For Quick Alerts
ALLOW NOTIFICATIONS  
For Daily Alerts

ಸೋಮವಾರದ ದಿನ ಭವಿಷ್ಯ (9-09-2019)

|
Daily Astrology 09/09/2019 : 12 ರಾಶಿಚಕ್ರಗಳ ದಿನ ಭವಿಷ್ಯ | BoldSky Kannada

ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು.

ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು. ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿಯಾಗುತ್ತೇವೆ. ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ

ಮೇಷ

ಹಣಕಾಸಿನ ವಿಷಯದಲ್ಲಿ ನೀವು ಅನಿಶ್ಚಿತತೆಯನ್ನು ಎದುರಿಸುತ್ತೀರಿ. ಸಂಗಾತಿಯ ಸಹಾಯದಿಂದ ನಿಮ್ಮ ಆಯವ್ಯಯವನ್ನು ಸಮತೋಲನದಲ್ಲಿ ಇರಿಸಿಕೊಳ್ಳುವಿರಿ. ಕೆಲವು ವಿಷಯದಲ್ಲಿ ನೀವು ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಸಮಸ್ಯೆಯನ್ನು ಸುಧಾರಿಸಿಕೊಳ್ಳುವಿರಿ. ವೈಯಕ್ತಿಕ ಜೀವನದಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ಸಂಗಾತಿಯಲ್ಲಿರುವ ಕೆಲವು ತಿಳುವಳಿಕೆಯ ಕೊರತೆಯು ನಿಮ್ಮಲ್ಲಿ ಆತಂಕವನ್ನು ಸೃಷ್ಟಿಸುವುದು. ಆದರೆ ಬಹುಬೇಗ ಸಹಜ ಸ್ಥಿತಿಗೆ ಹಿಂತಿರುಗುವಿರಿ. ಇಂದು ನೀವು ನಿಮ್ಮ ಪ್ರೇಮಿಯ ಜೊತೆಗೆ ಸಂತೋಷದ ದಿನವನ್ನು ಕಳೆಯುವಿರಿ. ಇಂದಿನ ಕೆಲಸವು ಸ್ವಲ್ಪ ನಿಧಾನಗತಿಯಲ್ಲಿ ಪ್ರಾರಂಭವಾಗುವುದು. ಆರೋಗ್ಯ ಸ್ಥಿತಿಯು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ. ಆದರೂ ಕೆಲವು ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾಗುವುದು.

ಅದೃಷ್ಟದ ಬಣ್ಣ: ತಿಳಿ ಹಳದಿ/ ಕ್ರೀಮ್

ಅದೃಷ್ಟದ ನಂಬರ್: 22

ಅದೃಷ್ಟದ ಸಮಯ: ಮುಂಜಾನೆ 4:15 ರಿಂದ ಸಂಜೆ 12:45ರ ವರೆಗೆ.

ವೃಷಭ

ವೃಷಭ

ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನೇ ಎದುರು ನೋಡುತ್ತಿರುವುದರಿಂದ ನೀವು ನಿಮ್ಮ ಕೆಲಸದ ಬಗ್ಗೆ ಆತುರವನ್ನು ಅನುಸರಿಸಬೇಕಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಬಣ್ಣದ ಮಾತುಗಳನ್ನು ಆಡುವವರು ಸಾಕಷ್ಟು ಜನರಿರುತ್ತಾರೆ. ಹಾಗಾಗಿ ನೀವು ನಿಮ್ಮ ಚುರುಕುತನ ಹಾಗೂ ಬುದ್ಧಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಅನುಕೂಲಕರವಾದ ದಿನ. ಕುಟುಂಬದಲ್ಲೂ ಸಮಾಧಾನಕರವಾದ ಸ್ಥಿತಿ ಇರುವುದು. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ವಿಶೇಷ ನಿಧಾರಗಳನ್ನು ಕೈಗೊಳ್ಳಲು ಇದು ಅನುಕೂಲಕರವಾದ ದಿನ. ಮಕ್ಕಳು ತಮ್ಮ ಸಾಧನೆಯ ಸಂಭ್ರಮವನ್ನು ಸ್ನೇಹಿತರೊಂದಿಗೆ ಆಚರಿಸುವರು.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ನಂಬರ್: 15

ಅದೃಷ್ಟದ ಸಮಯ: ಸಂಜೆ 5:00 ರಿಂದ ರಾತ್ರಿ 10:00ರ ವರೆಗೆ.

