Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧವಾರದ ದಿನ ಭವಿಷ್ಯ (13-11-2019)
ಇಂದು ಸಾಮಾನ್ಯವಾಗಿ ಎಲ್ಲರೂ ಕೆಲಸದ ಒತ್ತಡದಲ್ಲಿಯೇ ಮುಳುಗಿರುತ್ತಾರೆ. ಈ ಒತ್ತಡದ ಬದುಕಿನ ನಡುವೆಯೂ ಯಾವೆಲ್ಲಾ ಬದಲಾವಣೆಯನ್ನು ನಾವು ಕಾಣಬಹುದು? ಹೊಸದಾದ ಯಾವ ತಿರುವು ನಮ್ಮನ್ನು ಆಕರ್ಷಿಸಲಿದೆ? ಎನ್ನುವುದನ್ನು ಅರಿಯಬೇಕೆಂದುಕೊಂಡಿದ್ದರೆ ಇಂದಿನ ರಾಶಿ ಭವಿಷ್ಯವನ್ನು ಅರಿಯಿರಿ...


ಮೇಷ: 21 ಮಾರ್ಚ್ - 19 ಏಪ್ರಿಲ್
ಆರ್ಥಿಕ ವಿಷಯಗಳಲ್ಲಿ ದಿನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಆದಾಯದ ಮೂಲದಿಂದಾಗಿ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಇಂದು ಹೆಚ್ಚುವರಿ ಹಣವನ್ನು ಗಳಿಸಲು ಸಹ ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ದೊಡ್ಡ ಜವಾಬ್ದಾರಿಯನ್ನು ನೀಡಬಹುದು. ನಿಮ್ಮ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದು ಉತ್ತಮ. ವ್ಯಾಪಾರಸ್ಥರಿಗೆ ಇಂದು ಹೂಡಿಕೆಗೆ ಉತ್ತಮ ಅವಕಾಶಗಳು ಸಿಗಬಹುದು. ಇಂದು ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಇದು ನಿಮಗೆ ಸಂತೋಷವನ್ನು ನೀಡುತ್ತದೆ. ಜೀವನ ಸಂಗಾತಿಯ ಮನಸ್ಥಿತಿ ಇಂದು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ.
ಅದೃಷ್ಟ ಬಣ್ಣ: ತಿಳಿ ನೀಲಿ
ಅದೃಷ್ಟ ಸಂಖ್ಯೆ: 18
ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ 10:00 ರವರೆಗೆ

ವೃಷಭ ರಾಶಿ: 20 ಏಪ್ರಿಲ್ - 20 ಮೇ
ಹಣಕಾಸಿನ ಸಮಸ್ಯೆಗಳು ಇಂದು ಸರಿ ಹೋಗಬಹುದು ಮತ್ತು ಹಠಾತ್ ಆರ್ಥಿಕ ಲಾಭದಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಸುಧಾರಿಸುತ್ತವೆ. ನಿಮ್ಮ ಅನಾರೋಗ್ಯದಿಂದಾಗಿ ಪ್ರಮುಖ ಕಾರ್ಯಗಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಮಕ್ಕಳ ಆರೋಗ್ಯ ಸಮಸ್ಯೆಗಳು ಸಹ ಬರುವ ನಿರೀಕ್ಷೆಯಿದೆ. ಕುಟುಂಬಕ್ಕೆ ಸಂಬಂಧಿಸಿದ ಪರಿಸ್ಥಿತಿಗಳು ಒತ್ತಡವನ್ನುಂಟುಮಾಡುತ್ತವೆ. ಕುಟುಂಬ ಸದಸ್ಯರ ನಡುವಿನ ವಿವಾದದಿಂದಾಗಿ ಮನೆಯಲ್ಲಿ ತೊಂದರೆಯಾಗುತ್ತದೆ. ಸಂಗಾತಿಯ ನಡುವೆ ಸ್ವಲ್ಪ ಕಹಿ ಇರಬಹುದು ಇದು ನಿಮ್ಮಿಬ್ಬರ ಪ್ರತ್ಯೇಕತೆಗೆ ಕಾರಣವಾಗಬಹುದು. ದಿನ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 19
ಅದೃಷ್ಟ ಸಮಯ: ಸಂಜೆ 4:00 ರಿಂದ 10:20 ರವರೆಗೆ

