Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ಕಲರ್ ಸೈಕೋಲಾಜಿ: ನಿಮ್ಮ ಇಷ್ಟದ ಬಣ್ಣ ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ
ನಾವು ಶಾಪಿಂಗ್ ಹೋದಾಗ ನಮ್ಮ ಇಷ್ಟದ ಬಣ್ಣದ ಬಟ್ಟೆಯನ್ನೇ ಹೊತ್ತು ತರುತ್ತೇವೆ, ಹಾಗಾಗಿ ನಮ್ಮ ವಾರ್ಡ್‌ರೋಬ್ ಓಪನ್ ಮಾಡಿದರೆ ಆ ಬಣ್ಣದ ಬಟ್ಟೆಗಳೇ ಹೆಚ್ಚು ಕಾಣುತ್ತವೆ. ನಮ್ಮ ಕಲರ್ ಸೆಲೆಕ್ಷನ್ ನೋಡಿ ಮನೆಯವರು ಅಥವಾ ಸ್ನೇಹಿತರು ಅದೇ ಕಲರ್ ಎಷ್ಟೊಂದು ಡ್ರೆಸ್ ಸೆಲೆಕ್ಟ್ ಮಾಡ್ತೀಯಾ? ಬೇರೆ ಕಲರ್ ತಗೋಬಹುದು ಅಲ್ವಾ ಎಂದು ಹೇಳಿದಾಗ ನಾವು ಕೂಡ ಶಾಪ್‌ಗೆ ಹೋಗ್ತೀವಿ, ಆದರೆ ಕೊನೆಗೆ ತರುವುದು ನಮಗೆ ಇಷ್ಟವಾದ ಬಣ್ಣದ ಡ್ರೆಸ್ ಅನ್ನೇ ಅಲ್ವಾ? ನಾವು ತುಂಬಾ ಇಷ್ಟ ಪಡುವ ಬಣ್ಣ ನಮ್ಮ ಭಾವನೆ, ಆಲೋಚನೆ, ನಡವಳಿಕೆ ಬಗ್ಗೆ ಹೇಳುತ್ತೆ ಗೊತ್ತಾ?
ನಾವು ಇಷ್ಟ ಪಡುವ ಬಣ್ಣಕ್ಕೂ ನಮ್ಮ ಭಾವನೆಗಳಿಗೂ ಸಂಬಂಧವಿದೆಯಂತೆ. ಈ ಕುರಿತು 2010, 2014, 2015 ಮತ್ತು 2019ರಲ್ಲಿ ಕಲರ್ ಸೈಕೋಲಾಜಿ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನಗಳು ಯಾವ ಬಣ್ಣ ನಮ್ಮ ಕುರಿತು ಏನು ಹೇಳಿದೆ ಎಂದು ನೋಡಿ:

ಕೆಂಪು
ಕೆಂಪು ಎಂಬುವುದು ಬೋಲ್ಡ್ ಬಣ್ಣ, ಇದು ಕುತೂಹಲ, ತಾಳ್ಮೆ, ಅಪಾಯ, ಸಾಹಸ, ಶಕ್ತಿ ಹಾಗೂ ಹೋರಾಟವನ್ನು ಸೂಚಿಸುತ್ತದೆ.
ನೀವು ಕೆಂಪು ಬಣ್ಣ ಇಷ್ಟ ಪಡುವವರಾದರೆ ನಿಮ್ಮಲ್ಲಿ ಈ ಗುಣಗಳಿರುತ್ತದೆ
* ಬೋಲ್ಡ್
* ಸಾಹಸ ಪ್ರಿಯರು
* ಧೈರ್ಯಶಾಲಿಗಳು
* ಕೆಲವೊಮ್ಮೆ ಆಲೋಚಿಸದೆ ಯಾವುದೋ ಕಾರ್ಯಕ್ಕೆ ಮುಂದಾಗುತ್ತಾರೆ
*ಬೇರೆಯವರಿಗೆ ಇವರೆಂದರೆ ಸ್ವಲ್ಪ ಭಯವಿರುತ್ತೆ.

