Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಾರದ ದಿನ ಭವಿಷ್ಯ (12-09-2019)
ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ಈ ದಿನದ ಕೆಲಸ-ಕಾರ್ಯಗಳನ್ನು ಮುಗಿಸುತ್ತಿದ್ದಂತೆ ನೀವು ವಿಶ್ರಾಂತಿಯನ್ನು ಪಡೆಯಲು ಬಯಸುವಿರಿ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರು ನೋಡಬಹುದು. ಜೀವನದ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ನಿಮ್ಮ ಪಾಲಕರು ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಯನ್ನು ನೀಡುವರು. ನಿಮ್ಮ ಮಗುವಿನ ವಿದ್ಯಾಭ್ಯಾಸದ ಬಗ್ಗೆ ಒಂದಿಷ್ಟು ಚಿಂತೆಯನ್ನು ಕೈಗೊಳ್ಳುವಿರಿ. ವೃತ್ತಿ ಕ್ಷೇತ್ರದಲ್ಲಿ ಇರುವ ಒತ್ತಡವು ನಿಮಗೆ ತಲೆ ನೋವನ್ನು ಉಂಟುಮಾಡುವುದು. ನಿರಂತರವಾದ ಪ್ರಯಾಣವು ಉದ್ಯಮಿಗಳಲ್ಲಿ ಬೇಸರವನ್ನು ಮೂಡಿಸುವುದು. ಆದರೆ ಆರ್ಥಿಕವಾಗಿ ಲಾಭವನ್ನು ಪಡೆದುಕೊಳ್ಳುವರು. ಹಣಕಾಸಿನ ವಿಷಯದಲ್ಲಿ ಸುಧಾರಣೆಯನ್ನು ಕಂಡುಕೊಳ್ಳುವಿರಿ. ವ್ಯವಹಾರದಲ್ಲಿ ಲಾಭವನ್ನು ಗಳಿಸುವುದರಿಂದ ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಲು ಮುಂದಾಗುವಿರಿ. ಸ್ನೇಹಿತರೊಂದಿಗೆ ಒಂದಿಷ್ಟು ಸಮಯ ಕಳೆಯುವುದರಿಂದ ಮಾನಸಿಕವಾಗಿ ಚೈತನ್ಯ ಪಡೆದುಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣುವುದು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ನಂಬರ್: 25
ಅದೃಷ್ಟದ ಸಮಯ: ಮುಂಜಾನೆ 8:00ರಿಂದ ಮಧ್ಯಾಹ್ನ 3:00ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ
ಇಂದು ನೀವು ಒಂದು ಸುಂದರವಾದ ವಿಹಾರವನ್ನು ಯೋಜಿಸಬಹುದು. ಇಲ್ಲವೇ ಶಾಪಿಂಗ್ ಮಾಡಬಹುದು. ಇದರಿಂದು ಒಂದಿಷ್ಟು ಸಂತೋಷವನ್ನು ಅನುಭವಿಸುವಿರಿ. ಹಣಕಾಸಿನ ವಿಷಯದಲ್ಲಿ ನಿಮಗೆ ಒಂದಿಷ್ಟು ಲಾಭ ಉಂಟಾಗುವುದು. ಇದರಿಂದ ಉಪಯುಕ್ತ ಪ್ರಯೋಜನ ಪಡೆದುಕೊಳ್ಳುವಿರಿ. ನೀವು ನಿಮ್ಮ ಖರ್ಚಿನಲ್ಲಿ ನಿಯಂತ್ರಣವನ್ನು ಹೊಂದಿರಬೇಕು. ಅಂತೆಯೇ ಉಳಿತಾಯದ ಬಗ್ಗೆಯೂ ಒಂದಿಷ್ಟು ಗಮನ ನೀಡುವುದನ್ನು ಅಭ್ಯಾಸ ಮಾಡಿ. ಹಿರಿಯರೊಂದಿಗೆ ಮಾತನಾಡುವಾಗ ಎರಡು ಬಾರಿ ಯೋಚಿಸಿ ಮಾತನಾಡಿ. ಹೆತ್ತವರ ನಿರೀಕ್ಷೆಯಂತೆ ನೀವು ಸಾಧನೆಯನ್ನು ಮಾಡದೆ ಇರಬಹುದು. ಆದರೆ ನೋವನ್ನು ನೀಡಬಾರದು ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇರಲಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ನವ ವಿವಾಹಿತರು ಗಾಸಿಪ್ ಸಂಗತಿಯಿಂದ ದೂರ ಇರಿ. ಅದು ನಿಮಗೆ ನೋವನ್ನು ಉಂಟುಮಾಡುವುದು. ಒಳ್ಳೆಯ ಉದ್ದೇಶದಿಂದ ನೀವು ಇತರರಿಗೆ ಸಹಾಯ ಮಾಡುವಿರಿ. ಇತರರ ಸಂತೋಷಕ್ಕೆ ಸಹಾಯ ಮಾಡುವ ನಿಮಗೆ ಆನಂದವು ಲಭಿಸುವುದು. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯುವುದರಿಂದ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ದಿನದ ಪ್ರಾರಂಭವನ್ನು ದೇವರ ಪ್ರಾರ್ಥನೆಯಿಂದ ಆರಂಭಿಸಿ.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ನಂಬರ್: 10
ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 8:20ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್
ಅನೇಕ ದಿನಗಳಿಂದ ನೀವು ಸೂಕ್ತ ವೇಳಾ ಪಟ್ಟಿಯ ಸಹಾಯದಿಂದಲೇ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ ಕೆಲವು ವಿಷಯದಲ್ಲಿ ಕಡಿಮೆ ಅನುಭವ ದೊರೆಯುವುದು. ಕೆಲಸದ ಒತ್ತಡವು ನಿಮಗೆ ವಿಶ್ರಾಂತಿ ಪಡೆಯಲು ಪ್ರೇರೇಪಿಸುವುದು. ಕುಟುಂಬದವರೊಂದಿಗೆ ಸಣ್ಣ ಪ್ರವಾಸ ಕೈಗೊಂಡರೆ ಪುನಃಶ್ಚೇತನ ಪಡೆದುಕೊಳ್ಳುವಿರಿ. ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಿರಿ. ಹೆಚ್ಚುವರಿ ಹಣವನ್ನು ಪಡೆದುಕೊಳ್ಳುವುದರಿಂದ ಸಾಕಷ್ಟು ಸಮಸ್ಯೆಗಳು ಪರಿಹಾರ ಕಾಣುವುದು. ಸಕಾರಾತ್ಮಕವಾದ ಮನೋಭಾವವು ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಪ್ರೇರೇಪಿಸುವುದು. ಮಾನಸಿಕವಾಗಿ ದೃಢತೆ ಹೊಂದಿರುವುದರಿಂದ ಎಂತಹ ವಿಷಯಗಳನ್ನು ನೀವು ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳುವಿರಿ. ಕೆಲವು ಸಂದರ್ಭದಲ್ಲಿ ವಿಚಲತೆಯನ್ನು ಹೊಂದುವ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿ ಜನರು ಅಸೂಯೆ ಪಡಬಹುದು. ತಂದೆಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದರಿಂದ ಕುಟುಂಬದಲ್ಲಿ ಸಂತೋಷದ ಕಳೆ ನೆಲೆಸುವುದು. ನಿಮ್ಮ ಸಂಗಾತಿಯಿಂದ ಉತ್ತಮ ಬೆಂಬಲ ದೊರೆಯುವುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ನಂಬರ್: 17
