Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಣ್ಣು ಮಗು ಜನಿಸಿದಾಗ ಶುಭ ಕೋರಲು ಇಲ್ಲಿದೆ ಗ್ರೀಟಿಂಗ್ಸ್
ಹೆಣ್ಣು ಮಗುವಿನ ಜನನವೆಂದರೆ ಮುಖವನ್ನ ಸಿಂಡರಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಹೆಣ್ಣುಮಗುವೇನೂ ವಂಶೋದ್ಧಾರಕಿ ಅಲ್ಲ, ಆಕೆ ಕುಟುಂಬಕ್ಕೊಂದು ಹೊರೆ, ಖರ್ಚಿನ ಬಾಬ್ತು ಎಂಬ ಭಾವನೆಯಿದ್ದ ಕಾಲವದು.
ಕಾಲಕ್ರಮೇಣ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗತೊಡಗಿದಂತೆ, ಜೊತೆಗೆ ಕುಟುಂಬ ಯೋಜನೆಯ ಪರಿಕಲ್ಪನೆಯೂ ಬಲವಾಗತೊಡಗಿದಂತೆ, "ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ", "ಹೆಣ್ಣೇ ಆಗಲೀ, ಗಂಡೇ ಆಗಲೀ, ಮಕ್ಕಳೆರಡೇ ಇರಲಿ" ಎಂಬ ಅಭಿಪ್ರಾಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗಿಬ್ಬರಿಗೂ ಸರಿಸಮಾನವಾದ ಪ್ರಾಮುಖ್ಯತೆ ಸಿಗತೊಡಗಿತು.
ಜೊತೆಜೊತೆಗೇ, ಮಧ್ಯಮವರ್ಗದ ಹೆಣ್ಣು ಮಕ್ಕಳಿಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಂಡುಮಕ್ಕಳಷ್ಟೇ ಪ್ರಾಮುಖ್ಯತೆ ಸಿಗಲಾರಂಭಿಸಿದ್ದಂತೂ ನಿಜಕ್ಕೂ ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿಯಾಯಿತು. ಇದರ ಸದುಪಯೋಗವನ್ನ ಚೆನ್ನಾಗಿ ಮಾಡಿಕೊಂಡ ಹೆಣ್ಣುಮಕ್ಕಳು ಸಿಕ್ಕ ಎಲ್ಲ ಸದಾವಕಾಶಗಳನ್ನೂ ಸದುಪಯೋಗಪಡಿಸಿಕೊಂಡು, ಒಂದು ಕಾಲದಲ್ಲಿ ಕೇವಲ ಪುರುಷರಿಗಷ್ಟೇ ಸೀಮಿತವಾಗಿದ್ದ ಲೌಕಿಕ ವ್ಯವಹಾರಗಳ ಎಲ್ಲ ಕ್ಷೇತ್ರಗಳಲ್ಲೂ ಸರಿಸಮಾನರಾಗಿ ಬೆಳೆದು ಪುರುಷರಂತೆಯೇ ಹೆಂಗಳೆಯರೂ ರಾರಾಜಿಸತೊಡಗಿದರು.
ಆಧುನಿಕ ಸಮಾಜ ಗಂಡು-ಹೆಣ್ಣೆಂಬ ಎಲ್ಲ ಭೇದವನ್ನೂ ತೊಡೆದುಹಾಕಿ "ಕುವರನಾದರೇನು, ಕುವರಿಯಾದರೇನು ?" ಎಂದು ಪ್ರಶ್ನಿಸುವ ಮಟ್ಟಕ್ಕೆ ಇಂದಿನ ಸಮಾಜ ಬಂದು ನಿಂತಿದೆ. ಹೀಗಾಗಿ ಹೆಣ್ಣು ಮಗುವಿನ ಜನನವಾಯಿತೆಂದರೆ ಈಗ ಯಾರೂ ಮುಖ ಸಿಂಡರಿಸೋಲ್ಲ! ಬದಲಿಗೆ ಶುಭಾಶಯಗಳನ್ನ ಸಲ್ಲಿಸೋದಕ್ಕೆ ಮುಂದಾಗುತ್ತಾರೆ.
ಪ್ರಸ್ತುತ ಲೇಖನ ಇದೇ ವಿಚಾರಕ್ಕೆ ಮೀಸಲಾಗಿದೆ. ಬಂಧುವರ್ಗದಲ್ಲಿ ಅಥವಾ ಗೆಳೆಯರ ಬಳಗದಲ್ಲಿ ಯಾರಿಗಾದರೂ ಹೆಣ್ಣುಮಗುವಿನ ಜನನವಾದಾಗ ಶುಭಾಶಯ ಸಂದೇಶಗಳನ್ನ ಯಾವ ರೀತಿಯಲ್ಲೆಲ್ಲ ಹೊಸೆಯಬಹುದು ಎಂಬುದಕ್ಕೇ ಮೀಸಲು ಈ ಲೇಖನ.
ಹೆಣ್ಣುಮಗು ಜನಿಸಿದಾಗ ಶುಭಾಶಯಗಳನ್ನ ಸಲ್ಲಿಸೋದಕ್ಕೆಂದೇ ಆಯ್ದು ಹತ್ತು ಸಂದೇಶಗಳನ್ನಿಲ್ಲಿ ಪಟ್ಟಿಮಾಡಲಾಗಿದೆ:

1. ದಂಪತಿಗಳಿಬ್ಬರ ವಿಷಯದಲ್ಲೂ ನಾನಿಂದು ತುಂಬಾ ಸಂತಸಗೊಂಡಿದ್ದೇನೆ. ಈ ಹೆಣ್ಣುಮಗು ನಿಮ್ಮ ಪಾಲಿನ ಸೌಭಾಗ್ಯಲಕ್ಷ್ಮಿಯಾಗಲಿದ್ದಾಳೆ!! ಶುಭಾಶಯಗಳು!!
