For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ (23-11-2019)

|

ಶನಿವಾರ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ಇವನು ವಾನರ ಮತ್ತು ಅಂಜನಾದೇವಿಯ ಸುಪುತ್ರ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಶನಿವಾರದಂದು ಪೂಜಿಸಲಾಗುತ್ತದೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

Dina Bhavishya

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿ

ವೈವಾಹಿಕ ಜೀವನಕ್ಕೆ ಹೆಚ್ಚು ಗಮನಹರಿಸಿ. ನಿಮ್ಮ ಸಂಗಾತಿಯೊಂದಿಗೆ ನೀವು ಎಷ್ಟೇ ಜಗಳವಾಡಿದರೂ, ಪರಸ್ಪರರ ಮೇಲಿನ ನಿಮ್ಮ ಪ್ರೀತಿಯನ್ನು ಎಂದಿಗೂ ಮರೆಯಬೇಡಿ ಮತ್ತು ಪ್ರತಿಕೂಲ ಸಂದರ್ಭಗಳಲ್ಲಿಯೂ ಬುದ್ಧಿವಂತಿಕೆಯಿಂದ ವರ್ತಿಸಿ. ಹಣಕಾಸಿನ ದೃಷ್ಟಿಯಿಂದ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ, ಆದ್ದರಿಂದ ಮನೆಯ ವಿಷಯಗಳಿಗೆ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಕಚೇರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ಅದೃಷ್ಟವು ಖಂಡಿತವಾಗಿಯೂ ನಿಮ್ಮನ್ನು ಬೆಂಬಲಿಸುತ್ತದೆ. ಸಹೋದ್ಯೋಗಿಗಳೊಂದಿಗೆ ಅನಗತ್ಯ ವಿಷಯಗಳನ್ನು ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಸಂಗಾತಿಯ ಜತೆ ಚೆನ್ನಾಗಿ ವರ್ತಿಸಿ ಮತ್ತು ಬೇಜವಾಬ್ದಾತನಗಳನ್ನು ತಪ್ಪಿಸಿ, ಏಕೆಂದರೆ ಅದು ನಿಮ್ಮಿಬ್ಬರ ನಡುವೆ ವಿವಾದಕ್ಕೆ ಕಾರಣವಾಗಬಹುದು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಅದೃಷ್ಟ ಬಣ್ಣ: ಗಾಢ ಹಳದಿ

