ಬುಧವಾರದ ದಿನ ಭವಿಷ್ಯ (18-09-2019)

ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು.

rashi bhavishya

ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ನೀವು ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಒಪ್ಪದ ಕಾರಣ ವಿಷಯಗಳನ್ನು ಭಿನ್ನವಾಗಿ ಕಾಣಬೇಕಾಗುವುದು. ಸಣ್ಣ ವಿಷಯಗಳು ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗುವುದು. ಇವೆಲ್ಲವನ್ನು ತಪ್ಪಿಸಲು ನೀವು ನಕಾರಾತ್ಮಕ ಭಾವನೆಯಲ್ಲಿ ಮುಳುಗಬೇಡಿ. ವೃತ್ತಿ ಕ್ಷೇತ್ರದಲ್ಲಿ ತೀವ್ರವಾದ ಸವಾಲನ್ನು ಎದುರಿಸಬೇಕಾಗುವುದು. ನಿಮ್ಮ ತಪ್ಪುಗಳಿಗೆ ಪಶ್ಚಾತಾಪ ಪಡುವ ಬದಲು ಜಾಗರೂಕರಾಗಿರಿ. ನಿಮ್ಮ ಬೇಜವಾಬ್ದಾರಿ ವರ್ತನೆಯು ಕಳವಳವನ್ನು ಹುಟ್ಟಿಸುವುದು. ಕುಟುಂಬದಲ್ಲಿ ತಪ್ಪು ಗ್ರಹಿಕೆ ಉಂಟಾಗುವ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ನಂಬರ್: 17

ಅದೃಷ್ಟದ ಸಮಯ: ಮುಂಜಾನೆ 9:45 ರಿಂದ ಸಂಜೆ 5:30ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ಕುಟುಂಬದ ವಿಚಾರದಲ್ಲಿ ಇಂದು ನಿಮಗೆ ಸುಗಮವಾದ ದಿನ. ನವ ವಿವಾಹಿತರು ಇಂದು ಅತ್ಯುತ್ತಮ ದಿನವನ್ನಾಗಿ ಕಳೆಯುವರು. ಪ್ರೀತಿ ಪಾತ್ರರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳುವಿರಿ. ಹಿಂದೆ ನಡೆದ ಕಹಿ ಘಟನೆಯ ಬಗ್ಗೆ ನೀವು ದೂರ ಸರಿದುಕೊಳ್ಳುವಿರಿ. ಹಣಕಾಸಿನ ವಿಷಯದಲ್ಲಿ ಇಂದು ಪ್ರಯೋಜನಕಾರಿ ಫಲಿತಾಂಶವನ್ನು ಪಡೆಯುವಿರಿ. ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ನಷ್ಟವನ್ನು ಅನುಭವಿಸಬೇಕಾಗುವುದು. ನಿಮ್ಮ ಶ್ರಮದಾಯಕ ಪರಿಶ್ರಮವು ಪ್ರಕಾಶಮಾನ ಫಲಿತಾಂಶವನ್ನು ಪಡೆದುಕೊಳ್ಳುವುದು.ಕೆಲಸದ ಮೇಲೆ ವಿಷಯವನ್ನು ಕೇಂದ್ರೀಕರಿಸಿ. ಕೆಲಸ ಮಾಡಲು ನಿಮಗೆ ಸಂತೋಷವಾಗುವುದು. ಹೂಡಿಕೆ ಮಾಡಲು ಇದು ಸೂಕ್ತವಾದ ಸಮಯ. ವ್ಯವಹಾರಸ್ತರಿಗೆ ಉತ್ತಮ ಲಾಭ ದೊರೆಯುವುದು. ನಿಮ್ಮ ಗುರಿ ಸಾಧನೆಯಲ್ಲಿ ಯಶಸ್ಸು ಪಡೆದುಕೊಳ್ಳುವಿರಿ. ಇಂದು ನಿಮಗೆ ಆರೋಗ್ಯಕರವಾದ ದಿನ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ನಂಬರ್: 28

ಅದೃಷ್ಟದ ಸಮಯ: ಮಧ್ಯಾಹ್ನ 1:15 ರಿಂದ ಸಂಜೆ 7:20ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್

