For Quick Alerts
ALLOW NOTIFICATIONS  
For Daily Alerts

ಶುಕ್ರವಾರದ ದಿನ ಭವಿಷ್ಯ (11-10-2019)

|

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.

ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ: 21 ಮಾರ್ಚ್ 19 ಏಪ್ರಿಲ್

ಮೇಷ: 21 ಮಾರ್ಚ್ 19 ಏಪ್ರಿಲ್

ಕೆಲಸದ ವಿಷಯದಲ್ಲಿ ನಿಮಗೆ ಉತ್ತಮ ವಾತಾವರಣವು ದೊರೆಯುವುದು. ನೀವು ನಿಮ್ಮ ಕೆಲಸವನ್ನು ಪ್ರೀತಿಸುವಿರಿ. ಹೊಸ ಯೋಜನೆಯೊಂದಿಗೆ ಕೆಲಸ ನಿರ್ವಹಿಸುವ ಮನಸ್ಸು ನಿಮ್ಮನ್ನು ಕಾಡುವುದು. ನಿಮ್ಮ ಮೊಂಡುತನದ ಸ್ವಭಾವವು ಮಕ್ಕಳಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ನೀವು ಕುಟುಂಬದ ಮಹತ್ವವನ್ನು ಅರಿತುಕೊಳ್ಳುವಿರಿ. ವಿಷಯಕ್ಕೆ ತಕ್ಕಂತೆ ನೀವು ಆದ್ಯತೆಯನ್ನು ನೀಡುವಿರಿ. ನವ ವಿವಾಹಿತರಿಗೆ ಪ್ರಣಯದ ದಿನವಾಗುವುದು. ಶೀಘ್ರದಲ್ಲಿಯೇ ನೀವು ವಿದೇಶ ಪ್ರವಾಸವನ್ನು ಯೋಜಿಸಬಹುದು. ನಿಮ್ಮ ಪೋಷಕರು ಯಾವ ವಿಚಾರಕ್ಕೂ ಅತೃಪ್ತರಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವಿಷಯಗಳು ಕಠಿಣವಾಗಿರುತ್ತವೆ. ಆದರೆ ನಿಮ್ಮ ಸಮರ್ಪಣೆಯ ಸಂಗತಿಯು ಅದ್ಭುತ ಫಲಿತಾಂಶವನ್ನು ನೀಡುವುದು. ಸಂಜೆಯ ಹೊತ್ತಿಗೆ ನೀವು ಅಹ್ಲಾದಕರವಾದ ಭಾವನೆಯನ್ನು ಪಡೆದುಕೊಳ್ಳುವಿರಿ. ಒತ್ತಡವನ್ನು ದೂರವಿರಿಸಲು ವ್ಯಾಯಾಮ ಅತ್ಯುತ್ತಮವಾದ ಮಾರ್ಗ.

ಅದೃಷ್ಟ ಬಣ್ಣ: ಕಡುಕೆಂಪು

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಮಧ್ಯಾಹ್ನ 12:05 ರಿಂದ 10:30 ರವರೆಗೆ

