Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಚೈನೀಸ್ ಭವಿಷ್ಯ: ನೀವು ಜನಿಸಿದ ಇಸವಿಗೆ ಅನುಸಾರ ನಿಮಗೆ 2021 ಹೇಗಿರಲಿದೆ?
ಚೈನಾದಲ್ಲಿ ವರ್ಷದ ಭವಿಷ್ಯವನ್ನು ವರ್ಷದ ಆಧಾರದ ಮೇಲೆ ಹೇಳಲಾಗುವುದು. ಪ್ರತಿ ರಾಶಿಯ ಪ್ರಾಣಿಯ ಅನುಸಾರ ಭವಿಷ್ಯವನ್ನು ಹೇಳಲಾಗುವುದು.

ಕಳೆದ ವರ್ಷ ಚೈನೀಸ್ ಭವಿಷ್ಯ ಪ್ರಕಾರ ಮೆಟಲ್ ಇಲಿ ಆಗಿತ್ತು, ಅದೇ ಈ 2021ನೇ ವರ್ಷ ಗೂಳಿಯಾಗಿದೆ. ಚೈನೀಸ್ ಕ್ಯಾಲೆಂಡರ್ ಪ್ರಕಾರ ಮೆಟಲ್ ಇಲಿ 2020 ಜನವರಿ 4ರಂದು ಪ್ರಾರಂಭವಾಗಿ 2021 ಜನವರಿ 25ರವರೆಗೆ ಇದೆ. ಈ ವರ್ಷ ಮೆಟಲ್ ಗೂಳಿ ಫೆಬ್ರವರಿ 12ಕ್ಕೆ ಪ್ರಾರಂಭವಾಗಿ 2022 ಜವರಿ 31ಕ್ಕೆ ಕೊನೆಯಾಗುತ್ತೆ.
ಜನಿಸಿದ ಇಸವಿ ಆಧಾರದ ಮೇಲೆ ಚೈನೀಸ್ ಭವಿಷ್ಯ ಹೇಳಲಾಗುವುದು.

ಇಲಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಇಲಿ ತಮ್ಮ ರಾಶಿ ಚಿಹ್ನೆಯಾಗಿರುತ್ತೆ?
1936, 1924, 1948, 1972, 1960, 1984, 2008, 1996, 2020, 2032 ಈ ಇಸವಿಯಲ್ಲಿ ಜನಿಸಿದವರ ರಾಶಿ ಪ್ರಾಣಿ ಇಲಿ.
ಚೈನೀಸ್ ಭವಿಷ್ಯ ಪ್ರಕಾರ ಈ ಇಸವಿಗಳಲ್ಲಿ ಜನಿಸಿದವರ ಆರ್ಥಿಕ ಸ್ಥಿತಿ 2021ರಲ್ಲಿ ಉತ್ತಮವಾಗಿರುತ್ತೆ, ನೀವು ಯಾವುದೇ ಆರ್ಥಿಕ ತೊಂದರೆಯನ್ನು 2021ರಲ್ಲಿ ಅನುಭವಿಸುವುದಿಲ್ಲ, ವೃತ್ತಿಪರ ಬದುಕಿನಲ್ಲಿ ಒತ್ತಡ ಹೆಚ್ಚುವುದು. ಒಟ್ಟಿನಲ್ಲಿ 2021 ನಿಮಗೆ ಮಿಶ್ರಫಲದ ವರ್ಷವಾಗಿದೆ.

ಗೂಳಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಗೂಳಿ ತಮ್ಮ ರಾಶಿ ಚಿಹ್ನೆಯಾಗಿರುತ್ತೆ?
1937, 1925, 1949,1973, 1961, 1985, 2009, 1997, 2021, 2033 ಈ ವರ್ಷದಲ್ಲಿ ಹುಟ್ಟಿದವರ ರಾಶಿ ಪ್ರಾಣಿ ಗೂಳಿಯಾಗಿದೆ.
ಚೈನೀಸ್ ಭವಿಷ್ಯ ಪ್ರಕಾರ ನಿಮಗೆ 2021ನೇ ವರ್ಷವು ಅನುಕೂಲಕರವಾಗಿದೆ. ನಿಮ್ಮ ಮಾನಸಿಕ ಸ್ಥಿತಿಯೂ ಉತ್ತಮವಾಗಿರುತ್ತದೆ ಹಾಗೂ ನೀವು ಮಾನಸಿಕ ಒತ್ತಡವನ್ನು ಹೊರಹಾಕುವ ಪ್ರಯತ್ನವನ್ನು ಕೂಡ ಮಾಡುತ್ತೀರಿ. ವೃತ್ತಿಯಲ್ಲಿ ನಿಮ್ಮ ಕಾರ್ಯದಕ್ಷತೆಯಿಂದಾಗಿ ಬಡ್ತಿ ಪಡೆಯುವಿರಿ. ನಿಮ್ಮ ಕೆಲಸ ಮೆಚ್ಚುಗೆಯನ್ನು ಪಡೆಯುವುದು. ಇನ್ನು ಮದುವೆಯಾಗಲು ಇಚ್ಚಿಸುವವರಿಗೂ ಈ ವರ್ಷ ಉತ್ತಮವಾಗಿದೆ. ಮನೆಯಲ್ಲಿಯೂ ಸಂತೋಷ ಇರುತ್ತದೆ. ಖರ್ಚು ಹೆಚ್ಚಾಗುವುದು ಆದರೆ ಆರ್ಥಿಕ ತೊಂದರೆ ಉಂಟಾಗುವುದಿಲ್ಲ.

ಹುಲಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಹುಲಿ ತಮ್ಮ ರಾಶಿ ಚಿಹ್ನೆಯಾಗಿರುತ್ತೆ?
1938, 1926, 1950, 1962, 1986, 1974, 1998, 2022, 2010, 2034 ಈ ವರ್ಷದಲ್ಲಿ ಹುಟ್ಟಿದವರ ರಾಶಿ ಪ್ರಾಣಿ ಹುಲಿಯಾಗಿದೆ.
ಹುಲಿಯನ್ನು ರಾಶಿ ಪ್ರಾಣಿಯಾಗಿರುವವರಿಗೆ 2021ನೇ ವರ್ಷ ಅಷ್ಟೊಂದು ಅನುಕೂಲಕರವಲ್ಲ. ಈ ವರ್ಷ ಕೆಲವೊಂದು ಸಮಸ್ಯೆಗಳು ಎದುರಾಗುವುದು. ವ್ಯವಹಾರದಲ್ಲೂ ಅನೇಕ ಸಮಸ್ಯೆಗಳು ಉದುರಾಗುವುದು. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡ ಹೆಚ್ಚುವುದು. ನಿಮ್ಮ ಹಾಗೂ ಸಂಗಾತಿಯ ನಡುವೆ ಕೆಲವೊಂದು ತಪ್ಪು ಕಲ್ಪನೆ ಬೆಳೆಯುವುದು. ನೀವು ಕೋಪವನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಮೊಲ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಮೊಲ ತಮ್ಮ ರಾಶಿ ಚಿಹ್ನೆಯಾಗಿರುತ್ತೆ?
1939, 1927, 1951, 1963,1987, 1975, 1999, 2023, 2011, 2035 ಈ ವರ್ಷದಲ್ಲಿ ಹುಟ್ಟಿದವರ ರಾಶಿ ಪ್ರಾಣಿ ಮೊಲಯಾಗಿದೆ.
ಚೈನೀಸ್ ಭವಿಷ್ಯ ಪ್ರಕಾರ 2021ರಲ್ಲಿ ಮೊಲ ರಾಶಿಯವರ ಆಸೆಗಳೆಲ್ಲಾ ಈಡೇರುವುದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಗುವುದು. ಅಲ್ಲದೆ ಯಾವುದೇ ಪ್ರಗತಿಗೆ ಶಾರ್ಟ್ ಕಟ್ ಬಳಸದಿರುವುದು ಒಳ್ಳೆಯದು. ಇಲ್ಲದಿದ್ದರೆ ಮಾನಸಿಕ ಚಿಂತೆ ಹೆಚ್ಚುವುದು.
ಅಲ್ಲದೆ ಮೊಲದ ರಾಶಿಯವರು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಸೂಚಿಸಲಾಗಿದೆ. ನಿಮ್ಮ ದುರ್ಬಲ ಆರೋಗ್ಯ ವೃತ್ತಿ ಬದುಕನ್ನೂ ಕೂಡ ಬಾಧಿಸುವುದು.
ಅಲ್ಲದೆ ನಿಮ್ಮ ಬದುಕಿನಲ್ಲಿ ಆಗುವ ಬದಲಾವಣೆಯನ್ನು ಸ್ವೀಕರಿಸಲು ನೀವು ಸಿದ್ಧವಾಗಿರಬೇಕು. ಒಟ್ಟಿನಲ್ಲಿ 2021 ನಿಮಗೆ ಅಷ್ಟು ಅನುಕೂಲಕರವಾಗಿಲ್ಲ.

