Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿವಾರದ ದಿನ ಭವಿಷ್ಯ (14-09-2019)
ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ಇಂದು ನಿಮಗೆ ವಿಶ್ರಾಂತಿ ದೊರೆಯುವುದು. ಯಾವುದೇ ಕೆಲಸದಲ್ಲಿ ಬಾಕಿ ಇರದ ಕಾರಣ ಕೆಲಸದ ಒತ್ತಡ ಇರದು. ಕಠಿಣ ಪರಿಶ್ರಮವು ನಿಮಗೆ ಹೆಸರನ್ನು ತಂದುಕೊಡುವುದು. ಮೇಲಾಧಿಕಾರಿಗಳಿಂದ ಉಡುಗೊರೆ ದೊರೆಯುವ ಸಾಧ್ಯತೆಗಳಿವೆ. ಪಾಲುದಾರರ ಸಹಕಾರ ಹಾಗೂ ಬೆಂಬಲದೊಂದಿಗೆ ಹೂಡಿಕೆಯ ಬಗ್ಗೆ ಯೋಚಿಸ ಬೇಕಾಗುವುದು. ಸೂಕ್ತ ಯೋಜನೆ ಅಥವಾ ನಿರ್ಧಾರವನ್ನು ಕೈಗೊಳ್ಳದೆ ಇದ್ದರೆ ಹಣಕಾಸಿನ ವಿಷಯದಲ್ಲಿ ಅನಾನುಕೂಲತೆಯನ್ನು ಅನುಭವಿಸುವಿರಿ. ಉದ್ಯೋಗದ ನಿಮಿತ್ತ ದೂರ ಪ್ರದೇಶಗಳಿಗೆ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಮಕ್ಕಳು ಶೈಕ್ಷಣಿಕ ವಿಷಯದಲ್ಲಿ ಮುಂದೆ ಸಾಗುವರು. ಸಂಗಾತಿಯ ಉತ್ತಮ ಬೆಂಬಲ ಹಾಗೂ ಸಹಕಾರ ದೊರೆಯುವುದರಿಂದ ಕುಟುಂಬದಲ್ಲಿ ನೆಮ್ಮದಿ ದೊರೆಯುವುದು. ನಿಮ್ಮ ಪ್ರೀತಿ ಪಾತ್ರರಿಗೆ ದುಬಾರಿ ಮೊತ್ತದ ಉಡುಗೊರೆ ನೀಡುವುದರಿಂದ ನಿಮ್ಮನ್ನು ಪರಸ್ಪರ ಹತ್ತಿರ ತರುವುದು. ಪ್ರೇಮಿಯೊಂದಿಗೆ ಪ್ರಣಯದ ಸಮಯವನ್ನು ಕಳೆಯುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಮುಂಜಾನೆ ವ್ಯಯಾಮ ಮತ್ತು ವಾಕ್ ನಿಂದ ಪ್ರಾರಂಭಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ನಂಬರ್: 10
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 8:00ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ
ನಿಮ್ಮ ಮುಗ್ಧತೆಯ ಸ್ವಭಾವವು ಕೆಲವು ಸಂಗತಿಗಳನ್ನು ವಿರೋಧಿಸುವಂತೆ ಮಾಡುವುದು. ವಿಶೇಷವಾಗಿ ಕೆಲಸದ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ತಡೆಯನ್ನು ಉಂಟುಮಾಡಬಹುದು. ನೀವು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿರ್ವಹಿಸಬೇಕು. ಎಂತಹ ಸಂಗತಿಯಲ್ಲಾದರೂ ನೀವು ಆದಷ್ಟು ತಾಳ್ಮೆ ಹಾಗೂ ಸಹನೆಯನ್ನು ತೋರಬೇಕು. ನಿಮ್ಮ ನಿಕಟ ಸಂಬಂಧಿಗಳು ನಿಮ್ಮಿಂದ ಹಣ ಸಹಾಯ ಪಡೆಯಬಹುದು. ನಿಮ್ಮ ವ್ಯವಹಾರದ ಕೆಲಸವು ಅಪೂರ್ಣವಾಗಿರುವುದರಿಂದ ಉದ್ಯಮಿಗಳು ಸವಾಲಿನ ದಿನವನ್ನಾಗಿ ಎದುರಿಸುವರು. ಸಂಗಾತಿಯ ಆರೋಗ್ಯವು ಏರಿಳಿತವನ್ನು ಹೊಂದುವ ಸಾಧ್ಯತೆಗಳಿವೆ. ಪ್ರೇಮಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಎಣ್ಣೆ ಪದಾರ್ಥದಿಂದ ದೂರ ಇರಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ನಂಬರ್: 8
