For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ (4-09-2019)

|

ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ.

ಬುಧವಾರವಾದ ಇಂದು ಸಾಮಾನ್ಯವಾಗಿ ಎಲ್ಲರೂ ಕೆಲಸದ ಒತ್ತಡದಲ್ಲಿಯೇ ಮುಳುಗಿರುತ್ತಾರೆ. ಈ ಒತ್ತಡದ ಬದುಕಿನ ನಡುವೆಯೂ ಯಾವೆಲ್ಲಾ ಬದಲಾವಣೆಯನ್ನು ನಾವು ಕಾಣಬಹುದು? ಹೊಸದಾದ ಯಾವ ತಿರುವು ನಮ್ಮನ್ನು ಆಕರ್ಷಿಸಲಿದೆ? ಎನ್ನುವುದನ್ನು ಅರಿಯಬೇಕೆಂದುಕೊಂಡಿದ್ದರೆ ಇಂದಿನ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ

ಮೇಷ

ನಿಮಗೆ ನಿಮ್ಮ ಗುರಿಯ ಬಗ್ಗೆ ವಿಶ್ವಾಸವಿದೆ. ಅದಕ್ಕಾಗಿ ಸಾಕಷ್ಟು ಪ್ರಶಂಸೆ ದೊರೆಯುವುದು. ಗಾಸಿಪ್ ಅಥವಾ ಇತರರ ಹೇಳಿಕೆಯ ಬಗ್ಗೆ ಹೆಚ್ಚು ಗಮನ ನೀಡದೆ, ನಿಮ್ಮ ಸಮಯವನ್ನು ಉತ್ತಮ ಕೆಲಸಗಳಿಗೆ ಮೀಸಲಿಡಿ. ಉತ್ತಮ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕೆಲ ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ನೀವು ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವುದು ಸುತ್ತಲಿನ ಜನರ ಮೆಚ್ಚುಗೆಗೆ ಕಾರಣವಾಗುವುದು. ಹಣಕಾಸಿನ ಸ್ಥಿತಿ ಕೊಂಚ ಬಿಕ್ಕಟ್ಟಿನಿಂದ ಕೂಡಿರುವ ಸಾಧ್ಯತೆಗಳಿವೆ. ಆಗ ಸ್ನೇಹಿತರು ಅಥವಾ ಬಂಧುಗಳಿಂದ ಹಣವನ್ನು ಎರವಲು ಪಡೆಯುವ ಸಾಧ್ಯತೆಗಳಿವೆ. ಕೆಲಸ ಕಾರ್ಯಗಳಲ್ಲಿ ಪತ್ನಿಯ ಸಹಕಾರ, ಮಕ್ಕಳಿಂದ ಸಾಕಷ್ಟು ಕಾಳಜಿ ದೊರೆಯುವುದು. ಸಕಾರಾತ್ಮಕ ಮನೋಭಾವವು ದಿನ ಪೂರ್ತಿ ನೆಮ್ಮದಿಯಿಂದ ಇರುವಂತೆ ಮಾಡುವುದು. ಆರೋಗ್ಯದಲ್ಲಿ ಸುಧಾರಣೆ ಹೆಚ್ಚು ನೆಮ್ಮದಿಯನ್ನು ತಂದುಕೊಡುವುದು.

ಅದೃಷ್ಟ ಬಣ್ಣ: ಗಿಳಿ ಹಸಿರು ಬಣ್ಣ

ಅದೃಷ್ಟ ಸಂಖ್ಯೆ: 26

ಅದೃಷ್ಟದ ಸಮಯ: ಬೆಳಿಗ್ಗೆ 4:25 ರಿಂದ ಮಧ್ಯಾಹ್ನ 12:30ರವರೆಗೆ.