ಮಿಥುನ ರಾಶಿ: 21 ಮೇ -20 ಜೂನ್

ಬಹಳ ದಿನದ ನಂತರ ನಿಮ್ಮ ಒಡ ಹುಟ್ಟಿದವರು ನಿಮ್ಮ ಬಳಿ ಬರುವರು. ಅದು ನಿಮಗೆ ಅದ್ಭುತ ದಿನವನ್ನಾಗಿ ಮಾಡುವುದು. ಮಕ್ಕಳಿಗೆ ಇಂದು ಒತ್ತಡವನ್ನು ಉಂಟುಮಾಡುವ ದಿನ. ಕೆಲವು ಅನಿಶ್ಚಿತ ಕೆಲಸದಿಂದ ನಿಮ್ಮ ಯೋಜನೆಯನ್ನು ಮುಂದೂಡಬೇಕಾಗುವುದು. ಸಂಗಾತಿಯೊಂದಿಗೆ ಪ್ರಣಯದ ಸಂಜೆಯನ್ನು ಕಳೆಯುವಿರಿ. ಇಂದು ನಿಮಗೆ ಒತ್ತಡ ರಹಿತವಾದ ದಿನ ಎನ್ನಬಹುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯರ ಮಾತನ್ನು ಕೇಳಿ. ಹೊಟ್ಟೆಯ ಕೆಳ ಭಾಗದ ಸಮಸ್ಯೆಯಿಂದ ಬಳಲುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಅದೃಷ್ಟದ ಬಣ್ಣ: ಆಳವಾದ ನೀಲಿ.

ಅದೃಷ್ಟದ ನಂಬರ್: 33

ಅದೃಷ್ಟದ ಸಮಯ: ಮುಂಜಾನೆ 6:05 ರಿಂದ ರಾತ್ರಿ 1:20ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ವ್ಯವಹಾರದ ವಿಷಯದಲ್ಲಿ ಇಂದು ನಿಮಗೆ ಕಠಿಣವಾದ ದಿನ. ಏಕೆಂದರೆ ನೀವು ಅಂದುಕೊಂಡ ಯೋಜನೆಯು ಕರ್ಯಗತವಾಗದೆ ಇರಬಹುದು. ಇದರಿಂದ ಒಂದಿಷ್ಟು ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಗಳು ಇವೆ. ನಿಮ್ಮ ಬಗ್ಗೆ ಕಾಳಜಿ ಇಲ್ಲದವರ ಬಗ್ಗೆ ಚಿಂತಿಸದಿರಿ. ಮುಂಜಾನೆ ಒಳ್ಳೆಯ ಸುದ್ದಿಯನ್ನು ಕೇಳುವ ಸಧ್ಯತೆಗಳಿವೆ. ಪೋಷಕರೊಂದಿಗೆ ಪ್ರಯಾಣ ಕೈಗೊಳ್ಳುವಿರಿ. ಇದರಿಂದ ವಿಭಿನ್ನ ಅನುಭವವನ್ನು ಸಹ ಪಡೆಯುವಿರಿ. ಇಷ್ಟು ದಿನ ನಿರ್ಬಂಧಿತವಾಗಿದ್ದ ಹಣ ನಿಮ್ಮ ಕೈ ಸೇರಲಿದೆ. ಬುದ್ಧಿವಂತಿಕೆಯಿಂದ ಖರ್ಚುಮಾಡಿ. ನಿಮ್ಮ ಪಾಲುದಾರರ ಸಲಹೆಯು ಉತ್ತಮವಾಗಿ ಕಾರ್ಯ ನಿರ್ವಹಿಸುವುದು. ಸಂಗೀತಗಾರರಿಗೆ ಇಂದು ಉತ್ತಮವಾದ ದಿನ.

