For Quick Alerts
ALLOW NOTIFICATIONS  
For Daily Alerts

ಶುಕ್ರವಾರದ ದಿನ ಭವಿಷ್ಯ (24-01-2020)

|

ಜ್ಯೋತಿಷ್ಯಶಾಸ್ತ್ರದಲ್ಲಿ ಈ ದಿನ ಯಾವ ರಾಶಿಯ ಫಲ ಹೇಗಿರುತ್ತದೆ ಎಂದು ಹೇಳಲಾಗಿರುತ್ತದೆ. ಕನ್ನಡ ಬೋಲ್ಡ್‌ಸ್ಕೈ ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ರಾಶಿಫಲ ಹೇಗಿದೆ ಎಂದು ಹೇಳಿದೆ ನೋಡಿ.

Dina Bhavishya

ಸಂವತ್ಸರ: ವಿಕಾರಿನಾಮ
ಆಯನ: ಉತ್ತರಾಯನ
ಋತು: ಶಿಶಿರ
ಮಾಸ: ಪುಷ್ಯ
ಪಕ್ಷ: ಕೃಷ್ಣ
ತಿಥಿ: ತ್ರಯೋದಶಿ
ನಕ್ಷತ್ರ: ಪೂರ್ವ ಆಶಾಢ
ರಾಹುಕಾಲ: ರಾತ್ರಿ1.53 ರಿಂದ ಬೆಳಗ್ಗೆ 3. 18ರವರೆಗೆ ಗೆ
ಗುಳಿಕಕಾಲ: ಬೆಳಿಗ್ಗೆ 9.39ರಿಂದ 11.04ರವರೆಗೆ
ಯಮಗಂಡಕಾಲ: ಬೆಳಗ್ಗೆ 6.50ರಿಂದ 8.14ರವರೆಗೆ
ದುರ್ಮುಹೂರ್ತ: ಬೆಳಗ್ಗೆ 10.35ರಿಂದ 11.21ರವರೆಗೆ ಹಾಗೂ 3.06ರಿಂದ 3.51ರವರೆಗೆ

ಸೂರ್ಯೋದಯ: ಬೆಳಿಗ್ಗೆ 6.50
ಸೂರ್ಯಾಸ್ತ: ಸಂಜೆ 6.07ಕ್ಕೆ

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರೇ ಕೌಟಂಬಿಕ ವಿಷಯದಲ್ಲಿ ಸ್ವಲ್ಪ ಹುಷಾರಾಗಿರಿ. ಇಂದು ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಿ ನಿಮ್ಮಬ್ಬರ ಮನಸ್ಸನ್ನು ತುಂಬಾ ನೋಯಿಸಬಹುದು ಹಾಗೂ ಸಂಬಂಧದಲ್ಲಿ ಬಿರುಕು ಕೂಡ ಉಂಟಾಗಬಹುದು. ಆದ್ದರಿಂದ ಸಮಸ್ಯೆಗಳನ್ನು ಸೂಕ್ಷ್ಮ ರೀತಿಯಲ್ಲಿ ಬಗೆ ಹರಿಸಿಕೊಳ್ಳುವುದು ಉತ್ತಮ. ನೌಕರಿಯಲ್ಲಿ ಉತ್ತಮವಾಗಿ ಕಾರ್ಯ ನಿವರ್ಹಿಸುತ್ತೀರಿ, ನಿಮ್ಮ ಕೆಲಸ ಯಾರೂ ಬೊಟ್ಟು ಮಾಡುವಂತಿರುವುದಿಲ್ಲ. ಹಲವು ದಿನಗಳಿಂದ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗುತ್ತದೆ. ಇಂದಿನ ಪ್ರಯಾಣ ಶುಭಕರವಾಗಲಿದೆ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಮಧ್ಯಾಹ್ನ 1 ಗಂಟೆಯಿಂದ ಸಂಜೆ 3 ಗಂಟೆಯವರೆಗೆ

