Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಮಂಗಳವಾರದ ದಿನ ಭವಿಷ್ಯ (22-10-2019)
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.

ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

ಮೇಷ: 21 ಮಾರ್ಚ್ - 19 ಏಪ್ರಿಲ್
ನಿಮ್ಮ ಗುರಿಯತ್ತ ಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತೀರಿ. ನಿರ್ಲಕ್ಷ್ಯವು ನಿಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಕೆಲಸದ ಕಾರ್ಯಕ್ಷಮತೆ ಕಡಿಮೆಯಾದ ಕಾರಣ ನಿಮ್ಮ ಹಿರಿಯರು ನಿಮ್ಮೊಂದಿಗೆ ಸಿಟ್ಟಾಗಬಹುದು. ಹಣದ ನಿರೀಕ್ಷೆಯಿಂದ ದಿನವು ಉತ್ತಮವಾಗಿರುತ್ತದೆ. ಹೆಚ್ಚುವರಿ ಆದಾಯಕ್ಕಾಗಿ ಇಂದು ನೀವು ನಿಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬಹುದು. ಯಾವುದೇ ನಿರ್ಗತಿಕರು ಇಂದು ನಿಮ್ಮನ್ನು ಸಂಪರ್ಕಿಸಿದರೆ ನಿಸ್ವಾರ್ಥತೆಗೆಯಿಂದ ಅವರಿಗೆ ಸಹಾಯ ಮಾಡಿ. ನಿಮ್ಮ ಕೆಲಸ ಕಾರ್ಯಗಳು ಕೊಂಚ ನಿಧಾನವಾಗುವುದು. ನಿಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕು. ಕುಟುಂಬದ ಸದಸ್ಯರೊಂದಿಗೆ ನಡೆದ ಬಿಸಿ ಚರ್ಚೆಯ ಪರಿಣಾಮವಾಗಿ ಕುಟುಂಬ ಜೀವನವು ಉದ್ವಿಗ್ನವಾಗಬಹುದು.
ಅದೃಷ್ಟ ಬಣ್ಣ: ಆಕಾಶ ನೀಲಿ
ಅದೃಷ್ಟ ಸಂಖ್ಯೆ: 21
ಅದೃಷ್ಟ ಸಮಯ: ಮಧ್ಯಾಹ್ನ 12:00 - ಮಧ್ಯಾಹ್ನ 3:30

ವೃಷಭ: 20 ಏಪ್ರಿಲ್ - 20 ಮೇ
ದೀರ್ಘ ಸಮಯದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಯು ಇಂದು ಗುಣ ಮುಖವಾಗುವುದು. ಅದು ನಿಮಗೆ ನಿರಾಳತೆ ನೀಡುವುದು. ಇಂದು ನೀವು ತುಂಬಾ ಶಕ್ತಿಯುತ ಮತ್ತು ಸಕ್ರಿಯರಾಗಿರುತ್ತೀರಿ. ಅದು ನಿಮ್ಮ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇಂದು ವೇಗದಲ್ಲಿ ಕೆಲಸ ಮಾಡುತ್ತೀರಿ. ಅದರಿಂದಾಗಿ ನಿಮ್ಮ ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಉದ್ಯಮಿ ಗಳು ಅವರ ಕಠಿಣ ಪರಿಶ್ರಮದಿಂದ ಇಂದು ಉತ್ತಮ ಲಾಭ ಪಡೆಯಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಅಧಿಕ ಸಮಯ ಕಳೆಯಲು ಸಾಧ್ಯವಾಗದೆ ಇರಬಹುದು. ಆದರೆ ಇಬ್ಬರ ನಡುವೆ ಗಾಢವಾದ ಪ್ರೀತಿ, ವಿಶ್ವಾಸ ಹಾಗೂ ತಿಳುವಳಿಕೆ ಇರುತ್ತದೆ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 7
ಅದೃಷ್ಟ ಸಮಯ: ಬೆಳಿಗ್ಗೆ 11:00 - ಮಧ್ಯಾಹ್ನ 1:00

