For Quick Alerts
ALLOW NOTIFICATIONS  
For Daily Alerts

ಶುಕ್ರವಾರದ ದಿನ ಭವಿಷ್ಯ (20-09-2019)

|

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.

ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ವಿಶ್ರಾಂತಿಯ ದಿನ. ನಿಮ್ಮ ಮೇಲಾಧಿಕಾರಿಗಳು ಗೈರು ಹಾಜರಿ ಇರುವುದು, ಕೆಲಸವು ನಿಮಗೆ ಸ್ವಲ್ಪ ಕಡಿಮೆಯಾಗುವುದು. ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಪಡೆದುಕೊಳ್ಳುವರು. ದಂಪತಿಗಳ ನಡುವೆ ಬಾಂಧವ್ಯವೂ ಬಲಗೊಳ್ಳುತ್ತವೆ. ಪರಸ್ಪರ ಇಬ್ಬರೂ ವಿಶೇಷತೆಯನ್ನು ಅನುಭವಿಸುವರು. ಮಕ್ಕಳ ಆರೋಗ್ಯದಲ್ಲಿ ಕಳವಳ ಉಂಟಾಗುವುದು. ಹೂಡಿಕೆಯಲ್ಲಿ ಲಾಭವನ್ನು ಪಡೆದುಕೊಳ್ಳುವುದರಿಂದ ಇಂದು ನಿಮಗೆ ಹಣಕಾಸಿನ ವಿಷಯದಲ್ಲಿ ಉತ್ತಮವಾದ ದಿನ ಎನ್ನಬಹುದು. ಬಾಂಧವ್ಯದ ಮಹತ್ವ ಅರಿಯುವಿರಿ. ಭವಿಷ್ಯದಲ್ಲಿ ಕೆಲವು ಸಂಗತಿಗಳು ಕಷ್ಟಕರ ವಾಗಬಹುದು. ಇಂದು ನಿಮ್ಮ ಆರೋಗ್ಯ ಸಾಮಾನ್ಯ ಆಗಿರುತ್ತದೆ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ಸಮಯ: ಸಂಜೆ 5:30ರಿಂದ ರಾತ್ರಿ 9:30ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲಿ ಇರುವುದರಿಂದ ನೀವು ಹಣದ ವಿಷಯದಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ಉತ್ತಮ ಸುದ್ದಿ ಈ ದಿನವನ್ನು ಸಂತೋಷವಾಗಿ ಇರುತ್ತದೆ. ಬಲವಾದ ಆತ್ಮವಿಶ್ವಾಸ ಅನೇಕ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು. ನಿಮ್ಮ ಮೇಲಾಧಿಕಾರಿಗಳು ಎಲ್ಲರ ಸಮೂಹದಲ್ಲೂ ಶ್ಲಾಘಿಸುವರು. ಕುಟುಂಬದವರೊಂದಿಗೆ ನೀವು ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮಕ್ಕಳು ವಿಶೇಷ ಭಾವನೆಗಳನ್ನು ಹೊಂದಿರುತ್ತಾರೆ. ಪ್ರವಾಸದ ಹಂಬಲದಲ್ಲಿ ಇರುವುದರಿಂದ ಶೈಕ್ಷಣಿಕವಾಗಿ ಕೊಂಚ ಆರಾಮವನ್ನು ಪಡೆದುಕೊಳ್ಳುವರು. ನಿಮ್ಮ ಪ್ರೀತಿಯೂ ನಿಮಗೆ ಉತ್ತಮ ಅನುಭವ ನೀಡುವುದು.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಸಂಜೆ 7 ರಿಂದ ರಾತ್ರಿ 11:30ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್

