For Quick Alerts
ALLOW NOTIFICATIONS  
For Daily Alerts

ಮಂಗಳವಾರದ ದಿನ ಭವಿಷ್ಯ (1-10-2019)

|

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.

ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಇಂದು ಎದುರಾಗುವ ಕೆಲವು ಸಮಸ್ಯೆಗಳು ನಿಮ್ಮ ಎಲ್ಲಾ ಪ್ರಾಮಾಣಿಕ ಭಾವನೆಗಳನ್ನು ಹೊರಹಾಕುವಂತೆ ಉತ್ತೇಜಿಸಬಹುದು. ಆದರೆ ನೀವು ನಿಮ್ಮ ನಿಯಂತ್ರಣದಲ್ಲಿ ಇರಬೇಕು. ಕೆಲವು ವ್ಯಕ್ತಿಗಳು ನಿಮ್ಮ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಹುದು. ಇತರರು ನಿಮ್ಮ ಬಗ್ಗೆ ಹೇಗೆ ಚಿಂತಿಸುತ್ತಾರೆ ಎನ್ನುವುದರ ಕುರಿತು ಚಿಂತಿಸದಿರಿ. ಇಂದು ಕೆಲವು ದೊಡ್ಡ ವ್ಯಕ್ತಿಗಳೊಂದಿಗೆ ಸಂಪರ್ಕ ಅಥವಾ ಸಂವಹನ ನಡೆಸುವ ಸಾಧ್ಯತೆಗಳಿವೆ. ಉತ್ಸಾಹ ಮತ್ತು ಕೃತಜ್ಞತೆಯ ಅದ್ಭುತ ಮಿಶ್ರಣವನ್ನು ನೀವು ಅನುಭವಿಸುವಿರಿ. ಈ ಭಾವನೆಗಳು ನಿಮ್ಮನ್ನು ಪ್ರೇರೇಪಿಸುತ್ತವೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ಕೆಲವು ಸ್ಪರ್ಧಾತ್ಮಕ ಸನ್ನಿವೇಶಗಳು ನಿಮಗೆ ಎದುರಾಗಬಹುದು. ಪ್ರೀತಿ ಪಾತ್ರರ ಅಗತ್ಯತೆಗಳನ್ನು ನೀವು ಅಥೈಸಿಕೊಳ್ಳುವಿರಿ. ಅವರ ಮುಖದಲ್ಲಿ ಇರುವ ಸಂತೋಷವು ನಿಮಗೆ ತೃಪ್ತಿಯ ಭಾವನೆಯನ್ನು ತರುವುದು. ನೀವು ನಿಮ್ಮ ಗುರಿ ಹಾಗೂ ಯೋಜನೆಯ ಕಡೆಗೆ ಕೊಂಚ ಚಿಂತನೆಯನ್ನು ನಡೆಸಬೇಕು. ಗ್ರಹಗತಿಗಳ ಪ್ರಭಾವದಿಂದ ಸಾಹಿತ್ಯ ಹಾಗೂ ಬರವಣಿಗೆಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಪಡೆದುಕೊಳ್ಳುವಿರಿ. ಅತಿಯಾಗಿ ಕೆಲಸ ನಿರ್ವಹಿಸುವಿರಿ. ಸಂಗಾತಿಯಿಂದಲೂ ಉತ್ತಮ ಸಹಕಾರ ದೊರೆಯುವುದು. ನಿಮ್ಮ ವೃತ್ತಿಯು ಕುಟುಂಬದವರಿಗೆ ಹಿತವನ್ನುಂಟುಮಾಡುವುದು.

