Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಜ್ಯೋತಿಶಾಸ್ತ್ರದ ಪ್ರಕಾರ ಯಾವ ರಾಶಿಗೆ ಯಾವ ರಾಶಿಯವರು ಬೆಸ್ಟ್ ಜೋಡಿ ಗೊತ್ತೆ?
ದಾಂಪತ್ಯ ಎನ್ನುವ ಸಂಬಂಧಕ್ಕೆ ಪ್ರತಿಯೊಬ್ಬರ ಜೀವನದಲ್ಲೂ ಬಹಳ ವಿಶೇಷ ಅರ್ಥವಿದೆ. ಹಿರಿಯರು ಹೇಳುವ ಪ್ರಕಾರ, ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ, ಯಾರ ಹಣೆಯಲ್ಲಿ ಯಾರು ಎಂಬುದನ್ನು ಬ್ರಹ್ಮನೇ ಬರೆದು ಕಳುಹಿಸಿರುತ್ತಾನೆ, ನಾವೆಲ್ಲ್ ನಿಮಿತ್ತ ಮಾತ್ರ ಎನ್ನುತ್ತಾರೆ.

ಆದರೂ ಮದುವೆಗೆ ಮುನ್ನ ದಂಪತಿಗಳು ಜೀವನದಲ್ಲಿ ಚೆನ್ನಾಗಿರಲಿ ಎಂದು ಜ್ಯೋತಿಷ್ಯ ನೋಡುವುದು, ಹೊಂದಾಣಿಕೆ ಸರಿ ಹೊಂದುತ್ತದೆಯೇ ಎಂದು ಲೆಕ್ಕಾಚಾರ ಮಾಡುವುದು ಸೇರಿದಂತೆ, ಒಟ್ಟಾರೆ ದಂಪತಿಗಳು ಚೆನ್ನಾಗಿರಲು ಬೇಕಾದ ಎಲ್ಲಾ ಶಾಸ್ತ್ರ-ಸಂಪ್ರದಾಯಗಳನ್ನು ಪಾಲಿಸುತ್ತೇವೆ.
ಜ್ಯೋತಿಶಾಸ್ತ್ರದ ಪ್ರಕಾರ ಹೇಳುವುದಾದರೆ 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯವರು ಇದೇ ರಾಶಿಯವರನ್ನು ವಿವಾಹವಾದರೆ ದಾಂಪ್ಯತ್ಯ ಜೀವನ ಚೆನ್ನಾಗಿರುತ್ತದೆ ಎನ್ನಲಾಗುತ್ತದೆ. ಯಾವ ರಾಶಿಯವರು ಯಾವ ರಾಶಿಯವರನ್ನು ವರಿಸಿದರೆ ಅದೃಷ್ಟ ಮುಂದೆ ನೋಡೋಣ:

ಮೇಷ ರಾಶಿಗೆ ತುಲಾ
ಮೇಷ ರಾಶಿಯವರು ಹುಟ್ಟು ನಾಯಕತ್ವ ಗುಣ ಇರುವವರು ಮತ್ತು ಪ್ರಾಬಲ್ಯವನ್ನು ಹೊಂದಿದ್ದಾರೆ. ಅವರು ಸಿಂಹ ಮತ್ತು ಧನು ರಾಶಿಯಂತಹ ಇತರ ಪ್ರಾಬಲ್ಯ ಹೊಂದಿರುವ ರಾಶಿಗಳೊಂದಿಗೆ ಉತ್ತಮ ಸ್ನೇಹಿತರಾಗಿರುತ್ತಾರೆ, ಆದರೆ ಪ್ರೀತಿ, ಮದುವೆಯಂಥ ಸಂಬಂಧಕ್ಕಾಗಿ ಮೇಷ ರಾಶಿಯು ತನ್ನ ಸಂಗಾತಿಯು ತನ್ನನ್ನು ನಿಯಂತ್ರಿಸುವ ಸ್ವಭಾವವನ್ನು ಇಷ್ಟವುದಿಲ್ಲ. ಆದ್ದರಿಂದ, ತುಲಾ ರಾಶಿಯವರು ಅತ್ಯಂತ ಪ್ರಾಮಾಣಿಕ ಹಾಗೂ ಸುಲಭವಾಗಿ ಎಲ್ಲಕ್ಕೂ ಹೊಂದಿಕೊಳ್ಳುವ ಸ್ವಭಾವದಾವರಾದ್ದರಿಂದ ಮೇಷ ರಾಶಿಯವರಿಗೆ ತುಲಾ ರಾಶಿಯವರು ಚೆನ್ನಾಗಿ ಹೊಂದುತ್ತಾರೆ.
ಇನ್ನು ತುಲಾ ರಾಶಿಯವರು ಭಾವನಾತ್ಮಕವಾಗಿ ಅವಲಂಬಿತರಾಗಿದ್ದಾರೆ, ಮೇಷ ರಾಶಿಯನ್ನು ನಿಯಂತ್ರಿಸುವವರಾಗಿದ್ದಾರೆ-ಈ ಎರಡೂ ರಾಶಿಗಳು ಪರಸ್ಪರ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಹೊಗುವಂಥ ಸ್ವಭಾವದವರಾಗಿದ್ದಾರೆ. ಉತ್ಸಾಹ ಮತ್ತು ಪ್ರಾಮಾಣಿಕತೆಯೇ ಈ ಎರಡು ರಾಶಿಗಳನ್ನು ಒಟ್ಟಿಗೆ ಬಂಧಿಸುತ್ತದೆ.