ಅದೃಷ್ಟದ ಸಮಯ: ಮುಂಜಾನೆ 9:20ರಿಂದ ಮಧ್ಯಾಹ್ನ 1:30ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ
ಹೆಂಡತಿಯ ಸೂಕ್ತ ಸಹಕಾರ ದೊರೆಯದೆ ಇರುವುದರಿಂದ ವೈಯಕ್ತಿಕ ಜೀವನದಲ್ಲಿ ಒಂದಿಷ್ಟು ಅನಾನುಕೂಲದ ಪರಿಸ್ಥಿತಿಯನ್ನು ಎದುರಿಸುವಿರಿ. ನಿಮ್ಮ ಗೊಂದಲ ಹಾಗೂ ಸಮಸ್ಯೆಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳದ ಪರಿಸ್ಥಿತಿಯನ್ನು ಹೊಂದಿರುವುದಕ್ಕೆ ನೀವು ಅಸಮಧಾನಕ್ಕೆ ಒಳಗಾಗುವಿರಿ. ಜೊತೆಗೆ ಮಾನಸಿಕವಾಗಿ ಒತ್ತಡವನ್ನು ಅನುಭವಿಸುವಿರಿ. ಆದಷ್ಟು ಮೌನ ಹಾಗೂ ಶಾಂತಿಯಿಂದ ಇರಲು ಪ್ರಯತ್ನಿಸಿ. ಅದು ನಿಮ್ಮ ಅನೇಕ ಸಮಸ್ಯೆಗಳನ್ನು ದೂರ ಮಾಡುವುದು. ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸುಮ್ಮನೆ ಕುಳಿತುಕೊಳ್ಳದಿರಿ. ಮಕ್ಕಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯಿರಿ. ಸಂಧಿವಾತದಿಂದ ಬಳಲುತ್ತಿದ್ದವರು ಸಾಕಷ್ಟು ಜಾಗರೂಕತೆಯನ್ನು ವಹಿಸಬೇಕು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಮಧ್ಯಾಹ್ನ 1:25 ರಿಂದ ಮಧ್ಯಾಹ್ನ 3:00 ವರೆಗೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್
ಇಂದು ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭವನ್ನು ಹಾಗೂ ಅನುಕೂಲವನ್ನು ಪಡೆದುಕೊಳ್ಳುವಿರಿ. ಉತ್ತಮ ಬೆಳವಣಿಗೆಯು ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಸಹಾಯ ಮಾಡುವುದು. ಅದು ನಿಮಗೆ ಅತ್ಯುತ್ತಮ ಫಲವನ್ನು ನೀಡುವುದು. ನಿಕಟ ಸಂಬಂಧಿಗಳು ಅಥವಾ ಸ್ನೇಹಿತರಿಂದ ಹಣವನ್ನು ಪಡೆದುಕೊಳ್ಳುವಿರಿ. ಅದು ನಿಮಗೆ ದೈವ ಆಶೀರ್ವಾದ ಎನ್ನಬಹುದು. ನಿಮ್ಮ ಪ್ರೀತಿ ಪಾತ್ರರ ಕಲ್ಯಾಣದ ವಿಷಯದಲ್ಲಿ ಸಾಕಷ್ಟು ಶ್ರಮವನ್ನು ತೋರುವಿರಿ. ಪತ್ನಿ ಯೊಂದಿಗೆ ರಹಸ್ಯವನ್ನು ಮುಚ್ಚಿಡದಿರಿ. ದಿನದ ಮುಕ್ತಾಯದ ಸಮಯವು ನಿಮಗೆ ಸಾಕಷ್ಟು ಉತ್ತಮ ಫಲ ಹಾಗೂ ವಿಶ್ರಾಂತಿಯು ದೊರೆಯುವುದು. ನೀವು ನಿಮಗಾಗಿಯೂ ಸ್ವಲ್ಪ ಸಮಯವನ್ನು ಮೀಸಲಿಡಿ. ಉದ್ಯಮಿಗಳು ವ್ಯವಹಾರದಲ್ಲಿ ಸಾಮಾನ್ಯದ ದಿನವನ್ನು ಎದುರಿಸುವರು. ಸಂಬಂಧದಲ್ಲಿ ಇರುವವರು ಪ್ರಣಯದ ಸಂಜೆಯನ್ನು ಅನುಭವಿಸುವರು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮಧ್ಯಾಹ್ನ 