Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಾರದ ದಿನ ಭವಿಷ್ಯ (3-10-2019)
ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ:21 ಮಾರ್ಚ್ 19 ಏಪ್ರಿಲ್
ಇಂದು ನಿಮ್ಮ ಕುಟುಂಬದಲ್ಲಿ ಕೆಲವು ಅನಿರೀಕ್ಷಿತ ಸಂಗತಿಗಳನ್ನು ಎದುರಿಸುವಿರಿ. ಸಂಜೆ ಹೊತ್ತಿಗೆ ಹೆಚ್ಚು ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಉದ್ಯೋಗದ ಬಗ್ಗೆ ಯಾವುದೇ ನಿರ್ಧಾರ ಅಥವಾ ಯೋಜನೆಯನ್ನು ಕೈಗೊಳ್ಳಲು ಇಂದು ಶುಭ ದಿನವಲ್ಲ. ಇಂದು ನೀವು ಕೈಗೊಳ್ಳುವ ಸಂಗತಿಗಳು ತಪ್ಪಾಗಬಹುದು. ಹಣವನ್ನು ಬುದ್ಧಿವಂತಿಕೆಯಿಂದ ಖರ್ಚುಮಾಡಿ. ನೀವು ಯಾರಿಗಾದರೂ ಸಾಲ ನೀಡುವುದರ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಕಠಿಣ ಶ್ರಮವನ್ನು ಗುರುತಿಸಲಾಗುವುದಿಲ್ಲ. ನಿಮ್ಮ ಅಸಡ್ಡೆಯ ವರ್ತನೆ ಅನೇಕ ವಿಷಯಗಳನ್ನು ಹದಗೆಡಿಸುತ್ತದೆ.
ಅದೃಷ್ಟ ಬಣ್ಣ: ಸಾಸಿವೆ
ಅದೃಷ್ಟ ಸಂಖ್ಯೆ: 10
ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 6:10 ರವರೆಗೆ

ವೃಷಭ: 20 ಏಪ್ರಿಲ್-20 ಮೇ
ಬಹು ದಿನಗಳ ನಂತರ ಇಂದು ಬಹಳ ಸಂತೋಷದ ದಿನವಾಗುವುದು. ನಿಮ್ಮ ಸಮಯ ಹಾಗೂ ನಿಮಗೆ ದೊರೆಯುವ ಬೆಂಬಲಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಾಗಾಗಿ ಇಂದು ನೀವು ಸಾಕಷ್ಟು ವಿಷಯದಲ್ಲಿ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುವಿರಿ. ನಿಮ್ಮ ಗಂಭೀರ ವರ್ತನೆಗಳು ಇತರರಿಗೆ ಪ್ರೇರಕ ಅಂಶವಾಗಬಹುದು. ಜನರನ್ನು ಸುಲಭವಾಗಿ ನಂಬಬೇಡಿ. ನಿಮ್ಮ ಸಂಬಂಧಿಗಳು ನಿಮ್ಮನ್ನು ನೋಡಿ ಅಸೂಯೆ ಪಡಬಹುದು.
ಅದೃಷ್ಟ ಬಣ್ಣ: ಕಂದು
ಅದೃಷ್ಟ ಸಂಖ್ಯೆ: 45
ಅದೃಷ್ಟ ಸಮಯ: ಸಂಜೆ 5:10 ರಿಂದ 8:20 ರವರೆಗೆ

ಮಿಥುನ: 21 ಮೇ-20 ಜೂನ್
ಒತ್ತಡ ರಹಿತ ಜೀವನವನ್ನು ನಡೆಸಲು ಪ್ರಯತ್ನಿಸಿ. ಇಂದು ನಿಮ್ಮ ಕುಟುಂಬದಲ್ಲಿ ಸಣ್ಣ ಸಂತೋಷವನ್ನು ಅನುಭವಿಸುವಿರಿ. ದಂಪತಿಗಳ ನಡುವಿನ ತಿಳುವಳಿಕೆಯ ಮನೋಭಾವವು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಹತ್ತಿರದ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನವು ಹೆಚ್ಚಿನ ಸಂತೋಷ ನೀಡುವುದು. ನಿಮ್ಮ ಗುರಿಯನ್ನು ಸಾಧಿಸುವಿರಿ. ಉದ್ಯಮಿಗಳಿಗೆ ಇಂದು ಬಿಡುವಿಲ್ಲದ ದಿನವಾಗುವುದು. ಆರ್ಥಿಕ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಆರೋಗ್ಯವು ಉತ್ತಮವಾಗಿರುತ್ತದೆ. ಮುಂಜಾನೆ ಉತ್ತಮ ನಡಿಗೆಯಿಂದ ದಿನವನ್ನು ಆರಂಭಿಸಿ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 21
ಅದೃಷ್ಟ ಸಮಯ: ಬೆಳಿಗ್ಗೆ 7:00 - ರಾತ್ರಿ 8:45

