Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
Chitra Nakshatra Prediction 2023: ಚೈತ್ರ ನಕ್ಷತ್ರದವರು 2023ರಲ್ಲಿ ಹುಷಾರಾಗಿರಬೇಕು, ಸಾಲವಂತೂ ಕೊಡಲೇಬೇಡಿ
ಚೈತ್ರ ನಕ್ಷತ್ರದವರ ಅಧಿಪತಿ ಮಂಗಳ. ಈವರು ಭವಿಷ್ಯದ ಬಗ್ಗೆ ತುಂಬಾ ಗುರಿಗಳನ್ನು ಹೊಂದಿರುತ್ತಾರೆ, ಆ ಗುರಿ ತಲುಪಲು ನಿತಂತರವಾಗಿ ಪ್ರಯತ್ನಿಸುತ್ತಾರೆ. ಚೈತ್ರ ನಕ್ಷತ್ರದವರು ಪ್ರತಿಯೊಂದು ಅವಕಾಶಗಳನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳಲುಪ್ರಯತ್ನಿಸುತ್ತಾರೆ. ಇವರು ಸಂಬಂಧವನ್ನು ಸುಂದರವಾಗಿಸಲು ತುಂಬಾನೇ ಪ್ರಯತ್ನ ಪಡುತ್ತಾರೆ.

ಚೈತ್ರದ ನಕ್ಷತ್ರದ ಪುರುಷರು ತುಂಬಾ ತಾಳ್ಮೆ ಸ್ವಭಾವದವರು, ಇವರು ತುಂಬಾ ಚಟುವಟಿಕೆಯಿಂದ ಕಾರ್ಯಗಳನ್ನು ಮಾಡುತ್ತಾರೆ. ತಮ್ಮ ಗುರಿ ತಲುಪಲು ನಿರಂತರ ಪ್ರಯತ್ನಿಸುತ್ತಾರೆ. ಚೈತ್ರ ನಕ್ಷತ್ರ ಸ್ತ್ರೀಯರು ತುಂಬಾ ಒಳ್ಳೆಯ ಮನಸ್ಸು ಹೊಂದಿರುತ್ತಾರೆ. ಸಂಬಂಧದ ವಿಷಯದಲ್ಲಿ ತುಂಬಾ ನಿಯತ್ತು, ಆಗ ತಮ್ಮ ಸಂಬಂಧ ಸುಂದರವಾಗಿಸಲು ಪ್ರಯತ್ನ ಪಡುತ್ತಾರೆ.
ಚೈತ್ರ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ಪ್ರಕಾರ ಚೈತ್ರ ನಕ್ಷತ್ರದವರ ಆರ್ಥಿಕ, ಕೌಟುಂಬಿಕ, ವೃತ್ತಿ, ಆರೋಗ್ಯ ಭವಿಷ್ಯ ನೋಡುವುದಾದರೆ:
ಚೈತ್ರ ನಕ್ಷತ್ರ 2023ರ ಪ್ರಕಾರ ಕನ್ಯಾ ಹಾಗೂ ತುಲಾ ರಾಶಿಯವರ 2023ರ ಭವಿಷ್ಯ ಹೇಳಲಾಗುವುದು. ಚೈತ್ರ ನಕ್ಷತ್ರದ ಪದ1ರಲ್ಲಿ ಜನಿಸಿದ ಕನ್ಯಾ ರಾಶಿಯವರ ಕೌಟುಂಬಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಕಂಡು ಬರುವುದು.