12:00 ರಿಂದ ಮಧ್ಯಾಹ್ನ 3:45ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ನಿಮ್ಮ ಶ್ರಮದಾಯಕ ಕೆಲಸಕ್ಕೆ ಇಂದು ಬಹುಮಾನ ಹಾಗೂ ಪ್ರಶಂಸೆ ದೊರೆಯುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಸಲಹೆಯನ್ನು ಮೆಚ್ಚುವರು. ಅದು ನಿಮಗೆ ವಿಶೇಷವಾದ ಅನುಭವವನ್ನು ನೀಡುವುದು. ಕೆಲವು ವಿಷಯದಲ್ಲಿ ನೀವು ಗೊಂದಲ ಹಾಗೂ ಕಷ್ಟವನ್ನು ಅನುಭವಿಸಿದರೂ ನಿಧಾನವಾಗಿ ಅದು ಸಾಮಾನ್ಯ ಸ್ಥಿತಿಗೆ ಮರಳುವುದು. ಹೊಸ ಒಪ್ಪಂದವು ನಿಮ್ಮ ಹಾದಿಗೆ ಬರುವುದು. ಹೊಸ ಉದ್ಯೋಗವನ್ನು ಹುಡುಕುವವರಿಗೆ ಇಂದು ದೊರೆಯುವುದು. ನಿಮ್ಮ ಜೀವನದಲ್ಲಿ ಪಡೆದ ಅನುಭವಗಳು ಇಂದು ನಿಮಗೆ ಅನುಕೂಲವನ್ನುಂಟುಮಾಡುವುದು. ಹಣಕಾಸಿನ ವಿಷಯದಲ್ಲಿ ಸಾಮಾನ್ಯ ಪರಿಸ್ಥಿತಿಯನ್ನು ಎದುರಿಸುವಿರಿ. ಹಾಗಂತ ನೀವು ಹಣದ ಹಿಂದೆ ಓಡುವುದು ಉಚಿತವಲ್ಲ. ನಿಮ್ಮ ಶ್ರಮ ಹಾಗೂ ಸ್ಥಾನಕ್ಕೆ ಜನರು ಗೌರವ ನೀಡುವರು. ಅನಗತ್ಯ ವಿಷಯಗಳಿಗೆ ಚಿಂತಿಸದಿರಿ. ಉತ್ತಮ ಜೀವನವನ್ನು ಪಡೆಯಲು ನೀವು ಆದಷ್ಟು ಶಾಂತಿಯನ್ನು ತಾಳಿರಿ.
ಅದೃಷ್ಟದ ಬಣ್ಣ: ಕೆನ್ನೇರಳೆ ಬಣ್ಣ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಮುಂಜಾನೆ 7:00 ರಿಂದ ಮಧ್ಯಾಹ್ನ 11:20ರ ವರೆಗೆ.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಇಂದು ಅದೃಷ್ಟದ ದಿನವಾಗುವುದು. ಹೊಸ ವಿಷಯಗಳನ್ನು ಕಲಿಯುವಾಗ ಆದಷ್ಟು ಮುಕ್ತರಾಗಿರಿ. ಕೆಲಸದ ಆರಂಭದಲ್ಲಿ ಸಾಕಷ್ಟು ಗೊಂದಲಗಳು ಎದುರಾಗಬಹುದು. ನೀವು ಮಾಡುವ ಕೆಲಸದ ಬಗ್ಗೆ ಏಕಾಗ್ರತೆಯನ್ನು ವಹಿಸುವುದರ ಮೂಲಕ ಕೆಲಸವನ್ನು ಕಲಿಯಬೇಕಿದೆ. ಜನರು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವರು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ಸಂಜೆಯ ಸಮಯವು ನಿಮಗೆ ಸೂಕ್ತವಾಗಿರುತ್ತದೆ. ಅಧಿಕ ರಕ್ತದೊತ್ತಡ ಅನುಭವಿಸುವವರು ವೈದ್ಯರಲ್ಲಿ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವುದು ಸೂಕ್ತ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 4:00ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ಹೂಡಿಕೆಗೆ ಇಂದು ಸೂಕ್ತವಾದ ದಿನವಲ್ಲ. ನೀವು ಹೊಂದಿರುವ ಯೋಜನೆಗಳನ್ನು ಮುಂದೂಡುವುದು