ಅದೃಷ್ಟದ ಬಣ್ಣ: ತಿಳಿ ಹಸಿರು

ಅದೃಷ್ಟದ ಸಂಖ್ಯೆ: 2

ಅದೃಷ್ಟದ ಸಮಯ: ಮುಂಜಾನೆ 8:30 ರಿಂದ ಮಧ್ಯಾಹ್ನ 2:40ರ ವರೆಗೆ

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಇಂದು ನಿಮಗೆ ಅಹ್ಲಾದಕರವಾದ ದಿನ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಾರಥ್ಯದಿಂದ ನಿಮ್ಮ ತಂಡವನ್ನು ಮೇಲ್ವಿಚಾರಣೆ ನಡೆಸುವಿರಿ. ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ಉತ್ತಮವಾದ ದಿನವಾಗುವುದು. ನಿಮ್ಮ ಬುದ್ಧಿಯಿಂದ ನೀವು ಎಲ್ಲಾ ವಿಷಯವನ್ನು ನಿಭಾಯಿಸುವಿರಿ. ಹಣಕಾಸಿನ ವಿಷಯದಲ್ಲಿ ಮಿಶ್ರ ಫಲವನ್ನು ಅನುಭವಿಸುವಿರಿ. ಸಣ್ಣ ತಪ್ಪು ತಿಳುವಳಿಕೆಯನ್ನು ತಂದುಕೊಡುವುದು. ಮಕ್ಕಳ ಶೈಕ್ಷಣಿಕ ವಿಷಯವು ಕೊಂಚ ಕಳವಳವನ್ನುಂಟುಮಾಡುವುದು. ಅಧಿಕ ಚಿಂತನೆಯ ಅಗತ್ಯವಿಲ್ಲ. ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಪಡೆಯುವಿರಿ. ಆರೋಗ್ಯ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 15

ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ರಾತ್ರಿ 9:15ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ವೃತ್ತಿ ಕ್ಷೇತ್ರದಲ್ಲಿ ಒತ್ತಡದಿಂದ ಕೆಲಸ ನಿರ್ವಹಿಸುವಿರಿ. ಕೆಲಸದಲ್ಲಿ ಅತಿಯಾದ ಹಸ್ತಕ್ಷೇಪವು ಹೊಸ ತಿರುವನ್ನು ನೀಡುವುದು. ಉದ್ಯಮಿಗಳಿಗೆ ಇಂದು ಬಿಡುವಿಲ್ಲದ ದಿನವಾಗುವುದು. ಹಣದ ಹರಿವು ಉತ್ತಮವಾಗಿರುತ್ತದೆ. ಹಾಗಾಗಿ ಇಂದು ನೀವು ಲಾಭದಾಯಕ ದಿನವನ್ನು ಪಡೆದುಕೊಳ್ಳುವಿರಿ. ನಿಮ್ಮ ಉತ್ತಮ ನಡವಳಿಕೆ ಎಲ್ಲರ ಮೆಚ್ಚುಗೆಗೆ ಕಾರಣವಾಗುವುದು. ಧಾರ್ಮಿಕ ಪ್ರವಾಸಕ್ಕೆ ಹಿರಿಯರು ಒತ್ತಾಯಿಸಬಹುದು. ಪ್ರೇಮಿಗಳೊಂದಿಗೆ ಸಂಜೆಯ ಭೋಜನ ಸವಿಯುವಿರಿ.

ಅದೃಷ್ಟದ ಬಣ್ಣ: ಇಂಡಿಗೊ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಮಧ್ಯಾಹ್ನ 2:45 ರಿಂದ ರಾತ್ರೊ 9:20ರ ವರೆಗೆ

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ನಿಮ್ಮ ಅಸಭ್ಯ ವರ್ತನೆಯಿಂದ ನೀವು ತೊಂದರೆಗೆ ಒಳಗಾಗಬಹುದು. ನಿಮ್ಮ ವರ್ತನೆಯ ಬಗ್ಗೆ ನೀವು ಹಿಡಿತವನ್ನು ಹೊಂದಿ. ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿ. ಮುಂಚಿತವಾಗಿಯೇ ಒಂದಿಷ್ಟು ಯೋಜನೆ ಹೊಂದಿರುವುದರಿಂದ ಕೆಲಸದ ನಿರ್ವಹಣೆ ಉತ್ತಮವಾಗಿ ಸಾಗುವುದು. ಕೆಲಸ ಸಂಬಂಧಿತ ಪ್ರಯಾಣವು ನಿಮ್ಮನ್ನು ಕಾರ್ಯ ನಿರತರನ್ನಾಗಿ ಮಾಡುವುದು. ನಿಮ್ಮ ವರ್ತನೆಯ ಬಗ್ಗೆ ಕುಟುಂಬದಲ್ಲಿ ಬೇಸರ ಇರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರತರಾಗಿರುತ್ತಾರೆ. ಪ್ರೇಮಿಯೊಂದಿಗೆ ನಡೆಸುವ ವಾದವು ನಿಮಗೆ ಮಾನಸಿಕ ನೋವನ್ನುಂಟುಮಾಡುವುದು. ಆರೋಗ್ಯದ ಕಡೆಗೆ ಗಮನ ನೀಡಿ.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 22