ವೃಷಭ ರಾಶಿಗೆ ಕನ್ಯಾ
ವೃಷಭ ರಾಶಿಯವರು ಇತರೆ ಎಲ್ಲಾ ರಾಶಿಗಳಿಗಿಂತ ಮೃದು ಹಾಗೂ ಭಾವನಾತ್ಮಕ ಸ್ವಭಾವದವರು ಎನ್ನಬಹುದು. ಈ ರಾಶಿಯವರು ಅಪ್ಪಟ ಕೌಟುಂಬಿಕ ಜೀವಿ, ರೋಮ್ಯಾಂಟಿಕ್ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊತ್ತ ನಿಸ್ಸೀಮ ಪ್ರೇಮಿ. ಈ ರಾಶಿಯವರು ನಿಸ್ಸಂದೇಹವಾಗಿ ಕನ್ಯಾರಾಶಿಯೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ, ಏಕೆಂದರೆ ಇವರೂ ಸಹ ಕುಟುಂಬ-ಆಧಾರಿತ ಗುಣ ಇರುವವರೇ. ಕನ್ಯಾ ರಾಶಿ ಮತ್ತು ವೃಷಭ ರಾಶಿಯ ಜೋಡಿಗಳು ಅತ್ಯಂತ ಶಕ್ತಿಶಾಲಿ ದಂಪತಿಗಳು ಆಗಬಹುದು ಎಂಬುದರಲ್ಲಿ ಅನುಮಾನವಿಲ್ಲ.

ಮಿಥುನ ರಾಶಿಗೆ -ಕುಂಭ ಅಥವಾ ಧನು
ಮಿಥುನ ರಾಶಿಯವರು ಸಾಮಾಜಿಕ ಗುಣಗಳನ್ನು ಹೊಂದಿದ್ದು, ವಿನೋದ ಮತ್ತು ಮನರಂಜನೆಯ ಸಂಗಾತಿಯನ್ನು ಪ್ರೀತಿಸುತ್ತೀರಿ. ಕುಂಭ ತಮ್ಮ ಸೃಜನಶೀಲತೆಯ ಸಹಾಯದಿಂದ ಹೊಸ ಅನುಭವಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ. ಆದ್ದರಿಂದ ಅವರು ನಿಮಗೆ ಉತ್ತಮ ಹೊಂದಾಣಿಕೆಯಾಗುತ್ತಾರೆ. ಇನ್ನು ಧನು ರಾಶಿಯವರು ಸ್ವತಂತ್ರ ಮನೋಭಾವದ ಜನರು, ಅವರು ಸಾಮಾಜಿಕ ಜೀವನವನ್ನು ಗೌರವಿಸುತ್ತಾರೆ ಮತ್ತು ಉಳಿಯುವುದಕ್ಕಿಂತ ಹೆಚ್ಚಾಗಿ ಸಾಹಸಗಳನ್ನು ಮಾಡಲು ಬಯಸುತ್ತಾರೆ. ಈ ಎರಡೂ ರಾಶಿಯವರು ನಿಮಗೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿಗಳು.