ಮಿಥುನ: 21 ಮೇ - 20 ಜೂನ್
ಇಂದು ನಿಮ್ಮ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಹಣವನ್ನು ಗಳಿಸಲು ಸಹ ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಷಯಗಳು ನಿಮ್ಮ ಪರವಾಗಿಯೇ ನಡೆಯುತ್ತಿವೆ. ನಿಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಹಿರಿಯರು ಮೆಚ್ಚುತ್ತಾರೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ತಾಯಿ, ತಂದೆ, ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ, ಆದರೆ ನಿಮ್ಮ ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಒರಟುತನ ಇರಬಹುದು. ಕಾನೂನು ವಿಷಯಗಳಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ದೊಡ್ಡ ಯಶಸ್ಸನ್ನು ಪಡೆಯುವುದರಿಂದ ಅವರಿಗೆ ದಿನವು ಒಳ್ಳೆಯದು. ಇಂದು ಯಾವುದೇ ಕಾರಣಗಳಿಗಾಗಿ ನೀವು ದುಃಖಿತರಾಗಬಹುದು. ಸಂಜೆ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 15
ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:30 ರವರೆಗೆ

ಕರ್ಕ: 21 ಜೂನ್ - 22 ಜುಲೈ
ಆರ್ಥಿಕವಾಗಿ ಇಂದು ಉತ್ತಮ ದಿನವಲ್ಲ. ಇಂದು ನೀವು ಯಾವುದೇ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ಪ್ರೀತಿಪಾತ್ರರ ಜತೆಗೆ ಸಮಯ ಕಳೆಯುವುದರಿಂದ ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಸಂಬಂಧಿಕರು ಇಂದು ಮನೆಗೆ ಆಗಮಿಸುವ ನಿರೀಕ್ಷೆಯಿದ್ದು ಅದು ವಾತಾವರಣವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಇಂದು ನಿಮ್ಮ ಸಂಗಾತಿಯಿಂದ ವಿಶೇಷ ಉಡುಗೊರೆಯನ್ನು ಪಡೆಯಬಹುದು. ಕೆಲಸದಲ್ಲಿ ದಿನವು ಹೆಚ್ಚು ಕಾರ್ಯನಿರತವಾಗಿರುತ್ತದೆ. ಕಚೇರಿಯಲ್ಲಿ ಪ್ರಮುಖ ಜವಾಬ್ದಾರಿಯನ್ನು ಪಡೆಯಬಹುದು. ಕೆಲಸವನ್ನು ಕಠಿಣ ಪರಿಶ್ರಮದಿಂದ ಪೂರ್ಣಗೊಳಿಸುವುದು ಉತ್ತಮ. ಉದ್ಯಮಿಗಳು ಲಾಭ ಪಡೆಯುವ ಸಾಧ್ಯತೆ ಕಡಿಮೆ. ಆರೋಗ್ಯವು ಉತ್ತಮವಾಗಿರುತ್ತದೆ ಆದರೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 4
ಅದೃಷ್ಟ ಸಮಯ: ಸಂಜೆ 7:30 ರಿಂದ 10:05 ರವರೆಗೆ

ಸಿಂಹ: 23 ಜುಲೈ - 22 ಆಗಸ್ಟ್
ಚರ್ಚೆಯಿಂದ ದೂರವಿರಲು ಪ್ರಯತ್ನಿಸಿ ಇಲ್ಲದಿದ್ದರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಆರ್ಥಿಕ ವಿಷಯಗಳಲ್ಲಿ ದಿನ ಸಾಮಾನ್ಯವಾಗಿರಲಿದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇಂದು ಬರಬಹುದು ಬುದ್ಧಿವಂತಿಕೆಯಿಂದ ಪರಿಹರಿಸಿ. ಒತ್ತಡದಿಂದಾಗಿ ಇಂದು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿ ಕೆಲವು ವಾದಗಳನ್ನು ಎದುರಿಸಬಹುದು. ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ಗಮನ ಹರಿಸುವ ಅವಶ್ಯಕತೆಯಿದೆ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 12
ಅದೃಷ್ಟ ಸಮಯ: ಬೆಳಿಗ್ಗೆ 8:20 ರಿಂದ ಮಧ್ಯಾಹ್ನ 2:00 ರವರೆಗೆ