ಅದೃಷ್ಟದ ಸಮಯ: ಮಧ್ಯಾಹ್ನ 12:00 ರಿಂದ ರಾತ್ರಿ 7:00ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್
ಉದ್ಯಮಿಗಳಿಗೆ ಇಂದು ಅತ್ಯುತ್ತಮವಾದ ದಿನ. ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವುದರ ಮೂಲಕ ಹೊಸ ಯೋಜನೆಯನ್ನು ಕೈಗೊಳ್ಳುವಿರಿ. ಮಾನಸಿಕವಾಗಿ ನಿರಾಳತೆಯನ್ನು ಅನುಭವಿಸುವಿರಿ. ನೀವು ಹೊಸ ಆಸ್ತಿಯನ್ನು ಖರೀದಿಸುವ ನಿರೀಕ್ಷೆ ಇದೆ. ಉದ್ಯೋಗಿಗಳಿಗೆ ಭೋನಸ್ ಸಿಗುವ ಸಾಧ್ಯತೆಗಳಿವೆ. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಅನುಕೂಲಕರ ಹಾಗೂ ಲಾಭದ ದಿನ. ಇಷ್ಟು ದಿನ ನಿರ್ಬಂಧಿತವಾಗಿರುವ ಹಣವು ದೊರೆಯುವುದು. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಕಾಳಜಿ ಹಾಗೂ ತಿಳುವಳಿಕೆಯನ್ನು ಹೊಂದಿರುತ್ತಾರೆ. ಸಕ್ಕರೆ ಕಾಯಿಲೆ ಇರುವವರು ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಇಂದು ಸಂತೋಷದ ವಾತಾವರಣ ನೆಲೆಸುವುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ನಂಬರ್: 7
ಅದೃಷ್ಟದ ಸಮಯ: ಸಂಜೆ 4:00 ರಿಂದ ರಾತ್ರಿ 9:00ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ
ಇಷ್ಟು ದಿನ ನಿರ್ಬಂಧಿತವಾಗಿದ್ದ ಎಲ್ಲಾ ಹಣಗಳು ನಿಮ್ಮ ಕೈಸೇರುವುದು. ಈ ಕಾರಣದಿಂದ ಈ ದಿನ ನಿಮಗೆ ಲಾಭದಾಯಕ ದಿನ ಎನ್ನಬಹುದು. ನೀವು ಸಹಾಯದ ಅಗತ್ಯ ಇರುವವರಿಗೆ ಸಹಾಯ ಮಾಡುವಿರಿ. ನಿಕಟ ಸಂಬಂಧಿಗಳ ಹಸ್ತಕ್ಷೇಪವು ಕುಟುಂಬದಲ್ಲಿ ಸಂಘರ್ಷವನ್ನು ಸೃಷ್ಟಿಸುವುದು. ಜನರು ನಿಮ್ಮಲ್ಲಿ ಸೂಕ್ತ ಸಂಗತಿಗಳಿಗೆ ಸಲಹೆಯನ್ನು ಕೇಳುವರು. ಉದ್ಯೋಗಿಗಳು ಶ್ರಮದಾಯಕ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಇಂದು ನಿಮಗೆ ಕುಟುಂಬದಲ್ಲಿ ಶಾಂತಿಯುತವಾದ ದಿನ. ಸಂಗಾತಿಯೊಂದಿಗಿನ ಸಂಬಂಧ ಇನ್ನಷ್ಟು ಬಲಗೊಳ್ಳುವುದು. ಕೆಲವು ವಿಷಯಗಳಿಗೆ ನೀವು ನಿರ್ಲಕ್ಷ್ಯ ತೋರಿದರೆ ಸಮಸ್ಯೆ ಉದ್ಭವಿಸಬಹುದು. ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮುಂಜಾನೆ 11:45 ರಿಂದ ಸಂಜೆ 6:30ರ ವರೆಗೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್
