For Quick Alerts
ALLOW NOTIFICATIONS  
For Daily Alerts

ಸೋಮವಾರದ ದಿನ ಭವಿಷ್ಯ (21-10-2019)

|

ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ.

Rashi bhavishya

ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು. ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು. ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿಯಾಗುತ್ತೇವೆ. ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ: 21 ಮಾರ್ಚ್ - 19 ಏಪ್ರಿಲ್

ಮೇಷ: 21 ಮಾರ್ಚ್ - 19 ಏಪ್ರಿಲ್

ನಿಮ್ಮ ಎಲ್ಲಾ ದೀರ್ಘಕಾಲದ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತವೆ. ಇದು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಕೆಲಸದ ಮುಂಭಾಗದಿಂದ ದಿನವು ಹೆಚ್ಚು ಕಾರ್ಯನಿರತವಾಗಿರುವುದು. ವಿಶೇಷವಾಗಿ ವ್ಯಾಪಾರಸ್ಥರಿಗೆ ಇಂದು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ನಿಮ್ಮ ಕಠಿಣ ಶ್ರಮವು ಯಾವುದೇ ಕಾರಣಕ್ಕೂ ವ್ಯರ್ಥವಾಗದು. ಭವಿಷ್ಯದಲ್ಲಿ ಉತ್ತಮ ಫಲಿತಾಂಶವನ್ನು ನೀಡುವುದು. ಆರ್ಥಿಕ ಪರಿಸ್ಥಿತಿಗಳು ಇಂದು ಸಾಮಾನ್ಯವಾಗುತ್ತವೆ. ಸಾಲ ನೀಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಕೋಲಾಹಲ ಉಂಟಾಗುತ್ತದೆ. ಕೆಲವು ಗಂಭೀರ ವಿಷಯಗಳು ಇಂದು ಉದ್ಭವಿಸಬಹುದು. ಅದು ನಿಮ್ಮನ್ನು ಗೊಂದಲಕ್ಕೆ ದೂಡುತ್ತದೆ. ನೀವು ಸಂದಿಗ್ಧರಾಗಿದ್ದರೆ, ಇಂದು ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ ಕಹಿ ಉಂಟಾಗಬಹುದು. ಹಾಗಾಗಿ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು.

ಅದೃಷ್ಟ ಬಣ್ಣ: ತಿಳಿಬಣ್ಣ

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 7:00 ರ ವರೆಗೆ

ವೃಷಭ: 20 ಏಪ್ರಿಲ್ - 20 ಮೇ

ವೃಷಭ: 20 ಏಪ್ರಿಲ್ - 20 ಮೇ

ನಿಮ್ಮ ಹಿಂದಿನ ಯೋಜನೆಗಳನ್ನು ಪುನರಾರಂಭಿಸಲು ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಣದ ವಿಷಯಗಳಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ನೀವು ಬಹಳ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಹಣದ ದೃಷ್ಟಿಕೋನದಿಂದ ದಿನ ತಟಸ್ಥವಾಗಿರುತ್ತದೆ. ಹಣವನ್ನು ಪಡೆಯಲು ಬಲವಾದ ಸಾಧ್ಯತೆಯಿದೆ. ಆದರೆ ಹಳೆಯ ಬಿಲ್ಗಳನ್ನು ಪಾವತಿಸುವ ಒತ್ತಡ ಉಳಿಯುತ್ತದೆ. ವೃತ್ತಿ ಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮಗೆ ಸಹಾಯ ಮಾಡಬಹುದು. ಕೆಲವು ಕಷ್ಟಕರವಾದ ಕೆಲಸವನ್ನು ನಿಮಗೆ ವಹಿಸಿಕೊಡಬಹುದು. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಾಮರಸ್ಯ ದಿಂದ ಕೂಡಿರುತ್ತದೆ. ಇಂದು ನೀವು ಹೆಚ್ಚು ದಣಿವನ್ನು ಅನುಭವಿಸಬಹುದು. ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿಯನ್ನು ಹೊಂದಲು ಧ್ಯಾನ ಹಾಗೂ ಉತ್ತಮ ನಡಿಗೆ ಹೊಂದುವುದು ಉತ್ತಮ.