ಸೂಕ್ತ. ಅನಿರೀಕ್ಷಿತ ನಷ್ಟವನ್ನು ಅನುಭವಿಸುವುದರಿಂದ ಇಂದು ನಿಮಗೆ ಹಣಕಾಸಿನ ವಿಷಯದಲ್ಲಿ ಗೊಂದಲ ಹಾಗೂ ಒತ್ತಡ ಉಂಟಾಗುವ ಸಾಧ್ಯತೆಗಳಿವೆ. ಯೋಜನೆಯ ಪ್ರಕಾರ ಉದ್ಯಮಿಗಳು ಕೆಲಸವನ್ನು ನಿರ್ವಹಿಸದೆ ಇರುವುದರಿಂದ ಸಾಕಷ್ಟು ಅನಾನುಕೂಲವನ್ನು ಎದುರಿಸುವರು. ನಿಮ್ಮ ಕೋಪ ಮತ್ತು ನಕಾರಾತ್ಮಕ ಚಿಂತನೆಗಳು ನಿಮ್ಮ ದಿನವನ್ನು ಇನ್ನಷ್ಟು ಹದಗೆಡಿಸುತ್ತವೆ. ನೀವು ನಿಮ್ಮ ಒತ್ತಡವನ್ನು ಕುಟುಂಬದ ಮೇಲೆ ಹಾಕ ಬಾರದು. ಪೋಷಕರ ಆರ್ಶೀರ್ವಾದ ಹಾಗೂ ಸಲಹೆಯನ್ನು ಪಡೆದುಕೊಳ್ಳುವುದರಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸಂಜೆಯ ಹೊತ್ತಿಗೆ ಉತ್ತಮ ಸುದ್ದಿಯನ್ನು ಪಡೆಯುವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಸಂಗಾತಿಯೊಂದಿಗೆ ಸಂಜೆಯ ವಿಹಾರ ಕೈ ಗೊಂಡರೆ ಮಾನಸಿಕ ಒತ್ತಡವು ನಿವಾರಣೆಯಾಗುವುದು. ಆರೋಗ್ಯದಲ್ಲಿ ಉತ್ತಮ ಸುಧಾರಣೆಯನ್ನು ಕಾಣುವಿರಿ.
ಅದೃಷ್ಟದ ಬಣ್ಣ: ಕ್ರೀಮ್
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮಧ್ಯಾಹ್ನ 12:50 ರಿಂದ ಸಂಜೆ 3:00ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್
ನವ ದಂಪತಿಗಳಿಗೆ ಇಂದು ಸುಂದರವಾದ ದಿನವಾಗಲಿದೆ. ಇಬ್ಬರು ಪರಸ್ಪರ ಗೌರವ ಹಾಗೂ ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳುವುದರಿಂದ ಇಬ್ಬರಲ್ಲೂ ವಿಶ್ವಾಸವು ಹೆಚ್ಚುವುದು. ಅನಪೇಕ್ಷಿತವಾಗಿ ಸಮಯವನ್ನು ಹಾಳುಮಾಡುವ ವ್ಯಕ್ತಿಗಳಿಂದ ದೂರವಿರಿ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಮೇಲೆ ಒಂದಿಷ್ಟು ನಿರೀಕ್ಷಿತ ಜವಾಬ್ದಾರಿಯನ್ನು ಹಾಕುವರು. ಮೇಲಾಧಿಕಾರಿಗಳು ಸ್ವಲ್ಪ ಸಮಯ ದೂರ ಹೋಗುವರು. ಉದ್ಯಮಿಗಳಿಗೆ ಈ ದಿನ ಕಠಿಣವಾಗಲಿದೆ. ಮಿತಿಮೀರಿದ ಖರ್ಚುಗಳನ್ನು ನೀವು ಇಂದು ತಡೆಯಬೇಕು. ಅದು ನಿಮ್ಮ ಭವಿಷ್ಯಕ್ಕೆ ಹಾನಿ ಉಂಟುಮಾಡುವುದು. ಅತಿಯಾದ ಕೆಲಸದ ಪಟ್ಟಿಯನ್ನು ಹೊಂದಿರುವುದರಿಂದ ದಿನದ ಅಂತ್ಯದ ಹೊತ್ತಿಗೆ ಒತ್ತಡದ ಭಾವನೆಯನ್ನು ಹೊಂದಿರುತ್ತೀರಿ. ಕೆಲಸದ ಯೋಜನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ. ಕುಟುಂಬಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಆಗ ನೀವು ಮಾನಸಿಕವಾಗಿ ನಿರಾಳತೆಯನ್ನು ಪಡೆದುಕೊಳ್ಳುವಿರಿ.