ಮಿಥುನ: 21 ಮೇ - 20 ಜೂನ್
ಹಣದ ವಿಷಯದಲ್ಲಿ ಇಂದು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ನೀವು ನಿರೀಕ್ಷಿಸುತ್ತಿದ್ದ ಲಾಭವು ಮಧ್ಯದಲ್ಲಿ ಸಿಲುಕಿಕೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ಧೈರ್ಯವನ್ನು ಕಳೆದುಕೊಳ್ಳದಂತೆ ಮತ್ತು ಪ್ರಯತ್ನವನ್ನು ಮುಂದುವರಿಸುವಂತೆ ಸೂಚಿಸಲಾಗುತ್ತದೆ. ವೈವಾಹಿಕ ಜೀವನವು ಸಂತೋಷದಾಯಕ ಮತ್ತು ಶಾಂತಿಯುತವಾಗಿರುತ್ತದೆ. ಸಂಬಂಧವು ಪ್ರೀತಿಯನ್ನು ಮೀರಿಸುತ್ತದೆ. ಪೋಷಕರಿಂದ ಆಶೀರ್ವಾದ ಮತ್ತು ಕಿರಿಯ ಸಹೋದರರಿಂದ ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ನಿಮ್ಮ ಪ್ರಣಯ ಜೀವನದಲ್ಲಿ ಸ್ವಲ್ಪ ಜಾಗರೂಕರಾಗಿರಿ. ನಿಮ್ಮ ತಮಾಷೆ ಸಂಗಾತಿಯ ಭಾವನೆಗಳನ್ನು ನೋಯಿಸಬಹುದು. ನಿಮ್ಮ ಮನಸ್ಸು ಇಂದು ಸ್ವಲ್ಪ ತೊಂದರೆಗೀಡಾಗುತ್ತದೆ. ಚಿಂತೆ ಮುಕ್ತವಾಗಿರಲು ಮತ್ತು ನಿರಾಳವಾಗಿರಲು ಧಾರ್ಮಿಕ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆಯಿರಿ.
ಅದೃಷ್ಟ ಬಣ್ಣ: ಆಳವಾದ ಕೆಂಪು
ಅದೃಷ್ಟ ಸಂಖ್ಯೆ: 6
ಅದೃಷ್ಟ ಸಮಯ: ಬೆಳಿಗ್ಗೆ 3:00 - ರಾತ್ರಿ 8:00

ಕರ್ಕ: 21 ಜೂನ್ - 22 ಜುಲೈ
ಕೆಲಸದ ಸ್ಥಳದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನಿಮ್ಮ ಧೈರ್ಯ, ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದಾಗಿ ನೀವು ಎಲ್ಲರ ಮೇಲೆ ಪ್ರಭಾವ ಬೀರುತ್ತೀರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಇತ್ತೀಚೆಗೆ ಹೂಡಿಕೆ ಮಾಡಿದ್ದರೆ ಪ್ರಯೋಜನವನ್ನು ಪಡೆಯಲು ಉತ್ತಮ ಅವಕಾಶವಿದೆ. ಇಂದು ನಿಮ್ಮ ಸಂಗಾತಿಯೊಂದಿಗೆ ನೀವು ಬಿಸಿ ಚರ್ಚೆಗೆ ಇಳಿಯಬಹುದು. ಹೋರಾಟವನ್ನು ಬದಿಗಿಟ್ಟು ಬುದ್ಧಿವಂತಿಕೆಯಿಂದ ವಿಷಯವನ್ನು ಬಗೆಹರಿಸಿ. ದಂಪತಿಗಳಿಗೆ ಇಂದು ಪ್ರಣಯದ ದಿನವಾಗುವುದು. ನಿಮ್ಮ ಪೋಷಕರಿಂದ ನೀವು ಮದುವೆಗೆ ಅನುಮೋದನೆಯನ್ನು ಪಡೆಯಬಹುದು.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 5
ಅದೃಷ್ಟ ಸಮಯ: ಸಂಜೆ 6:30 - 9: 456 ಕ್ಕೆ