ವೃಷಭ ರಾಶಿ

ವೃಷಭ ರಾಶಿ

ಈ ದಿನ ಸ್ವಲ್ಪ ಬುದ್ಧಿವಂತಿಕೆಯಿಂದ ವರ್ತಿಸದಿದ್ದರೆ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವಿರಿ, ಆದ್ದರಿಂದ ಜಾಗ್ರತೆ. ಪ್ರೇಮಿಗಳಿಗೆ ಈ ದಿನ ಶುಭಕರವಾಗಿದೆ, ಪ್ರೇಮಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಈ ದಿನ ನೌಕರಿ ಜಾಗದಲ್ಲಿ ನಿಮ್ಮ ಮೇಲಾಧಿಕಯ ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ನಡುವಳಿಕೆಯಲ್ಲಿ ಬದಲಾವಣೆ ತನ್ನಿ, ಮಾತಿನಲ್ಲಿ ಹಿಡಿತವಿರಲಿ ಆವಾಗ ಪರಿಸ್ಥಿತಿಯನ್ನು ಶಾಂತ ರೀತಿಯಲ್ಲಿ ನಿಭಾಯಿಸಬಹುದು. ಇನ್ನು ಖರ್ಚಿನ ವಿಷಯದಲ್ಲಿ ಹಿಡಿತವಿಲ್ಲದಿದ್ದರೆ ಅಧಿಕ ಖರ್ಚಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಏರಳಿತ ಉಂಟಾಗಬಹುದು.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 31

ಅದೃಷ್ಟದ ಸಮಯ: ಸಂಜೆ 5.05 ಗಂಟೆಯಿಂದ 6.45ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಕೌಟಂಬಿಕ ಜೀವನದಲ್ಲಿ ನೆಮ್ಮದಿ, ಖುಷಿ ಇರುತ್ತದೆ, ಸ್ನೇಹಿತರೊಂದಿಗೆ ಕಳೆಯಲು ಸಮಯ ಸಿಗುತ್ತದೆ. ಯಾವುದೋ ಒಂದು ವಿಷಯಕ್ಕೆ ಗೊಂದಲ ಉಂಟಾಗುವ ಸಾಧ್ಯತೆ ಇದೆ, ನಿಮಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅನುಭವಸ್ಥರ ಸಲಹೆ ಕೇಳಿರಿ. ಸಂಗಾತಿಯ ಸಲಹೆ ನಿಮಗೆ ಸಹಾಯ ಮಾಡುತ್ತದೆ. ಕೆಲಸದ ಜಾಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಹಣಕಾಸಿನ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ. ಇಂದು ಖರ್ಚು ಮಾಡುವ ಸಾಧ್ಯತೆ ಇದ್ದರೂ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ.

ಅದೃಷ್ಟದ ಬಣ್ಣ: ಕೆನೆ ಬಣ್ಣ

ಅದೃಷ್ಟದ ಸಂಖ್ಯೆ: 18

ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ 7.45ರವರೆಗೆ

 ಕರ್ಕ ರಾಶಿ

ಕರ್ಕ ರಾಶಿ

ಇಂದು ನೀವು ಖುಷಿಯಾಗಿರುವಿರಿ, ಕೌಟಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ. ಪೋಷಕರ ಮೇಲಿದ್ದ ಮುನಿಸು ಇಂದು ದೂರವಾಗುವುದು. ನಿಮ್ಮ ಸಂಗಾತಿಯೊಂದಿಗೆ ಟ್ರಿಪ್ ಅಥವಾ ಶಾಪಿಂಗ್ ಅಂತ ಸಮಯ ಕಳೆಯುವ ಸಾಧ್ಯತೆ ಇದೆ. ಸಂಬಂಧಿಕರ ಹಠಾತ್ ಆಗಮನದಿಂದ ಮತ್ತಷ್ಟು ಖುಷಿಯಾಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಹಣದ ಹೂಡಿಕೆ ಮಾಡಬಹುದು ಹಾಗೂ ವ್ಯಾಪಾರ ಪ್ರಾರಂಭಿಸಲು ಈ ದಿನ ಶುಭಕರವಾಗಿರುತ್ತದೆ.