ಅದೃಷ್ಟದ ಬಣ್ಣ: ತಿಳಿ ಗುಲಾಬಿ
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಮುಂಜಾನೆ 6:00 ರಿಂದ ಮುಂಜಾನೆ 10:25ರ ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ
ವೃತ್ತಿ ಕ್ಷೇತ್ರದಲ್ಲಿ ನೀವು ಕೇಳುವ ಗಾಸಿಪ್ ಮತ್ತು ವಾದಗಳ ವಿಚಾರದಿಂದ ದೂರ ಇರಿ. ಅದು ನಿಮಗೆ ನಿರಾಸೆಯನ್ನುಂಟುಮಾಡುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಸಂತೋಷದ ಬಗ್ಗೆ ಅಸೂಯೆಯನ್ನು ಪಡುವರು. ನಿಮ್ಮನ್ನು ತುಳಿಯಲು ಅಥವಾ ಹಿಂದಿಕ್ಕಲು ಪ್ರಯತ್ನಿಸುವರು. ನೀವು ನಿಮ್ಮ ಗುರಿ ಮತ್ತು ನಿರ್ಧಾರದ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಸಣ್ಣ ನಿರ್ಲಕ್ಷ್ಯಗಳು ಕೂಡ ಅಪಾಯವನ್ನು ಸೃಷ್ಟಿಸುವುದು. ಸಂಜೆಯ ಹೊತ್ತಿಗೆ ನೀವು ನಿಮ್ಮ ಸಂಗಾತಿಯೊಂದಿಗೆ ಸಣ್ಣ ವಿಹಾರವನ್ನು ಕೈಗೊಳ್ಳಿ. ಅದು ನಿಮಗೆ ಸಂತೋಷ ಹಾಗೂ ನಿರಾಳತೆಯನ್ನು ಮೂಡಿಸುವುದು. ನಿಮ್ಮ ಜೀವನದಲ್ಲಿ ನೀವು ಇಂದು ತೋರುವ ಸಣ್ಣ ನಿರ್ಲಕ್ಷ್ಯ ಸಹ ಅಪಾಯಕಾರಿ ಬದಲಾವಣೆಯನ್ನು ತಂದೊಡ್ಡುವುದು. ಪೋಷಕರನ್ನು ಚೆನ್ನಾಗಿ ಆರೈಕೆ ಮಾಡಿ. ಪ್ರೇಮಿಗಳು ಪರಸ್ಪರ ಕಿರಿಕಿರಿಯನ್ನು ಅನುಭವಿಸುವರು. ವಿದ್ಯಾರ್ಥಿಗಳಿಗೆ ಇಂದು ಬಿಡುವಿಲ್ಲದ ದಿನವಾಗಬಹುದು. ಮಕ್ಕಳು ನಿಮ್ಮ ಪ್ರೀತಿಯನ್ನು ಅಪೇಕ್ಷಿಸುವರು. ನೀವು ಅನುಭವಿ ವ್ಯಕ್ತಿಗಳಿಮದ ಅಥವಾ ಹಿರಿಯರಿಂದ ಒಂದಿಷ್ಟು ಸಲಹೆ ಹಾಗೂ ಸಹಕಾರವನ್ನು ಪಡೆದುಕೊಳ್ಳುವುದು ಸೂಕ್ತ.