ಮಿಥುನ

ಮಿಥುನ

ನಿಮಗೆ ಇಂದು ಅದೃಷ್ಟ ಹಾಗೂ ಅನುಕೂಲಕರ ದಿನ ಎನ್ನಲಾಗುವುದು. ಕುಟುಂಬದಲ್ಲಿಯೂ ಶಾಂತಿ ಹಾಗೂ ನೆಮ್ಮದಿ ನೆಲೆಸಿರುತ್ತದೆ. ಸಂಗಾತಿಯೊಂದಿಗೆ ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವರು. ನಿಮ್ಮ ಪ್ರಗತಿಯನ್ನು ಹಾಗೂ ಯಶಸ್ಸನ್ನು ಕಂಡು ಪೋಷಕರು ಅತ್ಯಂತ ಸಂತಸವನ್ನು ವ್ಯಕ್ತಪಡಿಸುವರು. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವಂತೆ ಕೆಲವೆಡೆಯಿಂದ ಒತ್ತಾಯ ಬರಬಹುದು. ಸಂಗಾತಿಯ ಸಹಾಯದಿಂದ ಮನೆಯನ್ನು ನವೀಕರಿಸಲು ಯೋಜನೆಯನ್ನು ಕೈಗೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲೂ ನೆಮ್ಮದಿಯನ್ನು ಕಾಣುವಿರಿ. ನಿಮ್ಮ ಮೇಲಾಧಿಕಾರಿಯು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಕುಟುಂಬಕ್ಕೆ ಬೇಕಾದ ಅಗತ್ಯತೆಯನ್ನು ನೀವು ಪೂರೈಸುವಿರಿ. ಇದರಿಂದ ನಿಮಗೆ ಒಂದಿಷ್ಟು ಗೌರವ ದೊರೆಯುವುದು.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ನಂಬರ್: 12

ಅದೃಷ್ಟದ ಸಮಯ: ಮುಂಜಾನೆ 11:00 ರಿಂದ ರಾತ್ರಿ 8:00ರ ವರೆಗೆ.

ಕರ್ಕ

ಕರ್ಕ

ಕೆಲಸದ ವಿಷಯದಲ್ಲಿ ನೀವು ಇಂದು ಒಂದಿಷ್ಟು ಒತ್ತಡವನ್ನು ಅನುಭವಿಸುವಿರಿ. ನೀವು ಕೆಲವರೊಂದಿಗೆ ಸಂದರ್ಶನ ಹಾಗೂ ಪ್ರಯಾಣದಲ್ಲಿ ನಿರತರಾಗಿರುವುದರಿಂದ ಎಲ್ಲಾ ಕೆಲಸವನ್ನು ಒಮ್ಮೆಲೆ ನಿರ್ವಹಿಸಲು ಕಷ್ಟವಾಗುವುದು. ದಿನದ ಅಂತ್ಯದ ಹೊತ್ತಿಗೆ ಆಯಾಸಕ್ಕೆ ಒಳಗಾಗುವಿರಿ. ದೈಹಿಕ ಮತ್ತು ಮಾನಸಿಕವಾದ ಶ್ರಮವು ಇಂದು ದಿನ ಪೂರ್ತಿ ನಿಮ್ಮನ್ನು ಕಾಡುವುದು. ಕುಟುಂಬದಲ್ಲಿ ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಬೇಸರ ಹಾಗೂ ಅಮತೋಲನ ಉಂಟಾಗಿರುತ್ತದೆ. ನಿಮ್ಮ ಹೊಲಸು ಸಂಬಂಧಗಳಿಂದ ದೂರ ಬರಲು ಪ್ರಯತ್ನಿಸಿ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಅದು ನಿಮ್ಮ ಭಾವನೆಗಳನ್ನು ಬದಲಿಸಲು ಸಹಾಯ ಮಾಡುವುದು. ನಿಮ್ಮ ಅಸಂಬದ್ಧ ಹಾಗೂ ಅಸಡ್ಡೆಯ ಮನೋಭಾವವನ್ನು ಸಂಗಾತಿ ಇಷ್ಟಪಡುವುದಿಲ್ಲ. ಆದ್ದರಿಂದ ಅವುಗಳನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ಉದ್ಯಮಿಗಳು ಸಾಕಷ್ಟು ಲಾಭವನ್ನು ಗಳಿಸುವರು. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 30