ವೃಷಭ: 20 ಏಪ್ರಿಲ್-20 ಮೇ

ವೃಷಭ: 20 ಏಪ್ರಿಲ್-20 ಮೇ

ಇಂದು ನಿಮಗೆ ಅನುಕೂಲಕರವಾದ ದಿನ. ಕೆಲಸದಲ್ಲಿ ಸ್ವಲ್ಪ ಏರಿಳಿತ ಉಂಟಾಗಬಹುದು. ನಿಯೋಜಿತ ಕೆಲಸದಲ್ಲಿ ನಿಮ್ಮ ಸಂಪೂರ್ಣ ಪರಿಶ್ರಮವನ್ನು ನಿಯೋಜಿಸುವಿರಿ. ಅದು ನಿಮ್ಮ ಅಧಿಕಾರಿಗೆ ಅನುಕೂಲವಾಗುವುದು. ವ್ಯವಹಾರವು ಇಂದು ನಿಮಗೆ ನಿಯಮಿತವಾಗಿ ನಡೆಯುವುದು. ಕೆಲವು ಸವಾಲುಗಳು ನಿಮ್ಮನ್ನು ಆಕ್ರಮಿಸಿಕೊಳ್ಳಬಹುದು. ಆಪ್ತ ಸ್ನೇಹಿತರು ಹಾಗೂ ಸಂಬಂಧಿಗಳಿಗಾಗಿ ಪಾರ್ಟಿಯನ್ನು ಆಯೋಜಿಸಬಹುದು. ಅದು ನಿಮಗೆ ಪುನರ್ಯೌವ್ವನ ನೀಡುತ್ತದೆ. ನಿಮ್ಮ ಹತ್ತಿರದವರಲ್ಲಿ ಹೃದಯದ ಭಾವನೆಯನ್ನು ಹೇಳಿಕೊಳ್ಳಿ. ಮನಸ್ಸು ಹಗುರವಾಗುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು. ಅದು ಮನೆ ಮಂದಿಗೆ ಸಂತೋಷವನ್ನು ತರುವುದು. ನಿಮ್ಮ ಪ್ರೀತಿಯೊಂದಿಗಿನ ಪರಸ್ಪರ ತಿಳುವಳಿಕೆಯು ವಿಷಯಗಳನ್ನು ವಿಶೇಷಗೊಳಿಸುತ್ತದೆ. ಸಂಜೆಯ ಹೊತ್ತು ನಿಮಗೆ ಪ್ರಣಯದ ಸಮಯವಾಗಿರುವುದು. ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ನೀವು ಮುಕ್ತರಾಗಬಹುದು.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 5

ಅದೃಷ್ಟ ಸಮಯ: ರಾತ್ರಿ 9:00 ರಿಂದ 2:30 ರವರೆಗೆ

ಮಿಥುನ: 21 ಮೇ-20 ಜೂನ್

ಮಿಥುನ: 21 ಮೇ-20 ಜೂನ್

ಆರ್ಥಿಕ ಸ್ಥಿತಿಯು ಕೊಂಚ ಕಠಿಣವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿದಂತೆ ಅನೇಕ ತೊಂದರೆಗಳು ಉಂಟಾಗಬಹುದು. ನಿಮ್ಮ ಅತಿಯಾದ ಖರ್ಚುಮಾಡುವ ಮನೋಭಾವವನ್ನು ನಿಯಂತ್ರಿಸಿಕೊಳ್ಳಬೇಕು. ನಿಮ್ಮ ಸಂಗಾತಿ ನಿಮ್ಮ ತಪ್ಪನ್ನು ಅರಿತುಕೊಳ್ಳುವಂತೆ ಮಾಡುವುದು. ಅದನ್ನು ಸುಧಾರಿಸಿಕೊಳ್ಳುವಲ್ಲಿ ನೀವು ಪ್ರಯತ್ನ ಮಾಡುವಿರಿ. ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಅತಿಯಾದ ಒತ್ತಡ ಉಂಟಾಗಬಹುದು. ಮೇಲಾಧಿಕಾರಿಗಳು ನಿರೀಕ್ಷಿಸುವಂತೆ ನೀವು ಕೆಲಸವನ್ನು ನಿರ್ವಹಿಸಿದರೆ ನಿಮ್ಮ ಆರೋಗ್ಯ ಬಹುಬೇಗ ಹದಗೆಡುವುದು. ನೀವು ಸಾಕಷ್ಟು ನಷ್ಟವನ್ನು ಅನುಭವಿಸುವುದರಿಂದ ನಿಮ್ಮ ಭಾವನಾತ್ಮಕ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳು ಕಾರ್ಯನಿರತವಾಗಿರುತ್ತಾರೆ. ಸಂಗಾತಿಯ ತಪ್ಪು ತಿಳುವಳಿಕೆಯನ್ನು ದೂರ ಮಾಡುವಿರಿ. ಇದು ಆರೋಗ್ಯದ ವಿಷಯದಲ್ಲಿ ಸಾಮಾನ್ಯವಾದ ದಿನವಾಗಿರುತ್ತದೆ. ಮುಂಜಾನೆ ಉತ್ತಮ ನಡಿಗೆಯನ್ನು ಕೈಗೊಳ್ಳುವುದರ ಮೂಲಕ ದಿನವನ್ನು ಆರಂಭಿಸಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಸಂಜೆ 6:20 ರಿಂದ 8:20 ರವರೆಗೆ

