For Quick Alerts
ALLOW NOTIFICATIONS  
For Daily Alerts

ಸೋಮವಾರದ ದಿನ ಭವಿಷ್ಯ (16-09-2019)

|
ದಿನ ಭವಿಷ್ಯ - Astrology 16-09-2019 - Your Day Today

ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು.

ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು. ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿಯಾಗುತ್ತೇವೆ. ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ 21 ಮಾರ್ಚ್ - 19 ಏಪ್ರಿಲ್

ಮೇಷ 21 ಮಾರ್ಚ್ - 19 ಏಪ್ರಿಲ್

ನಿಮ್ಮ ಆಕ್ರಮಣಕಾರಿ ಸ್ವಭಾವದಿಂದಾಗಿ ಕಚೇರಿಯಲ್ಲಿ ಸಹೋದ್ಯೋಗಿಗಳು ನಿಮ್ಮಿಂದ ದೂರವಿರುವ ಸಾಧ್ಯತೆ ಇದೆ. ಅಧಿಕ ರಕ್ತದೊತ್ತಡದಿಂದಾಗಿ ಆರೋಗ್ಯವು ಹದಗೆಡಬಹುದು, ಆದಷ್ಟು ಶಾಂತವಾಗಿರಿ. ಕಚೇರಿಯಲ್ಲಿ ವಿವಾದಗಳಿಂದ ದೂರವಿರಿ. ಸಾರ್ವಜನಿಕ ವಲಯದಲ್ಲಿರುವವರಿಗೆ ಇದು ಸಾಮಾನ್ಯ ದಿನವಾಗಿರುತ್ತದೆ ಆದರೆ ಏಕತಾನತೆಯ ಕಾರ್ಯವು ನಿಮಗೆ ಬೇಸರವನ್ನುಂಟು ಮಾಡುತ್ತದೆ. ಬಹು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಬೇಡ. ಹಿರಿಯರ ನಿರೀಕ್ಷೆಗಳು ಮತ್ತು ಅವಶ್ಯಕತೆಗಳಿಗೆ ಸ್ಪಂದಿಸಿ. ಪರಿಸ್ಥಿತಿಯನ್ನು ನಿಭಾಯಿಸುವ ಹೊಸ ಮಾರ್ಗಗಳನ್ನು ಕಂಡುಹಿಡಿಯಬೇಕಿದೆ. ಅತಿಯಾದ ಖರ್ಚಿನ ಅಭ್ಯಾಸವು ದೊಡ್ಡ ಸಮಸ್ಯೆಯಾಗಬಹುದು. ಹಣಕಾಸಿನ ವಿಷಯದಲ್ಲಿ ಇದು ಕಠಿಣ ದಿನವಾಗಿರುತ್ತದೆ, ಆದ್ದರಿಂದ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಆರೋಗ್ಯ ಸುಧಾರಣೆಯ ಸಿಹಿಸುದ್ದಿ ನಿಮ್ಮದಾಗಲಿದೆ.

ಅದೃಷ್ಟ ಬಣ್ಣ: ಕೆನ್ನೇರಳೆ

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ 8:00 ರವರೆಗೆ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ಮಕ್ಕಳು ಬೆಳೆಯುತ್ತಿರುವುದರಿಂದ ಜಾಗರೂಕರಾಗಿರಿ. ಹಿರಿಯರ ಆರೋಗ್ಯದಿಂದಾಗಿ ಕುಟುಂಬದಲ್ಲಿ ತುಸು ಕಷ್ಟದ ದಿನವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗಿನ ಸಣ್ಣ ವಾದ ಉಂಟಾಗುವ ಸಾಧ್ಯತೆ ಇದೆ, ಚಿಂತಿಸಬೇಡಿ. ನಿಮ್ಮ ಒಡಹುಟ್ಟಿದವರು ಬೆಂಬಲಿಸುವ ಕಾರಣ ಸಂಜೆಯ ವೇಳೆಗೆ ನೆಮ್ಮದಿ ಲಭಿಸಲಿದೆ. ಕೆಲಸದಲ್ಲಿ ಉತ್ತಮ ದಿನವಾಗಿರಲಿದೆ. ಪ್ರಮುಖ ವಿಷಯದ ಬಗ್ಗೆ ನೀವು ಹಿರಿಯರೊಂದಿಗೆ ಮಾತುಕತೆ ನಡೆಯಬಹುದು. ಉದ್ಯಮಿಗಳು ಭಾರಿ ಲಾಭ ಗಳಿಸುತ್ತಾರೆ. ದೂರದ ಪ್ರಯಾಣ ತಪ್ಪಿಸಿ. ಆರೋಗ್ಯದ ದೃಷ್ಟಿಯಿಂದ ಇಂದು ಸಾಮಾನ್ಯ ದಿನವಾಗಿರುತ್ತದೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 7:00 ರವರೆಗೆ