ಸಿಂಹ: 23 ಜುಲೈ - 22 ಆಗಸ್ಟ್
ನಿಮ್ಮ ಸುಧಾರಿತ ಆರೋಗ್ಯದಿಂದಾಗಿ ಇಂದು ಉಲ್ಲಾಸವನ್ನು ಅನುಭವಿಸುವಿರಿ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ಮುಂದುವರಿಸಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಶೀಘ್ರದಲ್ಲೇ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕುಟುಂಬ ಜೀವನವು ಉತ್ತಮವಾಗಿ ಇರುತ್ತದೆ. ಹಿರಿಯರಿಂದ ನೀವು ಆಶೀರ್ವಾದ ಪಡೆಯುತ್ತೀರಿ. ಮತ್ತೊಂದೆಡೆ ಕಿರಿಯರು ಸಹ ನಿಮ್ಮ ಬಗ್ಗೆ ಗೌರವವನ್ನು ತೋರಿಸುತ್ತಾರೆ. ಖರ್ಚಿನಿಂದಾಗಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ನಿಮ್ಮ ಸಂಗಾತಿಯೊಂದಿಗೆ ಬಿಸಿ ಚರ್ಚೆಗೆ ಇಳಿಯಬಹುದು. ನಿಮ್ಮ ತಿಳುವಳಿಕೆ ಪರಿಸ್ಥಿತಿಯನ್ನು ನಿಭಾಯಿಸುತ್ತದೆ. ನಿಮ್ಮ ತಪ್ಪುಗಳನ್ನು ನೀವು ತಿದ್ದಿಕೊಳ್ಳುವುದರಿಂದ ಆರ್ಥಿಕ ಪರಿಸ್ಥಿತಿಯು ಸುಧಾರಣೆ ಕಾಣುತ್ತದೆ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 9
ಅದೃಷ್ಟ ಸಮಯ: ಸಂಜೆ 4:30 - ರಾತ್ರಿ 8:00

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್
ಇಂದು ನೀವು ಗೊಂದಲದ ಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮ ಮನಸ್ಸು ವಿಚಲಿತಗೊಳ್ಳುತ್ತದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ವಿಫಲರಾಗುವಿರಿ. ಆಪ್ತರೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳಿ. ಅವರು ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡುವರು. ಕೆಲಸದ ಸ್ಥಳದಲ್ಲಿ ಹಿರಿಯರ ಬೆಂಬಲದ ಕೊರತೆಯಿಂದಾಗಿ, ನೀವು ನಿರಾಶೆ ಅನುಭವಿಸಬಹುದು. ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ನಿಮ್ಮ ಉತ್ತಮ ಸಂಗತಿಯನ್ನು ಸಾಬೀತುಪಡಿಸಲು ಶ್ರಮಿಸಿ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಇಂದು ಪರಿಹರಿಸಲಾಗುವುದು. ಪ್ರೇಮಿಗಳಿಗೆ ಉತ್ತಮ ದಿನ. ನಿಮ್ಮ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 10
ಅದೃಷ್ಟ ಸಮಯ: ಸಂಜೆ 6:00 - ರಾತ್ರಿ 8:45

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್
ನಿಮ್ಮ ಅಲ್ಪ ಬುದ್ಧಿಯಿಂದಾಗಿ ಸಂಗಾತಿಯ ನಡುವೆ ಜಗಳ ಉಂಟಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಇಲ್ಲವಾದರೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವುದು. ನಿಮ್ಮ ಸಹೋದ್ಯೋಗಿಗಳೊಂದಿಗೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಮುಖ್ಯವಾದ ಕಾರ್ಯಗಳತ್ತ ಗಮನಹರಿಸಲು ಪ್ರಯತ್ನಿಸಿ. ನೀವು ಹಾಗೆ ಮಾಡದಿದ್ದರೆ ಹಿರಿಯರು ನಿಮ್ಮ ವಿರುದ್ಧ ಕೆಲವು ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆರ್ಥಿಕವಾಗಿ ನೀವು ಮಿಶ್ರ ಫಲವನ್ನು ಪಡೆಯುವಿರಿ. ನೀವು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಪ್ರಯಾಣಕ್ಕೆ ದಿನ ಒಳ್ಳೆಯದಲ್ಲ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 12
ಅದೃಷ್ಟ ಸಮಯ: ಮಧ್ಯಾಹ್ನ 2:00 - ಸಂಜೆ 7:30

