For Quick Alerts
ALLOW NOTIFICATIONS  
For Daily Alerts

ಶುಕ್ರವಾರದ ದಿನ ಭವಿಷ್ಯ (4-10-2019)

|
Astrology 04/10/2019 : 12 ರಾಶಿಚಕ್ರಗಳ ದಿನ ಭವಿಷ್ಯ | BoldSky Kannada

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.

Dina Bhavishya

ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ: 21 ಮಾರ್ಚ್ 19 ಏಪ್ರಿಲ್

ಮೇಷ: 21 ಮಾರ್ಚ್ 19 ಏಪ್ರಿಲ್

ನಿಮ್ಮ ಗುರಿಯ ಸಾಧನೆ ಬಗ್ಗೆ ನಿಮಗೆ ವಿಶ್ವಾಸ ಇರುತ್ತದೆ. ಅದಕ್ಕಾಗಿ ಒಂದಿಷ್ಟು ಪ್ರಶಂಸೆಯನ್ನು ಸಹ ಪಡೆದುಕೊಳ್ಳುವಿರಿ. ಗಾಸಿಪ್ ಬಗ್ಗೆ ನೀವು ಗಮನವನ್ನು ಕೇಂದ್ರೀಕರಿಸುವ ಬದಲು ನಿಮ್ಮ ಬಿಡುವಿನ ಸಮಯವನ್ನು ಉಪಯುಕ್ತ ಸಂಗತಿಗಳಿಗೆ ಬಳಸಿಕೊಳ್ಳಿ. ಸ್ಫೂರ್ತಿದಾಯಕ ಪುಸ್ತಕ ಓದುವುದರಿಂದ ನಿಮ್ಮ ಜ್ಞಾನ ಹೆಚ್ಚುವುದು. ವೃತ್ತಿ ಕ್ಷೇತ್ರದಲ್ಲಿ ನೀವು ನಿಮ್ಮ ಗುರಿ ಸಾಧನೆ ಮಾಡುವಿರಿ. ನಿಮ್ಮ ಏಳಿಗೆ ಹಾಗೂ ಯಶಸ್ಸನ್ನು ಕಂಡು ಸಹೋದ್ಯೋಗಿಗಳು ಅಸೂಯೆಯನ್ನು ವ್ಯಕ್ತಪಡಿಸಬಹುದು. ಸದಾ ಕೆಲಸದಲ್ಲಿ ನಿರತರಾಗುವ ನಿಮ್ಮ ಗುಣವನ್ನು ಸುತ್ತಲಿನವರು ಪ್ರಶಂಸಿಸುವರು. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಅನುಭವಿಸುವಿರಿ. ಆಪ್ತರಿಂದ ಹಣವನ್ನು ಎರವಲು ಪಡೆಯುವ ಸಾಧ್ಯತೆಗಳಿವೆ. ಇಂದು ಕುಟುಂಬದಲ್ಲಿ ಸಾಮಾನ್ಯ ಸ್ಥಿತಿ ಮುಂದುವರಿಯುವುದು. ಬಾಕಿ ಉಳಿದ ಕೆಲಸವನ್ನು ಈಗ ಮುಗಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಮಾರ್ಗದರ್ಶನದಂತೆ ಮಕ್ಕಳು ಕೆಲಸ ನಿರ್ವಹಿಸುವರು. ಸಕಾರಾತ್ಮಕ ಮನೋಭಾವವು ನಿಮ್ಮನ್ನು ಉಲ್ಲಾಸದಲ್ಲಿ ಇರುವಂತೆ ಮಾಡುತ್ತದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆಯನ್ನು ಕಾಣುವಿರಿ.