ಅದೃಷ್ಟದ ಬಣ್ಣ: ಮಸುಕಾದ ಹಳದಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮುಂಜಾನೆ 8:00 ರಿಂದ ಮಧ್ಯಾಹ್ನ 12:30ರ ವರೆಗೆ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ಭವಿಷ್ಯದ ಬಗ್ಗೆ ಸೂಕ್ತ ಯೋಜನೆಯನ್ನು ಕೈಗೊಳ್ಳಲು ಸುದಿನ. ಆರ್ಥಿಕವಾಗಿ ದೃಢವಾಗಿರುವಿರಿ. ಕೆಲವು ಸವಾಲುಗಳು ನಿಮ್ಮನ್ನು ಕಾಡಬಹುದು. ನೀವು ತಾಳ್ಮೆಯಿಂದ ಎದುರಿಸಿದಲ್ಲಿ ಎಲ್ಲವೂ ಸುಗಮವಾಗಿ ನೆರವೇರುವುದು. ಮಕ್ಕಳು ನಿಮ್ಮನ್ನು ಆದರ್ಶ ವ್ಯಕ್ತಿಯನ್ನಾಗಿ ಪರಿಗಣಿಸುತ್ತಾರೆ. ಕುಟುಂಬದ ವಿಷಯದಲ್ಲಿ ಕೆಲವು ಏರಿಳಿತವನ್ನು ಇಂದು ಅನುಭವಿಸುವಿರಿ. ಕ್ರೀಡಾಪಟುಗಳಿಗೆ ಅನುಕೂಲಕರವಾದ ದಿನ. ಉದ್ಯಮಿಗಳು ಹೆಚ್ಚು ಲಾಭವನ್ನು ಪಡೆದುಕೊಳ್ಳುವರು. ನಕಾರಾತ್ಮಕ ಮನೋಭಾವ ಇರುವ ವ್ಯಕ್ತಿಗಳಿಂದ ಆದಷ್ಟು ದೂರ ಇರಿ. ಅವರು ನಿಮ್ಮ ಭಾವನೆಗಳನ್ನು ಹಾಳು ಮಾಡಬಹುದು. ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದರಿಂದ ಕೊಂಚ ನೆಮ್ಮದಿ ದೊರೆಯುವುದು. ಜೀವನದಲ್ಲಿ ಮುಂದೆ ಸಾಗುವುದರ ಬಗ್ಗೆ ಹೆಚ್ಚು ಚಿಂತನೆ ಹಾಗೂ ಯೋಜನೆಯನ್ನು ಕೈಗೊಳ್ಳುವುದು ಸೂಕ್ತ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಮುಂಜಾನೆ 5:55 ರಿಂದ ಮುಂಜಾನೆ 9:30ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಜೀವನದಲ್ಲಿ ಕಷ್ಟವು ಶಾಶ್ವತವಲ್ಲ. ಅದನ್ನು ಅರಿಯುವುದರ ಮೂಲಕ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ಎದುರಿಸಬೇಕು. ನಿಮ್ಮ ಕೆಲಸದಲ್ಲಿ ಶ್ರಮ ಹಾಗೂ ಪ್ರಾಮಾಣಿಕತೆಯನ್ನು ಕೈಗೊಳ್ಳುವುದರ ಮೂಲಕ ಯಶಸ್ಸನ್ನು ಪಡೆಯಬಹುದು. ನಿಮ್ಮ ಸಂಗಾತಿಯು ಬೆಂಬಲ ಸೂಚಿಸುವುದರ ಮೂಲಕ ನಿಮಗೆ ಪ್ರೇರೇಪಣೆಯನ್ನು ನೀಡುವರು. ನಿಮ್ಮ ಆಕ್ರಮಣಕಾರಿ ಸ್ವಭಾವವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅದು ನಿಮಗೆ ಹಾನಿಯನ್ನುಂಟುಮಾಡುವುದು. ನಿಮ್ಮ ಪ್ರೇಯಸಿಯ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಿರಿ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ತೋರುವುದು. ಕೆಲವರು ವಿದೇಶ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಕೆಲಸದ ಯೋಜನೆಗಳು ಕೊಂಚ ಅನುಕೂಲಕರ ಸ್ಥಿತಿಗೆ ಮರಳುವುದು. ಒಡಹುಟ್ಟಿದವರೊಂದಿಗಿನ ಹಳೆಯ ಸಮಸ್ಯೆಯು ಪರಿಹಾರ ಕಾಣುವುದು. ಇದರಿಂದ ನೀವು ಮಾನಸಿಕವಾಗಿ ಉತ್ತಮ ಸ್ಥಿತಿಯನ್ನು ಅನುಭವಿಸುವಿರಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಸಮಯ: ಸಂಜೆ 7:00 ರಿಂದ ರಾತ್ರಿ 9:25ರ ವರೆಗೆ.



Click it and Unblock the Notifications