ಕರ್ಕ ರಾಶಿಗೆ- ಸಿಂಹ ಅಥವಾ ವೃಷಭ
ಒಂದು ಪರಿಪೂರ್ಣವಾದ ಸಂಬಂಧವಿದ್ದರೆ ನಿಮ್ಮ ಸಂಪೂರ್ಣ ಪ್ರೀತಿ ಮತ್ತು ಕಾಳಜಿ ಅವರಿಗೇ ಮೀಸಲಾಗಿರುತ್ತದೆ. ಆದ್ದರಿಂದ ನಿಮ್ಮಂತೆಯೇ ಇರುವ ವ್ಯಕ್ತಿಯನ್ನು ನೀವೇನೂ ಬಯಸುವುದಿಲ್ಲ. ಬದಲಾಗಿ, ಸಿಂಹ ಮತ್ತು ವೃಷಭ ನಿಮ್ಮನ್ನು ಸಮತೋಲನಗೊಳಿಸಲು ಸೂಕ್ತವಾದ ರಾಶಿಗಳಾಗಿವೆ. ಸಿಂಹ ರಾಶಿಯ ಉಗ್ರ ಸ್ವಭಾವವು ನಿಮ್ಮನ್ನು ಎಲ್ಲಾ ಅಡೆತಡೆಗಳಿಂದ ರಕ್ಷಿಸುತ್ತದೆ ಮತ್ತು ವೃಷಭಯವರು ನಿಮ್ಮ ಮೂಡಿ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಿಂಹ ರಾಶಿ - ಮೀನ ಅಥವಾ ತುಲಾ
ಸಿಂಹ ರಾಶಿಯವರು ನಿಜವಾಗಿಯೂ ಅಹಂಕಾರ ಮತ್ತು ಹೆಮ್ಮೆಪಡುವ ಗುಣಸ್ವಭಾವದವರು. ಆದ್ದರಿಂದ, ಅದನ್ನು ಸಮತೋಲನಗೊಳಿಸಲು ನಿಮಗೆ ಮೀನ ಮತ್ತು ತುಲಾ ರಾಶಿಯವರ ಅಗತ್ಯವಿದೆ. ಮೀನ ಸಂಬಂಧಗಳನ್ನು ಗೌರವಿಸುತ್ತದೆ ಮತ್ತು ಸಾಕಷ್ಟು ಸುರಕ್ಷಿತವಾದ ವೈಬ್ ಅನ್ನು ನೀಡುತ್ತದೆ. ತುಲಾ ನಿಮ್ಮ ಅತಿಯಾದ ಭಾವನೆಗಳು ಮತ್ತು ವ್ಯಕ್ತಿತ್ವವನ್ನು ಶಾಂತ ಮತ್ತು ಪ್ರಬುದ್ಧಗೊಳಿಸುತ್ತದೆ, ನಿಮ್ಮನ್ನು ಸಮತೋಲನಗೊಳಿಸುತ್ತದೆ.

ಕನ್ಯಾ ರಾಶಿಗೆ - ವೃಷಭ ಅಥವಾ ಮಕರ
ಸಂಬಂಧದಲ್ಲಿ ನಿಮಗೆ ಸುರಕ್ಷತೆ ಅಗತ್ಯವಿರುತ್ತದೆ, ಆದ್ದರಿಂದ ವೃಷಭ ರಾಶಿ ಮತ್ತು ಮಕರ ರಾಶಿಯವರು ನಿಮ್ಮ ವೈವಾಹಿಕ ಜೀವನಕ್ಕೆ ಉತ್ತಮ ಸಂಗಾತಿ ಆಗುತ್ತಾರೆ. ವೃಷಭದವರು ನಿಮಗೆ ಜೀವಮಾನದ ಸಂತೋಷ ಮತ್ತು ಬದ್ಧತೆಯ ಭರವಸೆ ನೀಡುತ್ತಾರೆ, ಆದರೆ ಮಕರ ರಾಶಿಯವರ ಹಾಗೂ ನಿಮ್ಮ ಮೌಲ್ಯಗಳು ಮತ್ತು ಸಿದ್ಧಾಂತಗಳು ಒಂದೇ ಆಗಿರುತ್ತದೆ ಮತ್ತು ಪರಸ್ಪರ ಹಂಚಿಕೊಳ್ಳುತ್ತೀರಿ, ಅದು ನಿಮ್ಮಿಬ್ಬರಲ್ಲೂ ಹೊಂದಾಣಿಕೆಯನ್ನು ಹೆಚ್ಚಿಸುತ್ತದೆ.