ಅದೃಷ್ಟದ ಬಣ್ಣ: ಆಳವಾದ ನೀಲಿ

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಬೆಳಿಗ್ಗೆ 6:45 ರಿಂದ ಮಧ್ಯಾಹ್ನ 3:20 ರವರೆಗೆ

ವೃಷಭ: 20 ಏಪ್ರಿಲ್-20 ಮೇ

ವೃಷಭ: 20 ಏಪ್ರಿಲ್-20 ಮೇ

ಇಂದು ನಿಮಗೆ ಗೊಂದಲಮಯವಾದ ದಿನವಾಗಬಹುದು. ನಿಮ್ಮ ಸುರಕ್ಷತೆಗಾಗಿ ನುರಿತ ವ್ಯಕ್ತಿಯೊಂದಿಗೆ ಸಲಹೆ ಸಹಕಾರ ಪಡೆಯುವುದು ಸೂಕ್ತ. ನಿಮ್ಮ ಆಕ್ರಮಣಕಾರಿ ವರ್ತನೆಯು ಸಮಸ್ಯೆಯನ್ನು ಸೃಷ್ಟಿಸುವಂತೆ ಮಾಡುವುದು. ಪರಿಸ್ಥಿತಿಗಳು ನಿಮ್ಮ ಪರವಾಗಿ ಇರುವ ಸಾಧ್ಯತೆಗಳು ಕಡಿಮೆ. ನೀವು ನಿಮ್ಮ ಕೆಲಸದಲ್ಲಿಯೇ ಹೆಚ್ಚು ಶ್ರಮವನ್ನು ವ್ಯಯಿಸುವಿರಿ. ನೀವು ವಿಷಯಗಳನ್ನು ಸುಧಾರಿಸುವ ಕೆಲಸ ಮಾಡಬೇಕು. ನಿಮ್ಮ ಉತ್ಪ್ರೇಕ್ಷೆಯ ಸ್ವಭಾವವು ನಿಮಗೆ ಹಾನಿಯನ್ನು ಉಂಟುಮಾಡುವುದು. ನಿಮ್ಮ ಕೆಲಸದ ಬಗ್ಗೆಯೇ ಹೆಚ್ಚು ಗಮನ ನೀಡಿ. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ ದೊರೆಯುವುದು. ಕಲೆ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಿಗೆ ಉತ್ತಮ ಅವಕಾಶ ಹಾಗೂ ಯಶಸ್ಸು ದೊರೆಯುವುದು. ದಿನದ ಆರಂಭವನ್ನು ಯೋಗ ಮತ್ತು ವ್ಯಾಯಾಮದಿಂದ ಪ್ರಾರಂಭಿಸಿ. ಧ್ಯಾನವು ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಡುವುದು.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಬೆಳಿಗ್ಗೆ 1:40 ರಿಂದ 7:45 ರವರೆಗೆ.

ಮಿಥುನ: 21 ಮೇ-20 ಜೂನ್

ಮಿಥುನ: 21 ಮೇ-20 ಜೂನ್

ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಉತ್ತಮವಾದ ದಿನ. ನೀವು ಉತ್ತಮ ಹೂಡಿಕೆಗೆ ಯೋಜನೆಯನ್ನು ಕೈಗೊಳ್ಳಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಭಾರಿ ಲಾಭ ದೊರೆಯುವುದು. ಆರೋಗ್ಯದಲ್ಲಿ ಉಂಟಾಗುವ ಸುಧಾರಣೆಯು ನಿಮಗೆ ಸಕಾರಾತ್ಮಕ ಶಕ್ತಿಯನ್ನು ನೀಡುವುದು. ಒಡಹುಟ್ಟಿದವರ ನಡುವೆ ಕೆಲವು ವಿಷಯಕ್ಕೆ ವೈಮನಸ್ಸು ಉಂಟಾಗಬಹುದು. ನಿಮ್ಮ ಪ್ರೇಮಿಯೊಂದಿಗೆ ಪ್ರಣಯದ ಕ್ಷಣಗಳನ್ನು ಅನುಭವಿಸುವಿರಿ. ಮಕ್ಕಳು ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗಬಹುದು. ಇತರರಿಗೆ ಸಲಹೆ ನೀಡುವುದನ್ನು ನಿಲ್ಲಿಸಿ. ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡಿ. ವ್ಯವಹಾರವನ್ನು ಸರಿಯಾಗಿ ನಿರ್ವಹಿಸುವುದರ ಮೂಲಕ ಯಶಸ್ಸನ್ನು ಪಡೆಯಿರಿ.