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ನೀವು ಕೆಲಸದಲ್ಲಿ ಬದಲಾವಣೆ ಬಯಸಬಹುದಾದ ಕಾರಣ ಕೆಲಸದ ಅನಿಶ್ಚಿತ ದಿನವಾಗಿರಲಿದೆ. ಒತ್ತಡದಿಂದಾಗಿ ವಿಷಯಗಳನ್ನು ನಿರ್ವಹಿಸಲು ಕಠಿಣವಾಗಿರುತ್ತದೆ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವಿರಿ. ವೇತನ ಹೆಚ್ಚಳದಿಂದಾಗಿ ಹಣಕಾಸಿನ ದೃಷ್ಟಿಯಲ್ಲಿ ಸುಧಾರಿಸುತ್ತವೆ. ಸಮಯವು ಅನುಕೂಲಕರವಾಗಿರುವುದರಿಂದ ನೀವು ಹೂಡಿಕೆಗಾಗಿ ಯೋಜಿಸಬಹುದು. ಕುಟುಂಬದಲ್ಲಿ ಉತ್ತಮ ನಿರೀಕ್ಷೆಯ ದಿನವಾಗಿರಲಿದೆ. ಪ್ರಿಯಕರನೊಂದಿಗೆ ವಿಶೇಷ ಕ್ಷಣಗಳನ್ನು ಕಳೆಯುತ್ತೀರಿ. ಯಾವುದಾದರೂ ಪ್ರಮುಖವಾದದ್ದನ್ನು ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಹೊಟ್ಟೆಯ ಕೆಳಭಾಗದ ಸಮಸ್ಯೆಗಳಿಂದ ಬಳಲುತ್ತಿರುವವರು ಜಾಗರೂಕರಾಗಿರಿ.

ಅದೃಷ್ಟದ ಬಣ್ಣ: ಗಾಢ ನೀಲಿ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 4:00 ರಿಂದ 9:20 ರವರೆಗೆ

ಕರ್ಕ 21 ಜೂನ್ - 22 ಜುಲೈ

ಕರ್ಕ 21 ಜೂನ್ - 22 ಜುಲೈ

ದಿನವು ಅನುಕೂಲಕರವಾಗಿರುವುದರಿಂದ ಉದ್ಯೋಗ ಬದಲಾವಣೆಗೆ ಯೋಜಿಸುವವರು ಅಥವಾ ದೀರ್ಘಕಾಲದಿಂದ ಉದ್ಯೋಗವನ್ನು ಹುಡುಕುವವರು ಇಂದು ಸಾಕಷ್ಟು ಅದೃಷ್ಟಶಾಲಿಯಾಗುತ್ತಾರೆ. ಹಣಕಾಸಿನ ವಿಷಯದಲ್ಲಿ ನಿರಾಳರಾಗಿರುತ್ತೀರಿ. ಪೋಷಕರ ಆರೋಗ್ಯದಲ್ಲಿನ ಸುಧಾರಣೆಯ ಸುದ್ದಿ ನಿಮ್ಮದಾಗಲಿದೆ. ಉತ್ತಮ ಜೀವನೋಪಾಯಕ್ಕಾಗಿ ನೀವು ಹೆಚ್ಚುವರಿ ಆದಾಯದ ಮೂಲವನ್ನು ಯೋಜಿಸಬಹುದು. ದಂಪತಿಗಳ ನಡುವಿನ ಹೊಂದಾಣಿಕೆಯು ನಿಮಗೆ ಇನ್ನಷ್ಟು ಧೈರ್ಯ ತುಂಬಲಿದೆ. ನಿಮ್ಮ ಜಾಲಿ ಸ್ವಭಾವದಿಂದ ಕುಟುಂಬದಲ್ಲಿ ಸಮಸ್ಯೆಗೆ ಸಮರ್ಥ ಪರಿಹಾರವನ್ನು ಕಂಡುಕೊಳ್ಳಬಹುದು. ಉದ್ಯಮಿಗಳಿಗೆ ಲಾಭದಾಯಕವಾಗಿರುತ್ತದೆ. ಸಂಜೆ ಶಾಂತಿಯುತ ಮತ್ತು ಆಹ್ಲಾದಕರವಾಗಿರುತ್ತದೆ. ದಿನವನ್ನು ವ್ಯಾಯಾಮ ಅಥವಾ ಯೋಗದಿಂದ ಪ್ರಾರಂಭಿಸುವುದು ಸೂಕ್ತ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 11:45 ರಿಂದ ಸಂಜೆ 6:30 ರವರೆಗೆ

