For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ (23-01-2020)

|

ಜ್ಯೋತಿಷ್ಯಶಾಸ್ತ್ರದಲ್ಲಿ ಈ ದಿನ ಯಾವ ರಾಶಿಯ ಫಲ ಹೇಗಿರುತ್ತದೆ ಎಂದು ಹೆಳಲಾಗಿರುತ್ತದೆ. ಕನ್ನಡ ಬೋಲ್ಡ್‌ಸ್ಕೈ ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ರಾಶಿಫಲ ಹೇಗಿದೆ ಎಂದು ಹೇಳಿದೆ ನೋಡಿ.

Dina Bhavishya

ಸಂವತ್ಸರ: ವಿಕಾರಿನಾಮ
ಆಯನ: ಉತ್ತರಾಯನ
ಋತು: ಶಿಶಿರ
ಮಾಸ: ಪುಷ್ಯ
ಪಕ್ಷ: ಕೃಷ್ಣ
ತಿಥಿ: ತ್ರಯೋದಶಿ
ನಕ್ಷತ್ರ: ಪೂರ್ವ ಆಶಾಢ
ರಾಹುಕಾಲ: ಬೆಳಗ್ಗೆ 9 ಗಂಟೆಯಿಂದ 11.04ರವರೆಗೆ
ಗುಳಿಕಕಾಲ: ಬೆಳಿಗ್ಗೆ 6.50ರಿಂದ 8.14ರವರೆಗೆ
ಯಮಗಂಡಕಾಲ: ಮಧ್ಯಾಹ್ನ 1.53ರಿಂದ 3.18ರವರೆಗೆ
ದುರ್ಮುಹೂರ್ತ: ಬೆಳಗ್ಗೆ 6.50ರಿಂದ 7.35ರವರೆಗೆ ಹಾಗೂ 7.35ರಿಮದ 8.20ರವರೆಗೆ
ಸೂರ್ಯೋದಯ: ಬೆಳಿಗ್ಗೆ 6.50
ಸೂರ್ಯಾಸ್ತ: ಸಂಜೆ 6.07ಕ್ಕೆ

ಮೇಷ ರಾಶಿ

ಮೇಷ ರಾಶಿ

ಹಣಕಾಸಿನ ದೃಷ್ಟಿಯಲ್ಲಿ ನೋಡುವುದಾದರೆ ಈ ದಿನ ಶುಭಕರವಾಗಿದೆ, ನಿಮಗೆ ಈ ದಿನ ಧನ ಲಾಭವಾಗಲಿದೆ, ಆದರೆ ಯೋಚಿಸಿ ಖರ್ಚು ಮಾಡಿ. ಇಂದು ನೀವು ಹೂಡಿಕೆ ಮಾಡಬಹುದು. ವೈವಾಹಿಕ ಬದುಕಿನಲ್ಲಿ ಕೆಲವು ಸವಾಲುಗಳು ಎದುರಾಗುವುದರಿಂದ ಸ್ವಲ್ಪ ಒತ್ತಡಕ್ಕೆ ಒಳಗಾಗುವಿರಿ. ನಿಮ್ಮ ಸಂಗಾತಿ ಕೋಪದಿಂದ ವರ್ತಿಸಿದಾಗ ತಾಳ್ಮೆ ಕಳೆದುಕೊಳ್ಳಬೇಡಿ. ಚಿಕ್ಕ-ಪುಟ್ಟ ವಿಷಯಗಳು ದೊಡ್ಡದಾಗುವ ಸಾಧ್ಯತೆ ಇದೆ, ಆದ್ದರಿಂದ ಎಚ್ಚರಿಕೆಯಿಂದ ಮಾತನಾಡಿ. ಕೆಲಸದ ಜಾಗದಲ್ಲಿ ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಮೇಲಾಧಿಕಾರಿಯೊಂದಿಗೆ ಮಾತನಾಡಿ ಪರಿಹರಿಸಲು ಈ ದಿನ ಉತ್ತಮವಾಗಿದೆ. ಇನ್ನು ಪ್ರೇಮಿಗಳಿಗೆ ಈ ದಿನ ವಿಶೇಷವಾಗಿರುತ್ತದೆ. ಅವಾಹಿತರು ಈ ದಿನ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿ ಅವರೆಡೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಏರಳಿತ ಕಂಡು ಬರಬಹುದು, ಆದ್ದರಿಂದ ಆರೋಗ್ಯದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಕಡು ಕೆಂಪು

