ಯತೆಗಳಿರುತ್ತವೆ. ನೀವು ನಿಮ್ಮ ತರಗತಿ ಹಾಗೂ ಕೆಲಸವನ್ನು ಮುಗಿಸಿದ ಬಳಿಕ ನೇರವಾಗಿ ಮನೆಗೆ ಹೋಗಿ. ಆಗ ಮಾತ್ರ ರಾತ್ರಿ ನೆಮ್ಮದಿಯ ನಿದ್ರೆಯನ್ನು ಪಡೆಯಬಹುದು.

ಧನು ರಾಶಿ: 22 ನವೆಂಬರ್-21 ಡಿಸೆಂಬರ್
ಸ್ನೇಹಿತರ ಭೇಟಿ, ಗುಂಪುಗಾರಿಕೆಯ ಚಟುವಟಿಕೆ ಮತ್ತು ಸಾಮಾಜಿಕ ಘಟನೆಗಳು ಇಂದು ನಿಮ್ಮ ಸಮಯವನ್ನು ತೆಗೆದುಕೊಳ್ಳುವುದು. ಇಂದು ಅಧಿಕ ಜನರೊಂದಿಗೆ ಸಂವಹನ ನಡೆಸಲು ಮುಂದಾಗಬಹುದು. ಅವರು ಸಾಮಾಜಿಕ, ಶೈಕ್ಷಣಿಕ, ರಾಷ್ಟ್ರೀಯ ಹಾಗೂ ಜನಾಂಗೀಯ ಹಿನ್ನೆಲೆಯನ್ನು ಪಡೆದುಕೊಂಡವರು ಆಗಿರಬಹುದು. ಈ ದಿನ ನೀವು ಆಸಕ್ತಿದಾಯಕ, ಮನರಂಜನೆಯಿಂದ ಕೂಡಿದ ಹಾಗೂ ಸಂತೋಷದಾಯಕ ಸಮಯವನ್ನು ಪಡೆದುಕೊಳ್ಳುವಿರಿ. ಇಂದು ನೀವು ಹೊಸ ಸ್ನೇಹಿತರನ್ನು ಪಡೆದುಕೊಳ್ಳುವ ಸಾಧ್ಯತೆಯೂ ಇದೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ
ಇಂದು ನಿಮಗೆ ಹೆಚ್ಚು ಒತ್ತಡದ ದಿನವಾಗಬಹುದು. ನೀವು ಎರಡು ಸಂಗತಿಗಳ ಕಡೆಗೆ ಹೆಚ್ಚಿನ ಗಮನವನ್ನು ಹರಿಸುವಿರಿ. ಕಂಪ್ಯೂಟರ್ ಹಾಗೂ ತಂತ್ರಜ್ಞಾನವು ನಿಮಗೆ ಹೆಚ್ಚಿನ ಆಸಕ್ತಿದಾಯಕ ಕೆಲಸವಾಗುವುದು. ನಿಮ್ಮಲ್ಲಿ ಇರುವ ಸೃಜನಶೀಲ ಸಾಮಥ್ರ್ಯವು ಹೊಸ ಜನರೊಂದಿಗೆ ಸಂವಹನವನ್ನು ನಡೆಸುವಂತೆ ಮಾಡುವುದು. ಉತ್ತಮ ವ್ಯಕ್ತಿಗಳೊಂದಿಗಿನ ಸಂಪರ್ಕವು ನಿಮಗೆ ಹೆಚ್ಚಿನ ಆನಂದ ಹಾಗೂ ಆಹ್ಲಾದವನ್ನು ತಂದುಕೊಡುವುದು.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ಇಂದು ನೀವು ಸಾಮಾನ್ಯವಾಗಿ ವೈಯಕ್ತಿಕ ಜೀವನದ ಬಗ್ಗೆ ಕ್ರಿಯಾಶೀಲತೆ ಹಾಗೂ ಉತ್ಸಾಹವನ್ನು ಪಡೆದುಕೊಳ್ಳುವಿರಿ. ನಿಮ್ಮ ಮನಸ್ಸು ಸೃಜನಶೀಲತೆ, ತತ್ವಶಾಸ್ತ್ರ, ಪ್ರಯಾಣದ ಸಂಗತಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವುದು. ಭವಿಷ್ಯದ ಬಗ್ಗೆ ನೀವು ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ನಿಮ್ಮ ಗಮನವು ಜೀವನದ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಪ್ರಣಯದ ಸಂಗತಿಯ ಕಡೆಗೆ ನಿಮ್ಮ ಮನಸ್ಸು ವಾಲುವುದು. ಲಘು ಹೃದಯದಿಂದ ನಿಮ್ಮನ್ನು ನೀವು ರಂಜಿಸಿಕೊಳ್ಳಿ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಜ್ಯೋತಿಷ್ಯ, ಟ್ಯಾರೋ, ಸಂಖ್ಯಾಶಾಸ್ತ್ರ ಅಥವಾ ಮನಃಶಾಸ್ತ್ರ ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸ್ನೇಹಿತರ ಮತ್ತು ನೆರೆಹೊರೆಯವರ ವಿಶೇಷ ಕೂಟವನ್ನು ಏರ್ಪಡಿಸುವ ಸಾಧ್ಯತೆಗಳಿವೆ. ಸ್ನೇಹಿತರು ಹಾಗೂ ಬಂಧುಗಳು ತೋರುವ ಸೌಹಾರ್ದತೆಯಿಂದಾಗಿ ನೀವು ನಿಮ್ಮ ಬಗ್ಗೆ ಹೆಮ್ಮೆ ಹಾಗೂ ಸಂತೋಷವನ್ನು ಪಡೆದುಕೊಳ್ಳುವಿರಿ. ಕೆಲವು ಸಂಗತಿಗಳನ್ನು ನೀವು ವಿಶೇಷವಾಗಿ ಪರಿಗಣಿಸುವಿರಿ. ಅದರಿಂದ ಸಾಕಷ್ಟು ಸಂತೋಷವು ಪ್ರಾಪ್ತಿಯಾಗುವುದು. ಈ ಹಿನ್ನೆಲೆಯಲ್ಲಿಯೇ ಇನ್ನೊಂದು ಸಭೆಯನ್ನು ಸಹ ಆಯೋಜಿಸುವಿರಿ.