ವೃಷಭ

ವೃಷಭ

ಇಂದು ನಿಮಗೆ ಒಂದಿಷ್ಟು ಗೊಂದಲವನ್ನು ಸೃಷ್ಟಿಸುವುದು. ಅನುಭ ವಿವ್ಯಕ್ತಿಗಳ ಸಂಪರ್ಕವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆಕ್ರಮಣಕಾರಿ ವರ್ತನೆಯು ನಿಮಗೆ ಸಮಸ್ಯೆಯನ್ನು ಸೃಷ್ಟಿಸಬಹುದು. ನಿಮ್ಮ ಶ್ರಮವು ಕೆಲಸದಲ್ಲಿ ವ್ಯರ್ಥವಾಗುವುದು. ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನ ನೀಡುವುದು ಸೂಕ್ತ. ಹಣಕಾಸಿನ ವಿಷಯದಲ್ಲಿ ಈ ದಿನ ನಿಮಗೆ ಮಿಶ್ರ ಫಲ ದೊರೆಯುವುದು. ಉಳಿತಾಯದ ಬಗ್ಗೆ ಹೆಚ್ಚು ಗಮನವನ್ನು ನೀಡಿ. ಮಕ್ಕಳು ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರುವರು. ಕಲೆ ಮತ್ತು ಸಂಸ್ಕøತಿಯಲ್ಲಿ ತೊಡಗಿಕೊಂಡವರಿಗೆ ಉತ್ತಮ ವೇದಿಕೆ ದೊರೆಯುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ನಿಮ್ಮ ಆರೋಗ್ಯ ಉತ್ತಮವಾಗಿರಲು ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು. ಉದ್ಯಮಿಗಳಿಗೆ ಲಾಭ ದೊರೆಯುವುದು. ಯೋಜನಾ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಧ್ಯಾನವು ಸಕಾರಾತ್ಮಕ ಬದಲಾವಣೆಯನ್ನು ನೀಡುವುದು.

ಅದೃಷ್ಟ ಬಣ್ಣ: ಕೆಂಪು ಬಣ್ಣ

ಅದೃಷ್ಟ ಸಂಖ್ಯೆ: 35

ಅದೃಷ್ಟದ ಸಮಯ: ಮಧ್ಯಾಹ್ನ 2:00 ರಿಂದ 7:35ರವರೆಗೆ.

ಮಿಥುನ

ಮಿಥುನ

ಈ ದಿನ ಹಣಕಾಸಿನ ವಿಷಯದಲ್ಲಿ ಉತ್ತಮ ಸುದ್ದಿಯನ್ನು ಕೇಳುವಿರಿ. ಆದಷ್ಟು ಉತ್ತಮ ಹೂಡಿಕೆಯ ಬಗ್ಗೆ ಯೋಚಿಸಿ. ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಧನಲಾಭ ಉಂಟಾಗುವುದು. ಒಡಹುಟ್ಟಿದವರೊಂದಿಗೆ ಮನಃಸ್ಥಾಪ ಉಂಟಾಗುವುದು. ನಿಮ್ಮ ಮಡದಿಯ ಸಲಹೆಯಂತೆ ನಡೆಯುವುದು ನಿಮಗೆ ಉತ್ತಮ. ಮಕ್ಕಳು ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಬಹುದು. ಉದ್ಯಮಿಗಳಿಗೆ ಇಂದು ಮಂದಗತಿಯ ದಿನ ಆಗುವುದು. ಕೆಲಸದ ಬದಲಾವಣೆಯ ವಿಷಯ ಮನಸ್ಸಿಗೆ ಬರುವುದು. ಇತರರಿಗೆ ಸಲಹೆ ನೀಡುವುದು ನಿಲ್ಲಿಸಿ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.

ಅದೃಷ್ಟ ಬಣ್ಣ: ಆಕಾಶ ನೀಲಿ

ಅದೃಷ್ಟ ಸಂಖ್ಯೆ: 26

ಅದೃಷ್ಟದ ಸಮಯ: ಸಂಜೆ 6:25 ರಿಂದ 8:40ರ ವರಗೆ.

ಕರ್ಕ

ಕರ್ಕ

ಇಂದು ನಿಮಗೆ ಹೆಚ್ಚಿನ ವಿಶ್ರಾಂತಿ ದೊರೆಯುವುದು. ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸುವಿರಿ. ಮೇಲಾಧಿಕಾರಿಯಿಂದ ಪ್ರಶಂಸೆ ದೊರೆಯುವುದು. ಪಾಲುದಾರರಿಂದ ದೊರೆಯುವ ಬೆಂಬಲ ಸಂತೋಷವನ್ನು ತರುವುದು. ಪ್ರೀತಿ ಪಾತ್ರರಿಂದ ಉತ್ತಮ ಬೆಂಬಲ ದೊರೆಯುವುದು. ಅನಗತ್ಯ ಒತ್ತಡವನ್ನು ದೂರವಿಡಿ. ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಹಣಕಾಸಿನ ಲಾಭವು ಈ ದಿನದ ಮುಂಭಾಗದಲ್ಲಿ ಇರುವುದು. ಹಣವನ್ನು ವ್ಯಯಿಸುವಾಗ ಬುದ್ಧಿವಂತಿಕೆಯನ್ನು ಬಳಸಿ. ಈ ದಿನದ ಆರಂಭ ಧ್ಯಾನದಿಂದ ಕೂಡಿರಲಿ.

