For Quick Alerts
ALLOW NOTIFICATIONS  
For Daily Alerts

ಮಂಗಳವಾರದ ದಿನ ಭವಿಷ್ಯ (17-09-2019)

|

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.

rashi bhavishya

ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ. ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ನಿಮ್ಮ ಸಂಗಾತಿಯ ನಡವಳಿಕೆ ಹಾಗೂ ಸ್ವಭಾವದಲ್ಲಿ ಗಮನಾರ್ಹ ವ್ಯತ್ಯಾಸ ಕಾಣುವಿರಿ. ಅದು ನಿಮಗೆ ಅನಿರೀಕ್ಷಿತವಾದ ಸಂಗತಿಯಾಗಿರುತ್ತದೆ. ಅದು ನಿಮ್ಮ ತಾಳ್ಮೆಯನ್ನು ಕೆಡಿಸುವುದು. ಜೊತೆಗೆ ಒಂದಿಷ್ಟು ಗೊಂದಲಕ್ಕೆ ಒಳಗಾಗುವುದರ ಮೂಲಕ ಮಾನಸಿಕವಾಗಿ ಚಿಂತೆಯನ್ನು ಅನುಭವಿಸಬೇಕಾಗುವುದು. ಆದರೆ ಅತಿಯಾದ ಚಿಂತನೆಗೆ ಒಳಗಾಗುವ ಅಗತ್ಯವಿಲ್ಲ. ನೀವು ವೃತ್ತಿ ಕ್ಷೇತ್ರದಲ್ಲಿಯೂ ಶುಭ ಸಂಗತಿಯನ್ನು ಯಾಚಿಸದಿರಿ. ವಿಷಯಗಳು ತಪ್ಪಾಗಬಹುದು. ಅವಕಾಶಗಳು ಋಣಾತ್ಮಕವಾಗಿರುವುದರಿಂದ ಯಾವುದೇ ನಿರ್ಧಾರಗಳನ್ನು ಆತುರದಿಂದ ಕೈಗೊಳ್ಳದಿರಿ. ನಿಮ್ಮ ಕೈಲಿದ್ದ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚುಮಾಡಿ. ಯಾರಿಗೇ ಸಾಲ ನೀಡುವುದಾದರೂ ಸಾಕಷ್ಟು ಜಾಗರೂಕತೆ ವಹಿಸುವುದು ಮುಖ್ಯ. ಇಂದು ಎಲ್ಲಾ ವಿಷಯದಲ್ಲೂ ನಿಮಗೆ ನಿಧಾನಗತಿಯನ್ನು ತೋರುವುದು. ನಿಮ್ಮ ಅಸಡ್ಡೆ ವರ್ತನೆಯು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ನಂಬರ್: 7

ಅದೃಷ್ಟದ ಸಮಯ: ಮುಂಜಾನೆ 8:30 ರಿಂದ ಸಂಜೆ 6:10ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ನೀವು ನಿಮ್ಮ ಆಸೆಯನ್ನು ನೆರವೇರಿಸಿಕೊಳ್ಳಲು ಸಾಕಷ್ಟು ಶ್ರಮವನ್ನು ತೋರುವಿರಿ. ಅದಕ್ಕೆ ನಿಮ್ಮ ಸಂಗಾತಿಯ ಬೆಂಬಲವು ದೊರೆಯುವುದು. ಸಂಗಾತಿಯ ಸಹಕಾರ ದೊರೆಯುವುದರಿಂದ ಒಟ್ಟಾರೆ ವಿಷಯಗಳು ಅನುಕೂಲಕರವಾಗಿರುತ್ತವೆ. ನೀವು ಕೆಲಸದ ಬಗ್ಗೆ ಕೇಂದ್ರೀಕೃತರಾಗಿರುತ್ತೀರಿ. ನಿಮ್ಮ ಗಂಭೀರ ವರ್ತನೆ ಇತರರಿಗೆ ಪ್ರೇರಣೆ ನಿಡುವುದು. ಕೆಲವು ವಿಷಯದಲ್ಲಿ ಹಿರಿಯರ ಬೆಂಬಲ ದೊರೆಯುವುದು. ಉದ್ಯಮಿಗಳಿಗೆ ಇಂದು ಲಾಭದಾಯಕವಾದ ದಿನ. ನಿಮ್ಮ ಸಂಬಂಧಿಕರು ಅಥವಾ ಆಪ್ತರು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚುವರಿ ಆದಾಯದ ಮೂಲವನ್ನು ಹೊಂದುವಿರಿ. ಆರೋಗ್ಯದ ಕಡೆಗೆ ಗಮನ ನೀಡಿ. ನಿಮ್ಮ ಪ್ರೇಮಿ ನಿಮ್ಮ ಕಡೆಗೆ ಹೆಚ್ಚಿನ ಗಮನ ತೋರುವರು.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ನಂಬರ್: 11