ಕರ್ಕ: 21 ಜೂನ್ 22 ಜುಲೈ
ಇಂದು ನಿಮಗೆ ಅತ್ಯಂತ ಕಾರ್ಯ ನಿರತ ದಿನವಾಗಿರುತ್ತದೆ. ಕೆಲವು ಕೆಲಸವನ್ನು ನೀವು ಮುಂದೂಡುವುದು ಉತ್ತಮ. ನಿಮ್ಮ ಅಭಿವೃದ್ಧಿ ಹಾಗೂ ಶ್ರೇಯಸ್ಸು ಸಹೋದ್ಯೋಗಿಗಳಲ್ಲಿ ಅಸೂಯೆ ಮೂಡಿಸುವುದು. ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸದಿಂದ ಇರುತ್ತಾರೆ. ಶೈಕ್ಷಣಿಕ ರಂಗದಲ್ಲೂ ಉತ್ತಮ ಪ್ರದರ್ಶನ ನೀಡುವರು. ಕುಟುಂಬದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನವಾಗುವುದು. ನವ ವಿವಾಹಿತರು ಪ್ರವಾಸಕ್ಕೆ ಹೋಗಬಹುದು. ಮಕ್ಕಳ ಪ್ರಗತಿಯನ್ನು ಕಂಡು ಪೋಷಕರು ಹೆಮ್ಮೆಯನ್ನು ಪಡೆದುಕೊಳ್ಳುವರು. ಮನೆಗೆ ಅಗತ್ಯ ವಸ್ತುವನ್ನು ಖರೀದಿಸಲು ಮುಂದಾಗಬಹುದು.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 14
ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 7:30 ರವರೆಗೆ

ಸಿಂಹ: 23 ಜುಲೈ-22 ಆಗಸ್ಟ್
ಸುಧಾರಣೆಯ ವ್ಯಾಪ್ತಿಯು ಸದಾ ಇರುತ್ತದೆ. ನೀವು ಹೊಸ ದಿನವನ್ನು ಹೊಸ ಭಾವನೆಯೊಂದಿಗೆ ಸ್ವಾಗತಿಸಬೇಕು. ಇಂದು ಕೆಲಸದ ವಿಷಯದಲ್ಲಿ ಕಾರ್ಯನಿರತವಾದ ದಿನವಾಗುವುದು. ಸಂಬಂಧದ ವಿಷಯದಲ್ಲಿ ಸಾಕಷ್ಟು ಜಾಗರೂಕತೆಯಿಂದ ಇರಬೇಕು. ಅಸಡ್ಡೆ ಮನೋಭಾವವನ್ನು ತೋರಿಸದಿರಿ. ಅನಿರೀಕ್ಷಿತ ಪ್ರವಾಸವು ಕುಟುಂಬಕ್ಕೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ಹಣಕಾಸಿನ ವಿಷಯಗಳಲ್ಲಿ ನೀವು ಹಿರಿಯರನ್ನು ಸಂಪರ್ಕಿಸಬಹುದು. ವೈಯಕ್ತಿಕ ವಿಷಯದಲ್ಲಿ ಆಕ್ರಮಣಕಾರಿ ನಡವಳಿಕೆಯು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದು. ಆರೋಗ್ಯವಾಗಿರಲು ಸಾಕಷ್ಟು ನೀರನ್ನು ಕುಡಿಯಿರಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 11
ಅದೃಷ್ಟ ಸಮಯ: ಬೆಳಿಗ್ಗೆ 10:05 ರಿಂದ ಸಂಜೆ 6:30 ರವರೆಗೆ

ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್
ಕೆಲವು ಸಂಗತಿಗಳಲ್ಲಿ ನಿಮಗೆ ನಿರಾಳತೆ ಉಂಟಾಗುವುದು. ಇಂದು ದಿನವಿಡೀ ಸಕಾರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಉದ್ಯೋಗದ ಬದಲಾವಣೆ ಮತ್ತು ವೇತನ ಹೆಚ್ಚಳವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಕುಟುಂಬಕ್ಕಾಗಿ ಏನನ್ನಾದರೂ ಯೋಜಿಸಬಹುದು. ಅದು ಅವರಿಗೆ ವಿಶೇಷ ಭಾವನೆಯನ್ನು ತಂದುಕೊಡುವುದು. ಉದ್ಯಮಿಗಳು ಅತ್ಯುತ್ತಮ ಲಾಭವನ್ನು ಗಳಿಸುತ್ತಾರೆ. ಹಳೆಯ ಸ್ನೇಹಿತರೊಂದಿಗೆ ಸಂಪರ್ಕವನ್ನು ಸಾಧಿಸುವಿರಿ. ತಾಯಿಯ ಆರೋಗ್ಯವನ್ನು ನೀವು ನೋಡಿಕೊಳ್ಳಬೇಕು. ಒಡ ಹುಟ್ಟಿದವರ ಒಡನಾಟವು ವಾತಾವರಣವನ್ನು ಖುಷಿಪಡಿಸುತ್ತದೆ. ಹಣಕಾಸಿನ ವಿಷಯದಲ್ಲಿ ನೀವು ಇತರರಿಗೆ ಸಹಾಯ ಮಾಡಬಹುದು.
ಅದೃಷ್ಟ ಬಣ್ಣ: ರಕ್ತ ಕೆಂಪು
ಅದೃಷ್ಟ ಸಂಖ್ಯೆ: 8
ಅದೃಷ್ಟ ಸಮಯ: ಬೆಳಿಗ್ಗೆ 9:45 ರಿಂದ ಸಂಜೆ 5:55 ರವರೆಗೆ

ತುಲಾ: 23 ಸಪ್ಟೆಂಬರ್-22 ಅಕ್ಟೋಬರ್
ದೊಡ್ಡ ಬದಲಾವಣೆಯ ನಂತರ ವಿಷಯಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ನೀವು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವಿರಿ. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ಕೈಗೊಳ್ಳುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮಗೆ ಬಿಡುವಿಲ್ಲದ ದಿನವಾಗಬಹುದು. ವಿವಾಹಿತರು ಉತ್ತಮ ಸಮಯವನ್ನು ಕಳೆಯುವರು. ಉದ್ಯಮಿಗಳಿಗೆ ಇಂದು ಹೊಸ ದಿನವಾಗುವುದು. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ಕೈಗೊಳ್ಳುವಿರಿ. ವಾದ ಮಾಡುವುದನ್ನು ತಪ್ಪಿಸಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ಅಧಿಕ ನೀರನ್ನು ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.
ಅದೃಷ್ಟ ಬಣ್ಣ: ಕ್ರೀಮ್
ಅದೃಷ್ಟ ಸಂಖ್ಯೆ: 5
ಅದೃಷ್ಟ ಸಮಯ: ಬೆಳಿಗ್ಗೆ 4:30 ರಿಂದ ಸಂಜೆ 6:00 ರವರೆಗೆ

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್
ನಿಮಗೆ ಉಪಯೋಗ ಇಲ್ಲದ ಸಂಗತಿಗಳ ಹಿಂದೆ ಓಡುವುದನ್ನು ನಿಲ್ಲಿಸಿ. ನಿಮ್ಮ ಪ್ರೀತಿ-ಪಾತ್ರರ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಪ್ರಯತ್ನಿಸಿ. ಹೆಚ್ಚುವರಿ ಆದಾಯದ ಮೂಲವು ಉತ್ತಮ ಲಾಭವನ್ನು ನೀಡುವುದು. ನಿಮ್ಮ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಬಹುದು. ಹಿರಿಯರ ಆರೋಗ್ಯವು ಕಳವಳಕಾರಿಯಾಗಿರುತ್ತದೆ. ನಿಮ್ಮ ಪ್ರೇಮಿಯೊಂದಿಗೆ ಭವಿಷ್ಯದ ವಿಷಯಗಳನ್ನು ಚರ್ಚಿಸಲು ಕಳವಳ ಅಥವಾ ಮುಜುಗರಕ್ಕೆ ಒಳಗಾಗಬಹುದು. ಕೆಲಸದ ಒತ್ತಡವು ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 24
ಅದೃಷ್ಟ ಸಮಯ: ಬೆಳಿಗ್ಗೆ 5:40 ರಿಂದ 11:00 ರವರೆಗೆ