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್
ಇಂದು ನಿಮಗೆ ಒಳ್ಳೆಯ ದಿನ. ಇಂದು ಆತ್ಮವಿಶ್ವಾಸದಿಂದ ಇರುತ್ತೀರಿ ಮತ್ತು ನಿಮ್ಮ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಇಂದು ಹೊಸ ಕಾರ್ಯಕ್ಕಾಗಿ ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಕೆಲವು ದೊಡ್ಡ ಲಾಭಗಳನ್ನು ಪಡೆಯುವ ಸಾಧ್ಯತೆಗಳೂ ಇವೆ. ನಿಮ್ಮ ಪ್ರಮುಖ ಕಾರ್ಯಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ಪರಿಹರಿಸುವುದರಿಂದ ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ. ನಿಮ್ಮ ಕುಟುಂಬಕ್ಕೆ ಸಮಯವನ್ನು ನೀಡಿ ಮತ್ತು ನಿಮ್ಮ ಜೀವನದಲ್ಲಿ ಅವರ ಮಹತ್ವವನ್ನು ಅರಿತುಕೊಳ್ಳಿ. ಒಡಹುಟ್ಟಿದವರ ನಡುವೆ ಕೆಲವು ಸೈದ್ಧಾಂತಿಕ ವ್ಯತ್ಯಾಸಗಳು ಉದ್ಭವಿಸಬಹುದು ಆದರೆ, ಅದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ದಾಂಪತ್ಯ ಜೀವನದಲ್ಲಿ ಸಂತೋಷವು ಇರುತ್ತದೆ ಮತ್ತು ನೀವು ಪರಸ್ಪರ ಸಂಪೂರ್ಣ ಬೆಂಬಲವನ್ನು ನೀಡುತ್ತೀರಿ.
ಅದೃಷ್ಟ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 27
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್
ವಿದ್ಯಾರ್ಥಿಗಳಿಗೆ ಶುಭ ದಿನ. ಕೆಲವು ಉತ್ತಮ ಸಾಧನೆಗಳು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಆರ್ಥಿಕ ದೃಷ್ಟಿಯಿಂದ ದಿನ ಲಾಭದಾಯಕವಲ್ಲ. ಕೆಲವು ದೊಡ್ಡ ಖರ್ಚುಗಳ ಸಾಧ್ಯತೆಗಳಿವೆ. ಇಂದು ಕೆಲವು ಯೋಜಿತ ಕಾರ್ಯಗಳು ಪೂರ್ಣಗೊಳ್ಳಬಹುದು ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಕಚೇರಿಯಲ್ಲಿ ಆಕ್ರಮಣಕಾರಿ ಸ್ವಭಾವವನ್ನು ತಪ್ಪಿಸಬೇಕು ಇಲ್ಲದಿದ್ದರೆ ಉನ್ನತ ಅಧಿಕಾರಿಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮಿಗಳು ಕೆಲವು ಪ್ರಯೋಜನಗಳನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯ ಪ್ರೀತಿ ಮತ್ತು ಸಹಕಾರವು ನಿಮಗೆ ಸಕಾರಾತ್ಮಕ ಶಕ್ತಿ ತುಂಬುತ್ತದೆ. ಆರೋಗ್ಯವು ಪರಿಪೂರ್ಣವಾಗಿರುತ್ತದೆ.
ಅದೃಷ್ಟ ಬಣ್ಣ: ತಿಳಿ ಹಸಿರು
ಅದೃಷ್ಟ ಸಂಖ್ಯೆ: 4
ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ ರಾತ್ರಿ 8:00 ರವರೆಗೆ