ಅದೃಷ್ಟದ ಬಣ್ಣ: ಕೇಸರಿ

ಅದೃಷ್ಟದ ಸಂಖ್ಯೆ: 33

ಅದೃಷ್ಟದ ಸಮಯ: ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.55ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳು ಬಂದರೂ ಸಂಜೆ ಹೊತ್ತಿಗೆ ಎಲ್ಲವೂ ಸರಿಯಾಗುತ್ತದೆ. ಸಂಗಾತಿ ಜೊತೆಗೆ ಹೊರಗಡೆ ಹೋಗುವಾಗ ಕೋಪಗೊಳ್ಳುವುದು ಅತವಾ ಅವರ ಮನಸ್ಸಿಗೆ ನೀವಾಗುವಂತೆ ನಡೆದುಕೊಳ್ಳುವು ಮಾಡಬೇಡಿ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿದೆ. ಹಣಕಾಸಿನ ಹೂಡಿಕೆಗೆ ಈ ದಿನ ಉತ್ತಮವಾಗಿದೆ. ನೌಕರಿ ಜಾಗದಲ್ಲಿ ಕೆಲವೊಂದು ಅಡಚಣೆ ಉಂಟಾಗಬಹುದು, ಈ ಸಂದರ್ಭದಲ್ಲಿ ಕೋಪಗೊಳ್ಳದೆ ತಾಳ್ಮೆಯಿಂದ ವರ್ತಿಸಿ. ಪ್ರೇಮಿಗಳಿಗೂ ಈ ದಿನ ಉತ್ತಮವಾಗಿದೆ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 6

ಅದೃಷ್ಟದ ಸಮಯ: ಮಧಾಹ್ನ12.20ರಿಂದ ಸಂಜೆ 4 ಗಂಟೆಯವರೆಗೆ

 ಕನ್ಯಾ ರಾಶಿ

ಕನ್ಯಾ ರಾಶಿ

ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿದೆ. ಹಣವನ್ನು ಗಳಿಸಲು ಉತ್ತಮ ಅವಕಾಶ ನಿಮಗೆ ದೊರೆಯಲಾಗಿದೆ. ಪ್ರೇಮಿಗಳಿಗೆ ಈ ದಿನ ಅಷ್ಟೊಂದು ಉತ್ತಮವಾಗಿಲ್ಲ, ಸಂಬಂಧದಲ್ಲಿ ಬಿರುಕು ಉಂಟಾಗಿ ಅಂತ್ಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರದಿಂದ ವರ್ತಿಸಿ. ವೈವಾಹಿಕ ಬದುಕಿನಲ್ಲಿ ಇಬ್ಬರ ನಡುವೆ ಮಾತಿನ ತರ್ಕ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಅಸಮಧಾನ ಉಂಟಾಗುವುದು, ಈ ಕಾರಣದಿಂದ ಕೆಲಸದಲ್ಲಿ ಸಮಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ.

ಅದೃಷ್ಟದ ಬಣ್ಣ: ಮೆರೂನ್

ಅದೃಷ್ಟದ ಸಂಖ್ಯೆ:7

ಅದೃಷ್ಟದ ಸಮಯ: ಮಧಾಹ್ನ2ರಿಂದ ಸಂಜೆ 4.20ರವರೆಗೆ

ತುಲಾ ರಾಶಿ

ತುಲಾ ರಾಶಿ

ನೌಕರಿ ದೃಷ್ಟಿಯಿಂದ ನೋಡುವುದಾದರೆ ತುಲಾರಾಶಿಯವರಿಗೆ ಈ ದಿನ ಉತ್ತಮವಾಗಿದೆ. ಕೆಲಸದ ಕಡೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುತ್ತದೆ, ಇನ್ನು ಕೆಲಸದ ಜಾಗದಲ್ಲಿ ವಾತಾವರಣವೂ ನಿಮಗೆ ಅನುಕೂಲವಾಗಿರುತ್ತದೆ. ನಿಮ್ಮ ಬಾಸ್ ಹಾಗೂ ಸಹೋದ್ಯೋಗಿಗಳ ಬೆಂಬಲ ನಿಮಗೆ ದೊರೆಯುವುದು. ಇದರಿಂದ ನಿಮ್ಮ ಕಾರ್ಯದಲ್ಲಿ ಯಶಸ್ವಿ ದೊರೆಯುತ್ತದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುವುದರಿಂದ ಸಾಲವನ್ನು ಮರು ಪಾವತಿಸುವಿರಿ. ಪ್ರೇಮಿಗಳಿಗೆ ಈ ದಿನ ಉತ್ತಮವಾಗಿದೆ. ವಿವಾಹಿತರಿಗೆ ವೈವಾಹಿಕ ಜೀವನ ಉತ್ತಮವಾಗಿದೆ, ಆರೋಗ್ಯದ ಸ್ಥಿತಿ ಕೂಡ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 22