ಕರ್ಕ: 21 ಜೂನ್ 22 ಜುಲೈ

ಕರ್ಕ: 21 ಜೂನ್ 22 ಜುಲೈ

ಕೆಲಸದಲ್ಲಿ ನಿಮ್ಮ ಮೇಲಾಧಿಕಾರಿಗಳು ಹೇಳುವಂತೆ ನಡೆಯಬೇಕು. ಅದು ನಿಮಗೆ ಕಠಿಣವಾದ ಸಂಗತಿಯಾಗುವುದು. ಅವರು ನಿಮ್ಮ ಕೆಲವು ಸಂಗತಿಯ ಬಗ್ಗೆ ಪ್ರಶ್ನೆ ಮಾಡಬಹುದು. ಶೀಘ್ರದಲ್ಲಿಯೇ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗಾಗಿ ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ. ಕುಟುಂಬದಲ್ಲಿ ನೀವು ತೋರುವ ಅಸಡ್ಡೆ ವರ್ತನೆಯನ್ನು ಸಂಗಾತಿಯು ಕಂಡಿಸುವರು. ಅದು ಅವರಿಗೆ ಹೆಚ್ಚಿನ ಸಿಟ್ಟನ್ನು ಕೆರಳಿಸುತ್ತದೆ. ಸಂಬಂಧಗಳಿಗೆ ಸಂಬಂಧಿಸಿದಂತೆ ಆರೋಗ್ಯಕರವಾದ ದಿನ. ನಕ್ಷತ್ರಗಳು ಅನುಕೂಲಕರವಾದ ಸ್ಥಿತಿಯಲ್ಲಿ ಇರುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಉದ್ಯಮಿಗಳು ಭಾರಿ ಲಾಭವನ್ನು ಗಳಿಸಬಹುದು. ಹೊಸ ಹೂಡಿಕೆಗಳಿಗೆ ಇದು ಉತ್ತಮವಾದ ಸಮಯ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಜ್ಞಾನ ಮತ್ತು ಕಠಿಣ ಶ್ರಮಕ್ಕೆ ಸಂಬಂಧಿಸಿದಂತೆ ಸವಾಲುಗಳು ಎದುರಾಗಬಹುದು. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಸಂಜೆ 5:30 ರಿಂದ 8:40 ರವರೆಗೆ

ಸಿಂಹ: 23 ಜುಲೈ-22 ಆಗಸ್ಟ್

ಸಿಂಹ: 23 ಜುಲೈ-22 ಆಗಸ್ಟ್

ಹಣಕಾಸಿಗೆ ಸಂಬಂಧಿಸಿದಂತೆ ಇಂದು ನಿಧಾನವಾದ ದಿನ. ನೀವು ಜನರನ್ನು ಕುರುಡಾಗಿ ನಂಬದಿರಿ. ದೊಡ್ಡ ವಹಿವಾಟುಗಳನ್ನು ನಡೆಸುವಾಗ ಹೆಚ್ಚಿನ ಕಾಳಜಿ ಅಗತ್ಯ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಗಳು ಅತಿಯಾದ ವೀಕ್ಷಣೆಯನ್ನು ನಡೆಸಬಹುದು. ಹೊರ ಹೋಗುವ ಸ್ವಭಾವವು ನಿಮಗೆ ನಷ್ಟವನ್ನುಂಟುಮಾಡುತ್ತದೆ. ಸಂಗಾತಿಯೊಂದಿಗೆ ನಿಮಗಿರುವ ಸಣ್ಣ ತಪ್ಪು ತಿಳುವಳಿಕೆಯು ಮನಃಸ್ಥಿತಿಯನ್ನು ಹಾಳುಮಾಡುತ್ತದೆ. ಕುಟುಂಬದ ವಿಷಯದಲ್ಲಿ ಜಾಗರೂಕರಾಗಿರಿ. ಹಿರಿಯರು ನಿಮಗೆ ಉತ್ತಮ ಸಲಹೆ ನೀಡಬಹುದು. ಅದರಂತೆಯೇ ನೀವು ಬದ್ಧರಾಗಿರಬೇಕು. ಅವಿವಾಹಿತರಿಗೆ ಪಾಲಕರು ಇಂದು ವಿವಾಹದ ಪ್ರಸ್ತಾಪ ಮಾಡಬಹುದು. ಸಂಜೆಯ ವೇಳೆಗೆ ಸಂಗತಿಗಳು ಉತ್ತಮವಾಗುತ್ತವೆ. ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವರು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಅದು ನಿಮಗೆ ದೊಡ್ಡ ಪರಿಹಾರವನ್ನು ಒದಗಿಸುತ್ತದೆ. ಈ ದಿನದ ಆರಂಭವನ್ನು ನೀವು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 5:00 ರಿಂದ ಮಧ್ಯಾಹ್ನ 3:30 ರವರೆಗೆ

ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

ನಕ್ಷತ್ರಗಳು ನಿಮಗೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಈ ಹಿನ್ನೆಲೆಯಲ್ಲಿಯೇ ನೀವು ಬಾಕಿ ಇರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮಗೆ ವೃತ್ತಿ ಕ್ಷೇತ್ರದಲ್ಲಿ ಯಾರಾದರೂ ಸಹಾಯ ಮಾಡುವ ಸಾಧ್ಯತೆಗಳಿವೆ. ಕೆಲಸದ ಬದಲಾವಣೆಗೆ ನೀವು ಚಿಂತಿಸಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವರ್ಗಾವಣೆ ಆಗುವ ಸಾಧ್ಯತೆಗಳಿವೆ. ಕುಟುಂಬಕ್ಕೆ ಸಂಬಂಧಿಸಿದಂತೆ ಸಂಗತಿಗಳು ಸುಗಮವಾಗಿರುತ್ತವೆ. ತಂದೆಯ ಆರೋಗ್ಯವು ನಿಮಗೆ ಸ್ವಲ್ಪ ಚಿಂತೆಯನ್ನು ಸೃಷ್ಟಿಸಬಹುದು. ಆರ್ಥಿಕ ವಿಷಯದಲ್ಲಿ ಇಂದು ನಿಮಗೆ ಸುಗಮವಾದ ದಿನ. ಯಾವುದೇ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ಹೃದಯ ಸಂಬಂಧಿ ಸಮಸ್ಯೆ ಇರುವವರು ಜಾಗರೂಕರಾಗಿರಬೇಕು. ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನೇ ಸ್ವೀಕರಿಸಿ.

ಅದೃಷ್ಟ ಬಣ್ಣ: ಇಂಡಿಗೊ

ಅದೃಷ್ಟ ಸಂಖ್ಯೆ: 29

ಅದೃಷ್ಟ ಸಮಯ: ಸಂಜೆ 5:30 ರಿಂದ 9:15 ರವರೆಗೆ

ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

ಏರಿಳಿತಗಳು ಈ ದಿನದ ಒಂದು ಭಾಗವಾಗಬಹುದು. ಇದು ವಿದ್ಯಾರ್ಥಿಗಳಿಗೆ ಕಠಿಣವಾದ ದಿನ. ಶೈಕ್ಷಣಿಕ ಸಾಧನೆಯು ಅವರನ್ನು ನಿರಾಸೆಗೊಳಿಸುತ್ತದೆ. ಶಿಕ್ಷಕರ ಸಲಹೆಯನ್ನು ಪಡೆದುಕೊಳ್ಳಬೇಕು. ಅಜ್ಞಾತ ಮೂಲದಿಂದ ನೀವು ಹಣವನ್ನು ಪಡೆದುಕೊಳ್ಳಬಹುದು. ಪರ್ಯಾಯ ಕೆಲಸದ ಬಗ್ಗೆ ನೀವು ಯೋಚಿಸುವುದರಿಂದ ಅದು ನಿಮಗೆ ಯಶಸ್ಸನ್ನು ನೀಡುತ್ತದೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವರು. ನಿಮ್ಮ ಸಂಗಾತಿಯು ಮನೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಮುಂದಾಗಬಹುದು. ನಿಮ್ಮ ಒಡಹುಟ್ಟಿದವರು ಕಾನೂನು ವಿಷಯದಲ್ಲಿ ತೊಂದರೆಯನ್ನುಂಟುಮಾಡಬಹುದು. ಈ ದಿನವನ್ನು ನೀವು ಯೋಗದಿಂದ ಆರಂಭಿಸಿ. ಅದು ನಿಮಗೆ ದಿನವಿಡೀ ಸಕ್ರಿಯವಾಗಿರುವಂತೆ ಮಾಡುತ್ತದೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ 7:55 ರವರೆಗೆ