ಅದೃಷ್ಟದ ಸಂಖ್ಯೆ: 25

ಅದೃಷ್ಟದ ಸಮಯ: ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ

ವೃಷಭ ರಾಶಿ

ವೃಷಭ ರಾಶಿ

ಪ್ರೇಮಿಗಳಾಗಿದ್ದರೆ ಇಂದು ನಿಮ್ಮ ಪ್ರೇಮಿ ಜೊತೆಗೆ ಸಂತೋಷದಿಂದ ಕಳೆಯಿರಿ. ಇಬ್ಬರೂ ಸುತ್ತಾಡುತ್ತಾ ಖುಷಿ-ಖುಷಿಯಾಗಿರುವಿರಿ. ವಿವಾಹಿತರಾಗಿದ್ದರೆ ಕೆಲವು ಕಾರಣಗಳಿಂದ ಸಮಗಾತಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಿರುವುದಿಲ್ಲ. ಆದರೆ ಈ ಸಂಗಾತಿಯೊಂದಿಗೆ ಖುಷಿಯಾಗಿ ಸಮಯ ಕಳೆಯುವಿರಿ. ಇಂದು ಅವರ ಜೊತೆ ಒಂದು ಸಣ್ಣ ಟ್ರಿಪ್ ಹೋಗುವ ಸಾಧ್ಯತೆ ಇದೆ. ಇಂದು ನಿಮ್ಮ ಪೋಷಕರ ಸಹಕಾರದಿಂದ ಮನೆಯಲ್ಲಿನ ಕೆಲಸಗಳು ಸುಗಮವಾಗಿ ನಡೆಯುವುದು, ಇನ್ನು ಹಣಕಾಸಿನ ವಿಷಯದಲ್ಲೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೆಲಸದ ಜಾಗದಲ್ಲು ಪರಿಸ್ಥಿತಿ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಕಠಿಣ ಪರಿಶ್ರಮ ಗುರುತಿಸಿ ಪ್ರಶಂಸೆ ದೊರೆಯುವುದು. ಇನ್ನು ಉದ್ಯಮಿ, ವ್ಯಾಪಾರಸ್ಥರಿಗೆ ಈ ದಿನ ಸಾಮಾನ್ಯವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿದ್ದ ಕೆಲ ಚಿಂತೆ ದೂರವಾಗಿ ಮನಸ್ಸಿಗೆ ಖುಷಿ ದೊರೆಯುವುದು.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 39

ಅದೃಷ್ಟದ ಸಮಯ: ಸಂಜೆ 4.55ರಿಂದ ರಾತ್ರಿ 11ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಇವತ್ತು ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮೋಜು-ಮಸ್ತಿಯಲ್ಲಿ ತೊಡಗಿಕೊಳ್ಳುವಿರಿ. ಸ್ನೇಹಿತರು ಅಥವಾ ಕುಟುಂಬದವರ ಜೊತೆ ಖುಷಿ-ಖುಷಿಯಾಗಿ ಈ ದಿನ ಕಳೆಯುವಿರಿ. ಇನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ತುಂಬಾ ಸಮಯದ ಬಳಿಕ ನಿಮ್ಮ ಸ್ನೇಹಿತ/ಸ್ನೇಹಿತೆಯನ್ನು ಭೇಟಿಯಾಗುವಿರಿ. ಸಂಗಾತಿಯೊಂದಿಗೆ ಈ ದಿನ ಖುಷಿಯಾಗಿ ಕಳೆಯುವಿರಿ. ಹಣಕಾಸಿನ ವಿಷಯದಲ್ಲೂ ತಲೆ ಕೆಡಿಸಿಕೊಳ್ಳಬೇಕಾದ ಅಗ್ಯತವಿಲ್ಲ. ನಿಮ್ಮ ಬಜೆಟ್ ಲೆಕ್ಕಾಚಾರದಲ್ಲಿ ಹೋದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಯಾವುದೇ ಹೂಡಿಕೆಗೆ ಈ ದಿನ ಸೂಕ್ತವಲ್ಲ. ಕೆಲಸದ ಜಾಗದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗಿ ಎದುರಿಸಲು ಸ್ವಲ್ಪ ಕಷ್ಟವಾಗಬಹುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ, ಆದ್ದರಿಂದ ತಿನ್ನುವ ಆಹಾರದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಕೆನೆ ಬಣ್ಣ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಬೆಳಗ್ಗೆ 6.30ರಿಂದ ಸಂಜೆ 4 ಗಂಟೆಯವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ನಿಮ್ಮ ಸಾಮರ್ಥ್ಯ ಗಮನಿಸಿ ಉದ್ಯೋಗದಲ್ಲಿ ಬೆಳೆಯಲು ಮತ್ತಷ್ಟು ಅವಕಾಶ ದೊರೆಯುವುದು. ಹಿರಿಯರು ಕೆಲವೊಂದು ಮಹತ್ವದ ಕೆಲಸವನ್ನು ನಿಮಗೆ ನೀಡಬಹುದು. ಇನ್ನು ಮನೆಯೊಲಗಿನ ಕೆಲವೊಂದು ಆತಂತರಿಕ ಸಮಸ್ಯೆ ಬಗೆ ಹರಿದು, ಸಂಗಾತಿಯೊಂದಿಗೆ ಬಾಂಧವ್ಯ ವೃದ್ಧಿಯಾಗುವುದು. ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿಮ್ಮ ಸಂಗಾತಿ ಅಭಿಪ್ರಾಯ ಕೇಳಿ. ಇಂದು ನೀವು ಸ್ನೇಹಿತರು ಅಥವಾ ಬಂಧುಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಅವರೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶ ದೊರೆಯುತ್ತದೆ. ಇನ್ನು ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಶಾಪಿಂಗ್, ರೆಸ್ಟೋರೆಂಟ್ ಅಂತ ಸ್ವಲ್ಪ ಹಣ ಖರ್ಚು ಮಾಡುವಿರಿ. ಆರೋಗ್ಯ ಸ್ಥಿತಿ ಕುಡ ಉತ್ತಮವಾಗಿದೆ.