ಸಿಂಹ 23 ಜುಲೈ - 22 ಆಗಸ್ಟ್

ಸಿಂಹ 23 ಜುಲೈ - 22 ಆಗಸ್ಟ್

ಜನರು ನಿಮ್ಮ ಅನುಭವ ಮತ್ತು ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಕಾರಾತ್ಮಕ ಜನರಿಂದ ದೂರವಿರಿ, ನಿಮ್ಮ ಶಕ್ತಿ ಮತ್ತು ಶ್ರಮವನ್ನು ನೀವು ವ್ಯರ್ಥ ಮಾಡುಕೊಳ್ಳಬೇಡಿ. ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗುವಂಥ ಹೊಸದನ್ನು ವ್ಯವಹಾರದಲ್ಲಿ ಕಲಿಯುವಿರಿ. ಆರ್ಥಿಕ ಕ್ಷೇತ್ರದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮಲ್ಲಿ ಕೆಲವರು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸುತ್ತಾರೆ. ನಿಮ್ಮ ಪ್ರೀತಿಪಾತ್ರರಿಗೆ ನೀವು ಮಾಡುವ ಅಚ್ಚರಿಗಳು ಅವರಲ್ಲಿ ವಿಶೇಷ ಭಾವ ಮೂಡಿಸಲಿದೆ. ವೈಯಕ್ತಿಕವಾಗಿ ಅತ್ಯುತ್ತಮ ದಿನವಾಗಿರಲಿದೆ. ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ. ನಿಮ್ಮ ಪ್ರೀತಿಪಾತ್ರರು ನಿಮಗೆ ದುಬಾರಿಯಾದ ಏನನ್ನಾದರೂ ಉಡುಗೊರೆಯಾಗಿ ನೀಡುತ್ತಾನೆ.

ಅದೃಷ್ಟ ಬಣ್ಣ: ಕಡುಕೆಂಪು

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಮಧ್ಯಾಹ್ನ 12:45 ರಿಂದ 6:00 ರವರೆಗೆ

ಕನ್ಯಾ 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ 23 ಆಗಸ್ಟ್ - 22 ಸೆಪ್ಟೆಂಬರ್