ಇಂದು ನಿಮಗೆ ಒತ್ತಡದ ದಿನ. ಮಾನಸಿಕವಾಗಿ ಒತ್ತಡವನ್ನು ನಿರ್ವಹಿಸುವುದರಿಂದ ತಲೆನೋವು ಉಂಟಾಗುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳು ನಿಮ್ಮನ್ನು ನಿರ್ಲಕ್ಷಿಸುವ ಸಾಧ್ಯತೆಗಳಿವೆ. ನಿಮ್ಮ ವಿರುದ್ಧ ನಿಮ್ಮ ಮೇಲಾಧಿಕಾರಿಗಳು ನಿರ್ಣಯವನ್ನು ಕೈಗೊಳ್ಳಬಹುದು. ಇಂದು ಎಲ್ಲಾ ವಿಷಯದಲ್ಲೂ ಜಾಗರೂಕತೆ ಮತ್ತು ತಾಳ್ಮೆಯಿಂದ ಇರಬೇಕು. ಹಣಕಾಸಿನ ವಿಷಯದಲ್ಲಿ ಇಂದು ನಿಧಾನವಾದ ದಿನ ಎನ್ನಬಹುದು. ಆಪ್ತ ಸ್ನೇಹಿತನ ನಡುವೆ ಕಲಹ ಉಂಟಾಗಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮಧ್ಯಾಹ್ನ 12:45 ರಿಂದ ಸಂಜೆ 6:00ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ಇಂದು ನಿಮ್ಮ ಕೆಲಸದ ವಿಷಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುವುದು. ನಿಮ್ಮ ಮೇಲಾಧಿಕಾರಿಗಳು ಅತಿಯಾದ ನಿರೀಕ್ಷೆ ಹೊಂದಿರುತ್ತಾರೆ. ಹೊಸ ವ್ಯವಹಾರವನ್ನು ಇಂದು ಕೈಗೊಳ್ಳದಿರಿ. ಸಂಗಾತಿಯೊಂದಿಗಿನ ಸಣ್ಣವಾದಗಳು ಜಗಳಕ್ಕೆ ಕಾರಣವಾಗಬಹುದು. ಕುಟುಂಬದ ಪರಿಸ್ಥಿತಿ ಇಂದು ಸುಗಮವಾಗಿರುವುದಿಲ್ಲ. ನಿಮ್ಮ ಮಕ್ಕಳು ಸಹ ನಿಮ್ಮನ್ನು ಬೆಂಬಲಿಸುವುದಿಲ್ಲ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುವರು. ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಆರೋಗ್ಯದ ವಿಷಯದಲ್ಲಿ ಸುಧಾರಣೆ ಕಾಣುವಿರಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮುಂಜಾನೆ 9:00ರಿಂದ ರಾತ್ರಿ 8:20ರ ವರೆಗೆ.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ವೃತ್ತಿ ಕ್ಷೇತ್ರದಲ್ಲಿ ನೀವು ತೋರುವ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ಉದ್ಯಮಿಗಳು ಇಂದು ಕಾರ್ಯ ನಿರತರಾಗಿರುತ್ತಾರೆ. ಜೊತೆಗೆ ಆರ್ಥಿಕವಾಗಿಯೂ ಲಾಭವನ್ನು ಪಡೆದುಕೊಳ್ಳುವರು. ಜಂಟಿ ವ್ಯವಹಾರದಲ್ಲಿ ನಿಮ್ಮ ಹಣವನ್ನು ನೀವು ಪಡೆದುಕೊಳ್ಳಲು ಸೂಕ್ತವಾದ ದಿನ. ಭವಿಷ್ಯದ ಕೆಲವು ಯೋಜನೆಗಳಿಗೆ ಸೂಕ್ತ ಚಿಂತನೆ ನಡೆಸಿ. ಸಂಗಾತಿಯು ನಿಮಗೆ ಉತ್ತಮ ಬೆಂಬಲ ಹಾಗೂ ಕಾಳಜಿಯನ್ನು ತೋರುವರು. ನಿಮ್ಮ ತಾಯಿಯ ಆರೋಗ್ಯದಲ್ಲಿ ಸುಧಾರಣೆ ತೋರುವುದು. ಪ್ರೇಮಿಗಳು ಪ್ರೀತಿಯ ಸವಿಯನ್ನು ಪಡೆದುಕೊಳ್ಳುವರು.