ಅದೃಷ್ಟದ ಸಮಯ: ಸಂಜೆ 5:10 ರಿಂದ ರಾತ್ರಿ 8:20ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್

ಮಿಥುನ ರಾಶಿ: 21 ಮೇ -20 ಜೂನ್

ನವ ವಿವಾಹಿತರಿಗೆ ಇಂದು ಪ್ರಮುಖವಾದ ದಿನ. ಹಿಂದಿನ ಕೊರತೆಗಳಿಂದ ದೂರವಾಗಿರುತ್ತೀರಿ. ಅದು ನಿಮ್ಮ ಸಂಬಂಧಕ್ಕೆ ಅನುಕೂಲವನ್ನು ತಂದುಕೊಡುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸುವುದು. ಸಂಗಾತಿಗಳ ನಡುವೆ ಇರುವ ಉತ್ತಮ ತಿಳುವಳಿಕೆಯು ಸಂತೋಷದ ಕ್ಷಣಗಳನ್ನು ಹೆಚ್ಚಿಸುತ್ತವೆ. ನೀವು ಸಣ್ಣ ವಿಹಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳು ತೋರುವ ಸಾಧನೆಗೆ ಪೋಷಕರು ಹೆಮ್ಮೆ ಪಡುವರು. ಆರ್ಥಿಕವಾಗಿ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನೀವು ನಿಮ್ಮ ದಿನವನ್ನು ಯೋಗ ಮತ್ತು ಧ್ಯಾನದಿಂದ ಆರಂಭಿಸಿ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ನಂಬರ್: 13

ಅದೃಷ್ಟದ ಸಮಯ: ಮುಂಜಾನೆ 7:00 ರಿಂದ ರಾತ್ರಿ 8:45ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ನಿಮ್ಮ ನಕ್ಷತ್ರಗಳ ಪ್ರಭಾವದಿಂದ ಕೆಲಸ ಕಾರ್ಯಗಳು ಉತ್ತಮವಾಗಿರುತ್ತವೆ. ನಿಮ್ಮ ಏಳಿಗೆಯು ಸಹೋದ್ಯೋಗಿಗಳಿಗೆ ಸಹಿಸಲು ಕಷ್ಟವಾಗುವುದು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕುಟುಂಬದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ನವ ವಿವಾಹಿತರು ಶೀಘ್ರದಲ್ಲಿಯೇ ಒಂದು ಸಣ್ಣ ಪ್ರವಾಸವನ್ನು ಕೈಗೊಳ್ಳಬಹುದು. ನಿಮ್ಮ ಪ್ರಗತಿಯನ್ನು ಕಂಡು ಪಾಲಕರು ಸಂತೋಷವನ್ನು ಅನುಭವಿಸುವರು. ಸಂಸಾರದಲ್ಲಿ ಸಣ್ಣ ಏರಿಳಿತವನ್ನು ನೀವು ಅನುಭವಿಸಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಯೋಜಿಸಬಹುದು. ಪೋಷಕರ ಆರೋಗ್ಯದಲ್ಲಿ ಸುಧಾರಣೆ ತೋರುತ್ತದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 44