ಮಿಥುನ ರಾಶಿ: 21 ಮೇ-20 ಜೂನ್

ಮಿಥುನ ರಾಶಿ: 21 ಮೇ-20 ಜೂನ್

ಸಾರ್ವಜನಿಕವಾಗಿ ಆಯೋಜಿಸಿದ ಕೆಲವು ಯೋಜನೆಗಳು ಆರಂಭದಲ್ಲಿ ನಿಮಗೆ ಸವಾಲಾಗಿ ಪರಿಣಮಿಸಬಹುದು. ಆದರೆ ನಂತರ ಅದು ಉತ್ತಮ ಪ್ರತಿಫಲವನ್ನು ನೀಡುವುದು. ಇತರರು ನಿಮ್ಮ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ಭಾವಿಸಬಹುದು. ನೀವು ಇತರರನ್ನು ಗೌರವಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ವಿಷಯಗಳನ್ನು ಹಿಡಿದಿಟ್ಟುಕೊಳ್ಳುವಂತಹ ವ್ಯಕ್ತಿಯಲ್ಲಿ ಮಾತ್ರ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ಇಂದಿನ ಕೆಲವು ಸಂದರ್ಭಗಳು ಹಾಗೂ ಸನ್ನಿವೇಶಗಳು ನೀವು ಯಾರು ಎನ್ನುವುದು ನಿಮಗೆ ಅರ್ಥಮಾಡಿಸುತ್ತವೆ. ಕೆಲವು ಪರಿಸ್ಥಿತಿಗಳು ನಿಮಗೆ ಉಸಿರುಗಟ್ಟುವಂತಹ ಅನುಭವವನ್ನು ಉಂಟುಮಾಡಬಹುದು. ಇದರಿಂದಿ ನೀವು ಇನ್ನಷ್ಟು ಗೊಂದಲವನ್ನು ಅನುಭವಿಸುವ ಸಾಧ್ಯತೆಗಳಿವೆ. ನಿಮ್ಮ ಆಯ್ಕೆಗಳನ್ನು ತಿಳಿಸುವ ಬಲವಾದ ವ್ಯಕ್ತಿತ್ವವನ್ನು ನೀವು ಹೊಂದುವ ಅಗತ್ಯವಿದೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ನಿಮ್ಮವರು ಮಾಡುವ ಕೆಲವು ಕೀಟಲೆಗಳು ನಿಮಗೆ ಮಾನಸಿಕವಾಗಿ ನೋವನ್ನುಂಟುಮಾಡಬಹುದು. ನಿಮ್ಮ ಸಣ್ಣ ನಗುವು ಸಹ ಇತರರಿಗೆ ಅದು ಧೈರ್ಯಶಾಲಿ ಎನ್ನುವ ಭಾವನೆಯನ್ನು ವ್ಯಕ್ತಪಡಿಸುವುದು. ಕೆಲವು ಸಂದರ್ಭವನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸುವಿರಿ. ದೈಹಿಕ ಮತ್ತು ಮಾನಸಿಕ ಪ್ರಚೋದನೆಗಳು ಉಂಟಾಗುವ ಸಾಧ್ಯತೆಗಳಿವೆ. ಅಧಿಕ ಜನರ ಸಮೂಹದಲ್ಲಿ ಇರುವುದನ್ನು ಆದಷ್ಟು ತಪ್ಪಿಸಿ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಮಾನವನ ಸಂಬಂಧಗಳು ಬಹಳ ಅನಿರೀಕ್ಷಿತ ಎನ್ನುವಂತೆ ತೋರುವುದು. ಇಂದು ನೀವು ನಿಮ್ಮ ಕುಟುಂಬದವರ ಸಹಾಯ ಹಾಗೂ ಸಲಹೆ ಪಡೆಯಲು ಮರೆಯದಿರಿ. ನಿಮ್ಮ ಸ್ನೇಹಿತರೊಂದಿಗೆ ಜಗಳವಾಡಿರುವುದು ಅಥವಾ ಮುನಿಸಿಕೊಂಡಿರುವುದರ ಬಗ್ಗೆ ನೀವು ಬೇಸರ ಹೊಂದಬಹುದು. ಪಾಲಕರು ನಿಮಗೆ ಸೂಕ್ತ ಮನವರಿಕೆಯನ್ನು ಕಲ್ಪಿಸಿಕೊಡುವರು. ನೀವು ಹುಡುಕುವ ಎಲ್ಲಾ ಉತ್ತರಗಳ ಬಗ್ಗೆ ಅವರಿಗೆ ತಿಳಿಯದೆ ಇರಬಹುದು. ಆದರೆ ಸೂಕ್ತ ಬೆಂಬಲ ನೀಡುವುದರ ಮೂಲಕ ನಿಮ್ಮ ಪರವಾಗಿ ನಿಲ್ಲುತ್ತಾರೆ.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