ಅದೃಷ್ಟ ಬಣ್ಣ: ಕಿತ್ತಳೆ ಬಣ್ಣ

ಅದೃಷ್ಟ ಸಂಖ್ಯೆ: 8

ಅದೃಷ್ಟದ ಸಮಯ: ಸಂಜೆ 5:05 ರಿಂದ 10:30ವರಗೆ.

ಸಿಂಹ

ಸಿಂಹ

ಈ ದಿನ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವಿರಿ. ಅದು ನಿಮಗೆ ಹೆಚ್ಚಿನ ಸಂತೋಷವನ್ನು ನೀಡುವುದು. ಕೆಲಸದ ವಿಷಯದಲ್ಲೂ ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಮೇಲಾಧಿüಕಾರಿಗಳಿಂದ ಪ್ರಶಂಸೆ ದೊರೆಯುವುದು. ಜಂಟಿ ವ್ಯವಹಾರದಲ್ಲಿ ಇರುವವರು ಅಧಿಕ ಲಾಭವನ್ನು ಪಡೆದುಕೊಳ್ಳುವರು. ಉತ್ತಮ ಸುದ್ದಿಯು ನಿಮ್ಮ ಹಾದಿಯಲ್ಲಿ ಬರುವುದು. ಅದು ನಿಮಗೆ ಯಶಸ್ಸನ್ನು ತಂದುಕೊಡುವುದು. ನಿಕಟ ಸಂಬಂಧಿಗಳಿಂದ ವಿವಾದ ಉಂಟಾಗುವುದು. ಅದು ನಿಮಗೆ ನಿರಾಸೆಯನ್ನು ಉಂಟುಮಾಡುವುದು. ಕುಟುಂಬದಲ್ಲಿ ಉದ್ಭವಿಸುವ ವಿವಾದವನ್ನು ತಪ್ಪಿಸಿ. ಸ್ನೇಹಿತರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ವನ್ಯ ಜೀವಿ ಪ್ರಿಯರು ವನ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ನೀವು ದೃಢ ಚಿತ್ತ ಹೊಂದಿದ್ದರೆ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕಂದು ಬಣ್ಣ

ಅದೃಷ್ಟ ಸಂಖ್ಯೆ: 23

ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ 4:00ವರಗೆ.

ಕನ್ಯಾ

ಕನ್ಯಾ

ಸಂತೋಷದ ಮನೋಭಾವವು ಜನರನ್ನು ಆಕರ್ಷಿಸುತ್ತದೆ. ಹಣಕಾಸಿನ ಮುಂಭಾಗವು ಈ ದಿನ ಅನುಕೂಲವನ್ನು ಉಂಟುಮಾಡುವುದು. ಈ ದಿನ ಒಂದಿಷ್ಟು ವಿಶ್ರಾಂತಿಯನ್ನು ನೀಡುವುದು. ಆರ್ಧಿಕವಾಗಿ ಯಾರಿಗಾದರೂ ಸಹಾಯ ಮಾಡಲು ಇಂದು ನಿಮಗೆ ಉತ್ತಮವಾದ ದಿನ. ನಿಮ್ಮ ಸಂಗಾತಿಯ ವರ್ತನೆ ಕುಟುಂಬದ ಕಾಳಜಿಯನ್ನು ತೋರುವುದು. ಹಿರಿಯರು ಧಾರ್ಮಿಕ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿ ಪಾತ್ರರಿಂದ ಆಶ್ಚರ್ಯವನ್ನು ತಂದುಕೊಡುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಗುರಿ ಸಾಧನೆಯೆಡೆಗೆ ಹೆಚ್ಚಿನ ಒಲವನ್ನು ತೋರುವರು. ಅನಗತ್ಯ ಒತ್ತಡವನ್ನು ತೆಗೆದುಹಾಕಿ. ಅದು ನಿಮ್ಮ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟುಮಾಡುವುದು. ಮನೆಯವರೊಂದಿಗೆ ಮನೋರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಿ. ಪುನಃಶ್ಚೇತನ ದೊರೆಯುವುದು. ಸ್ಥೂಲಕಾಯ ಇರುವವರು ಒಂದಿಷ್ಟು ವ್ಯಾಯಾಮವನ್ನು ಕೈಗೊಳ್ಳಬೇಕು.