ಅದೃಷ್ಟದ ಸಮಯ: ಮಧ್ಯಾಹ್ನ 2:45 ರಿಂದ ಸಂಜೆ 7:05ರ ವರೆಗೆ.

ಸಿಂಹ

ಸಿಂಹ

ಹಣಕಾಸಿಗೆ ಸಂಬಂಧಿಸಿದಂತೆ ಇಂದು ನಿಮಗೆ ಅಸ್ಥಿರವಾದ ದಿನ. ನೀವು ಏನನ್ನು ನಿರೀಕ್ಷಿಸಿರುತ್ತೀರೋ ಅದರ ವಿರುದ್ಧವಾದ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಅನಿರೀಕ್ಷಿತ ಖರ್ಚು ಉಂಟಾಗುವುದು. ಅದು ಕುಟುಂಬದಲ್ಲಿ ಒಂದಿಷ್ಟು ಆತಂಕ ಹಾಗೂ ಕಳವಳವನ್ನು ಸೃಷ್ಟಿಸುತ್ತದೆ. ನೀವು ಹಣಕ್ಕೆ ಸಂಬಂಧಿಸಿದಂತೆ ಆಪ್ತರಲ್ಲಿ ಹಾಗೂ ಸ್ನೇಹಿತರಲ್ಲಿ ಹಣವನ್ನು ಎರವಲು ಕೇಳಬಹುದು. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. ಸಹೋದ್ಯೋಗಿಗಳು ನಿಮ್ಮನ್ನು ಅನುಕರಣೆ ಮಾಡುವರು. ಕೆಲಸಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳು ನಿಮ್ಮ ಭವಿಷ್ಯಕ್ಕೆ ಅದ್ಭೂತ ಯಶಸ್ಸನ್ನು ತಂದುಕೊಡುವುದು. ಕುಟುಂಬದವರ ಜೊತೆಗೆ ಸಣ್ಣ ಪ್ರವಾಸವನ್ನು ಕೈಗೊಳ್ಳುವಿರಿ. ಅದು ನಿಮ್ಮ ಮಾನಸಿಕವಾಗಿ ನಿರಾಳತೆಯನ್ನು ನೀಡುವುದು. ಯಾವುದಾದರೂ ಕ್ರೀಡೆಯನ್ನು ಕೈಗೊಳ್ಳಿ. ಅದು ನಿಮ್ಮನ್ನು ಸದೃಢರನ್ನಾಗಿ ಮಾಡುವುದು.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಸಂಜೆ 5:00 ರಿಂದ ರಾತ್ರಿ 9:00ರ ವರೆಗೆ.

ಕನ್ಯಾ

ಕನ್ಯಾ

ನಿಮ್ಮ ಸಾಧನೆಯು ಸಹೋದ್ಯೋಗಿಗಳಿಗೆ ಹೊಟ್ಟೆ ಕಿಚ್ಚು ಉಂಟುಮಾಡುವುದು. ಹಾಗಾಗಿ ನಿಮ್ಮ ಬಗ್ಗೆ ಸಾಕಷ್ಟು ಗಾಸಿಪ್ ವಿಷಯಗಳು ಹರಡಬಹುದು. ವೃತ್ತಿ ಕ್ಷೆತ್ರದಲ್ಲಿ ಬಡ್ತಿಯನ್ನು ಪಡೆದುಕೊಳ್ಳಬಹುದು. ಆರ್ಥಿಕವಾಗಿಯೂ ಲಾಭ ಉಂಟಾಗುವುದು. ಆಪ್ತರು ಹಾಗೂ ಸಂಬಂಧಿಗಳೊಂದಿಗೆ ಸಂಭ್ರಮದ ಆಚರಣೆಯನ್ನು ಮಾಡುವಿರಿ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಕಾಳಜಿಯಿಂದ ಇರಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸಧನೆಯು ಪಾಲಕರಿಗೆ ಹೆಮ್ಮೆಯನ್ನು ತರುತ್ತದೆ. ನಿಮ್ಮ ಪ್ರೀತಿಯನ್ನು ಗಟ್ಟಿಮಾಡಿಕೊಳ್ಳಲು ನಿಮಗೆ ಅತ್ಯಂತ ಉತ್ತಮವಾದ ಸಮಯ ಇಂದು. ಕುಟುಂಬದ ವಾತಾವರಣವು ಸುಗಮವಾಗಿರುತ್ತದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 4

