Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ: ಈ ದಿನ ಇವುಗಳನ್ನು ಮಾಡಲೇಬೇಡಿ
ಕಳೆದ ತಿಂಗಳಿನಲ್ಲಿ ಸೂರ್ಯಗ್ರಹಣ ದೀಪಾವಳಿ ಸಮಯದಲ್ಲಿ ಬಂದ್ರೆ ಈ ತಿಂಗಳಿನಲ್ಲಿ ಚಂದ್ರಗ್ರಹಣ ಕಾರ್ತಿಕ ಪೂರ್ಣಿಮೆಯಂದು ಬಂದಿದೆ. ಕಾರ್ತಿಕ ಪೂರ್ಣಿಮೆ ಕೂಡ ಹಿಂದೂಗಳಿಗೆ ಪ್ರಮುಖವಾದ ಹಬ್ಬವಾಗಿದೆ. ಈ ದಿನ ದೀಪ ದಾನಕ್ಕೆ ತುಂಬಾನೇ ಮಹತ್ವವಿದೆ. ಇಂಥ ಮಹತ್ವವಾದ ದಿನವೇ ಚಂದ್ರಗ್ರಹಣ ಬಂದಿದೆ.

ಗ್ರಹಣ ಯಾವುದೇ ಆಗಲಿ ಅದನ್ನು ಜ್ಯೋತಿಷ್ಯದಲ್ಲಿ ಶುಭವೆಂದು ಪರಿಗಣಿಸಲಾಗುವುದಿಲ್ಲ. ನವೆಂಬರ್ 8ಕ್ಕೆ ಚಂದ್ರಗ್ರಹಣವಿರುವುದರಿಂದ ಸೂತಕ ಸಮಯ ಯಾವಾಗ? ಈ ದಿನ ಯಾವ ಕಾರ್ಯಗಳನ್ನು ಮಾಡಬಾರದು ಎಂದು ನೋಡೋಣ ಬನ್ನಿ:

ವಿಶ್ರಾಂತಿ ತೆಗೆದುಕೊಳ್ಳಬೇಡಿ
ಗ್ರಹಣ ಸಮಯದಲ್ಲಿ ಮಲಗುವುದು, ವಿಶ್ರಾಂತಿ ಮಾಡುವುದು ಮಾಡಬಾರದು ಅಂತಾರೆ. ಈ ಸಮಯದಲ್ಲಿ ದೇವರ ಮಂತ್ರಗಳನ್ನು ಹೇಳುತ್ತಾ ದೇವರ ಜಪ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.

ಈ ಸಮಯದಲ್ಲಿ ಆಹಾರ ಸೇವಿಸಬೇಡಿ
ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಾರದು. ಗ್ರಹಣದ ಸಮಯದಲ್ಲಿ ನೀರು ಕೂಡ ಕುಡಿಯಬಾರದು. ರೋಗಿಗಳು, ಗರ್ಭಿಣಿಯರು, ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ.

ಪ್ರಯಾಣ ಮಾಡಬಾರದು
ಗ್ರಹಣದ ಸಮಯದಲ್ಲಿ ಪ್ರಯಾಣ ಮಾಡಬಾರದು ಎಂದು ಹೇಳಲಾಗುವುದು. ಗರ್ಭಿಣಿಯರು ಈ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಬಾರದು. ಮನೆಯ ದೇವರ ಕೋಣೆಯ ಬಾಗಿಲು ಹಾಕಿ ಅಥವಾ ಫೋಟೋಗಳನ್ನು ಬಟ್ಟೆ ಹಾಕಿ ಮುಚ್ಚಿಡಬೇಕು, ಗ್ರಹಣವಾದ ಬಳಿಕ ದೇವರ ಕೋಣೆ ಹಾಗೂ ಮನೆಯ ಎಲ್ಲಾ ಕಡೆ ಗಂಗಾಜಲ ಚಿಮುಕಿಸಿ.

ಗಿಡಗಳನ್ನು ಮುಟ್ಟಬೇಡಿ
ಗ್ರಹಣದ ಸಮಯದಲ್ಲಿ ಗಿಡಗಳನ್ನು ಕೂಡ ಮುಟ್ಟಬಾರದು, ಅಲ್ಲದೆ ಈ ಅವಧಿಯಲ್ಲಿ ಗಿಡಕ್ಕೆ ನೀರು ಹಾಕುವುದು, ಹೂಗಳನ್ನು ಕೀಳುವುದು ಮಾಡಬಾರದು.

ಚಂದ್ರಗ್ರಹಣದ ಸಮಯ
ಚಂದ್ರಗ್ರಹಣ ನವೆಂಬರ್ 8 ಮಧ್ಯಾಹ್ನ 2:41ಕ್ಕೆ ಪ್ರಾರಂಭವಾಗಿ ಸಂಜೆ 06:20ಕ್ಕೆ ಮುಕ್ತಾಯವಾಗುತ್ತದೆ. ಗ್ರಹಣದ ಸೂತಕ ಸಮಯ ಬೆಳಗ್ಗೆ 09:21ರಿಂದ ಪ್ರಾರಂಭ. ಚಂದ್ರಗ್ರಹಣದ ಸೂತಕದ ಸಮಯದಲ್ಲಿ ಕಾರ್ತಿಕ ಪೂರ್ಣಿಮೆಯ ಸ್ನಾನ ಮತ್ತು ದೀಪ ದಾನ ಇರುವುದಿಲ್ಲ. ಸೂತಕ ಕಾಲದ ಮೊದಲು ಮತ್ತು ಚಂದ್ರಗ್ರಹಣ ಮುಗಿದ ನಂತರವೇ ದೀಪವನ್ನು ದಾನ ಮಾಡಲಾಗುವುದು.



Click it and Unblock the Notifications