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್
ಜಗತ್ತಿನಲ್ಲಿ ಪರಿಹರಿಸಲಾಗದ ಯಾವುದೇ ಸಮಸ್ಯೆಗಳಿಲ್ಲ ಎಂಬ ಅಂಶವನ್ನು ನೀವು ಅರ್ಥಮಾಡಿಕೊಳ್ಳಬೇಕು. ಸಣ್ಣ ವಿಷಯಗಳನ್ನು ನಿರ್ಲಕ್ಷಿಸಲು ಕಲಿಯಿರಿ ಆಗ ಮಾತ್ರ ಮುಂದುವರಿಯಲು ಸಾಧ್ಯವಾಗುತ್ತದೆ. ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ, ಇಲ್ಲವಾದಲ್ಲಿ ನಂತರ ವಿಷಾದಿಸಬಹುದು. ವ್ಯವಹಾರದಲ್ಲಿ ಇಂದು ಯಾವುದೇ ವಿಶೇಷ ಪ್ರಯೋಜನಗಳು ಇರುವುದಿಲ್ಲ, ನಿರಾಶೆಗೊಳ್ಳಬೇಡಿ ಪ್ರಾಮಾಣಿಕವಾಗಿ ಕೆಲಸವನ್ನು ಮುಂದುವರಿಸಿ. ಉದ್ಯೋಗಿಗಳಿಗೆ ದಿನ ಸಾಮಾನ್ಯವಾಗಲಿದೆ. ನಿಮ್ಮ ಕಾರ್ಯಗಳನ್ನು ಇಂದು ಪೂರ್ಣಗೊಳಿಸುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ. ನೀವು ಯಾವುದೇ ಮಾನಸಿಕ ಸಮಸ್ಯೆಗಳನ್ನು ಅನುಭವಿಸಿದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 30
ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ

ಧನು: 22 ನವೆಂಬರ್ - 21 ಡಿಸೆಂಬರ್
ಕೆಲಸದ ಸ್ಥಳದಲ್ಲಿ ಕೆಲವು ಉದ್ವಿಗ್ನತೆಗಳು ಉಂಟಾಗಬಹುದು. ಕಚೇರಿ ಅಥವಾ ವ್ಯವಹಾರದಲ್ಲಿ ಇಂದು ಕೆಲಸದ ಹೊರೆ ಸಹ ಹೆಚ್ಚಾಗಬಹುದು. ಮತ್ತೊಂದೆಡೆ ಇಂದು ಹೊಸದನ್ನು ಕಲಿಯುವ ಅವಕಾಶವನ್ನು ಸಹ ಪಡೆಯಬಹುದು. ದಿನದ ದ್ವಿತೀಯಾರ್ಧದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು ಆದರೆ ಸಕಾರಾತ್ಮಕ ಮನೋಭಾವದಿಂದ ಅದನ್ನು ತ್ವರಿತವಾಗಿ ಎದುರಿಸಲು ಸಾಧ್ಯವಾಗುತ್ತದೆ. ದಂಪತಿಗಳಿಗೆ ದಿನ ಅದ್ಭುತವಾಗಿದೆ. ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಇಂದು ನಿಮ್ಮ ಆದಾಯ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಐಕ್ಯತೆ ಉಳಿಯುತ್ತದೆ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 23
ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ 7:00 ರವರೆಗೆ

ಮಕರ: 22 ಡಿಸೆಂಬರ್ - 19 ಜನವರಿ
ವಿವಾಹಿತರ ಜೀವನವು ಶಾಂತಿ ಮತ್ತು ಸಾಮರಸ್ಯದಿಂದ ಇರುತ್ತದೆ. ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆ ಬೆಳೆಯುತ್ತದೆ. ನೀವು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೀರಿ ಎಂದು ಹೇಳಲು ಇದು ಸರಿಯಾದ ಸಮಯ. ಇಬ್ಬರಿಗೂ ಪ್ರಯಾಣಿಸುವ ಅವಕಾಶ ಇದೆ. ಸಂಗಾತಿಯ ತೋಳುಗಳಲ್ಲಿ ನೀವು ಸಂತೋಷವನ್ನು ಅನುಭವಿಸುವಿರಿ. ಆರ್ಥಿಕವಾಗಿ ದಿನವು ಪ್ರಯೋಜನಕಾರಿಯಾಗಲಿದೆ. ಬುದ್ಧಿವಂತಿಕೆಯಿಂದ ಹೆಚ್ಚುವರಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ವ್ಯಾಪಾರಿಗಳಿಗೆ ಆರ್ಥಿಕ ಲಾಭ ಇದೆ, ವ್ಯಾಪಾರವು ಬೆಳೆಯುವುದರಿಂದ ದಿನವು ಪ್ರಗತಿಪರವಾಗಿರುತ್ತದೆ. ತಂದೆಯ ವ್ಯವಹಾರದೊಂದಿಗೆ ನೀವು ಸಂಪರ್ಕ ಹೊಂದಿದ್ದರೆ, ಅವರ ಸಲಹೆಯಿಂದ ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ.
ಅದೃಷ್ಟ ಬಣ್ಣ: ಕಂದು
ಅದೃಷ್ಟ ಸಂಖ್ಯೆ: 28
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:30 ರವರೆಗೆ