ಅದೃಷ್ಟದ ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 7:30ರ ವರೆಗೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಜೀವನದಲ್ಲಿ ಹಠಾತ್ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಸಂಬಂಧದ ವಿಷಯದಲ್ಲಿ ಆದಷ್ಟು ಜಾಗರೂಕರಾಗಿರಬೇಕು. ಅಸಡ್ಡೆ ಮನೋಭಾವವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಅನಿರೀಕ್ಷಿತ ಪ್ರವಾಸ ಕುಟುಂಬದವರಿಗೆ ಆಶ್ಚರ್ಯವನ್ನುಂಟುಮಾಡುವುದು. ಹಣಕಾಸಿನ ವಿಷಯದಲ್ಲಿ ನೀವು ಹಿರಿಯರ ಸಲಹೆ ಪಡೆಯುವುದು ಉತ್ತಮ. ವೈಯಕ್ತಿಕ ಜೀವನದಲ್ಲಿ ನೀವು ತೋರುವ ಆಕ್ರಮಣಕಾರಿ ವರ್ತನೆಯು ನಿಮಗೆ ಹಾಗೂ ನಿಮ್ಮ ಸುತ್ತಲಿನವರಿಗೆ ತೊಂದರೆಯನ್ನುಂಟುಮಾಡುವುದು. ನೀವು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಆರ್ಥಿಕವಾಗಿ ಇಂದು ನಿಮಗೆ ಮಿಶ್ರ ಫಲಗಳ ದಿನ. ಹಣದ ಬಳಕೆಯಲ್ಲಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಅದೃಷ್ಟದ ಬಣ್ಣ: ತಿಳಿ ಹಳದಿ

ಅದೃಷ್ಟದ ಸಂಖ್ಯೆ: 31

ಅದೃಷ್ಟದ ಸಮಯ: ಬೆಳಿಗ್ಗೆ 10:05 ರಿಂದ ಸಂಜೆ 6:30ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಇಂದು ನಿಮ್ಮ ಜೀವನದಲ್ಲಿ ಶಾಂತಿ ಮತ್ತು ತೃಪ್ತಿಯನ್ನು ಅನುಭವಿಸುವಿರಿ. ಕುಟುಂಬದ ಕೆಲವು ವಿಷಯದಲ್ಲಿ ಯಶಸ್ಸನ್ನು ಕಂಡುಕೊಳ್ಳುವಿರಿ. ಕೆಲವು ಸಂಗತಿಗಳಿಗೆ ನಕಾರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಉದ್ಯೋಗ ಬದಲಾವಣೆ, ವೇತನ ಹೆಚ್ಚಳದ ವಿಷಯಗಳು ನಿಮಗೆ ಅನುಕೂಲಕರವಾಗರುತ್ತವೆ. ನೀವು ಕುಟುಂಬಕ್ಕಾಗಿ ಏನನ್ನಾದರೂ ಯೋಜಿಸಬಹುದು. ಅದು ಅವರಿಗೆ ವಿಶೇಷ ಭಾವನೆಯನ್ನು ಮೂಡಿಸುತ್ತದೆ. ಉದ್ಯಮಿಗಳಿಗೆ ಭಾರಿ ಲಾಭ ಉಂಟಾಗುವುದು. ತಾಯಿಯ ಆರೋಗ್ಯದ ಕಡೆಗೆ ಗಮನ ನೀಡಿ. ಹಣಕಾಸಿಗೆ ಸಂಬಂಧಿಸಿದಂತೆ ನೀವು ನಿಮ್ಮ ಆಪ್ತರಿಗೆ ಸಹಾಯ ಮಾಡಬಹುದು. ಋಣಾತ್ಮಕ ಪ್ರವೃತ್ತಿಯ ಜನರಿಂದ ದೂರವಿರಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಮುಂಜಾನೆ 9:45 ರಿಂದ ಸಂಜೆ 5:55ರ ವರೆಗೆ.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಅನೇಕ ವಿಷಯಗಳಲ್ಲಿ ಯೋಜನೆ ಕೈಗೊಳ್ಳಲು ಮುಂದಾಗುವಿರಿ. ವೃತ್ತಿ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ ಮುಂದುವರಿಯುವುದು. ಬಾಂಧವ್ಯದಲ್ಲಿ ಸಮೃದ್ಧಿಯನ್ನು ಕಂಡುಕೊಳ್ಳುವಿರಿ. ಮಕ್ಕಳು ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡುವರು. ಉದ್ಯಮಿಗಳಿಗೆ ಸಾಮಾನ್ಯವಾದ ದಿನ. ದೂರದ ಪ್ರದೇಶಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ತಪ್ಪಿಸಿ. ಆರೋಗ್ಯ ದೃಷ್ಟಿಯಿಂದಲೂ ನಿಮಗೆ ಸಾಮಾನ್ಯವಾದ ದಿನವಾಗಿರುತ್ತದೆ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಬೆಳಿಗ್ಗೆ 4:30 ರಿಂದ ಸಂಜೆ 6:00ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ಗ್ರಹಗತಿಗಳು ಹಾಗೂ ನಕ್ಷತ್ರಗಳು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ನೀವು ಇಂದು ಆಹ್ಲಾದಕರ ದಿನವನ್ನಾಗಿ ಕಳೆಯುವಿರಿ. ಹೆಚ್ಚುವರಿ ಆದಾಯದ ಮೂಲವು ನಿಮಗೆ ಪ್ರಯೋಜನಕಾರಿಯಾಗಿದೆ. ಹಣಕಾಸಿನ ಹೊರೆಯಿಂದ ಪರಿಹಾರವನ್ನು ಕಂಡುಕೊಳ್ಳುವಿರಿ. ನಿಮ್ಮ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣವನ್ನು ಕೈಗೊಳ್ಳುವರು. ಹಿರಿಯರ ಆರೋಗ್ಯವು ಕಳವಳವನ್ನುಂಟುಮಾಡುವುದು. ಸಮಾಜಿಕ ಕ್ಷೇತ್ರದಲ್ಲಿ ಇರುವವರು ತೊಂದರೆಯನ್ನು ಅನುಭವಿಸಬೇಕಾಗುವುದು. ನವ ವಿವಾಹಿತರಿಗೆ ಪ್ರಣಯದ ದಿನ. ನೀವು ನಿಮ್ಮ ಸ್ನೇಹಿತರೊಂದಿಗೆ ಅದ್ಭುತ ಸಮಯವನ್ನು ಕಳೆಯುವಿರಿ.