ಕಿತ್ತಳೆ
ಆರೇಂಜ್ ಬಣ್ಣ ಬೇಗನೆ ಆಕರ್ಷಿಸುತ್ತದೆ, ಇದು ರೆಡ್‌ನಂತೆ ಬೋಲ್ಡ್ ಅಲ್ಲ, ಆರೇಂಜ್ ಇಷ್ಟಪಡುವವರ ವ್ಯಕ್ತಿತ್ವ ಈ ರೀತಿ ಇರುತ್ತೆ
* ತಮಾಷೆಯ ಗುಣದವರು
* ಬೇರೆಯವರ ಜೊತೆ ಬೇಗನೆ ಬೆರೆಯುತ್ತಾರೆ
* ಅಕ್ಕರೆ ತೋರುತ್ತಾರೆ
* ತುಂಬಾ ಮಾತನಾಡುತ್ತಾರೆ
* ತನ್ನ ಸುತ್ತ ಇರುವವರು ಖುಷಿಯಾಗಿರುವಂತೆ ಮಾಡುತ್ತಾರೆ
* ಪಾರ್ಟಿಗಳೆಂದರೆ ಇಷ್ಟ
* ಕೆಲಸದ ಬಗ್ಗೆ ಶ್ರದ್ಧೆ ಜಾಸ್ತಿ

ಹಳದಿ
ನೀವು ಹಳದಿ ಬಣ್ಣವನ್ನು ಇಷ್ಟಪಡುವವರ ವ್ಯಕ್ತಿತ್ವ ಈ ರೀತಿ ಇರುತ್ತದೆ
* ಪಾಸಿಟಿವ್ ಸ್ಪಿರಿಟ್
*ಧನಾತ್ಮಕ ದೃಷ್ಟಿಕೋನವಿರುತ್ತದೆ
* ಖುಷಿ-ಖುಷಿಯಾಗಿರಲು ಬಯಸುತ್ತಾರೆ
* ಸಾಹಸ ಇಷ್ಟಪಡುತ್ತಾರೆ
* ಅವರ ಜೊತೆ ಇರುವವರಿಗೆ ತುಂಬಾನೇ ಇಷ್ಟವಾಗುತ್ತಾರೆ
* ಸುಂದರ ನಗುವಿನ ಒಡೆಯರಾಗಿರುತ್ತಾರೆ. ಇವರ ನಗು ಮುಖ ನೋಡುವಾಗಲೇ ಖುಷಿಯಾಗುವುದು.

ನೀಲಿ ಬಣ್ಣ
ನೀಲಿ ಬಣ್ಣ ಇಷ್ಟಪಡುವವರ ವ್ಯಕ್ತಿತ್ವ ಇರುತ್ತದೆ:
* ನಂಬಿಕೆಗೆ ಅರ್ಹರು
* ನಿಯತ್ತಿನಿಂದ ಇರುತ್ತಾರೆ
* ತುಂಬಾ ಸ್ಟ್ರಾಂಗ್
* ಯಾವುದೇ ಸವಾಲನ್ನ ಸಮರ್ಥವಾಗಿ ನಿಭಾಯಿಸುತ್ತಾರೆ.

ಹಸಿರು ಬಣ್ಣ
ನೀವು ಹಸಿರು ಬಣ್ಣ ಇಷ್ಟಪಡುವವರಾದರೆ ನಿಮ್ಮ ವ್ಯಕ್ತಿತ್ವ ಈ ರೀತಿ ಇರುತ್ತದೆ
* ಪ್ರಾಕ್ಟಿಕಲ್
* ತುಂಬಾ ಡವನ್ ಟು ಅರ್ಥ್ ಅಂದರೆ ಅಹಂಕಾರ ಪ್ರವೃತ್ತಿಯವರಲ್ಲ
* ಸಲಹೆ ಕೊಡುವುದೆಂದರೆ ಇವರಿಗೆ ಪ್ರೀತಿ
* ಬೇರೆಯವರಿಗೆ ಸಹಾಯ ಮಾಡುವುದೆಂದರೆ ಇವರಿಗೆ ತುಂಬಾ ಇಷ್ಟ
* ಕೆಲಸದಲ್ಲಿ ಬರುವ ಸವಾಲುಗಳನ್ನು ನಿಭಾಯಿಸುತ್ತಾರೆ, ಇವರು ಔಟ್ ಆಫ್ ಬಾಕ್ಸ್ ಥಿಂಕ್ ಮಾಡುತ್ತಾರೆ.

