For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ (24-11-2019)

|

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

Dina Bhavishya
  • ಸಂವತ್ಸರ: ವಿಕಾರಿನಾಮ
  • ಆಯನ: ದಕ್ಷಿಣಾಯನ
  • ಋತು: ಹೇಮಂತ
  • ಮಾಸ: ಕಾರ್ತಿಕ
  • ಪಕ್ಷ: ಕೃಷ್ಣ ಪಕ್ಷ
  • ತಿಥಿ: ತ್ರಯೋದಶಿ
  • ನಕ್ಷತ್ರ: ಚಿತ್ರಾ
  • ರಾಹುಕಾಲ: ಸಂಜೆ 4.05ರಿಂದ 5.25ರವರೆಗೆ
  • ಯಮಗಂಡಕಾಲ: ಮಧ್ಯಾಹ್ನ 12.08ರಿಂದ 1.27ರವೆರೆಗೆ
  • ಗುಳಿಕಕಾಲ: ಮಧ್ಯಾಹ್ನ 2.46ರಿಂದ ಸಂಜೆ 4.05ರವೆರೆಗೆ
  • ದುರ್ಮುಹೂರ್ತ: ಸಂಜೆ 4ರಿಂದ 4.42ರವರೆಗೆ
  • ಸೂರ್ಯೋದಯ: ಬೆಳಿಗ್ಗೆ 6.50
  • ಸೂರ್ಯಾಸ್ತ: ಸಂಜೆ 5.25
ಮೇಷ ರಾಶಿ