ನೀವು ನಿಮ್ಮ ಕುಟುಂಬದವರು ಹಾಗೂ ಆಪ್ತರಿಗಾಗಿ ನಿಮ್ಮ ಸಮಯವನ್ನು ಮೀಸಲಿಡಲು ಪ್ರಯತ್ನಿಸಿ. ನಿಮ್ಮ ವ್ಯವಹಾರ ಅಥವಾ ಕೆಲಸಕ್ಕೆ ಇನ್ನೊಂದು ದಿನವನ್ನು ನೀಡಿ. ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ಹಾಗೂ ಮೋಜಿನ ಸಂಗತಿಯ ಕಡೆಗೆ ಹೆಚ್ಚು ಚಟುವಟಿಕಾಶೀಲರಾಗಿರುತ್ತಾರೆ. ಹೆಚ್ಚು ಪ್ರೀತಿಯನ್ನು ಹಾಗೂ ಕಾಳಜಿಯಿರುವ ವ್ಯಕ್ತಿಗಳೊಂದಿಗೆ ಇದ್ದರೆ ಜೀವನವು ಸಾರ್ಥಕವಾಗುವುದು ಎನ್ನುವುದನ್ನು ಅರಿಯುವಿರಿ. ಆದಷ್ಟು ಉದಾರ ಮನೋಭಾವ ಹೊಂದುವುದು ಸೂಕ್ತ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್

ನಿಮ್ಮ ಮೇಲಾಧಿಕಾರಿಗಳ ಕಡೆಗೆ ಸೂಕ್ತ ಗಮನವನ್ನು ನೀಡಿ. ನೀವು ಮಾಡಬೇಕಾದ ಕೆಲಸದ ಬಗ್ಗೆ ಹೆಚ್ಚಿನ ಚಿಂತನೆ ಹಾಗೂ ಕಾಳಜಿವಹಿಸಿ. ಗೊಂದಲದ ಸನ್ನಿವೇಶಗಳು ಎದುರಾದಾಗ ಆತ್ಮೀಯರಿಂದ ಸಲಹೆ ಪಡೆಯಲು ಮರೆಯದಿರಿ. ಒಳ್ಳೆಯದು ಮತ್ತು ಕೆಟ್ಟ ಸಂಗತಿಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಪ್ರಯತ್ನಿಸಿ. ಆಗ ನಿಮ್ಮಲ್ಲಿರುವ ಸಾಕಷ್ಟು ಗೊಂದಲಗಳು ಬಗೆಹರಿಯುವುದು.

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ಧನು ರಾಶಿ: 22 ನವೆಂಬರ್-21 ಡಿಸೆಂಬರ್

ನಿಮ್ಮ ಸಂಬಂಧದಲ್ಲಿ ಏನೋ ತಪ್ಪಾಗಿದೆ ಎಂದು ಭಾವಿಸಬಹುದು. ನಿಮ್ಮ ಆಪ್ತರೊಂದಿಗೆ ಸೂಕ್ತ ಮಾತುಕತೆ ನಡೆಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ನಿಮ್ಮ ಸಂಬಂಧದಲ್ಲಿ ಉಂಟಾದ ಸಮಸ್ಯೆಯು ಬಗೆಹರಿಯುವುದು. ಬಳಿಕ ಸಂಬಂಧದಲ್ಲಿ ಆರೋಗ್ಯಕರ ಬದಲಾವಣೆಯನ್ನು ಕಾಣಬಹುದು. ನಿಮ್ಮ ವೃತ್ತಿಯ ಕಡೆಗೆ ಆಸಕ್ತಿ ತೋರುವುದು ಅಗತ್ಯ. ಯಾವ ವಿಷಯದ ಬಗ್ಗೆಯೂ ನಿಷ್ಕಾಳಜಿ ತೋರದಿರಿ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಮಕರ ರಾಶಿ: 22 ಡಿಸೆಂಬರ್ -19 ಜನವರಿ