ಅದೃಷ್ಟದ ಸಮಯ: ಮುಂಜಾನೆ 9:00 ರಿಂದ ಮಧ್ಯಾಹ್ನ 1:30

ತುಲಾ

ತುಲಾ

ಇಂದು ನಿಮಗೆ ಅತ್ಯಂತ ಸಾಮರಸ್ಯ ಹಾಗೂ ಸುಗಮವಾದ ದಿನ. ಮುಂಜಾನೆ ಅತ್ಯಂತ ಶುಭ ಸುದ್ದಿಯನ್ನು ಕೇಳಬಹುದು. ಅದು ನಿಮ್ಮ ದಿನವನ್ನು ಇನ್ನಷ್ಟು ಸಂತೋಷ ಹಾಗೂ ಪ್ರಕಾಶಮಾನವಾಗಿ ಇರುವಂತೆ ಮಾಡುತ್ತದೆ. ಕೆಲವು ವಿಷಯದಲ್ಲಿ ನೀವು ತಾಳ್ಮೆ ಮತ್ತು ಶಾಂತ ಸ್ವಭಾವವನ್ನು ತೋರಬೇಕು. ಅನುಭವ ವ್ಯಕ್ತಿಗಳಿಂದ ಸಲಹೆ ಹಾಗೂ ಸಹಕಾರ ಪಡೆದುಕೊಂಡರೆ ಅತ್ಯುತ್ತಮವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಕೆಲವು ಬದಲಾವಣೆಯನ್ನು ಅನುಭವಿಸುವಿರಿ. ದೇವರ ಆಶೀರ್ವಾದದಿಂದ ಕುಟುಂಬದ ಪರಿಸ್ಥಿತಿ ಸುಗಮದ ಹಾದಿಗೆ ಬರುವುದು. ನಿಮ್ಮ ಶ್ರಮವನ್ನು ಪೋಷಕರು ಪ್ರಶಂಸಿಸುತ್ತಾರೆ. ಹಣಕಾಸಿನ ಸ್ಥಿತಿಯಲ್ಲಿ ಸ್ವಲ್ಪ ಏರಿಕೆಯನ್ನು ಅನುಭವಿಸುವಿರಿ. ಈ ಹಿನ್ನೆಲೆಯಲ್ಲಿಯೇ ನಿಮ್ಮ ಇನ್ನು ಒಳ್ಳೆಯ ಕೆಲಸವನ್ನು ಹುಡುಕಲು ಮುಂದಾಗುವಿರಿ. ಕೆಲವರು ನಿಮ್ಮ ಕುಟುಂಬದ ವ್ಯವಹಾರದ ಬಗ್ಗೆ ಮುತುವರ್ಜಿ ವಹಿಸುವರು. ಮಗುವಿನ ಆರೋಗ್ಯದಲ್ಲಿ ಸಕಾರಾತ್ಮಕ ಸುಧಾರಣೆ ಉಂಟಾಗುವುದು. ಜ್ವರ ಮತ್ತು ಶೀತಗಳ ಬಗ್ಗೆ ಕೊಂಚ ಮುನ್ನೆಚ್ಚರಿಕೆ ಕೈಗೊಳ್ಳಬೇಕು.

ಅದೃಷ್ಟದ ಬಣ್ಣ: ರಕ್ತ ಕೆಂಪು

ಅದೃಷ್ಟದ ಸಂಖ್ಯೆ: 28

ಅದೃಷ್ಟದ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00ರ ವರೆಗೆ.