ಮೇಷ ರಾಶಿ

ಇಂದು ನಿಮ್ಮ ತಾಳ್ಮೆಯನ್ನು ಅನೇಕ ಸಂದರ್ಭಗಳಲ್ಲಿ ಪರೀಕ್ಷಿಸಬಹುದು. ಪ್ರಣಯ ಜೀವನದಲ್ಲಿ ಸಂಗಾತಿಯೊಂದಿಗೆ ನೀವು ಕೆಲವು ವ್ಯತ್ಯಾಸಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯ ಚರ್ಚೆಗಳಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಸಂಗಾತಿಯ ಬೆಂಬಲದ ಕೊರತೆಯಿಂದಾಗಿ ವೈವಾಹಿಕ ಜೀವನದಲ್ಲಿ ನಿರಾಶೆ ಉಂಟಾಗುತ್ತದೆ. ಸಾಧ್ಯವಾದರೆ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ ಏಕೆಂದರೆ ಅದು ನಿಮ್ಮಿಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಕಚೇರಿಯಲ್ಲಿ ಹಿರಿಯರು ನಿಮ್ಮ ಕೆಲಸದಿಂದ ತೃಪ್ತರಾಗುತ್ತಾರೆ. ನಿಮ್ಮ ಕೆಲಸದ ಹೊರೆಯೂ ಹಗುರವಾಗಿರುತ್ತದೆ. ಹರ್ಷಚಿತ್ತ ಸ್ವಭಾವವು ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಕೆಲವು ಹಳೆಯ ಸಿಹಿ ನೆನಪುಗಳನ್ನು ಪುನರುಜ್ಜೀವನಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕ ವಿಚಾರದಲ್ಲಿ ದಿನವೂ ಪ್ರಯೋಜನಕಾರಿಯಾಗಲಿದೆ. ಆದಾಯ ಹೆಚ್ಚಾಗುವ ಸಾಧ್ಯತೆಯಿದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 4:00 ರಿಂದ 6:45 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಇಂದು ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುತ್ತೀರಿ. ಇಂದು ನೀವು ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದ್ದರೂ ಯಾರೂ ನಿಮ್ಮನ್ನು ಮುಂದೆ ಸಾಗದಂತೆ ತಡೆಯಲು ಸಾಧ್ಯವಿಲ್ಲ. ಕಠಿಣ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕುಟುಂಬದ ಮುಂಭಾಗದಿಂದ, ದಿನವು ಅನುಕೂಲಕರವಾಗಿದೆ. ಕಳೆದ ಕೆಲವು ದಿನಗಳಿಂದ ಮನೆಯ ಕೆಲವು ಸಮಸ್ಯೆಗಳಿಂದಾಗಿ ನೀವು ಸಾಕಷ್ಟು ಕಿರಿಕಿರಿಗೊಂಡಿದ್ದೀರಿ. ಇಂದಿನ ಪರಿಸ್ಥಿತಿ ಸುಧಾರಿಸುವುದರಿಂದ ಚಿಂತಿಸಬೇಡಿ. ಪ್ರಣಯ ಜೀವನವು ಪ್ರೀತಿಯಿಂದ ತುಂಬಿರುತ್ತದೆ, ಆದರೆ ಸಂಗಾತಿಯೊಂದಿಗಿನ ಸಂಬಂಧವು ಹದಗೆಡುವ ಸಾಧ್ಯತೆಯಿದೆ. ನೀವು ಅವರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರ್ಥಿಕ ಲಾಭಗಳು ಇಂದು ಉಂಟಾಗುವ ಸಾಧ್ಯತೆ ಇದೆ, ನೀವು ಅಮೂಲ್ಯವಾದದ್ದನ್ನು ಪಡೆಯಬಹುದು.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಸಂಜೆ 6:00 ರಿಂದ 8:00 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಮನೆಯಲ್ಲಿ ವಾತಾವರಣ ಇಂದು ತೊಂದರೆಗೊಳಗಾಗುತ್ತದೆ. ತಪ್ಪು ತಿಳುವಳಿಕೆಯು ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧದಲ್ಲಿ ಕಹಿ ಉಂಟುಮಾಡಬಹುದು. ವಾದಗಳನ್ನು ತಪ್ಪಿಸಲು ಪ್ರಯತ್ನಿಸಿ. ಬುದ್ಧಿವಂತಿಕೆಯಿಂದ ವರ್ತಿಸಿದರೆ ವಿಷಯಗಳನ್ನು ನಿಮ್ಮ ಪರವಾಗಿ ತಿರುಗಿಸಬಹುದು. ಆರ್ಥಿಕವಾಗಿ ದಿನವು ಸಾಮಾನ್ಯವಾಗಿರುತ್ತದೆ. ಬಜೆಟ್ ಪ್ರಕಾರ ನಿರ್ವಹಣೆ ಮಾಡುವುದರಿಂದ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಕೆಲಸದ ವೇಳಾಪಟ್ಟಿ ಹೆಚ್ಚಾಗುವುದರಿಂದ ನಿಮ್ಮಿಬ್ಬರ ನಡುವೆ ಸಮಸ್ಯೆಯನ್ನು ಉಂಟುಮಾಡಬಹುದು. ಕೆಲಸದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಅದು ವ್ಯವಹಾರವಾಗಲಿ ಅಥವಾ ಕೆಲಸವಾಗಲಿ ನೀವು ಇಂದು ಕೆಲಸದ ಮೇಲೆ ಸಂಪೂರ್ಣವಾಗಿ ಗಮನ ಹರಿಸುತ್ತೀರಿ. ನೀವು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಕಾರ್ಯಗಳನ್ನು ಪೂರ್ಣಗೊಳಿಸಲು ಸಹ ಸಾಧ್ಯವಾಗುತ್ತದೆ. ಯಾವುದೇ ದೀರ್ಘ-ಯೋಜಿತ ಕೆಲಸವು ಇಂದು ಪೂರ್ಣಗೊಳ್ಳುತ್ತದೆ ಮತ್ತು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ಇಂದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 7:55 ರಿಂದ 10:30 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಸಂಗಾತಿಯೊಂದಿಗೆ ಸಮಯ ಕಳೆಯಲು ದಿನವು ಸೂಕ್ತವಾಗಿದೆ. ನಿಮ್ಮ ಪ್ರೇಯಸಿಯನ್ನು ಅವರ ಆಯ್ಕೆಯ ಸ್ಥಳಕ್ಕೆ ಕರೆದೊಯ್ಯುವುದು ಉತ್ತಮ. ಇದು ಅವರ ಮನಸ್ಥಿತಿಯನ್ನು ಸುಧಾರಿಸುತ್ತದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಪೋಷಕರಿಂದ ವಾತ್ಸಲ್ಯ ಮತ್ತು ಬೆಂಬಲ ಇರುತ್ತದೆ. ನಿಮ್ಮ ತಂದೆಯಿಂದ ಆರ್ಥಿಕ ಲಾಭದ ಸಾಧ್ಯತೆಯಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅವರು ನಿಮಗೆ ಸಹಾಯ ಮಾಡಬಹುದು. ಉದ್ಯೋಗಿಗಳಿಗೆ ದಿನವೂ ಅದ್ಭುತವಾಗಿದೆ. ಕೆಲಸದ ಹೊರೆ ಕಡಿಮೆ ಇರುತ್ತದೆ ಮತ್ತು ನಿಮಗಾಗಿ ಸಾಕಷ್ಟು ಸಮಯ ಸಿಗುತ್ತದೆ. ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಆರೋಗ್ಯದ ವಿಷಯದಲ್ಲಿ ದಿನ ಚೆನ್ನಾಗಿದೆ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಕಾಯಿಲೆಯನ್ನು ನೀವು ತೊಡೆದುಹಾಕಬಹುದು ಮತ್ತು ನಿಮ್ಮ ನೆಚ್ಚಿನ ಖಾದ್ಯವನ್ನು ಆನಂದಿಸಲು ಇಂದು ಸಾಧ್ಯವಾಗುತ್ತದೆ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಮಧ್ಯಾಹ್ನ 12:30 ರಿಂದ 7:00 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಇತರರನ್ನು ಸಂತೋಷಪಡಿಸಲು ಹೆಚ್ಚು ಖರ್ಚು ಮಾಡಿದರೆ ಶೀಘ್ರದಲ್ಲೇ ನೀವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುತ್ತೀರಿ. ಅತಿಯಾದ ಉತ್ಸಾಹಕ್ಕಾಗಿ ಹೆಚ್ಚು ಖರ್ಚು ಮಾಡದಿರುವುದು ಉತ್ತಮ. ವಿವಾಹಿತ ದಂಪತಿಗಳಿಗೆ ಇಂದು ಸೂಕ್ತ ದಿನ. ನಿಮ್ಮಿಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳನ್ನು ಸಹ ಎದುರಿಸಬಹುದು. ಸಂಗಾತಿಯನ್ನು ನೀವು ನಂಬಬೇಕು ಮತ್ತು ಬೇರೊಬ್ಬರ ಮಾತುಗಳನ್ನು ಕೇಳಿ ಅನುಮಾನ ಪಡುವುದನ್ನು ತಪ್ಪಿಸಬೇಕು. ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂದೇಹವಿದ್ದರೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ.