ಅದೃಷ್ಟ ಬಣ್ಣ: ಆಕಾಶ ನೀಲಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ರಾತ್ರಿ 8:25 ರಿಂದ 11:00 ರವರೆಗೆ

ಕರ್ಕ: 21 ಜೂನ್ 22 ಜುಲೈ

ಕರ್ಕ: 21 ಜೂನ್ 22 ಜುಲೈ

ಇಂದು ನಿಮಗೆ ವಿಶ್ರಾಂತಿಯ ದಿನವಾಗುವುದು. ಬಾಕಿ ಉಳಿದ ಕೆಲಸವನ್ನು ಇಂದು ಪೂರ್ಣಗೊಳಿಸುವಿರಿ. ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ನಿಮ್ಮ ಪಾಲುದಾದರರಿಂದ ದೊರೆಯುವ ಬೆಂಬಲವು ನಿಮಗೆ ವಿಶೇಷ ಎನಿಸುವುದು. ನೀವು ಕುಟುಂಬದ ವಿಷಯದಲ್ಲಿ ಸಂಘಟಿತರಾಗಿರುತ್ತೀರಿ. ಪ್ರೇಮಿಯೊಂದಿಗೆ ಕೆಲವು ವಿಷಯಗಳ ಚರ್ಚೆ ನಡೆಯುವುದು. ಅನಗತ್ಯವಾಗಿ ಯಾವುದೇ ವಿಷಯಗಳ ಬಗ್ಗೆ ಹೆಚ್ಚು ಚಿಂತಿಸುವುದು ಹಾಗೂ ಒತ್ತಡಕ್ಕೆ ಒಳಗಾಗುವುದನ್ನು ನಿಲ್ಲಿಸಿ. ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಆರ್ಥಿಕ ವಿಷಯದಲ್ಲಿ ಒಂದಿಷ್ಟು ಲಾಭ ದೊರೆಯುವುದು. ಹಣವನ್ನು ವ್ಯಯಿಸುವಾಗ ಬುದ್ಧಿವಂತಿಕೆಯನ್ನು ಬಳಸಿ. ದಿನದ ಆರಂಭವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಮಧ್ಯಾಹ್ನ 12:45 ರಿಂದ 6:20 ರವರೆಗೆ

ಸಿಂಹ: 23 ಜುಲೈ-22 ಆಗಸ್ಟ್

ಸಿಂಹ: 23 ಜುಲೈ-22 ಆಗಸ್ಟ್

ನಿಮ್ಮ ಪ್ರೀತಿ ಪಾತ್ರರೊಂದಿಗೆ ಈ ದಿನವನ್ನು ನೀವು ಆನಂದಿಸುವಿರಿ. ಕೆಲಸದ ವಿಷಯದಲ್ಲೂ ಇಂದು ನಿಮಗೆ ಉತ್ತಮ ದಿನ. ನಿಮ್ಮ ಕೆಲಸ ಹಾಗೂ ಪರಿಶ್ರಮವನ್ನು ಮೇಲಾಧಿಕಾರಿಗಳು ಗಮನಿಸುವರು. ಜೊತೆಗೆ ಸೂಕ್ತ ಪ್ರಶಂಸೆಯನ್ನು ನೀಡುವರು. ಜಂಟಿ ವ್ಯವಹಾರದಲ್ಲಿ ಇರುವವರು ಅಧಿಕ ಲಾಭವನ್ನು ಪಡೆದುಕೊಳ್ಳುವರು. ಉತ್ತಮ ಸುದ್ದಿಗಳು ನಿಮ್ಮ ಹಾದಿಗೆ ಬರುತ್ತವೆ. ಕೆಲವು ನಿಕಟ ಸಂಬಂಧಿಗಳು ನಿಮ್ಮನ್ನು ನಿರಾಸೆಗೊಳಿಸಬಹುದು. ಕುಟುಂಬದಲ್ಲಿ ಉಂಟಾಗುವ ಅನಪೇಕ್ಷಿತ ವಾದಗಳನ್ನು ತಪ್ಪಿಸಿ. ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಿರಿ. ವನ್ಯ ಜೀವಿ ಪ್ರಿಯರು ಉತ್ತಮ ಚಾರಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನೀವು ದೃಢ ಚಿತ್ತವನ್ನು ಹೊಂದಿದರೆ ಅನೇಕ ಸಮಸ್ಯೆಗಳನ್ನು ಬಹು ಬೇಗ ನಿವಾರಿಸಬಹುದು. ನಿಮ್ಮ ಆರೋಗ್ಯವು ಸಾಧಾರಣವಾಗಿರುತ್ತದೆ.