ಕುಂಭ: 20 ಜನವರಿ - 18 ಫೆಬ್ರವರಿ
ಆರ್ಥಿಕ ರಂಗದಲ್ಲಿ ದಿನವು ಮಿಶ್ರ ಫಲಿತಾಂಶಗಳನ್ನು ಹೊಂದಿದೆ. ಇಂದು ಹಣ ಸಂಪಾದಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರೀತಿಯ ವಿಷಯಗಳಲ್ಲಿ ದಿನವು ಉತ್ತಮವಾಗಿಲ್ಲ. ನಿಮ್ಮ ಸಂಗಾತಿಯನ್ನು ಅನುಮಾನಿಸುವ ಅಭ್ಯಾಸವು ಸಂಬಂಧವನ್ನು ಕೊನೆಗೊಳಿಸಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯು ನಿಮ್ಮೊಂದಿಗೆ ಸಂತೋಷವಾಗಿಲ್ಲ ಮತ್ತು ಅವರ ಅಸಮಾಧಾನವನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ ಎಂದು ನೀವು ಭಾವಿಸುವಿರಿ. ಸಣ್ಣದೊಂದು ತಪ್ಪು ನಿಮ್ಮಿಬ್ಬರ ನಡುವೆ ವಿವಾದಗಳಿಗೆ ಕಾರಣವಾಗುವುದರಿಂದ ಜಾಗರೂಕರಾಗಿರಿ. ಪೋಷಕರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಗಮನಹರಿಸುವ ಕೊರತೆಯಿಂದಾಗಿ ಕೆಲವು ಕಾರ್ಯಗಳು ಅಪೂರ್ಣವಾಗಿ ಉಳಿಯಬಹುದು.
ಅದೃಷ್ಟ ಬಣ್ಣ: ಕಂದು
ಅದೃಷ್ಟ ಸಂಖ್ಯೆ: 9
ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 11:00 ರವರೆಗೆ

ಮೀನ: 19 ಫೆಬ್ರವರಿ - 20 ಮಾರ್ಚ್
ದಿನವು ಸಂತೋಷದಿಂದ ಇರಲಿದೆ. ನೀವು ಉದ್ವೇಗ-ಮುಕ್ತ ಮತ್ತು ಉತ್ತಮ ಮನಸ್ಥಿತಿಯಲ್ಲಿ ಇರುವಿರಿ. ಕೆಲಸದ ಸ್ಥಳದಲ್ಲಿ ಕೆಲವು ಒಳ್ಳೆಯ ವಿಷಯಗಳನ್ನು ನಿರೀಕ್ಷಿಸಲಾಗಿದೆ. ವ್ಯವಹಾರದಲ್ಲಿ ಸಹ ಲಾಭವನ್ನು ನಿರೀಕ್ಷಿಸಲಾಗಿದೆ. ಇಂದು ಬಾಕಿ ಇರುವ ಕೆಲವು ಕೆಲಸಗಳನ್ನು ಪ್ರಾರಂಭಿಸಲು ಮನಸ್ಸು ಮಾಡಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ಸಂಗಾತಿಯಿಂದ ಸುಂದರವಾದ ಉಡುಗೊರೆಯನ್ನು ಪಡೆಯುವ ಸಾಧ್ಯತೆಯಿದೆ, ಅದು ನಿಮ್ಮ ಮೇಲಿನ ಪ್ರೀತಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುಟುಂಬದೊಂದಿಗೆ ಹೊಂದಾಣಿಕೆ ಕೂಡ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ದಿನವು ಪ್ರಯೋಜನಕಾರಿಯಾಗಿದೆ. ನಿಮ್ಮ ಆಹಾರ ಮತ್ತು ಕುಡಿಯುವ ಅಭ್ಯಾಸದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬಹುದು ಅದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 39
ಅದೃಷ್ಟ ಸಮಯ: ಬೆಳಿಗ್ಗೆ 9:50 ರಿಂದ ಮಧ್ಯಾಹ್ನ 2:15 ರವರೆಗೆ



Click it and Unblock the Notifications