ಅದೃಷ್ಟದ ಸಮಯ: ಮಧ್ಯಾಹ್ನ 12:45 ರಿಂದ ಸಂಜೆ 6:50ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ಹಣಕಾಸಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯನ್ನು ಕೇಳುವಿರಿ. ವಿವಿಧ ಮೂಲದಿಂದ ಹಣವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಜಂಟಿ ವ್ಯವಹಾರದಲ್ಲಿ ಇರುವವರು ಅತ್ಯಂತ ಸಂತೋಷವನ್ನು ಅನುಭವಿಸುವರು. ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ಅತಿಯಾದ ಖರ್ಚುಗಳನ್ನು ತಗ್ಗಿಸಿ. ಚಿನ್ನದಲ್ಲಿ ಹೂಡಿಕೆ ಮಾಡಲು ಇಂದು ಸರಿಯಾದ ದಿನ. ವಿವಾಹಿತರ ನಡುವೆ ಬಾಂಧವ್ಯ ಗಟ್ಟಿಯಾಗಿರುತ್ತದೆ. ವಾಯು ಸಂಬಂಧಿತ ಆರೋಗ್ಯ ಸಮಸ್ಯೆ ಕಾಡಬಹುದು. ಪ್ರೇಮಿಯ ಬಗ್ಗೆ ಕಾಳಜಿ ವಹಿಸಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 35

ಅದೃಷ್ಟದ ಸಮಯ: ಮುಂಜಾನೆ 9:20 ರಿಂದ ಮಧ್ಯಾಹ್ನ 2:30ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಹಣಕಾಸಿನ ಸಮಸ್ಯೆಯು ಇಂದು ನಿಮಗೆ ಕಠಿಣ ಸ್ಥಿತಿಯನ್ನು ಸೃಷ್ಟಿಸುವುದು. ಆಪ್ತರಿಂದ ಹಣವನ್ನು ಎರವಲು ಪಡೆಯುವ ಸಾಧ್ಯತೆಗಳಿವೆ. ಸಂಗಾತಿಯಿಂದ ಹೆಚ್ಚಿನ ಆದಾಯ ಪಡೆಯಲು ಯೋಜಿಸುವಿರಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು. ಸಂಗಾತಿಯಿಂದ ನಿರೀಕ್ಷೆಗೂ ಮೀರಿದ ಸಹಕಾರ ಹಾಗೂ ಸಹಾಯ ದೊರೆಯುವುದು. ಬೃಹತ್ ವಹಿವಾಟು ನಡೆಸುವುದನ್ನು ತಪ್ಪಿಸಿ. ದುಬಾರಿ ವಸ್ತುಗಳ ಖರೀದಿಗೆ ಮುಂದಾಗದಿರಿ. ವಂಚಿತ ಜನರಿಂದ ದೂರವಿರಿ. ನಿಮ್ಮ ತಾಳ್ಮೆಯ ಬುದ್ಧಿ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ನೀಡುವುದು.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಮುಂಜಾನೆ 9:20 ರಿಂದ ಸಂಜೆ 4:12ರ ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಿತಿ ಮೀರಿದ ಖರ್ಚು ನಿಮ್ಮ ಸ್ಥಿತಿಯನ್ನು ಹದಗೆಡಿಸಬಹುದು. ನಿಮ್ಮ ಹಣವನ್ನು ನೀವು ಸೂಕ್ತ ರೀತಿಯಲ್ಲಿ ವ್ಯಯಿಸುವದರ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಮಾತನಾಡುವ ಮೊದಲು ಎರಡು ಬಾರಿ ಯೋಚಿಸಿ. ನಿಮ್ಮ ಮಾರ್ಗದಲ್ಲಿ ಕೆಲವರು ನಡೆಯಬಹುದು. ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವರು. ಪ್ರೀತಿಯಿಂದ ವಿಶೇಷ ಭಾವನೆಯನ್ನು ಪಡೆದುಕೊಳ್ಳುವಿರಿ. ಸಂಬಂಧದ ಮಹತ್ವವನ್ನು ಅರಿತು ಕೊಂಡರೆ ಕುಟುಂಬದ ಮುಂದಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಯೋಜಿತ ಕೆಲಸ ವಿಳಂಬವಾಗುವುದು. ಸಂಧಿವಾತ ಇರುವವರು ಹೆಚ್ಚು ಕಾಳಜಿಯನ್ನು ತೋರಬೇಕು.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 38