ಅದೃಷ್ಟ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಬೆಳಿಗ್ಗೆ 11:30 ರಿಂದ 9:55 ರವರೆಗೆ

ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

ನಿಮ್ಮ ಸಂತೋಷದ ಮನೋಭಾವವು ಜನರನ್ನು ಆಕರ್ಷಿಸುತ್ತದೆ. ಜೊತೆಗೆ ಈ ದಿನವನ್ನು ಪೂರ್ತಿಯಾಗಿ ಆನಂದಿಸಬಹುದು. ಹಣಕಾಸಿನ ವಿಷಯದಲ್ಲಿ ಅನುಕೂಲಕರವಾದ ದಿನವಾಗುವುದು. ಇಂದು ನಿಮಗೆ ಹೆಚ್ಚಿನ ವಿಶ್ರಾಂತಿ ನೀಡುತ್ತದೆ. ಬಾಕಿ ಇರುವ ಪಾವತಿಗಳನ್ನು ತೆರವುಗೊಳಿಸಲು ಅನುಕೂಲವಾಗುವುದು. ಇತರರಿಗೆ ಹಣ ಸಹಾಯ ಮಾಡುವ ಮನೋಭಾವ ಹೊಂದಿದ್ರೆ ಅದು ಉತ್ತಮ ಸಂಗತಿಯಾಗಿರುತ್ತದೆ. ನಿಮ್ಮ ಸಂಗಾತಿಯ ವರ್ತನೆ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿಯಿಂದ ಕೂಡಿರುತ್ತದೆ. ಹಿರಿಯರು ತೀರ್ಥ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳಬಹುದು. ನಿಮ್ಮ ಪ್ರೀತಿಯು ದುಬಾರಿ ಉಡುಗೊರೆಯೊಂದಿಗೆ ಆಶ್ಚರ್ಯ ಹಾಗೂ ಸಂತೋಷವನ್ನು ತಂದುಕೊಡುವುದು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ಹೆಚ್ಚು ಶ್ರಮಿಸುತ್ತಾರೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 34