ಅದೃಷ್ಟದ ಬಣ್ಣ: ಕೆನ್ನೇರಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ರಾತ್ರಿ 8:00ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಕೆಲಸವನ್ನು ಅತ್ಯಂತ ಶಕ್ತಿಯಿಂದ ನಿರ್ವಹಿಸುವಿರಿ. ಸಹೋದ್ಯೋಗಿಗಳು ಮತ್ತು ಮುಖ್ಯಸ್ಥರೊಂದಿಗೆ ನಿಮ್ಮ ಸಂಬಂಧ ಸುಧಾರಿಸುವುದು. ನಿಮ್ಮ ಪೋಷಕರು ನಿಮ್ಮ ಕಠಿಣ ಶ್ರಮವನ್ನು ಮೆಚ್ಚುತ್ತಾರೆ. ಆರ್ಥಿಕವಾಗಿ ನೀವು ಬೆಂಬಲವನ್ನು ಪಡೆದುಕೊಳ್ಳುವಿರಿ. ಕೆಲವು ನಿರ್ಧಾರವನ್ನು ಕೈಗೊಳ್ಳಲು ಮಕ್ಕಳು ನಿಮಗೆ ಸಹಾಯ ಮಾಡುತ್ತಾರೆ. ಈ ಹಿಂದೆ ಮಾಡಿದ ತಪ್ಪಿಗೆ ನೀವು ಕ್ಷಮೆಯಚಿಸುವಿರಿ. ನಿರ್ಗತಿಕರಿಗೆ ಅಥವಾ ಅಸಹಾಯಕರಿಗೆ ಬಟ್ಟೆಯ ದಾನ ಮಾಡಿ.
ಅದೃಷ್ಟದ ಬಣ್ಣ: ಇಂಡಿಗೊ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಮಧ್ಯಾಹ್ನ 1:30ರಿಂದ ಸಂಜೆ 3:30ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್
ನಿಮ್ಮ ಅತಿಯಾದ ಆತ್ಮವಿಶ್ವಾಸ ಮತ್ತು ಅಸಭ್ಯ ವರ್ತನೆಯಿಂದ ನೀವು ತೊಂದರೆಯನ್ನು ಎದುರಿಸಬೇಕಾಗುವುದು. ನಿಮ್ಮ ಸಹೋದ್ಯೋಗಿಗಳು ಕೆಲಸದ ವಿರುದ್ಧವಾಗಿ ವರ್ತಿಸುವರು. ಕಚೇರಿಯ ರಾಜಕಾರಣವು ನಿಮ್ಮ ಪರವಾಗಿ ಇರುವುದಿಲ್ಲ. ನಿಮ್ಮ ಸಂಗಾತಿಯ ಶ್ರಮ ಹಾಗೂ ಕೆಲಸವು ವ್ಯರ್ಥವಾಗುವುದರಿಂದ ಸಿಟ್ಟಿನ ಮನೋಭಾವ ತೋರುವರು. ನಿಮ್ಮ ಮಕ್ಕಳು ಸಹ ನಿಮ್ಮ ನಡವಳಿಕೆಯನ್ನು ಸಹಿಸುವುದಿಲ್ಲ. ಜೊತೆಗೆ ಆಕ್ರಮಣ ಕಾರಿ ಪ್ರವೃತ್ತಿಯನ್ನು ತೋರುವರು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ನೀವು ದಿನದ ಆರಂಭವನ್ನು ಧ್ಯಾನದಿಂದ ಪ್ರಾರಂಭಿಸಿ. ಮಾನಸಿಕವಾಗಿ ನೆಮ್ಮದಿ ದೊರೆಯುವುದು.