ಅದೃಷ್ಟ ಬಣ್ಣ: ಆಳವಾದ ನೀಲಿ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 6:00 ರಿಂದ ರಾತ್ರಿ 9:20 ರ ವರೆಗೆ

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ನಿಮಗೆ ವಹಿಸಿರುವ ಪ್ರಮುಖ ಕೆಲಸ ಕಾರ್ಯಗಳನ್ನು ನಿಮ್ಮದೇ ಆದ ರೀತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿ. ತಂದೆಯ ಆರೋಗ್ಯದ ಬಗ್ಗೆ ನೀವು ಉದ್ವೇಗಕ್ಕೆ ಒಳಗಾಗಬಹುದು. ಅವ ರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ದಿನ ಸಾಮಾನ್ಯವಾಗಲಿದೆ. ಹಣಕಾಸಿನ ದೃಷ್ಟಿಯಿಂದ ನೀವು ಸಾಕಷ್ಟು ಹಣವನ್ನು ಗಳಿಸಲು ವಿಶೇಷ ಅವಕಾಶವನ್ನು ಪಡೆಯಬಹುದು. ಪರಿಸ್ಥಿತಿಯ ಲಾಭ ಪಡೆಯಲು ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ಬಗೆಹರಿಯುವ ನಿರೀಕ್ಷೆಯಿದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 30

ಅದೃಷ್ಟ ಸಮಯ: ಸಂಜೆ 5:00 ರಿಂದ ರಾತ್ರಿ 8:30 ರ ವರೆಗೆ

ಕರ್ಕ: 21 ಜೂನ್ - 22 ಜುಲೈ

ಕರ್ಕ: 21 ಜೂನ್ - 22 ಜುಲೈ

ಇಂದು ಪ್ರಣಯದ ಜೀವನವು ಉದ್ವಿಗ್ನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಕೆಲವು ವ್ಯತ್ಯಾಸಗಳು ನಿಮ್ಮ ಸಂಬಂಧವನ್ನು ಕಹಿಯಾಗುವಂತೆ ಮಾಡುತ್ತದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಉಳಿಸಲು ನೀವು ಬಯಸಿದರೆ ಅವರೊಂದಿಗೆ ವಿಶ್ವಾಸದ ಸಂಬಂಧವನ್ನು ಬಲಪಡಿಸಿ. ಸಣ್ಣ ವಿಷಯಗಳ ಬಗ್ಗೆ ವಾದ ಮಾಡುವ ಅಭ್ಯಾಸವು ನಿಮ್ಮಿಬ್ಬರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ವಿವಾಹಿತ ದಂಪತಿಗಳು ಸಹ ಈ ದಿನ ಜಾಗರೂಕರಾಗಿರಬೇಕು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಅವರ ಭಾವನೆಗಳನ್ನು ಗೌರವಿಸಿ. ಹಣದ ವಿಷಯದಲ್ಲಿ ದಿನಗಳು ಉತ್ತಮವಾಗಿವೆ. ನೀವು ಹೆಚ್ಚು ಗಳಿಸುವ ಅವಕಾಶವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಅನುಕೂಲಕರವಾಗಿರುತ್ತದೆ. ಹಿರಿಯರ ಸಹಾಯದಿಂದ ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಬಹುದು.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಬೆಳಿಗ್ಗೆ 4:50 ರಿಂದ ಮಧ್ಯಾಹ್ನ 1:15 ರ ವರೆಗೆ

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ಹಣಕಾಸಿನ ವಿಷಯಗಳು ಇಂದು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಒಂದೆಡೆ ಅಂಟಿಕೊಂಡಿರುವ ಹಣವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ. ಕೆಲವು ವೈಯಕ್ತಿಕ ವಿಷಯಗಳಲ್ಲಿ ಸಂಬಂಧಿಕರ ಹಸ್ತಕ್ಷೇಪದಿಂದಾಗಿ ನೀವು ಕೆಲವು ಉದ್ವಿಗ್ನತೆಗಳನ್ನು ಅನುಭವಿಸಬೇಕಾಗುವುದು. ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ಹಿರಿಯರು ಇಂದು ನಿಮ್ಮ ಕೆಲಸದಲ್ಲಿ ತೃಪ್ತರಾಗುವುದಿಲ್ಲ. ವಿವಾಹಿತ ಜೀವನವು ಸಂತೋಷವಾಗಿ ಉಳಿಯುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 26

ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ರ ವರೆಗೆ

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಎಲ್ಲಾ ದಿಕ್ಕುಗಳಿಂದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸುವಿರಿ. ಆದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯೊಂದಿಗೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ನೀವು ಉದ್ಯಮಿಯಾಗಿದ್ದರೆ, ಕೆಟ್ಟ ನಡವಳಿಕೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ಹೆತ್ತವರ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀವು ಪಡೆಯುತ್ತೀರಿ. ಅದು ನಿಮಗೆ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ನೀವು ಕೆಲವು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಅಲ್ಲಿ ಎಲ್ಲಾ ಕಣ್ಣುಗಳು ನಿಮ್ಮ ಮೇಲೆ ಇರುವುದನ್ನು ನೀವು ಕಾಣಬಹುದು. ಕೆಲವು ವಿಶೇಷ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಆರೋಗ್ಯ ತುಂಬಾ ಚೆನ್ನಾಗಿರುತ್ತವೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಮಧ್ಯಾಹ್ನ 12:30 ರಿಂದ ಸಂಜೆ 6:00 ರ ವರೆಗೆ