ಚೈತ್ರ ನಕ್ಷತ್ರ ಪದ 2ರಲ್ಲಿ ಜನಿಸಿದ ಕನ್ಯಾ ರಾಶಿಯವರ ವೃತ್ತಿ ಹಾಗೂ ಉದ್ಯೋಗದಲ್ಲಿ ಕೆಲವೊಂದು ಸವಾಲುಗಳು ಎದುರಾಗುವುದು. ಚೈತ್ರ ನಕ್ಷತ್ರ ಪದ 3ರಲ್ಲಿ ಜನಿಸಿದ ತುಲಾ ರಾಶಿಯವರು ಈ ಅವಧಿಯಲ್ಲಿ ಜಾಗೃತಿಯಿಂದಿರಬೇಕು. ಚೈತ್ರ ನಕ್ಷತ್ರ ಪದ 4ರಲ್ಲಿ ಜನಿಸಿದ ತುಲಾ ರಾಶಿಯವರಿಗೆ ಕೆಲ ಆರ್ಥಿಕ ತೊಂದರೆಗಳು ಉಂಟಾಗಬಹುದು.
ಯಾವ ತಿಂಗಳು ಶುಭ, ಯಾವ ತಿಂಗಳಿನಲ್ಲಿ ಜಾಗ್ರತೆವಹಿಸಬೇಕು?
ಜೂನ್, ಆಗಸ್ಟ್, ಅಕ್ಟೋಬರ್, ಡಿಸೆಂಬರ್ ತಿಂಗಳು ಒಳ್ಳೆಯದಿದೆ. ಜನವರಿ, ಮಾರ್ಚ್, ಏಪ್ರಿಲ್, ಮೇ, ಜುಲೈ ಮತ್ತು ನವೆಂಬರ್ ತಿಂಗಳಿನಲ್ಲಿ ಜಾಗ್ರತೆ. ಫೆಬ್ರವರಿ, ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿಯಾಗಿರುತ್ತೆ.
ಚೈತ್ರ ನಕ್ಷತ್ರದವರ ವೃತ್ತಿ ಭವಿಷ್ಯ
ಚೈತ್ರ ನಕ್ಷತ್ರದಲ್ಲಿ ಜನಿಸಿದವರಿಗೆ 2023ರಲ್ಲಿ ವೃತ್ತಿ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು, ಕೆಲವರಿಗೆ ಹೊಸ ಉದ್ಯೋಗ ಪಡೆಯಲು ಕಷ್ಟವಾಗಬಹುದು. ಕೆಲವರು ಕೆಲಸವನ್ನು ಕಳೆದುಕೊಳ್ಳಬಹುದು. ಉದ್ಯಮದಲ್ಲೂ ಆರ್ಥಿಕ ತೊಂದರೆಗಳು ಉಂಟಾಗಬಹುದು. ಏಪ್ರಿಲ್-ಮೇ ತಿಂಗಳಿನಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿದೆ. ನಿಮ್ಮ ಕೌಶಲ್ಯವನ್ನು ವೃತ್ತಿಯಾಗಿ ಮಾಡಿಕೊಂಡರೆ ಒಳ್ಳೆಯ ಲಾಭ ಗಳಿಸುವಿರಿ. ಸ್ವಂತ ಉದ್ಯೋಗ ಮಾಡುವವರು ತಮ್ಮ ವ್ಯವಹಾರ ಪ್ಲ್ಯಾನ್‌ನಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ವಿದೇಶದಲ್ಲಿ ಕೆಲಸ ಹುಡುಕುತ್ತಿರುವವರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಈ ಅವಧಿ ಒಳ್ಳೆಯದಿದೆ.