ಅದೃಷ್ಟ ಸಮಯ: ಬೆಳಿಗ್ಗೆ 7:23 ರಿಂದ ಮಧ್ಯಾಹ್ನ 2:12

ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

ನಿಮ್ಮ ಹೋರಾಟಕ್ಕೆ ಸೂಕ್ತ ಫಲವನ್ನು ಪಡೆದುಕೊಳ್ಳುವಿರಿ. ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಅನುಕೂಲಕರವಾದ ದಿನವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿದಂತೆ ಅಧಿಕ ಲಾಭವನ್ನು ಪಡೆದುಕೊಳ್ಳುವಿರಿ. ಉಳಿತಾಯದ ವಿಷಯದಲ್ಲೂ ಸಾಕಷ್ಟು ಎಚ್ಚರಿಕೆಯನ್ನು ನಿರ್ವಹಿಸಬೇಕು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದರಿಂದ ನಿಮ್ಮ ಮನಸ್ಸು ವಿಶ್ರಾಂತಿ ಪಡೆಯುವುದು. ತಂದೆ ಉದ್ಯೋಗಕ್ಕೆ ಸಂಬಂಧಿಸಿದ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಸಿನಿಮಾಗಳಂತಹ ಮನೋರಂಜನೆಯನ್ನು ಅನುಭವಿಸಬಹುದು. ಪ್ರೀತಿ ಪಾತ್ರರೊಂದಿಗೆ ರಾತ್ರಿ ಭೋಜನ ಮಾಡುವಿರಿ. ಹೊಟ್ಟೆ ಸಂಬಂಧಿ ಕಾಯಿಲೆಗಳಿಂದ ಬಳಲುವವರಿಗೆ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಮಧ್ಯಾಹ್ನ 12:40 ರಿಂದ 7:30 ರವರೆಗೆ

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

ಅನಗತ್ಯವಾಗಿ ಚಿಂತಿಸುವುದನ್ನು ನಿಲ್ಲಿಸಿ. ಅದು ನಿಮ್ಮ ಶಕ್ತಿಯನ್ನು ಕಳೆಯುತ್ತದೆ ಅಷ್ಟೆ. ನಿಮ್ಮ ಗಮನ ಅಥವಾ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ನಿಮ್ಮ ಆಸಕ್ತಿಗೆ ಅನುಗುಣವಾಗಿ ಚಿಂತನೆ ಹಾಗೂ ಗುರಿಯನ್ನು ಕೈಗೊಳ್ಳಿ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಉತ್ತಮವಾದ ದಿನ. ಗ್ರಹಗತಿಗಳ ಉತ್ತಮ ಪ್ರಭಾವ ಇರುವುದರಿಂದ ನೀವು ಹೊಸ ಯೋಜನೆ, ಕೆಲಸ ಹಾಗೂ ವಿವಾಹವನ್ನು ಮಾಡಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಕಠಿಣ ಪರಿಶ್ರಮವು ಸೂಕ್ತ ಪ್ರತಿಫಲವನ್ನು ನೀಡುತ್ತದೆ. ಆದರೂ ನೀವು ಆದಷ್ಟು ತಾಳ್ಮೆಯಿಂದ ವರ್ತಿಸುವುದು ಸೂಕ್ತ. ವಿವಾಹಿತರ ಜೀವನದಲ್ಲಿ ಕೊಂಚ ಏರಿಳಿತ ಉಂಟಾಗುವ ಸಾಧ್ಯತೆಗಳಿವೆ. ಇದು ನಿಯಮಿತವಾದ ದಿನಚರಿಯಲ್ಲಿ ಒಂದು ಭಾಗವಾಗುವುದು. ಕುಟುಂಬ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು. ಸಂಗಾತಿಯಿಂದ ಉತ್ತಮ ಸಹಕಾರ ದೊರೆಯುವುದು. ಉದ್ಯಮಿಗಳಿಗೆ ಇಂದು ಸಾಮಾನ್ಯವಾದ ದಿನವಾಗಿರುತ್ತದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆಯನ್ನು ಪಡೆದುಕೊಳ್ಳುವಿರಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಸಂಜೆ 5:34 ರಿಂದ 9:40 ರವರೆಗೆ