ಅದೃಷ್ಟದ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟದ ಸಂಖ್ಯೆ: 35

ಅದೃಷ್ಟದ ಸಮಯ: ಸಂಜೆ 5:40 ರಿಂದ ಮಧ್ಯಾಹ್ನ 11:00ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಈ ದಿನದ ಆರಂಭವು ಕುಟುಂಬದ ಸದಸ್ಯರೊಂದಿಗೆ ವಾದ ಮಾಡುವುದರ ಮೂಲಕ ಪ್ರಾರಂಭಿಸುವಿರಿ. ಇದರಿಂದ ವಿಷಯಗಳು ಪ್ರತಿಕೂಲವಾಗಿರುತ್ತದೆ. ಇಂದು ಕಚೇರಿಯಲ್ಲಿ ನಿಮಗೆ ನಿಧಾನ ಗತಿಯ ದಿನ. ನಿಮ್ಮ ಮೇಲಾಧಿಕಾರಿಯು ನೀವು ಕೆಲಸವನ್ನು ಪೂರ್ಣಗೊಳಿಸದೆ ಇರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಬಹುದು. ಕುಟುಂಬದಲ್ಲಿ ನಿಕಟ ಸಂಬಂಧಿಗಳು ಹಸ್ತ ಕ್ಷೇಪ ಮಾಡುವುದರಿಂದ ಕಿರಿಕಿರಿ ಉಂಟಾಗಬಹುದು. ಶಾಂತಿಯುತವಾದ ಜೀವನ ನಡೆಸಲು ಕೆಲವು ವಿಷಯಗಳನ್ನು ನಿರ್ಲಕ್ಷಿಸಿ. ಒಡ ಹುಟ್ಟಿದವರ ಬೆಂಬಲ ದೊರೆಯದು. ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ.

ಅದೃಷ್ಟದ ಬಣ್ಣ: ಪಚ್ಚೆ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಮುಂಜಾನೆ 8:30 ರಿಂದ ಮಧ್ಯಾಹ್ನ 12:00ರ ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಸಂಬಂಧದ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳಿ. ಕುಟುಂಬ ಹಾಗೂ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಅದು ಹಿಂದಿನಿಂದಲೂ ಅಗತ್ಯವಾದ ಸಂಗತಿಯಾಗಿದೆ. ಮಕ್ಕಳಿಂದ ನೀವು ಸಂತೋಷದ ಸುದ್ದಿಯನ್ನು ಕೇಳುವಿರಿ. ತಂದೆಯ ಅನಾರೋಗ್ಯದ ಸ್ಥಿತಿ ಕುಟುಂಬದಲ್ಲಿ ಅಸಮಧಾನ ಉಂಟುಮಾಡುವುದು. ಹಣಕಾಸಿಗೆ ಸಂಬಂಧಿಸಿದಂತೆ ಇಂದು ನಿಮಗೆ ಲಾಭದಾಯಕವಾದ ದಿನ. ಕೆಲಸದಲ್ಲೂ ಸಾಮಾನ್ಯವಾದ ದಿನ. ಹೊಸ ಯೋಜನೆಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುವಿರಿ. ಲಕ್ಷ್ಮಿ ದೇವಿಯ ಪೂಜೆ ಮಾಡುವುದರ ಮೂಲಕ ಸಮೃದ್ಧಿಯನ್ನು ಪಡೆದುಕೊಳ್ಳಿ.