ಮಿಥುನ ರಾಶಿ: 21 ಮೇ -20 ಜೂನ್

ಕಳೆದು ಕೊಂಡಿರುವುದರ ಬಗ್ಗೆ ಸರಿಯಾದ ಅರಿವು ಮೂಡುವುದು. ಅದು ನಿಮ್ಮ ಅಹಮ್ಮನ್ನು ದೂರ ಇಡಲು ಸಹಾಯ ಮಾಡುವುದು. ನಿಮ್ಮಿಂದ ಉಂಟಾದ ತಪ್ಪು ನಿರ್ಧಾರಕ್ಕೆ ವಿಷಾದವನ್ನು ವ್ಯಕ್ತಪಡಿಸುವಿರಿ. ಸಂಗಾತಿಯು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವುದರಿಂದ ಅವರನ್ನು ಸಮಾಧಾನ ಗೊಳಿಸಲು ಮುಂದಾಗುವಿರಿ. ನಿಮ್ಮ ರಹಸ್ಯದ ಸಂಗತಿಯನ್ನು ಯಾರೊಂದಿಗೂ ಚರ್ಚಿಸದಿರಿ. ನಿಮ್ಮನ್ನು ಅವರು ಹೆದರಿಸುವ ಸಾಧ್ಯತೆಗಳಿವೆ. ದ್ವೇಷದಿಂದ ಹೊರ ಬನ್ನಿ ಒತ್ತಡ ಮುಕ್ತವಾದ ಜೀವನ ನಿಮ್ಮದಾಗುವುದು. ವಿದ್ಯಾರ್ಥಿಗಳು ಬಿಡುವಿಲ್ಲದ ಜೀವನ ಅನುಭವಿಸುವರು. ವೃತ್ತಿ ಜೀವನದ ಆಯ್ಕೆಯು ನಿಮ್ಮನ್ನು ಕಾಡುವುದು.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 19

ಅದೃಷ್ಟದ ಸಮಯ: ಮುಂಜಾನೆ 6:30 ರಿಂದ ಮಧ್ಯಾಹ್ನ 11:00ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ವೈಕ್ತಿಕ ಜೀವನದಲ್ಲಿ ಇದ್ದ ದೊಡ್ಡ ಸಮಸ್ಯೆ ಇಂದು ನಿವಾರಣೆ ಹೊಂದುವುದು. ಅನೇಕ ಕಾರ್ಯಕ್ರಮಗಳ ಪಟ್ಟಿ ಹೊಂದಿರುವುದರಿಂದ ಇಂದು ನಿಗಮಗೆ ಬಿಡುವಿಲ್ಲದ ದಿನವಾಗುವುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ವಿವಾಹ ಸಂಬಂಧಿಸಿದ ವಿಷಯವನ್ನು ಮಾತನಾಡುವುದರಿಂದ ಅವಿವಾಹಿತರಿಗೆ ಸಂತೋಷ ಉಂಟಾಗುವುದು. ಹೆತ್ತವರೊಂದಿಗೆ ಇದ್ದ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಆರೋಗ್ಯದ ಸುಧಾರಣೆಯು ಇಂದು ನಿಮ್ಮನ್ನು ಸಂತೋಷವಾಗಿ ಇರಿಸುವುದು.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಮುಂಜಾನೆ 8:45 ರಿಂದ ಸಂಜೆ 4:00ರ ವರೆಗೆ

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅಹಿತಕರವಾದ ಸನ್ನಿವೇಶಗಳನ್ನು ಎದುರಿಸಬೇಕಿದೆ. ಹಾಗಾಗಿ ನೀವು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದನ್ನು ಮರೆಯದಿರಿ. ಹಣಕಾಸಿಗೆ ಸಂಬಂಧಿಸಿದಂತೆ ಇಂದು ನಿಮಗೆ ಸಾಮಾನ್ಯವಾದ ದಿನ. ಸಾಕಷ್ಟು ಏರಿಳಿತಗಳು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಪ್ರಿಯಕರರ ಜೊತೆ ವಾದ ಹಾಗೂ ಸಂಘರ್ಷ ಉಂಟಾಗುವುದು. ದೂರದ ಪ್ರಯಾಣ ಅಥವಾ ಲಾಂಗ್ ಡ್ರೈವ್‍ಗಳನ್ನು ಮಾಡದಿರಿ. ದಿನದ ಅಂತ್ಯದ ವೇಳೆಗೆ ನಿಮಗೆ ಸಾಕಷ್ಟು ದಣಿವು ಉಂಟಾಗುವುದು. ಉದ್ಯಮಿಗಳು ಉತ್ತಮ ಲಾಭವನ್ನು ಪಡೆದುಕೊಳ್ಳುವರು. ಸಂಬಂಧಿಕರು ಆಯೋಜಿಸುವ ಸಣ್ಣ ಒಗ್ಗೂಡಿಕೆಯು ನಿಮಗೆ ವಿಶೇಷ ಎನಿಸುವುದು. ಪೋಷಕರಿಗೆ ಕೆಲವು ಮುನ್ನೆಚ್ಚರಿಕೆಯ ಬಗ್ಗೆ ತಿಳಿಸಬೇಕು.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 14