ಅದೃಷ್ಟ ಬಣ್ಣ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 29

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 5:55 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ನಿರ್ಲಕ್ಷ್ಯದಿಂದಾಗಿ ನಿಮ್ಮ ಆರೋಗ್ಯವು ಇಂದು ಹದಗೆಡಬಹುದು. ಆರೋಗ್ಯದ ಕ್ಷೀಣಿಸುವಿಕೆ ನಿಮ್ಮ ದಿನವನ್ನು ಹಾಳುಮಾಡುತ್ತದೆ ಮತ್ತು ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯಬೇಕಾಗಬಹುದು. ಹಣಕಾಸಿನ ದೃಷ್ಟಿಯಿಂದ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇಂದು ಹಳೆಯ ಸಾಲವೂ ಸಹ ನಿಮ್ಮನ್ನು ಕಾಡಬಹುದು. ಮನೆಯಲ್ಲಿ ಗೊಂದಲ ಉಂಟಾಗುತ್ತದೆ, ನಿಮ್ಮ ತಾಯಿಯೊಂದಿಗೆ ನೀವು ಸಂಘರ್ಷಕ್ಕೆ ಒಳಗಾಗಬಹುದು. ಕಾರ್ಯನಿರತ ಕೆಲಸದಂದಾಗಿ ಸಂಗಾತಿಯು ನಿಮಗೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗದಿರಬಹುದು. ಈ ಸಮಯದಲ್ಲಿ ನೀವು ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ಉಳಿಸಿಕೊಳ್ಳಬೇಕು. ಇದು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಇಂದು ಪ್ರಯಾಣ ಮಾಡುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಬೆಳಿಗ್ಗೆ 4:05 ರಿಂದ 10:00 ರವರೆಗೆ