ಅದೃಷ್ಟದ ಬಣ್ಣ: ಹಳದಿ ಬಣ್ಣ

ಅದೃಷ್ಟದ ಸಂಖ್ಯೆ: 21

ಅದೃಷ್ಟದ ಸಮಯ: ಬೆಳಗ್ಗೆ 8.30ರಿಂದ ಸಂಜೆ7.40ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಈ ದಿನ ಹಣಕಾಸಿನ ಸಮಸ್ಯೆ ಎದುರಾಗುವುದರಿಂದ ಸ್ವಲ್ಪ ಒತ್ತಡಕ್ಕೆ ಒಳಗಾಗುವಿರಿ, ಈ ಕಾರಣಕ್ಕೆ ಒಡಹುಟ್ಟಿದವರ ಜೊತೆ ಭಿನ್ನಾಭಿಪ್ರಾಯ ಕೂಡ ಉಂಟಾಗಬಹುದು. ಆದರೆ ನಿಮ್ಮ ಅಭಿಪ್ರಾಯವನ್ನು ಅವರ ಮೇಲೆ ಹೇರಲು ಹೋಗಬೇಡಿ, ಹಾಗೆ ಮಾಡಿದರೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಇನ್ನು ಕೆಲಸದ ಬಗ್ಗೆ ಹೇಳುವುದಾದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ, ಆದರೆ ನಿರಾಸೆ ಆಗಬೇಡಿ, ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ, ಶೀಘ್ರದಲ್ಲಿಯೇ ಬಯಸಿದ ಫಲ ಸಿಗುವುದು. ಇನ್ನು ಪ್ರಣಯ ಜೀವನದಲ್ಲೂ ತಪ್ಪು ಗ್ರಹಿಕೆಯಿಂದಾಗಿ ಸಮಸ್ಯೆ ಬರಬಹುದು. ಆರೋಗ್ಯದಲ್ಲೂ ಕೂಡ ಸ್ವಲ್ಪ ಏರಳಿತ ಉಂಟಾಗುವುದು. ಮನಸಿನಲ್ಲಿ ಅಸಮದಾನ, ಚಡಪಡಿಕೆ ಉಂಟಾಗಬಹುದು.