ಅದೃಷ್ಟದ ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 6:30ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿ ಅಗತ್ಯ. ವಿಶೇಷವಾಗಿ ಹೃದಯ ರೋಗಿಗಳು ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕು. ವೃತ್ತಿಕ್ಷೇತ್ರದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ಕುಟುಂಬದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ವಾದ ಉಂಟಾಗುವುದು. ಆದರೆ ನಿಮ್ಮ ಸಂಗಾತಿ ನಿಮಗೆ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವರು. ಕೆಲಸದಿಂದ ಒತ್ತಡ ಉಂಟಾಗುವುದು. ದಿನದ ಅಂತ್ಯದ ವೇಳೆಗೆ ಎಲ್ಲಾ ವಿಷಯಗಳು ಸಾಮಾನ್ಯ ಸ್ಥಿತಿಗೆ ಬಂದಿರುತ್ತವೆ. ಸಂಬಂಧದಲ್ಲಿ ಇರುವವರಿಗೆ ಇಂದು ಸಾಮಾನ್ಯವಾದ ದಿನ. ಒತ್ತಡದಿಂದ ದೂರ ಇರಲು ಯೋಗ ಮತ್ತು ಧ್ಯಾನವನ್ನು ಮಾಡಿ.

ಅದೃಷ್ಟದ ಬಣ್ಣ: ಕೇಸರಿ

ಅದೃಷ್ಟದ ಸಂಖ್ಯೆ: 33

ಅದೃಷ್ಟದ ಸಮಯ: ಬೆಳಿಗ್ಗೆ 5:30 ರಿಂದ ರಾತ್ರಿ10:00ರ ವರೆಗೆ

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮ್ಮ ಮುಖ್ಯಸ್ತರು ಸಹ ನಿಮ್ಮನ್ನು ಬೆಂಬಲಿಸುವರು. ಹೊಸ ಕಚೇರಿಯಲ್ಲಿ ನೀವು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುವುದು. ಅತಿಯಾಗಿ ಯೋಚಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವುದು. ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಉತ್ತಮ ದಿನವಾಗಿರುತ್ತದೆ. ಆಪ್ತರೊಂದಿಗೆ ಕಳೆಯುವ ಸಮಯವು ನಿಮಗೆ ಹೆಚ್ಚಿನ ಸಂತೋಷ ಹಾಗೂ ನೆಮ್ಮದಿಯನ್ನು ನೀಡುವುದು. ನಿಮ್ಮ ಪ್ರೇಮಿಯು ತಪ್ಪಿಗಾಗಿ ಕ್ಷಮೆಯಾಚಿಸುತ್ತಾರೆ.

ಅದೃಷ್ಟದ ಬಣ್ಣ: ಕ್ರೀಮ್

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ರಾತ್ರಿ 10:30 ರಿಂದ ಸಂಜೆ 5:20ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ನಿಮ್ಮ ಮಗುವಿನ ಮೊಂಡುತನದ ಸ್ವಭಾವ ನಿಮಗೆ ಕಿರಿಕಿರಿಯನ್ನು ಉಂಟುಮಾಡುವುದು. ವಿಷಯವನ್ನು ಸಾಮಾನ್ಯವಾಗಿಸಲು ಸಾಕಷ್ಟು ಶ್ರಮವನ್ನು ವಹಿಸಬೇಕಾಗುವುದು. ನಿಮ್ಮ ಸಂಗಾತಿಯಿಂದ ಪ್ರತಿಯೊಂದು ವಿಚಾರಕ್ಕೂ ಸೂಕ್ತ ಸಲಹೆ ಹಾಗೂ ಬೆಂಬಲ ದೊರೆಯುವುದು. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಇಂದು ಪ್ರತಿ ಹಂತದಲ್ಲೂ ಸಮಸ್ಯೆಯನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಕೆಲಸದ ಬದಲಾವಣೆಯ ಚಿಂತೆ ನಿಮ್ಮ ಮನಸ್ಸನ್ನು ಕಾಡುತ್ತಲಿರುತ್ತದೆ. ಪ್ರೇಮಿಯೊಂದಿಗೆ ದೂರ ಪ್ರಯಾಣವು ಹೆಚ್ಚಿನ ಸಂತೋಷವನ್ನು ತಂದುಕೊಡುವುದು. ಸಾಧ್ಯವಾದರೆ ನಿರ್ಗತಿಕರಿಗೆ ಆಹಾರ ನೀಡಿ.