ಅದೃಷ್ಟ ಬಣ್ಣ: ನೀಲಿ ಬಣ್ಣ

ಅದೃಷ್ಟ ಸಂಖ್ಯೆ: 7

ಅದೃಷ್ಟದ ಸಮಯ: ಸಂಜೆ 5:40 ರಿಂದ 9:40ರ ವರೆಗೆ.

ತುಲಾ

ತುಲಾ

ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಇಂದು ಉತ್ತಮ ದಿನವಾಗಲಿದೆ. ಸಾರ್ವಜನಿಕರಿಂದ ಸಾಕಷ್ಟು ಪ್ರೋತ್ಸಾಹ ದೊರೆಯುವುದು. ನಿಮ್ಮ ಕಾರ್ಯಕ್ಷಮತೆಯು ಸುಧಾರಣೆ ಕಾಣುವುದು. ಹಣಕಾಸಿನ ವಿಷಯದಲ್ಲಿ ಒಂದಿಷ್ಟು ಲಾಭವನ್ನು ಅನುಭವಿಸುವಿರಿ. ಉಳಿತಾಯದ ಬಗ್ಗೆ ಕಟ್ಟುನಿಟ್ಟಾದ ಯೋಜನೆ ಕೈಗೊಳ್ಳುವುದು ಉತ್ತಮ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ತಂದೆ ಕೆಲಸಕ್ಕೆ ಸಂಬಂಧಿಸಿದ ಪ್ರವಾಸ ಕೈಗೊಳ್ಳಬಹುದು. ಪ್ರೀತಿ ಪಾತ್ರರೊಂದಿಗೆ ಮನೋರಂಜನೆಗೆ ಹೋಗುವುದು ಹಾಗೂ ರಾತ್ರಿ ಊಟವನ್ನು ಕೈಗೊಳ್ಳುವುದು ಹೆಚ್ಚಿನ ಸಂತೋಷ ನೀಡುವುದು. ಹೊಟ್ಟೆ ಕಾಯಿಲೆ ಇರುವವರಿಗೆ ಪರಿಹಾರ ದೊರೆಯುವುದು.

ಅದೃಷ್ಟ ಬಣ್ಣ: ಗುಲಾಬಿ ಬಣ್ಣ

ಅದೃಷ್ಟ ಸಂಖ್ಯೆ: 16

ಅದೃಷ್ಟದ ಸಮಯ: ಮುಂಜಾನೆ 8:00 ರಿಂದ ಸಂಜೆ 6:15ರವರೆಗೆ.

ವೃಶ್ಚಿಕ

ವೃಶ್ಚಿಕ

ಅನಗತ್ಯವಾಗಿ ಚಿಂತಿಸುವುದನ್ನು ನಿಲ್ಲಿಸಿ. ಅದು ನಿಮ್ಮ ಶಕ್ತಿಯನ್ನು ಹಾಗೂ ನೆಮ್ಮದಿಯನ್ನು ಹಾಳುಮಾಡುವುದು. ನೀವು ನಿಮ್ಮ ಗಮನವನ್ನು ಆಸಕ್ತಿಯುಳ್ಳ ಕ್ಷೇತ್ರದ ಕಡೆಗೆ ನೀಡುವುದು ಉತ್ತಮ. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಉತ್ತಮವಾದ ದಿನ. ಗ್ರಹ ಗತಿಗಳು ನಿಮಗೆ ಅನುಕೂಲವನ್ನು ತಂದುಕೊಡುವುದರಿಂದ ನಿಮ್ಮ ಹೊಸ ಜೀವನವನ್ನು ಆರಂಭಿಸಲು ಸೂಕ್ತವಾದ ದಿನ. ಶ್ರಮದಿಂದ ಮಾಡುವ ಕೆಲಸವು ನಿಮಗೆ ಉತ್ತಮ ಲಾಭವನ್ನು ತಂದುಕೊಡುವುದು. ಏರಿಳಿತವು ನಿಮ್ಮ ಹಾದಿಯಲ್ಲಿ ಕಾಣುವುದು. ಹೊಸ ಜೋಡಿಗಳಿಗೆ ಕೊಂಚ ಹೊಂದಾಣಿಕೆ ಸಮಸ್ಯೆ ಉಂಟಾಗಬಹುದು. ಕುಟುಂಬದ ಸಮಸ್ಯೆಗಳು ಕೆಲವು ಸಮಯ ನಿಮ್ಮನ್ನು ಕಾಡಬಹುದು. ನೀವು ಮಾತನಾಡುವಾಗ ಅಥವಾ ಯಾವುದಾದರೂ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ.