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ಇಂದು ನಿಮ್ಮ ಆರೋಗ್ಯ ಮತ್ತು ಮನಃಸ್ಥಿತಿ ಎರಡೂ ಉತ್ತಮವಾಗಿರುತ್ತದೆ. ನಿಮ್ಮ ಹಳೆಯ ಸ್ನೇಹಿತನನ್ನು ಭೇಟಿ ಮಾಡುವ ಅವಕಾಶವು ಬಾಗಿಲು ತಟ್ಟಬಹುದು. ಮನೆಯಲ್ಲಿ ವಾತಾವರಣವು ಶಾಂತಿಯುತವಾಗಿರುತ್ತದೆ. ನಿಮ್ಮ ಸಂಬಂಧಿಕರಿಂದ ನೀವು ಪ್ರೀತಿ ಮತ್ತು ಸಹಕಾರವನ್ನು ಪಡೆಯುತ್ತೀರಿ. ಸಂಗಾತಿಯೊಂದಿ ಗೆ ಕೆಲವು ಕಹಿ ಅನುಭವವನ್ನು ಪಡೆದುಕೊಳ್ಳುವಿರಿ. ಅವರೊಂದಿಗೆ ಬಹಿರಂಗವಾಗಿ ಮಾತನಾಡಿ ಮತ್ತು ಎಲ್ಲಾ ತಪ್ಪುಗ್ರಹಿಕೆಯನ್ನು ಪರಿಹರಿಸಿಕೊಳ್ಳಿ. ದಂಪತಿಗಳಿಗೆ ಉತ್ತಮ ದಿನ. ಹಣದ ವಿಷಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಅದು ನಿಮಗೆ ದೊಡ್ಡ ಆರ್ಥಿಕ ಲಾಭವನ್ನು ನೀಡುತ್ತದೆ. ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:00 ರ ವರೆಗೆ

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ಇಂದು ನೀವು ಕುಟುಂಬದ ಕೆಲವು ಗಂಭೀರ ಸಮಸ್ಯೆಗಳನ್ನು ಪರಿಹರಿಸುತ್ತೀರಿ. ಮನೆಯ ವಾತಾವರಣವು ಶಾಂತವಾಗಿರುತ್ತದೆ. ಸಂಬಂಧಗಳಲ್ಲಿ ಶಾಂತಿ ಮತ್ತು ಸಾಮರಸ್ಯ ಇರುತ್ತದೆ. ನೀವು ವಿಶ್ರಾಂತಿ ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳು ಕಷ್ಟಕರವಾದ ಕಾರ್ಯಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ನಿಮ್ಮ ಹಿರಿಯರು ಕೆಲವು ಹೊಸ ಜವಾಬ್ದಾರಿಗಳನ್ನು ಸಹ ನೀಡಬಹುದು. ಹಣಕಾಸಿನ ವಿಷಯಗಳತ್ತ ಗಮನ ಹರಿಸಲು ಉತ್ತಮ ದಿನ. ನಿಮ್ಮ ವೈವಾಹಿಕ ಜೀವನವು ಪ್ರೀತಿ ಮತ್ತು ತಿಳುವಳಿಕೆಯಿಂದ ತುಂಬಿರುತ್ತದೆ. ನೀವು ಇಂದು ಹೊಸ ಸ್ಥಳಗಳನ್ನು ಸಹ ಪರಿಶೀಲಿಸಬಹುದು ಅಥವಾ ಕೆಲವು ತ್ವರಿತ ಪ್ರಯಾಣ ಯೋಜನೆಗಳನ್ನು ಮಾಡಬಹುದು. ಇಂದಿನ ಪ್ರಯಾಣವು ಫಲಪ್ರದವಾಗುವುದರಿಂದ ಸಂತೋಷವಾಗಿರಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 13