ಅದೃಷ್ಟದ ಬಣ್ಣ: ಕಡು ಹಸಿರು

ಅದೃಷ್ಟದ ಸಂಖ್ಯೆ: 45

ಅದೃಷ್ಟದ ಸಮಯ: ಬೆಳಗ್ಗೆ 9 ಗಂಟೆಯಿಂದ ರಾತ್ರಿ 8.20ರ ತನಕ

ಕನ್ಯಾ ರಾಶಿ

ಕನ್ಯಾ ರಾಶಿ

ನಿಮ್ಮ ಕೆಲಸದ ವೈಖರಿ ನೋಡಿ ಖುಷಿ ಪಟ್ಟು ನಿಮ್ಮ ಮೇಲಾಧಿಕಾರಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ, ಅವರು ನಿಮಗೆ ವಿಶೇಷ ಜವಾಬ್ದಾರಿ ವಹಿಸಬಹುದು. ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಇನ್ನು ಹಣಕಾಸಿನ ಸ್ಥಿತಿಯೂ ಉತ್ತಮವಾಗಿದೆ. ಯಾವುದಾದರೂ ಹಣಕಾಸಿನ ಹೂಡಿಕೆ ಮಾಡಬಹುದು. ಇಂದು ಆಪ್ತರು ಅಥವಾ ಸಂಬಂಧಿಕರ ಸಹಾಯದಿಂದ ಆರ್ಥಿಕ ಲಾಭ ಪಡೆಯುವಿರಿ. ವೈವಾಹಿಕ ಜೀವನ ಉತ್ತಮ ಪಡಿಸಲು ಮಾಡುತ್ತಿದ್ದ ನಿಮ್ಮ ಪ್ರಯತ್ನಕ್ಕೆ ಇಂದು ಫಲ ಸಿಗುತ್ತದೆ, ಸಂಗಾತಿ ನಿಮ್ಮೊಂದಿಗೆ ಖುಷಿಯಾಗಿ ಇರುತ್ತಾರೆ. ಮಕ್ಕಳ ವಿಷಯದಲ್ಲಿ ಸ್ವಲ್ಪ ನಿರಾಸೆ ಉಂಟಾಗಬಹುದು, ಅನಗ್ಯತವಾಗಿ ಮಕ್ಕಳು ಕೇಳಿದ್ದನ್ನು ಕೊಡಿಸುವುದು ಅಥವಾ ಅವರ ಬೇಡಿಕೆ ಬಾಗುವುದು ಮಾಡಬೇಡಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಬೆಳಗ್ಗೆ 6.30ರಿಂದ ಮಧ್ಯಾಹ್ನ 3ರವರೆಗೆ

ತುಲಾ ರಾಶಿ

ತುಲಾ ರಾಶಿ

ನಿಮ್ಮ ನೌಕರಿ ದೃಷ್ಟಿಯಿಂದ ನೋಡುವುದಾರೆ ಈ ದಿನ ಉತ್ತಮವಾಗಿದೆ. ಇಂದು ನಿಮ್ಮ ಕೆಲಸ, ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು, ಇದರಿಂದ ನಿಮ್ಮ ಮೇಲಾಧಿಕಾರಿ ಖುಷಿಯಾಗುತ್ತಾರೆ. ಕೌಟಂಬಿಕ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು. ಕುಟುಂಬದ ಸದಸ್ಯರ ನಡುವೆ ಕೆಲವೊಂದು ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ, ಆದ್ದರಿಂದ ತಾಳ್ಮೆಯಿಂದ ವರ್ತಿಸಿ, ಅನಗ್ಯತವಾಗಿ ಯಾರಿಗೂ ಸಲಹೆ ನೀಡಲು ಹೋಗಬೇಡಿ. ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ, ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಆಗಿ ಕಳೆಯುವಿರಿ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಉಂಟಾಗುವುದಿಲ್ಲ, ನಿಮ್ಮ ಬಜೆಟ್ ಪ್ರಕಾರ ಖರ್ಚು ಮಾಡಿ. ಇನ್ನು ಪ್ರೇಮಿಗಳಿಗೆ ಈ ದಿನ ಚೆನ್ನಾಗಿರುತ್ತದೆ. ಆರೋಗ್ಯ ಸ್ಥಿತಿಯೂ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 30