ತುಲಾ ರಾಶಿ

ತುಲಾ ರಾಶಿ

ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಬಹಳ ಸಮಯದ ನಂತರ ಹೆತ್ತವರೊಂದಿಗೆ ಕುಳಿತು ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸುತ್ತೀರಿ. ಸಂಗಾತಿಯ ವರ್ತನೆ ಇಂದು ಸಾಮಾನ್ಯವಾಗಲಿದೆ. ನೀವಿಬ್ಬರೂ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವಿರಿ ಮತ್ತು ಪರಸ್ಪರರ ಭಾವನೆಗಳನ್ನು ಸಹ ಗೌರವಿಸುವಿರಿ. ನಿಮ್ಮ ಬಾಸ್ ನಿಮ್ಮ ಉತ್ತಮ ಕಾರ್ಯಕ್ಷಮತೆಯಿಂದ ತುಂಬಾ ಸಂತೋಷವಾಗುತ್ತಾರೆ ಮತ್ತು ಉತ್ತಮ ಅವಕಾಶವನ್ನು ನೀಡುತ್ತಾರೆ. ನೀವು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಇಂದು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಹೆಚ್ಚು ಖರ್ಚು ಮಾಡಿದರೂ ಯಾವುದೇ ತೊಂದರೆ ಇರುವುದಿಲ್ಲ. ಆರೋಗ್ಯ ವಿಷಯಗಳು ಇಂದು ಪರಿಪೂರ್ಣವಾಗುತ್ತವೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಬೆಳಿಗ್ಗೆ 4:05 ರಿಂದ 10:00 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ನೀವು ಮಾನಸಿಕವಾಗಿ ಸದೃಢರಾಗಿರುತ್ತೀರಿ ಮತ್ತು ಎಲ್ಲಾ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲಸದ ವಿಷಯದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಿರಬಹುದು. ಉದ್ಯೋಗದಲ್ಲಿರುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ನೀವು ಕಷ್ಟಕರವಾದ ಕೆಲಸವನ್ನು ಬಹಳ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ, ಅದು ನಿಮ್ಮ ಮೇಲಧಿಕಾರಿಗಳಿಗೆ ತುಂಬಾ ಸಂತೋಷವನ್ನು ನೀಡುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಜನರು ಸಹ ಇಂದು ಉತ್ತಮ ಯಶಸ್ಸನ್ನು ಪಡೆಯಬಹುದು. ಹೊಸ ವ್ಯವಹಾರಕ್ಕಾಗಿ ನೀವು ಹಣಕಾಸಿನ ಸಹಾಯವನ್ನು ಪಡೆಯುವ ಸಾಧ್ಯತೆಯಿದೆ. ಪ್ರಣಯ ಜೀವನದಲ್ಲಿ ಇಂದು ಪ್ರೀತಿ ಮತ್ತು ಪ್ರಣಯವು ಮನಸ್ಸಿನಲ್ಲಿರುತ್ತದೆ ಮತ್ತು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನೀವು ಬಯಸುತ್ತೀರಿ. ತಂದೆ ಬೆಂಬಲ ನೀಡುತ್ತಾರೆ ಮತ್ತು ಅವರು ನಿಮಗೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸಲಹೆಯನ್ನು ಸಹ ನೀಡಬಹುದು. ನಿಮಗೆ ಶೀತ ಅಥವಾ ಯಾವುದೇ ರೀತಿಯ ಅಲರ್ಜಿ ಬರುವ ಸಾಧ್ಯತೆ ಇರುವುದರಿಂದ ಇಂದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 7:30 ರವರೆಗೆ