ಅದೃಷ್ಟ ಸಮಯ: ಮಧ್ಯಾಹ್ನ 1:00 ರಿಂದ 5:00 ರವರೆಗೆ

ಧನು: 22 ನವೆಂಬರ್ - 21 ಡಿಸೆಂಬರ್

ಧನು: 22 ನವೆಂಬರ್ - 21 ಡಿಸೆಂಬರ್

ಇಂದು, ನೀವು ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳಬಹುದು. ಪರಿಸ್ಥಿತಿ ಏನೇ ಇರಲಿ, ನಿಮ್ಮ ದಾರಿಯಲ್ಲಿ ಬರುವ ಪ್ರತಿಯೊಂದು ತೊಂದರೆಗಳನ್ನು ನೀವು ಬಿಟ್ಟುಕೊಡಬಾರದು. ನಿಮ್ಮ ಗುಪ್ತ ಪ್ರತಿಭೆಯನ್ನು ಇಂದು ತೋರಿಸಲು ನಿಮಗೆ ಅವಕಾಶ ಸಿಗಬಹುದು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ, ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆಯಬಹುದು. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಪ್ರಯತ್ನಿಸಿ. ಇದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಪೂರೈಸಲು ಸಾಧ್ಯವಾಗುತ್ತದೆ. ಹಣದ ವಿಷಯಗಳು ಅಸಮಾಧಾನಗೊಳ್ಳಬಹುದು. ನಿಮ್ಮ ಲಾಭವನ್ನು ತಡೆಹಿಡಿಯುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿಡಲು ಧ್ಯಾನ ಮಾಡಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ ಬೆಳಿಗ್ಗೆ 8:00 ರ ವರೆಗೆ

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ಇಂದು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ನಿಮ್ಮ ತಂದೆಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ನಿಮ್ಮ ಅಸಡ್ಡೆ ವರ್ತನೆ ಇತರರಿಂದ ಟೀಕೆಯನ್ನು ಪಡೆದುಕೊಳ್ಳುವುದು. ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನದ ಬಗ್ಗೆ ನೀವು ಗಮನ ಹರಿಸಬೇಕು. ನಿಮ್ಮ ಕುಟುಂಬ ಸದಸ್ಯರೊಂದಿಗೆ ಇರಲು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅವರೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ. ನಿಮ್ಮ ಸಂಗಾತಿಯ ಆರೋಗ್ಯವು ಉತ್ತಮವಾಗಿರುವುದಿಲ್ಲ. ನಿಮ್ಮ ದಿನವು ಕೆಲಸದ ಸ್ಥಳದಲ್ಲಿ ಹೆಚ್ಚು ಕಾರ್ಯನಿರತವಾಗಿರುತ್ತದೆ.

ಅದೃಷ್ಟ ಬಣ್ಣ: ಆಕಾಶ ನೀಲಿ

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಬೆಳಿಗ್ಗೆ 5:00 ರಿಂದ ಮಧ್ಯಾಹ್ನ 3:00 ರ ವರೆಗೆ

ಕುಂಭ: 20 ಜನವರಿ - 18 ಫೆಬ್ರವರಿ

ಕುಂಭ: 20 ಜನವರಿ - 18 ಫೆಬ್ರವರಿ

ಉದ್ಯೋಗ ಹುಡುಕಾಟದಲ್ಲಿ ಇರುವವರಿಗೆ ಇಂದು ಉತ್ತಮ ಫಲಿತಾಂಶ ದೊರೆಯುವುದು. ಈ ದಿನವು ನಿಮಗೆ ಒಳ್ಳೆಯದು. ನಿಮ್ಮ ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ. ಸಹೋದ್ಯೋಗಿಗಳು ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತಾರೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯುತ್ತದೆ. ಯಾವುದೇ ಕಾನೂನು ಸಮಸ್ಯೆಗಳಿದ್ದರೆ ಅದು ಸಹ ಪರಿಹರಿಸಲ್ಪಡುತ್ತದೆ. ನಿಮಗಾಗಿ ಹಣಕಾಸಿನ ಸಹಾಯವೂ ಬರುತ್ತದೆ. ನೀವು ಇಂದು ನಿಮ್ಮ ಹೆತ್ತವರ ಆಶೀರ್ವಾದವನ್ನು ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯವೂ ಸುಧಾರಿಸುತ್ತದೆ.

ಅದೃಷ್ಟ ಬಣ್ಣ: ಆಳವಾದ ಕೆಂಪು

ಅದೃಷ್ಟ ಸಂಖ್ಯೆ: 38

ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4: 00ರ ವರೆಗೆ

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ಇಂದು ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳಿರಬಹುದು. ಅದು ಮನೆಯ ವಾತಾವರಣದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ. ಜಗಳಗಳಿಂದ ದೂರವಿರಿ. ಏಕೆಂದರೆ ಅದು ನಿಮ್ಮ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಕ್ಷತ್ರಗಳು ಉತ್ತಮ ಫಲಿತಾಂಶ ನೀಡುತ್ತವೆ. ಕೆಲವು ಹಳೆಯ ಸಾಲಗಳು ಇಂದು ನಿಮ್ಮನ್ನು ಕಾಡಬಹುದು. ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಆದ್ಯತೆ ನೀಡಿ ಮತ್ತು ಒತ್ತಡವನ್ನು ದೂರವಿಡಿ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:55 ರ ವರೆಗೆ

English summary

Daily Horoscope 21 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, October 19, 2019, 21:54 [IST]
X
Desktop Bottom Promotion