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

ಮುಂಜಾನೆಯಿಂದಲೇ ನೀವು ತಾಜಾತನದ ಅನುಭವವನ್ನು ಪಡೆದುಕೊಳ್ಳುವಿರಿ. ನಿಮ್ಮ ಯೋಜನೆಯ ಅನುಸಾರವೇ ಎಲ್ಲವೂ ನಡೆಯುತ್ತದೆ. ಕುಟುಂಬದ ವಾತಾವರಣವು ವಿನೋದದಿಂದ ಕೂಡಿರುತ್ತದೆ. ನೀವು ವಿಲಕ್ಷಣ ತಾಣಗಳಿಗೆ ಪ್ರವಾಸವನ್ನು ಕೈಗೊಳ್ಳಬಹುದು. ವಿಹಾರವು ನಿಮಗೆ ಸಂತೋಷವನ್ನು ನೀಡುತ್ತದೆ. ಸಂಗಾತಿಯ ಉತ್ತಮ ನಡವಳಿಕೆಯು ನಿಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ಯಾವುದೇ ಕೆಲಸ ಬಾಕಿ ಇಲ್ಲದೆ ಇರುವುದರಿಂದ ನಿಮಗೆ ಕೆಲಸದ ವಿಷಯದಲ್ಲಿ ಇಂದು ವಿಶ್ರಾಂತ ದಿನವಾಗುವುದು. ನಿಮ್ಮ ಸ್ನೇಹಪರ ವರ್ತನೆ ಎಲ್ಲರಿಗೂ ಹಿತವನ್ನುಂಟುಮಾಡುತ್ತದೆ. ಜನರು ನಿಮ್ಮ ಮಾರ್ಗದಲ್ಲಿ ನಡೆಯಲು ಬಯಸುವರು. ಹಣಕಾಸಿಗೆ ಸಂಬಂಧಿಸಿದಂತೆ ಒಡಹುಟ್ಟಿದವರಲ್ಲಿ ಪೈಪೋಟಿ ನಡೆಯುವುದು. ವಿವಾಹದಿಂದ ಸದ್ಯ ದೂರವಿರಿ. ಅದು ನಿಮ್ಮ ಹಣ ಹಾಗೂ ಸಮಯವನ್ನು ವ್ಯರ್ಥಮಾಡುತ್ತದೆ. ಹೆಚ್ಚು ನೀರು ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ. ವ್ಯಾಯಾಮದ ಮೂಲಕ ದಿನವನ್ನು ಆರಂಭಿಸಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:30 ರವರೆಗೆ