ಪರ್ಪಲ್(ನೇರಳೆ)
ಯಾರು ನೇರಳೆ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೆ ಅವರಲ್ಲಿಈ ಗುಣಗಳಿರುತ್ತದೆ:
* ತುಂಬಾ ಜಾಣರು
* ತಮ್ಮದೇ ಗುರುತು ಮೂಡಿಸುವವರು
*ವಿಭಿನ್ನವಾಗಿ ಯೋಚಿಸುತ್ತಾರೆ, ಆದ್ದರಿಂದಲೇ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ.
* ಕ್ರಿಯಾಶೀಲತೆಯಿಂದ ಗಮನ ಸೆಳೆಯುತ್ತಾರೆ.

ಪಿಂಕ್
ಯಾರು ಪಿಂಕ್ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೋ ಅವರು ಈ ಗುಣಗಳನ್ನು ಹೊಂದಿರುತ್ತಾರೆ
* ತಮಾಷೆ ಇಷ್ಟಪಡುತ್ತಾರೆ
* ಅವರ ಭಾವನೆಗಳನ್ನು ವ್ಯಕ್ತಪಡಿಸಲು ಭಯ ಪಡುವುದಿಲ್ಲ
* ಪ್ರೀತಿ ಹಾಗೂ ಕುಟುಂಬಕ್ಕೆ ತುಂಬಾನೇ ಮಹತ್ವ ನೀಡುತ್ತಾರೆ.
* ಕೆಲವೊಮ್ಮೆ ಆಲೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ

ಬಿಳಿ
ಯಾರು ಬಿಳಿ ಬಣ್ಣವನ್ನು ತುಂಬಾ ಇಷ್ಟಪಡುತ್ತಾರೋ ಅವರಲ್ಲಿ ಈ ಗುಣಗಳಿರುತ್ತದೆ
* ತುಂಬಾ ಶಾಂತ ಸ್ವಭಾವದವರು
* ಶಾಂತಿ ಪ್ರಿಯರು
* ಮುಗ್ಧತೆ ಇರುತ್ತದೆ
* ಕೆಲವೊಮ್ಮೆ ಆಲೋಚನೆ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ
* ಶುಚಿತ್ವ ಹಾಗೂ ಯಾವ ವಸ್ತು ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು ಎಂದು ಬಯಸುತ್ತಾರೆ
* ನಡೆದಿದ್ದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೂರುವವರಲ್ಲ

ಕಪ್ಪು ಬಣ್ಣ
ಕಪ್ಪು ಬಣ್ಣ ಇಷ್ಟಪಡುವವರಲ್ಲಿ ಈ ಗುಣಗಳಿರುತ್ತೆ
* ಬೋಲ್ಡ್
* ರಿಸ್ಕ್ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡಲ್ಲ
* ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಕ್ಕೆ ಒಳಗಾಗುತ್ತಾರೆ
* ಸ್ವಲ್ಪ ಗಂಭೀರ ಸ್ವಭಾವದವರು
* ನಾಯಕತ್ವದ ಗುಣದವರು
* ನಂಬಿಕೆಗೆ ಅರ್ಹರು
* ಬೇಗನೆ ಯಾರನ್ನೂ ಹಚ್ಚಿಕೊಳ್ಳುವುದಿಲ್ಲ



Click it and Unblock the Notifications