ಅದೃಷ್ಟ ಬಣ್ಣ: ಕಂದು ಅಥವಾ ತುಕ್ಕಿನ ಬಣ್ಣ

ಅದೃಷ್ಟ ಸಂಖ್ಯೆ: 12

ಅದೃಷ್ಟದ ಸಮಯ: ಮುಂಜಾನೆ 5:00 ರಿಂದ ಮಧ್ಯಾಹ್ನ 1:25ರವರೆಗೆ.

ಧನು

ಧನು

ಮೂರನೇ ವ್ಯಕ್ತಿಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳದಿರಿ. ಇದು ನಿಮಗೆ ನಿರಾಸೆಯನ್ನು ಉಂಟುಮಾಡುವುದು. ನಿಮ್ಮ ಭಾವನೆ ಹಾಗೂ ವರ್ತನೆಯನ್ನು ನಿಯಂತ್ರಿಸಲು ಇತರರಿಗೆ ಬಿಡದಿರಿ. ಸಹೋದ್ಯೋಗಿಗಳು ನಿಮ್ಮ ಕೆಲಸದೊಂದಿಗೆ ಉತ್ತಮ ಕಾರ್ಯ ನಿರ್ವಹಿಸಬಹುದು. ಹೊಸ ಹೂಡಿಕೆಗೆ ಉತ್ತಮ ಸಮಯವಲ್ಲ. ಸ್ನೇಹಿತರಿಂದ ಮತ್ತು ಬಂಧುಗಳಿಂದ ಒಂದಿಷ್ಟು ಹಣವನ್ನು ಎರವಲು ಪಡೆಯುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ದ್ವೇಷ ಸಾಧಿಸಲು ಮುಂದಾಗದಿರಿ. ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸುದ್ದಿಯನ್ನು ನೀಡುವರು. ಆದಷ್ಟು ಮೊಂಡು ವರ್ತನೆಯಿಂದ ದೂರವಿರಿ. ಆರೋಗ್ಯಕ್ಕಿಂತ ಹೆಚ್ಚು ಯಾವುದೂ ಅಲ್ಲ ಎನ್ನುವುದನ್ನು ನೆನಪಿನಲ್ಲಿಡಿ.

ಅದೃಷ್ಟ ಬಣ್ಣ: ಬಿಳಿ ಬಣ್ಣ

ಅದೃಷ್ಟ ಸಂಖ್ಯೆ: 34

ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 7:55ರವರೆಗೆ.

ಮಕರ

ಮಕರ

ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ನಿಧಾನವಾದ ದಿನವಾಗಿರುತ್ತದೆ. ವಾತಾವರಣವು ಅನುಕೂಲಕರ ದಿನವಾಗಿರುತ್ತದೆ. ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಆದ್ಯತೆ ನೀಡಿ. ನಿಮ್ಮ ಜ್ಞಾನ ಹಾಗೂ ಅನುಭವವು ಹೆಚ್ಚಿನ ಮಾರ್ಗದರ್ಶನವನ್ನು ನೀಡುವುದು. ಸ್ನೇಹಿತರು ಮತ್ತು ಬಂಧುಗಳು ನಿಮ್ಮಿಂದ ಉಪಯುಕ್ತ ಸಲಹೆಯನ್ನು ಪಡೆದುಕೊಳ್ಳುವರು. ಹಿರಿಯರ ಆರೋಗ್ಯದಲ್ಲಿ ಕಾಳಜಿ ಇರಲಿ. ಹೃದಯ ಸಂಬಂಧಿತ ಸಮಸ್ಯೆ ಕಾಡಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಯ್ದುಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಾಧನೆ ಬಗ್ಗೆ ನಿಮ್ಮ ಪೋಷಕರು ಹೆಮ್ಮೆ ಪಡುತ್ತಾರೆ.

ಅದೃಷ್ಟ ಬಣ್ಣ: ಕಪ್ಪು ಮಿಶ್ರಿತ ಕೆಂಪು (ಮರೂನ್) ಬಣ್ಣ

ಅದೃಷ್ಟ ಸಂಖ್ಯೆ: 10

ಅದೃಷ್ಟದ ಸಮಯ: ಮುಂಜಾನೆ 10:05 ರಿಂದ ಸಂಜೆ 4:00 ರವರೆಗೆ.