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ಸಂಜೆ 6:00 ರಿಂದ 10:20 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಇಂದು ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಅಂತಹ ಚರ್ಚೆಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿ. ನಿಮ್ಮ ಅಭಿಪ್ರಾಯಗಳು ಸಂಗಾತಿಯೊಂದಿಗೆ ಹೊಂದಿಕೆಯಾಗದಿದ್ದರೆ ಶಾಂತವಾಗಿರಿ ಮತ್ತು ಅನಗತ್ಯವಾಗಿ ವಾದಿಸುವ ಮೂಲಕ ಸಮಯ ವ್ಯರ್ಥ ಮಾಡಬೇಡಿ. ದಂಪತಿಗಳಿಗೆ ದಿನವು ವಿಶೇಷವಾಗಿದೆ. ಸಂಬಂಧದಲ್ಲಿ ಗೊಂದಲ ಎದುರಾದರೆ ಆಪ್ತ ಸ್ನೇಹಿತ ಅಥವಾ ವಿಶ್ವಾಸಾರ್ಹ ವ್ಯಕ್ತಿಯನ್ನು ಸಂಪರ್ಕಿಸಿ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯವಾಗಿರಲು ವ್ಯಾಯಾಮ ಮಾಡಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 8:00 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಮುಂದಿನ ವರ್ಷಗಳಲ್ಲಿ ನಿಮಗೆ ಲಾಭವನ್ನು ನೀಡುವ ಯೋಜನೆಯಲ್ಲಿ ಕೆಲಸ ಮಾಡುವುದಕ್ಕೆ ಇಂದಿನ ದಿನ ಪ್ರಶಸ್ತ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ಪ್ರಯೋಜನಕಾರಿಯಾಗಿರಲಿದೆ. ಇದ್ದಕ್ಕಿದ್ದಂತೆ ನೀವು ಯಾವುದೋ ದೊಡ್ಡ ಆರ್ಥಿಕ ಲಾಭದಿಂದ ಪರಿಹಾರ ಪಡೆಯುತ್ತೀರಿ. ಕುಟುಂಬದ ಎಲ್ಲಾ ಸಾಲಗಳನ್ನು ತೆರವುಗೊಳಿಸಲು ಈ ಲಾಭವು ನಿಮಗೆ ಸಹಾಯಕಾರಿಯಾಗಲಿದೆ. ಮನೆಯ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಅವರ ಮನಸ್ಥಿತಿ ಇಂದು ಸರಿಯಾಗಿಲ್ಲವಾದ್ದರಿಂದ ಯಾವುದೇ ವಾದಾತ್ಮಕ ವಿಷಯಗಳನ್ನು ತಪ್ಪಿಸಿ. ಅಂತಹ ಜಗಳಗಳನ್ನು ತಪ್ಪಿಸಲು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮೊಂಡುತನದ ಮತ್ತು ಕೋಪಗೊಂಡ ಸ್ವಭಾವವು ನಿಮ್ಮ ಕೆಲಸಕ್ಕೆ ಅಥವಾ ಸಂಬಂಧಗಳಿಗೆ ಒಳ್ಳೆಯದಲ್ಲವಾದ್ದರಿಂದ ನಿಮ್ಮ ನಡವಳಿಕೆಯನ್ನು ಬದಲಾಯಿಸಬೇಕಾಗಿದೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಸಂಜೆ 5:00 ರಿಂದ 10:00 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಇಂದು ಕುಟುಂಬದಲ್ಲಿನ ವಿವಾದಗಳು ನಿಮ್ಮ ಮನಸ್ಸಿನಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸುತ್ತವೆ ಮತ್ತು ಕೆಲಸದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಭಿನ್ನಾಭಿಪ್ರಾಯಗಳನ್ನು ಕೊನೆಗೊಳಿಸುವುದು ಉತ್ತಮ. ಆರ್ಥಿಕ ರಂಗದಲ್ಲಿ ದಿನ ಉತ್ತಮವಾಗಿದೆ. ಇಂದಿನ ಹೂಡಿಕೆ ನಿಮ್ಮ ಸಮೃದ್ಧಿ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಹಣವನ್ನು ಗಳಿಸುವ ಅವಕಾಶವನ್ನೂ ನೀವು ಪಡೆಯಬಹುದು. ಆದಾಗ್ಯೂ ಕಚೇರಿ ಕೆಲಸದಲ್ಲಿ ಯಾವುದೇ ಅಡ್ಡಿ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಸುತ್ತಲಿನ ಕೆಲವು ಸಹೋದ್ಯೋಗಿಗಳು ನಿಮಗೆ ತೊಂದರೆಗೊಳಿಸಲು ಪ್ರಯತ್ನಿಸಬಹುದು, ಅಂತಹ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಮತ್ತು ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳಲ್ಲಿ ಭಾಗವಹಿಸಿ ಮತ್ತು ಮದ್ಯಪಾನವನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಗಾಢ ನೀಲಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಬೆಳಿಗ್ಗೆ 6:00 ರಿಂದ ಮಧ್ಯಾಹ್ನ 2:00 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಆರ್ಥಿಕ ಪರಿಸ್ಥಿತಿ ಇಂದು ಸುಧಾರಿಸಲಿದೆ ಮತ್ತು ಹೆಚ್ಚುವರಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಜನರನ್ನು ಸುಲಭವಾಗಿ ನಂಬುವ ನಿಮ್ಮ ಅಭ್ಯಾಸವು ಇಂದು ನಿಮ್ಮನ್ನು ಕೆಲವು ತೊಂದರೆಗಳಿಗೆ ಒಡ್ಡುತ್ತದೆ. ದಿನವು ನಿಮಗೆ ಕೆಲವು ಸಮಸ್ಯೆಗಳನ್ನು ತರಬಹುದು ಆದರೆ, ನೀವು ತಾಳ್ಮೆ ಮತ್ತು ಶಾಂತ ಮನಸ್ಸಿನಿಂದ ಕೆಲಸ ಮಾಡಿದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಸಂಗಾತಿಯೊಂದಿಗಿನ ತೊಂದರೆಯಿಂದಾಗಿ ನಿಮಗೆ ದುಖಃ ಉಂಟಾಗಬಹುದು, ಸಂಜೆಯ ಹೊತ್ತಿಗೆ ಅವರ ಕೋಪವು ಮಾಯವಾಗುತ್ತದೆ ಮತ್ತು ನೀವಿಬ್ಬರೂ ಒಟ್ಟಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಪ್ರಣಯ ಜೀವನದಲ್ಲಿ ನಿಮ್ಮ ಮಾತುಗಳ ಬಗ್ಗೆ ನಿಗಾ ಇರಲಿ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಹೊರಬರಲು ನೀವು ಪ್ರತಿದಿನ ಮುಂಜಾನೆ ವಾಕ್ ಮಾಡಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಬೆಳಿಗ್ಗೆ 8:55 ರಿಂದ ಮಧ್ಯಾಹ್ನ 2:00 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಕೌಟುಂಬಿಕ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಸಾಮರಸ್ಯ ಇರುತ್ತದೆ ಮತ್ತು ಅವರೊಂದಿಗೆ ಮೋಜು ಮಾಡಲು ನಿಮಗೆ ಸಂಪೂರ್ಣ ಅವಕಾಶ ಸಿಗುತ್ತದೆ. ನಿನ್ನೆಗೆ ಹೋಲಿಸಿದರೆ ಇಂದಿನ ದಿನ ಉತ್ತಮವಾಗಿರುತ್ತದೆ. ನಿಮ್ಮ ಜ್ಞಾನವನ್ನು ಹೆಚ್ಚಿಸುವ ಹೊಸ ವಿಷಯಗಳನ್ನು ಕಲಿಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಇಂದು ಕೆಲವು ಮನೆ ಅಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಹೊಸ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳು ಇಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಶ್ರಮಿಸುತ್ತೀರಿ ಮತ್ತು ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇಂದು ಮಾನಸಿಕವಾಗಿ ಸದೃಢರಾಗುತ್ತೀರಿ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 9:15 ರವರೆಗೆ