ತುಲಾ ರಾಶಿಗೆ - ವೃಷಭ ಅಥವಾ ಮೇಷ
ನೀವು ತುಂಬಾ ಆಕರ್ಷಕ ಮತ್ತು ನ್ಯಾಯಸಮ್ಮತ ಮನಸ್ಸಿನವರಾಗಿದ್ದೀರಿ ಆದರೆ ಕೆಲವೊಮ್ಮೆ ನಿರ್ಣಾಯಕವಾಗಿರಲು ನೀವು ಸಮಸ್ಯೆಗಳನ್ನು ಎದುರಿಸುತ್ತೀರಿ. ಆದ್ದರಿಂದ, ವೃಷಭ ರಾಶಿ ಮತ್ತು ಮೇಷ ರಾಶಿಯು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ವೃಷಭ ತಮ್ಮ ಜೀವನದಲ್ಲಿ ನಿಮ್ಮ ಉಪಸ್ಥಿತಿಯನ್ನು ಮೆಚ್ಚುತ್ತಾರೆ ಮತ್ತು ಸಮಾನ ಮನಸ್ಸಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ನೀವು ಎಂದಾದರೂ ಉನ್ನತ ಸ್ಥಾನದಲ್ಲಿರಲು ಪ್ರಯತ್ನಿಸಿದರೆ ಮೇಷ ರಾಶಿಯವರು ನಿಮಗೆ ಈ ನಿಟ್ಟಿನಲ್ಲಿ ನಿಷ್ಕಲ್ಮಷ ಸಹಾಯ ಮಾಡುತ್ತಾರೆ.

ವೃಶ್ಚಿಕ ರಾಶಿಗೆ- ಮೀನ ಅಥವಾ ಕನ್ಯಾ
ವೃಶ್ಚಿಕ ರಾಶಿಯವರು ನಿಗೂಢ, ಖಾಸಗಿತನ ಇಷ್ಟಪಡುವ ಮತ್ತು ಸಾಕಷ್ಟು ರಹಸ್ಯವಾಗಿರುವ ಗುಣದವರು. ಇವರಿಗೆ ತಮ್ಮದೇ ಸ್ವಭಾವದವರ ಅಗತ್ಯವಿಲ್ಲ. ಬದಲಾಗಿ ಮೀನ ಮತ್ತು ಕನ್ಯಾದಂಥವರು ಇವರಿಗೆ ಉತ್ತಮ ಸಂಗಾತಿ ಆಗುತ್ತಾರೆ. ಏಕೆಂದರೆ ಮೀನವು ಚಿಂತನಶೀಲ, ವಿಶ್ಲೇಷಣಾತ್ಮಕ ಮತ್ತು ನಿಮ್ಮ ಭಾವನೆಗಳನ್ನು ಅವರ ಆಧ್ಯಾತ್ಮಿಕ ವ್ಯಕ್ತಿತ್ವದಿಂದ ಸುಲಭವಾಗಿ ಗ್ರಹಿಸಬಹುದು. ಕನ್ಯಾರಾಶಿ ಎಲ್ಲದರಲ್ಲೂ ಹುಟುಕುವಂಥ ಸ್ವಭಾವದವರು, ಅದು ನಿಮಗೆ ವಿಶೇಷ ಎನಿಸುತ್ತದೆ. ಆದ್ದರಿಂದ, ನೀವಿಬ್ಬರೂ ಸುಲಭವಾಗಿ ತಮಾಷೆಯ ಸಂಭಾಷಣೆಯಲ್ಲಿಯೇ ಜೀವನ ನಡೆಸುತ್ತೀರಿ ಎಂಬುದು ನಂಬಿಕೆ.

ಧನು ರಾಶಿ - ಧನು ಅಥವಾ ಕುಂಭ
ನಿಮ್ಮ ಸಾಹಸಮಯ ಜೀವನಕ್ಕೆ ಅಥವಾ ಪ್ರಯತ್ನಗಳಿಂದ ನಿಮ್ಮನ್ನು ತಡೆಯುವಂಥ ವ್ಯಕ್ತಿಯನ್ನು ನೀವು ಬಯಸುವುದಿಲ್ಲ. ನೀವು ನಿಮ್ಮದೇ ರಾಶಿಯ ಅಂದರೆ ಧನು ರಾಶಿಯವರೊಂದಿಗೆ ಇದ್ದರೆ ಚೆನ್ನಾಗಿರುತ್ತದೆ. ಕಾರಣ ಯಾರೂ ನಿಮಗಿಂತ ಹೆಚ್ಚು ಸ್ವಾತಂತ್ರ್ಯ ಮತ್ತು ಸ್ವಾಭಾವಿಕತೆಯನ್ನು ಗೌರವಿಸುವುದಿಲ್ಲ. ಆದರೂ, ಕುಂಭ ರಾಶಿಯವರು ಉತ್ತಮ ಹೊಂದಾಣಿಕೆಯಾಗಬಹುದು ಏಕೆಂದರೆ ಅವರಿಗೆ ಸ್ವಾತಂತ್ರ್ಯದ ಮಹತ್ವ ತಿಳಿದಿದೆ.ಸ