ಧನು: 22 ನವೆಂಬರ್ -21 ಡಿಸೆಂಬರ್
ಇಂದು ನಿಮಗೆ ಅಸ್ಥಿರವಾದ ದಿನವಾಗಬಹುದು. ದಿನದ ಕೊನೆಯಲ್ಲಿ ಪರಿಸ್ಥಿತಿಯು ಸುಧಾರಿಸುವುದು. ಕೆಲಸದ ಕ್ಷೇತ್ರದಲ್ಲಿ ಇಂದು ನಿಮಗೆ ನಿಧಾನದ ದಿನವಾಗಿರುತ್ತದೆ. ಬಾಕಿ ಉಳಿದ ಕೆಲಸದ ಬಗ್ಗೆ ಮೇಲಾಧಿಕಾರಿಗಳು ಆಕ್ರೋಶವನ್ನು ವ್ಯಕ್ತಪಡಿಸಬಹುದು. ನಿಮ್ಮ ಕೆಲಸದ ಬಗ್ಗೆ ನಿಮ್ಮ ಅಧಿಕಾರಿಗಳು ಅಸಮಧಾನವನ್ನು ವ್ಯಕ್ತಪಡಿಸಬಹುದು. ಶಾಂತಿಯುತವಾದ ಜೀವನ ನಡೆಸಲು ನೀವು ಕೆಲವು ವಿಷಯಗಳನ್ನು ನಿರ್ಲಕ್ಷಿಸಬೇಕಾಗುವುದು. ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ನೀಡಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 4
ಅದೃಷ್ಟ ಸಮಯ: ಬೆಳಿಗ್ಗೆ 8: 30 ರಿಂದ ಮಧ್ಯಾಹ್ನ 12:00 ರವರೆಗೆ

ಮಕರ: 22 ಡಿಸೆಂಬರ್ -19 ಜನವರಿ
ಇಂದು ನಿಮಗೆ ಕೆಲವು ವಿಷಯದಲ್ಲಿ ನೆಮ್ಮದಿ ದೊರೆಯುವುದು. ಕುಟುಂಬದವರೊಂದಿಗೆ ಸಣ್ಣ ಪ್ರವಾಸವನ್ನು ಸಹ ಕೈಗೊಳ್ಳುವ ಸಾಧ್ಯತೆಗಳಿವೆ. ಮಕ್ಕಳು ಹಾಗೂ ಮನೆ ಮಂದಿಯ ಜೊತೆಗೆ ಅಮೂಲ್ಯವಾದ ಸಮಯವನ್ನು ಕಳೆಯುವಿರಿ. ತಂದೆಯ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಅದು ನಿಮ್ಮ ನೆಮ್ಮದಿಗೆ ಕಾರಣವಾಗುವುದು. ಮಕ್ಕಳು ನಿಮಗೆ ಶುಭ ಸುದ್ದಿಯನ್ನು ತಂದುಕೊಡುವರು. ಕೆಲಸದ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನವಾಗುವುದು. ಹೊಸ ಯೋಜನೆಯು ನಿಮ್ಮನ್ನು ಸುತ್ತುವರಿದಿರುತ್ತದೆ. ಪ್ರೇಮಿಯೊಂದಿಗೆ ಸಂಘರ್ಷ ಉಂಟಾಗಬಹುದು. ಯಾರಿಗಾದರೂ ಹಣ ಸಹಾಯ ಮಾಡುವ ಸಾಧ್ಯತೆಗಳಿವೆ.
ಅದೃಷ್ಟ ಬಣ್ಣ: ಮರೂನ್
ಅದೃಷ್ಟ ಸಂಖ್ಯೆ: 19
ಅದೃಷ್ಟ ಸಮಯ: ಬೆಳಿಗ್ಗೆ 5:30 ರಿಂದ 3:10 ರವರೆಗೆ