ಚೈತ್ರ ನಕ್ಷತ್ರದವರ ಆರ್ಥಿಕ ಭವಿಷ್ಯ
ಚೈತ್ರ ನಕ್ಷತ್ರದವರಿಗೆ ವರ್ಷದ ಆರಂಭದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಆದರೆ ವರ್ಷದ ಮಧ್ಯಭಾಗದ ನಂತರ ಆರ್ಥಿಕ ತೊಂದರೆಗಳು ಕಡಿಮೆಯಾಗಬಹುದು. ಆರ್ಥಿಕವಾಗಿ ಬೆಳೆಯಲು ಅವಕಾಶಗಳು ಸಿಗುತ್ತದೆ. ನಿಮ್ಮ ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನ ಹೆಚ್ಚುವುದು. ನಿಮ್ಮ ಆಸೆಗಳು ನೆರವೇರುವುದು. ಕೆಲವರು ಹೊಸ ಮನೆ ಕಟ್ಟಲು ಪ್ರಾರಂಭಿಸಬಹುದು. ಇನ್ನು ಕೆಲವರು ಜಾಗ ಖರೀದಿಸಬಹುದು. ಈ ವರ್ಷ ನೀವು ಯಾರಿಗೂ ಸಾಲ ಕೊಡದಿರುವುದು ಒಳ್ಳೆಯದು, ಕೊಟ್ಟರೆ ಸಂಬಂಧ ಕಳೆದುಕೊಳ್ಳುವುದು ಅಲ್ಲದೆ, ಹಣವೂ ಹಿಂತಿರುಗಿ ಬರುವುದಿಲ್ಲ. ಸಾಲ ಕೊಟ್ಟರೆ ಮರಳಿ ಸಿಗುವುದು ಕಷ್ಟ. ನಿಮ್ಮ ಖರ್ಚುಗಳ ಮೇಲೆ ನಿಗಾವಹಿಸಿದರೆ ಒಳ್ಳೆಯದು. ಹೂಡಿಕೆ ಮಾಡುವಾಗಲೂ ಎಚ್ಚರ.
ಚೈತ್ರ ನಕ್ಷತ್ರದವರ ಕುಟುಂಬ ಭವಿಷ್ಯ
ಈ ವರ್ಷ ಬ್ಯಾಚುಲರ್ಸ್ ಯಾರ ಜೊತೆಗಾದರೂ ಸಂಬಂಧ ಬೆಳೆಸುವ ಮುನ್ನ ತುಂಬಾ ಎಚ್ಚರವಹಿಸಬೇಕು. ಅಲ್ಲದೆ ಸಂಬಂಧದ ವಿಷಯದಲ್ಲಿ ಮಧ್ಯವರ್ತಿಗಳಾಗಬೇಡಿ, ಇದರಿಂದ ನಿಮಗೆ ತೊಂದರೆ ಉಂಟಾಗಬಹುದು. ಮೇ ತಿಂಗಳಿನಲ್ಲಿ ಎಮೋಷನಲಿ ಸ್ವಲ್ಪ ಕಷ್ಟವಾಗಬಹುದು. ನೀವು ನಂಬಿದವರಿಂದಲೇ ಮೋಸಯಾಗುವುದರಿಂದ ಮನಸ್ಸಿಗೆ ನೋವಾಗುತ್ತದೆ.ಕೌಟುಂಬಿಕ ಕಲಹಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವುದು, ಆದಷ್ಟು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ.
ಚೈತ್ರ ನಕ್ಷತ್ರ ಆರೋಗ್ಯ ಭವಿಷ್ಯ
ವರ್ಷದಲ್ಲಿ ತುಂಬಾ ತಿಂಗಳುಗಳು ಆರೋಗ್ಯದ ದೃಷ್ಟಿಯಿಯಿಂದ ಉತ್ತಮವಾಗಿದೆ. ಆದರೆ ವರ್ಷದ ಕೊನೆಯ ತಿಂಗಳುಗಳಲ್ಲಿ ಆರೋಗ್ಯದ ಕಡೆಗೆ ಸ್ವಲ್ಪ ಗಮನ ನೀಡಬೇಕು. ಈ ಅವಧಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವುದು. ನಿಮ್ಮ ಆರೋಗ್ಯದ ಬಗ್ಗೆ ನಿಯಮಿತ ಚಿಕಿತ್ಸೆ ಮಾಡಿಸಿ. ವರ್ಷದ ಕೊನೆಯ ತಿಂಗಳಿನಲ್ಲಿ ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು. ನಿಮ್ಮ ಆಹಾರಕ್ರಮದ ಕಡೆಗೆ ಗಮನ ನೀಡಿ.



Click it and Unblock the Notifications