ಧನು: 22 ನವೆಂಬರ್ -21 ಡಿಸೆಂಬರ್

ಧನು: 22 ನವೆಂಬರ್ -21 ಡಿಸೆಂಬರ್

ನಕ್ಷತ್ರಗಳು ಇಂದು ಅನುಕೂಲಕರವಾಗಿರುತ್ತವೆ. ನಿಮ್ಮ ಬಾಕಿ ಉಳಿದ ಕೆಲಸಗಳು ನಿಮ್ಮ ಪಕ್ಕಕ್ಕೆ ಸರಿದುಕೊಳ್ಳುವುದು. ಕೆಲಸದಿಂದ ದೂರ ಉಳಿಯಲು ನೀವು ನಿರ್ಧರಿಸುವಿರಿ. ಪೂರ್ವಜರ ಆಸ್ತಿಯಲ್ಲಿ ಹಣಕಾಸಿನ ವಿಷಯವು ಸುಧಾರಣೆ ಹೊಂದುವುದು. ಸಂಗಾತಿಯೊಂದಿಗಿನ ಪರಸ್ಪರ ತಿಳುವಳಿಕೆಯು ನಿಮಗೆ ಆರಾಮವನ್ನು ಮತ್ತು ಹಿತವನ್ನು ಕಲ್ಪಿಸಿಕೊಡುತ್ತದೆ. ನಿಮ್ಮ ಸಂಗಾತಿ ವ್ಯವಹಾರವನ್ನು ಕೈಗೊಳ್ಳಲು ಯೋಜಿಸಬಹುದು. ಕ್ರೀಡೆ, ಸಂಗೀತ, ಕಲೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವರು. ಅವಸರದ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಪ್ರಮುಖ ವಿಷಯವನ್ನು ಪರಿಹರಿಸಲು ನಿಮ್ಮ ಸ್ನೇಹಿತ ನಿಮಗೆ ಸಹಾಯ ಮಾಡುವನು. ಹೂಡಿಕೆಯು ಸಾಕಷ್ಟು ಪ್ರಯೋಜನಕಾರಿಯಾಗುವುದು. ಈ ದಿನವು ತಾಜಾ ಹಾಗೂ ಆರೋಗ್ಯಕರವಾಗಿರಲು ವ್ಯಾಯಾಮದಿಂದ ಆರಂಭಿಸಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 38

ಅದೃಷ್ಟ ಸಮಯ: ಮಧ್ಯಾಹ್ನ 2:30 ರಿಂದ 7:50 ರವರೆಗೆ

ಮಕರ: 22 ಡಿಸೆಂಬರ್ -19 ಜನವರಿ

ಮಕರ: 22 ಡಿಸೆಂಬರ್ -19 ಜನವರಿ

ನಿಮ್ಮ ಸಹೋದ್ಯೋಗಿಗಳು ನಿಮಗೆ ಉತ್ತಮ ಬೆಂಬಲ ಹಾಗೂ ಸಹಕಾರ ನೀಡುವುದರಿಂದ ನಿಮಗೆ ಅನುಕೂಲವಾಗುತ್ತದೆ. ಗುರಿ ಸಾಧನೆಯನ್ನು ಸಮಯಕ್ಕಿಂತಲೂ ಮುಂಚೆಯೇ ಸಾಧಿಸಲ್ಪಡುತ್ತೀರಿ. ನಿಮ್ಮ ದಕ್ಷತೆಯನ್ನು ಸಾಬೀತು ಪಡಿಸಲು ತುಂಬಾ ಶ್ರಮಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಮುಂಭಾಗದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಪ್ರೀತಿ ಪಾತ್ರರೊಂದಿಗಿನ ಒಂದು ಸಣ್ಣ ಪ್ರವಾಸವು ನಿಮಗೆ ಸಂತೋಷವನ್ನು ತಂದುಕೊಡುವುದು. ಮಕ್ಕಳು ಸಂವೇದನಾ ಶೀಲರಾಗಿರುತ್ತಾರೆ. ನಿಮ್ಮ ಆರ್ಥಿಕ ನಷ್ಟವನ್ನು ಶೀಘ್ರದಲ್ಲಿಯೇ ಭರಿಸಿಕೊಳ್ಳುವಿರಿ. ಉಳಿತಾಯದ ವಿಷಯಕ್ಕೆ ಸಂಬಂಧಿಸಿದಂತೆ ನೀವು ಹಿರಿಯರ ಸಲಹೆ ಪಡೆದುಕೊಳ್ಳುವುದು ಮುಖ್ಯ. ಷೇರು ಮಾರುಕಟ್ಟೆಯಲ್ಲಿ ಇರುವವರು ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಪ್ರೇಮಿಯು ಸಂಜೆ ಉತ್ತಮ ಊಟವನ್ನು ಕೊಡಿಸುವುದರ ಮೂಲಕ ಆಶ್ಚರ್ಯವನ್ನು ಸೃಷ್ಟಿಸಬಹುದು. ನೀವು ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 9:45 ರಿಂದ 11:50 ರವರೆಗೆ