2. ಲಕ್ಷ್ಮೀಸ್ವರೂಪಿಣಿಯಾದ ಈ ಹೆಣ್ಣುಮಗು ಮುಂದೆ ನಿಮಗೆ ತರಲಿರುವ ಸಂತಸದ ಪ್ರತೀ ಕ್ಷಣವನ್ನನುಭವಿಸಲು ನೀವಿಬ್ಬರೂ ಅರ್ಹರಾಗಿಯೇ ಇರುವಿರಿ. ಹಾರ್ದಿಕ ಶುಭಾಶಯಗಳು!
3. ಮುದ್ದು ಹೆಣ್ಣುಮಗುವಿನ ಜನನಕ್ಕಾಗಿ ನಿಮ್ಮಿಬ್ಬರಿಗೂ ಹಾರ್ದಿಕ ಶುಭಾಶಯಗಳು!
4. ಪುಟ್ಟಗೌರಿಯನ್ನ ಹಡೆದ ಭಾಗ್ಯವಂತ ದಂಪತಿಗಳಾದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು! 5. ಮನೆ-ಮನ ಬೆಳಗಲಿರುವ ಮಹಾಲಕ್ಷ್ಮಿಗೆ ಹಾರ್ದಿಕ ಸ್ವಾಗತ! ಪುಟ್ಟ ಅತಿಥಿಯನ್ನ ಜಗತ್ತಿಗೆ ಬರಮಾಡಿಕೊಂಡ ದಂಪತಿಗಳಿಗೆ ಹಾರ್ದಿಕ ಅಭಿನಂದನೆಗಳು!
5. ಮುದ್ದು ಹೆಣ್ಣುಮಗುವಿನ ತಂದೆತಾಯಿಗಳಾಗಿರೋ ನಿಮಗೆ ಸಹಾಯ ಮಾಡಲು ಕಾತರನಾಗಿರುವೆ! ಏನೇ ನೆರವಿನ ಅಗತ್ಯವಿದ್ದರೂ ನನಗೊಂದು ಸಂದೇಶವನ್ನು ಕಳಿಸಿದರಷ್ಟೇ ಸಾಕು!! ಕರ್ಣಾನಂದ ಸಮಾಚಾರವಿದು!! ಅಭಿನಂದನೆಗಳು!
6. ಈ ಅದೃಷ್ಟದೇವತೆಯ ರೂಪದಲ್ಲಿ ಭಗವಂತನು ಮುಂದೆ ನಿಮ್ಮಿಬ್ಬರನ್ನು ಬಹುವಿಧಗಳಲ್ಲಿ ಹರಸುವುದನ್ನು ಕಣ್ತುಂಬಿಕೊಳ್ಳಲು ನಾವಂತೂ ತುದಿಗಾಲಲ್ಲಿದ್ದೇವೆ! ನಿಮ್ಮ ಜೀವನದ ಅದೃಷ್ಟದ ಯಾನ ಇಲ್ಲಿಂದಲೇ ಶುರುವಾಗಲಿ!! ಹಾರ್ದಿಕ ಅಭಿನಂದನೆಗಳು.
7. ಹಲವು ಜೀವನಗಳನ್ನು ಮುಂದೆ ಬೆಳಗಲಿರುವ ಈ ಪ್ರಕಾಶಮಾನ ದೇವೀಸ್ವರೂಪೀ ಕಣ್ಮಣಿಗೆ ಹಾರ್ದಿಕ ಸ್ವಾಗತ. ಹೆತ್ತವರಿಗೆ ಹಾರ್ದಿಕ ಅಭಿನಂದನೆಗಳು. 9. ಪುಟ್ಟ ರಾಜಕುಮಾರಿಗೆ ಸ್ವಾಗತ. ಇಂತಹ ಸುಂದರಿಯ ಆಗಮನವನ್ನ ನಂಬೋಕೇ ಆಗ್ತಿಲ್ಲ. ರಾಜಕುಮಾರಿಯನ್ನ ಹಡೆದಿರುವ ಮಾತಾಪಿತರಿಗೆ ಹಾರ್ದಿಕ ಶುಭಾಶಯಗಳು!
8. ಹೆಣ್ಣುಮಕ್ಕಳು ತಾಯಂದಿರ ಅತ್ಯುತ್ತಮ ಗೆಳತಿಯರು ಹಾಗೂ ಅವರ ತಂದೆಯಂದಿರ ಪಾಲಿನ ಪುಟ್ಟ ರಾಜಕುಮಾರಿಯರು. ಎಲ್ಲರಿಂದಲೂ ಪ್ರೀತಿಸಲ್ಪಡುವ ಮತ್ತು ಆರೈಕೆಗೊಳ್ಳಲ್ಪಡುವ ಪುಟ್ಟಗೌರಿ ಇವಳು. ಇಂತಹ ಪುಟಾಣಿ ರಾಣಿಯನ್ನ ಹಡೆದಕ್ಕೆ ಹೆತ್ತವರಿಗೆ ಹಾರ್ದಿಕ ಅಭಿನಂದನೆಗಳು!!



Click it and Unblock the Notifications