ತುಲಾ ರಾಶಿ

ತುಲಾ ರಾಶಿ

ಆರ್ಥಿಕ ಪರಿಸ್ಥಿತಿಗಳು ಇಂದು ಅನುಕೂಲಕರವಾಗಿರುವುದಿಲ್ಲ. ಖರ್ಚುಗಳನ್ನು ನಿಯಂತ್ರಿಸಬೇಕು ಮತ್ತು ಯಾವುದೇ ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಆರೋಗ್ಯದ ದೃಷ್ಟಿಯಿಂದ ದಿನವು ನಿಮಗೆ ಒಳ್ಳೆಯದಲ್ಲ ಏಕೆಂದರೆ ನೀವು ಇಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗುವ ಸಾಧ್ಯತೆ ಇದೆ. ವಿಶ್ರಾಂತಿಗಾಗಿ ಹೆಚ್ಚಿನ ಗಮನಹರಿಸುವುದು ಉತ್ತಮ. ವೈವಾಹಿಕ ಜೀವನದಲ್ಲಿ ವಿವಾದ ಉಂಟಾಗುವುದು, ಸಂಗಾತಿಯೊಂದಿಗೆ ಜಗಳವಾಡುವುದರಿಂದ ಮನೆಯಲ್ಲಿ ವಾತಾವರಣ ಸರಿಯಾಗುವುದಿಲ್ಲ. ನಿಮ್ಮ ಸಂಬಂಧದಲ್ಲಿ ಅಂತರವನ್ನು ಉಂಟುಮಾಡುವ ವಿಚಾರಗಳನ್ನು ತಪ್ಪಿಸಿ. ಇಂದು ಅತಿಯಾದ ಕೋಪ ಮತ್ತು ಕಿರಿಕಿರಿಯಿಂದಾಗಿ ನೀವು ಯಾವುದೇ ಕೆಲಸದಲ್ಲಿ ಗಮನಹರಿಸುವುದಿಲ್ಲ. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡಿ. ನೀವು ಸಂಜೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು, ಅದು ನಿಮಗೆ ಹೆಚ್ಚಿನಮಟ್ಟಿಗೆ ಪರಿಹಾರ ನೀಡುತ್ತದೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಬೆಳಿಗ್ಗೆ 10:45 ರಿಂದ ಮಧ್ಯಾಹ್ನ 12:25