ಅದೃಷ್ಟದ ಸಮಯ: ಬೆಳಗ್ಗೆ9.45ರಿಂದ ಸಂಜೆ 5 ಗಂಟೆಯವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ. ನೀವು ತುಂಬಾ ಸಮಯದಿಂದ ನಿರೀಕ್ಷಿಸುತ್ತಿದ್ದ ಆರ್ಥಿಕ ಲಾಭವನ್ನು ಇಂದು ಪಡೆಯುವ ಸಾಧ್ಯತೆ ಇದೆ. ಇನ್ನು ಬೇರೆ ಮೂಲದಿಂದಲೂ ಹಣ ಬರುವ ಸಾಧ್ಯತೆ ಇದೆ. ಕೆಲಸದ ಜಾಗದಲ್ಲೂ ಅಧಿಕ ಕೆಲಸದ ಒತ್ತಡ ಇರುವುದಿಲ್ಲ, ಇದರಿಂದಾಗಿ ಸ್ವಲ್ಪ ಆರಾಮವಾಗಿ ಕಾಲ ಕಳೆಯುವಿರಿ. ವ್ಯಾಪಾರಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ಕೌಟಂಬಿಕ ಜೀವನದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಇನ್ನು ಪ್ರೇಮಿಗಳು ಈ ದಿನ ಸ್ವಲ್ಪ ಜಾಗರೂಕರಾಗಿರಿ. ನಿಮ್ಮ ಸ್ನೇಹಿತರ ಜೊತೆ ಯಾವುದೇ ವಿವಾದಾತ್ಮಕ ಮಾತುಗಳನ್ನಾಡಬೇಡಿ. ಆರೋಗ್ಯದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಮಧ್ಯಾಹ್ನ 1.30 ರಿಂದ ಸಂಜೆ 5 ಗಂಟೆಯವರೆಗೆ

ಧನು ರಾಶಿ

ಧನು ರಾಶಿ

ಈ ದಿನ ನಿಮಗೆ ಶುಭವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಆರ್ಥಿಕ ಫಲ ಪಡೆಯುವಿರಿ. ನೀವು ವ್ಯಾಪಾರಸ್ಥರಾಗಿದ್ದರೆ ಆರ್ಥಿಕ ಲಾಭ ಉಂಟಾಗುವುದು. ಇನ್ನು ಈ ದಿನ ಹೆಚ್ಚಿನ ಕೆಲಸವಿಲ್ಲದ ಕಾರಣ ಸ್ವಲ್ಪ ಮೋಜಿ-ಮಸ್ತಿಯಲ್ಲಿ ಕಳೆಯಬಹುದು. ವೈವಾಹಿಕ ಬದುಕು ಉತ್ತಮವಾಗಿರುತ್ತದೆ. ಕೆಲಸ ಹೊರೆ ಅಧಿಕವಿದ್ದರೆ ಈ ದಿನ ಕಡಿಮೆಯಾಗುವುದು. ಮುಗಿಸಬೇಕಾಗಿದ್ದ ಕೆಲಸವಿಂದು ಪೂರ್ಣವಾಗುವುದು. ವೈವಾಹಿಕ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಎದುರಾಗಬಹುದು, ಕೆಲವೊಂದು ವಿಷಯಕ್ಕೆ ವಾದ-ಪ್ರತಿವಾದ ಉಂಟಾಗಬಹುದು. ನಿಮ್ಮ ನಡುವಳಿಕೆಯಲ್ಲಿ ಬದಲಾವಣೆ ತಂದರೆ ಮುಂದೆ ಆ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ಸಮಯ: ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2.55ರವರೆಗೆ

ಮಕರ ರಾಶಿ

ಮಕರ ರಾಶಿ

ನಿಮ್ಮ ನೌಕರಿಯಲ್ಲಿ ವರ್ಗಾವಣೆ ಅಥವಾ ಬದಲಾವಣೆಯ ಸಾಧ್ಯತೆ ಇದೆ. ನೀವು ಪ್ರಯತ್ನಿಸಿದರೆ ಕುಟುಂಬದಲ್ಲಿ ಜಗಳ ಉಂಟಾಗುವುದನ್ನು ತಪ್ಪಿಸಬಹುದು. ಇನ್ನು ಪ್ರೇಮಿಗಳಿಗೆ ಈ ದಿನ ಉತ್ತಮವಾಗಿದೆ. ತುಂಬಾ ದಿನದಿಂದ ಭೇಟಿಯಾಗದಿರುವ ಪ್ರೇಮಿಗಳು ಬೇಟಿಯಾಗುವ ಸಾಧ್ಯತೆ ಇದೆ. ಇನ್ನು ಮದುವೆಯಾದವರಿಗೆ ವೈವಾಹಿಕ ಬದುಕು ಉತ್ತಮಬವಾಗಿರಲಿದೆ. ನೀವು ಎದುರಿಸುತ್ತಿದ್ದ ಸಮಸ್ಯೆ ಪರಿಹರಿಸಲು ಆತ್ಮೀಯರು ನೆರವಾಗುತ್ತಾರೆ. ಆರ್ಥಿಕ ಸ್ಥಿತಿ ಸಹಜವಾಗಿರಲಿದೆ. ಅನಗ್ಯತ ಖರ್ಚು ತಪ್ಪಿಸಿ. ಸ್ನೇಹಿತರ ಜೊತೆ ಮಾತನಾಡುವಾಗ ಅನಗ್ಯತ ಮಾತುಗಳನ್ನಾಡಬೇಡಿ. ಇಂದು ನಿಮ್ಮ ಕಾರ್ಯಗಳು ಸುಗಮವಾಗಿ ನಡೆಯುವುದು.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಮಧ್ಯಾಹ್ನ 2.20ರಿಂದ ಸಂಜೆ 7 ಗಂಟೆಯವರೆಗೆ