ಮಕರ ರಾಶಿ - ಕರ್ಕ ಅಥವಾ ವೃಷಭ
ಮಕರ ರಾಶಿಯವರು ಹೊಸ ರಚನೆ ಮತ್ತು ಯೋಜನೆಗಳನ್ನು ಪ್ರೀತಿಸುತ್ತೀರಿ. ಆದ್ದರಿಂದ, ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಕರ್ಕ ಮತ್ತು ವೃಷಭ ರಾಶಿಯವರು ನಿಮಗೆ ಸಹಾಯ ಮಾಡುತ್ತಾರೆ. ಈ ರಾಶಿಗಳು ನಿಮ್ಮ ಸಂಘಟಿತ ಜೀವನಶೈಲಿಯನ್ನು ಬೆಂಬಲಿಸುತ್ತಾರೆ, ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದಕ್ಕಾಗಿ ನಿಮ್ಮನ್ನು ಗೌರವಿಸುತ್ತಾರೆ. ಕುಟುಂಬ ಮತ್ತು ವಿವಾಹದ ವಿಷಯದಲ್ಲಿ ಕರ್ಕ ರಾಶಿಯವರು ಸಹ ಇದೇ ರೀತಿಯ ಗುರಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ವೃಷಭ ರಾಶಿಯವರು ನಿಮಗೆ ನೈತಿಕ ಬೆಂಬಲವನ್ನು ನೀಡುತ್ತಾರೆ.

ಕುಂಭ ರಾಶಿ - ಕುಂಭ ಅಥವಾ ಮಿಥುನ
ಕುಂಭ ರಾಶಿಯ ಸ್ವತಂತ್ರ ವ್ಯಕ್ತಿತ್ವದಿಂದಾಗಿ ನೀವು ಹೆಚ್ಚು ತಪ್ಪಾಗಿ ಗ್ರಹಿಸಲ್ಪಡುತ್ತೀರಿ. ಆದ್ದರಿಂದ, ನೀವು ಹೆಚ್ಚಾಗಿ ನಿಮ್ಮದೇ ರಾಶಿಯ ಅಂದರೆ ಕುಂಭ ರಾಶಿಯವರು ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮಿಥುನ ರಾಶಿಯವರು ಸಹ ಉತ್ತಮ ಜೀವನ ಸಂಗಾತಿ ಆಗುತ್ತಾರೆ, ಏಕೆಂದರೆ ನೀವು ಇಬ್ಬರೂ ಪಾಲುದಾರರಿಗಿಂತ ಒಬ್ಬರಿಗೊಬ್ಬರು ಉತ್ತಮ ಸ್ನೇಹಿತರಾಗಲು ಬಯಸುತ್ತೀರಿ, ಇದು ಸಂತೋಷದಾಯಕ ಮತ್ತು ಯಶಸ್ವಿ ದಾಂಪತ್ಯವನ್ನು ಮುನ್ನಡೆಸಲು ಉತ್ತಮ ಮಾರ್ಗವಾಗಿದೆ.

ಮೀನ ರಾಶಿ- ವೃಶ್ಚಿಕ ಅಥವಾ ಮೇಷ
ನಿಮ್ಮನ್ನು ವಾಸ್ತವಕ್ಕೆ ಮರಳಿಸುವ ಅಥವಾ ತೇಲಾಡುವ ಗುಣದವಾದ ನಿಮ್ಮನ್ನು ಸಹಜ ಸ್ಥಿತಿಗೆ ಮರಳಿಸುವವರು ನಿಮಗೆ ಬೇಕು. ಆದ್ದರಿಂದ ವೃಶ್ಚಿಕ ಅಥವಾ ಮೇಷ ರಾಶಿಯವರು ನಿಮ್ಮ ಸಂಗಾತಿಗೆ ಉತ್ತಮ ಆಯ್ಕೆಯಾಗಿರುತ್ತಾರೆ. ವೃಶ್ಚಿಕ ರಾಶಿಯವರು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮ್ಮ ಎಲ್ಲಾ ಮನಸ್ಥಿತಿಗಳನ್ನು ತಿಳಿದಿದ್ದಾರೆ. ಮೇಷ ರಾಶಿಯವರು ಅವರಂತೆ ಹೆಚ್ಚು ಮುಕ್ತ ಮತ್ತು ಸಂತೋಷವಾಗಿರಲು ನಿಮಗೆ ಸಹಾಯ ಮಾಡುವ ಮೂಲಕ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರುತ್ತಾರೆ.



Click it and Unblock the Notifications