ಡ್ರ್ಯಾಗನ್ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಡ್ನ್ರ್ಯಾಗನ್ ತಮ್ಮ ರಾಶಿ ಚಿಹ್ನೆಯಾಗಿರುತ್ತೆ?
1940, 1928, 1952, 1964, 1988, 1976, 2000, 2024, 2012, 2036 ಇಸವಿಯಲ್ಲಿ ಹುಟ್ಟಿದವರ ರಾಶಿ ಪ್ರಾಣಿ ಡ್ರ್ಯಾಗನ್ ಆಗಿದೆ.
ಈ ರಾಶಿ ಚಿಹ್ನೆ ಹೊಂದಿವರ 2021 ಭವಿಷ್ಯ ಸಾಮಾನ್ಯಗಿಂತ ಸ್ವಲ್ಪ ಉತ್ತಮವಾಗಿದೆ ಎಂದು ಹೇಳಲಾಗಿದೆ. ನಿಮಗೆ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತೆ. ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಬಹುದು. ನೀವು ಯಶಸ್ಸು ಪಡೆಯಲು ನಿಮ್ಮ ಕಡೆಯಿಂದ ಸಾಕಷ್ಟು ಕಠಿಣ ಶ್ರಮ ಪಡಬೇಕು. ಅಲ್ಲದೆ ನೀವು ಲಕ್ಷುರಿಗಾಗಿ ಸ್ವಲ್ಪ ಖರ್ಚು ಮಾಡುವಿರಿ. ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಸಮತೋಲ ಕಾಪಾಡಿಕೊಳ್ಳಿ.

ಹಾವು ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಹಾವು ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1941, 1929, 1965, 1953, 1977, 2001, 1989, 2025, 2013, 2037 ಈ ವರ್ಷದಲ್ಲಿ ಹುಟ್ಟಿದವರ ರಾಶಿ ಪ್ರಾಣಿ ಹಾವು ಆಗಿದೆ.
ಚೈನೀಸ್ ಭವಿಷ್ಯ ಪ್ರಕಾರ ಹಾವು ಪ್ರಾಣಿಯ ರಾಶಿಯವರು ತಮ್ಮೆಲ್ಲಾ ಸಮಸ್ಯೆಗಳನ್ನು ತಮ್ಮ ನಡುವಳಿಕೆ ಹಾಗೂ ಬುದ್ಧಿವಂತಿಕೆಯಿಂದ ಪರಿಹರಿಸುತ್ತಾರೆ. ಆರ್ಥಿಕ ಸಮಸ್ಯೆಯನ್ನು ಕೂಡ ಹೋಗಲಾಡಿಸುವಿರಿ. ಈ ವರ್ಷ ನಿಮಗೆ ಹೆಚ್ಚಿನ ಲಾಭ ಸಿಗಲು ಸಾಧ್ಯವಿಲ್ಲ. ನಿಮ್ಮ ಸ್ವಭಾವವೇ ನಿಮ್ಮ ದೊಡ್ಡ ಶತ್ರುವಾಗಿರುತ್ತೆ. ನಿಮ್ಮ ಕೋಪ ವೃತ್ತಿಪರ ಬದುಕಿನಲ್ಲೂ ಕೆಲವು ತೊಂದರೆ ಉಂಟು ಮಾಡುವುದು. ಒಟ್ಟಿನಲ್ಲಿ ಹಾವು ಪ್ರಾಣಿಯ ರಾಶಿಯವರಿಗೆ ಈ ವರ್ಷ ಅಷ್ಟೊಂದು ಅನುಕೂಲಕರವಲ್ಲ.