ಕುಂಭ ರಾಶಿ

ಕುಂಭ ರಾಶಿ

ವ್ಯಾಪಾರಸ್ಥರಿಗೆ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಮಿಶ್ರಫಲ. ಹಣ ಸಂಪಾದನೆಯಲ್ಲಿ ಮೊದಲಿಗೆ ತೊಂದರೆ ಉಂಟಾದರೂ ನಂತರ ಲಾಭ ದೊರೆಯುವುದು. ಹಣಕಾಸಿನ ವಿಷಯದಲ್ಲಿ ನಿಮ್ಮ ಯೋಜನೆಗಳಂತೆಯೇ ನಡೆದುಕೊಳ್ಳಿ. ಹಣ ಹೂಡಿಕೆ ಈ ದಿನ ಒಳ್ಳೆಯದಲ್ಲ, ತಪ್ಪಾದ ನಿರ್ಧಾರ ತೆಗೆದುಕೊಂಡರೆ ಆರ್ಥಿಕ ನಷ್ಟ ಉಂಠಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಮಾತನಾಡುವಾಗ ಮಾತುಗಳಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ಜಗಳ ಉಂಟಾಗುವುದು. ಈ ದಿನ ವಿದ್ಯಾರ್ಥಿಗಳಿಗೆ ಶುಭವಾಗಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಹೆತ್ತವರ ಆಶೀರ್ವಾದ ಪಡೆಯುವಿರಿ, ನಿರ್ಗತಿಕರಿಗೆ ಸಹಾಯ ಮಾಡುವಿರಿ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಬೆಳಗ್ಗೆ 7.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿ ಈ ದಿನ ಅಷ್ಟಾಗಿ ಚೆನ್ನಾಗಿಲ್ಲ. ಹೆಚ್ಚಿನ ಹಣದ ಖರ್ಚು ಬರುವ ಸಾಧ್ಯತೆ ಇದೆ. ಬೇರೆಯವರ ಬಳಿ ಹಣಕಾಸಿನ ನೆರವು ಕೇಳಿದರೆ ಸಿಗುವ ಸಾಧ್ಯತೆ ಕಡಿಮೆ, ಇದರಿಂದ ನಿರಾಸೆಯಾಗುವಿರಿ. ಇನ್ನು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ, ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಿರಿ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಗಳು ದೊರೆಯುವ ಸಾಧ್ಯತೆ ಇದೆ. ಮನೆಯ ವಾತಾವರಣ ಕೂಡ ಉತ್ತಮವಾಗಿರುತ್ತದೆ. ಪ್ರೇಮಿಗಳಿಗೆ ಈ ದಿನ ಚೆನ್ನಾಗಿದೆ. ಮೀನರಾಶಿಯವರ ಆರೋಗ್ಯ ಉತ್ತಮವಾಗಿದ್ದು, ಈ ದಿನವನ್ನು ಆರಾಮವಾಗಿ ಕಳೆಯುವಿರಿ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 2

ಅದೃಷ್ಟದ ಸಮಯ: ಸಂಜೆ 4 ಗಂಮೆಯಿಂದ ರಾತ್ರಿ 10 ಗಂಟೆಯವರೆಗೆ

English summary

Daily Horoscope 23 Jan 2020 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, January 22, 2020, 17:27 [IST]
X
Desktop Bottom Promotion