ನಿಮ್ಮ ಕೆಟ್ಟ, ಅಪಾಯಕಾರಿ ಆಲೋಚನೆಗಳಿಂದ ದೂರವಿರಿ. ಅಪ್ರಸ್ತುತ ವಿಷಯಗಳ ಕಡೆ ಅನಗತ್ಯ ಗಮನ ನೀಡುವುದನ್ನು ನಿಲ್ಲಿಸಿ. ಕಚೇರಿಯಲ್ಲಿ ಸಂಘರ್ಷಗಳನ್ನು ತಪ್ಪಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಖರ್ಚು ಸಂಬಳಕ್ಕಿಂತ ಹೆಚ್ಚಿರುತ್ತದೆ. ನಿಮ್ಮ ಸಂಗಾತಿ ಸಂಶಯ ವ್ಯಕ್ತಪಡಿಸುವುದರಿಂದ ಪ್ರಮುಖವಾದದ್ದನ್ನು ಖರೀದಿಸುವ ನಿಮ್ಮ ಯೋಜನೆ ಸ್ಥಗಿತಗೊಳ್ಳಬಹುದು. ನಿಮ್ಮ ಉತ್ತಮ ಸ್ನೇಹಿತ ಅಥವಾ ಆಪ್ತ ಸಂಬಂಧಿ ನಿಮಗೆ ವಿಶೇಷ ಭಾವನೆ ಮೂಡಿಸುವರು. ಕೆಲವು ನಿರ್ಧಾರಗಳ ವಿಷಯದಲ್ಲಿ ನಿಮ್ಮ ಸಹೋದ್ಯೋಗಿ ಸಹಾಯ ಮಾಡಬಹುದು. ನಿಮ್ಮ ಖ್ಯಾತಿಗೆ ಕಳಂಕ ತರುವ ಕಾರಣ ಆಕ್ರಮಣಕಾರಿ ಆಗುವುದನ್ನು ತಪ್ಪಿಸಿ. ಇದು ಕುಟುಂಬಲ್ಲಿ ಆಶೀರ್ವಾದದ ದಿನವಾಗಿರುತ್ತದೆ ಮತ್ತು ನೀವು ಅದ್ಭುತ ಕ್ಷಣಗಳನ್ನು ಒಟ್ಟಿಗೆ ಕಳೆಯುತ್ತೀರಿ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ರಾತ್ರಿ 8:20 ರವರೆಗೆ

ತುಲಾ 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ 23 ಸೆಪ್ಟೆಂಬರ್ - 22 ಅಕ್ಟೋಬರ್

ವಿದೇಶಿ ಪ್ರವಾಸದ ಜೊತೆಗೆ ಅದೃಷ್ಟವು ಅನುಕೂಲಕರವಾಗಿರುವುದರಿಂದ ನವವಿವಾಹಿತ ದಂಪತಿಗಳಿಗೆ ಇಂದು ಹೆಚ್ಚಿನ ಲಾಭವಾಗಲಿದೆ. ಆಪ್ತ ಸ್ನೇಹಿತನೊಂದಿಗೆ ಶಾಪಿಂಗ್‌ಗೆ ಹೋಗಬಹುದು. ಹಣಕಾಸಿನ ವಿಷಯದಲ್ಲಿ ಸಾಮಾನ್ಯ ದಿನವಾಗಿರಲಿದೆ, ಹತ್ತಿರವಿರುವವರ ಸಹಾಯವನ್ನು ಪಡೆಯಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಉದ್ಯೋಗವನ್ನು ಬಯಸುವವರಿಗೆ ಅತ್ಯುತ್ತಮ ದಿನ. ಮಾರುಕಟ್ಟೆ ಸ್ಪರ್ಧಾತ್ಮಕವಾಗಿರುವುದರಿಂದ ವ್ಯಾಪಾರಿಗಳಿಗೆ ಶ್ರಮದ ದಿನವಾಗಿರಲಿದೆ. ಆರೋಗ್ಯದಲ್ಲಿ ಸುಧಾರಿಸಲಿದೆ. ನಿಮ್ಮ ಸಂಗಾತಿಯೊಂದಿಗೆ ಹಳೆಯ ಸಮಸ್ಯೆಯನ್ನು ಪರಿಹರಿಸುವುದು ಸೂಕ್ತ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 8:05 ರವರೆಗೆ

ವೃಶ್ಚಿಕ 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ 23 ಅಕ್ಟೋಬರ್ - 21 ನವೆಂಬರ್

ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಕೆಲಸದ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಬಹುದು. ನಿಮ್ಮ ಸಂಘಟಿತ ನಡವಳಿಕೆಯಿಂದ ಲಾಭದ ದಿನವಾಗಿರಲಿದೆ. ಕಚೇರಿಯಲ್ಲಿ ನಿಮ್ಮ ನಡವಳಿಕೆ ಬಗ್ಗೆ ಎಚ್ಚರವಹಿಸಿ. ನಿಮ್ಮ ಸಂಗಾತಿಯಿಂದ ಕಿರಿಕಿರಿ ಉಂಟಾಗಬಹುದು. ನಿಮ್ಮ ಪೋಷಕರ ಸಲಹೆಯನ್ನು ಪಾಲಿಸಿ. ಹೆಚ್ಚುವರಿ ಆದಾಯದ ಮೂಲದ ಬಗ್ಗೆ ಯೋಚಿಸುವುದು ಪ್ರಯೋಜನಕಾರಿಯಾಗಲಿದೆ. ಒಡಹುಟ್ಟಿದವರ ನಡುವೆ ಸಮನ್ವಯದ ಕೊರತೆ ಉಂಟಾಗಬಹುದು. ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 3:30 ರವರೆಗೆ

ಧನು 22 ನವೆಂಬರ್ - 21 ಡಿಸೆಂಬರ್

ಧನು 22 ನವೆಂಬರ್ - 21 ಡಿಸೆಂಬರ್

ಕೆಲಸದಲ್ಲಿ ಒತ್ತಡದ ದಿನವಾಗಿರಲಿದೆ. ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುವ ಅಭ್ಯಾಸವು ನಿಮ್ಮ ಮೇಲಧಿಕಾರಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹಣಕಾಸಿನ ಸ್ಥಿತಿಯು ನಿಮ್ಮ ಆಸಕ್ತಿಯ ಕೆಲವು ವಿಷಯಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಮಕ್ಕಳ ಸಾಧನೆ ಅತ್ಯುತ್ತಮವಾಗಿರುವುದರಿಂದ ನಿಮಗೆ ಹೆಮ್ಮೆ ಎನಿಸುತ್ತದೆ. ಕ್ರೀಡೆಯಲ್ಲಿರುವವರು ನಂಬಲಾಗದ ಪ್ರದರ್ಶನವನ್ನು ತೋರಿಸುತ್ತಾರೆ. ಪೋಷಕರು ಸಣ್ಣ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ಹೆಚ್ಚಿನ ಗ್ರಾಹಕರನ್ನು ಭೇಟಿಯಾಗುವುದರಿಂದ ಉದ್ಯಮಿಗಳಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸಲು ನೀವು ಪ್ರಯತ್ನಿಸಬಹುದು, ಆದರೆ ಅದನ್ನು ಕುಟುಂಬದಲ್ಲಿ ಸಮ್ಮತಿಸುವುದಿಲ್ಲ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಾಮಾನ್ಯವಾಗಿ ವರ್ತಿಸಲು ಪ್ರಯತ್ನಿಸಿ. ಒತ್ತಡವನ್ನು ತಪ್ಪಿಸಲು ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟ ಬಣ್ಣ: ಕಡುಕೆಂಪು

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 2:15 ರವರೆಗೆ

ಮಕರ 22 ಡಿಸೆಂಬರ್ - 19 ಜನವರಿ

ಮಕರ 22 ಡಿಸೆಂಬರ್ - 19 ಜನವರಿ

ಕೆಲಸದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ, ಅದ್ಭುತ ಪ್ರದರ್ಶನ ನೀಡುತ್ತಾರೆ. ನಿಮ್ಮ ಸಂಗಾತಿ ಬೆಂಬಲಿಸುವ ಕಾರಣ ನೀವು ಆರ್ಥಿಕವಾಗಿ ಯಾರಿಗಾದರೂ ಸಹಾಯ ಮಾಡಬಹುದು. ಜೀವನದಲ್ಲಿ ಉತ್ತಮ ಸಾಧನೆ ಮಾಡಲು ನೀವು ವ್ಯಾಪಾರದಲ್ಲಿ ಅದ್ಭುತ ಅವಕಾಶವನ್ನು ಪಡೆಯಬಹುದು. ಅನಿರೀಕ್ಷಿತ ಪ್ರಯಾಣದಿಂದ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಉದ್ಯಮಿಗಳು ಪ್ರಯಾಣದಲ್ಲಿ ನಿರತರಾಗಿರುತ್ತಾರೆ. ಬೆಳಿಗ್ಗೆ ನಡಿಗೆ ಅಥವಾ ಯೋಗದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 7:00 ರವರೆಗೆ