ವೃಶ್ಚಿಕ

ವೃಶ್ಚಿಕ

ವಿವಾಹಿತ ದಂಪತಿಗಳು ವಿಹಾರಕ್ಕೆ ಹೋಗುವ ಸಾಧ್ಯತೆಗಳಿವೆ. ವಿಹಾರದಿಂದ ಅನುಕೂಲಕರ ಸ್ಥಿತಿಯನ್ನು ಅನುಭವಿಸುವರು. ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯುವುದರಿಂದ ಒಂದಿಷ್ಟು ವಿಶ್ರಾಂತಿ ದೊರೆಯುವುದು. ಉತ್ತಮ ವಿವಾಹದ ಪ್ರಸ್ತಾಪವು ನಿಮಗೆ ಸಂತೋಷ ಹಾಗೂ ನೆಮ್ಮದಿಯನ್ನು ನೀಡುವುದು. ಸಂಗಾತಿಯೊಂದಿಗೆ ದೂರದ ಸ್ಥಳಕ್ಕೆ ಸವಾರಿ ಕೈಗೊಳ್ಳುವುದರಿಂದ ಮನಃಸ್ಥಿತಿ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಜೀವನವು ಸುಂದರವಾಗುತ್ತದೆ. ಸಂಗಾತಿಗೆ ಇರುವ ತಿಳುವಳಿಕೆಯಿಂದ ನಿಮಗೆ ಹೆಮ್ಮೆ ಉಂಟಾಗುವುದು. ದೀರ್ಘ ಸಮಯದ ನಂತರ ಪೋಷಕರ ಆರೋಗ್ಯದಲ್ಲಿ ಸುಧಾರಣೆಯನ್ನು ಕಂಡುಕೊಳ್ಳುವಿರಿ. ಕೆಲಸದಲ್ಲಿ ನಿಷ್ಠೆ ಹಾಗೂ ಶ್ರಮವನ್ನು ತೋರಿದರೆ ಜೀವನವು ಪ್ರಕಾಶಮಾನವಾಗಿ ಹೊಳೆಯುತ್ತದೆ. ಜನರು ಸಹ ನಿಮ್ಮ ನಡವಳಿಕೆ ಹಾಗೂ ಶಿಷ್ಟಾಚಾರವನ್ನು ನಂಬುತ್ತಾರೆ. ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಜಯವನ್ನು ಸಾಧಿಸುವಿರಿ. ನಿಮ್ಮ ಪ್ರೀತಿಯ ವ್ಯಕ್ತಿಯೊಂದಿಗೆ ಸಮಯ ಕಳೆಯಲು ಅತ್ಯುತ್ತಮವಾದ ದಿನ.

ಅದೃಷ್ಟದ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟದ ಸಂಖ್ಯೆ: 16

ಅದೃಷ್ಟದ ಸಮಯ: ಮಧ್ಯಾಹ್ನ 12:30 ರಿಂದ ಸಂಜೆ 6:00ರ ವರೆಗೆ.

ಧನು

ಧನು

ನಿಮ್ಮ ಸಕಾರಾತ್ಮಕ ನಡವಳಿಕೆಯು ಆಕರ್ಷಣೆಯಿಂದ ಕೂಡಿರುತ್ತದೆ. ಜನರು ಸಹ ನಿಮ್ಮನ್ನು ಹಿಂಬಾಲಿಸುತ್ತಾರೆ ಮತ್ತು ಸಂಪರ್ಕಕ್ಕೆ ಬರಲು ಬಯಸುವರು. ನಿಮ್ಮ ಅನುಭವದಿಂದಾಗಿ ಸಹೋದ್ಯೋಗಿಗಳು ನಿಮ್ಮ ಅಡಿಯಲ್ಲಿ ಕೆಲಸ ಮಾಡಲು ಬಯಸುವರು. ಮೇಲಿರುವ ವ್ಯಕ್ತಿಗಳೊಂದಿಗೆ ಉಂಟಾಗುವ ಸಣ್ಣ ಸೈದ್ಧಾಂತಿಕ ಸಂಘರ್ಷವು ವೃತ್ತಿ ಕ್ಷೇತ್ರದಲ್ಲಿ ಕೊಂಚ ವ್ಯತ್ಯಾಸವನ್ನು ಸೃಷ್ಟಿಸಬಹುದು. ಕುಟುಂಬ ಜೀವನದ ಕೆಲವು ಸಂಗತಿಗಳು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಆದರೂ ನೀವು ಪರಿಸ್ಥಿತಿಯನ್ನು ಪ್ರಬುದ್ಧವಾಗಿ ನಿಭಾಯಿಸುವಿರಿ. ಹೊಸ ಉದ್ಯೋಗವು ನಿಮ್ಮನ್ನು ಆಕರ್ಷಿಸಬಹುದು. ಹಣಕಾಸಿನ ವಿಷಯದಲ್ಲಿ ಲಾಭವನ್ನು ಅನುಭವಿಸುವಿರಿ. ಆರೋಗ್ಯವು ಸಾಮಾನ್ಯವಾಗಿ ಇರುತ್ತದೆ. ಈ ಮೊದಲು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 29