ಕುಂಭ

ಕುಂಭ

ಇಂದು ಪ್ರಯಾಣದಲ್ಲಿ ನೀವು ನಿರತರಾಗಿರುತ್ತೀರಿ. ಇಂದು ನೀವು ವಿಪರೀತಿ ಸಾಹಸವನ್ನು ಮಾಡಬಹುದು. ಹಣಕಾಸಿನ ವಿಷಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಉತ್ತಮ ನಿರ್ಧಾರವನ್ನು ಕೈಗೊಳ್ಳುವಿರಿ. ಯೋಗ ಅಥವಾ ವ್ಯಾಯಾಮಕ್ಕೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆಗಳಿರುತ್ತವೆ. ಉದ್ಯಮಿಗಳಿಗೆ ಇಂದು ಲಾಭದಾಯಕ ದಿನ. ನಿಮ್ಮ ಗುರಿ ಸಾಧನೆಗೆ ಪೋಷಕರಿಂದ ಆಶೀರ್ವಾದ ದೊರೆಯುವುದು. ಕೆಲಸಕ್ಕೆ ಸಂಬಂಧಿಸಿದಂತೆ ನಿಮಗೆ ಉತ್ತಮವಾದ ದಿನ. ಕೆಲಸದಲ್ಲಿ ನೀವು ಸಣ್ಣ ನಿರ್ಲಕ್ಷ್ಯ ತೋರಿಸದರೂ ಇತರರಿಗೆ ತೊಂದರೆ ಉಂಟಾಗುವ ಸಾಧ್ಯತೆಗಳಿವೆ.

ಅದೃಷ್ಟ ಬಣ್ಣ: ಹಸಿರು ಬಣ್ಣ

ಅದೃಷ್ಟ ಸಂಖ್ಯೆ: 2

ಅದೃಷ್ಟದ ಸಮಯ: ಸಂಜೆ 7:00 ರಿಂದ ಮುಂಜಾನೆ 10:30ರವರೆಗೆ.

ಮೀನ

ಮೀನ

ಅನಿರೀಕ್ಷಿತವಾಗಿ ಎದುರಾಗುವ ಖರ್ಚು ನಿಮ್ಮ ಹಣಕಾಸು ಸ್ಥಿತಿಯನ್ನು ದುರ್ಬಲಗೊಳಿಸುವುದು. ಹಾಗಾಗಿ ಉಳಿತಾಯದ ಬಗ್ಗೆ ಹೆಚ್ಚು ಗಮನವನ್ನು ನೀಡಿ. ಹಣಕಾಸಿಗೆ ಸಂಬಂಧಿಸಿದಂತೆ ಹೆಚ್ಚು ಬುದ್ಧಿವಂತಿಕೆಯನ್ನು ತೋರಬೇಕು. ನಿಮ್ಮ ಸಂಗಾತಿಯು ನಿಮಗೆ ಉತ್ತಮ ಸಲಹೆಯನ್ನು ನೀಡುವರು. ಆರೋಗ್ಯದ ಬಗ್ಗೆ ಅಸಡ್ಡೆಯನ್ನು ತೋರದಿರಿ. ಶಾಂತ ಚಿತ್ತವನ್ನು ಅನುಭವಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ಅನಗತ್ಯ ಒತ್ತಡ ಬೇಡ. ಸಹೋದ್ಯೋಗಿಗಳ ವರ್ತನೆ ಕೆಲವು ಗೊಂದಲವನ್ನು ಸೃಷ್ಟಿಸಬಹುದು. ಕಲೆಗೆ ಸಂಬಂಧಿಸಿದ ಕ್ಷೇತ್ರದಲ್ಲಿರುವವರಿಗೆ ಉತ್ತಮ ವೇದಿಕೆ ದೊರೆಯುವುದು. ಸಂಬಂಧಗಳ ವಿಷಯದಲ್ಲಿ ಕೆಲವು ತೊಂದರೆಗಳು ಎದುರಾಗಬಹುದು..

ಅದೃಷ್ಟ ಬಣ್ಣ: ನೆರಳೆ ಬಣ್ಣ

ಅದೃಷ್ಟ ಸಂಖ್ಯೆ: 4

ಅದೃಷ್ಟದ ಸಮಯ: ಮುಂಜಾನೆ 4:40 ರಿಂದ ಮಧ್ಯಾಹ್ನ 12:30ರವರೆಗೆ.

English summary

Daily Horoscope 04 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more