ಅದೃಷ್ಟದ ಸಮಯ: ಬೆಳಗ್ಗೆ 9.20ರಿಂದ ಮಧಾಹ್ನ 1.30ರವರೆಗೆ

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಆರ್ಥಿಕ ದೃಷ್ಟಿಯಿಂದ ಈ ದಿನ ಅಷ್ಟೊಂದು ಅನುಕೂಲಕರವಾಗಿಲ್ಲ. ನಿಮಗೆ ಆರ್ಥಿಕ ಲಾಭ ತರಬಹುದೆಂದು ನಿರೀಕ್ಷಿಸಲಾಗಿದ್ದ ಕೆಲಸದಲ್ಲಿ ಇಂದು ತೊಡಕು ಉಂಟಾಗಬಹುದು, ಆದರೆ ಪ್ರಯತ್ನಿ ನಿಲ್ಲಿಸಬೇಡಿ, ಮುಂದೆ ಖಂಡಿತ ಫಲ ಸಿಗುತ್ತದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ, ಪೋಷಕರ ಆಶೀರ್ವಾದ ದೊರೆಯುವುದು. ನಿಮ್ಮ ಸಹೋದರ ದೊಡ್ಡ ಸಾಧನೆ ಮಾಡಬಹುದು. ಪ್ರೇಮಿಗಳು ಸ್ವಲ್ಪ ಜಾಗರೂಕರಾಗಿರಬೇಕು. ನೀವು ಹೇಳುವ ಜೋಕ್‌ಗಳು ಅವರ ಮನಸ್ಸಿಗೆ ನೋವುಂಟು ಮಾಡಬಹುದು, ಆದ್ದರಿಂದ ಎಚ್ಚರದಿಂದ ವರ್ತಿಸಿ. ಇಂದು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಧ್ಯಾನ ಮಾಡಿದರೆ ಒಳ್ಳೆಯದು.

ಅದೃಷ್ಟದ ಬಣ್ಣ: ಕಡು ಕೆಂಪು

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಬೆಳಗ್ಗೆ 8 ಗಂಟೆಯಿಂದ ಮಧಾಹ್ನ 12.30ವರೆಗೆ

ಧನು ರಾಶಿ

ಧನು ರಾಶಿ

ಇಂದು ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿದೆ. ವ್ಯಾಪಾರಿಗಳಿಗೆ ಈ ದಿನ ತುಂಬಾ ಶುಭವಾಗಿದೆ. ದಾಂಪತ್ಯ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಪ್ರಣಯಿಗಳಿಗೂ ಈ ದಿನ ಉತ್ತಮವಾಗಿದೆ. ಸಂಗಾತಿ ಶುಭ ಸುದ್ದಿಯೊಂದನ್ನು ಹೇಳುವರು. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಹೆಚ್ಚು ಖರ್ಚು ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಖರ್ಚು ಮಾಡಬೇಕೋ, ಬೇಡ್ವೋ ಎಂಬ ಸಂದಿಗ್ಧತೆ ಉಮಟಾಗಬಹುದು. ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ 9.40ರವರೆಗೆ