ಧನು ರಾಶಿ

ಧನು ರಾಶಿ

ಇಂದು ಮೋಜು ಮಾಡಲು ನಿಮಗೆ ಅವಕಾಶ ಸಿಗಬಹುದು. ಸ್ನೇಹಿತರೊಂದಿಗೆ ಸಣ್ಣ ಪಾರ್ಟಿಯನ್ನು ಸಹ ಆಯೋಜಿಸಬಹುದು. ಉದ್ಯೋಗಿಗಳಿಗೆ ದಿನವು ತುಂಬಾ ಒಳ್ಳೆಯದು. ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುವ ಸಾಧ್ಯತೆಯಿದೆ. ದಿನವು ಇತರ ಅಂಶಗಳಲ್ಲಿಯೂ ಒಳ್ಳೆಯದೇ ನಿಮ್ಮ ಪಾಲಾಗಲಿದೆ. ವಿವಾಹಿತ ದಂಪತಿಗಳಿಗೆ ಸಾಮಾನ್ಯ ದಿನವನ್ನು ನಿರೀಕ್ಷಿಸಲಾಗಿದೆ. ಆರ್ಥಿಕ ದೃಷ್ಟಿಯಿಂದ ನೀವು ಹಠಾತ್ ಲಾಭವನ್ನು ಪಡೆಯಬಹುದು. ಇದಲ್ಲದೆ ಪ್ರಮುಖ ಆರ್ಥಿಕ ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು. ಆರೋಗ್ಯ ಸುಧಾರಿಸುತ್ತಿರುವುದರಿಂದ ಇಂದು ಹೆಚ್ಚು ಉತ್ತಮವಾಗುತ್ತೀರಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ರವರೆಗೆ

ಮಕರ ರಾಶಿ

ಮಕರ ರಾಶಿ

ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ಬಹಳ ಬುದ್ಧಿವಂತಿಕೆಯಿಂದ ಪರಿಹರಿಸಲು ನೀವು ಶಾಂತ ಮತ್ತು ತಾಳ್ಮೆಯಿಂದಿರಬೇಕು. ಇಂದು ಒತ್ತಡದ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಜೀವನ ಸಂಗಾತಿಯೊಂದಿಗೆ ವಿವಾದಗಳು ಉಂಟಾಗಬಹುದು, ಅಂತಹ ಸಮಸ್ಯೆಗಳು ನಿಮ್ಮ ಗುರಿಯಿಂದ ನಿಮ್ಮನ್ನು ದೂರವಿಡುತ್ತವೆ ಎಂಬುದನ್ನು ನೆನಪಿಡಿ. ಯಶಸ್ವಿಯಾಗಲು ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಅಲ್ಲದೆ ನಿಮ್ಮ ಶತ್ರುಗಳು ಇಂದು ಸಕ್ರಿಯರಾಗಿರುವುದರಿಂದ ಜಾಗರೂಕರಾಗಿರಿ. ಇಂದು ನಿಮ್ಮ ಕೆಲಸದಲ್ಲಿ ಏರಿಳಿತದ ದಿನವಾಗಿರುತ್ತದೆ. ಹಠಾತ್ತನೆ ಹೆಚ್ಚುತ್ತಿರುವ ಜವಾಬ್ದಾರಿಗಳು ನಿಮಗೆ ಬೇಸರವನ್ನುಂಟು ಮಾಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ವೆಚ್ಚವನ್ನು ನಿಯಂತ್ರಿಸಲು ಒಳ್ಳೆಯ ದಿನ.