ಅದೃಷ್ಟದ ಬಣ್ಣ: ಸಾಗರ ಹಸಿರು

ಅದೃಷ್ಟದ ಸಂಖ್ಯೆ: 4

ಅದೃಷ್ಟದ ಸಮಯ: ಮುಂಜಾನೆ 5:30ರಿಂದ ಸಂಜೆ 3:10ರ ವರೆಗೆ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಕಠಿಣವಾದ ದಿನವಾಗುತ್ತದೆ. ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಸಾಧ್ಯವಾಗದು. ಇದು ವಿವಾದಕ್ಕೆ ಒಂದು ಕಾರಣವಾಗುವುದು. ಸಂಹನದ ಅಂತರದಿಂದ ನಿಮ್ಮ ಸಂಗಾತಿ ಮನನೊಂದುಕೊಳ್ಳುವ ಸಾಧ್ಯತೆಗಳಿವೆ. ಕ್ರೀಡೆ ಹಗೂ ಸಂಗೀತದಲ್ಲಿ ಮುಂದಿರುವ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡುವರು. ಸಂಗಾತಿಯ ಕಿರಿಕಿರಿ ವರ್ತನೆಯು ನಿರಾಸೆಯನ್ನುಂಟುಮಾಡುತ್ತದೆ. ಪರಿಸ್ಥಿತಿಗಳನ್ನು ಅತ್ಯಂತ ತಾಳ್ಮೆಯಿಂದ ನಿರ್ವಹಿಸಬೇಕು.

ಅದೃಷ್ಟದ ಬಣ್ಣ: ಕ್ರೀಮ್

ಅದೃಷ್ಟದ ಸಂಖ್ಯೆ: 18

ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ರಾತ್ರಿ 8:30ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ನೀವು ನಿಮ್ಮ ಮನೋಭಾವದ ಸುಧಾರಣೆಗೆ ಕೆಲಸ ಮಾಡುವಿರಿ. ನಿಮ್ಮ ವರ್ತನೆಯಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುವಿರಿ. ಅದರ ಸುಧಾರಣೆಗೆ ನೀವು ಉದ್ಯೋಗ ಬದಲಾವಣೆ ಮಾಡುವ ಯೋಜನೆ ಕೈಗೊಳ್ಳುವಿರಿ. ತೀವ್ರವಾದ ವೇಳಾ ಪಟ್ಟಿಯು ನಿಮಗೆ ಕಿರಿಕಿರಿಯನ್ನು ಉಂಟುಮಾಡುವುದು. ಹೂಡಿಕೆಯಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವಿರಿ. ವಿಹಾರದ ವಿಷಯವು ನಿಮಗೆ ಅದೃಷ್ಟವನ್ನು ತಂದುಕೊಡುವುದು. ತಾಳ್ಮೆಯಿಂದ ಇರುವುದಕ್ಕೆ ಪ್ರತಿಫಲ ದೊರೆಯುವುದು. ನಿಮ್ಮ ಸಂಗಾತಿಯು ನಿಮಗೆ ವಿಶೇಷ ದಿನವನ್ನು ಕಲ್ಪಿಸುವುದರ ಮೂಲಕ ದಿನವನ್ನು ಉತ್ತಮಗೊಳಿಸುತ್ತಾರೆ. ಇಂದು ನಿಮಗೆ ಆರೋಗ್ಯಕರ ದಿನವಾಗಿರುತ್ತದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 23

ಅದೃಷ್ಟದ ಸಮಯ: ಮುಂಜಾನೆ 7:15 ರಿಂದ ಸಂಜೆ 6:30ರ ವರೆಗೆ.

English summary

Daily Horoscope 17 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
X
Desktop Bottom Promotion