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್
ಅಸಹಾಯಕರಿಗೆ ಇಂದು ಸಹಾಯ ಮಾಡಿ. ಅದು ನಿಮಗೆ ಒಳ್ಳೆಯದನ್ನು ಮಾಡುವುದು. ನಿಮ್ಮ ಪ್ರಣಯ ಜೀವನದಲ್ಲಿ ಇಂದು ನಿಮಗೆ ಬೇಸರವಾಗಿದ್ದರೆ, ನಿಮ್ಮ ಸಂಗಾತಿಗಾಗಿ ಗೆ ವಿಭಿನ್ನವಾದ ಅನುಭವ ನೀಡಲು ಪ್ರಯತ್ನಿಸಿ. ಆಗ ನಿಮ್ಮ ಜೀವನವು ಸಂತೋಷದಿಂದ ಪರಿವರ್ತನೆ ಕಾಣುವುದು. ವಿವಾಹಿತ ದಂಪತಿಗಳಿಗೆ ದಿನವು ವಿಶೇಷವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ತಂದೆಯ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಅದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಕೆಲಸದ ಸ್ಥಳದಲ್ಲಿ ನೀವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಿ. ನಿಮ್ಮ ಉನ್ನತ ಅಧಿಕಾರಿಗಳನ್ನು ಮೆಚ್ಚಿಸುವಿರಿ. ಆರ್ಥಿಕ ಪರಿಸ್ಥಿತಿಗಳು ಇಂದು ಸದೃಢವಾಗಿರುತ್ತದೆ. ನೀವು ಇಂದು ನಿಮ್ಮ ಸಂಬಂಧಿಕರೊಂದಿಗೆ ಸಂಜೆ ಕಳೆಯಬಹುದು.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 27
ಅದೃಷ್ಟ ಸಮಯ: ಸಂಜೆ 7:00 - ರಾತ್ರಿ 9:00

ಧನು: 22 ನವೆಂಬರ್ - 21 ಡಿಸೆಂಬರ್
ನಿಮ್ಮ ಜೀವನದಲ್ಲಿ ನೀವು ಪ್ರಗತಿ ಹೊಂದಲು ಬಯಸಿದರೆ ನಿರಾಸೆಯ ಭಾವನೆಗಳಿಂದ ಹೊರ ಬನ್ನಿ. ಅದು ನಿಮ್ಮನ್ನು ಇಷ್ಟು ಬೇಸರಕ್ಕೆ ಒಳಗಾಗುವಂತೆ ಮಾಡುವುದು. ಇಂದು ಹೆಚ್ಚು ಖರ್ಚು ಆಗುತ್ತದೆ . ಅದು ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಬಹುದು. ನೀವು ಸ್ವಲ್ಪ ಪ್ರಯತ್ನಿಸಿದರೆ ನಿಮ್ಮ ಆದಾಯವನ್ನು ಸುಧಾರಿಸಬಹುದು. ಕಚೇರಿಯಲ್ಲಿ ನಿರಂತರ ಕೆಲಸದಿಂದಾಗಿ ನೀವು ಇಂದು ಬೇಸರವನ್ನು ಅನುಭವಿಸಬಹುದು. ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡಲು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು. ಕುಟುಂಬ ಬಂಧವು ಸಿಹಿ ಮತ್ತು ಬೆಂಬಲವಾಗಿ ಉಳಿಯುತ್ತದೆ. ಸಂಗಾತಿಯು ನಿಮಗೆ ಉತ್ತಮ ಬೆಂಬಲವನ್ನು ನೀಡಬಹುದು.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 18
ಅದೃಷ್ಟ ಸಮಯ: ಬೆಳಿಗ್ಗೆ 9:45 - ಮಧ್ಯಾಹ್ನ 12:45