ಅದೃಷ್ಟದ ಬಣ್ಣ: ತುಕ್ಕು

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 6:30ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಇಂದು ಒಟ್ಟಾರೆಯಾಗಿ ಲಾಭ ಹಾಗೂ ಸಂತೋಷವನ್ನು ಪಡೆದುಕೊಳ್ಳುವ ದಿನವಾಗಿರುತ್ತದೆ. ಹಣಕಾಸಿನ ವಿಷಯದಲ್ಲೂ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಗುರಿಗಳು ಸನ್ನಿಹಿತ ವಾಗುವುದರಿಂದ ದಿನದ ಕೆಲಸ ಕಾರ್ಯಗಳು ನಿರಂತರವಾಗಿ ಸಾಗುವುದು. ಮಕ್ಕಳ ಸಾಧನೆ ಹಾಗೂ ಕೆಲಸವನ್ನು ಕಂಡು ಪೋಷಕರು ತುಂಬಾ ಸಂತೋಷವನ್ನು ವ್ಯಕ್ತಪಡಿಸುವರು. ಮಕ್ಕಳು ಉತ್ತಮ ಶ್ರೇಣಿಯನ್ನು ಪಡೆದುಕೊಳ್ಳುವುದರ ಮೂಲಕ ಯಶಸ್ಸನ್ನು ಕಂಡುಕೊಳ್ಳುವರು. ವಿವಾಹಿತ ದಂಪತಿಗಳು ಕುಟುಂಬದ ಬದ್ಧತೆಯಲ್ಲಿ ನಿರತರಾಗಿರುತ್ತಾರೆ. ಆಪ್ತ ಸ್ನೇಹಿತನಿಂದ ಸಂಜೆ ಆಶ್ಚರ್ಯಕರ ಸಂಗತಿ ಉಂಟಾಗುವುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯಿರಿ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ಸಮಯ: ಮುಂಜಾನೆ 10:30 ರಿಂದ ಮಧ್ಯಾಹ್ನ 12:00ರ ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ವಿದ್ಯಾರ್ಥಿಗಳಿಗೆ ಇಂದು ಅತ್ಯುತ್ತಮವಾದ ದಿನ. ಅವರು ನಿರೀಕ್ಷಿಸಿದಂತೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವರು. ಉನ್ನತ ವ್ಯಾಸಂಗಕ್ಕೆ ವಿದೇಶ ಪ್ರಯಾಣ ಮಾಡಲು ಉತ್ತಮ ಸಮಯ. ಆಪ್ತ ಸಂಬಂಧಿ ಅಥವಾ ಸ್ನೇಹಿತರಿಂದ ಉದ್ಯೋಗದ ವಿಷಯದಲ್ಲಿ ಸಹಾಯವನ್ನು ಪಡೆದುಕೊಳ್ಳಬಹುದು. ಸಹೋದ್ಯೋಗಿಗಳು ನಿಮ್ಮ ಮಾರ್ಗದರ್ಶನದ ಮೂಲಕ ಕೆಲಸ ಮುಂದುವರಿಸುವರು. ವಿವಾಹಿತ ದಂಪತಿಗಳಿಗೆ ಇಂದು ಬಿಡುವಿಲ್ಲದ ದಿನವಾಗುವುದು. ಕುಟುಂಬದ ಜವಾಬ್ದಾರಿಗಳು ಅವರನ್ನು ಕಾರ್ಯನಿರತರನ್ನಾಗಿ ಮಾಡುವುದು. ಸರ್ಕಾರಿ ವಲಯದಲ್ಲಿ ಇರುವವರಿಗೆ ಸುಗಮವಾದ ದಿನ. ಹುರಿದ ಹಾಗೂ ಕುರುಕಲು ತಿಂಡಿಯಿಂದ ದೂರವಿರಿ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 24