ಕುಂಭ: 20 ಜನವರಿ -18 ಫೆಬ್ರವರಿ
ಆರೋಗ್ಯದಲ್ಲಿ ಸುಧಾರಣೆಯು ನಿಮಗೆ ಹೆಚ್ಚಿನ ಸಂತೋಷವನ್ನು ತಂದುಕೊಡುವುದು. ಇಂದು ನಿಮಗೆ ವಿಶ್ರಾಂತಿಯ ದಿನ. ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಕೆಲಸವನ್ನು ನಿರ್ವಹಿಸುವ ಸಾಧ್ಯತೆಗಳಿವೆ. ಸಂವಹನಗಳ ತೊಂದರೆಯಿಂದಾಗಿ ನಿಮ್ಮ ಸಂಗಾತಿಯು ಬೇಸರಕ್ಕೆ ಒಳಗಾಗಬಹುದು. ಕ್ರೀಡೆ ಮತ್ತು ನೃತ್ಯದಲ್ಲಿ ಆಸಕ್ತಿ ಹೊಂದಿರುವವರು ಉತ್ತಮ ಪ್ರದರ್ಶನವನ್ನು ನೀಡುವರು. ಸಂಗಾತಿಯ ಕಿರಿಕಿರಿ ವರ್ತನೆ ನಿಮಗೆ ಬೇಸರವನ್ನುಂಟುಮಾಡಬಹುದು. ನೆರೆಯವರೊಂದಿಗೆ ಸಣ್ಣ ವಾದಗಳು ಏರ್ಪಡಬಹುದು. ಪರಿಸ್ಥಿತಿಯನ್ನು ತಾಳ್ಮೆಯಿಂದ ನಿರ್ವಹಿಸಿ. ಆರೋಗ್ಯದಲ್ಲಿ ಉಂಟಾಗುವ ಸುಧಾರಣೆಯು ನಿಮಗೆ ಆತ್ಮವಿಶ್ವಾಸವನ್ನು ಉಂಟುಮಾಡುವುದು.
ಅದೃಷ್ಟ ಬಣ್ಣ: ಬೀಜ್
ಅದೃಷ್ಟ ಸಂಖ್ಯೆ: 10
ಅದೃಷ್ಟ ಸಮಯ: ಮಧ್ಯಾಹ್ನ 2:30 ರಿಂದ 8:30 ರವರೆಗೆ

ಮೀನ: 19 ಫೆಬ್ರುವರಿ-20 ಮಾರ್ಚ್
ನಿಮ್ಮ ಮೇಲಾಧಿಕಾರಿಗಳು ನಿಮಗೆ ಪ್ರೋತ್ಸಾಹ ನೀಡುವರು. ಜೊತೆಗೆ ನಿಮ್ಮ ಪರವಾಗಿಯೇ ನಿಲ್ಲುತ್ತಾರೆ. ನಿಮ್ಮ ಕಠಿಣ ಪರಿಶ್ರಮವನ್ನು ಪ್ರಶಂಸಿಸುತ್ತಾರೆ. ಇತರ ಸಹೋದ್ಯೋಗಿಗಳಿಗೆ ಅದು ಅಸೂಯೆಯನ್ನುಂಟು ಮಾಡಬಹುದು. ನಿಮ್ಮ ಕೆಲವು ವರ್ತನೆಯಿಂದ ನೀವು ನಷ್ಟವನ್ನು ಅನುಭವಿಸಬೇಕಾಗುವುದು. ಉದ್ಯೋಗ ಬದಲಾವಣೆಗೆ ಚಿಂತಿಸುವಿರಿ. ಕಾರ್ಪೋರೇಟ್ ಕ್ಷೇತ್ರದಲ್ಲಿ ಇರುವವರು ಪ್ರವಾಸವನ್ನು ಕೈಗೊಳ್ಳಬಹುದು. ಕುಟುಂಬಕ್ಕೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಬಹುದು. ಹೊಸ ಹೂಡಿಕೆಯು ನಿಮಗೆ ಅದೃಷ್ಟವನ್ನು ತಂದುಕೊಡುವುದು. ಹೆಚ್ಚು ತಾಳ್ಮೆ ಹೊಂದಿದಷ್ಟು ನಿಮಗೆ ಉತ್ತಮ ಫಲ ದೊರೆಯುವುದು. ಸಂಗಾತಿಯು ನಿಮಗೆ ಇಂದು ವಿಶೇಷ ದಿನವನ್ನು ಕಲ್ಪಿಸಿಕೊಡುವರು.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 21
ಅದೃಷ್ಟ ಸಮಯ: ಬೆಳಿಗ್ಗೆ 7:15 ರಿಂದ ಸಂಜೆ 6:30 ರವರೆಗೆ



Click it and Unblock the Notifications