ಮಕರ: 22 ಡಿಸೆಂಬರ್ - 19 ಜನವರಿ
ಈ ದಿನವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹಣದ ವಿಷಯಗಳು ಇಂದು ಬಗೆಹರಿಯಲಿವೆ. ನಿಮ್ಮ ಆಪ್ತರಿಂದ ಬಲವಾದ ಆರ್ಥಿಕ ಸಹಾಯವನ್ನು ನಿರೀಕ್ಷಿಸಬಹುದು. ನಿಮ್ಮ ಎಲ್ಲಾ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ಶಾಂತಿಯುತ ದಿನವನ್ನು ಕಳೆಯಲು ಸಾಧ್ಯವಾಗುತ್ತದೆ. ಕುಟುಂಬ ಮತ್ತು ಸಂಬಂಧಿಕರೊಂದಿಗಿನ ಸಂಬಂಧವು ಸದೃಢವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಸಂದರ್ಭಗಳು ನಿಮ್ಮ ಪರವಾಗಿ ಇರುತ್ತವೆ. ನಿಮ್ಮ ಹಿರಿಯರ ವಿಶ್ವಾಸವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರಶಂಸೆ ದೊರೆಯುವುದು.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 18
ಅದೃಷ್ಟ ಸಮಯ: ಸಂಜೆ 5:20 - ರಾತ್ರಿ 8:40

ಕುಂಭ: 20 ಜನವರಿ - 18 ಫೆಬ್ರವರಿ
ಉದ್ಯಮಿಗಳಿಗೆ ಇಂದು ಶುಭ ಆರಂಭವಾಗುವುದು. ನಿಮ್ಮ ದೀರ್ಘಾವಧಿಯ ಕಾರ್ಯಗಳು ದೊಡ್ಡ ಆರ್ಥಿಕ ಲಾಭವನ್ನು ನೀಡುತ್ತವೆ. ಉದ್ಯೋಗಿಗಳಿಗೆ ದಿನವು ತಟಸ್ಥವಾಗಿರುತ್ತದೆ. ನಿಮ್ಮ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಹೆಚ್ಚು ಖರ್ಚು ಮಾಡಲು ಬಯಸಿದರೆ ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಇಲ್ಲವಾದರೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ಹೆತ್ತವರ ಆರೋಗ್ಯದಿಂದಾಗಿ ನೀವು ಇಂದು ಉದ್ವಿಗ್ನರಾಗಬಹುದು. ಕಾರಣವಿಲ್ಲದೆ ಮಾತನಾಡುವುದು ಸಂಗಾತಿಗೆ ಬೇಸರ ತರಬಹುದು. ಅದು ನಿಮ್ಮ ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ. ಪರಸ್ಪರ ತಿಳುವಳಿಕೆಯೊಂದಿಗೆ ಮಾತನಾಡುವುದು ಉತ್ತಮ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 25
ಅದೃಷ್ಟ ಸಮಯ: ಸಂಜೆ 4:00 - ಸಂಜೆ 7:45

ಮೀನ: 19 ಫೆಬ್ರವರಿ - 20 ಮಾರ್ಚ್
ಇಂದು ನೀವು ಮೋಜಿನ ಮನಃಸ್ಥಿತಿಯಲ್ಲಿರುತ್ತೀರಿ. ಕುಟುಂಬ ಜೀವನವು ಸಂತೋಷದಾಯಕ ಮತ್ತು ಶಾಂತಿಯುತವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ದಿನವನ್ನು ಚೆನ್ನಾಗಿ ಕಳೆಯುತ್ತೀರಿ. ನಿಮ್ಮ ತಂದೆ ಕೆಲವು ದಿನಗಳಿಂದ ನಿಮ್ಮ ಮೇಲೆ ಕೋಪಗೊಂಡಿದ್ದರೆ ಅದು ಈಗ ತಣ್ಣಗಾಗುವುದು. ಪ್ರಯಾಣದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ನೀವು ಏನನ್ನಾದರೂ ಯೋಜಿಸಬಹುದು. ಕೆಲವು ಸಂಬಂಧಿಕರು ನಿಮ್ಮ ಮನೆಗೆ ಬರಬಹುದು. ಅದು ಸಂತೋಷವನ್ನು ಹೆಚ್ಚಿಸುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತವೆ. ಇಂದು ನೀವು ದೊಡ್ಡ ಹೂಡಿಕೆ ಮಾಡಬಹುದು. ಸಹಭಾಗಿತ್ವದಲ್ಲಿ ವ್ಯಾಪಾರ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದು.
ಅದೃಷ್ಟ ಬಣ್ಣ: ಕಿತ್ತಳೆ
ಅದೃಷ್ಟ ಸಂಖ್ಯೆ: 17
ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ ಸಂಜೆ 5:15



Click it and Unblock the Notifications