ಕುಂಭ 20 ಜನವರಿ - 18 ಫೆಬ್ರವರಿ

ಕುಂಭ 20 ಜನವರಿ - 18 ಫೆಬ್ರವರಿ

ನಿಮ್ಮ ಸಹೋದ್ಯೋಗಿ ಚುರುಕಿನಿಂದ ನೀವು ಕೆಲಸದಲ್ಲಿ ಅಡೆತಡೆಗಳನ್ನು ತಪ್ಪಿಸಿಕೊಳ್ಳುತ್ತೀರಿ. ನಿಮಗೆ ಉತ್ತಮ ಅವಕಾಶ ಸಿಗುವುದರಿಂದ ನಿಮ್ಮ ಮನೆಯನ್ನು ಬದಲಾಯಿಸಲು ನೀವು ಯೋಜಿಸಬಹುದು. ನಿರ್ಧಾರಗಳು ಆತುರದಿಂದ ತೆಗೆದುಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ವಿಷಯಗಳು ತಪ್ಪಾಗಬಹುದು. ನಿಮ್ಮ ಸಂಗಾತಿಗೆ ನೀವು ದುಬಾರಿ ಏನನ್ನಾದರೂ ಖರೀದಿಸಬಹುದು, ಅವರ ಕಠಿಣ ಪರಿಶ್ರಮವನ್ನು ಅರಿತುಕೊಳ್ಳಬಹುದು. ನಿಕಟ ಸಂಬಂಧದಲ್ಲಿ ಹಿಂದಿನ ದ್ವೇಷದಿಂದ ದೂರವಿರುವುದು ಮತ್ತು ಇತರೆ ವಿಷಯಗಳನ್ನು ನಿರ್ವಹಿಸುವುದು ಉತ್ತಮ. ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿರುತ್ತಾರೆ. ನಿಮ್ಮ ಸಂಗಾತಿಯು ಅವರ ಗುರಿಯನ್ನು ಸಾಧಿಸುವರು. ಇದು ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನವಾಗಿರುತ್ತದೆ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 38

ಅದೃಷ್ಟ ಸಮಯ: ಮಧ್ಯಾಹ್ನ 2: 15 ರಿಂದ 7:20 ರವರೆಗೆ

ಮೀನ 19 ಫೆಬ್ರವರಿ - 20 ಮಾರ್ಚ್

ಮೀನ 19 ಫೆಬ್ರವರಿ - 20 ಮಾರ್ಚ್

ವ್ಯವಹಾರದ ದೃಷ್ಟಿಯಿಂದ ಇದು ಪ್ರಯೋಜನಕಾರಿ ದಿನವಾಗಿರುತ್ತದೆ ಏಕೆಂದರೆ ನೀವು ಪ್ರಮುಖ ಒಪ್ಪಂದವನ್ನು ಬೇಧಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮದಿಂದ ವಿಷಯಗಳು ಅನುಕೂಲಕರವಾಗಿರುತ್ತದೆ. ಭವಿಷ್ಯಕ್ಕೆ ಸಂಬಂಧಿಸಿದಂತೆ ಸಂಗಾತಿಯೊಂದಿಗೆ ನೀವು ಪ್ರಮುಖ ವಿಷಯಗಳನ್ನು ಚರ್ಚಿಸಬಹುದು. ದೈಹಿಕ ಸ್ವಾಸ್ಥ್ಯ ಮತ್ತು ಆರೋಗ್ಯಕರವಾಗಿರಲು ದಿನವನ್ನು ವ್ಯಾಯಾಮದಿಂದ ಪ್ರಾರಂಭಿಸಿ. ಸಂಜೆಯ ಹೊತ್ತಿಗೆ ಕುಟುಂಬ ವಿಹಾರವು ಆಸಕ್ತಿದಾಯಕವಾಗಿರುತ್ತದೆ.

ಅದೃಷ್ಟ ಬಣ್ಣ: ತಿಳಿಬಣ್ಣ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 6:30 ರಿಂದ ಸಂಜೆ 4:00 ರವರೆಗೆ

English summary

Daily Horoscope 16 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
Story first published: Monday, September 16, 2019, 11:31 [IST]
X