ಇಂದು ನೀವು ಸಾಕಷ್ಟು ಏರಿಳಿತದ ಪರಿಸ್ಥಿತಿಗಳನ್ನು ಎದುರಿಸಬಹುದು. ಬದಲಾಗದ ಮನಃಸ್ಥಿತಿಗಳಿಂದ ಒಂದಷ್ಟು ಗೊಂದಲಕ್ಕೆ ಒಳಗಾಗಬಹುದು. ನೀವು ಹೆಚ್ಚುವರಿ ಸಂವೇದನಾಶೀಲರಾಗಲು ಪ್ರಯತ್ನಿಸಿ. ತಪ್ಪು ಕಲ್ಪನೆ ಹಾಗೂ ಸಂಗತಿಗಳ ಮೇಲೆ ನಿಲ್ಲಲು ನೀವು ಬಯಸುವುದಿಲ್ಲ. ಎಲ್ಲಾ ಸಂಗತಿಗಳಲ್ಲೂ ಸಮತೋಲನವನ್ನು ಕಾಯ್ದುಕೊಳ್ಳಲು ನಿಮಗೆ ಹೆಚ್ಚಿನ ಸಮಯ ತೆಗೆದುಕೊಳ್ಳದು. ಬಹುಬೇಗ ಬದಲಾವಣೆಯ ಪ್ರತಿಫಲವನ್ನು ಪಡೆದುಕೊಳ್ಳುವಿರಿ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ

ನೀವು ಎಲ್ಲಾ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಬಹಳ ಚೆನ್ನಾಗಿ ತಿಳಿದಿದ್ದೀರಿ. ನಿಮ್ಮ ವೈಯಕ್ತಿಕ ಜೀವನದ ಆಗು ಹೋಗುಗಳ ಬಗ್ಗೆಯೂ ನೀವು ಸೂಕ್ತ ಗಮನ ನೀಡುವಿರಿ. ಅನುಚಿತ ಸಂಗತಿಗಳನ್ನು ನಿಯಂತ್ರಿಸುವುದರ ಮೂಲಕ ಸಾಕಷ್ಟು ಸಮಸ್ಯೆಗಳನ್ನು ನಿಯಂತ್ರಿಸುವಿರಿ. ಯಾವುದೇ ಸಂಗತಿಗಳ ಬಗ್ಗೆ ಅತಿಯಾದ ಚಿಂತನೆ ನಡೆಸದಿರಿ. ನಿಮ್ಮ ಶಕ್ತಿಯನ್ನು ಸಂರಕ್ಷಿಸಿಕೊಳ್ಳಿ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್

ಪ್ರಣಯ ಜೀವನದ ಬಗ್ಗೆ ಹೆಚ್ಚು ಚಿಂತನೆ ನಡೆಸುವಿರಿ. ಆ ಕುರಿತಾಗಿಯೇ ಹೆಚ್ಚು ಚಟುವಟಿಕಾ ಶೀಲರಾಗಿರುತ್ತೀರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲವನ್ನು ಪಡೆದುಕೊಳ್ಳುವಿರಿ. ನೀವು ಹೆಚ್ಚು ಅವಸರದ ಪ್ರವೃತ್ತಿಯನ್ನು ತೋರಬಹುದು. ಅವೆಲ್ಲವನ್ನೂ ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ. ನೀವು ನಿಮ್ಮವರ ಬಗ್ಗೆ ಕಾಳಜಿ ವಹಿಸುವುರ ಕಡೆಗೂ ಗಮನ ನೀಡಬೇಕು. ನೀವು ಅಂದುಕೊಂಡ ಹಾಗೆ ಎಲ್ಲಾ ಸಂಗತಿಗಳು ನಡೆಯುವುದು ಎನ್ನುವ ತಪ್ಪು ಭಾವನೆಯಿಂದ ಹೊರಬನ್ನಿ. ಸ್ವಲ್ಪ ಮಾನಸಿಕ ವಿರಾಮ ತೆಗೆದುಕೊಳ್ಳುವುದರ ಮೂಲಕ ವಿಷಯಗಳನ್ನು ಸರಿಯಾಗಿ ವಿಶ್ಲೇಷಿಸಲು ಸಾಧ್ಯ.

English summary

Daily Horoscope 01 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more