ಅದೃಷ್ಟದ ಸಮಯ: ಮುಂಜಾನೆ 8:00 ರಿಂದ ಸಂಜೆ 2:30ರ ವರೆಗೆ.

ಮಕರ

ಮಕರ

ವೃತ್ತಿ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸದ ಒತ್ತಡವು ನಿಮ್ಮನ್ನು ಬಾಧಿಸುವುದರಿಂದ ನಿಮಗೆ ಇಂದು ಒತ್ತಡದ ದಿನ ಎನಿಸುವುದು. ಆದಷ್ಟು ನಿಮ್ಮ ಕೆಲಸ-ಕಾರ್ಯವನ್ನು ಮುಂದೂಡುವ ಪ್ರಯತ್ನ ಮಾಡದಿರಿ. ನಿಮ್ಮ ಕಚೇರಿಯಲ್ಲಿ ನೀವು ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವಿರಿ. ಕೆಲಸದ ಬಗ್ಗೆ ಅಸಡ್ಡೆಯನ್ನು ತೋರಿಸಿದರೆ ನಿಮಗೆ ಪ್ರತಿಕೂಲ ಉಂಟಾಗುವುದು. ಜೀವನವನ್ನು ಇನ್ನಷ್ಟು ಉತ್ತಮ ಸ್ಥಿತಿಯಲ್ಲಿ ತಂದುಕೊಳ್ಳಲು ಬೇರೆ ಉದ್ಯೋಗವನ್ನು ಹುಡುಕುವ ಸಾಧ್ಯತೆಗಳಿವೆ. ಸಮಯವೇ ಜೀವನದ ಭವಿಷ್ಯವನ್ನು ತೆರೆದಿಡುತ್ತದೆ. ಹಾಗಾಗಿ ನೀವು ಆದಷ್ಟು ಸಮಯಕ್ಕೆ ಗೌರವ ನೀಡುವುದನ್ನು ಕಲಿಯಿರಿ. ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯವು ಸೃಷ್ಟಿಯಾಗಬಹುದು. ದಿನದ ಅಂತ್ಯದ ವೇಳೆಗೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತಿರುಗುವುದು. ಸಂಬಂಧಗಳ ಮಹತ್ವವನ್ನು ಅರಿತುಕೊಳ್ಳುವಿರಿ. ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವಿರಿ. ಉದ್ಯಮಿಗಳಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆದುಕೊಳ್ಳುವಿರಿ. ಹಾಗಾಗಿ ಇಂದು ನಿಮಗೆ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲಾಭವು ದೊರೆಯುವುದು.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 4:30