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಪ್ರೀತಿಯ ವಿಷಯಗಳಲ್ಲಿ ಅವಸರದಿಂದ ದೂರವಿರಬೇಕು. ನೀವು ಇಂದು ಯಾರಿಗಾದರೂ ನಿಮ್ಮ ಪ್ರೇಮ ನಿವೇದನೆಯನ್ನು ಮಾಡಲು ಚಿಂತಿಸುತ್ತಿದ್ದರೆ ಇಂದು ಶುಭದಿನವಲ್ಲ, ಸ್ವಲ್ಪ ಸಮಯ ಕಾಯಿರಿ. ಮೊದಲಿಗೆ ವ್ಯಕ್ತಿಯ ಬಗ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಂತರ ನಿರ್ಧಾರ ತೆಗೆದುಕೊಳ್ಳಿ. ನೆನಪಿಡಿ, ತಾಳ್ಮೆಯ ಫಲವು ತುಂಬಾ ಸಿಹಿಯಾಗಿರುತ್ತದೆ. ಇಂದು ನಿಮ್ಮ ಸಂಗಾತಿಯು ನಿಮ್ಮಿಂದ ಏನನ್ನಾದರೂ ಬೇಡಿಕೆಯಿಡಬಹುದು. ಆದರೆ, ಅವರ ಬೇಡಿಕೆಯನ್ನು ಪೂರೈಸಲು ನಿಮಗೆ ಸಾಧ್ಯವಾಗದಿದ್ದರೆ, ಅವರನ್ನು ಪ್ರೀತಿಯಿಂದ ಮನವೊಲಿಸಲು ಪ್ರಯತ್ನಿಸಿ. ಕೆಲಸದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಅದು ಕೆಲಸವಾಗಲಿ, ವ್ಯವಹಾರವಾಗಲಿ, ನೀವು ಬಯಸಿದ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆಯಿದೆ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 4:20 ರವರೆಗೆ

ಧನು ರಾಶಿ

ಧನು ರಾಶಿ

ಆರ್ಥಿಕ ಕ್ಷೇತ್ರದಲ್ಲಿ ದಿನವು ಶುಭವಾಗಿದೆ. ಯಾವುದೇ ಹಣಕಾಸಿನ ಸಮಸ್ಯೆ ಇರುವುದಿಲ್ಲ ಮತ್ತು ನಿಮ್ಮ ತಿಳುವಳಿಕೆಯೊಂದಿಗೆ ನೀವು ಸಾಕಷ್ಟು ಹಣವನ್ನು ಗಳಿಸಲು ಸಹ ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ, ಒಟ್ಟಿಗೆ ಸಾಕಷ್ಟು ವಿನೋದಮಯ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ನೀವು ಪ್ರಯಾಣಿಸುತ್ತಿದ್ದರೆ ಹೆಚ್ಚು ಜಾಗರೂಕರಾಗಿರಿ ಮತ್ತು ವಸ್ತುಗಳ ಮೇಲೆ ಗಮನವಿರಲಿ. ಸಂಗಾತಿಯ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಅವರನ್ನು ಪ್ರೀತಿಯಿಂದ ಅರ್ಥಮಾಡಿಕೊಳ್ಳುವುದು ಉತ್ತಮ. ಪ್ರೀತಿಯ ವಿಷಯಗಳಲ್ಲಿ ದಿನವು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತದೆ. ತೆರಿಗೆ ಮತ್ತು ವಿಮೆಗೆ ಸಂಬಂಧಿಸಿದ ಕೆಲಸಕ್ಕೆ ಗಮನಹರಿಸಿ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಕೆಲಸವನ್ನು ಮೆಚ್ಚಬಹುದು ಮತ್ತು ಪ್ರಶಂಸಿಸಬಹುದು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 25

ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:40

ಮಕರ ರಾಶಿ

ಮಕರ ರಾಶಿ

ಇಂದು ಅದೃಷ್ಟವು ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಮತ್ತು ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ಗ್ರಹಗಳ ಶುಭ ಸಂಯೋಜನೆಯು ನಿಮ್ಮ ಯಶಸ್ಸಿನ ಬಾಗಿಲುಗಳನ್ನು ತೆರೆಯುತ್ತದೆ. ನೀವು ಇಂದು ತುಂಬಾ ಸಂತೋಷದಿಂದ ಮತ್ತು ಉತ್ಸುಕರಾಗಿರುತ್ತೀರಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಜಯವನ್ನು ಆಚರಿಸುತ್ತೀರಿ. ಆರ್ಥಿಕ ದೃಷ್ಟಿಯಿಂದ ದಿನ ಉತ್ತಮವಾಗಿವೆ. ಕಳೆದ ಕೆಲವು ದಿನಗಳಲ್ಲಿ ನೀವು ಸಾಕಷ್ಟು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದೀರಿ ಆದರೆ ಇಂದು, ನಿಮ್ಮ ನಿರಂತರ ಪ್ರಯತ್ನಗಳು ಫಲ ನೀಡುತ್ತಿವೆ. ಇಂದು ನಿಮ್ಮ ಕುಟುಂಬದೊಂದಿಗೆ ಅದ್ಭುತ ಸಮಯವನ್ನು ಸಹ ಆನಂದಿಸುವಿರಿ. ಸಂಗಾತಿಯಿಂದ ಕುಟುಂಬ ಸದಸ್ಯರೊಂದಿಗಿನ ಸಂಬಂಧವು ವಿಶೇಷವಾಗಿ ಉತ್ತಮವಾಗಿರುತ್ತದೆ. ಪ್ರಣಯ ಜೀವನದಲ್ಲೂ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಗಾತಿಗೆ ನೀಡಿದ ಭರವಸೆಗಳನ್ನು ಪೂರೈಸಲು ಸಮಯ ಒಳ್ಳೆಯದು.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:30 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಒಂದು ನಿರ್ದಿಷ್ಟ ಕಾರ್ಯದ ನೆರವೇರಿಕೆಯಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ದೀರ್ಘಕಾಲದವರೆಗೆ ನಡೆಯುತ್ತಿರುವ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಲಾಗುವುದು. ಕೆಲವು ಪ್ರಮುಖ ವ್ಯಕ್ತಿಗಳಿಂದ ಸಹಾಯವನ್ನು ಪಡೆಯಬಹುದು, ಅದು ಕೆಲಸವನ್ನು ಸುಗಮವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸವು ಇಂದು ಕೆಲವು ತೊಂದರೆಗಳಿಗೆ ಸಿಲುಕಿಸಬಹುದು. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹಣದ ಕೊರತೆಯಿಂದಾಗಿ ಯಾವುದೇ ಕೆಲಸವನ್ನು ನಿಲ್ಲಿಸಿದರೆ, ಅದನ್ನು ಪೂರ್ಣಗೊಳಿಸಲು ದಿನವು ಒಳ್ಳೆಯದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕುಟುಂಬ ಸದಸ್ಯರಲ್ಲಿ ಐಕ್ಯತೆ ಮತ್ತು ಶಾಂತಿ ಇರುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಸಮಯ ಅನುಕೂಲಕರವಾಗಿದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ

ಮೀನ ರಾಶಿ

ಮೀನ ರಾಶಿ

ಆರ್ಥಿಕವಾಗಿ ದಿನವು ಶುಭವಾಗಿದೆ. ಹಣದ ಹಠಾತ್ ಆಗಮನವು ನಿಮ್ಮ ದೊಡ್ಡ ಸಮಸ್ಯೆಯನ್ನು ಪರಿಹರಿಸಬಹುದು. ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಬಗ್ಗೆ ಆಪ್ತರನ್ನು ಸಂಪರ್ಕಿಸಿ ಅಥವಾ ನಿಮ್ಮ ದೃಷ್ಟಿಕೋನವನ್ನು ಸಂಗಾತಿಯ ಮುಂದೆ ನೇರವಾಗಿ ಪ್ರಸ್ತುತಪಡಿಸಿ. ಸರಳವಾದ ಮಾತು ಯಾವುದೇ ಸಮಸ್ಯೆಯನ್ನು ಪರಿಹರಿಸುತ್ತದೆ. ಕಚೇರಿಯಲ್ಲಿರುವ ಹಿರಿಯರು ನಿಮ್ಮ ಸೃಜನಶೀಲತೆಯನ್ನು ಮೆಚ್ಚುತ್ತಾರೆ ಅದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಉತ್ಸಾಹ ಮತ್ತು ಧೈರ್ಯದಿಂದ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ಪೋಷಕರು ನಿಮ್ಮನ್ನು ಬೆಂಬಲಿಸುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಮನಸ್ಸು ಶಾಂತ ಮತ್ತು ತೃಪ್ತಿಕರವಾಗಿರುತ್ತದೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಸಂಜೆ 4:00 ರಿಂದ 7:20 ರವರೆಗೆ

English summary

Daily Horoscope 23 Nov 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X
Desktop Bottom Promotion