ಅದೃಷ್ಟದ ಸಮಯ: ಮಧ್ಯಾಹ್ನ 12:15 ರಿಂದ ಸಂಜೆ 7:30ರ ವರೆಗೆ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ನಿಮ್ಮ ಸಕಾರಾತ್ಮಕ ಮನೋಭಾವವು ಎಲ್ಲಾ ವಿಷಯಗಳನ್ನೂ ಸುಲಭ ಹಾಗೂ ಅನುಕೂಲವನ್ನು ತಂದುಕೊಡುವಂತೆ ಮಾಡುವುದು. ದಿನದ ಅಂತ್ಯದಲ್ಲಿ ಸಾಕಷ್ಟು ದಣಿವನ್ನು ಅನುಭವಿಸುವಿರಿ. ಆದರೆ ತೃಪ್ತಿಯ ಭಾವನೆ ನಿಮ್ಮನ್ನು ಸಂತೋಷಗೊಳಿಸುವುದು. ಕುಟುಂಬದ ವಿಷಯದಲ್ಲಿ ನಿಮಗೆ ಸಂತೋಷವಾದ ದಿನವಾಗಿರುತ್ತದೆ. ನಿಮ್ಮ ಮಕ್ಕಳು ದುಬಾರಿ ವಸ್ತುಗಳ ಬಗ್ಗೆ ಬೇಡಿಕೆ ಇಡಬಹುದು. ಪ್ರಿಯಕರರೊಂದಿಗೆ ಗಂಭೀರ ವಿಷಯಗಳ ಬಗ್ಗೆ ಚರ್ಚೆ ಕೈಗೊಳ್ಳುವಿರಿ. ಒಡ ಹುಟ್ಟಿದವರು ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಬೆಂಬಲಿಸುತ್ತಾರೆ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ಸಮಯ: ಮುಂಜಾನೆ 9:15ರಿಂದ ಮಧ್ಯಾಹ್ನ 3:00ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ನಿಮ್ಮ ಕೆಲಸದ ಒತ್ತಡವು ನಿಮಗೆ ಗೊಂದಲವನ್ನು ಉಂಟುಮಾಡುತ್ತದೆ. ಸಣ್ಣ ವಿಷಯಗಳಿಗೂ ನಿಮಗೆ ಕಿರಿಕಿರಿ ಉಂಟಾಗಬಹುದು. ನಿಮ್ಮ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ ಫಲಿತಾಂಶದಲ್ಲಿ ಬೇಸರ ಉಂಟಾಗಬಹುದು. ಮಕ್ಕಳಿಂದ ಸ್ವಲ್ಪ ಸಮಯ ದೂರ ಉಳಿದರೆ ಮಕ್ಕಳು ನಿಮ್ಮ ಅಗತ್ಯವನ್ನು ಅರಿಯುತ್ತಾರೆ. ಷೇರು ಹಾಗೂ ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಇರುವವರಿಗೆ ಇಂದು ಲಾಭದಾಯಕವಾದ ದಿನ. ನವವಿವಾಹಿತರು ವಿದೇಶ ಪ್ರವಾಸ ಕೈಗೊಳ್ಳಬಹುದು. ಕುರುಡು ನಂಬಿಕೆಯ ಅಭ್ಯಾಸವು ನಿಮ್ಮಲ್ಲಿ ನಿರಾಸೆಯ ಭಾವನೆ ಮೂಡಿಸುವುದು. ಅವಸರದಲ್ಲಿ ನಿರ್ಧಾರವನ್ನು ಕೈಗೊಳ್ಳದಿರಿ. ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 15

ಅದೃಷ್ಟದ ಸಮಯ: ರಾತ್ರಿ 9:30 ರಿಂದ 12:00ರ ವರೆಗೆ

English summary

Daily Horoscope 20 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
X