ಅದೃಷ್ಟದ ಬಣ್ಣ: ವೈನ್ ಬಣ್ಣ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮುಂಜಾನೆ 8:00 ರಿಂದ ಮಧ್ಯಾಹ್ನ2:15 ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ
ನಿಮ್ಮ ನಿರೀಕ್ಷೆಗೆ ತಕ್ಕಂತೆ ನಿಮ್ಮ ಸಹೋದ್ಯೋಗಿಗಳು ಇರುವುದಿಲ್ಲ. ನೀವು ಅನೇಕ ಸಂಗತಿಯಲ್ಲಿ ಸ್ವತಂತ್ರ ನಿರ್ಧಾರವನ್ನು ಕೈಗೊಳ್ಳಬೇಕು. ಕಠಿಣ ಪರಿಶ್ರಮವು ನಿಮಗೆ ಯಶಸ್ಸು ಹಾಗೂ ಲಾಭವನ್ನು ತಂದುಕೊಡುವುದು. ಹಣಕಾಸಿನ ವಿಷಯದಲ್ಲಿ ನಿಮಗೆ ಇಂದು ಸಾಮಾನ್ಯವಾದ ದಿನ. ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದಲ್ಲಿ ಅಸಾದಾರಣ ಸಾಧನೆಯನ್ನು ತೋರುವರು. ಇದರಿಂದ ಪೋಷಕರು ಅತ್ಯಂತ ಹೆಮ್ಮೆಯನ್ನು ತೋರುವರು. ಕೆಲವು ಸಂಗತಿಗೆ ಸಂಬಂಧಿಸಿದಂತೆ ನೀವು ನಿರಾಳತೆಯನ್ನು ಅನುಭವಿಸುವಿರಿ. ಪ್ರೇಮಿಗಳ ನಡುವೆ ಸಣ್ಣ ಬಿರುಕು ಮೂಡುವ ಸಾಧ್ಯತೆಗಳಿವೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ಸಮಯ: ಮಧ್ಯಾಹ್ನ 2:00ರಿಂದ ಸಂಜೆ 7:00ರ ವರೆಗೆ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ನೀವು ತೋರುವ ಸಣ್ಣ ತಾಳ್ಮೆಯು ಸಹ ಅದ್ಭುತವನ್ನು ಉಂಟುಮಾಡಬಹುದು. ಇಂದು ನೀವು ಸಂತೋಷವನ್ನು ಅನುಭವಿಸುವ ಮನಃಸ್ಥಿತಿಯಲ್ಲಿ ಇರುತ್ತೀರಿ. ಉದ್ಯಮಿಗಳು ಕೆಲಸಕ್ಕೆ ಸಂಬಂಧಿಸಿದಂತೆ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಕೈಗೊಳ್ಳಬಹುದು. ನಿಮ್ಮ ಆಲೋಚನೆಗಳನ್ನು ನಿಕಟ ಸಂಬಂಧಿಗಳೊಂದಿಗೆ ಹಂಚಿಕೊಳ್ಳಿ. ಕಲವು ಪ್ರಮುಖ ಸಂಗತಿಗೆ ಮಾರ್ಗದರ್ಶನವನ್ನು ಪಡೆದುಕೊಳ್ಳುವಿರಿ. ಹಿರಿಯರು ತೀರ್ಥಯಾತ್ರೆಯನ್ನು ಕೈಗೊಳ್ಳಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಮಧ್ಯಾಹ್ನ 7:15 ರಿಂದ ಸಂಜೆ 7:20ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಸಂಗಾತಿಯ ಬೆಂಬಲದೊಂದಿಗೆ ನೀವು ನಿಮ್ಮ ಮನೆಯ ಒಳಾಂಗಣದ ಬದಲಾವಣೆಯನ್ನು ಮಾಡುವಿರಿ. ಹೆತ್ತವರ ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಉಂಟಾಗಬಹುದು. ಇದರಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಕ್ರೀಡಾ ಪಟುಗಳು ಅದ್ಭುತ ಪ್ರದರ್ಶನ ನೀಡುವರು. ಹಳೆಯ ಆಸ್ತಿಯಿಂದ ಲಾಭವನ್ನು ಪಡೆಯುವಿರಿ. ಇಂದು ನಿಮಗೆ ಹಣಕಾಸಿನ ವಿಷಯದಲ್ಲಿ ಉತ್ತಮವಾದ ದಿನ. ಉದ್ಯಮಿಗಳಿಗೆ ಇಂದು ಉತ್ತಮವಾದ ದಿನ. ಒಡ ಹುಟ್ಟಿದವರು ಹಣಕಾಸಿಗೆ ಸಂಬಂಧಿಸಿದ ಸಲಹೆಯನ್ನು ಪಡೆದುಕೊಳ್ಳುವರು. ದಿನದ ಅಂತ್ಯದ ವೇಳೆಗೆ ಆಲಸ್ಯ ಪ್ರವೃತ್ತಿ ನಿಮ್ಮನ್ನು ಕಾಡುವುದು.
ಅದೃಷ್ಟದ ಬಣ್ಣ: ಕ್ರೀಮ್
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಸಂಜೆ 6:30 ರಿಂದ ಸಂಜೆ 4:00ರ ವರೆಗೆ.



Click it and Unblock the Notifications