ಕುದುರೆ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಕುದುರೆ ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1942, 1930, 1954, 1978, 1966, 1990, 2014, 2002, 2026, 2033 ಈ ಇಸವಿಯಲ್ಲಿ ಜನಿಸಿದವರ ರಾಶಿ ಪ್ರಾಣಿ ಕುದುರೆಯಾಗಿದೆ.
ಕುದುರೆ ರಾಶಿ ಪ್ರಾಣಿಯವರಿಗೆ ಈ ವರ್ಷ ಮಿಶ್ರಫಲವಾಗಿದೆ. ನೀವು ಪ್ರೀತಿಸುತ್ತಿದ್ದರೆ ಮದುವೆಯಾಗುವ ಸಾಧ್ಯತೆ ಇದೆ, ಮನೆಯಲ್ಲಿ ಕೆಲವೊಂದು ಸಮಸ್ಯೆಗಳಿರುವುದು, ಈ ಸಂದರ್ಭದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾದರೆ ಸಂವಹನದ ಮೂಲಕ ಪರಿಹರಿಸಿ. ಇನ್ನು ಆರ್ಥಿಕ ವಿಷಯದ ಬಗ್ಗೆ ಹೇಳುವುದಾದರೆ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.

ಕುರಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಕುರಿ ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1943, 1931, 1955,1979, 1967, 2003, 1991, 2015, 2027, 2039 ಈ ಇಸವಿಯಲ್ಲಿ ಜನಿಸಿದವರ ರಾಶಿ ಪ್ರಾಣಿ ಕುರಿಯಾಗಿದೆ.
ಚೈನೀಸ್ ಭವಿಷ್ಯ ಪ್ರಕಾರ ನೀವು 2021ರಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಿರಿ. ಕೆಲವೊಂದು ಆರ್ಥಿಕ ಕಾರಣಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚುವುದು. ವವೈವಾಹಿಕ ಜೀವನದಲ್ಲೂ ಕೆಲವೊಂದು ಸಮಸ್ಯೆಗಳು ಎದುರಾಗುವುದು. ವ್ಯವಹಾರದಲ್ಲಿ ಅನುಭವಿಸ್ಥರ ಸಲಹೆ ಪಡೆಯುವುದು ಒಳ್ಳೆಯದು. ಅಲ್ಲದೆ ಸಂಬಂಧಿಕರು ಹಾಗೂ ಸ್ನೇಹಿತರ ಬೆಂಬಲ ಸಿಗುವುದು. ಒಟ್ಟಿನಲ್ಲಿ ಹೇಳುವುದಾದರೆ ಈ ವರ್ಷ ಮಿಶ್ರಫಲ.

ಕೋತಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಕೋತಿ ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1944, 1932, 1956, 1980, 1968, 1992, 2016, 2028, 2004, 2040 ಈ ಇಸವಿಯಲ್ಲಿ ಜನಿಸಿದವರ ರಾಶಿ ಪ್ರಾಣಿ ಕೋತಿಯಾಗಿದೆ.
ಈ ಪ್ರಾಣಯ ರಾಶಿಯವರ ಜೀವನ ಈ ವರ್ಷ ಸರಳವಾಗಿ, ಖುಷಿಯಾಗಿ ಇರುತ್ತೆ. ನಿಮ್ಮ ವೃತ್ತಿಪರ ಬದುಕು ಕೂಡ ಚೆನ್ನಾಗಿರುತ್ತೆ. ಆಗಾಗ ಆರ್ಥಿಕ ಸಮಸ್ಯೆ ಎದುರಾದರೂ ನಿಮ್ಮ ಶ್ರಮದಿಂದ ಅದನ್ನು ದೂರವಾಗಿಸುವಿರಿ. ನಿಮ್ಮ ದಾಖಲೆ ಪತ್ರಗಳನ್ನು ಜೋಪಾನವಾಗಿ ಇಡಲು ಸೂಚಿಸಲಾಗಿದೆ.
ಮನೆಯಲ್ಲಿ ಸಂತೋಷ ಇರುತ್ತದೆ, ಆರೋಗ್ಯವೂ ಉತ್ತಮವಾಗಿರುತ್ತೆ.

ಕೋಳಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಕೋಳಿ ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1945, 1933, 1957, 1981, 1969, 2005, 1993, 2029, 2017, 2041 ಈ ಇಸವಿಯಲ್ಲಿ ಜನಿಸಿದವರ ರಾಶಿಪ್ರಾಣಿ ಕೋಳಿಯಾಗಿದೆ.
ಚೈನೀಸ್ ಭವಿಷ್ಯ ಪ್ರಕಾರ ಈ ಇಸವಿಯಲ್ಲಿ ಜನಿಸದವರು 2021ರಲ್ಲಿ ತುಂಬಾ ಯಶಸ್ಸು ಪಡೆಯುತ್ತಾರೆ. ನಿಮಗೆ ಸಹೋದ್ಯೋಗಿಗಳ ಹಾಗೂ ಸ್ನೇಹಿತರ ಬೆಂಬಲ ಇರುತ್ತೆ. ವೃತ್ತಿ ಬದುಕಿನಲ್ಲಿ ಬಡ್ತಿ ಸಿಗುವುದು, ಮನೆಯಲ್ಲಿ ಖುಷಿ ಇರುತ್ತೆ, ವ್ಯವಹಾರದಲ್ಲಿಯೂ ಪ್ರಗತಿ ಕಾಣಬಹುದು. ಒಟ್ಟಿನಲ್ಲಿ ಹೇಳುವುದಾದರೆ ಈ ವರ್ಷ ಅತ್ಯುತ್ತಮವಾಗಿದೆ.

ನಾಯಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ನಾಯಿ ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1946, 1934,1982, 1958, 1970, 2018, 1994, 2006, 2030, 2042 ಈ ಇಸವಿಯಲ್ಲಿ ಜನಿಸಿದವರ ರಾಶಿ ಪ್ರಾಣಿ ನಾಯಿಯಾಗಿದೆ.
ನಾಯಿಯನ್ನು ರಾಶಿ ಪ್ರಾಣಿಯಾಗಿ ಪಡೆದವರು ಕೆಲಸ ಕಾರ್ಯದಲ್ಲಿ ಸ್ಟ್ರಾಟಜಿ ಪಾಲಿಸುವಂತೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ತೊಂದರೆ ಉಂಟಾಗುವುದು. ನಿಮ್ಮ ಕೆಲಸದಲ್ಲಿ ಶ್ರದ್ಧೆ, ಶ್ರಮವಿರಲಿ, ಖರ್ಚು ಅಧಿಕವಿರುತ್ತದೆ, ಆದರೆ ಉಳಿತಾಯದ ಕಡೆಯೂ ಗಮನ ಹರಿಸಿದರೆ ಒಳ್ಳೆಯದು. ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಹೊಂದಿರಬಹುದು, ಆದ್ದರಿಂದ ನಿಮ್ಮ ವೃತ್ತಿ ಬದುಕಿನಲ್ಲಿ ಎಚ್ಚರದಿಂದ ಇರಿ.

ಹಂದಿ ತಮ್ಮ ರಾಶಿ ಪ್ರಾಣಿಯಾಗಿರುವವರ ಭವಿಷ್ಯ
ಯಾರಿಗೆಲ್ಲಾ ಹಂದಿ ತಮ್ಮ ರಾಶಿ ಪ್ರಾಣಿಯಾಗಿರುತ್ತೆ?
1947, 1935, 1983, 1995, 2007, 2019, 2043, 1959, 1971, 2031 ಈ ಇಸವಿಯಲ್ಲಿ ಜನಿಸಿದವರ ರಾಶಿ ಪ್ರಾಣಿ ಹಂದಿಯಾಗಿರುತ್ತೆ.
ಚೈನೀಸ್ ಭವಿಷ್ಯ ಪ್ರಕಾರ 2021 ನಿಮಗೆ ಅಷ್ಟೊಂದು ಶುಭವಲ್ಲ. ಈ ವರ್ಷ ವೃತ್ತಿ ಬದುಕಿನಲ್ಲಿ ತುಂಬಾನೇ ಎಚ್ಚರಿಕೆಯಿಂದ ಇರಬೇಕು, ವ್ಯವಹಾರದಲ್ಲಿ ಲಾಭ ಬರುವುದು. ಆದರೆ ಹಣದ ವಿಷಯದಲ್ಲಿ ಎಚ್ಚರಿಕೆ.



Click it and Unblock the Notifications