ಕುಂಭ: 20 ಜನವರಿ -18 ಫೆಬ್ರವರಿ

ಕುಂಭ: 20 ಜನವರಿ -18 ಫೆಬ್ರವರಿ

ಇಂದು ನಿಮಗೆ ಒಟ್ಟಾರೆಯಾಗಿ ಅನುಕೂಲಕರವಾದ ದಿನವಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಆನಂದಿಸುವಿರಿ. ಸಂಗಾತಿಯೊಂದಿಗೆ ಚರ್ಚೆ ನಡೆಸುವುದರ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅದು ನಿಮಗೆ ನಿರಾಳವಾದ ಭಾವನೆಯನ್ನು ಮೂಡಿಸುತ್ತದೆ. ನಿಮ್ಮ ಆಪ್ತರೊಂದಿಗೆ ಕೈಗೊಳ್ಳುವ ಸಣ್ಣ ಪ್ರವಾಸವು ನಿಮಗೆ ಅನೇಕ ಬದಲಾವಣೆಯನ್ನು ತಂದುಕೊಡುವುದು. ಇಂದು ಕೆಲಸಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾದ ದಿನವಾಗುವುದು. ಹಣಕಾಸಿನ ವಿಷಯದಲ್ಲಿ ನಿಮಗೆ ಹೆಮ್ಮೆ ಮತ್ತು ತೃಪ್ತಿ ಉಂಟಾಗಬಹುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಧೋರಣೆಯನ್ನು ತಪ್ಪಿಸಿ. ಉದ್ಯಮಿಗಳು ಉತ್ತಮ ಲಾಭ ಪಡೆದುಕೊಳ್ಳುವರು.

ಅದೃಷ್ಟ ಬಣ್ಣ: ರಾಯಲ್ ಬ್ಲೂ

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಬೆಳಿಗ್ಗೆ 8:25 ರಿಂದ ಮಧ್ಯಾಹ್ನ 12:55

ಮೀನ: 19 ಫೆಬ್ರುವರಿ-20 ಮಾರ್ಚ್

ಮೀನ: 19 ಫೆಬ್ರುವರಿ-20 ಮಾರ್ಚ್

ಒಟ್ಟಾರೆಯಾಗಿ ನಿಮಗೆ ಇಂದು ಸಾಮಾನ್ಯವಾದ ದಿನ. ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಇಂದು ಪಾರಾಗುವಿರಿ. ಹಿರಿಯರ ಸಲಹೆಯನ್ನು ಪಡೆದುಕೊಳ್ಳುವುದು ನಿಮಗೆ ಉತ್ತಮ ಪರಿಸ್ಥಿತಿಯನ್ನು ಸೃಷ್ಟಿಸುವುದು. ನಿಮ್ಮ ಪಾಲುದಾರರ ವಿಶ್ವಾಸ ಮತ್ತು ಸಹಕಾರವು ನಿಮಗೆ ನಿರ್ವಹಿಸಲು ಸುಲಭವಾಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ಅನೇಕ ಕೆಲಸವನ್ನು ನಿರ್ವಹಿಸಬೇಕಾದ್ದರಿಂದ ನಿಮಗೆ ಇಂದು ಬಿಡುವಿಲ್ಲದ ದಿನವಾಗುವುದು. ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆದುಕೊಳ್ಳುವಿರಿ. ಮಸಾಲೆ ಮತ್ತು ಎಣ್ಣೆಯುಕ್ತ ಆಹಾರದಿಂದ ದೂರವಿರಿ. ದಿನದ ಅಂತ್ಯದ ವೇಳೆಗೆ ಆಲಸ್ಯ ಮನೋಭಾವವನ್ನು ಹೊಂದಬಹುದು. ಪ್ರೀತಿ ಪಾತ್ರರೊಂದಿಗೆ ಅದ್ಭುತ ಸಮಯವನ್ನು ನೀವು ಕಳೆಯುವ ಸಾಧ್ಯತೆಗಳಿವೆ. ಚಲನಚಿತ್ರ ವೀಕ್ಷಣೆ ಮಾಡುವುದರಿಂದ ನಿಮ್ಮ ಒತ್ತಡವು ನಿವಾರಣೆಯಾಗುವುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 9:20 ರಿಂದ 1: 30 ರವರೆಗೆ

English summary

Daily Horoscope 11 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Friday, October 11, 2019, 4:00 [IST]
X