ಕುಂಭ

ಕುಂಭ

ಇಂದು ನಿಮಗೆ ಅತ್ಯಂತ ಲಾಭದಾಯಕವಾದ ದಿನ. ವೃತ್ತಿಯ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗುತ್ತವೆ. ನಿಮ್ಮ ಸಂಯೋಜನೆ ಮೀರಿದರೆ ನೀವು ನಿರಾಶೆಗೆ ಒಳಗಾಗದಿರಿ. ಸಹೋದ್ಯೋಗಿಗಳೊಂದಿಗೆ ಉಲ್ಬಣಗೊಂಡ ವರ್ತನೆಯು ಕಳವಳಕ್ಕೆ ಪ್ರಮುಖ ಕಾರಣವಾಗುವುದು. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು ನಿಮಗೆ ಹೊರೆಯಾಗಿ ಪರಿಣಮಿಸುವುದು. ನಿಮ್ಮ ಸ್ನೇಹಿತರು ಅಥವಾ ಆಪ್ತ ಸಂಬಂಧಿಕರು ವಿಹಾರಕ್ಕೆ ಕರೆದೊಯ್ಯುವರು. ಅದು ನಿಮ್ಮ ಮನಸ್ಸಿಗೆ ಪುನರ್ ಚೈತನ್ಯ ನೀಡುವುದು. ವೈಯಕ್ತಿಕ ಜೀವನವು ಅತ್ಯಂತ ಸುಂದರವಾಗಿರುತ್ತದೆ. ಕುಟುಂಬದ ಬದ್ಧತೆಯು ನಿಮ್ಮನ್ನು ಕಾರ್ಯನಿರತರನ್ನಾಗಿ ಮಾಡಿಸುವುದು. ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ನೀಡುವರು. ಆರೋಗ್ಯದಿಂದ ಇರಲು ಎಣ್ಣೆಯುಕ್ತ ಆಹಾರ ಪದಾರ್ಥಗಳಿಂದ ದೂರವಿರಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 18

ಅದೃಷ್ಟದ ಸಮಯ: ಸಂಜೆ 5:00 ರಿಂದ ರಾತ್ರಿ 9:00ರ ವರೆಗೆ.

ಮೀನ

ಮೀನ

ಮುಂಜಾನೆ ಒಂದು ರೀತಿಯ ಆಲಸ್ಯದಿಂದಲೇ ಪ್ರಾರಂಭವಾಗುವುದು. ಇದು ನಿಮ್ಮ ಈ ದಿನವನ್ನು ನಿಧಾನಗತಿಯಿಂದ ಸಾಗುವಂತೆ ಮಾಡುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ. ಹಾಗಾಗಿ ಒಂದಿಷ್ಟು ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ಪಾಲಕರ ಸಂತೋಷವನ್ನು ಬಯಸುವಿರಿ. ಜೊತೆಗೆ ಅವರಿಗಾಗಿ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಆಪ್ತ ಸ್ನೇಹಿತರೊಂದಿಗೆ ಮಾತನಾಡಲು ಹಾಗೂ ಒಂದಿಷ್ಟು ಸಮಯವನ್ನು ಕಳೆಯಲು ಬಯಸುವಿರಿ. ಕುಟುಂಬಕ್ಕಾಗಿ ನಿಮ್ಮ ಸಂಗಾತಿ ಮಾಡುವ ಕೆಲಸ ಹಾಗೂ ಶ್ರಮದ ಬಗ್ಗೆ ನಿಮ್ಮಲ್ಲಿ ಅರಿವು ಮೂಡುವುದು. ಇದರಿಂದ ನಿಮ್ಮ ವೈಯಕ್ತಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಹೊಸ ವ್ಯವಹಾರ ಕೈಗೊಂಡವರು ಕೆಲಸದ ಬಗ್ಗೆ ಒಂದಿಷ್ಟು ಕಾಳಜಿಯನ್ನು ಕೈಗೊಳ್ಳಬೇಕು. ಪ್ರೇಮಿಗಳ ನಡುವೆ ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಅಂತರ ಹಾಗೂ ಬೇಸರ ಉಂಟಾಗುವುದು. ಇದು ಅಸುರಕ್ಷಿತ ಭಾವನೆಯನ್ನು ಮೂಡಿಸುವುದು. ನಿಮ್ಮ ಚೈತನ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ.

ಅದೃಷ್ಟದ ಬಣ್ಣ: ತಿಳಿ ಗುಲಾಬಿ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಸಂಜೆ 5:00 ರಿಂದ ರಾತ್ರಿ 9:00ರ ವರೆಗೆ.

English summary

Daily Horoscope 09 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
Story first published: Monday, September 9, 2019, 9:33 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more