ಅದೃಷ್ಟ ಬಣ್ಣ: ಗಾಢ ಹಸಿರು

ಅದೃಷ್ಟ ಸಂಖ್ಯೆ: 32

ಅದೃಷ್ಟ ಸಮಯ: ಸಂಜೆ 6:00 ರಿಂದ 10:00 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಇಂದು ಆರ್ಥಿಕ ಬಿಕ್ಕಟ್ಟಿನ ಸಾಧ್ಯತೆಗಳಿವೆ. ನೀವು ಯೋಚಿಸದೆ ಹಣವನ್ನು ಖರ್ಚು ಮಾಡುತ್ತಿದ್ದರೆ ಶೀಘ್ರದಲ್ಲೇ ಇತರರಿಂದ ಸಾಲ ಪಡೆಯಬೇಕಾಗಬಹುದು. ಆದ್ದರಿಂದ, ನಿಮ್ಮ ಹಣಕಾಸು ಯೋಜನೆಯನ್ನು ಬಜೆಟ್ ಗೆ ತಕ್ಕಂತೆ ಮಾಡುವುದು ಉತ್ತಮ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಬಹುಶಃ ನಿಮ್ಮ ಕುಟುಂಬ ಸದಸ್ಯರು ಇಂದು ನಿಮ್ಮ ವರ್ತನೆಯಿಂದ ಅಸಮಾಧಾನ ಹೊಂದುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಬೇಜವಾಬ್ದಾರಿ ಕೃತ್ಯ ಮಾಡುವುದನ್ನು ತಪ್ಪಿಸಿ. ನೀವು ಮಕ್ಕಳೊಂದಿಗೆ ಸಮಯ ಕಳೆಯುವ ಅವಕಾಶವನ್ನು ಪಡೆಯಬಹುದು, ಇಂದು ನಿಮ್ಮ ಒತ್ತಡ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಸಂಗಾತಿಯ ವರ್ತನೆಯೂ ಚೆನ್ನಾಗಿರುತ್ತದೆ. ಪ್ರಣಯ ಜೀವನದಲ್ಲಿ ಸಂಗಾತಿಯ ದೂರುಗಳನ್ನು ಪರಿಹರಿಸಲು ಇಂದು ಕೆಲವು ಉತ್ತಮ ಯೋಜನೆಗಳನ್ನು ಮಾಡಬಹುದು. ಕೆಲಸದ ವಿಷಯದಲ್ಲಿ ಇಂದು ಸಾಮಾನ್ಯವಾಗಿರಲಿದೆ. ಆದರೂ, ನೀವು ಸ್ವಲ್ಪ ಖಿನ್ನತೆ ಮತ್ತು ದುಃಖವನ್ನು ಅನುಭವಿಸಬಹುದು. ನಿಮ್ಮನ್ನು ತಾಜಾ ಆಗಿಡಲು ಹೊರಗೆ ಸುತ್ತಾಡಿ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ರಾತ್ರಿ 9:00 ರವರೆಗೆ

ಮೀನ ರಾಶಿ

ಮೀನ ರಾಶಿ

ಅನಗತ್ಯವಾಗಿ ಚಿಂತಿಸುತ್ತಾ ನಿಮ್ಮ ದಿನವನ್ನು ವ್ಯರ್ಥ ಮಾಡಬೇಡಿ, ಬದಲಾಗಿ ಪೂರ್ಣವಾಗಿ ಆನಂದಿಸಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಇಂದು ನಿಮ್ಮ ಎಲ್ಲಾ ಗಮನ ಮಕ್ಕಳು ಮತ್ತು ಕುಟುಂಬದ ಮೇಲೆ ಇರುತ್ತದೆ. ಸಂಗಾತಿಯ ಬೆಂಬಲವನ್ನು ಪಡೆಯಲು ನೀವು ತುಂಬಾ ಸಂತೋಷಪಡುತ್ತೀರಿ. ಕುಟುಂಬದ ಉಳಿದ ಸದಸ್ಯರಲ್ಲಿ ಪ್ರೀತಿ ಮತ್ತು ಐಕ್ಯತೆಯ ಭಾವನೆ ಕಂಡುಬರುತ್ತದೆ. ಇಂದು ಪೋಷಕರೊಂದಿಗೆ ಧಾರ್ಮಿಕ ಸ್ಥಳಕ್ಕೂ ಭೇಟಿ ನೀಡಬಹುದು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗುತ್ತೀರಿ. ಹಣದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ. ನಿಮ್ಮ ಉತ್ತಮ ಯೋಜನೆಗಳಿಂದಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿಯಲ್ಲಿ ದೊಡ್ಡ ಜಿಗಿತ ಉಂಟಾಗುವ ಸಾಧ್ಯತೆಯಿದೆ. ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನಗಳನ್ನು ನಿರೀಕ್ಷಿಸಲಾಗಿದೆ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 7:00 ರವರೆಗೆ

English summary

Daily Horoscope 24 Nov 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, November 23, 2019, 15:44 [IST]
X
Desktop Bottom Promotion