ಮಕರ ರಾಶಿ

ಮಕರ ರಾಶಿ

ಇಂದು ಕೆಲವು ಸವಾಲುಗಳು ಎದುರಾಗಬಹುದು. ಆದರೆ ಸಕಾರಾತ್ಮಕವಾಗಿ ಚಿಂತಿಸಿದರೆ ದೊಡ್ಡ ಕಷ್ಟವನ್ನು ಸುಲಭವಾಗಿ ನಿವಾರಿಸಬಹುದು. ಸ್ವಲ್ಪ ಖಿನ್ನತೆ ಕಾಡಬಹುದು, ಅದರಿಂದ ಹೊರಬರಲು ಪ್ರಯತ್ನಿಸಿ. ಪ್ರಣಯಿಗಳಿಗೆ ಈ ದಿನ ಸಾಮಾನ್ಯವಾಗಿರಲಿದೆ. ವಿವಾಹಿತರಿಗೆ ಸಮಸ್ಯೆಯಿಂದ ಹೊರಬರಲು ಸಂಗಾತಿಯ ಬೆಂಬಲ ಸಿಗಲಿದೆ.ಹಣದ ದೃಷ್ಟಿಯಿಂದ ನೋಡುವುದಾದರೆ ಸ್ವಲ್ಪ ದುಡ್ಡು ಖರ್ಚಾಗುವ ಸಾಧ್ಯತೆ ಇದೆ. ಕೆಲಸದ ಜಾಗದಲ್ಲಿ ಸ್ವಲ್ಪ ಅಡತಡೆ ಎದುರಾಗಬಹುದು ಆದರೆ ಹಿರಿಯರ ಸಹಾಯದಿಂದ ಸಮಸ್ಯೆ ಬಗೆ ಹರಿಯುತ್ತದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಮಧಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ

 ಕುಂಭ ರಾಶಿ

ಕುಂಭ ರಾಶಿ

ಇಂದು ಯಾರ ಜೊತೆ ಅನವಶ್ಯಕವಾಗಿ ಚರ್ಚೆ ಮಾಡಬೇಡಿ. ಹಣಸಿಕಾಸಿನ ದೃಷ್ಟಿಯಿಂದಲೂ ಈ ದಿನ ಲಾಭದಾಯಕವಾಗಿಲ್ಲ. ವ್ಯಾಪಾರಸ್ಥರಿಗೆ ಬಯಸಿದ ಲಾಭ ದೊರೆಯುವುದಿಲ್ಲ. ಇಂದು ನೀವು ಸ್ವಲ್ಪ ಅಸಮಧಾನಕ್ಕೆ ಒಳಗಾಗುವುದರಿಂದ ಕೋಪದಿಂದ ಇರುವಿರಿ, ಇದರ ಪರಿಣಾಮ ವೈವಾಹಿಕ ಬದುಕಿನ ಮೇಲೆ ಬೀರುತ್ತದೆ. ಆದ್ದರಿಂದ ಶಾಂತವಾಗಿರಲು ಪ್ರಯತ್ನಿಸಿ. ಶತ್ರುಗಳ ಬಗ್ಗೆ ಜಾಗರೂಕರಾಗಿರಿ. ನಕಾರಾತ್ಮಕ ಚಿಂತನೆಯಿಂದ ದೇಹ ಬಳಲಿದಂತೆ ಅನಿಸಬಹುದು. ಆದ್ದರಿಂದ ಒಳ್ಳೆಯದನ್ನು ಚಿಂತಿಸಿ, ಒಳ್ಳೆಯದಾಗುತ್ತದೆ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 42

ಅದೃಷ್ಟದ ಸಮಯ: ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ

ಮೀನ ರಾಶಿ

ಮೀನ ರಾಶಿ

ಇಂದು ನಿಮಗೆ ಮಿಶ್ರಫಲದ ದಿನವಾಗಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸ್ವಲ್ಪ ನಿರಾಸೆ ಉಂಟಾಗಬಹುದು, ಆದರೆ ಧೈರ್ಯವನ್ನು ಕಳೆದುಕೊಳ್ಳಬೇಡಿ, ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ, ಆದ್ದರಿಂದ ಪ್ರಯತ್ನ ಮುಂದುವರೆಸಿ. ಮನೆಯ ಪರಿಸ್ಥಿತಿಯಲ್ಲಿ ಸ್ವಲ್ಪ ಗಿಂದಲ ಕಂಡು ಬರಬಹುದು, ನೀವು ಕಠೋರವಾಗಿ ಮಾತನಾಡಲು ಹೋಗಬೇಡಿ. ಈ ದಿನ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಪ್ರೇಮಿಗಳು ಈ ದಿನ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಬೆಳಗ್ಗೆ 5.15ರಿಂದ ಮದಾಹ್ನ 3 ಗಂಟೆಯವರೆಗೆ

English summary

Daily Horoscope 24 Jan 2020 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X
Desktop Bottom Promotion