ಧನು: 22 ನವೆಂಬರ್ -21 ಡಿಸೆಂಬರ್

ಧನು: 22 ನವೆಂಬರ್ -21 ಡಿಸೆಂಬರ್

ಇತರರಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದದಿರಿ. ಇದು ನಿರಾಸೆಗೆ ಕಾರಣವಾಗುತ್ತದೆ. ನಿಮ್ಮ ಭಾವನೆಗಳನ್ನು ಮತ್ತು ವರ್ತನೆಗಳನ್ನು ಇತರರಿಗೆ ನಿಯಂತ್ರಿಸಲು ಬಿಡದಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವದು ಅಥವಾ ಮುತುವರ್ಜಿ ವಹಿಸುವ ಕೆಲಸವನ್ನು ಮಾಡಬಹುದು. ಅದಕ್ಕೆ ಅವಕಾಶ ನೀಡದಿರಿ. ನೀವು ಹೊಸ ಹೂಡಿಕೆ ನಿರ್ವಹಿಸಲು ಸೂಕ್ತವಾದ ಸಮಯವಲ್ಲ. ನಿಮ್ಮ ಆಪ್ತರಿಂದ ಅಥವಾ ಸ್ನೇಹಿತರಿಂದ ಹಣವನ್ನು ಎರವಲು ಪಡೆಯಬಹುದು. ಸಂಗಾತಿಯೊಂದಿಗೆ ದ್ವೇಷ ಸಾಧಿಸಲು ಮುಂದಾಗದಿರಿ. ಮಕ್ಕಳು ಶೈಕ್ಷಣಿಕ ವಿಷಯದಲ್ಲಿ ಸಾಧನೆಯ್ನು ಮಾಡುವರು. ನಿಮಗೆ ಒಗ್ಗದ ಸಂಗತಿಯಿಂದ ದೂರವಿರಿ. ಆರೋಗ್ಯಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಬೆಳಿಗ್ಗೆ 7:35 ರಿಂದ ಸಂಜೆ 6:45 ರವರೆಗೆ

ಮಕರ: 22 ಡಿಸೆಂಬರ್ -19 ಜನವರಿ

ಮಕರ: 22 ಡಿಸೆಂಬರ್ -19 ಜನವರಿ

ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ನಿಧಾನವಾದ ದಿನವಾಗುತ್ತದೆ. ವಾತಾವರಣವು ಅನುಕೂಲಕರವಾಗಿರುವುದರಿಂದ ಕೆಲಸವನ್ನು ಆನಂದದಿಂದ ನಿರ್ವಹಿಸಿ. ಬಾಕಿ ಇರುವ ಕೆಲಸವನ್ನು ಉತ್ಸಾಹದಿಂದಲೇ ದೂರ ಇಡುವಿರಿ. ಅದು ನಿಮಗೆ ಮೆಚ್ಚುಗೆಯನ್ನು ನೀಡುತ್ತದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಕುಟುಂಬದವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಸಂಬಂಧಗಳು ಬಲಗೊಳ್ಳುತ್ತವೆ. ಅದು ನಿಮ್ಮ ಸಮೃದ್ಧಿಯ ಸಂಕೇತವಾಗುವುದು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ತೋರುವರು. ನಿಮ್ಮ ಜ್ಞಾನ ಮತ್ತು ಅನುಭವವು ಉತ್ತಮ ಮಾರ್ಗದರ್ಶನ ನೀಡುವುದು. ಆರ್ಥಿಕ ಸ್ಥಿತಿಯು ನಿಧಾನವಾಗಿ ಸುಧಾರಣೆ ಹೊಂದುವುದು. ನಿಮ್ಮ ಸಾಧನೆಯ ಬಗ್ಗೆ ಪೋಷಕರು ಹೆಮ್ಮೆ ಪಡುವರು. ಹೃದಯ ಸಂಬಂಧಿ ಸಮಸ್ಯೆ ಇರುವವರು ಆದಷ್ಟು ಕಾಳಜಿಯಿಂದ ಇರಬೇಕು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 11