ಅದೃಷ್ಟದ ಸಮಯ: ಮುಂಜಾನೆ 9:30 ರಿಂದ ಮುಂಜಾನೆ 10:10ರ ವರೆಗೆ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ವಿಶೇಷವಾದ ದಿನ. ವಿಷಯವು ಉತ್ತಮವಾಗಿ ಯೋಜಿಸಲಾಗುತ್ತದೆ. ನಿಮ್ಮ ಅನುಭವ ಹಾಗೂ ಜ್ಞಾನದಿಂದ ಪ್ರಶಂಸೆ ಪಡೆದುಕೊಳ್ಳುವಿರಿ. ನಿಮ್ಮ ಮಾತನ್ನು ಇತರರು ಗೌರವಿಸುತ್ತಾರೆ. ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ನೀವು ಹೊಸ ಮನೆಯನ್ನು ಖರೀದಿಸಲು ಮುಂದಾಗಬಹುದು. ಮಕ್ಕಳು ಸಂತೋಷದಿಂದ ಇರುತ್ತಾರೆ. ಕುಟುಂಬದ ಮುಂಭಾಗದಲ್ಲಿ ಸುಗಮವಾದ ದಿನವಾಗಿರುತ್ತದೆ. ಆಪ್ತ ಸ್ನೇಹಿತರ ಭೇಟಿಯಾಗುವ ಸಾಧ್ಯತೆಗಳಿವೆ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 1

ಅದೃಷ್ಟದ ಸಮಯ: ಮಧ್ಯಾಹ್ನ 12:05 ರಿಂದ ರಾತ್ರಿ 10:30ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಕಾನೂನು ಕ್ಷೇತ್ರದಲ್ಲಿ ಇರುವವರಿಗೆ ಇಂದು ಕಾರ್ಯನಿರತವಾದ ದಿನವಾಗಿರುತ್ತದೆ. ವಿಷಯಗಳು ನಿಮಗೆ ಜಠಿಲತೆಯಿಂದ ಕೂಡಿರುತ್ತದೆ. ನಿಯೋಜಿತ ಕಾರ್ಯವನ್ನು ಉತ್ಸಾಹದಿಂದ ಮಾಡುವಿರಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವಿವಾಹಿತರು ಇಷ್ಟು ದಿನ ಅನುಭವಿಸುತ್ತಿದ್ದ ಸಮಸ್ಯೆಗಳಿಂದ ಹೊರ ಬರುವರು. ಹಣಕಾಸಿನ ಸಾಲ ಪಡೆಯುವಲ್ಲಿ ಜಯ ಗಳಿಸುವಿರಿ. ನಿಮ್ಮ ಆಪ್ತರಿಂದ ಸಹಾಯ ದೊರೆಯುವುದು. ಹುರಿದ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರಿ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವ ಸಾಧ್ಯತೆಗಳಿವೆ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಮುಂಜಾನೆ 6:20 ರಿಂದ ಮಧ್ಯಾಹ್ನ 2:05ರ ವರೆಗೆ

English summary

Daily Horoscope 18 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
X
Desktop Bottom Promotion