ಅದೃಷ್ಟ ಸಮಯ: ಬೆಳಿಗ್ಗೆ 10: 12 ರಿಂದ ಮಧ್ಯಾಹ್ನ 3:30 ರವರೆಗೆ

ಕುಂಭ: 20 ಜನವರಿ -18 ಫೆಬ್ರವರಿ

ಕುಂಭ: 20 ಜನವರಿ -18 ಫೆಬ್ರವರಿ

ನಿಮ್ಮ ಹವ್ಯಾಸಕ್ಕೆ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣದಲ್ಲಿ ತೊಡಗಿಕೊಳ್ಳುವಿರಿ. ಇಂದು ವಿಪರೀತವಾದ ಸಾಹಸ ಕೆಲಸವನ್ನು ಮಾಡಬಹುದು. ಹಣಕಾಸಿನ ವಿಷಯದಲ್ಲಿ ಸುಧಾರಣೆ ಉಂಟಾಗುವುದು. ಅದು ನಿಮ್ಮ ಮನಃಸ್ಥಿತಿಯನ್ನು ಸುಧಾರಿಸುತ್ತದೆ. ನೀವು ಯೋಗ ಅಥವಾ ಯಾವುದಾದರೂ ವ್ಯಾಯಾಮಗಳಿಗೆ ಹೋಗಬಹುದು. ಇಂದು ನೀವು ದುಬಾರಿ ವಸ್ತುಗಳ ಖರೀದಿ ಮಾಡಬಹುದು. ಪ್ರಮುಖ ಗುರಿಯನ್ನು ಸಾಧಿಸಲು ನೀವು ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಇಂದು ಉದ್ಯಮಿಗಳಿಗೆ ಲಾಭದಾಯಕವಾದ ದಿನವಾಗಿರುತ್ತದೆ. ನೀವು ಕೆಲಸದ ವಿಷಯದಲ್ಲಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ಕುಟುಂಬದ ಬಗ್ಗೆ ತೋರುವ ನಿರ್ಲಕ್ಷ್ಯವು ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ಜಾಗರೂಕರಾಗಿರಿ.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಮಧ್ಯಾಹ್ನ 2:45 ರಿಂದ 5: 30 ರವರೆಗೆ

ಮೀನ: 19 ಫೆಬ್ರುವರಿ-20 ಮಾರ್ಚ್

ಮೀನ: 19 ಫೆಬ್ರುವರಿ-20 ಮಾರ್ಚ್

ಅನಿರೀಕ್ಷಿತ ಖರ್ಚು ನಿಮ್ಮ ಬಜೆಟ್‍ಗೆ ತೊಂದರೆಯನ್ನು ಉಂಟುಮಾಡುವುದು. ಹಾಗಾಗಿ ನೀವು ಉಳಿತಾಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಆರೋಗ್ಯದ ಬಗ್ಗೆ ಅಸಡ್ಡೆಯನ್ನು ತಪ್ಪಿಸಿ. ಇಲ್ಲವಾದರೆ ನಂತರ ಪಶ್ಚಾತ್ತಾಪಕ್ಕೆ ಒಳಗಾಗಬೇಕಾಗುವುದು. ಆದಷ್ಟು ಶಾಂತ ಪ್ರವೃತ್ತಿಯನ್ನು ತೋರಿ. ಅನಗತ್ಯ ಒತ್ತಡಕ್ಕೆ ಒಳಗಾಗದಿರಿ. ನಿಮ್ಮ ಸಹೋದ್ಯೋಗಿಗಳು ತಮ್ಮ ನೈಪುಣ್ಯತೆಯ ಬುದ್ಧಿ ತೋರುವುದರಿಂದ ನಿಮಗೆ ಒಂದಿಷ್ಟು ಗೊಂದಲ ಉಂಟಾಗಬಹುದು. ಸುಳ್ಳು ಹೇಳುವ ಪ್ರವೃತ್ತಿಯಿಂದ ದೂರವಿರಿ. ಇಲ್ಲವಾದರೆ ಅನೇಕ ತೊಂದರೆಗಳು ಉಂಟಾಗಬಹುದು. ಸಂಬಂಧದ ವಿಷಯದಲ್ಲಿ ಕೆಲವು ಅಸಮಧಾನ ಹಾಗೂ ಬೇಸರದ ಭಾವನೆ ಮೂಡುವುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 25

ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 5:30 ರವರೆಗೆ

English summary

Daily Horoscope 04 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X
Desktop Bottom Promotion